ಕೀರ್ತನೆ 142:1-7

  • ಹಿಂಸಕರಿಂದ ಬಿಡಿಸುವಂತೆ ಪ್ರಾರ್ಥನೆ

    • “ಎಲ್ಲಿಗೆ ಓಡಿ ಹೋಗಬೇಕು ಅಂತಾನೂ ನನಗೆ ಗೊತ್ತಾಗ್ತಿಲ್ಲ” (4)

    • “ನನ್ನ ಜೀವನದಲ್ಲಿ ನೀನೇ ನನಗೆಲ್ಲ” (5)

ಮಸ್ಕಿಲ್‌.* ದಾವೀದ ಗುಹೆಯಲ್ಲಿ ಇದ್ದಾಗ ರಚಿಸಿದ ಕೀರ್ತನೆ.+ ಇದೊಂದು ಪ್ರಾರ್ಥನೆ. 142  ನಾನು ಸಹಾಯಕ್ಕಾಗಿ ಯೆಹೋವನಿಗೆ ಮೊರೆ ಇಡ್ತೀನಿ,+ನಾನು ದಯೆಗಾಗಿ ಯೆಹೋವನ ಹತ್ರ ಬೇಡ್ಕೊತೀನಿ.  2  ಆತನ ಮುಂದೆ ನಾನು ನನ್ನ ಚಿಂತೆನ ತೋಡ್ಕೊಳ್ತೀನಿ,ನನ್ನ ಕಷ್ಟಸಂಕಟಗಳ ಬಗ್ಗೆ ಹೇಳ್ಕೊಳ್ತೀನಿ.+  3  ನನ್ನ ಮನಸ್ಸು ಕುಗ್ಗಿ ಹೋದಾಗ,ನೀನು ನನ್ನ ಹೆಜ್ಜೆಯನ್ನ ಗಮನಿಸು.+ ನಾನು ನಡಿಯೋ ದಾರೀಲಿ,ನನ್ನ ಶತ್ರುಗಳು ನನಗಾಗಿ ಬಲೆಯನ್ನ ಬಚ್ಚಿಟ್ಟಿದ್ದಾರೆ.  4  ನನ್ನ ಸುತ್ತಮುತ್ತ ನೋಡು,ನನಗೆ ಕಾಳಜಿ ತೋರಿಸೋರು* ಯಾರೂ ಇಲ್ಲ.+ ಎಲ್ಲಿಗೆ ಓಡಿ ಹೋಗಬೇಕು ಅಂತಾನೂ ನನಗೆ ಗೊತ್ತಾಗ್ತಿಲ್ಲ,+ನನ್ನ ಬಗ್ಗೆ ಯೋಚಿಸೋರು ಯಾರೂ ಇಲ್ಲ.  5  ಯೆಹೋವನೇ, ಸಹಾಯಕ್ಕಾಗಿ ನಾನು ನಿನಗೆ ಮೊರೆ ಇಡ್ತೀನಿ. “ನನ್ನ ಆಶ್ರಯನೂ ನೀನೇ,+ನನ್ನ ಜೀವನದಲ್ಲಿ ನೀನೇ ನನಗೆಲ್ಲ”* ಅಂತ ನಾನು ಹೇಳ್ತೀನಿ.  6  ಸಹಾಯಕ್ಕಾಗಿ ನಾನಿಡೋ ಮೊರೆಗೆ ಗಮನಕೊಡು,ಯಾಕಂದ್ರೆ ನಾನು ತುಂಬ ಕಷ್ಟದಲ್ಲಿದ್ದೀನಿ. ನನ್ನನ್ನ ಕಾಡಿಸೋ ಜನ್ರಿಂದ ನನ್ನನ್ನ ಕಾಪಾಡು,+ಯಾಕಂದ್ರೆ ಅವರು ನನಗಿಂತ ಶಕ್ತಿಶಾಲಿಗಳು.  7  ನಿನ್ನ ಹೆಸ್ರನ್ನ ಹೊಗಳೋಕೆ,ನೀನು ನನ್ನನ್ನ ಜೈಲಿಂದ ಹೊರಗೆ ಕರ್ಕೊಂಡು ಬಾ. ನೀನು ನನಗೆ ದಯೆ ತೋರಿಸಿದ್ದನ್ನ ನೋಡಿನೀತಿವಂತರು ನನ್ನ ಜೊತೆ ಸೇರಿ ಖುಷಿಪಡ್ತಾರೆ.

ಪಾದಟಿಪ್ಪಣಿ

ಅಕ್ಷ. “ನನ್ನನ್ನ ಒಪ್ಕೊಳ್ಳೋರು.”
ಅಕ್ಷ. “ನನ್ನ ಪಾಲು.”