ಕೀರ್ತನೆ 17:1-15

  • ರಕ್ಷಣೆಗಾಗಿ ಪ್ರಾರ್ಥನೆ

    • “ನೀನು ನನ್ನ ಹೃದಯ ಪರೀಕ್ಷಿಸಿದೆ” (3)

    • “ನಿನ್ನ ರೆಕ್ಕೆಗಳ ನೆರಳಲ್ಲಿ” (8)

ದಾವೀದನ ಪ್ರಾರ್ಥನೆ. 17  ಯೆಹೋವನೇ ನ್ಯಾಯಕ್ಕಾಗಿ ನಾನು ಮಾಡೋ ಪ್ರಾರ್ಥನೆ ಕೇಳು,ಸಹಾಯಕ್ಕಾಗಿ ನಾನು ಕೂಗುವಾಗ ಗಮನಿಸು,ಕಪಟ ಇಲ್ಲದ ನನ್ನ ಪ್ರಾರ್ಥನೆನ ಕೇಳು.+  2  ನೀನು ಸರಿಯಾದ ತೀರ್ಪನ್ನ ಕೊಟ್ಟು ನನಗೆ ನ್ಯಾಯ ಸಿಗೋ ತರ ಮಾಡು,+ನಾನು ಸರಿಯಾಗಿ ಇರೋದನ್ನ ಮಾಡ್ತಿದ್ದೀನಾ ಅಂತ ನಿನ್ನ ಕಣ್ಣು ನೋಡಿ ಹೇಳಲಿ.  3  ನೀನು ನನ್ನ ಹೃದಯನ ಪರೀಕ್ಷಿಸಿದೆ, ರಾತ್ರಿ ಸಮಯದಲ್ಲೂ ನನ್ನನ್ನ ಪರಿಶೀಲಿಸಿದೆ,+ನೀನು ನನ್ನನ್ನ ಪರಿಷ್ಕರಿಸಿದೆ,+ನಾನು ಯಾವ ಕೆಟ್ಟ ಸಂಚನ್ನೂ ಮಾಡಿಲ್ಲ ಅಂತ,ನನ್ನ ಬಾಯಿ ಯಾವ ಪಾಪವನ್ನೂ ಮಾಡಿಲ್ಲ ಅಂತ ನಿನಗೆ ಗೊತ್ತಾಗುತ್ತೆ.  4  ಮನುಷ್ಯರು ಏನೇ ಮಾಡ್ಲಿ,ನಾನು ಮಾತ್ರ ನೀನು ಹೇಳಿದ ಹಾಗೆ ಕಳ್ಳರ ದಾರಿಯಿಂದ ದೂರ ಇರ್ತಿನಿ.+  5  ನನ್ನ ಕಾಲು ಎಡವಿ ಬೀಳದ ಹಾಗೆ,ನನ್ನ ಹೆಜ್ಜೆಗಳು ನಿನ್ನ ದಾರಿಯಲ್ಲೇ ಇರಲಿ.+  6  ದೇವರೇ, ನಾನು ನಿನಗೆ ಮೊರೆ ಇಡ್ತೀನಿ. ಯಾಕಂದ್ರೆ ನೀನು ಉತ್ತರ ಕೊಡ್ತೀಯ.+ ನಾನು ಹೇಳೋದನ್ನ, ನನ್ನ ಪ್ರಾರ್ಥನೆಯನ್ನ ಕೇಳಿಸ್ಕೊ.*+  7  ದೇವರೇ, ನಿನ್ನ ವಿರುದ್ಧ ದಂಗೆ ಏಳೋರ ಕೈಯಿಂದ ತಪ್ಪಿಸ್ಕೊಂಡುನಿನ್ನ ಬಲಗೈಯಲ್ಲಿ ಆಶ್ರಯ ಪಡ್ಕೊಳ್ಳೋಕೆ ಬರೋರನ್ನ ರಕ್ಷಿಸು,ಅದ್ಭುತವಾಗಿ ನಿನ್ನ ಶಾಶ್ವತ ಪ್ರೀತಿಯನ್ನ ತೋರಿಸು.+  8  ನಿನ್ನ ಕಣ್ಣಗುಡ್ಡೆ ಹಾಗೆ ನನ್ನನ್ನ ಕಾಪಾಡು,+ನಿನ್ನ ರೆಕ್ಕೆಗಳ ನೆರಳಲ್ಲಿ ನನ್ನನ್ನ ಬಚ್ಚಿಡು.+  9  ನನ್ನ ಮೇಲೆ ದಾಳಿ ಮಾಡೋ ಕೆಟ್ಟವರಿಂದ,ನನ್ನ ಹಿಂದೆ ಬಿದ್ದು ನನ್ನ ಪ್ರಾಣ ಕೇಳೋರಿಂದ ನನ್ನನ್ನ ರಕ್ಷಿಸು.+ 10  ಅವರು ತಮ್ಮ ಹೃದಯಗಳನ್ನ ಕಲ್ಲಿನ ತರ ಮಾಡ್ಕೊಂಡಿದ್ದಾರೆ,*ಅವರು ಅಹಂಕಾರದಿಂದ ಮಾತಾಡ್ತಾರೆ. 11  ಈಗ ಅವರು ನಮ್ಮ ಸುತ್ತ ಸುತ್ಕೊಂಡಿದ್ದಾರೆ,+ನಮ್ಮನ್ನ ಕೆಳಗೆ ಬೀಳಿಸೋಕೆ* ಕಾಯ್ತಿದ್ದಾರೆ. 12  ನನ್ನ ಶತ್ರು, ಬೇಟೆನ ಸೀಳಿ ತುಂಡುತುಂಡು ಮಾಡೋಕೆ ಹಾತೊರೆಯೋ ಸಿಂಹದ ತರ ಇದ್ದಾನೆ,ಹೊಂಚುಹಾಕ್ತಾ ಮುದುರಿಕೊಂಡು ಕೂತಿರೋ ಎಳೇ ಸಿಂಹದ ತರ ಇದ್ದಾನೆ. 13  ಯೆಹೋವನೇ, ದಯವಿಟ್ಟು ಅವನ ವಿರುದ್ಧ ಹೋರಾಡಿ,+ ಅವನನ್ನ ಸೋಲಿಸು. ನಿನ್ನ ಕತ್ತಿ ತಗೊಂಡು, ನನ್ನನ್ನ ಆ ಕೆಟ್ಟವನಿಂದ ಕಾಪಾಡು. 14  ಯೆಹೋವನೇ, ಕೈ ಚಾಚಿ ನನ್ನನ್ನ ರಕ್ಷಿಸು,ಈ ಲೋಕದ ಜನ್ರಿಂದ ನನ್ನನ್ನ ಕಾಪಾಡು, ಅವರು ಬರೀ ಇವತ್ತಿಗಾಗಿ ಬದುಕ್ತಾರೆ.+ ನಿನ್ನ ಖಜಾನೆಯಿಂದ ಅವರು ಹೊಟ್ಟೆ ತುಂಬಿಸ್ಕೊಳ್ತಿದ್ದಾರೆ,+ತಮ್ಮ ಮಕ್ಕಳಿಗೆ ಆಸ್ತಿನ ಬಿಟ್ಟುಹೋಗ್ತಾರೆ, ಅವ್ರಿಂದ ನನ್ನನ್ನ ಕಾಪಾಡು. 15  ಆದ್ರೆ ನಾನು ನೀತಿವಂತನಾಗಿ ಇರ್ತಿನಿ. ಯಾಕಂದ್ರೆ ನನಗೆ ನಿನ್ನ ಮುಖ ನೋಡಬೇಕು. ಬೆಳಿಗ್ಗೆ ಎದ್ದು ನಿನ್ನ ಮುಂದೆ ನಿಂತ್ಕೊಳ್ಳೋದ್ರಲ್ಲೇ ನನಗೆ ಖುಷಿ ಸಿಗುತ್ತೆ.+

ಪಾದಟಿಪ್ಪಣಿ

ಅಥವಾ “ಬಾಗಿ ಕೇಳಿಸ್ಕೊ.”
ಅಕ್ಷ. “ಕೊಬ್ಬಿನಿಂದ ಮುಚ್ಚಿಕೊಂಡಿದ್ದಾರೆ.”
ಅಥವಾ “ನೆಲಕ್ಕೆ ಉರುಳಿಸೋಕೆ.”