ಅರಣ್ಯಕಾಂಡ 25:1-18
25 ಇಸ್ರಾಯೇಲ್ಯರು ಶಿಟ್ಟೀಮಿನಲ್ಲಿ+ ಇದ್ದಾಗ ಮೋವಾಬಿನ ಸ್ತ್ರೀಯರ ಜೊತೆ ಸಂಬಂಧ ಇಟ್ಕೊಂಡ್ರು.+
2 ಆ ಸ್ತ್ರೀಯರು ತಮ್ಮ ದೇವರುಗಳಿಗೆ ಬಲಿ ಕೊಡೋ ಸಮಾರಂಭಕ್ಕೆ ಇಸ್ರಾಯೇಲ್ಯರನ್ನ ಕರೆದ್ರು.+ ಇಸ್ರಾಯೇಲ್ಯರು ಅಲ್ಲಿ ಹೋಗಿ ಬಲಿ ಅರ್ಪಿಸಿದ್ದನ್ನ ತಿಂದ್ರು. ಅವ್ರ ದೇವರುಗಳಿಗೆ ಅಡ್ಡಬಿದ್ರು.+
3 ಹೀಗೆ ಇಸ್ರಾಯೇಲ್ಯರು ಪೆಗೋರದ ಬಾಳನನ್ನ ಆರಾಧಿಸಿದ್ರು.*+ ಹಾಗಾಗಿ ಯೆಹೋವನಿಗೆ ಇಸ್ರಾಯೇಲ್ಯರ ಮೇಲೆ ತುಂಬ ಕೋಪ ಬಂತು.
4 ಯೆಹೋವ ಮೋಶೆಗೆ “ಇದಕ್ಕೆ ಕಾರಣ ಆಗಿರೋ ಮುಖ್ಯಸ್ಥರನ್ನ* ಸಾಯಿಸಿ ಅವ್ರ ಶವಗಳನ್ನ ಯೆಹೋವನ ಮುಂದೆ ಎಲ್ರಿಗೂ ಕಾಣೋ ತರ ನೇತುಹಾಕು. ಆಗ ಇಸ್ರಾಯೇಲ್ಯರ ಮೇಲೆ ಯೆಹೋವನಿಗೆ ಬಂದಿರೋ ಕೋಪ ತಣ್ಣಗಾಗುತ್ತೆ” ಅಂದನು.
5 ಆಮೇಲೆ ಮೋಶೆ ಇಸ್ರಾಯೇಲ್ಯರ ನ್ಯಾಯಾಧೀಶರಿಗೆ+ “ನಿಮ್ಮಲ್ಲಿ ಪ್ರತಿಯೊಬ್ಬ ನಿಮ್ಮನಿಮ್ಮ ಜನ್ರಲ್ಲಿ ಯಾರು ಪೆಗೋರದ ಬಾಳನಿಗೆ ಆರಾಧನೆ ಮಾಡಿದ್ದಾರೋ ಅವ್ರನ್ನೆಲ್ಲ ಸಾಯಿಸಬೇಕು”+ ಅಂದ.
6 ಎಲ್ಲ ಇಸ್ರಾಯೇಲ್ಯರು ದೇವದರ್ಶನ ಡೇರೆಯ ಬಾಗಿಲ ಹತ್ರ ಅಳ್ತಾ ಇದ್ರು. ಆಗ್ಲೇ ಒಬ್ಬ ಇಸ್ರಾಯೇಲ್ಯ ಮಿದ್ಯಾನ್ ಹುಡುಗಿನ+ ಮೋಶೆ ಮುಂದೆ, ಎಲ್ಲ ಇಸ್ರಾಯೇಲ್ಯರ ಮುಂದೆನೇ ಪಾಳೆಯದ ಒಳಗೆ ಕರ್ಕೊಂಡು ಬಂದ.
7 ಪುರೋಹಿತನಾಗಿದ್ದ ಆರೋನನ ಮೊಮ್ಮಗನೂ ಎಲ್ಲಾಜಾರನ ಮಗನೂ ಆದ ಫೀನೆಹಾಸ+ ಅವರು ಬರೋದನ್ನ ನೋಡಿದ ಕೂಡ್ಲೇ ಎಲ್ಲ ಇಸ್ರಾಯೇಲ್ಯರ ಮಧ್ಯದಿಂದ ಬಂದು ಕೈಯಲ್ಲಿ ಈಟಿ ತಗೊಂಡು
8 ಆ ಇಸ್ರಾಯೇಲ್ಯನ ಹಿಂದೆನೇ ಅವನ ಡೇರೆ ಒಳಗೆ ಹೋಗಿ ಅವನನ್ನೂ ಆ ಹುಡುಗಿಯನ್ನೂ ಒಂದೇ ಏಟಿಗೆ ಈಟಿಯಿಂದ ತಿವಿದು ಕೊಂದುಹಾಕಿದ. ಈಟಿ ಅವಳ ಹೊಟ್ಟೆಯಲ್ಲಿ* ತೂರ್ಕೊಂಡು ಹೋಗಿತ್ತು. ಆಗ ಇಸ್ರಾಯೇಲ್ಯರಿಗೆ ಬಂದಿದ್ದ ಕಾಯಿಲೆ ನಿಂತು ಹೋಯ್ತು.+
9 ಆ ಕಾಯಿಲೆಯಿಂದ 24,000 ಇಸ್ರಾಯೇಲ್ಯರು ಸತ್ರು.+
10 ಆಮೇಲೆ ಯೆಹೋವ ಮೋಶೆಗೆ
11 “ಪುರೋಹಿತನಾಗಿದ್ದ ಆರೋನನ ಮೊಮ್ಮಗ, ಎಲ್ಲಾಜಾರನ ಮಗ ಫೀನೆಹಾಸ+ ಇಸ್ರಾಯೇಲ್ಯರ ಮೇಲೆ ನನಗಿದ್ದ ಕೋಪನ ಕಮ್ಮಿ ಆಗೋ ತರ ಮಾಡಿದ್ದಾನೆ. ಇಸ್ರಾಯೇಲ್ಯರು ನನಗೆ ನಂಬಿಕೆ ದ್ರೋಹ ಮಾಡೋದನ್ನ ಅವನು ಸಹಿಸಲಿಲ್ಲ.+ ಅವನು ಹಾಗೆ ಮಾಡದೇ ಇದ್ದಿದ್ರೆ ಇಸ್ರಾಯೇಲ್ಯರನ್ನ ಪೂರ್ತಿ ನಾಶ ಮಾಡಿಬಿಡ್ತಿದ್ದೆ. ಯಾಕಂದ್ರೆ ನನ್ನನ್ನ ಮಾತ್ರ ಆರಾಧಿಸಬೇಕು ಅಂತ ಬಯಸೋ* ದೇವರು ನಾನು.+
12 ಹಾಗಾಗಿ ‘ನಾನು ಫೀನೆಹಾಸನ ಜೊತೆ ಶಾಂತಿಯ ಒಪ್ಪಂದ ಮಾಡ್ಕೊಳ್ತೀನಿ.
13 ಈ ಒಪ್ಪಂದದಿಂದ ಅವನು ಮತ್ತೆ ಅವನ ವಂಶದವರು ಯಾವಾಗ್ಲೂ ಪುರೋಹಿತರಾಗಿ ಸೇವೆ ಮಾಡ್ತಾರೆ.+ ಬೇರೆಯವರು ತನ್ನ ದೇವರಿಗೆ ನಂಬಿಕೆ ದ್ರೋಹ ಮಾಡೋದನ್ನ ಅವನು ಸಹಿಸದಿದ್ದ ಕಾರಣ,+ ಇಸ್ರಾಯೇಲ್ಯರಿಗಾಗಿ ಪ್ರಾಯಶ್ಚಿತ್ತ ಮಾಡಿರೋ ಕಾರಣ ನಾನು ಅವನ ಜೊತೆ ಈ ಒಪ್ಪಂದ ಮಾಡ್ಕೊಳ್ತೀನಿ’ ಅಂತ ನೀನು ಫೀನೆಹಾಸನಿಗೆ ಹೇಳು” ಅಂದನು.
14 ಆ ಮಿದ್ಯಾನ್ಯ ಹುಡುಗಿ ಜೊತೆ ಸತ್ತ ಇಸ್ರಾಯೇಲ್ಯ ಪುರುಷನ ಹೆಸ್ರು ಜಿಮ್ರಿ. ಅವನ ತಂದೆ ಹೆಸ್ರು ಸಾಲೂ. ಜಿಮ್ರಿ ಸಿಮೆಯೋನ್ ಕುಲದಲ್ಲಿ ಪ್ರಧಾನನಾಗಿದ್ದ.
15 ಆ ಮಿದ್ಯಾನ್ಯ+ ಹುಡುಗಿ ಹೆಸ್ರು ಕೊಜ್ಬಿ. ಅವಳು ಮಿದ್ಯಾನಿನ ಚೂರನ+ ಮಗಳು. ಚೂರ ಅವನ ತಂದೆ ಕುಟುಂಬದಲ್ಲಿ ಮುಖ್ಯಸ್ಥ.
16 ಆಮೇಲೆ ಯೆಹೋವ ಮೋಶೆಗೆ
17 “ನೀವು ಮಿದ್ಯಾನ್ಯರ ಮೇಲೆ ದಾಳಿ ಮಾಡಿ ಅವ್ರನ್ನ ಕೊಂದುಹಾಕಿ.+
18 ಯಾಕಂದ್ರೆ ಅವರು ನಿಮ್ಮ ಮೇಲೆ ಕಷ್ಟ ತಂದ್ರು. ಪೆಗೋರನ+ ವಿಷ್ಯದಲ್ಲಿ ನೀವು ಪಾಪ ಮಾಡೋ ತರ ಕುತಂತ್ರ ನಡಿಸಿ ನಿಮ್ಮನ್ನ ಮರುಳು ಮಾಡಿದ್ರು, ಮಿದ್ಯಾನಿನ ಪ್ರಧಾನನ ಮಗಳಾದ ಕೊಜ್ಬಿಯನ್ನ ಮುಂದಿಟ್ಟು ನಿಮ್ಮಿಂದ ಪಾಪ ಮಾಡಿಸಿದ್ರು. ಪೆಗೋರನ ವಿಷ್ಯದಲ್ಲಿ ನಿಮ್ಮ ಮೇಲೆ ಕಷ್ಟ ಬಂದ ದಿನಾನೇ+ ಅವಳನ್ನ ಕೊಂದುಬಿಟ್ರು”+ ಅಂದನು.
ಪಾದಟಿಪ್ಪಣಿ
^ ಅಥವಾ “ಬಾಳನಿಗೆ ಅಂಟ್ಕೊಂಡ್ರು.”
^ ಅಥವಾ “ನಾಯಕರನ್ನ.”
^ ಅಥವಾ “ಜನನಾಂಗದಲ್ಲಿ.”
^ ಅಥವಾ “ಹಕ್ಕಿಂದ ಕೇಳ್ಕೊಳ್ಳೋ.”