ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 2—ಪರಿಚಯ

ಭಾಗ 2—ಪರಿಚಯ

ದೇವರು ಯಾಕೆ ಜಲಪ್ರಳಯವನ್ನು ತಂದನು? ಮಾನವ ಇತಿಹಾಸದ ಆರಂಭದಲ್ಲಿ ಒಳ್ಳೇದು ಮತ್ತು ಕೆಟ್ಟದ್ದರ ಮಧ್ಯೆ ಕಲಹ ಆರಂಭವಾಯಿತು. ಆದಾಮ, ಹವ್ವ ಮತ್ತು ಅವರ ಮಗ ಕಾಯಿನನಂಥ ಜನರು ಕೆಟ್ಟದ್ದನ್ನು ಆರಿಸಿಕೊಂಡರು. ಹೇಬೆಲ ಮತ್ತು ನೋಹರಂಥ ಕೆಲವರು ಮಾತ್ರ ಒಳ್ಳೇದನ್ನು ಆರಿಸಿಕೊಂಡರು. ಹೆಚ್ಚಿನವರು ತುಂಬ ಕೆಟ್ಟ ಕೆಲಸಗಳನ್ನು ಮಾಡಿದ್ದರಿಂದ ಯೆಹೋವನು ಆ ದುಷ್ಟಜನರನ್ನು ಜಲಪ್ರಳಯದಿಂದ ನಾಶಮಾಡಿದನು. ನಾವು ಯಾವುದನ್ನು ಆರಿಸಿಕೊಳ್ಳುತ್ತೇವೆ ಎಂದು ಯೆಹೋವನು ಗಮನಿಸುತ್ತಾನೆ ಹಾಗೂ ಕೆಟ್ಟದ್ದು ಒಳ್ಳೇದನ್ನು ಜಯಿಸುವಂತೆ ಆತನು ಎಂದಿಗೂ ಬಿಡನು ಎಂಬುದನ್ನು ಈ ಭಾಗ ನಿಮ್ಮ ಮಗುವಿಗೆ ಮನಗಾಣಿಸುತ್ತದೆ.

ಈ ಭಾಗದಲ್ಲಿ

ಪಾಠ 3

ಆದಾಮ-ಹವ್ವ ದೇವರ ಮಾತನ್ನು ಕೇಳಲಿಲ್ಲ

ಏದೆನ್‌ ತೋಟದಲ್ಲಿದ್ದ ಒಂದು ನಿರ್ದಿಷ್ಟ ಮರದ ವಿಶೇಷತೆ ಏನು?

ಪಾಠ 4

ಕೋಪದಿಂದ ಕೊಲೆಗೆ

ದೇವರು ಹೇಬೆಲ ಕಾಣಿಕೆಯನ್ನು ಮೆಚ್ಚಿದನು ಆದರೆ ಕಾಯಿನನ ಕಾಣಿಕೆಯನ್ನು ಮೆಚ್ಚಲಿಲ್ಲ. ಇದರಿಂದ ಕೋಪಗೊಂಡ ಕಾಯಿನ ಘೋರ ಕೃತ್ಯವನ್ನು ಮಾಡಿಬಿಟ್ಟ.

ಪಾಠ 5

ನೋಹನ ಹಡಗು

ಸ್ವರ್ಗದಿಂದ ಬಂದ ದೇವದೂತರು ಭೂಮಿಯಲ್ಲಿದ್ದ ಸ್ತ್ರೀಯರನ್ನು ಮದುವೆಯಾದರು. ಅವರಿಗೆ ಹುಟ್ಟಿದ ಮಕ್ಕಳು ದೈತ್ಯ ಹಿಂಸಕರಾಗಿದ್ದರು. ಎಲ್ಲಾ ಕಡೆ ಹಿಂಸೆ ತುಂಬಿತುಳುಕುತ್ತಿತ್ತು. ಆದರೆ ನೋಹ ಅವರಂತೆ ಇರಲಿಲ್ಲ. ಅವನು ದೇವರನ್ನು ಪ್ರೀತಿಸಿದನು, ವಿಧೇಯನಾದನು.

ಪಾಠ 6

ಹೊಸ ಲೋಕಕ್ಕೆ ಕಾಲಿಟ್ಟ ಎಂಟು ಜನ

40 ದಿನ ಹಗಲು-ರಾತ್ರಿ ಮಳೆ ಬಂತು. ನೋಹ ಮತ್ತು ಅವನ ಕುಟುಂಬ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಹಡಗಲ್ಲಿದ್ದರು. ಕೊನೆಗೆ ದೇವರು ಹಡಗಿಂದ ಹೊರಬರಲು ಹೇಳಿದನು.