ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಸ್ತಮೈಥುನದ ಚಟದಿಂದ ಹೊರಬರೋದು ಹೇಗೆ?

ಹಸ್ತಮೈಥುನದ ಚಟದಿಂದ ಹೊರಬರೋದು ಹೇಗೆ?

ಅಧ್ಯಾಯ 25

ಹಸ್ತಮೈಥುನದ ಚಟದಿಂದ ಹೊರಬರೋದು ಹೇಗೆ?

“ನನಗೆ ಎಂಟು ವರ್ಷ ಇದ್ದಾಗ ಹಸ್ತಮೈಥುನ ಮಾಡೋಕೆ ಶುರುಮಾಡಿದೆ. ನಾನು ಮಾಡ್ತಾ ಇರೋದು ತಪ್ಪು ಅಂತ ಆಮೇಲಾಮೇಲೆ ಗೊತ್ತಾಯಿತು. ಪ್ರತಿ ಸಲ ನಾನು ಈ ತಪ್ಪು ಮಾಡ್ತಿದ್ದಾಗ ತುಂಬ ಬೇಜಾರು ಆಗ್ತಿತ್ತು. ನಾನು ಹೀಗೆ ಮಾಡ್ತಿರೋದ್ರಿಂದ ನನ್ನಂಥವರನ್ನ ದೇವರು ಇಷ್ಟಪಡಲ್ಲ ಅನ್ನೋ ಯೋಚನೆ ಕಿತ್ತು ತಿಂತಿತ್ತು.“—ಲೂಯಿಜ್‌.

ದೊಡ್ಡವರು ಆಗ್ತಾ ಹೋದ ಹಾಗೆ ಲೈಂಗಿಕ ಆಸೆಗಳು ಜಾಸ್ತಿ ಆಗುತ್ತೆ. ಅದಕ್ಕೆ ಹಸ್ತಮೈಥುನದಂತಹ * ಕೆಟ್ಟ ಚಟಕ್ಕೆ ಬೀಳೋ ಸಾಧ್ಯತೆ ಜಾಸ್ತಿ. ಆದ್ರೆ ‘ಅದು ದೊಡ್ಡ ಸಮಸ್ಯೆ ಅಲ್ಲ, ಇದರಿಂದ ಯಾರಿಗೂ ತೊಂದರೆ ಆಗಲ್ಲ’ ಅಂತ ಹೆಚ್ಚಿನವರು ಹೇಳ್ತಾರೆ. ಆದ್ರೆ ನಾವು ಈ ಚಟಕ್ಕೆ ಬೀಳದೆ ಇರೋಕೆ ಒಂದು ಕಾರಣ ಇದೆ. ಅದೇನಂತ ಅಪೊಸ್ತಲ ಪೌಲ ಹೇಳ್ತಾನೆ: “ಹತೋಟಿ ಇಲ್ಲದ ಕಾಮದಾಸೆ. . . ಹುಟ್ಟಿಸೋ ನಿಮ್ಮ ದೇಹದ ಅಂಗಗಳನ್ನ ಸಾಯಿಸಿ.” (ಕೊಲೊಸ್ಸೆ 3:5) ಹಸ್ತಮೈಥುನ ಮಾಡೋದ್ರಿಂದ ಇಂಥ ಕೆಟ್ಟ ಆಸೆಗಳು ಸಾಯಲ್ಲ. ಬದಲಿಗೆ ಬೆಂಕಿಗೆ ಎಣ್ಣೆ ಸುರಿದಂತೆ ಈ ಆಸೆಗಳು ಇನ್ನೂ ಜಾಸ್ತಿ ಆಗುತ್ತೆ. ಹಸ್ತಮೈಥುನ ಮಾಡೋದ್ರಿಂದ ಆಗೋ ಕೆಲವು ಸಮಸ್ಯೆಗಳೇನಂದ್ರೆ:

● ಹಸ್ತಮೈಥುನ ಮಾಡುವವರು ಸ್ವಾರ್ಥಿಗಳಾಗಿರುತ್ತಾರೆ. ಯಾಕಂದ್ರೆ ಅವರು ಬರೀ ತಮ್ಮ ಸುಖದ ಬಗ್ಗೆ ಮಾತ್ರ ಯೋಚನೆ ಮಾಡ್ತಿರ್ತಾರೆ.

● ಹಸ್ತಮೈಥುನ ಮಾಡೋ ಒಬ್ಬ ವ್ಯಕ್ತಿ ತನ್ನ ಸಂಗಾತಿಯನ್ನ ಲೈಂಗಿಕ ಆಸೆ ತೀರಿಸಿಕೊಳ್ಳೋಕೆ ಇರೋ ಒಂದು ವಸ್ತು ತರ ನೋಡ್ತಾನೆ.

● ಹಸ್ತಮೈಥುನ ಮಾಡೋದ್ರಿಂದ ಮದುವೆ ಜೀವನದಲ್ಲಿ ಒಳ್ಳೆ ಲೈಂಗಿಕ ಸಂಬಂಧ ಇರಲ್ಲ.

ಲೈಂಗಿಕ ಆಸೆ ಜಾಸ್ತಿಯಾದಾಗ ಹಸ್ತಮೈಥುನ ಮಾಡೋ ಬದಲು ಸ್ವನಿಯಂತ್ರಣ ತೋರಿಸಿ. (1 ಥೆಸಲೊನೀಕ 4:4, 5) ಹಸ್ತಮೈಥುನ ಮಾಡಬೇಕು ಅನ್ನೋ ಆಸೆಯನ್ನ ಹುಟ್ಟಿಸೋ ಸನ್ನಿವೇಶಗಳಿಂದ ದೂರ ಇರಿ ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋಕ್ತಿ 5:8, 9) ನೀವೀಗಾಗಲೇ ಹಸ್ತಮೈಥುನದ ಬಲೆಗೆ ಬಿದ್ದಿದ್ರೆ ಏನು ಮಾಡೋದು? ನೀವದನ್ನ ನಿಲ್ಲಿಸೋಕೆ ಪ್ರಯತ್ನ ಮಾಡಿ ಸೋತಿರಬಹುದು. ಆಗ ‘ದೇವರು ಹೇಳಿದ್ದನ್ನು ನನಗೆ ಕೇಳೋಕೆ ಆಗಲ್ಲ, ನನ್ನಿಂದ ಬದಲಾಗೋಕೆ ಆಗಲ್ಲ’ ಅಂತ ನಿಮಗನಿಸಬಹುದು. ಪೆಡ್ರೊಗೂ ಹಾಗೇ ಅನಿಸ್ತು. “ಪ್ರತಿ ಸಲ ಹಸ್ತಮೈಥುನ ಮಾಡಿದಾಗ ತುಂಬ ಬೇಜಾರು ಆಗ್ತಿತ್ತು. ದೇವರು ನನ್ನನ್ನ ಕ್ಷಮಿಸೋದೇ ಇಲ್ಲ ಅಂತ ಅನಿಸ್ತಿತ್ತು. ಪ್ರಾರ್ಥನೆ ಮಾಡೋಕು ಕಷ್ಟ ಆಗ್ತಿತ್ತು.”

ಒಂದುವೇಳೆ ನಿಮಗೂ ಹಾಗೆ ಅನಿಸುತ್ತಿದ್ದರೆ ಹೆದರಬೇಡಿ. ಖಂಡಿತ ನೀವೂ ಬದಲಾಗಬಹುದು. ಎಷ್ಟೋ ಯುವಜನರು ಮತ್ತು ದೊಡ್ಡವರು ಸಹ ಈ ಹಸ್ತಮೈಥುನ ಅನ್ನೋ ಬಲೆಯಿಂದ ಹೊರಗೆ ಬಂದಿದ್ದಾರೆ. ಅವರ ತರ ನಿಮ್ಮಿಂದಾನೂ ಹೊರಗೆ ಬರೋಕೆ ಆಗುತ್ತೆ.

ಕೊರಗಿನಿಂದ ಹೊರಗೆ

ಹಸ್ತಮೈಥುನದ ಚಟಕ್ಕೆ ಬಿದ್ದಿರೋ ಒಬ್ಬ ವ್ಯಕ್ತಿಗೆ ‘ನಾನು ತಪ್ಪು ಮಾಡ್ತಿದ್ದೀನಿ’ ಅನ್ನೋ ಕೊರಗು ಯಾವಾಗಲೂ ಇರುತ್ತೆ. ಆದ್ರೆ ‘ದೇವರಿಗೆ ಇಷ್ಟ ಆಗೋ ತರ ದುಃಖಪಟ್ಟರೆ’, ಖಂಡಿತ ಈ ಚಟದಿಂದ ಹೊರಗೆ ಬರೋಕೆ ಆಗುತ್ತೆ. (2 ಕೊರಿಂಥ 7:11) ಜಾಸ್ತಿ ಕೊರಗಿದ್ರೆ ಕುಗ್ಗಿ ಹೋಗ್ತೀರ. ಅಷ್ಟೇ ಅಲ್ಲ ಗೆಲ್ಲಬೇಕು ಅನ್ನೋ ಛಲಾನೆ ಕಳೆದುಕೊಳ್ತೀರ.—ಜ್ಞಾನೋಕ್ತಿ 24:10.

ಹಾಗಾದ್ರೆ ಹಸ್ತಮೈಥುನ ಮಾಡೋದು ತಪ್ಪಾ? ಹೌದು ಅದೊಂದು ಕೆಟ್ಟ ಚಟ. ಅದು ನಮ್ಮ ಬೇರೆಬೇರೆ ಆಸೆಗಳಿಗೆ, ಸುಖಕ್ಕೆ ಗುಲಾಮರನ್ನಾಗಿ ಮಾಡುತ್ತೆ. ಮನಸ್ಸಿನಲ್ಲಿ ಕೆಟ್ಟ ಯೋಚನೆ ತುಂಬಿಸಿ ಬಿಡುತ್ತೆ. (ತೀತ 3:3) ಆದ್ರೆ ಹಸ್ತಮೈಥುನ ಲೈಂಗಿಕ ಅನೈತಿಕತೆಯಷ್ಟು ದೊಡ್ಡ ತಪ್ಪಲ್ಲ. (ಯೂದ 7) ಒಂದುವೇಳೆ ನಿಮಗೆ ಹಸ್ತಮೈಥುನ ಮಾಡೋ ಅಭ್ಯಾಸ ಇದ್ದರೆ ಯೆಹೋವ ದೇವರು ನಿಮ್ಮನ್ನ ಕ್ಷಮಿಸೋದೇ ಇಲ್ಲ ಅಂತ ಯೋಚಿಸಬಾರದು. ಬದಲಿಗೆ ಏನು ಮಾಡಬಹುದು? ಸ್ವನಿಯಂತ್ರಣ ತೋರಿಸಬೇಕು, ಗೆಲ್ಲಬೇಕು ಅನ್ನೋ ಛಲ ಇಟ್ಟುಕೊಳ್ಳಬೇಕು ಮತ್ತು ಕೆಟ್ಟ ಆಸೆಗಳಿಂದ ದೂರ ಇರಬೇಕು.

ಇಷ್ಟೆಲ್ಲ ಪ್ರಯತ್ನ ಮಾಡಿದ ಮೇಲೂ ಹಸ್ತಮೈಥುನ ಮಾಡಿಬಿಟ್ರೆ ಕುಗ್ಗೋದು ಸಹಜ. ಆಗ ಜ್ಞಾನೋಕ್ತಿ 24:16ರಲ್ಲಿರೋ ಮಾತನ್ನ ನೆನಪಿಟ್ಕೊಳ್ಳಿ. ಅಲ್ಲಿ ಹೀಗಿದೆ: “ಯಾಕಂದ್ರೆ ನೀತಿವಂತ ಏಳು ಸಲ ಬಿದ್ರೂ ಮತ್ತೆ ಏಳ್ತಾನೆ. ಆದ್ರೆ ಕೆಟ್ಟವನು ಕೆಟ್ಟದ್ರಿಂದಾನೇ ಎಡವಿ ಬೀಳ್ತಾನೆ, ಅವನು ಮೇಲೆ ಏಳೋದೇ ಇಲ್ಲ.” ಈ ತರ ಆದಾಗ ನಾವು ಕೆಟ್ಟವರು, ನಮ್ಮಿಂದ ಬದಲಾಗೋಕೆ ಆಗಲ್ಲ ಅಂತ ನೆನಸಿ ಬಿಟ್ಟುಕೊಡಬೇಡಿ. ಬದಲಿಗೆ ಪುನಃ ಹಸ್ತಮೈಥುನ ಮಾಡಿದಕ್ಕೆ ಕಾರಣ ಏನಂತ ಕಂಡುಹಿಡಿದು ಅದ್ರಿಂದ ದೂರ ಇರಿ.

ಯೆಹೋವ ದೇವರ ಪ್ರೀತಿ ಮತ್ತು ಕರುಣೆ ಬಗ್ಗೆ ಧ್ಯಾನಿಸಿ. ಕೀರ್ತನೆಗಾರನಾದ ದಾವೀದ ಕೆಲವು ಕೆಟ್ಟ ವಿಷಯಗಳನ್ನ ಮಾಡಿದ ಮೇಲೆ ಏನು ಹೇಳಿದ ಅಂತ ಗಮನಿಸಿ: “ಅಪ್ಪ ಮಕ್ಕಳಿಗೆ ಕರುಣೆ ತೋರಿಸೋ ಹಾಗೆ, ಯೆಹೋವ ತನಗೆ ಭಯಪಡೋರಿಗೆ ಕರುಣೆ ತೋರಿಸ್ತಾನೆ. ಯಾಕಂದ್ರೆ ನಮ್ಮನ್ನ ರಚಿಸಿರೋದು ಹೇಗೆ ಅಂತ ಆತನಿಗೆ ಚೆನ್ನಾಗಿ ಗೊತ್ತು, ನಾವು ಧೂಳಾಗಿದ್ದೀವಿ ಅಂತ ಆತನು ನೆನಪಿಸ್ಕೊಳ್ತಾನೆ.” (ಕೀರ್ತನೆ 103:13, 14) ಹೌದು ನಾವು ಅಪರಿಪೂರ್ಣರು ಅಂತ ಆತನಿಗೆ ಚೆನ್ನಾಗಿ ಗೊತ್ತು. ಅದಕ್ಕೆ ಆತನು ನಮ್ಮನ್ನ ”ಕ್ಷಮಿಸೋಕೆ ಯಾವಾಗ್ಲೂ ಸಿದ್ಧನಾಗಿ” ಇರ್ತಾನೆ. (ಕೀರ್ತನೆ 86:5) ಆದ್ರೆ ನಮ್ಮಿಂದ ಆಗೋದೇ ಇಲ್ಲ ಅಂತ ನೆನಸಿ ಕೈ ಚೆಲ್ಲಿ ಕೂರೋದು ಆತನಿಗೆ ಇಷ್ಟ ಆಗಲ್ಲ. ಇದರಿಂದ ಹೊರಗೆ ಬರೋಕೆ ಏನು ಮಾಡಬೇಕೋ ಅದನ್ನೆಲ್ಲ ಮಾಡಿ. ಅದಕ್ಕೆ ಸಹಾಯ ಆಗೋ ಕೆಲವು ವಿಧಗಳನ್ನ ನಾವೀಗ ನೊಡೋಣ.

ನೋಡೋ ವಿಷಯಕ್ಕೆ ಗಮನ ಕೊಡಿ. ಹಸ್ತಮೈಥುನ ಮಾಡಬೇಕು ಅಂತ ಅನಿಸೋ ಸಿನಿಮಾ, ಟಿ.ವಿ ಪ್ರೋಗ್ರಾಂಗಳನ್ನ ಅಥವಾ ವೆಬ್‌ಸೈಟ್‌ಗಳನ್ನ ನೋಡ್ತೀರಾ? ಕೀರ್ತನೆಗಾರ ಹೀಗೆ ಪ್ರಾರ್ಥನೆ ಮಾಡಿದ: “ಅಯೋಗ್ಯ ವಿಷ್ಯಗಳನ್ನ ನೋಡದ ಹಾಗೆ ನನ್ನ ದೃಷ್ಟಿಯನ್ನ ಪಕ್ಕಕ್ಕೆ ತಿರುಗಿಸು.”  *ಕೀರ್ತನೆ 119:37.

ಯಾವಾಗಲೂ ಒಳ್ಳೆ ವಿಷಯಗಳನ್ನ ಮಾಡೋಕೆ ಪ್ರಯತ್ನಿಸಿ. ಕ್ರೈಸ್ತನಾಗಿರೋ ವಿಲಿಯಮ್‌ ಹೀಗೆ ಹೇಳ್ತಾನೆ: “ಮಲಗೋ ಮುಂಚೆ ಬೈಬಲನ್ನ ಅಥವಾ ಬೈಬಲ್‌ ಪ್ರಕಾಶನಗಳನ್ನ ಓದಿ. ಯಾವಾಗಲೂ ಮಲಗೋ ಮುಂಚೆ ಒಂದು ಒಳ್ಳೆ ವಿಷಯದ ಬಗ್ಗೆ ಯೋಚನೆ ಮಾಡೋದು ಉತ್ತಮ.”—ಫಿಲಿಪ್ಪಿ 4:8.

ನಿಮ್ಮ ಸಮಸ್ಯೆ ಬಗ್ಗೆ ಮಾತಾಡಿ. ಈ ವಿಷಯದ ಬಗ್ಗೆ ಯಾರ ಹತ್ರನಾದ್ರೂ ಮಾತಾಡೋಕೆ ಅಥವಾ ಸಹಾಯ ಕೇಳೋಕೆ ನಿಮಗೆ ನಾಚಿಕೆ ಆಗ್ತಿರಬಹುದು. ಆದ್ರೆ ನೀವು ಹಾಗೆ ಮಾಡಿದ್ರೆ ಈ ಕೆಟ್ಟ ಚಟದಿಂದ ಹೊರಗೆ ಬರೋಕೆ ಆಗುತ್ತೆ. ಕ್ರೈಸ್ತನಾಗಿರೋ ಡೇವಿಡ್‌ ಕೂಡ ಇದನ್ನೇ ಮಾಡಿದ. ಅವನು ಹೀಗೆ ಹೇಳ್ತಾನೆ: “ನಾನು ಅಪ್ಪ ಹತ್ತಿರ ಮಾತಾಡಿದೆ. ಆ ದಿನವನ್ನ ಯಾವತ್ತೂ ಮರಿಯೋಕೆ ಆಗಲ್ಲ. ಯಾಕಂದ್ರೆ ಅವರು ಕೋಪ ಮಾಡಿಕೊಳ್ಳಲಿಲ್ಲ. ಅವರ ಮುಖದಲ್ಲಿ ನಗು ಇತ್ತು.” “ನಿನ್ನನ್ನ ನೋಡಿ ನನಗೆ ತುಂಬ ಹೆಮ್ಮೆ ಆಗ್ತಿದೆ” ಅಂತ ಅಪ್ಪ ಹೇಳಿದ್ರು. ಈ ವಿಷಯದ ಬಗ್ಗೆ ಅಪ್ಪ ಹತ್ತಿರ ಮಾತಾಡೋಕೆ ತುಂಬ ಧೈರ್ಯ ಬೇಕಿತ್ತು ಅಂತ ಅವರು ಅರ್ಥಮಾಡಿಕೊಂಡ್ರು. ಅವರ ಹತ್ತಿರ ಮಾತಾಡಿದಾಗ ಮನಸ್ಸಿಗೆ ತುಂಬ ಸಮಾಧಾನ ಆಯಿತು, ತಲೆ ಮೇಲಿದ್ದ ದೊಡ್ಡ ಭಾರ ಇಳಿದಂಗಾಯಿತು.

“ತಿದ್ದಿಕೊಳ್ಳೋಕೆ ಆಗದೆ ಇರೋ ಅಷ್ಟು ದೊಡ್ಡ ತಪ್ಪು ನಾನು ಮಾಡಿಲ್ಲ ಅಂತ ಅಪ್ಪ ನನಗೆ ಹೇಳಿದ್ರು. ಅವರು ನನಗೆ ಸಹಾಯ ಮಾಡೋಕೆ ಕೆಲವು ವಚನಗಳನ್ನೂ ತೋರಿಸಿದ್ರು. ಆದ್ರೆ ನಾನು ಮಾಡಿರೋ ತಪ್ಪಿನ ಗಂಭೀರತೆ ಎಷ್ಟಿತ್ತು ಅಂತ ಅರ್ಥ ಮಾಡಿಕೊಳ್ಳೋಕೂ ನನಗೆ ಸಹಾಯ ಮಾಡಿದ್ರು. ಅಪ್ಪ ನನಗೆ ಸ್ವಲ್ಪ ಟೈಮ್‌ ಕೊಟ್ಟು ‘ಯಾವುದೇ ಕಾರಣಕ್ಕೂ ಆ ಸಮಯದಲ್ಲಿ ಹಸ್ತಮೈಥುನದ ಚಟಕ್ಕೆ ಬೀಳಬಾರದು’ ಅಂತ ನನಗೆ ಹೇಳಿದ್ರು. ಅದಾದ್ಮೇಲೆ ನಾವಿಬ್ರು ಕೂತು ಮಾತಾಡೋಣ ಅಂತ ಹೇಳಿದ್ರು. ಆದ್ರೆ ಮತ್ತೆ ಆ ತಪ್ಪನ್ನ ಮಾಡಿಬಿಟ್ಟರೆ ಅದನ್ನ ನೆನಸಿ ಕೊರಗಬೇಡ ಅಂತ ಅಪ್ಪ ನನ್ಗೆ ಧೈರ್ಯ ತುಂಬಿಸಿದ್ರು. ಅಷ್ಟೇ ಅಲ್ಲ ಇನ್ನೂ ಸ್ವಲ್ಪ ಟೈಮ್‌ ತಗೊಂಡು ಅದನ್ನ ಮತ್ತೆ ಮಾಡದೇ ಇರೋಕೆ ಪ್ರಯತ್ನ ಮಾಡು ಅಂದ್ರು.” ಹೀಗೆ ಮಾಡಿದಕ್ಕೆ ಡೇವಿಡ್‌ಗೆ ಏನಾದ್ರು ಪ್ರಯೋಜನ ಸಿಕ್ತಾ? ಅವನು ಏನು ಹೇಳ್ತಾನೆ ಅಂತ ಅವನ ಬಾಯಿಂದಾನೇ ಕೇಳಿ: “ನಮಗಿರೋ ಪ್ರಾಬ್ಲಮ್‌ ಬಗ್ಗೆ ಬೇರೆ ಯಾರಿಗಾದ್ರೂ ಗೊತ್ತಿದ್ರೆ ಅದ್ರಿಂದ ನಮಗೆ ತುಂಬ ಪ್ರಯೋಜನ ಸಿಗುತ್ತೆ ಅಂತ ಅರ್ಥ ಮಾಡಿಕೊಂಡೆ.” *

ನಮ್ಮ ಮುಂದಿನ ಅಧ್ಯಾಯದಲ್ಲಿ

ಕ್ಯಾಶುಯಲ್‌ ಸೆಕ್ಸನ್ನು ಕ್ಯಾಶುಯಲ್‌ ಆಗಿ ತಗೋ ಬೇಡಿ ಯಾಕೆ? ಅಂತ ತಿಳಿದುಕೊಳ್ಳಿ.

[ಪಾದಟಿಪ್ಪಣಿಗಳು]

^ ಹಸ್ತಮೈಥುನ ಅಂದರೆ ಲೈಂಗಿಕ ತೃಪ್ತಿಗಾಗಿ ಒಬ್ಬ ವ್ಯಕ್ತಿ ಬೇಕುಬೇಕಂತ್ತಾನೆ ತನ್ನ ಜನನಾಂಗವನ್ನ ಉಜ್ಜುವುದು ಅಥವಾ ನೇವರಿಸುವುದು. ಉದಾಹರಣೆಗೆ ಒಬ್ಬ ಹುಡುಗನಿಗೆ ಅವನು ಎದ್ದಾಗ ವೀರ್ಯಸ್ಖಲನ ಆಗೋದು ಅಥವಾ ಹುಡುಗಿಯರಿಗೆ ಋತುಚಕ್ರದ ಮುಂಚೆ ಅಥವಾ ಅದಾದ್ಮೇಲೆ ಲೈಂಗಿಕ ಆಸೆಗಳು ಜಾಸ್ತಿ ಆಗೋದ್ರ ಅರ್ಥ ಅವರು ಹಸ್ತಮೈಥುನ ಮಾಡ್ತಿದ್ದಾರೆ ಅಂತಲ್ಲ. ಯಾಕಂದ್ರೆ ಈ ಪ್ರಕ್ರಿಯೆ ಸ್ವಾಭಾವಿಕವಾಗಿ ಆಗೋದು.

^ ಹೆಚ್ಚಿನ ಮಾಹಿತಿಗಾಗಿ ವಾಲ್ಯೂಮ್‌ 2, ಅಧ್ಯಾಯ 33 ನೋಡಿ.

^ ಹೆಚ್ಚಿನ ಮಾಹಿತಿಗಾಗಿ ವಾಲ್ಯೂಮ್‌ 2, ಪುಟ 239ರಿಂದ-241ನ್ನ ನೋಡಿ.

ಮುಖ್ಯ ವಚನ

“ಹಾಗಾಗಿ ಯೌವನದಲ್ಲಿ ಬರೋ ಆಸೆಗಳಿಂದ ದೂರ ಓಡಿಹೋಗು. ಶುದ್ಧ ಹೃದಯದಿಂದ ದೇವರಿಗೆ ಬೇಡುವವ್ರ ಜೊತೆ ನೀತಿ, ನಂಬಿಕೆ, ಪ್ರೀತಿ, ಶಾಂತಿಯನ್ನ ಗಳಿಸೋಕೆ ಶ್ರಮ ಹಾಕು.”—2 ತಿಮೊತಿ 2:22.

ಟಿಪ್‌

ಲೈಂಗಿಕ ಆಸೆ ಜಾಸ್ತಿ ಆಗೋ ಮುಂಚೆನೇ ಪ್ರಾರ್ಥಿಸಿ. ಈ ಪ್ರಲೋಭನೆ ಎದುರಿಸೋಕೆ “ಸಾಮಾನ್ಯವಾಗಿ ಇರೋ ಶಕ್ತಿಗಿಂತ ಇನ್ನೂ ಹೆಚ್ಚಿನ ಶಕ್ತಿನ” ಕೊಡೋಕೆ ಯೆಹೋವ ದೇವರ ಹತ್ತಿರ ಕೇಳಿಕೊಳ್ಳಿ.—2 ಕೊರಿಂಥ 4:7.

ನಿಮಗೆ ಗೊತ್ತಿತ್ತಾ . . .?

ಒಬ್ಬ ದುರ್ಬಲ ವ್ಯಕ್ತಿ ತನ್ನ ಲೈಂಗಿಕ ಆಸೆಗಳಿಗೆ ಮಣಿದು ಅದನ್ನು ತೀರಿಸಿಕೊಳ್ತಾನೆ. ಆದರೆ ಒಬ್ಬ ಧೀರ ಆ ಆಸೆಗಳನ್ನು ನಿಯಂತ್ರಿಸುತ್ತಾನೆ. ಒಬ್ಬನೇ ಇರುವಾಗಲೂ ಹೀಗೇ ಮಾಡ್ತಾನೆ.

ನಿಮ್ಮ ತೀರ್ಮಾನ!

ಶುದ್ಧವಾಗಿರೋ ವಿಷಯಗಳನ್ನು ಯೋಚಿಸೋಕೆ ನಾನು

ಲೈಂಗಿಕ ಆಸೆಗಳಿಗೆ ಮಣಿಯೋ ಬದಲು ನಾನು

ಈ ವಿಷಯದ ಬಗ್ಗೆ ಅಪ್ಪ-ಅಮ್ಮ ಹತ್ರ ನಾನು ಏನು ಕೇಳೋಕೆ ಬಯಸ್ತೀನಿ ಅಂದ್ರೆ

ನಿಮಗೆ ಏನನಿಸುತ್ತೆ?

● “ಯೆಹೋವ ಕ್ಷಮಿಸೋಕೆ ಯಾವಾಗ್ಲೂ ಸಿದ್ಧ” ಅನ್ನೋ ವಿಷಯ ನೆನಪಿಟ್ಟುಕೊಳ್ಳುವುದು ಯಾಕೆ ಪ್ರಾಮುಖ್ಯ?—ಕೀರ್ತನೆ 86:5.

● ದೇವರು ಲೈಂಗಿಕ ಆಸೆಗಳನ್ನ ಇಟ್ಟು ನಮ್ಮನ್ನ ಸೃಷ್ಟಿ ಮಾಡಿದ್ದಾರೆ ಜೊತೆಗೆ ಸ್ವನಿಯಂತ್ರಣ ತೋರಿಸಬೇಕು ಅಂತನೂ ಬಯಸುತ್ತಾರೆ, ಹಾಗಿದ್ರೆ ನಿಮ್ಮ ಕೈಯಲ್ಲಿ ಏನು ಮಾಡೋಕೆ ಆಗುತ್ತೆ ಅಂತ ಆತನಿಗೆ ಚೆನ್ನಾಗಿ ಗೊತ್ತು?

[ಬ್ಲರ್ಬ್‌]

‘‘ಹಸ್ತಮೈಥುನದ ಚಟದಿಂದ ಹೊರಗೆ ಬಂದಿದಕ್ಕೆ ನನಗೀಗ ಒಳ್ಳೆ ಮನಸಾಕ್ಷಿ ಇದೆ. ಅದನ್ನ ಯಾವ ಕಾರಣಕ್ಕೂ ಬಿಟ್ಟು ಕೊಡೋಕೆ ನಾನು ತಯಾರಿಲ್ಲ!”—ಸಾರ

[ಚಿತ್ರ]

ಒಬ್ಬ ಓಟಗಾರ ಓಡುತ್ತಿರುವಾಗ ಕೆಲವೊಮ್ಮೆ ಬಿದ್ದು ಬಿಡುತ್ತಾನೆ. ಹಾಗಂತ ಆರಂಭದಿಂದ ಮತ್ತೆ ಓಡಬೇಕಂತೇನಿಲ್ಲ. ಅದೇ ತರ ಕೆಟ್ಟ ಚಟಗಳ ವಿರುದ್ಧ ಹೋರಾಡ್ತಾ ಇರುವಾಗ ಕೆಲವೊಮ್ಮೆ ಮತ್ತೆ ಅದೇ ತಪ್ಪನ್ನ ಮಾಡಿಬಿಡಬಹುದು. ಹಾಗಂತ ನಿಮ್ಮ ಹೋರಾಟದಲ್ಲಿ ಸೋತಿದ್ದೀರ ಅಂತಲ್ಲ.