ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೀಗೆ ಅನಿಸುವುದು ಸಾಮಾನ್ಯವೊ?

ಹೀಗೆ ಅನಿಸುವುದು ಸಾಮಾನ್ಯವೊ?

ಒಬ್ಬ ವಿರಹಿಯಾದವನು ಬರೆಯುವುದು: “ಇಂಗ್ಲೆಂಡಿನಲ್ಲಿ ಒಬ್ಬ ಮಗುವಾಗಿದ್ದ ನನಗೆ ಬಹಿರಂಗವಾಗಿ ನನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಬಾರದೆಂದು ಕಲಿಸಲಾಗಿತ್ತು. ಒಬ್ಬ ಮಾಜಿ ಮಿಲಿಟರಿ ಪುರುಷನಾಗಿದ್ದ ನನ್ನ ತಂದೆ, ನನಗೆ ಯಾವ ನೋವಾದರೂ ಆಗಿದ್ದ ಸಮಯದಲ್ಲಿ ಹಲ್ಲು ಕಚ್ಚಿ, ‘ಅತರ್ತೆ ಜಾಗ್ರತೆ!’ ಎಂದು ಹೇಳುತ್ತಿದ್ದದ್ದು ನನಗೆ ನೆನಪಿದೆ. ನನ್ನ ತಾಯಿ ನಮಗೆ (ನಾವು ನಾಲ್ವರಿದ್ದೆವು) ಎಂದಾದರೂ ಮುತ್ತಿಟ್ಟದ್ದು ಅಥವಾ ತಬ್ಬಿಕೊಂಡದ್ದು ನನ್ನ ನೆನಪಿಗೆ ಬರುವುದಿಲ್ಲ. ನನ್ನ ತಂದೆ ಸಾಯುವುದನ್ನು ಕಂಡಾಗ ನನಗೆ 56 ವಯಸ್ಸಾಗಿತ್ತು. ನನಗೆ ಭಯಂಕರ ನಷ್ಟದ ಅನಿಸಿಕೆಯಾಯಿತು. ಆದರೂ ಮೊದಲಾಗಿ ನಾನು ಅಳಲು ಅಶಕ್ತನಾಗಿದ್ದೆ.”

ಕೆಲವು ಸಂಸ್ಕೃತಿಗಳಲ್ಲಿ ಜನರು ತಮ್ಮ ಅನಿಸಿಕೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ. ಅವರು ಸಂತುಷ್ಟರಾಗಿರಲಿ, ದುಃಖಪಡುತ್ತಿರಲಿ, ಅವರ ಅನಿಸಿಕೆ ಇತರರಿಗೆ ತಿಳಿಯುತ್ತದೆ. ಇನ್ನೊಂದು ಪಕ್ಕದಲ್ಲಿ, ಜಗತ್ತಿನ ಕೆಲವು ಭಾಗಗಳಲ್ಲಿ, ಗಮನಾರ್ಹವಾಗಿ ಉತ್ತರ ಯೂರೋಪ್‌ ಮತ್ತು ಬ್ರಿಟನ್‌ನಲ್ಲಿ, ಜನರು, ವಿಶೇಷವಾಗಿ ಪುರುಷರು ತಮ್ಮ ಅನಿಸಿಕೆಗಳನ್ನು ಅಡಗಿಸುವ, ತಮ್ಮ ಭಾವೂದ್ರೇಕಗಳನ್ನು ವ್ಯಕ್ತಪಡಿಸದಿರುವ, ಮನಸ್ಥೈರ್ಯದಿಂದಿರುವ, ಮತ್ತು ಅಂತರಂಗವನ್ನು ಬಹಿರಂಗಪಡಿಸದಿರುವ ನಿಯಮಾಧೀನರಾಗುವಂತೆ ಮಾಡಲ್ಪಟ್ಟಿದ್ದಾರೆ. ಆದರೆ ನಿಮ್ಮ ಪ್ರಿಯನೊಬ್ಬನ ನಷ್ಟವನ್ನು ನೀವು ಅನುಭವಿಸಿರುವಾಗ, ದುಃಖವನ್ನು ವ್ಯಕ್ತಪಡಿಸುವುದು ಹೇಗೋ ತಪ್ಪಾಗಿದೆಯೆ? ಬೈಬಲು ಏನು ಹೇಳುತ್ತದೆ?

ಬೈಬಲಿನಲ್ಲಿ ಅತವ್ತರು

ಬೈಬಲನ್ನು ಬರೆದಿರುವವರು ಪೂರ್ವ ಭೂಮಧ್ಯ ಸಾಗರ ವಲಯದ ಭಾವಪ್ರದರ್ಶಕ ಜನರಾದ ಇಬ್ರಿಯರು. ಅದರಲ್ಲಿ ತಮ್ಮ ದುಃಖವನ್ನು ಬಹಿರಂಗವಾಗಿ ತೋರಿಸಿದ ಅನೇಕ ಜನರ ಮಾದರಿಗಳಿವೆ. ದಾವೀದ ರಾಜನು ತನ್ನ ಕೊಲೆಮಾಡಲ್ಪಟ್ಟಿದ್ದ ಪುತ್ರ ಅಮ್ನೋನನ ನಷ್ಟಕ್ಕಾಗಿ ದುಃಖಿಸಿದನು. ವಾಸ್ತವವಾಗಿ, ಅವನು “ಬಹಳವಾಗಿ ಗೋಳಾಡಿ” ದನು. (2 ಸಮುವೇಲ 13:28-39) ಅವನು ತನ್ನ ರಾಜತ್ವವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ ವಿಶ್ವಾಸಘಾತುಕಿ ಪುತ್ರನಾದ ಅಬ್ಷಾಲೋಮನ ಪ್ರಾಣನಷ್ಟಕ್ಕೂ ದುಃಖಿಸಿದನು. ಬೈಬಲಿನ ವೃತ್ತಾಂತವು ನಮಗನ್ನುವುದು: “ಇದನ್ನು ಕೇಳಿ ಅರಸನು ಎದೆಯೊಡೆದವನಾಗಿ—ನನ್ನ ಮಗನೇ, ಅಬ್ಷಾಲೋಮನೇ, ನನ್ನ ಮಗನೇ, ನನ್ನ ಮಗನಾದ ಅಬ್ಷಾಲೋಮನೇ, ನಿನಗೆ ಬದಲಾಗಿ ನಾನು ಸತ್ತಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು. ಅಬ್ಷಾಲೋಮನೇ, ನನ್ನ ಮಗನೇ, ಮಗನೇ ಎಂದು ಕೂಗಿ ಅಳುತ್ತಾ ಹೆಬ್ಬಾಗಲಿನ ಮೇಲಿರುವ ಕೋಣೆಗೆ ಹೋದನು.“ (2 ಸಮುವೇಲ 18:33) ದಾವೀದನು ಯಾವುದೇ ಒಬ್ಬ ಸಹಜ ತಂದೆಯೋಪಾದಿ ದುಃಖಿಸಿದನು. ಮತ್ತು ತಮ್ಮ ಮಕ್ಕಳ ಸ್ಥಾನದಲ್ಲಿ ತಾವು ಸತ್ತಿದ್ದರೆ ಎಷ್ಟೋ ಒಳ್ಳೇದಿತ್ತೆಂಬ ಮನಸ್ಸು ಎಷ್ಟು ಬಾರಿ ಹೆತ್ತವರಿಗಾಗಿರುವುದಿಲ್ಲ! ಹೆತ್ತವರಿಗಿಂತ ಮೊದಲು ಒಂದು ಮಗು ಸಾಯುವುದು ಎಷ್ಟೋ ಅಪ್ರಾಕೃತಿಕವಾಗಿ ಕಾಣುತ್ತದೆ.

ಯೇಸು ತನ್ನ ಮಿತ್ರ ಲಾಜರನ ಮರಣಕ್ಕೆ ಹೇಗೆ ಪ್ರತಿಕ್ರಿಯೆ ತೋರಿಸಿದನು? ಅವನು ಸಮಾಧಿಯನ್ನು ಸಮೀಪಿಸಿದಾಗ ಅತನ್ತು. (ಯೋಹಾನ 11:30-38) ಆ ಬಳಿಕ, ಯೇಸುವಿನ ಗೋರಿಯನ್ನು ಸಮೀಪಿಸಿದಾಗ ಮಗಲ್ದದ ಮರಿಯಳು ಅತಳ್ತು. (ಯೋಹಾನ 20:11-16) ನಿಜ, ಬೈಬಲಿನ ಪುನರುತ್ಥಾನದ ನಿರೀಕ್ಷೆಯ ಜ್ಞಾನವಿರುವ ಕ್ರೈಸ್ತನೊಬ್ಬನು, ಮೃತರ ಅವಸ್ಥೆಯ ಕುರಿತ ತಮ್ಮ ನಂಬಿಕೆಗೆ ಸ್ಪಷ್ಟವಾಗಿದ ಬೈಬಲ್‌ ಆಧಾರವಿಲ್ಲದ ಕೆಲವರಂತೆ ಸಂತಯಿಸಲಾಗದವನಂತೆ ದುಃಖಿಸುವುದಿಲ್ಲ. ಆದರೆ ಸಾಮಾನ್ಯ ಅನಿಸಿಕೆಗಳಿರುವ ಒಬ್ಬ ಮಾನವನಂತೆ, ನಿಜ ಕ್ರೈಸ್ತನೊಬ್ಬನು, ಪುನರುತ್ಥಾನದ ನಿರೀಕ್ಷೆಯುಳ್ಳವನಾದರೂ, ಯಾವನೇ ಪ್ರಿಯನ ಮರಣಕ್ಕೆ ದುಃಖಿಸುತ್ತಾನೆ ಮತ್ತು ಶೋಕಿಸುತ್ತಾನೆ ನಿಶ್ಚಯ.—1 ಥೆಸಲೊನೀಕ 4:13, 14.

ಅಳಬೇಕೊ ಬಾರದೊ?

ಇಂದು ನಮ್ಮ ಪ್ರತಿಕ್ರಿಯೆಗಳ ಕುರಿತೇನು? ನಿಮ್ಮ ಅನಿಸಿಕೆಗಳನ್ನು ತೋರಿಸುವುದು ನಿಮಗೆ ಕಷ್ಟವಾಗುತ್ತದೊ ಅಥವಾ ಸಂಕೋಚವಾಗುತ್ತದೊ? ಸಲಹೆಗಾರರು ಏನನ್ನು ಶಿಫಾರಸ್ಸು ಮಾಡುತ್ತಾರೆ? ಅವರ ಆಧುನಿಕ ವೀಕ್ಷಣಗಳು ಅನೇಕ ವೇಳೆ ಕೇವಲ ಬೈಬಲಿನ ಪ್ರಾಚೀನ ಪ್ರೇರಿತ ವಿವೇಕವನ್ನು ಪ್ರತಿಧ್ವನಿಸುತ್ತವೆ. ನಾವು ನಮ್ಮ ದುಃಖವನ್ನು ವ್ಯಕ್ತಪಡಿಸಬೇಕು, ನಿಗ್ರಹಿಸಬಾರದೆಂದೇ ಅವರ ಹೇಳಿಕೆ. ಇದು ನಮಗೆ ಪುರಾತನ ಕಾಲದ ನಂಬಿಗಸ್ತ ಪುರುಷರಾದ ಯೋಬ, ದಾವೀದ ಮತ್ತು ಯೆರೆಮೀಯ ಮುಂತಾದವರನ್ನು ಜ್ಞಾಪಕಕ್ಕೆ ತರುತ್ತದೆ. ಇವರ ದುಃಖಾಭಿವ್ಯಕ್ತಿಗಳು ಬೈಬಲಿನಲ್ಲಿ ಕಂಡುಬರುತ್ತವೆ. ಅವರು ತಮ್ಮ ಅನಿಸಿಕೆಗಳನ್ನು ನಿಶ್ಚಯವಾಗಿಯೂ ಅಡಗಿಸಿಟುಕ್ಟೊಳ್ಳಲಿಲ್ಲ. ಆದುದರಿಂದ ನಿಮ್ಮನ್ನು ಜನರಿಂದ ಪ್ರತ್ಯೇಕಿಸಿಕೊಳ್ಳುವುದು ವಿವೇಕವಲ್ಲ. (ಜ್ಞಾನೋಕ್ತಿ 18:1) ವಿವಿಧ ಸಂಸ್ಕೃತಿಗಳಲ್ಲಿ ವಿಭಿನ್ನ ವಿಧಗಳಲ್ಲಿ, ಚಾಲ್ತಿಯಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಹೊಂದಿಕೊಂಡು ಸಹ, ದುಃಖವನ್ನು ವ್ಯಕ್ತಪಡಿಸಲಾಗುತ್ತದೆಂಬುದು ನಿಶ್ಚಯ. a

ನಿಮಗೆ ಅಳುವಂತಾದರೆ? ಅಳುವುದು ಮಾನವ ಪ್ರಕೃತಿಯ ಭಾಗ. ಲಾಜರನ ಮರಣದ ಸಂದರ್ಭವನ್ನು, ಯೇಸು “ಆತ್ಮದಲ್ಲಿ ನೊಂದುಕೊಂಡು ತತ್ತರಿಸಿ . . . ಕಣ್ಣೀರು ಬಿಟ್ಟ” ಸಮಯವನ್ನು ಪುನಃ ಜ್ಞಾಪಿಸಿಕೊಳ್ಳಿರಿ. (ಯೋಹಾನ 11:32, 35) ಪ್ರಿಯನೊಬ್ಬನ ಮರಣಕ್ಕೆ ಸ್ವಾಭಾವಿಕ ಪ್ರತಿಕ್ರಿಯೆಯು ರೋದನವೆಂದು ಅವನು ಹೀಗೆ ತೋರಿಸಿದನು.

ಪ್ರಿಯನೊಬ್ಬನು ತೀರಿಕೊಳ್ಳುವಾಗ ದುಃಖಿಸುವುದು ಮತ್ತು ಅಳುವುದು ಸಾಮಾನ್ಯ

ಇದು ರೇಚೆಲ್‌ ಎಂಬ ತನ್ನ ಮಗುವನ್ನು ಸಿಡ್ಸ್‌ (SIDS ಅನಿರೀಕ್ಷಿತ ಶಿಶು ಮರಣ ರೋಗಾವಸ್ಥೆ) ರೋಗದಲ್ಲಿ ಕಳೆದುಕೊಂಡ ಆ್ಯನ್‌ ಎಂಬ ತಾಯಿಯ ನಿದರ್ಶನದಿಂದ ಬೆಂಬಲಿಸಲ್ಪಡುತ್ತದೆ. ಆಕೆಯ ಗಂಡನು ಹೇಳಿದ್ದು: “ಅಚ್ಚರಿಯ ಸಂಗತಿಯೇನಂದರೆ ಶವಸಂಸ್ಕಾರದಲ್ಲಿ ಆ್ಯನ್‌ ಆಗಲಿ ನಾನಾಗಲಿ ಅಳಲಿಲ್ಲ. ಇನ್ನೆಲ್ಲರೂ ಅಳುತ್ತಿದ್ದರು.” ಇದಕ್ಕೆ ಆ್ಯನ್‌ ಉತ್ತರಕೊಟ್ಟದ್ದು: “ಹೌದು, ಆದರೆ ನಾನು ನಮ್ಮಿಬ್ಬರಿಗಾಗಿ ಎಷ್ಟೋ ಅತ್ತಿದ್ದೇನೆ. ಈ ದುರಂತ ಕಳೆದು ಕೆಲವು ವಾರಗಳಾದ ಬಳಿಕ, ಕೊನೆಗೆ ಒಂದು ದಿನ ನಾನು ಮನೆಯಲ್ಲಿ ಒಬ್ಬಳೇ ಇದ್ದಾಗ ಅದು ನನ್ನನ್ನು ನಿಜವಾಗಿಯೂ ಹೊಡೆಯಿತೆಂದು ನನಗನಿಸುತ್ತದೆ. ನಾನು ಇಡೀ ದಿವಸ ಅತ್ತೆ. ಆದರೆ ಇದು ನನಗೆ ಸಹಾಯಿಸಿತೆಂದು ನನ್ನ ನಂಬಿಕೆ. ಅದರ ಕಾರಣ ನನಗೆ ಹೆಚ್ಚು ನೆಮ್ಮದಿಯಾಯಿತು. ನನ್ನ ಮಗುವಿನ ನಷ್ಟಕ್ಕೆ ನಾನು ದುಃಖಿಸಲೇ ಬೇಕಾಗಿತ್ತು. ದುಃಖಿಸುವವರನ್ನು ಅಳಲು ಬಿಡಬೇಕೆಂದು ನಾನು ನಿಜವಾಗಿಯೂ ನಂಬುತ್ತೇನೆ. ‘ಅಳಬೇಡ,’ ಎಂದು ಇತರರು ಹೇಳುವುದು ಸ್ವಾಭಾವಿಕ ಪ್ರತಿಕ್ರಿಯೆಯಾದರೂ ಅದು ನಿಜವಾಗಿಯೂ ಸಹಾಯ ಮಾಡುವುದಿಲ್ಲ.”

ಕೆಲವರು ಪ್ರತಿಕ್ರಿಯಿಸುವ ವಿಧ

ಪ್ರಿಯನೊಬ್ಬನ ನಷ್ಟದಿಂದ ಕಂಗೆಟ್ಟಿರುವಾಗ ಕೆಲವರು ಹೇಗೆ ಪ್ರತಿಕ್ರಿಯಿಸಿದ್ದಾರೆ? ಉದಾಹರಣೆಗೆ, ಕಾನ್ವಿಟಳನ್ನು ಪರಿಗಣಿಸಿ. ಒಂದು ಮಗುವನ್ನು ಕಳೆದುಕೊಳ್ಳುವಾಗ ಹೇಗನಿಸುತ್ತದೆಂದು ಆಕೆಗೆ ಗೊತ್ತು. ಆಕೆಗೆ ಐದು ಅಕಾಲ ಪ್ರಸವಗಳಾಗಿದ್ದವು. ಈಗ ಆಕೆ ಪುನಃ ಗರ್ಭವತಿಯಾಗಿದ್ದಳು. ಹಾಗಿದ್ದಾಗ ಒಂದು ಕಾರ್‌ ಅಪಘಾತ ಅವಳನ್ನು ಆಸ್ಪತ್ರೆಗೆ ಸೇರುವಂತೆ ನಿರ್ಬಂಧಿಸಿದಾಗ, ಆಕೆ ಚಿಂತಿತಳಾದದ್ದು ಗ್ರಾಹ್ಯ. ಎರಡು ವಾರಗಳಾನಂತರ, ಆಕೆಗೆ ಅಕಾಲಿಕವಾಗಿ ಪ್ರಸವವೇದನೆಯುಂಟಾಯಿತು. ಸ್ವಲ್ಪದರಲ್ಲಿ ಎರಡು ಪೌಂಡುಗಳಿಗಿಂತ ತುಸು ಜಾಸ್ತಿ ಭಾರವಿದ್ದ ಪುಟ್ಟ ವೆನೆಸಳ ಜನನವಾಯಿತು. ಕಾನ್ವಿಟ ನೆನಪಿಸಿಕೊಳ್ಳುವುದು: “ನಾನು ಭಾರಿ ಭಾವೂದ್ರೇಕಿತಳಾಗಿದ್ದೆ, ಏಕೆಂದರೆ ಕಟ್ಟಕಡೆಗೆ ಒಬ್ಬ ತಾಯಿಯಾಗಿದ್ದೆ!”

ಆದರೆ ಆಕೆಯ ಸಂತೋಷ ಅಲ್ಪಕಾಲಿಕವಾಗಿತ್ತು. ನಾಲ್ಕು ದಿನಗಳಾನಂತರ ವೆನೆಸ ತೀರಿಕೊಂಡಳು. ಕಾನ್ವಿಟ ನೆನಪಿಸಿಕೊಳ್ಳುವುದು: “ನನಗೆ ಭಾರಿ ಶೂನ್ಯತೆಯ ಭಾವನೆಯಾಯಿತು. ನನ್ನ ತಾಯನ್ತ ನನ್ನಿಂದ ತೆಗೆದುಕೊಳ್ಳಲ್ಪಟ್ಟಿತ್ತು. ನನಗೆ ಅಸಂಪೂರ್ಣಳಾಗಿದ್ದ ಅನಿಸಿಕೆಯಾಯಿತು. ನಾವು ವೆನೆಸಳಿಗಾಗಿ ತಯಾರಿಸಿದ್ದ ಕೋಣೆಯಿರುವ ಮನೆಗೆ ಬರುವುದು ಮತ್ತು ನಾನು ಅವಳಿಗಾಗಿ ಕೊಂಡಿದ್ದ ಚಿಕ್ಕ ಒಳಂಗಿಗಳನ್ನು ನೋಡುವುದು ವೇದನಾಮಯವಾಗಿತ್ತು. ಮುಂದಿನ ಕೆಲವು ತಿಂಗಳುಗಳಲ್ಲಿ ನಾನು ಅವಳ ಜನನ ದಿನವನ್ನು ಪುನರ್ಜೀವಿಸಿದೆ. ನನಗೆ ಇನ್ನಾವನ ಸಹವಾಸವೂ ಬೇಕಾಗಿರಲಿಲ್ಲ.”

ಇದು ವಿಪರೀತ ಪ್ರತಿಕ್ರಿಯೆಯೆ? ಇದನ್ನು ಗ್ರಹಿಸುವುದು ಇತರರಿಗೆ ಕಠಿನವಾದೀತು. ಆದರೆ ಕಾನ್ವಿಟಳಂತೆ ಅನುಭವಪಟ್ಟಿರುವವರು ಹೇಳುವುದೇನಂದರೆ ಸ್ವಲ್ಪ ಸಮಯ ಜೀವಿಸಿದ್ದವರಿಗಾಗಿ ತಾವು ದುಃಖಿಸುತ್ತಿದ್ದಂತೆಯೇ ಅವರು ತಮ್ಮ ಮಗುವಿಗಾಗಿಯೂ ದುಃಖಿಸಿದರು. ಒಂದು ಮಗು ಹುಟ್ಟುವುದಕ್ಕೆ ಎಷ್ಟೋ ಮೊದಲಾಗಿ ಅದು ಹೆತ್ತವರಿಂದ ಪ್ರೀತಿಸಲ್ಪಡುತ್ತದೆ ಎಂದು ಅವರನ್ನುತ್ತಾರೆ. ತಾಯಿಯೊಂದಿಗೆ ಒಂದು ವಿಶೇಷ ಅಂಟಿಕೆಯಿರುತ್ತದೆ. ಆ ಮಗು ಸಾಯುವಾಗ, ತಾಯಿಗೆ ತಾನು ಒಬ್ಬ ನಿಜ ವ್ಯಕ್ತಿಯನ್ನು ಕಳೆದುಕೊಂಡಂತೆ ಅನಿಸುತ್ತದೆ. ಮತ್ತು ಇತರರು ಗ್ರಹಿಸಿಕೊಳ್ಳಬೇಕಾದ ಸಂಗತಿ ಇದೇ.

ಕೋಪ ಮತ್ತು ಅಪರಾಧ ಪ್ರಜ್ಞೆ ನಿಮ್ಮನ್ನು ಬಾಧಿಸಬಲ್ಲ ವಿಧ

ತನ್ನ ಆರು ವಯಸ್ಸಿನ ಮಗನು ಆಜನ್ಮ ಹೃದಯ ಸಮಸ್ಯೆಯ ಕಾರಣ ಥಟ್ಟನೆ ತೀರಿಕೊಂಡನೆಂದು ಹೇಳಲ್ಪಟ್ಟಾಗ, ಇನ್ನೊಬ್ಬಾಕೆ ತಾಯಿ ತನ್ನ ಅನಿಸಿಕೆಗಳನ್ನು ಹೀಗೆ ವ್ಯಕ್ತಪಡಿಸಿದಳು: “ನಾನು ಪ್ರತಿಕ್ರಿಯೆಗಳ ಒಂದು ಶ್ರೇಣಿಯನ್ನೇ—ಜಡತೆ, ಅವಿಶ್ವಾಸ, ಅಪರಾಧ ಪ್ರಜ್ಞೆ, ಮತ್ತು ಮಗನ ಪರಿಸ್ಥಿತಿ ಎಷ್ಟು ಗುರುತರವಾಗಿತ್ತೆಂದು ಗ್ರಹಿಸಿಕೊಳ್ಳದ್ದಕ್ಕಾಗಿ ನನ್ನ ಗಂಡನ ಮತ್ತು ಡಾಕ್ಟರರ ಮೇಲೆ ಕೋಪ—ಅನುಭವಿಸಿದೆ.”

ದುಃಖದ ಇನ್ನೊಂದು ಲಕ್ಷಣ ಕೋಪವಾಗಿರಬಲ್ಲದು. ಅದು ಡಾಕ್ಟರರ ಮತ್ತು ನರ್ಸ್‌ಗಳ ಮೇಲೆ ಕೋಪವಾಗಿರಬಹುದು, ಮೃತನಿಗೆ ಪರಾಮರಿಕೆ ಮಾಡುವುದರಲ್ಲಿ ಅವರು ಇನ್ನೂ ಹೆಚ್ಚಿನದನ್ನು ಮಾಡಬೇಕಿತ್ತೆಂಬ ಅನಿಸಿಕೆ ಇದಾಗಿರಬಹುದು. ಇಲ್ಲವೆ ತಪ್ಪಾದ ಸಂಗತಿಗಳನ್ನು ಹೇಳುತ್ತಾರೆ ಅಥವಾ ಮಾಡುತ್ತಾರೆ ಎಂಬಂತೆ ತೋರಿಬರುವ ಮಿತ್ರರ ಮತ್ತು ಸಂಬಂಧಿಗಳ ಮೇಲೆ ಕೋಪ ಇದಾಗಿರಬಹುದು. ಸೆಲ್ಟ ಜ್ಞಾಪಿಸಿಕೊಳ್ಳುವುದು: “ನನ್ನ ಗಂಡನ ಮೇಲೆ ನಾನು ಕೋಪಮಾಡಿದ್ದು ನೆನಪಿದೆ. ಏಕೆಂದರೆ ಸಂಗತಿ ಭಿನ್ನವಾಗಿರಸಾಧ್ಯವಿತ್ತು. ಅವನು ತೀರ ಕಾಯಿಲೆಯಲ್ಲಿದ್ದನು, ಆದರೆ ಡಾಕ್ಟರರ ಎಚ್ಚರಿಕೆಗಳನ್ನು ಅಲಕ್ಷ್ಯ ಮಾಡಿದ್ದನು.” ಕೆಲವು ಸಲ ಅಗಲಿರುವವನ ಅಥವಾ ಅಗಲಿರುವವಳ ಮರಣವು ಬದುಕಿ ಉಳಿದಿರುವವನ ಮೇಲೆ ತರುವ ಹೊರೆಗಳ ನಿಮಿತ್ತ ಕೋಪವು ಎದ್ದು ಬರುತ್ತದೆ.

ಕೆಲವರು ಕೋಪದ ನಿಮಿತ್ತವಾಗಿ—ಅಂದರೆ ತಾವು ಕೋಪಿಸಿಕೊಂಡದ್ದಕ್ಕಾಗಿ ತಮ್ಮನ್ನೇ ಖಂಡಿಸಿಕೊಂಡು—ಅಪರಾಧ ಪ್ರಜ್ಞೆಯನ್ನು ಅನುಭವಿಸುತ್ತಾರೆ. ಇತರರು ತಮ್ಮ ಪ್ರಿಯನ ಮರಣಕ್ಕೆ ತಮ್ಮನ್ನೇ ದೂರಿಕೊಳ್ಳುತ್ತಾರೆ. “ನಾನು ಮೊದಲೇ ಅವನು ಡಾಕ್ಟರರ ಬಳಿ ಹೋಗುವಂತೆ ಮಾಡುತ್ತಿದ್ದರೆ” ಅಥವಾ “ಇನ್ನೊಬ್ಬ ಡಾಕ್ಟರರನ್ನು ನೋಡುವಂತೆ ಮಾಡುತ್ತಿದ್ದರೆ” ಅಥವಾ “ಅವನ ಆರೋಗ್ಯದ ಕುರಿತು ಹೆಚ್ಚು ಉತ್ತಮವಾಗಿ ಪರಾಮರಿಸಿಕೊಳ್ಳುವಂತೆ ಮಾಡುತ್ತಿದ್ದರೆ ಅವನು ಸಾಯುತ್ತಿರಲಿಲ್ಲ” ಎಂದು ಅವರು ತಮ್ಮನ್ನು ಮನವೊಪ್ಪಿಸಿಕೊಳ್ಳುತ್ತಾರೆ.

ಮಗುವಿನ ನಷ್ಟವು ಒಂದು ಭಯಂಕರ ಪೆಟ್ಟು—ನಿಜವಾದ ಸಹಾನುಭೂತಿ ಮತ್ತು ಅನುಭೂತಿ ಹೆತ್ತವರಿಗೆ ಸಹಾಯ ಮಾಡಬಲ್ಲದು

ಇತರರಿಗೆ ಅಪರಾಧ ಪ್ರಜ್ಞೆಯು, ವಿಶೇಷವಾಗಿ ಅವರ ಪ್ರಿಯರು ಥಟ್ಟನೆ, ಅನಿರೀಕ್ಷಿತವಾಗಿ ಸಾಯುವಲ್ಲಿ, ಅದನ್ನೂ ಮೀರಿಹೋಗುತ್ತದೆ. ಅಗಲಿರುವವನ ಮೇಲೆ ತಾವು ಕೋಪ ಮಾಡಿದ್ದ ಅಥವಾ ವಾದ ಮಾಡಿದ್ದ ಸಂದರ್ಭಗಳನ್ನು ಅವರು ನೆನಪಿಸಿಕೊಳ್ಳಲಾರಂಭಿಸುತ್ತಾರೆ. ಅಥವಾ ಮೃತನೊಂದಿಗೆ ತಾವು ಹೇಗಿರಬೇಕಾಗಿತ್ತೋ ಹಾಗೆ ನಿಜವಾಗಿಯೂ ಇರಲಿಲ್ಲ ಎಂದು ಅವರಿಗನಿಸಬಹುದು.

ಅನೇಕ ತಾಯಂದಿರ ದೀರ್ಘಕಾಲ ದುಃಖಿಸುವ ಕಾರ್ಯವಿಧಾನವು ಅನೇಕ ಪರಿಣತರು ಹೇಳುವುದನ್ನು, ಅಂದರೆ ಒಂದು ಮಗುವಿನ ನಷ್ಟವು ಹೆತ್ತವರಲ್ಲಿ, ವಿಶೇಷವಾಗಿ ತಾಯಿಯಲ್ಲಿ ಒಂದು ಕಾಯಂ ಆಗಿರುವ ಅಂತರವನ್ನು ಬಿಟ್ಟುಹೋಗುತ್ತದೆ ಎಂಬುದನ್ನು ಬೆಂಬಲಿಸುತ್ತದೆ.

ಪತಿಯನ್ನೋ ಪತ್ನಿಯನ್ನೋ ನೀವು ಕಳೆದುಕೊಳ್ಳುವಾಗ

ವಿವಾಹ ಸಹಭಾಗಿಯ ನಷ್ಟವು, ವಿಶೇಷವಾಗಿ ಇಬ್ಬರೂ ಕೂಡಿ ತೀರ ಸಕ್ರಿಯವಾದ ಜೀವನವನ್ನು ನಡೆಸಿರುವಲ್ಲಿ, ಇನ್ನೊಂದು ರೀತಿಯ ಪೆಟ್ಟಾಗಿದೆ. ಅದು ಅವರು ಕೂಡಿ ಭಾಗಿಗಳಾಗಿದ್ದ ಪೂರ್ತಿ ಜೀವನ ಶೈಲಿ—ಪ್ರಯಾಣ, ಕೆಲಸ, ಮನೋರಂಜನೆ ಮತ್ತು ಅನ್ಯೋನ್ಯಾಶ್ರಯ—ಯ ಅಂತ್ಯದ ಅರ್ಥದಲ್ಲಿರಬಲ್ಲದು.

ತನ್ನ ಗಂಡನು ಹೃದಯಾಘಾತದಿಂದ ಫಕ್ಕನೆ ಸತ್ತಾಗ ಏನಾಯಿತೆಂದು ಯೂನಿಸ್‌ ವಿವರಿಸುತ್ತಾಳೆ. “ಒಂದನೆಯ ವಾರದಲ್ಲಿ ನಾನು ಒಂದು ಸಂವೇದನಶೂನ್ಯ ಸ್ಥಿತಿಯಲ್ಲಿ, ಕಾರ್ಯ ನಡೆಸುವುದನ್ನೇ ನಿಲ್ಲಿಸಿದ್ದೇನೋ ಎಂಬಂತಿದ್ದೆ. ನನಗೆ ರುಚಿಯೂ ಇರಲಿಲ್ಲ, ವಾಸನೆಯ ಶಕ್ತಿಯೂ ಇರಲಿಲ್ಲ. ಆದರೂ ನನ್ನ ವಾದ ಸರಣಿಯ ಪ್ರಜ್ಞೆ ವಿಂಗಡಿಸಲ್ಪಟ್ಟಿದ್ದ ವಿಧದಲ್ಲಿ ಮುಂದುವರಿಯಿತು. ಅವರು ಸಿಪಿಆರ್‌ (ಹೃತ್‌ಶ್ವಾಸಕೋಶ ಪುನರುಜ್ಜೀವನ) ಮತ್ತು ಔಷಧವನ್ನು ಉಪಯೋಗಿಸಿ ನನ್ನ ಗಂಡನನ್ನು ಸ್ಥಿರೀಕರಿಸಲು ಪ್ರಯತ್ನಿಸುವಾಗ ನಾನು ಅವನ ಜೊತೆ ಇದ್ದ ಕಾರಣ, ವಾಡಿಕೆಯಾದ ಅನಂಗೀಕಾರ ರೋಗಸೂಚನೆಯನ್ನು ನಾನು ಅನುಭವಿಸಲಿಲ್ಲ. ಆದರೂ ಹತಾಶೆಯ ತೀಕ್ಷೈ ಅನುಭವವು, ಒಂದು ಕಾರು ಪ್ರಪಾತದ ಅಂಚನ್ನು ಹಾರಿ ಕೆಳಗೆ ಬೀಳುವುದನ್ನು ನಾನು ಪ್ರೇಕ್ಷಿಸುತ್ತಾ ಇದ್ದರೂ ಅದರ ಸಂಬಂಧದಲ್ಲಿ ನಾನೇನೂ ಮಾಡಶಕ್ತಳಲ್ಲ ಎಂಬ ಭಾವನೆಯು ನನ್ನಲ್ಲಿತ್ತು.”

ಆಕೆ ಅತಳ್ತೊ? “ಅತ್ತದ್ದು ನಿಶ್ಚಯ, ವಿಶೇಷವಾಗಿ ನನಗೆ ಬಂದಿದ್ದ ನೂರಾರು ಸಂತಾಪ ಸೂಚನಾ ಕಾರ್ಡುಗಳನ್ನು ಓದಿದಾಗ. ಪ್ರತಿಯೊಂದನ್ನು ಓದಿದಾಗ ನಾನು ಅತ್ತೆ. ಬಾಕಿ ಉಳಿದಿರುವ ದಿನವನ್ನು ಎದುರಿಸಲು ಇದು ನನಗೆ ಸಹಾಯ ಮಾಡಿತು. ಆದರೆ ನನಗೆ ಹೇಗೆನಿಸುತ್ತದೆ ಎಂದು ಪದೇ ಪದೇ ಕೇಳಿದಾಗೆಲ್ಲ ಯಾವ ಸಹಾಯವೂ ಸಿಗಲಿಲ್ಲ. ನಾನು ದುಃಖಾರ್ತಳಾಗಿದ್ದೆನೆಂಬುದು ವ್ಯಕ್ತವಾಗಿತ್ತು.”

ತನ್ನ ದುಃಖದ ಸಮಯವನ್ನು ಪಾರಾಗುವಂತೆ ಯೂನಿಸ್‌ಗೆ ಯಾವುದು ಸಹಾಯ ಮಾಡಿತು? “ನಾನು ಮಾಡುತ್ತೇನೆಂದು ಗ್ರಹಿಸದೆ ಇದ್ದರೂ, ನನ್ನ ಜೀವನವನ್ನು ಮುಂದುವರಿಸಲು ಅಜಾಗೃತ ಸ್ಥಿತಿಯಲ್ಲಿ ನಾನು ನಿರ್ಧರಿಸಿದೆ,” ಅನ್ನುತ್ತಾಳೆ ಆಕೆ. “ಆದರೆ, ಜೀವನವನ್ನು ಎಷ್ಟೋ ಪ್ರೀತಿಸಿದ ನನ್ನ ಗಂಡ, ಅದನ್ನು ಅನುಭವಿಸಲು ಇಲ್ಲವಲ್ಲಾ ಎಂದು ನೆನಸುವುದು ನನಗೆ ಇನ್ನೂ ಬೇನೆಯನ್ನುಂಟುಮಾಡುತ್ತದೆ.”

“ಇತರರು ಆದೇಶ ಕೊಡಲು ಬಿಡಬೇಡಿ . . .”

ಬೀಳ್ಕೊಡುವುದು—ಶುಭಮಸ್ತುವೆಂದು ಹೇಳುವುದು ಯಾವಾಗ ಮತ್ತು ಹೇಗೆ (ಇಂಗ್ಲಿಷ್‌ನಲ್ಲಿ) ಎಂಬುದರ ಲೇಖಕರು ಸಲಹೆ ನೀಡುವುದು: “ನೀವು ಹೇಗೆ ವರ್ತಿಸಬೇಕು ಯಾ ನಿಮಗೆ ಹೇಗನಿಸಬೇಕು ಎಂದು ಇತರರು ಆದೇಶ ಕೊಡಲು ಬಿಡಬೇಡಿ. ದುಃಖಿಸುವ ಕಾರ್ಯವಿಧಾನ ಪ್ರತಿಯೊಬ್ಬನೊಡನೆ ಪ್ರತ್ಯೇಕ ರೀತಿಯಲ್ಲಿ ಕಾರ್ಯನಡಿಸುತ್ತದೆ. ನೀವು ವಿಪರೀತವಾಗಿ ದುಃಖಿಸುತ್ತಿದ್ದೀರೆಂದು ಅಥವಾ ಸಾಕಷ್ಟು ದುಃಖಿಸುತ್ತಿಲ್ಲವೆಂದು ಇತರರು ಯೋಚಿಸಬಹುದು ಮತ್ತು ತಮ್ಮ ಯೋಚನೆಯನ್ನು ನಿಮಗೆ ತಿಳಿಯಪಡಿಸಬಹುದು. ಅವರನ್ನು ಕ್ಷಮಿಸಿ ಮತ್ತು ಅದನ್ನು ಮರೆತುಬಿಡಿ. ಇತರರು ಅಥವಾ ಇಡೀ ಸಮಾಜವು ನಿರ್ಮಿಸಿದ ಒಂದು ಅಚ್ಚಿನೊಳಗೆ ನಿಮ್ಮನ್ನು ಹೊಯ್ದುಕೊಳ್ಳುವಂತೆ ನಿರ್ಬಂಧಿಸಲು ಪ್ರಯತ್ನಿಸುವ ಮೂಲಕ, ಪುನಃ ಸ್ಥಾಪಿತವಾಗುವ ಭಾವಾತ್ಮಕ ಆರೋಗ್ಯದ ಕಡೆಗೆ ನಿಮ್ಮ ಬೆಳವಣಿಗೆಯನ್ನು ಕುಂಠಿತವಾಗುವಂತೆ ನೀವು ಮಾಡುತ್ತೀರಿ.”

ವಿವಿಧ ಜನರು ತಮ್ಮ ದುಃಖಗಳನ್ನು ವಿವಿಧ ರೀತಿಯಲ್ಲಿ ನಿಭಾಯಿಸುತ್ತಾರೆ ನಿಶ್ಚಯ. ಪ್ರತಿಯೊಬ್ಬ ವ್ಯಕ್ತಿಗೆ ಒಂದು ವಿಧವು ಇನ್ನೊಂದಕ್ಕಿಂತ ಅಗತ್ಯವಾಗಿ ಹೆಚ್ಚು ಉತ್ತಮವಾಗಿದೆ ಎಂದು ಸೂಚಿಸಲು ನಾವು ಪ್ರಯತ್ನಿಸುತ್ತಿಲ್ಲ. ಆದರೂ ಜಡತೆಯು ನೆಲೆನಿಲ್ಲುವಾಗ, ದುಃಖಿತ ವ್ಯಕ್ತಿ ಪರಿಸ್ಥಿತಿಯ ವಾಸ್ತವ್ಯದೊಂದಿಗೆ ಸಮಾಧಾನವಾಗಲು ಅಶಕ್ತನಾಗಿ ಪರಿಣಮಿಸುವಾಗ ಅಪಾಯವು ಎದ್ದುಬರುತ್ತದೆ. ಆಗ ಸಹಾನುಭೂತಿಯ ಮಿತ್ರರಿಂದ ಸಹಾಯ ಬೇಕಾದೀತು. ಬೈಬಲು ಹೇಳುವುದು: “ಮಿತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.” ಆದುದರಿಂದ ಸಹಾಯವನ್ನು ಹುಡುಕಲು, ಮಾತಾಡಲು ಮತ್ತು ಅಳಲು ಭಯಪಡಬೇಡಿರಿ.—ಜ್ಞಾನೋಕ್ತಿ 17:17.

ದುಃಖವು ನಷ್ಟಕ್ಕಿರುವ ಸಾಮಾನ್ಯ ಪ್ರತಿಕ್ರಿಯೆ, ಮತ್ತು ನಿಮ್ಮ ದುಃಖವು ಇತರರಿಗೆ ವ್ಯಕ್ತವಾಗುವುದು ತಪ್ಪಲ್ಲ. ಆದರೆ ಇನ್ನೂ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಗಳು ಅವಶ್ಯ: ‘ನಾನು ನನ್ನ ಶೋಕದೊಂದಿಗೆ ಹೇಗೆ ಜೀವಿಸಬಲ್ಲಿ? ಅಪರಾಧ ಪ್ರಜ್ಞೆ ಮತ್ತು ಕೋಪದ ಅನಿಸಿಕೆಗಳ ಅನುಭವವು ಸಾಮಾನ್ಯವೊ? ನಾನು ಈ ಪ್ರತಿಕ್ರಿಯೆಗಳನ್ನು ಹೇಗೆ ನಿರ್ವಹಿಸಬೇಕು? ನಷ್ಟ ಮತ್ತು ದುಃಖವನ್ನು ತಾಳಿಕೊಳ್ಳಲು ನನಗೆ ಯಾವುದು ಸಹಾಯ ಮಾಡಬಲ್ಲದು?’ ಆ ಮತ್ತು ಇತರ ಪಶ್ನೆಗಳಿಗೆ ಮುಂದಿನ ವಿಭಾಗವು ಉತ್ತರಕೊಡುವುದು.

a ಉದಾಹರಣೆಗೆ, ನೈಜೀರಿಯ ಯಾರಬ ಜನರಲ್ಲಿ ಆತ್ಮದ ಪುನರವತಾರದಲ್ಲಿ ಒಂದು ಸಾಂಪ್ರದಾಯಿಕ ನಂಬಿಕೆಯಿದೆ. ಹೀಗೆ ಒಬ್ಬ ತಾಯಿ ತನ್ನ ಮಗುವನ್ನು ಕಳೆದುಕೊಳ್ಳುವಾಗ, ತೀವ್ರ ದುಃಖವಿದ್ದರೂ ಅದು ಕೊಂಚ ಕಾಲಕ್ಕೆ ಮಾತ್ರ. ಏಕೆಂದರೆ ಒಂದು ಯಾರಬ ಪಲ್ಲವಿ ಹೇಳುವುದು: “ಚೆಲ್ಲಿದ್ದು ನೀರೇ. ಸೋರೆ ಬುರುಡೆ ಒಡೆದಿರುವುದಿಲ್ಲ.” ಯಾರಬ ಜನರಿಗನುಸಾರ, ನೀರಿರುವ ಸೋರೆ ಬುರುಡೆಯಾಗಿರುವ ತಾಯಿ, ಇನ್ನೊಂದು ಮಗುವನ್ನು—ಪ್ರಾಯಶಃ ಸತ್ತಿದ್ದ ಮಗುವಿನ ಪುನರವತಾರವನ್ನು—ಹಡೆಯಬಲ್ಲಳು. ಯೆಹೋವನ ಸಾಕ್ಷಿಗಳು ಅಮರ್ತ್ಯವಾದ ಆತ್ಮ ಮತ್ತು ಪುನರವತಾರವೆಂಬ ಸುಳ್ಳು ವಿಚಾರಗಳಿಂದ ಎದ್ದು ಬಂದಿರುವ ಮೂಢ ನಂಬಿಕೆಗಳ ಮೇಲೆ ಆಧಾರವಾಗಿರುವ ಸಂಪ್ರದಾಯಗಳನ್ನು ಅನುಸರಿಸುವುದಿಲ್ಲ. ಇವುಗಳಿಗೆ ಬೈಬಲಿನಲ್ಲಿ ಆಧಾರವೇ ಇಲ್ಲ.—ಪ್ರಸಂಗಿ 9:5-10; ಯೆಹೆಜ್ಕೇಲ 18:4, 20.