ಪ್ರಶ್ನೆ 5
ಶಾಲೆಯಲ್ಲಿ ಯಾರಾದ್ರೂ ನನ್ನ ರೇಗಿಸಿದರೆ ಏನ್ ಮಾಡೋದು?
ನೀವು ಈ ಜಾಗದಲ್ಲಿ ಇದ್ದಿದ್ದರೆ. . .
ಇದನ್ನು ಚಿತ್ರಿಸಿಕೊಳ್ಳಿ: ಥಾಮಸ್ ‘ಇನ್ನೂ ಮುಂದೆ ನಾನು ಯಾವತ್ತು ಸ್ಕೂಲಿಗೆ ಹೋಗಲ್ಲ’ ಅಂತ ಹೇಳುತ್ತಾನೆ. ಇದಕ್ಕೆ ಕಾರಣ, ಕಳೆದ ಮೂರು ತಿಂಗಳಿಂದ ಮಕ್ಕಳು ಅವನಿಗೆ ತುಂಬ ಕಾಟ ಕೊಡುತ್ತಿರೋದೇ. ಇವನ ಬಗ್ಗೆ ಕೆಟ್ಟಕೆಟ್ಟದಾಗಿ ಮಾತಾಡೋದು, ಅಡ್ಡ ಹೆಸರಿಟ್ಟು ಕರೆಯೋದು, ಹಿಂದಿನಿಂದ ಅವನನ್ನ ತಳ್ಳಿ ಏನೂ ಮಾಡಲಿಲ್ಲವೇನೋ ಅನ್ನೊ ಥರ ಇರೋದು, ಬೇಕು ಬೇಕಂತ ಥಾಮಸ್ ಕೈಯಲ್ಲಿರುವ ಪುಸ್ತಕವನ್ನ ಬೀಳಿಸಿ ಗೊತ್ತಾಗದೆ ಇರೋ ಥರ ನಟಿಸೋದು ಹೀಗೆಲ್ಲಾ ಮಾಡ್ತಾ ಇದ್ದರು. ನಿನ್ನೆಯಂತೂ ಅವರ ಕಾಟ ಮಿತಿಮೀರಿ ಹೋಯಿತು. ಯಾರೋ ಥಾಮಸ್‌ಗೆ ಬೆದರಿಕೆಯ ಮೆಸೆಜ್ ಕಳುಹಿಸಿದ್ರು . . .
ಥಾಮಸ್ ಜಾಗದಲ್ಲಿ ನೀವು ಇದ್ದಿದ್ದರೆ ಏನು ಮಾಡುತ್ತಿದ್ದಿರಿ?
ಸ್ವಲ್ಪ ಯೋಚಿಸಿ!
ಎಲ್ಲರೂ ನಿಮ್ಮನ್ನ ಬೆದರಿಸುತ್ತಿದ್ದರೆ ಅದರರ್ಥ ನಿಮಗೆ ಏನೂ ಶಕ್ತಿ ಇಲ್ಲ ಅಂತಲ್ಲ. ಜಗಳ ಮಾಡದೆ ಸಮಸ್ಯೆಯನ್ನು ಬಗೆಹರಿಸಬಹುದು. ಹೇಗೆ?
-
ಜ್ಞಾನೋಕ್ತಿ 29:11) ಅಂಥ ಸಮಯದಲ್ಲಿ ನಿಮಗೆ ಎಷ್ಟು ಆಗುತ್ತೊ ಅಷ್ಟು ಸಮಾಧಾನದಿಂದ ಇರಿ. ಕೋಪವನ್ನಾಗಲಿ, ಭಯವನ್ನಾಗಲಿ ಹೊರಗೆ ತೋರಿಸಬೇಡಿ. ರೇಗಿಸಿ ರೇಗಿಸಿ ಅವರೇ ಸುಮ್ಮನಾಗುತ್ತಾರೆ.
ಸುಮ್ಮನಿರಿ. “ಮೂಢನು ತನ್ನ ಕೋಪವನ್ನೆಲ್ಲಾ ತೋರಿಸುವನು. ಜ್ಞಾನಿಯು ತನ್ನ ಕೋಪವನ್ನು ತಡೆದು ಶಮನಪಡಿಸಿಕೊಳ್ಳುವನು” ಅಂತ ಬೈಬಲ್ ಹೇಳುತ್ತೆ. ( -
ಸೇಡು ತೀರಿಸಿಕೊಳ್ಳಬೇಡಿ. “ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿ” ಅಂತ ಬೈಬಲ್ ಹೇಳುತ್ತೆ. (ರೋಮನ್ನರಿಗೆ 12:17) ಸೇಡು ತೀರಿಸಿಕೊಳ್ಳೋದರಿಂದ ಸಮಸ್ಯೆಗಳು ಇನ್ನೂ ಜಾಸ್ತಿ ಆಗುತ್ತೆ ಹೊರತು ಕಡಿಮೆ ಆಗಲ್ಲ.
-
ಸಮಸ್ಯೆಗಳಿಗೆ ಸಿಕ್ಕಿ ಹಾಕಿಕೊಳ್ಳಬೇಡಿ. “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು” ಅಂತ ಬೈಬಲ್ ಹೇಳುತ್ತೆ. (ಜ್ಞಾನೋಕ್ತಿ 22:3) ಯಾರು ನಿಮ್ಮನ್ನ ರೇಗಿಸುತ್ತಾರೋ ಅಂಥವರಿಂದ, ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುವಂಥ ಸನ್ನಿವೇಶಗಳಿಂದ ಸಾಧ್ಯವಾದಷ್ಟು ದೂರ ಇರಿ.
-
ಸಮಾಧಾನದಿಂದ ಉತ್ತರ ಕೊಡಿ. “ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು” ಅಂತ ಬೈಬಲ್ ಹೇಳುತ್ತೆ. (ಜ್ಞಾನೋಕ್ತಿ 15:1) ಅಂಥ ಸಮಯದಲ್ಲಿ ನೀವು ತಮಾಷೆಯಾಗಿ ಮಾತಾಡಬಹುದು. ಉದಾಹರಣೆಗೆ, ಅವನು ನಿಮ್ಮನ್ನ ಡುಮ್ಮ, ದಡಿಯ ಅಂತ ರೇಗಿಸಿದ್ರೆ, ನೀವು ಬೇಜಾರು ಮಾಡಿಕೊಳ್ಳದೆ ಭುಜ ಕುಣಿಸಿ “ಸಣ್ಣ ಆಗೋದಕ್ಕೆ ಏನಾದ್ರೂ ಐಡಿಯಾ ಕೊಡೋ” ಅಂತ ನಗಾಡುತ್ತಾ ಹೇಳಿ.
-
ಅಲ್ಲಿಂದ ಹೊರಟು ಹೋಗಿ. “ಮೌನವಾಗಿದ್ದು, ಅಲ್ಲಿಂದ ಹೊರಟು ಹೋಗುವುದು ನಿಮ್ಮಲ್ಲಿ ಪ್ರೌಢತೆ ಇದೆ ಮತ್ತು ರೇಗಿಸುವವರಿಗಿಂತ ನೀವು ಮಾನಸಿಕವಾಗಿ ಬಲವುಳ್ಳವರು, ಸ್ವನಿಯಂತ್ರಣವುಳ್ಳವರು ಅಂತ ತೋರಿಸುತ್ತದೆ. ಇದು ನಿಮ್ಮನ್ನ ರೇಗಿಸುವವರಿಗೆ ಇರೋದಿಲ್ಲ ಅನ್ನೊದನ್ನ ನೆನಪಿಡಿ” ಅಂತ ಹೇಳುತ್ತಾಳೆ 19 ವರ್ಷದ ನೊರಾ.—2 ತಿಮೊಥೆಯ 2:24.
-
ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ. ಯಾರಿಗೆ ಕಡಿಮೆ ಆತ್ಮವಿಶ್ವಾಸ ಇರುತ್ತದೋ, ಯಾರು ತುಂಬಾ ಅಮಾಯಕರಾಗಿರುತ್ತಾರೋ ಅಂಥವರನ್ನೇ ರೇಗಿಸುತ್ತಾರೆ. ಒಂದುವೇಳೆ ನೀವು ಇದಕ್ಕೆಲ್ಲಾ ಅವಕಾಶ ಕೊಟ್ಟಿಲ್ಲ ಅಂದರೆ ಅವರು ಸುಮ್ಮನಾಗುತ್ತಾರೆ.
-
ಇದರ ಬಗ್ಗೆ ದೊಡ್ಡವರಿಗೆ ಹೇಳಿ. ಹಿಂದೆ ಟೀಚರ್ ಆಗಿದ್ದ ಒಬ್ಬರು ಹೇಳುವುದು: “ಯಾರಾದರೂ ರೇಗಿಸಿದರೆ ಅದನ್ನ ಬಂದು ಹೇಳಬೇಕು. ಆ ರೀತಿ ಹೇಳುವುದು ತಪ್ಪಲ್ಲ. ಯಾಕೆಂದರೆ ಹೇಳಲಿಲ್ಲ ಅಂದರೆ ಅವರು ಬೇರೆಯವರನ್ನು ರೇಗಿಸುತ್ತಾನೇ ಇರುತ್ತಾರೆ.”