ಅಧ್ಯಾಯ 2
ಬೈಬಲ್—ದೇವರು ನಮಗೆ ಕೊಟ್ಟ ಉಡುಗೊರೆ
1, 2. ದೇವರು ನಮಗೆ ಕೊಟ್ಟಿರುವ ಒಂದು ಒಳ್ಳೇ ಉಡುಗೊರೆ ಬೈಬಲಾಗಿದೆ ಎಂದು ಹೇಗೆ ಹೇಳಬಹುದು?
ಸ್ನೇಹಿತನೊಬ್ಬ ನಿಮಗೊಂದು ಉಡುಗೊರೆ ಕೊಟ್ಟರೆ ನಿಮಗೆಷ್ಟು ಸಂತೋಷ ಆಗುತ್ತದಲ್ವಾ? ಕೊಟ್ಟ ತಕ್ಷಣವೇ ಏನು ಕೊಟ್ಟಿರಬಹುದು ಅಂತ ತೆಗೆದು ನೋಡುತ್ತೀರಿ. ಅವನು ನಿಮ್ಮ ಬಗ್ಗೆ ಯೋಚಿಸಿ ಆ ಉಡುಗೊರೆ ಕೊಟ್ಟಿರುವುದಕ್ಕೆ ಧನ್ಯವಾದ ಹೇಳುತ್ತೀರಿ.
2 ಅದೇ ರೀತಿ ದೇವರು ನಮಗೆ ಬೈಬಲನ್ನು ಉಡುಗೊರೆಯಾಗಿ ಕೊಟ್ಟಿದ್ದಾನೆ. ಬೇರೆಲ್ಲೂ ಸಿಗದಂಥ ಮಾಹಿತಿ ಅದರಲ್ಲಿದೆ. ಉದಾಹರಣೆಗೆ ಆಕಾಶ, ಭೂಮಿ ಮತ್ತು ಮೊದಲ ಗಂಡು ಹೆಣ್ಣನ್ನು ದೇವರು ಸೃಷ್ಟಿ ಮಾಡಿದನೆಂದು ಅದು ತಿಳಿಸುತ್ತದೆ. ನಮ್ಮ ಕಷ್ಟಗಳನ್ನು ನಿಭಾಯಿಸುವುದು ಹೇಗೆ ಎಂದು ನಮಗೆ ಕಲಿಸುತ್ತದೆ. ಅಲ್ಲದೆ, ದೇವರು ಈಗಿರುವ ಸಮಸ್ಯೆಗಳನ್ನು ತೆಗೆದುಹಾಕಿ ಮುಂದೆ ಈ ಭೂಮಿಯನ್ನು ಹೇಗೆ ಸಂತೋಷದ ಸ್ಥಳವನ್ನಾಗಿ ಮಾಡಲಿದ್ದಾನೆಂದು ಸಹ ತಿಳಿಸುತ್ತದೆ. ಇಷ್ಟೆಲ್ಲಾ ಮಾಹಿತಿಗಳನ್ನು ಕೊಡುವ ಬೈಬಲ್ ನಿಜಕ್ಕೂ ಒಂದು ಒಳ್ಳೇ ಉಡುಗೊರೆ ಅನ್ನುವುದರಲ್ಲಿ ಎರಡು ಮಾತಿಲ್ಲ.
3. ಬೈಬಲನ್ನು ಕಲಿಯುತ್ತಾ ಹೋದಂತೆ ನಿಮಗೆ ಯಾವ ವಿಷಯ ಗೊತ್ತಾಗುತ್ತದೆ?
3 ಬೈಬಲನ್ನು ಕಲಿಯುತ್ತಾ ಹೋದಂತೆ, ದೇವರು ನಿಮ್ಮ ಸ್ನೇಹಿತನಾಗಲು ಇಷ್ಟಪಡುತ್ತಾನೆಂದು ನಿಮಗೆ ಗೊತ್ತಾಗುತ್ತದೆ. ಆತನ ಬಗ್ಗೆ ನೀವು ಹೆಚ್ಚೆಚ್ಚು ಕಲಿತಂತೆ ನೀವು ಆತನಿಗೆ ಆಪ್ತರಾಗುತ್ತಾ ಹೋಗುತ್ತೀರಿ.
4. ಬೈಬಲಿಗಿರುವ ಯಾವ ವಿಶೇಷತೆ ನಿಮಗೆ ತುಂಬ ಇಷ್ಟ ಆಯಿತು?
4 ಬೈಬಲ್ 2,800ಕ್ಕಿಂತ ಹೆಚ್ಚು ಭಾಷೆಗಳಲ್ಲಿದೆ. ಇದರರ್ಥ 100ರಲ್ಲಿ 90 ಜನರು ತಮ್ಮ ಸ್ವಂತ ಭಾಷೆಯಲ್ಲಿ ಬೈಬಲನ್ನು ಓದಬಹುದು. ಈಗಾಗಲೇ ನೂರಾರು ಕೋಟಿಗಳಷ್ಟು ಬೈಬಲ್‌ಗಳನ್ನು ಮುದ್ರಿಸಲಾಗಿದೆ. ಪ್ರತಿವಾರ ಹತ್ತು ಲಕ್ಷಕ್ಕಿಂತ ಹೆಚ್ಚು ಜನರು ಬೈಬಲನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ರೀತಿಯ ವಿಶೇಷತೆಗಳಿರುವುದು ಬೈಬಲಿಗೆ ಮಾತ್ರ.
5. ಬೈಬಲ್ “ದೇವರಿಂದ ಪ್ರೇರಿತವಾಗಿದೆ” ಎಂದು ನಾವು ಹೇಗೆ ಹೇಳಬಹುದು?
2 ತಿಮೊಥೆಯ 3:16 ಓದಿ.) ‘ಬೈಬಲನ್ನು ಮನುಷ್ಯರು ಬರೆದಿರುವಾಗ, ಅದನ್ನು ದೇವರು ಕೊಟ್ಟನು ಅಂತ ಹೇಗೆ ಹೇಳುತ್ತೀರಿ?’ ಅಂತ ನೀವು ಕೇಳಬಹುದು. ಈ ಪ್ರಶ್ನೆಗೆ ಉತ್ತರವಾಗಿ ಬೈಬಲ್ ಹೀಗೆ ತಿಳಿಸಿದೆ: “ಮನುಷ್ಯರು ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟು ದೇವರಿಂದ ಹೊಂದಿದ್ದನ್ನೇ ಮಾತಾಡಿದರು.” (2 ಪೇತ್ರ 1:21) ಉದಾಹರಣೆಗೆ, ಒಬ್ಬ ಅಧಿಕಾರಿ ತನ್ನ ಕೈಕೆಳಗೆ ಕೆಲಸಮಾಡುವವನ ಹತ್ತಿರ ಒಂದು ಪತ್ರವನ್ನು ಬರೆಸಿದರೆ, ಆ ಪತ್ರ ಯಾರದ್ದು? ಆ ಕೆಲಸಗಾರನದ್ದಾ? ಖಂಡಿತ ಅಲ್ಲ. ಅದು ಅಧಿಕಾರಿಯ ಪತ್ರ. ಅದೇ ರೀತಿಯಲ್ಲಿ ಬೈಬಲನ್ನು ಬರೆದವರು ಮನುಷ್ಯರೇ ಆದರೂ ಅದನ್ನು ಬರೆಸಿದವನು ದೇವರು. ದೇವರು ತನ್ನ ಆಲೋಚನೆಗಳನ್ನು ಮನುಷ್ಯರ ಕೈಯಲ್ಲಿ ಬರೆಸಿದನು. ಹಾಗಾಗಿ ಬೈಬಲ್ ನಿಜವಾಗಿ “ದೇವರ ವಾಕ್ಯ.”—1 ಥೆಸಲೊನೀಕ 2:13; ಟಿಪ್ಪಣಿ 2ನ್ನು ನೋಡಿ.
5 ಬೈಬಲ್ “ದೇವರಿಂದ ಪ್ರೇರಿತವಾಗಿದೆ” ಅಂದರೆ ಬೈಬಲನ್ನು ಕೊಟ್ಟವನು ದೇವರೇ. (ಬೈಬಲ್‌ನಲ್ಲಿ ತಪ್ಪು ಮಾಹಿತಿಗಳಿಲ್ಲ
6, 7. ಬೈಬಲ್‌ನಲ್ಲಿರುವ ವಿಷಯಗಳು ಒಂದಕ್ಕೊಂದು ವಿರುದ್ಧವಾಗಿಲ್ಲ ಎಂದು ನಾವು ಹೇಗೆ ಹೇಳಬಹುದು?
6 ಬೈಬಲನ್ನು ಸಂಪೂರ್ಣವಾಗಿ ಬರೆದು ಮುಗಿಸಲು 1,600ಕ್ಕೂ ಹೆಚ್ಚು ವರ್ಷಗಳು ಹಿಡಿದವು. ಅದನ್ನು ಬರೆದ ವ್ಯಕ್ತಿಗಳು ಬೇರೆ ಬೇರೆ ಸಮಯದಲ್ಲಿ ಬದುಕಿದವರು. ಅವರಲ್ಲಿ ಹೆಚ್ಚು ಓದಿದವರೂ ಇದ್ದರು, ಕಡಿಮೆ ಓದಿದವರೂ ಇದ್ದರು. ಉದಾಹರಣೆಗೆ ಅವರಲ್ಲಿ ರೈತರು, ಬೆಸ್ತರು, ಕುರುಬರು, ಪ್ರವಾದಿಗಳು, ನ್ಯಾಯಾಧೀಶರು ಮತ್ತು ರಾಜರೂ ಇದ್ದರು. ಒಬ್ಬ ವೈದ್ಯ ಸಹ ಇದ್ದ. ಹೀಗೆ ಬೇರೆ ಬೇರೆಯವರು ಬೈಬಲನ್ನು ಬರೆದಿದ್ದರೂ ಇಡೀ ಬೈಬಲನ್ನು ಒಬ್ಬನೇ ಬರೆದಂತಿದೆ. ಬೈಬಲಿನಲ್ಲಿ ಒಂದು ಕಡೆಯಲ್ಲಿ ಹೇಳಿರುವ ವಿಷಯಕ್ಕೂ, ಇನ್ನೊಂದು ಕಡೆಯಲ್ಲಿ ಹೇಳಿರುವ ವಿಷಯಕ್ಕೂ ಸಂಬಂಧವಿಲ್ಲ ಎಂದು ಎಲ್ಲೂ ಅನಿಸುವುದಿಲ್ಲ. *
7 ಬೈಬಲಿನ ಮೊದಲ ಅಧ್ಯಾಯಗಳು ಪ್ರಪಂಚದಲ್ಲಿ ಸಮಸ್ಯೆಗಳು ಹೇಗೆ ಆರಂಭವಾದವು ಎಂದು ತಿಳಿಸಿದರೆ, ಕೊನೆಯ ಅಧ್ಯಾಯಗಳು ಆ ಸಮಸ್ಯೆಗಳನ್ನು ದೇವರು ತೆಗೆದುಹಾಕಿ ಹೇಗೆ ಭೂಮಿಯನ್ನು ಸುಂದರ ಸ್ಥಳವನ್ನಾಗಿ ಮಾಡಲಿದ್ದಾನೆ ಎಂದು ತಿಳಿಸುತ್ತವೆ. ಬೈಬಲಿನ ಪುಟಗಳಲ್ಲಿರುವ ಸಾವಿರಾರು ವರ್ಷಗಳ ಮಾನವ ಇತಿಹಾಸವನ್ನು ನೋಡುವಾಗ ದೇವರು ತಾನು ಏನು ಮಾಡಬೇಕೆಂದು ಅಂದುಕೊಂಡಿದ್ದನೋ ಅದನ್ನೆಲ್ಲ ಮಾಡುತ್ತಾ ಬಂದಿದ್ದಾನೆ ಎಂದು ನಮಗೆ ಗೊತ್ತಾಗುತ್ತದೆ.
8. ವಿಜ್ಞಾನಕ್ಕೆ ಸಂಬಂಧಪಟ್ಟ ವಿಷಯಗಳಲ್ಲೂ ಬೈಬಲ್ ತಪ್ಪಾದ ಮಾಹಿತಿ ಕೊಟ್ಟಿಲ್ಲ ಎಂದು ಹೇಗೆ ಹೇಳಬಹುದು?
8 ವಿಜ್ಞಾನವನ್ನು ಕಲಿಸಲಿಕ್ಕಾಗಿ ಬೈಬಲನ್ನು ಬರೆಯಲಾಗಿಲ್ಲ. ಆದರೆ ಅದರಲ್ಲಿ ವಿಜ್ಞಾನಕ್ಕೆ ಸಂಬಂಧಪಟ್ಟ ಯಾವೆಲ್ಲ ಮಾಹಿತಿ ಇದೆಯೋ ಅದು ಸರಿಯಾಗಿಯೇ ಇದೆ. ಬೈಬಲನ್ನು ದೇವರು ಕೊಟ್ಟ ಅಂದಮೇಲೆ ಅದು ಹಾಗೇ ಇರಬೇಕಲ್ವಾ? ಉದಾಹರಣೆಗೆ, ಅಂಟುರೋಗಗಳು ಹರಡದಂತೆ ನೋಡಿಕೊಳ್ಳಲಿಕ್ಕಾಗಿ ದೇವರು ಬೈಬಲಿನಲ್ಲಿರುವ ಯಾಜಕಕಾಂಡ ಎಂಬ ಪುಸ್ತಕದಲ್ಲಿ ಕೆಲವೊಂದು ಸಲಹೆಗಳನ್ನು ಕೊಟ್ಟಿದ್ದಾನೆ. ಆ ಸಲಹೆಗಳನ್ನು ಕೊಟ್ಟಾಗ ಜನರಿಗೆ ಕೀಟಾಣುಗಳಿಂದ ರೋಗ ಹೇಗೆ ಬರುತ್ತದೆ ಎಂಬ ಕಲ್ಪನೆ ಸಹ ಇರಲಿಲ್ಲ. ಇನ್ನೊಂದು ಉದಾಹರಣೆ ನೋಡಿ. ಭೂಮಿ ಯಾವುದೇ ಯೋಬ 26:7) ಭೂಮಿ ಚಪ್ಪಟೆಯಾಗಿದೆ ಎಂದು ಹೆಚ್ಚಿನ ಜನರು ನಂಬಿದ್ದ ಕಾಲದಲ್ಲೇ, ಬೈಬಲ್ ಭೂಮಿಯನ್ನು “ಮಂಡಲ” ಅಂದರೆ ಗೋಳ ಎಂದು ಹೇಳಿತು.—ಯೆಶಾಯ 40:22.
ಆಧಾರವಿಲ್ಲದೆ ತೂಗಾಡುತ್ತಿದೆ ಎಂದು ಬೈಬಲ್ ಕಲಿಸುತ್ತದೆ. (9. ಬೈಬಲನ್ನು ಬರೆದವರ ಪ್ರಾಮಾಣಿಕತೆಯಿಂದ ನಮಗೆ ಏನು ಅರ್ಥವಾಗುತ್ತದೆ?
9 ಇತಿಹಾಸದ ಕುರಿತು ಸಹ ಬೈಬಲ್ ಸರಿಯಾದ ಮಾಹಿತಿಯನ್ನೇ ಕೊಟ್ಟಿದೆ. ಆದರೆ ಅನೇಕ ಇತಿಹಾಸ ಪುಸ್ತಕಗಳಲ್ಲಿ ಸಂಪೂರ್ಣ ಸತ್ಯ ಇಲ್ಲ. ಕಾರಣ ಅವುಗಳನ್ನು ಬರೆದವರು ಇದ್ದದ್ದನ್ನು ಇದ್ದ ಹಾಗೇ ಬರೆಯಲಿಲ್ಲ. ಉದಾಹರಣೆಗೆ, ತಮ್ಮ ಸಾಮ್ರಾಜ್ಯಗಳು ಯುದ್ಧಗಳಲ್ಲಿ ಸೋತು ಹೋದ ವಿಷಯವನ್ನು ಅವರು ತಮ್ಮ ಪುಸ್ತಕಗಳಲ್ಲಿ ತಿಳಿಸಿರುವುದು ತುಂಬಾ ಕಡಿಮೆ. ಆದರೆ ಬೈಬಲನ್ನು ಬರೆದವರು ಹಾಗೆ ಮಾಡದೆ ತಮ್ಮ ಸೋಲನ್ನು ಸಹ ಮುಚ್ಚಿಡದೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ತಾವು ಮಾಡಿದ ತಪ್ಪುಗಳನ್ನೂ ತಿಳಿಸಿದ್ದಾರೆ. ಉದಾಹರಣೆಗೆ, ಅರಣ್ಯಕಾಂಡ ಎಂಬ ಪುಸ್ತಕ ಬರೆದ ಮೋಶೆ ತಾನು ಮಾಡಿದ ಒಂದು ದೊಡ್ಡ ತಪ್ಪಿನ ಬಗ್ಗೆ ಮತ್ತು ಆ ತಪ್ಪಿಗಾಗಿ ದೇವರು ತನ್ನನ್ನು ಶಿಕ್ಷಿಸಿದ ಬಗ್ಗೆ ತಿಳಿಸಿದ್ದಾನೆ. (ಅರಣ್ಯಕಾಂಡ 20:2-12) ಬೈಬಲ್ ಬರಹಗಾರರ ಈ ಪ್ರಾಮಾಣಿಕತೆ ಬೈಬಲನ್ನು ದೇವರೇ ಬರೆಸಿದನು ಎಂದು ರುಜುಪಡಿಸುತ್ತದೆ. ಹಾಗಾಗಿ ನಾವು ಬೈಬಲನ್ನು ನಂಬಬಹುದು.
ಬೈಬಲ್—ಬುದ್ಧಿಮಾತುಗಳ ಭಂಡಾರ
10. ಬೈಬಲಿನಲ್ಲಿರುವ ಬುದ್ಧಿಮಾತುಗಳಿಂದ ಇವತ್ತಿಗೂ ಪ್ರಯೋಜನವಿದೆ ಎಂದು ನಮಗೆ ಹೇಗೆ ಗೊತ್ತು?
10 ಬೈಬಲ್ “ದೇವರಿಂದ ಪ್ರೇರಿತವಾಗಿದೆ ಮತ್ತು ಬೋಧಿಸುವುದಕ್ಕೂ ಖಂಡಿಸುವುದಕ್ಕೂ ವಿಷಯಗಳನ್ನು ಸರಿಪಡಿಸುವುದಕ್ಕೂ . . . ಉಪಯುಕ್ತವಾಗಿದೆ.” (2 ತಿಮೊಥೆಯ 3:16) ಬೈಬಲ್ ಹಳೆಯದಾಗಿದ್ದರೂ ಅದರಲ್ಲಿರುವ ಬುದ್ಧಿಮಾತುಗಳು ಹಳೆಯದಾಗಿಲ್ಲ. ಅವುಗಳಿಂದ ಇವತ್ತಿಗೂ ನಮಗೆ ಪ್ರಯೋಜನವಿದೆ. ಯಾಕೆಂದರೆ, ಬೈಬಲನ್ನು ಕೊಟ್ಟವನು ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರು. ಆತನು ಸೃಷ್ಟಿಕರ್ತನಾಗಿರುವುದರಿಂದ ನಮ್ಮ ಆಲೋಚನೆಗಳು ಮತ್ತು ಭಾವನೆಗಳು ಆತನಿಗೆ ಚೆನ್ನಾಗಿ ಅರ್ಥ ಆಗುತ್ತವೆ. ನಮ್ಮ ಬಗ್ಗೆ ನಮಗಿಂತ ಚೆನ್ನಾಗಿ ಆತನಿಗೆ ಗೊತ್ತು. ನಾವು ಸಂತೋಷವಾಗಿರಬೇಕು ಎಂದು ಆತನು ಬಯಸುತ್ತಾನೆ. ನಮಗೆ ಯಾವುದು ಒಳ್ಳೇದು, ಯಾವುದು ಕೆಟ್ಟದು ಎಂದು ಆತನು ಬಲ್ಲನು.
11, 12. (ಎ) ಮತ್ತಾಯ ಪುಸ್ತಕದ ಅಧ್ಯಾಯ 5ರಿಂದ 7ರಲ್ಲಿ ಯೇಸು ಹೇಳಿದ ಯಾವ ಬುದ್ಧಿಮಾತುಗಳಿವೆ? (ಬಿ) ಬೈಬಲಿನಿಂದ ಇನ್ನು ಯಾವ ವಿಷಯಗಳನ್ನು ನಾವು ಕಲಿಯಬಹುದು?
11 ಬೈಬಲಿನ ಮತ್ತಾಯ ಪುಸ್ತಕದ ಅಧ್ಯಾಯ 5ರಿಂದ 7ರಲ್ಲಿ ಯೇಸು ಹೇಳಿದ ಅತ್ಯುತ್ತಮ ಬುದ್ಧಿಮಾತುಗಳಿವೆ. ಸಂತೋಷವಾಗಿರುವುದು ಹೇಗೆ, ಬೇರೆಯವರೊಂದಿಗೆ ಹೊಂದಿಕೊಂಡು ಹೋಗುವುದು ಹೇಗೆ, ಪ್ರಾರ್ಥನೆ ಮಾಡುವುದು ಹೇಗೆ, ಹಣ ನಮಗೆ ಏನಾಗಿರಬೇಕು-ಏನಾಗಿರಬಾರದು ಈ ವಿಷಯಗಳ ಬಗ್ಗೆ ಬುದ್ಧಿಮಾತುಗಳು ಅಲ್ಲಿ ಸಿಗುತ್ತವೆ. ಯೇಸು ಈ ಮಾತುಗಳನ್ನು ಹೇಳಿ 2,000 ವರ್ಷಗಳೇ ಕಳೆದು ಹೋಗಿವೆ. ಆದರೆ ಇವತ್ತಿಗೂ ಆ ಮಾತುಗಳ ಬೆಲೆಯಾಗಲಿ, ಶಕ್ತಿಯಾಗಲಿ ಕಡಿಮೆಯಾಗಿಲ್ಲ.
12 ಸುಖ ಸಂಸಾರ ನಡೆಸಲು, ಒಳ್ಳೇ ಕೆಲಸಗಾರರು ಆಗಲು ಮತ್ತು ಬೇರೆಯವರೊಂದಿಗೆ ಶಾಂತಿ ಸಮಾಧಾನದಿಂದ ಇರಲು ಸಹಾಯಮಾಡುವಂಥ ಕೆಲವು ತತ್ವಗಳನ್ನು ಯೆಹೋವ ದೇವರು ಬೈಬಲಿನಲ್ಲಿ ಬರೆಸಿಟ್ಟಿದ್ದಾನೆ. ನಾವು ಯಾರೇ ಆಗಿರಲಿ, ಎಲ್ಲೇ ಇರಲಿ, ಯಾವುದೇ ಸಮಸ್ಯೆ ನಮಗಿರಲಿ ಆ ತತ್ವಗಳಿಂದ ನಮಗೆ ತುಂಬಾ ಪ್ರಯೋಜನವಾಗುತ್ತದೆ.—ಯೆಶಾಯ 48:17 ಓದಿ; ಟಿಪ್ಪಣಿ 3ನ್ನು ನೋಡಿ.
ಬೈಬಲಿನ ಪ್ರವಾದನೆಗಳಲ್ಲಿ ಭರವಸೆಯಿಡಲು ಸಾಧ್ಯ
13. ಶತ್ರು ಸೈನ್ಯವು ಬಾಬೆಲನ್ನು ವಶಪಡಿಸಿಕೊಳ್ಳುವುದರ ಬಗ್ಗೆ ಯೆಶಾಯ ಪುಸ್ತಕದಲ್ಲಿ ಏನೆಂದು ತಿಳಿಸಲಾಗಿತ್ತು?
13 ಬೈಬಲ್‌ನಲ್ಲಿ ತುಂಬ ಪ್ರವಾದನೆಗಳಿವೆ. ಅವುಗಳಲ್ಲಿ ಹೆಚ್ಚಿನವು ಈಗಾಗಲೇ ನಿಜವಾಗಿವೆ. ಅದಕ್ಕೊಂದು ಉದಾಹರಣೆ ನೋಡಿ. ಬಾಬೆಲ್ ಎಂಬ ಒಂದು ನಗರವಿತ್ತು. ಅದಕ್ಕೆ ಶತ್ರುಗಳು ಒಳನುಗ್ಗಲು ಆಗದಂಥ ಭದ್ರವಾದ ಕೋಟೆಯಿತ್ತು ಮತ್ತು ಅದರ ಸುತ್ತಲೂ ಒಂದು ನದಿಯಿತ್ತು. ಆದರೆ, ಆ ನಗರವನ್ನು ಶತ್ರು ಸೈನ್ಯ ವಶಪಡಿಸಿಕೊಳ್ಳುತ್ತದೆ ಎಂದು ಬೈಬಲಿನ ಯೆಶಾಯ ಪುಸ್ತಕದಲ್ಲಿ ಮೊದಲೇ ತಿಳಿಸಲಾಗಿತ್ತು. (ಯೆಶಾಯ 13:19) ಶತ್ರು ಸೈನ್ಯ ಆ ನದಿಯನ್ನು ಬತ್ತಿಸುತ್ತದೆ, ಕೋಟೆಯ ದೊಡ್ಡ ಬಾಗಿಲುಗಳನ್ನು ಮುಚ್ಚಲು ನಗರದ ಜನರು ಮರೆತು ಹೋಗುತ್ತಾರೆ ಮತ್ತು ಶತ್ರು ಸೈನ್ಯವು ಯಾವುದೇ ಯುದ್ಧವನ್ನು ಮಾಡದೆ ಆ ನಗರವನ್ನು ವಶಪಡಿಸಿಕೊಳ್ಳುತ್ತದೆ ಎಂದು ತಿಳಿಸಲಾಗಿತ್ತು. ಆ ಸೈನ್ಯದ ರಾಜನ ಹೆಸರು ಕೋರೆಷ ಎಂದು ಸಹ ಹೇಳಲಾಗಿತ್ತು. ಹೀಗೆ ಮುಂದೆ ಆಗಲಿರುವ ಎಲ್ಲ ವಿಷಯಗಳನ್ನು ಬಿಡಿಸಿ ಬಿಡಿಸಿ ತಿಳಿಸಲಾಗಿತ್ತು.—ಯೆಶಾಯ 44:27–45:2 ಓದಿ; ಟಿಪ್ಪಣಿ 4ನ್ನು ನೋಡಿ.
14, 15. ಯೆಶಾಯ ಪುಸ್ತಕದಲ್ಲಿ ತಿಳಿಸಿದ ವಿಷಯ ಹೇಗೆ ನಿಜವಾಯಿತು?
14 ಈ ಘಟನೆಗಳನ್ನು ತಿಳಿಸಿ 200 ವರ್ಷಗಳಾದ ನಂತರ ಬಾಬೆಲಿನ ಮೇಲೆ ದಾಳಿ ಮಾಡಲು ಪಾರಸಿಯ ಸೈನ್ಯವು ಬಂದು ನಿಂತಿತು. ಆ ಸೈನ್ಯದ ರಾಜನ ಹೆಸರು ಏನು ಗೊತ್ತಾ? ಕೋರೆಷ!
15 ಅವತ್ತು ರಾತ್ರಿ ಬಾಬೆಲಿನಲ್ಲಿ ಒಂದು ಉತ್ಸವ ನಡೆಯುತ್ತಿತ್ತು. ಅಲ್ಲಿನ ಜನ ತಮ್ಮ ಸಾಮ್ರಾಜ್ಯಕ್ಕೆ ಭದ್ರವಾದ ಕೋಟೆಯಿದೆ, ಸುತ್ತಲೂ ನದಿ ಇದೆ, ತಮಗೆ ಯಾರೂ ಏನೂ
ಮಾಡಲು ಆಗುವುದಿಲ್ಲ ಅಂದುಕೊಂಡಿದ್ದರು. ಆದರೆ, ಕೋರೆಷ ಮತ್ತವನ ಸೈನ್ಯ ಒಂದು ಕಾಲುವೆಯನ್ನು ತೋಡಿ ನದಿಯ ನೀರು ಆ ಕಾಲುವೆಗೆ ಹರಿಯುವಂತೆ ಮಾಡಿದರು. ಆಗ ನದಿಯ ನೀರು ಕಡಿಮೆಯಾದ್ದರಿಂದ, ಸೈನ್ಯಕ್ಕೆ ನದಿಯನ್ನು ದಾಟಲು ಸುಲಭವಾಯಿತು. ಆದರೆ ಶತ್ರು ಸೈನ್ಯವು ಕೋಟೆಯ ದೊಡ್ಡ ಬಾಗಿಲುಗಳನ್ನು ದಾಟಿ ಒಳಗೆ ಹೇಗೆ ಹೋಯಿತು? ಯೆಶಾಯ ಪುಸ್ತಕದಲ್ಲಿ ತಿಳಿಸಿದಂತೆ ಆ ದೊಡ್ಡ ಬಾಗಿಲುಗಳನ್ನು ಮುಚ್ಚಿರಲಿಲ್ಲ. ಹಾಗಾಗಿ ಶತ್ರು ಸೈನ್ಯವು ಯುದ್ಧವನ್ನೇ ಮಾಡದೆ ಬಾಬೆಲನ್ನು ವಶಪಡಿಸಿಕೊಂಡಿತು.16. (ಎ) ಬಾಬೆಲ್ ನಗರ ಮುಂದೆ ಹೇಗೆ ಇರುತ್ತದೆ ಎಂಬ ಬಗ್ಗೆ ಯೆಶಾಯ ಪುಸ್ತಕ ಏನೆಂದು ತಿಳಿಸಿತ್ತು? (ಬಿ) ಆ ಮಾತು ನಿಜವಾಯಿತು ಎಂದು ನಾವು ಹೇಗೆ ಹೇಳಬಹುದು?
ಯೆಶಾಯ 13:20) ಆ ಮಾತು ನಿಜವಾಯಿತಾ? ಬಾಬೆಲ್ ನಗರ ಈಗಿನ ಇರಾಕ್‌ನಲ್ಲಿರುವ ಬಾಗ್ದಾದ್ ಎಂಬ ಊರಿನ ದಕ್ಷಿಣಕ್ಕೆ ಸುಮಾರು 80 ಕಿ.ಮೀ. (50 ಮೈಲಿ) ದೂರದಲ್ಲಿತ್ತು. ಈಗ ಆ ಪ್ರದೇಶವನ್ನು ನೋಡಿದರೆ ಅಲ್ಲಿ ಒಂದು ನಗರವಿತ್ತೆಂದು ಹೇಳಲಿಕ್ಕೇ ಸಾಧ್ಯವಿಲ್ಲ. ಇವತ್ತಿಗೂ ಜನರು ಅಲ್ಲಿ ವಾಸವಾಗಿಲ್ಲ. ಹೀಗೆ ಯೆಹೋವನು ಬಾಬೆಲನ್ನು “ನಾಶನವೆಂಬ ಬರಲಿನಿಂದ” ಗುಡಿಸಿಬಿಟ್ಟಿದ್ದಾನೆ.—ಯೆಶಾಯ 14:22, 23. *
16 ಬಾಬೆಲ್ ನಗರವು “ಎಂದಿಗೂ ನಿವಾಸಸ್ಥಳವಾಗದು, ತಲತಲಾಂತರಕ್ಕೂ ಅಲ್ಲಿ ಜನರು ಒಕ್ಕಲಿರರು” ಎಂದು ಸಹ ಯೆಶಾಯ ಪುಸ್ತಕದಲ್ಲಿ ತಿಳಿಸಲಾಗಿತ್ತು. ಅದರರ್ಥ ಮುಂದೆಂದೂ ಜನರು ಅಲ್ಲಿ ವಾಸವಿರುವುದಿಲ್ಲ ಎಂದಾಗಿತ್ತು. (17. ದೇವರು ಕೊಟ್ಟಿರುವ ಪ್ರತಿಯೊಂದು ಮಾತು ನಿಜವಾಗುತ್ತದೆಂದು ನಾವು ಏಕೆ ಭರವಸೆಯಿಡಬಹುದು?
17 ನಾವು ಈಗ ನೋಡಿದ್ದು ಒಂದೇ ಒಂದು ಪ್ರವಾದನೆ ಮಾತ್ರ. ಬೈಬಲ್‌ನಲ್ಲಿರುವ ಇಂಥ ಅನೇಕ ಪ್ರವಾದನೆಗಳು ಈಗಾಗಲೇ ನಿಜವಾಗಿವೆ. ಹಾಗಾಗಿ ಮುಂದಿನ ದಿನಗಳ ಬಗ್ಗೆ ಬೈಬಲ್ ಏನು ತಿಳಿಸುತ್ತದೋ ಅದೂ ನಿಜವಾಗುತ್ತದೆ ಎಂದು ನಂಬಬಹುದು. ‘ಈ ಭೂಮಿಯನ್ನು ಸುಂದರ ಸ್ಥಳವನ್ನಾಗಿ ಮಾಡುತ್ತೇನೆ’ ಎಂದು ಯೆಹೋವನು ಕೊಟ್ಟಿರುವ ಮಾತಿನಲ್ಲಿ ನಾವು ಭರವಸೆಯಿಡಬಹುದು. ಅರಣ್ಯಕಾಂಡ 23:19 ಓದಿ.) “ಸುಳ್ಳಾಡಲು ಸಾಧ್ಯವಿಲ್ಲದ ದೇವರು” ಎಷ್ಟೋ ಮುಂಚೆಯೇ ಮಾತುಕೊಟ್ಟಿರುವಂತೆ ನಮಗೆ “ನಿತ್ಯಜೀವ” ಕೊಡುತ್ತಾನೆ ಎನ್ನುವುದರಲ್ಲಿ ಕಿಂಚಿತ್ತೂ ಸಂಶಯವಿಲ್ಲ.—ತೀತ 1:2. *
(ಬಾಳನ್ನೇ ಬೆಳಗಿಸುವ ಬೈಬಲ್
18. ಬೈಬಲಿನ ಕುರಿತು ಪೌಲನು ಏನು ಹೇಳಿದ್ದಾನೆ?
18 ಬೇರೆ ಯಾವ ಪುಸ್ತಕಗಳಲ್ಲೂ ಇಲ್ಲದ ವಿಶೇಷತೆಗಳು ಬೈಬಲಿನಲ್ಲಿವೆ ಎಂದು ನಾವು ಕಲಿತೆವು. ಬೈಬಲ್‌ನಲ್ಲಿರುವ ವಿಷಯಗಳು ಒಂದಕ್ಕೊಂದು ವಿರುದ್ಧವಾಗಿಲ್ಲ. ವಿಜ್ಞಾನದ ಕುರಿತೇ ಆಗಲಿ, ಇತಿಹಾಸದ ಕುರಿತೇ ಆಗಲಿ ತಪ್ಪಾದ ಮಾಹಿತಿ ಎಲ್ಲೂ ಇಲ್ಲ. ಅದರಲ್ಲಿ ನಮಗಾಗಿ ಬುದ್ಧಿಮಾತುಗಳಿವೆ. ಅದರಲ್ಲಿರುವ ಅನೇಕ ಪ್ರವಾದನೆಗಳು ಈಗಾಗಲೇ ನಿಜವಾಗಿವೆ. ಬೈಬಲಿನ ಇನ್ನೊಂದು ವಿಶೇಷತೆ ನಿಮಗೆ ಗೊತ್ತಾ? “ದೇವರ ವಾಕ್ಯ”ವಾಗಿರುವ ಬೈಬಲ್ “ಸಜೀವವಾದದ್ದೂ ಪ್ರಬಲವಾದದ್ದೂ” ಆಗಿದೆ ಎಂದು ಅಪೊಸ್ತಲ ಪೌಲನು ಹೇಳಿದ್ದಾನೆ. ಈ ಮಾತಿನ ಅರ್ಥವೇನು?—ಇಬ್ರಿಯ 4:12 ಓದಿ.
19, 20. (ಎ) ನಿಮ್ಮನ್ನೇ ನೀವು ಅರ್ಥಮಾಡಿಕೊಳ್ಳಲು ಬೈಬಲ್ ಹೇಗೆ ಸಹಾಯಮಾಡುತ್ತದೆ? (ಬಿ) ದೇವರು ಕೊಟ್ಟಿರುವ ಉಡುಗೊರೆಗೆ ನೀವು ಋಣಿಗಳು ಎಂದು ಹೇಗೆ ತೋರಿಸಬಹುದು?
19 ನಿಮ್ಮ ಜೀವನವನ್ನೇ ಬದಲಾಯಿಸುವ ಶಕ್ತಿ ಬೈಬಲಿಗಿದೆ. ನೀವು ಎಂಥವರು, ನಿಮ್ಮ ಭಾವನೆಗಳೇನು, ಯೋಚನೆಗಳೇನು ಎಂದು ನೀವೇ ಅರ್ಥ ಮಾಡಿಕೊಳ್ಳಲು ಅದು ನಿಮಗೆ ಸಹಾಯ ಮಾಡುತ್ತದೆ. ಉದಾಹರಣೆಗೆ, ನಾವು ದೇವರನ್ನು ಪ್ರೀತಿಸುತ್ತೇವೆ ಎಂದು ಹೇಳಬಹುದು. ಆದರೆ ಬೈಬಲ್ ಏನು ಹೇಳುತ್ತದೋ ಅದರಂತೆ ನಡೆದುಕೊಂಡಾಗಲೇ ನಿಜವಾಗಿಯೂ ನಾವು ದೇವರನ್ನು ಪ್ರೀತಿಸುತ್ತೇವಾ ಇಲ್ಲವಾ ಅಂತ ಗೊತ್ತಾಗುತ್ತದೆ.
20 ಬೈಬಲನ್ನು ದೇವರೇ ಕೊಟ್ಟನು ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ. ನೀವು ಅದನ್ನು ಓದಬೇಕು, ಓದಿದ ವಿಷಯಗಳ ಬಗ್ಗೆ ಯೋಚಿಸಬೇಕು, ಅದರ ಬಗ್ಗೆ ಹೆಚ್ಚು ಕಲಿಯಬೇಕು ಮತ್ತು ಅದನ್ನು ಪ್ರೀತಿಸಬೇಕು ಅಂತ ಯೆಹೋವ ದೇವರು ಇಷ್ಟಪಡುತ್ತಾನೆ. ಹಾಗಾಗಿ ಬೈಬಲ್ ಅಧ್ಯಯನವನ್ನು ಬಿಡದೆ ಮುಂದುವರಿಸಿ. ಹೀಗೆ ಈ ಉಡುಗೊರೆಯನ್ನು ಕೊಟ್ಟಿರುವುದಕ್ಕೆ ದೇವರಿಗೆ ಋಣಿಗಳಾಗಿದ್ದೀರಿ ಎಂದು ತೋರಿಸಿ. ಅದನ್ನು ಕಲಿಯುತ್ತಾ ಹೋದಂತೆ ಮಾನವರಿಗೆ ದೇವರು ಮುಂದೆ ಎಂಥ ಜೀವನವನ್ನು ಕೊಡಲಿದ್ದಾನೆಂದು ಅರ್ಥಮಾಡಿಕೊಳ್ಳಲು ನಿಮಗೆ ಸಾಧ್ಯ ಆಗುತ್ತದೆ. ಈ ವಿಷಯದ ಬಗ್ಗೆ ಮುಂದಿನ ಅಧ್ಯಾಯದಲ್ಲಿ ಹೆಚ್ಚನ್ನು ಕಲಿಯೋಣ.
^ ಪ್ಯಾರ. 6 ಬೈಬಲ್‌ನಲ್ಲಿರುವ ವಿಷಯಗಳು ಒಂದಕ್ಕೊಂದು ವಿರುದ್ಧವಾಗಿವೆ ಎಂದು ಕೆಲವರು ಹೇಳುತ್ತಾರೆ. ಆದರೆ ಇದು ಸುಳ್ಳು. ಇದರ ಕುರಿತು ಹೆಚ್ಚು ಮಾಹಿತಿಗಾಗಿ ಯೆಹೋವನ ಸಾಕ್ಷಿಗಳು ಪ್ರಕಾಶಿಸಿರುವ ಬೈಬಲ್ ಅದರಲ್ಲಿ ಏನಿದೆ? ಎಂಬ ಸಾಹಿತ್ಯದ ಪುಟ 3 ಮತ್ತು 31ನ್ನು ನೋಡಿ.
^ ಪ್ಯಾರ. 16 ಬೈಬಲ್ ಪ್ರವಾದನೆಗಳ ಕುರಿತು ಹೆಚ್ಚನ್ನು ಕಲಿಯಲು ನಿಮಗೆ ಇಷ್ಟವಿರುವುದಾದರೆ ಯೆಹೋವನ ಸಾಕ್ಷಿಗಳು ಪ್ರಕಾಶಿಸಿರುವ ಸಕಲ ಜನರಿಗಾಗಿರುವ ಒಂದು ಗ್ರಂಥ ಎಂಬ ಸಾಹಿತ್ಯದ ಪುಟ 27ರಿಂದ 29ನ್ನು ಓದಿ.
^ ಪ್ಯಾರ. 17 ಬೈಬಲಿನಲ್ಲಿರುವ ಬೇರೆ ಪ್ರವಾದನೆಗಳ ಕುರಿತು ತಿಳಿದುಕೊಳ್ಳಲು ಟಿಪ್ಪಣಿ 5ನ್ನು ನೋಡಿ.