ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆರಾಧನೆ

ಆರಾಧನೆ

ನಾವು ಯಾರನ್ನ ಮಾತ್ರ ಆರಾಧನೆ ಮಾಡಬೇಕು?

ವಿಮೋ 34:14; ಧರ್ಮೋ 5:8-10; ಯೆಶಾ 42:8

  • ಬೈಬಲ್‌ ಉದಾಹರಣೆಗಳು:

    • ಮತ್ತಾ 4:8-10—ಸೈತಾನ ಯೇಸುಗೆ ‘ನೀನು ನಂಗೆ ಒಂದು ಸಾರಿ ಆರಾಧನೆ ಮಾಡಿದ್ರೆ ಲೋಕದ ಎಲ್ಲಾ ಸಾಮ್ರಾಜ್ಯಗಳನ್ನ ಕೊಡ್ತೀನಿ’ ಅಂದ; ಆದ್ರೆ ಯೇಸು ಅವನ ಆಸೆಗೆ ಬಲಿಬೀಳಲಿಲ್ಲ, ಯೆಹೋವನನ್ನ ಮಾತ್ರ ಆರಾಧನೆ ಮಾಡ್ತೀನಿ ಅಂತ ದೃಢ ತೀರ್ಮಾನ ಮಾಡಿದ್ದ

    • ಪ್ರಕ 19:9, 10 —ಅಪೊಸ್ತಲ ಯೋಹಾನ ದೇವದೂತನನ್ನ ಆರಾಧಿಸೋಕೆ ಕಾಲಿಗೆ ಬಿದ್ದಾಗ ಅವನು ‘ಹಾಗೆ ಮಾಡಬೇಡ’ ಅಂತ ಹೇಳಿದ

ನಾವು ಯೆಹೋವನನ್ನ ಹೇಗೆ ಆರಾಧಿಸಬೇಕು ಅನ್ನೋದು ಆತನ ಇಷ್ಟ?

ಯೋಹಾ 4:24; ಯಾಕೋ 1:26, 27

  • ಬೈಬಲ್‌ ಉದಾಹರಣೆಗಳು:

    • ಯೆಶಾ 1:10-17—ಯೆಹೋವ ದೇವರ ಮಾತು ಕೇಳದೆ ಆತನನ್ನ ಆರಾಧಿಸ್ತೀನಿ ಅಂತ ಹೇಳೋರನ್ನ ಯೆಹೋವ ಮೆಚ್ಚೋದಿಲ್ಲ

    • ಮತ್ತಾ 15:1-11—ನಾವು ಮನುಷ್ಯರ ಸಂಪ್ರದಾಯದ ತರ ಅಲ್ಲ, ದೇವರ ನಿಯಮಕ್ಕೆ ತಕ್ಕ ಹಾಗೆ ಆರಾಧನೆ ಮಾಡಿದ್ರೆ ಯೆಹೋವ ಅದನ್ನ ಇಷ್ಟಪಡ್ತಾನೆ ಅಂತ ಯೇಸು ಹೇಳಿದನು

ನಾವು ಯಾರ ಜೊತೆ ಯೆಹೋವನನ್ನ ಆರಾಧಿಸಬೇಕು?

ಇಬ್ರಿ 10:24, 25

ಇದನ್ನೂ ನೋಡಿ: ಕೀರ್ತ 133:1-3

  • ಬೈಬಲ್‌ ಉದಾಹರಣೆಗಳು:

    • ಅಕಾ 2:40-42—ಒಂದನೇ ಶತಮಾನದಲ್ಲಿದ್ದ ಕ್ರೈಸ್ತರು ಪ್ರಾರ್ಥನೆ ಮಾಡೋಕೆ, ಸಹವಾಸ ಮಾಡೋಕೆ ಮತ್ತು ಬೈಬಲಲ್ಲಿರೋ ವಿಷ್ಯಗಳ ಬಗ್ಗೆ ಅಧ್ಯಯನ ಮಾಡೋಕೆ ಒಟ್ಟಿಗೆ ಸೇರಿ ಬರ್ತಿದ್ರು

    • 1ಕೊರಿಂ 14:26-40—ಸಭೆಯಲ್ಲಿ ಕೂಟಗಳು ಅಚ್ಚುಕಟ್ಟಾಗಿ ನಡಿಬೇಕು, ಪ್ರೋತ್ಸಾಹ ಕೊಡೋ ತರ ಇರಬೇಕು, ಇದ್ರಿಂದ ಎಲ್ರೂ ಅಲ್ಲಿ ಕಲಿಸೋದನ್ನ ಚೆನ್ನಾಗಿ ಅರ್ಥ ಮಾಡ್ಕೊತಾರೆ ಅಂತ ಪೌಲ ಹೇಳಿದ

ಯೆಹೋವ ನಮ್ಮ ಆರಾಧನೆಯನ್ನ ಇಷ್ಟಪಡಬೇಕಾದ್ರೆ ನಾವು ಏನು ಮಾಡಬೇಕು?

ಮತ್ತಾ 7:21-24; 1ಯೋಹಾ 2:17; 5:3

  • ಬೈಬಲ್‌ ಉದಾಹರಣೆಗಳು:

    • ಇಬ್ರಿ 11:6—ಯೆಹೋವ ನಮ್ಮ ಆರಾಧನೆ ಇಷ್ಟಪಡಬೇಕಾದ್ರೆ ನಮ್ಮಲ್ಲಿ ನಂಬಿಕೆ ಇರಬೇಕು ಅಂತ ಅಪೊಸ್ತಲ ಪೌಲ ಹೇಳಿದ್ದಾನೆ

    • ಯಾಕೋ 2:14-17, 24-26—ನಮ್ಗೆ ದೇವರ ಮೇಲೆ ನಂಬಿಕೆ ಇದೆ ಅಂತ ಒಳ್ಳೇ ಕೆಲಸಗಳ ಮೂಲಕ ತೋರಿಸಬೇಕು ಅಂತ ಯೇಸುವಿನ ತಮ್ಮ ಯಾಕೋಬ ಹೇಳಿದ್ದಾನೆ