ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವ

ಯೆಹೋವ

ಆತನ ಹೆಸರು

ಯೆಹೋವ ಅನ್ನೋ ಹೆಸ್ರಿನ ಅರ್ಥ “ಆತನು ಆಗುವಂತೆ ಮಾಡ್ತಾನೆ”

ಯೆಹೋವ ತನ್ನ ಸೇವಕರನ್ನ ಕಾಪಾಡೋಕೆ ಏನು ಆಗ್ತಾನೆ ಅಥವಾ ಯಾವೆಲ್ಲಾ ಪಾತ್ರ ವಹಿಸ್ತಾನೆ?

ಯೆಹೋವನೊಬ್ಬನೇ ಸತ್ಯದೇವರು, ಆತನು ಪವಿತ್ರ ಅಂತ ಎಲ್ರೂ ತಿಳ್ಕೊಳ್ಳೋದು ಯಾಕೆ ತುಂಬಾ ಮುಖ್ಯ?

ವಿಶ್ವದ ರಾಜನಾದ ಯೆಹೋವನಿಗೆ ಎಲ್ರೂ ವಿಧೇಯರಾಗಬೇಕು ಯಾಕೆ?

ಯೆಹೋವ ದೇವರ ಕೆಲವು ಬಿರುದುಗಳು

ಅಪ್ಪ—ಮತ್ತಾ 6:9; ಯೋಹಾ 5:21

ಬಂಡೆ—ಧರ್ಮೋ 32:4; ಯೆಶಾ 26:4

ಮಹಾ ಬೋಧಕ—ಯೆಶಾ 30:20

ಮಹಾನ್‌ ದೇವರು—ಇಬ್ರಿ 1:3; 8:1

ಯುಗಯುಗಾಂತರಕ್ಕೂ ರಾಜ—1ತಿಮೊ 1:17; ಪ್ರಕ 15:3

ವಿಶ್ವದ ರಾಜ—ಯೆಶಾ 25:8; ಆಮೋ 3:7

ಸರ್ವಶಕ್ತ—ಆದಿ 17:1; ಪ್ರಕ 19:6

ಸರ್ವೋನ್ನತ—ಆದಿ 14:18-22; ಕೀರ್ತ 7:17

ಸೈನ್ಯಗಳ ದೇವರು—1ಸಮು 1:11

ಯೆಹೋವನ ಗುಣಗಳು

ಯೆಹೋವ ತಾನು ಪರಿಶುದ್ಧನು ಅಂತ ಹೇಗೆ ತೋರಿಸಿದ್ದಾನೆ ಮತ್ತು ಇದ್ರ ಬಗ್ಗೆ ತಿಳ್ಕೊಳ್ಳೋದ್ರಿಂದ ನಾವು ಏನು ಮಾಡಬೇಕು ಅಂತ ಅನಿಸುತ್ತೆ?

ವಿಮೋ 28:36; ಯಾಜ 19:2; 2ಕೊರಿಂ 7:1; 1ಪೇತ್ರ 1:13-16

  • ಬೈಬಲ್‌ ಉದಾಹರಣೆಗಳು:

    • ಯೆಶಾ 6:1-8—ಪ್ರವಾದಿ ಯೆಶಾಯ ಯೆಹೋವನ ದರ್ಶನ ನೋಡಿದಾಗ ತಾನು ಪಾಪಿಯಾಗಿರೋದ್ರಿಂದ ಯಾವುದಕ್ಕೂ ಲಾಯಕ್ಕಿಲ್ಲ ಅಂತ ಅವನಿಗೆ ಅನಿಸ್ತು, ಆದ್ರೆ ಒಬ್ಬ ದೇವದೂತ ಅಪರಿಪೂರ್ಣ ಮನುಷ್ಯರೂ ದೇವರ ಮುಂದೆ ಶುದ್ಧರಾಗೋಕೆ ಸಾಧ್ಯ ಅಂತ ಹೇಳಿದ

    • ರೋಮ 6:12-23; 12:1, 2—ಅಪೊಸ್ತಲ ಪೌಲ ನಾವು ಪಾಪದ ವಿರುದ್ಧ ಹೇಗೆ ಹೋರಾಡಬಹುದು ಮತ್ತು “ಪವಿತ್ರ ಕೆಲಸಗಳನ್ನ” ಮಾಡಬಹುದು ಅಂತ ಹೇಳಿದ್ದಾನೆ

ಯೆಹೋವ ದೇವರಿಗೆ ಎಷ್ಟು ಶಕ್ತಿ ಇದೆ? ಅದನ್ನ ಆತನು ಹೇಗೆಲ್ಲಾ ಉಪಯೋಗಿಸ್ತಾನೆ?

ವಿಮೋ 15:3-6; 2ಪೂರ್ವ 16:9; ಯೆಶಾ 40:22, 25, 26, 28-31

  • ಬೈಬಲ್‌ ಉದಾಹರಣೆಗಳು:

    • ಧರ್ಮೋ 8:12-18—ಇಸ್ರಾಯೇಲ್ಯರ ಹತ್ರ ಇರೋ ಎಲ್ಲಾ ಒಳ್ಳೇ ವಿಷ್ಯಗಳಿಗೆ ದೇವರು ಅವ್ರನ್ನ ಆಶೀರ್ವದಿಸಿದ್ದೇ ಕಾರಣ ಅಂತ ಮೋಶೆ ಹೇಳಿದನು

    • 1ಅರ 19:9-14—ಯೆಹೋವ ದೇವರು ತನ್ನ ಅಪಾರ ಶಕ್ತಿ ತೋರಿಸಿ ಪ್ರವಾದಿ ಎಲೀಯನನ್ನ ಪ್ರೋತ್ಸಾಹಿಸಿದನು

ಯೆಹೋವ ದೇವರು ಮಾಡೋದೆಲ್ಲಾ ನ್ಯಾಯ ಅಂತ ನಾವು ಯಾಕೆ ಪೂರ್ತಿ ನಂಬಬಹುದು?

ಧರ್ಮೋ 32:4; ಯೋಬ 34:10; 37:23; ಕೀರ್ತ 37:28; ಯೆಶಾ 33:22

  • ಬೈಬಲ್‌ ಉದಾಹರಣೆಗಳು:

    • ಧರ್ಮೋ 24:16-22—ಯೆಹೋವ ದೇವರು ಯಾವಾಗ್ಲೂ ನ್ಯಾಯ, ಪ್ರೀತಿ ಮತ್ತು ಕರುಣೆ ತೋರಿಸ್ತಾನೆ ಅಂತ ಮೋಶೆಗೆ ಕೊಟ್ಟ ನಿಯಮ ಪುಸ್ತಕದಿಂದ ಗೊತ್ತಾಗುತ್ತೆ

    • 2ಪೂರ್ವ 19:4-7—ರಾಜ ಯೆಹೋಷಾಫಾಟ ನ್ಯಾಯಾಧೀಶರಿಗೆ ತೀರ್ಪು ಮಾಡೋವಾಗ ‘ನಿಮಗೆ ಅನಿಸಿದ ತರ ಅಲ್ಲ, ಯೆಹೋವನ ನೀತಿ ನಿಯಮಗಳಿಗೆ ಅನುಸಾರ ತೀರ್ಮಾನ ಮಾಡಬೇಕು’ ಅಂತ ಹೇಳಿದ

ಯೆಹೋವ ಮಾತ್ರ ಎಲ್ಲರಿಗಿಂತ ತುಂಬಾ ವಿವೇಕಿ ಅಂತ ನಮಗೆ ಹೇಗೆ ಗೊತ್ತು?

ಕೀರ್ತ 104:24; ಜ್ಞಾನೋ 2:1-8; ಯೆರೆ 10:12; ರೋಮ 11:33; 16:27

ಇದನ್ನೂ ನೋಡಿ: ಕೀರ್ತ 139:14; ಯೆರೆ 17:10

  • ಬೈಬಲ್‌ ಉದಾಹರಣೆಗಳು:

    • 1ಅರ 4:29-34—ಯೆಹೋವ ದೇವರು ಬೇರೆ ಎಲ್ಲರಿಗಿಂತ ಸೊಲೊಮೋನನಿಗೆ ತುಂಬಾ ವಿವೇಕ ಕೊಟ್ಟನು

    • ಲೂಕ 11:31; ಯೋಹಾ 7:14-18—ಯೇಸುಗೆ ಸೊಲೊಮೋನನಿಗಿಂತ ತುಂಬಾ ವಿವೇಕ ಇದ್ರೂ ದೀನತೆಯಿಂದ ಆ ವಿವೇಕಕ್ಕೆ ಯೆಹೋವನೇ ಕಾರಣ ಅಂತ ಯೇಸು ಹೇಳಿದನು

ಯೆಹೋವ ನಮ್ಮನ್ನ ತುಂಬಾ ಪ್ರೀತಿಸ್ತಾನೆ ಅಂತ ಹೇಗೆ ತೋರಿಸ್ಕೊಟ್ಟಿದ್ದಾನೆ?

ಯೋಹಾ 3:16; ರೋಮ 8:32; 1ಯೋಹಾ 4:8-10, 19

ಇದನ್ನೂ ನೋಡಿ: ಚೆಫ 3:17; ಯೋಹಾ 3:35

  • ಬೈಬಲ್‌ ಉದಾಹರಣೆಗಳು:

    • ಮತ್ತಾ 10:29-31—ಯೆಹೋವ ತನ್ನ ಸೇವಕರನ್ನ ಎಷ್ಟು ಪ್ರೀತಿಸ್ತಾನೆ, ಅವರು ಎಷ್ಟು ಅಮೂಲ್ಯರಾಗಿದ್ದಾರೆ ಅಂತ ಯೇಸು ಗುಬ್ಬಿಗಳ ಉದಾಹರಣೆ ಮೂಲಕ ಹೇಳಿದನು

    • ಮಾರ್ಕ 1:9-11—ಯೆಹೋವ ಯೇಸುಗೆ ‘ನಾನು ನಿನ್ನನ್ನ ತುಂಬಾ ಪ್ರೀತಿಸ್ತೀನಿ, ನಿಂಗೆ ನಾನು ತಂದೆ ಆಗಿರೋದಕ್ಕೆ ನಂಗೆ ಹೆಮ್ಮೆ ಇದೆ’ ಅಂತ ಹೇಳಿದ್ರು. ಮಕ್ಕಳು ಹೆತ್ತವರಿಂದ ಇಂಥಾ ಮಾತುಗಳನ್ನ ಬಯಸ್ತಾರೆ ಅಂತ ಹೆತ್ತವರು ಅರ್ಥ ಮಾಡ್ಕೊಬೇಕು ಅಂತ ಈ ಉದಾಹರಣೆಯಿಂದ ಗೊತ್ತಾಗುತ್ತೆ

ನಾವು ಯೆಹೋವ ದೇವರನ್ನ ಪ್ರೀತಿಸೋಕೆ ಕಾರಣಗಳು ಏನು? ಯೆಹೋವ ದೇವರಲ್ಲಿರೋ ಇನ್ನೂ ತುಂಬ ಒಳ್ಳೇ ಗುಣಗಳ ಬಗ್ಗೆ ಬೈಬಲ್‌ ಹೇಳುತ್ತೆ.

ಉದಾರಿ ಆಗಿದ್ದಾನೆ—ಕೀರ್ತ 104:13-15; 145:16

ಎಲ್ಲಾ ಕಡೆ ನೋಡ್ತಾನೆ—2ಪೂರ್ವ 16:9; ಜ್ಞಾನೋ 15:3

ಕನಿಕರ ತೋರಿಸ್ತಾನೆ—ಯೆಶಾ 49:15; 63:9; ಜೆಕ 2:8

ಕರುಣೆ ತೋರಿಸ್ತಾನೆ—ವಿಮೋ 34:6

ತಾಳ್ಮೆ ತೋರಿಸ್ತಾನೆ—ಯೆಶಾ 30:18; 2ಪೇತ್ರ 3:9

ದಯೆ ತೋರಿಸ್ತಾನೆ—ಲೂಕ 6:35; ರೋಮ 2:4

ದೀನತೆ ತೋರಿಸ್ತಾನೆ—ಕೀರ್ತ 18:35

ನಿಷ್ಠೆ ತೋರಿಸ್ತಾನೆ—ಪ್ರಕ 15:4

ನೀತಿವಂತನಾಗಿದ್ದಾನೆ—ಕೀರ್ತ 7:9

ಮಹಿಮಾಭರಿತ ದೇವರಾಗಿದ್ದಾನೆ—ಪ್ರಕ 4:1-6

ಯಾವತ್ತೂ ಬದಲಾಗಲ್ಲ; ಆತನನ್ನ ಪೂರ್ತಿ ನಂಬಬಹುದು—ಮಲಾ 3:6; ಯಾಕೋ 1:17

ಶಾಂತಿಯ ದೇವರಾಗಿದ್ದಾನೆ—ಫಿಲಿ 4:9

ಶಾಶ್ವತವಾಗಿ ಇರ್ತಾನೆ; ಆತನಿಗೆ ಆದಿನೂ ಇಲ್ಲ ಅಂತ್ಯನೂ ಇಲ್ಲ—ಕೀರ್ತ 90:2; 93:2

ಶ್ರೇಷ್ಠನಾಗಿದ್ದಾನೆ—ಕೀರ್ತ 8:1; 148:13

ಸಂತೋಷದ ದೇವರಾಗಿದ್ದಾನೆ—1ತಿಮೊ 1:11

ಯೆಹೋವನ ಬಗ್ಗೆ ಜಾಸ್ತಿ ತಿಳ್ಕೊಳ್ಳೋದ್ರಿಂದ ನಮಗೆ ಏನು ಮಾಡೋದಕ್ಕೆ ಆಗುತ್ತೆ?

ನಾವು ಹೇಗೆ ಯೆಹೋವ ದೇವರ ಸೇವೆ ಮಾಡಬಹುದು?

ಯೆಹೋವ ನಮ್ಮ ಕೈಲಿ ಆಗದೇ ಇರೋದನ್ನ ಕೇಳಲ್ಲ ಅಂತ ನಮ್ಗೆ ಹೇಗೆ ಗೊತ್ತು?

ಧರ್ಮೋ 10:12; ಮೀಕ 6:8; 1ಯೋಹಾ 5:3

  • ಬೈಬಲ್‌ ಉದಾಹರಣೆಗಳು:

    • ಧರ್ಮೋ 30:11-14—ಮೋಶೆಯ ಮೂಲಕ ಇಸ್ರಾಯೇಲ್ಯರಿಗೆ ಕೊಟ್ಟ ನಿಯಮಗಳು ಪಾಲಿಸೋಕೆ ಕಷ್ಟ ಆಗಿರಲಿಲ್ಲ

    • ಮತ್ತಾ 11:28-30—ಯೇಸು ಯೆಹೋವನ ತರನೇ ತನ್ನ ಶಿಷ್ಯರನ್ನ ಅರ್ಥ ಮಾಡ್ಕೊತಿದ್ದ

ನಾವು ಯೆಹೋವನನ್ನ ಹಾಡಿ ಹೊಗಳಬೇಕು ಯಾಕೆ?

ಕೀರ್ತ 105:1, 2; ಯೆಶಾ 43:10-12, 21

ಇದನ್ನೂ ನೋಡಿ: ಯೆರೆ 20:9; ಲೂಕ 6:45; ಅಕಾ 4:19, 20

  • ಬೈಬಲ್‌ ಉದಾಹರಣೆಗಳು:

    • ಕೀರ್ತ 104:1, 2, 10-20, 33, 34—ಕೀರ್ತನೆಗಾರ ಸೃಷ್ಟಿಯನ್ನ ನೋಡಿ ಯೆಹೋವನನ್ನ ಹಾಡಿ ಹೊಗಳಿದ

    • ಕೀರ್ತ 148:1-14—ಸೃಷ್ಟಿ ಮತ್ತು ದೇವದೂತರ ತರನೇ ನಾವೂ ಯೆಹೋವನನ್ನ ಹಾಡಿ ಹೊಗಳಬೇಕು

ನಮ್ಮ ಒಳ್ಳೇ ನಡತೆ ಹೇಗೆ ಯೆಹೋವ ಹೆಸ್ರಿಗೆ ಗೌರವ ತರುತ್ತೆ?

ನಾವು ಹೇಗೆ ಯೆಹೋವ ದೇವರ ಸ್ನೇಹಿತರಾಗಬಹುದು?

ನಮ್ಮಲ್ಲಿ ದೀನತೆ ಇದ್ರೆ ನಾವು ಹೇಗೆ ಯೆಹೋವನ ಸ್ನೇಹಿತರಾಗ್ತೀವಿ?

ನಾವು ಯೆಹೋವನ ಸ್ನೇಹಿತರಾಗಬೇಕಾದ್ರೆ ಬೈಬಲನ್ನ ಓದಿ ಅದ್ರ ಬಗ್ಗೆ ಯಾಕೆ ಯೋಚ್ನೆ ಮಾಡಬೇಕು?

ನಾವು ಯೆಹೋವನಿಂದ ಏನು ಕಲಿತೀವೋ ಅದೇ ತರ ನಡ್ಕೊಳೋದು ಯಾಕೆ ಮುಖ್ಯ?

ನಾವು ಯಾಕೆ ಯೆಹೋವನಿಂದ ಯಾವುದನ್ನೂ ಮುಚ್ಚಿಡಬಾರದು?

ಯೋಬ 34:22; ಜ್ಞಾನೋ 28:13; ಯೆರೆ 23:24; 1ತಿಮೊ 5:24, 25

  • ಬೈಬಲ್‌ ಉದಾಹರಣೆಗಳು:

    • 2ಅರ 5:20-27—ಗೇಹಜಿ ತನ್ನ ತಪ್ಪನ್ನ ಮುಚ್ಚಿಡೋಕೆ ನೋಡಿದ, ಆದ್ರೆ ಯೆಹೋವ ಪ್ರವಾದಿ ಎಲೀಷನಿಗೆ ಆ ತಪ್ಪು ಗೊತ್ತಾಗೋ ತರ ಮಾಡಿದನು

    • ಅಕಾ 5:1-11—ಅನನೀಯ ಸಫೈರ ತಪ್ಪನ್ನ ಮುಚ್ಚಿಡೋಕೆ ನೋಡಿದ್ರು ಆದ್ರೆ ಯೆಹೋವ ಅದನ್ನ ಬಯಲಾಗೋ ತರ ಮಾಡಿ ಶಿಕ್ಷೆ ಕೊಟ್ಟನು