ಕರ್ತನ ದಿನದಲ್ಲಿ ಭೂಕಂಪಗಳು
ಅಧ್ಯಾಯ 18
ಕರ್ತನ ದಿನದಲ್ಲಿ ಭೂಕಂಪಗಳು
1, 2. (ಎ) ಒಂದು ತೀವ್ರ ಭೂಕಂಪದ ಸಮಯದ ನಡುವೆ ಜೀವಿಸುವುದು ಯಾವ ರೀತಿಯ ಅನುಭವವಾಗಿರುತ್ತದೆ? (ಬಿ) ಆರನೆಯ ಮುದ್ರೆಯು ಬಿಚ್ಚಲ್ಪಟ್ಟಾಗ ಯೋಹಾನನು ಏನನ್ನು ವರ್ಣಿಸುತ್ತಾನೆ?
ನೀವು ಎಂದಾದರೂ ಒಂದು ತೀವ್ರ ಭೂಕಂಪದ ಸಮಯದಲ್ಲಿ ಜೀವಿಸಿದ್ದೀರೋ? ಅದು ಒಂದು ಸಂತೋಷಕರ ಅನುಭವವಲ್ಲ. ಒಂದು ದೊಡ್ಡ ನಡುಕವು ಹೊಟ್ಟೆ ತೊಳಸುವಂತಹ ಕಂಪನದೊಂದಿಗೆ ಮತ್ತು ಗಡಗಡ ಸದ್ದಿನೊಂದಿಗೆ ಆರಂಭಗೊಳ್ಳಬಹುದು. ಮತ್ತು ನೀವು ಸುರಕ್ಷೆಗಾಗಿ ಆಚೀಚೆ—ಪ್ರಾಯಶಃ ಒಂದು ಡೆಸ್ಕಿನ ಕೆಳಗೆ—ಓಡುವಾಗ ಈ ಒಲೆದಾಟವು ರೇಗಾಟ ಆವೇಶಗಳಿಂದ ಇನ್ನಷ್ಟು ಕೆಡಬಹುದು. ಯಾ ಅದು ಥಟ್ಟನೇ ಕುಲುಕಾಟದ ಅಲ್ಲಾಡಿಸುವಿಕೆಯಾಗಿ ಬರಬಹುದು, ಇದನ್ನು ಅನುಸರಿಸಿ ಪಾತ್ರೆಗಳು, ಪೀಠೋಪಕರಣಗಳು, ಕಟ್ಟಡಗಳು ಸಹ ದಿಢೀರನೇ ಬೀಳಬಹುದು. ನಷ್ಟವು ವಿಪತ್ಕಾರಕವಾಗಿರಬಹುದು, ತದನಂತರ ಅಡಿಗಡಿಗೆ ಬರುವ ಆಘಾತಗಳು ಇನ್ನಷ್ಟು ನಷ್ಟವನ್ನುಂಟು ಮಾಡಿ, ವ್ಯಥೆಗೆ ಕೂಡಿಸಬಹುದು.
2 ಇದನ್ನು ಮನಸ್ಸಿನಲ್ಲಿಟ್ಟವರಾಗಿ, ಆರನೆಯ ಮುದ್ರೆಯ ಬಿಚ್ಚುವಿಕೆಯನ್ನು ಯೋಹಾನನು ವರ್ಣಿಸುವುದನ್ನು ಗಮನಿಸಿರಿ: “ಮತ್ತು ಅವನು ಆರನೆಯ ಮುದ್ರೆಯನ್ನು ಬಿಚಿದ್ಚಾಗ ನಾನು ಕಂಡೆನು, ಮತ್ತು ಒಂದು ಮಹಾ ಭೂಕಂಪವು ಉಂಟಾಯಿತು.” (ಪ್ರಕಟನೆ 6:12 ಎ, NW) ಇದು ಇತರ ಮುದ್ರೆಗಳನ್ನು ಬಿಚ್ಚುವಂತಹ ಸಮಯದ ಚೌಕಟ್ಟಿನಲ್ಲಿಯೇ ಆಗಿದ್ದಿರಬೇಕು. ಈ ಭೂಕಂಪವು ಕರ್ತನ ದಿನದಲ್ಲಿ ಯಾವಾಗ ಸಂಭವಿಸುತ್ತದೆ, ಮತ್ತು ಅದು ಯಾವ ರೀತಿಯ ಕಂಪನವಾಗಿದೆ?—ಪ್ರಕಟನೆ 1:10.
3. (ಎ) ಅವನ ಸಾನ್ನಿಧ್ಯದ ಸೂಚನೆಯ ಕುರಿತಾದ ಪ್ರವಾದನೆಯಲ್ಲಿ ಯಾವ ಸಂಭವಗಳನ್ನು ಯೇಸುವು ಮುನ್ನುಡಿದಿದ್ದನು? (ಬಿ) ಪ್ರಕಟನೆ 6:12ರ ಮಹಾ ಭೂಕಂಪವು ಇತರ ಅಕ್ಷರಶಃ ಭೂಕಂಪಗಳಿಗೆ ಹೇಗೆ ಸಂಬಂಧಿಸುತ್ತದೆ?
3 ಅಕ್ಷರಶಃ ಮತ್ತು ಲಾಕ್ಷಣಿಕ ಭೂಮಿಯ ಕಂಪನಗಳು ಬೈಬಲಿನಲ್ಲಿ ಅನೇಕ ಬಾರಿ ಉಲ್ಲೇಖಿಸಲ್ಪಟ್ಟಿವೆ. ರಾಜ್ಯದ ಶಕ್ತಿಯೊಂದಿಗೆ ತನ್ನ ಸಾನ್ನಿಧ್ಯದ ಕುರಿತಾದ ಸೂಚನೆಯ ಅವನ ಮಹಾ ಪ್ರವಾದನೆಯಲ್ಲಿ, ಯೇಸುವು “ಒಂದರ ಮೇಲೆ ಇನ್ನೊಂದು ಸ್ಥಳದಲ್ಲಿ ಭೂಕಂಪಗಳು” ಆಗುವವು ಎಂದು ಮುನ್ನುಡಿದಿದ್ದಾನೆ. ಇವು “ಸಂಕಟಗಳ ಪ್ರಸವವೇದನೆಯ ಒಂದು ಆರಂಭ” ವಾಗಿರುವುದು. ಇಸವಿ 1914 ರಿಂದ ಭೂಮಿಯ ಜನಸಂಖ್ಯೆಯು ಸಾವಿರಾರು ಲಕ್ಷಾಂತರಗಳಿಗೆ ಸ್ಫೋಟಿಸುವುದರೊಂದಿಗೆ, ಅಕ್ಷರಶಃ ಅದಿರಾಟಗಳು ಗಮನಾರ್ಹ ರೀತಿಯಲ್ಲಿ ನಮ್ಮ ದಿನಗಳ ಸಂಕಟಗಳಿಗೆ ಕೂಡಿಸಿವೆ. (ಮತ್ತಾಯ 24:3, 7, 8) ಅವುಗಳು ಪ್ರವಾದನೆಯನ್ನು ನೆರವೇರಿಸುವುದಾದರೂ, ಈ ಭೂಕಂಪಗಳು ಸ್ವಾಭಾವಿಕ, ಭೌತಿಕ ವಿಪತ್ತುಗಳಾಗಿರುತ್ತವೆ. ಅವುಗಳು ಪ್ರಕಟನೆ 6:12ರ ಮಹಾ ಸಾಂಕೇತಿಕ ಭೂಕಂಪದ ಪೂರ್ವಭಾವಿಯಾಗಿವೆ. ಇದು ಖಂಡಿತವಾಗಿಯೂ, ಸೈತಾನನ ಮಾನವ ಐಹಿಕ ವಿಷಯಗಳ ವ್ಯವಸ್ಥೆಯನ್ನು ಅದರ ತಳಹದಿಯಿಂದಲೇ ಅಲುಗಾಡಿಸುವ ಈ ಆರಂಭಿಕ ನಡುಕಗಳ ಸರಣಿಯ ಅದರ ವಿನಾಶಕಾರಿ ಅಂತ್ಯಗತಿ ಯೋಪಾದಿ ಬರುವುದು. *
ಮಾನವ ಸಮಾಜದಲ್ಲಿ ನಡುಕಗಳು
4. (ಎ) ವಿಪತ್ಕಾರಕ ಘಟನೆಗಳು 1914 ರಲ್ಲಿ ಆರಂಭಿಸಲಿರುವವು ಎಂದು ಯೆಹೋವನ ಜನರು ಎಂದಿನಿಂದ ನಿರೀಕ್ಷಿಸುತ್ತಾ ಇದ್ದರು? (ಬಿ) ಯಾವ ಸಮಯಾವಧಿಯ ಅಂತ್ಯವನ್ನು 1914 ಗುರುತಿಸುತ್ತದೆ?
4 ಮಧ್ಯ-1870 ರುಗಳಿಂದ, 1914 ರಲ್ಲಿ ವಿನಾಶಕಾರಿ ಘಟನೆಗಳು ಆರಂಭಿಸುವವು ಮತ್ತು ಅನ್ಯ ಜನಾಂಗಗಳ ಸಮಯದ ಅಂತ್ಯವನ್ನು ಅವು ಗುರುತಿಸುವವು ಎಂದು ಯೆಹೋವನ ಜನರು ನಿರೀಕ್ಷಿಸುತ್ತಾ ಇದ್ದರು. ಇದು “ಏಳು ಕಾಲಗಳ” (2,520 ವರ್ಷಗಳ) ಒಂದು ಸಮಯಾವಧಿಯಾಗಿದ್ದು, ಸಾ. ಶ. ಪೂ. 607 ರಲ್ಲಿ ಯೆರೂಸಲೇಮಿನಲ್ಲಿದ್ದ ದಾವೀದ ವಂಶದ ರಾಜ್ಯವನ್ನು ಕಿತ್ತೆಸೆದಂದಿನಿಂದ ಆರಂಭಿಸಿ, ಸಾ. ಶ. 1914 ರಲ್ಲಿ ಸ್ವರ್ಗೀಯ ಯೆರೂಸಲೇಮಿನಲ್ಲಿ ಯೇಸುವಿನ ಸಿಂಹಾಸನಾಸೀನನಾಗುವಿಕೆಯ ತನಕದ್ದಾಗಿರುತ್ತದೆ.—ದಾನಿಯೇಲ 4:24, 25; ಲೂಕ 21:24, ಕಿಂಗ್ ಜೇಮ್ಸ್ ವರ್ಷನ್. *
5. (ಎ) ಅಕ್ಟೋಬರ 2, 1914 ರಲ್ಲಿ ಸೊಸೈಟಿಯ ಪ್ರಥಮ ಅಧ್ಯಕ್ಷರು ಯಾವ ಪ್ರಕಟನೆಯನ್ನು ಮಾಡಿದರು? (ಬಿ) ಯಾವ ರಾಜಕೀಯ ಉತ್‌ಪವ್ಲನಗಳು 1914 ರಿಂದ ಸಂಭವಿಸಿವೆ?
5 ಈ ರೀತಿಯಲ್ಲಿ, ವಾಚ್ ಟವರ್ ಸೊಸೈಟಿಯ ಮೊದಲ ಅಧ್ಯಕ್ಷ ಸಿ. ಟಿ. ರಸಲ್, ನ್ಯೂ ಯಾರ್ಕ್‌ನ ಬ್ರೂಕ್ಲಿನ್‌ನಲ್ಲಿ ಪ್ರಾತಃಕಾಲದ ಆರಾಧನೆಗಾಗಿ, ಬೆತೆಲ್ ಕುಟುಂಬದೊಂದಿಗೆ ಅಕ್ಟೋಬರ 2, 1914ರ ಬೆಳಿಗ್ಗೆ ಕಾಣಿಸಿಕೊಂಡಾಗ, ಅವರು ಒಂದು ನಾಟಕೀಯ ಘೋಷಣೆಯನ್ನು ಮಾಡಿದರು: “ಅನ್ಯ ಜನಾಂಗಗಳ ಕಾಲವು ತೀರಿತು; ಅವರ ಅರಸುಗಳ ಅನುಕೂಲ ಸಮಯ ಮುಗಿಯಿತು.” ಖಂಡಿತವಾಗಿಯೂ, 1914 ರಲ್ಲಿ ಆರಂಭಿಸಿದ ಲೋಕವ್ಯಾಪಕ ಭಾರಿ ಬದಲಾವಣೆಗಳು ಎಷ್ಟೊಂದು ದೂರದ ಪ್ರಭಾವವನ್ನು ಬೀರಿದವೆಂದರೆ ದೀರ್ಘಕಾಲದಿಂದ ಇದ್ದ ಅನೇಕ ರಾಜಪ್ರಭುತ್ವಗಳು ಮಾಯವಾದವು. ಇಸವಿ 1917ರ ಬಾಲಿವ್ಷಿಕ್ ಕ್ರಾಂತಿಯಲ್ಲಿ ಟ್ಸಾರ್ ಪ್ರಭುತ್ವದ ಉಚ್ಚಾಟನೆಯು ಯೆಶಾಯ 9:6, 7.
ಮಾರ್ಕ್ಸಿಸಂ ಮತ್ತು ಭಂಡವಾಳಶಾಹಿ ನಡುವೆ ಪ್ರಚಲಿತ ಸಂಘರ್ಷಣೆಗೆ ನಡಿಸಿತು. ರಾಜಕೀಯ ಬದಲಾವಣೆಯ ನಡುಕಗಳು ಭೂವ್ಯಾಪಕವಾಗಿ ಮಾನವ ಸಮಾಜವನ್ನು ಕಲುಕಿಸುವುದನ್ನು ಮುಂದುವರಿಸುತ್ತಾ ಇವೆ. ಇಂದು, ಅನೇಕ ಸರಕಾರಗಳು ಒಂದು ಯಾ ಎರಡು ವರ್ಷಗಳಿಗಿಂತಲೂ ಹೆಚ್ಚು ಕಾಲ ಉಳಿಯುವುದರಲ್ಲಿ ಪರಾಜಯಗೊಳ್ಳುತ್ತವೆ. ರಾಜಕೀಯ ಲೋಕದಲ್ಲಿ ಸ್ಥಿರತೆಯ ಕೊರತೆಯು ಇಟೆಲಿಯ ವಿಷಯದಲ್ಲಿ ಚೆನ್ನಾಗಿ ಉದಾಹರಿಸಲ್ಪಡುತ್ತದೆ, ಇಲ್ಲಿ ಲೋಕ ಯುದ್ಧ IIನ್ನು ಹಿಂಬಾಲಿಸಿದ ಕೇವಲ 42 ವರ್ಷಗಳಲ್ಲಿ 47 ಹೊಸ ಸರಕಾರಗಳಿದ್ದವು. ಆದರೆ ಇಂತಹ ಆರಂಭಿಕ ನಡುಕಗಳು ಪರಾಕಾಷ್ಠೆಯ ಸರಕಾರಿ ಉತ್ಕ್ರಾಂತಿಯೊಂದರ ಕೇವಲ ಪೂರ್ವಭಾವಿಯಾಗಿರುತ್ತವೆ. ಫಲಿತಾಂಶ? ಭೂಮಿಯ ಮೇಲೆ ದೇವರ ರಾಜ್ಯವು ಏಕೈಕ ಅಧಿಕಾರವನ್ನು ವಹಿಸಿಕೊಳ್ಳುವುದು.—6. (ಎ) ಏಚ್. ಜಿ. ವೆಲ್ಸ್ ಹೊಸ ಮತ್ತು ಬಹು ಮಹತ್ವದ ಯುಗವನ್ನು ಹೇಗೆ ವರ್ಣಿಸಿದರು? (ಬಿ) ಒಬ್ಬ ತತ್ವಜ್ಞಾನಿ ಮತ್ತು ರಾಜ್ಯನೀತಿಜ್ಞನು 1914ರ ನಂತರದ ಯುಗದ ಕುರಿತಾಗಿ ಏನೆಂದು ಬರೆದಿರುತ್ತಾನೆ?
6 ಇತಿಹಾಸಕಾರರು, ತತ್ವಜ್ಞಾನಿಗಳು ಮತ್ತು ರಾಜಕೀಯ ಮುಖಂಡರು 1914ರ ವರ್ಷಕ್ಕೆ, ಒಂದು ಹೊಸ ಮತ್ತು ಬಹು ಮಹತ್ವದ ಯುಗದ ಆರಂಭ ಎಂದು ಕೈತೋರಿಸಿದ್ದಾರೆ. ಆ ಯುಗದಲ್ಲಿ ಹದಿನೇಳು ವರ್ಷಗಳ ಅನಂತರ, ಇತಿಹಾಸಗಾರ ಏಚ್. ಜಿ. ವೆಲ್ಸ್ ಹೇಳಿದ್ದು: “ಪ್ರವಾದಿಯು ಸಂತೋಷದಿಂದ ಆಹ್ಲಾದಕರ ಸಂಗತಿಗಳನ್ನು ಪ್ರವಾದಿಸುವನು. ಆದರೆ ಅವನ ಕರ್ತವ್ಯವು ಅವನೇನನ್ನು ಕಾಣುತ್ತಾನೋ ಅದನ್ನು ಹೇಳುವುದಾಗಿದೆ. ಸೈನಿಕರಿಂದ, ದೇಶಭಕ್ತರಿಂದ, ದುಬಾರಿ ಬಡ್ಡಿ ಹಾಕುವ ಸಾಲಗಾರರಿಂದ, ಮತ್ತು ಹಣಕಾಸಿನ ಸಾಹಸಿಗಳಿಂದ ಲೋಕವು ಸ್ಥಿರವಾಗಿ ನಿಯಂತ್ರಿಸಲ್ಪಟ್ಟಿರುವುದನ್ನು ಅವನು ಕಾಣುತ್ತಾನೆ; ಅನುಮಾನ ಮತ್ತು ದ್ವೇಷಕ್ಕೆ ಶರಣಾಗತವಾಗಿರುವ, ಮತ್ತು ತೀವ್ರ ಗತಿಯಲ್ಲಿ ಖಾಸಗಿ ಸ್ವಾತಂತ್ರ್ಯವನ್ನು ನಷ್ಟಗೊಳಿಸುವ, ಕಡು ವರ್ಗ ಸಂಘರ್ಷಣೆಗಳ ಕಡೆಗೆ ಉರುಳುತ್ತಿರುವ, ಮತ್ತು ಹೊಸ ಯುದ್ಧಗಳಿಗೆ ತಯಾರಿಸುತ್ತಿರುವ ಒಂದು ಲೋಕವದಾಗಿದೆ.” ಇಸವಿ 1953 ರಲ್ಲಿ ತತ್ವಜ್ಞಾನಿ ಬರ್ಟ್‌ರೆಂಡ್ ರಸಲ್ ಬರೆದದ್ದು: “1914 ರಂದಿನಿಂದ, ಲೋಕದಲ್ಲಿರುವ ಪ್ರವೃತ್ತಿಗಳ ಪ್ರಜ್ಞೆಯಿಂದಿರುವ ಪ್ರತಿಯೊಬ್ಬನು, ಇನ್ನೂ ಹೆಚ್ಚಿನ ವಿಪತ್ತುಗಳ ಕಡೆಗೆ ವಿಧಿನಿಯಮಿತ ಮತ್ತು ಪೂರ್ವ ನಿರ್ಧರಿತ ನಡಗೆಯೋ ಎಂಬಂತೆ ಕಂಡು ಬಂದಿರುವ ಸಂಗತಿಗಳಿಂದ ಆಳವಾದ ಕ್ಲೇಶಕ್ಕೊಳಗಾಗಿದ್ದಾನೆ. . . . ಅವರು ಮಾನವ ಕುಲವನ್ನು ಕುಪಿತ ದೇವತೆಗಳಿಂದ ನಡೆಸಲ್ಪಟ್ಟ ಮತ್ತು ತನ್ನ ವಿಧಿಯ ನಾಯಕನಲ್ಲದೆ ಇರುವ ಗ್ರೀಕ್ ದುರಂತ ಕಥೆಯ ನಾಯಕನಂತೆ ಕಾಣುತ್ತಾನೆ.” ರಾಜ್ಯನೀತಿಜ್ಞ ಹ್ಯಾರಲ್ಡ್ ಮೆಕ್ಮಿಲನ್, 1980 ರಲ್ಲಿ ನಮ್ಮ 20 ನೆಯ ಶತಕದ ಶಾಂತಿಯುಕ್ತ ಆರಂಭದ ಕುರಿತು ಪ್ರತಿಬಿಂಬಿಸುತ್ತಾ ಹೇಳಿದ್ದು: “ಎಲ್ಲವೂ ಉತ್ತಮ, ಇನ್ನೂ ಉತ್ತಮಗೊಳ್ಳುವುದು. ನಾನು ಇಂತಹ ಲೋಕವೊಂದರಲ್ಲಿ ಜನಿಸಿದೆನು. . . . ಫಕ್ಕನೆ, ಅನಿರೀಕ್ಷಿತವಾಗಿ, 1914ರ ಒಂದು ಬೆಳಗ್ಗೆ ಇಡೀ ಸಂಗತಿಯೇ ಅಂತ್ಯಗೊಂಡಿತು.”
7-9. (ಎ) ಯಾವ ಉತ್‌ಪವ್ಲನಗಳು 1914 ರಿಂದ ಮಾನವ ಸಮಾಜವನ್ನು ನಡುಗಿಸಿವೆ? (ಬಿ) ಯೇಸುವಿನ ಸಾನ್ನಿಧ್ಯದ ಸಮಯದಲ್ಲಾಗುವ ಮಾನವ ಸಮಾಜದ ಉತ್‌ಪವ್ಲನಗಳು ಕ್ರಮೇಣ ಮಾನವಕುಲದ ಮಧ್ಯ ಯಾವ ಪರಿಸ್ಥಿತಿಯನ್ನು ಒಳಗೊಳ್ಳಲಿದ್ದವು?
7 ಲೋಕ ಯುದ್ಧ II ಭಾರಿ ಬದಲಾವಣೆಗಳ ಇನ್ನೊಂದು ಅಲೆಯನ್ನು ತಂದಿತು. ಮತ್ತು ಚಿಕ್ಕ ಚಿಕ್ಕ ಯುದ್ಧಗಳು, ನಾವು ಈ ಶತಕದ ಕೊನೆಯನ್ನು ಸಮೀಪಿಸುತ್ತಿರುವಂತೆ, ಭೂಮಿಯನ್ನು ಅಲುಗಾಡಿಸುವುದನ್ನು ಮುಂದರಿಸುತ್ತಿವೆ. ಆದರೆ ಇಂದಿನ ವಿಷಯಗಳ ವ್ಯವಸ್ಥೆಯು ಅಷ್ಟರ ತನಕ ಮುಟ್ಟಲಿರುವುದೋ? ಪರಮಾಣು ಯುದ್ಧದ ವಿಧ್ವಂಸಕ ನಾಶನದ ಭಯಭರಿತ ಬೆದರಿಕೆಯು ಅನೇಕ ಜನರನ್ನು ಬೆರಗುಗೊಳಿಸುವಂತೆ ಮಾಡಿದೆ. ಸಂತಸಕರವಾಗಿಯೇ, ಉತ್ತರವು ಮನುಷ್ಯನ ಮೇಲಲ್ಲ, ಬದಲು ಅವನ ಸೃಷ್ಟಿಕರ್ತನ ಮೇಲೆ ಆಧಾರಿತವಾಗಿದೆ.—ಯೆರೆಮೀಯ 17:5.
8 ಯುದ್ಧದ ಹೊರತಾಗಿಯೂ ಇತರ ಸಂಗತಿಗಳು ಕೂಡ, ಮಾನವ ಸಮಾಜವನ್ನು ಅದರ ತಳಹದಿಗಳಲ್ಲಿ 1914 ರಿಂದ ಅಲುಗಾಡಿಸಿವೆ. ಮಹಾ ರೋಗಾವಸ್ಥೆಯ ಉತ್‌ಪವ್ಲನಗಳಲ್ಲಿ ಒಂದು, ಅಕ್ಟೋಬರ 29, 1929 ರಲ್ಲಿ ಅಮೆರಿಕದ ಶೇರುಬಂಡವಾಳ ಮಾರುಕಟ್ಟೆಯಲ್ಲಾದ ಕುಸಿತದಿಂದ ಉಂಟಾಯಿತು. ಇದು ಮಹಾ ಅರ್ಥಿಕ ಕುಸಿತಕ್ಕೆ ನಡಿಸಿ, ಎಲ್ಲಾ ಬಂಡವಾಳಶಾಹಿ ದೇಶಗಳನ್ನು ಬಾಧಿಸಿತು. ಇಸವಿ 1932 ಮತ್ತು ಯೆರೆಮೀಯ 5:26-31 ಹೋಲಿಸಿರಿ.
1934ರ ನಡುವೆ ಆ ಆರ್ಥಿಕ ಕುಸಿತವು ತಳದಿಂದ ಮೇಲಕ್ಕೆ ತರಲ್ಪಟ್ಟಿರುವುದಾದರೂ, ನಾವು ಅದರ ಪರಿಣಾಮಗಳನ್ನು ಇನ್ನೂ ಅನುಭವಿಸುತ್ತಾ ಇದ್ದೇವೆ. ಇಸವಿ 1929 ರಿಂದ ಆರ್ಥಿಕವಾಗಿ ರೋಗಗ್ರಸ್ತವಾಗಿರುವ ಲೋಕವು ತಾತ್ಕಾಲಿಕ ಯೋಜನೆಗಳಿಂದ ತೇಪೆಹಾಕಲ್ಪಟ್ಟಿದೆ. ಸರಕಾರಗಳು ಖೋತಾ ಆಯವ್ಯಯ ಹಣ ನಿರ್ವಹಣೆಯಲ್ಲಿ ತೊಡಗಿರುತ್ತವೆ. ಇಸವಿ 1973ರ ತೈಲ ಬಿಕ್ಕಟ್ಟು ಮತ್ತು 1987ರ ಶೇರುಮಾರುಕಟ್ಟೆಯ ದುಮುಕುವಿಕೆಯು ಹಣಕಾಸಿನ ಸಾಮ್ರಾಜ್ಯದ ಅಲುಗಾಟಕ್ಕೆ ಕೂಡಿಸಿದವು. ತನ್ಮಧ್ಯೆ, ಲಕ್ಷಾಂತರ ಜನರು ಸಾಲದ ಖಾತೆಯ ಮೇಲೆ ಬಹಳಷ್ಟನ್ನು ಖರೀದಿಸುತ್ತಾರೆ. ಹಣಕಾಸಿನ ತಂತ್ರಗಳ, ಪಿರಮಿಡ್ ಯೋಜನೆಗಳ ಮತ್ತು ಲಾಟರಿಗಳ ಮತ್ತು ಇತರ ಜೂಜುಬಾಜಿನ ಕುಯುಕ್ತಿಗಳ ಮೂಲಕ ಅಸಂಖ್ಯಾತ ಜನರು ಬಲಿಪಶುಗಳಾಗುತ್ತಾರೆ, ಇದರಲ್ಲಿ ಹೆಚ್ಚಿನವು ಜನರನ್ನು ರಕ್ಷಿಸಬೇಕಾದ ಸರಕಾರಗಳಿಂದಲೇ ಪ್ರಾಯೋಜಿಸಲ್ಪಟ್ಟಿದೆ. ಕ್ರೈಸ್ತಪ್ರಪಂಚದ ಟೆಲಿವಿಷನ್ ಸುವಾರ್ತಿಕರು ಕೂಡ ತಮ್ಮ ಸಹಸ್ರಾರು ಕೋಟಿ ರೂಪಾಯಿಗಳ (ಮಿಲ್ಯಾಂತರ ಡಾಲರುಗಳ) ಪಾಲನ್ನು ತೆಗೆದುಕೊಳ್ಳಲು ತಮ್ಮ ಹಸ್ತಗಳನ್ನು ಚಾಚುತ್ತಾರೆ.—9 ಈ ಹಿಂದೆ, ಆರ್ಥಿಕ ಸಂಕಟಗಳು ಮೂಸಲೀನಿ ಮತ್ತು ಹಿಟ್ಲರನಿಗೆ ಅಧಿಕಾರವನ್ನು ವಶಪಡಿಸಿಕೊಳ್ಳಲು ದಾರಿಯನ್ನು ತೆರೆದವು. ಮಹಾ ಬಾಬೆಲ್ ಅವರ ಮೆಚ್ಚಿಕೆಯನ್ನು ಪಡೆಯಲು ಸಮಯನಷ್ಟ ಮಾಡಲಿಲ್ಲ, ಮತ್ತು ವ್ಯಾಟಿಕನ್ 1929 ರಲ್ಲಿ ಇಟೆಲಿಯೊಂದಿಗೆ ಮತ್ತು 1933 ರಲ್ಲಿ ಜರ್ಮನಿಯೊಂದಿಗೆ ಒಪ್ಪಂದಗಳೊಳಗೆ ಪ್ರವೇಶಿಸಿತು. (ಪ್ರಕಟನೆ 17:5) ಅದನ್ನು ಹಿಂಬಾಲಿಸಿ ಬಂದ ಅಂಧಕಾರದ ದಿನಗಳು ಖಂಡಿತವಾಗಿಯೂ, “ಜನಗಳಿಗೆ ದಿಕ್ಕು ಕಾಣದೆ ಸಂಕಟವು ಉಂಟಾಗುವುದು . . . ನಿವಾಸಿತ ಭೂಮಿಯ ಮೇಲೆ ಬರಲಿರುವ ವಿಷಯಗಳ ಭಯ ಮತ್ತು ನಿರೀಕ್ಷೆಯಿಂದ ಮನುಷ್ಯರು ಮೂರ್ಛೆ ಹೋದಂತಾಗುವರು,” ಎಂಬುದನ್ನು ಕೊನೆಗೆ ಒಳಗೊಳ್ಳುವ ತನ್ನ ಸಾನ್ನಿಧ್ಯದ ಕುರಿತ ಯೇಸುವಿನ ಪ್ರವಾದನೆಯ ನೆರವೇರಿಕೆಯ ಭಾಗವಾಗಿತ್ತು. (ಲೂಕ 21:7-9, 25-31, NW) * ಹೌದು, 1914 ರಲ್ಲಿ ಮಾನವ ಸಮಾಜವನ್ನು ಅಲುಗಾಡಿಸಲು ಆರಂಭಿಸಿದ ಕಂಪನಗಳು, ಹಿಂಬಾಲಿಸಿದ ಬಲಶಾಲೀ ಧಕ್ಕೆಗಳೊಂದಿಗೆ ಮುಂದರಿದಿವೆ.
ಯೆಹೋವನು ಸ್ವಲ್ಪ ಅಲುಗಾಡಿಸುವಿಕೆಯನ್ನು ಮಾಡುತ್ತಾನೆ
10. (ಎ) ಮಾನವ ವ್ಯವಹಾರಗಳಲ್ಲಿ ಅಷ್ಟೊಂದು ನಡುಕಗಳು ಯಾಕೆ ಇವೆ? (ಬಿ) ಯೆಹೋವನು ಏನನ್ನು ಮಾಡುತ್ತಿದ್ದಾನೆ, ಯಾವುದರ ತಯಾರಿಯಲ್ಲಿ?
10 ಮಾನವ ಕಾರ್ಯಾಧಿಗಳಲ್ಲಿ ಅಂತಹ ನಡುಕಗಳು, ಸ್ವಂತ ಹೆಚ್ಚೆಯನ್ನು ಮಾರ್ಗದರ್ಶಿಸಲು ಮಾನವನ ಅಸಾಮರ್ಥ್ಯದ ಫಲಿತಾಂಶವಾಗಿದೆ. (ಯೆರೆಮೀಯ 10:23) ಇನ್ನೂ ಹೆಚ್ಚಾಗಿ, ಆ ಪುರಾತನ ಸರ್ಪ ಸೈತಾನನು “ಭೂಲೋಕದವರನ್ನೆಲ್ಲಾ ಮರುಳು” ಗೊಳಿಸುವುದರಿಂದ ಯೆಹೋವನ ಆರಾಧನೆಯಿಂದ ಎಲ್ಲಾ ಮಾನವ ಕುಲವನ್ನು ದೂರ ತೊಲಗಿಸಲು ತನ್ನ ಕೊನೆಯ ಪ್ರಯತ್ನದಲ್ಲಿ ವಿಪತ್ತುಗಳನ್ನು ತರುತ್ತಿದ್ದಾನೆ. ಆಧುನಿಕ ತಂತ್ರಜ್ಞಾನವು ಭೂಮಿಯನ್ನು ಒಂದು ಸಂಕುಚಿತ ನೆರೆಹೊರೆಯನ್ನಾಗಿ ಮಾಡಿದೆ, ಇಲ್ಲಿ ರಾಷ್ಟ್ರೀಯ ಮತ್ತು ಕುಲವರ್ಣೀಯ ದ್ವೇಷಗಳು ಮಾನವ ಸಮಾಜವನ್ನು ಅಸ್ತಿವಾರದಿಂದಲೇ ಅಲುಗಾಡಿಸುತ್ತಾ ಇವೆ, ಮತ್ತು ಸಂಯುಕ್ತ ರಾಷ್ಟ್ರಗಳು ಎಂದು ಎನ್ನಿಸಿಕೊಂಡಿರುವ ಸಂಘವು ಯಾವುದೇ ಪರಿಣಾಮಕಾರಿ ಚಿಕಿತ್ಸೆಯನ್ನು ಕಂಡುಕೊಳ್ಳಶಕ್ತವಾಗಿಲ್ಲ. ಹಿಂದೆಂದಿಗಿಂತಲೂ ಹೆಚ್ಚಾಗಿ, ತನ್ನ ಹಾನಿಗಾಗಿ ಮನುಷ್ಯನು ಇನ್ನೊಬ್ಬ ಮನುಷ್ಯನ ಮೇಲೆ ಪ್ರಭುತ್ವವನ್ನು ನಡಿಸುತ್ತಿದ್ದಾನೆ. (ಪ್ರಕಟನೆ 12:9, 12; ಪ್ರಸಂಗಿ 8:9) ಇದಲ್ಲದೆ, ಸಾರ್ವಭೌಮ ಕರ್ತನಾದ ಯೆಹೋವನು, ಭೂಮ್ಯಾಕಾಶಗಳ ನಿರ್ಮಾಣಿಕನು, ಒಮ್ಮೆಗೆ ಮತ್ತು ಸದಾಕಾಲಕ್ಕೂ ಭೂಮಿಯ ಸಮಸ್ಯೆಗಳನ್ನು ಪರಿಹರಿಸುವ ತಯಾರಿಯಲ್ಲಿ, ತನ್ನದೇ ರೀತಿಯಲ್ಲಿ ಕಳೆದ 70ಕ್ಕೂ ಹೆಚ್ಚು ವರ್ಷಗಳಿಂದಲೂ ಅಲುಗಾಟವನ್ನು ಮಾಡುತ್ತಾ ಇದ್ದಾನೆ. ಅದು ಹೇಗೆ?
11. (ಎ) ಹಗ್ಗಾಯ 2:6, 7 ರಲ್ಲಿ ಯಾವ ಅಲುಗಾಟದ ಕುರಿತು ವರ್ಣಿಸಲಾಗುತ್ತದೆ? (ಬಿ) ಹಗ್ಗಾಯನ ಪ್ರವಾದನೆಯು ಹೇಗೆ ನೆರವೇರಿಸಲ್ಪಡುತ್ತಿದೆ?
11ಹಗ್ಗಾಯ 2:6, 7 ರಲ್ಲಿ (NW) ನಾವು ಓದುವುದು: “ಸೇನೆಗಳ ಯೆಹೋವನು ಇಂತೆಂದಿದ್ದಾನೆ, ‘ಇನ್ನೂ ಒಮ್ಮೆ—ಅದು ಸ್ವಲ್ಪ ಕಾಲ—ನಾನು ಆಕಾಶಗಳನ್ನು ಮತ್ತು ಭೂಮಿಯನ್ನು ಮತ್ತು ಸಮುದ್ರವನ್ನು ಮತ್ತು ಒಣನೆಲವನ್ನು ನಡುಗಿಸುವೆನು, ಮತ್ತು ನಾನು ಸಕಲ ಜನಾಂಗಗಳನ್ನು ನಡುಗಿಸುವೆನು ಮತ್ತು ಸಕಲ ಜನಾಂಗಗಳ ಇಷ್ಟವಸ್ತುಗಳು ಒಳಗೆ ಬರಲೇ ಬೇಕು; ಮತ್ತು ಈ ಆಲಯವನ್ನು ನಾನು ವೈಭವದಿಂದ ತುಂಬಿಸುವೆನು,’ ಸೇನೆಗಳ ಯೆಹೋವನು ಹೇಳಿದ್ದಾನೆ.” ವಿಶೇಷವಾಗಿ 1919 ನೆಯ ವರ್ಷದಿಂದ ಭೂಮಿಯ ಮೇಲಿನ ಮಾನವ ಸಮಾಜದ ಎಲ್ಲಾ ಘಟಕಗಳ ನಡುವೆ ತನ್ನ ನ್ಯಾಯತೀರ್ಪುಗಳನ್ನು ತನ್ನ ಸಾಕ್ಷಿಗಳು ಘೋಷಿಸುವಂತೆ ಯೆಹೋವನು ಮಾಡಿದ್ದಾನೆ. ಸೈತಾನನ ಲೋಕ ವ್ಯವಸ್ಥೆಯು ಈ ಭೌಗೋಳಿಕ ಎಚ್ಚರಿಕೆಯಿಂದ ತತ್ತರಿಸಲ್ಪಟ್ಟಿದೆ ಮತ್ತು ಅಲುಗಾಡಿಸಲ್ಪಟ್ಟಿದೆ. * ಈ ಎಚ್ಚರಿಕೆಯು ತೀವ್ರಗೊಳ್ಳುತ್ತಿರುವಂತೆ, ದೇವ-ಭೀರು ಮಾನವರು—“ಇಷ್ಟವಾದ ವಸ್ತುಗಳು”—ಜನಾಂಗಗಳಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳಲು ಪ್ರಚೋದಿಸಲ್ಪಟ್ಟಿರುತ್ತಾರೆ. ಸೈತಾನನ ಸಂಸ್ಥೆಯಲ್ಲಿನ ಕಂಪನದಿಂದ ಅಲುಗಾಡಿಸಲ್ಪಟ್ಟವರಾಗಿ ಅವರು ಹೊರಗೆ ಬಂದಿರುವುದಲ್ಲ. ಬದಲಿಗೆ ಅವರು ಸನ್ನಿವೇಶವನ್ನು ವಿವೇಚಿಸಿ, ವೈಭವದಿಂದ ಯೆಹೋವನ ಆರಾಧನೆಯ ಮನೆಯನ್ನು ತುಂಬಿಸಲು ಅಭಿಷಿಕ್ತ ಯೋಹಾನ ವರ್ಗದವರೊಂದಿಗೆ ಪಾಲಿಗರಾಗಲು ತಮ್ಮ ಸ್ವಂತ ತೀರ್ಮಾನವನ್ನು ಮಾಡುತ್ತಾರೆ. ಇದು ಹೇಗೆ ಪೂರೈಸಲ್ಪಡುತ್ತದೆ? ದೇವರ ಸ್ಥಾಪಿತ ರಾಜ್ಯದ ಶುಭಸಮಾಚಾರವನ್ನು ಸಾರುವ ಹುರುಪಿನ ಕಾರ್ಯದಿಂದ. (ಮತ್ತಾಯ 24:14) ಯೇಸು ಮತ್ತು ಅವನ ಅಭಿಷಿಕ್ತ ಹಿಂಬಾಲಕರನ್ನು ಸೇರಿಸಿ ಮಾಡಲ್ಪಟ್ಟ ಈ ರಾಜ್ಯವು, “ಎಂದಿಗೂ ಕದಲಿಸಲಾರದ ಒಂದು ರಾಜ್ಯದೋಪಾದಿ” ಯೆಹೋವನ ಮಹಿಮೆಗಾಗಿ ಸದಾ ಕಾಲ ನಿಂತಿರುವುದು.—ಇಬ್ರಿಯ 12:26-29.
12. ಮತ್ತಾಯ 24:14ರ ಸಾರುವಿಕೆಗೆ ನೀವು ಪ್ರತಿವರ್ತನೆ ತೋರಿಸಲು ಆರಂಭಿಸಿರುವುದಾದರೆ, ಪ್ರಕಟನೆ 6:12ರ ಮಹಾ ಭೂಕಂಪವು ಸಂಭವಿಸುವ ಮೊದಲು ಏನು ಮಾಡತಕ್ಕದ್ದು?
12 ಆ ಸಾರುವಿಕೆಗೆ ಪ್ರತಿವರ್ತನೆ ತೋರಿಸಲು ಆರಂಭಿಸಿದವರಲ್ಲಿ ನೀವು ಒಬ್ಬರೋ? ಇತ್ತೀಚೆಗಿನ ವರುಷಗಳಲ್ಲಿ ಯೇಸುವಿನ ಮರಣದ ಜ್ಞಾಪಕಾಚರಣೆಗೆ ಹಾಜರಾದ ಲಕ್ಷಾಂತರ ಜನರಲ್ಲಿ ಒಬ್ಬರು ನೀವಾಗಿರಬಹುದೇ? ಹಾಗಿರುವುದಾದರೆ, ಬೈಬಲ್ ಸತ್ಯದ ನಿಮ್ಮ ಅಭ್ಯಾಸದಲ್ಲಿ ಪ್ರಗತಿಯನ್ನು ಮಾಡುವುದನ್ನು ಮುಂದರಿಸಿರಿ. (2 ತಿಮೊಥೆಯ 2:15; 3:16, 17) ಸೈತಾನನ ನಾಶವಾಗಲಿರುವ ಐಹಿಕ ಸಮಾಜದ ಭ್ರಷ್ಟ ಜೀವನ ಶೈಲಿಯನ್ನು ಸಂಪೂರ್ಣವಾಗಿ ತೊರೆದುಬಿಡಿರಿ! ಕ್ರೈಸ್ತ ನೂತನ ಲೋಕದ ಸಮಾಜದೊಳಗೆ ನೇರವಾಗಿ ಬನ್ನಿರಿ ಮತ್ತು ಸೈತಾನನ ಲೋಕವೆಲ್ಲವನ್ನು ಕೊನೆಯ ಧ್ವಂಸಕಾರಿ “ಭೂಕಂಪವು” ಚೂರುಚೂರಾಗಿ ಮಾಡುವ ಮೊದಲು ಅದರ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿರಿ. ಆದರೆ ಆ ಮಹಾ ಭೂಕಂಪವು ಏನಾಗಿದೆ? ನಾವದನ್ನು ಈಗ ನೋಡೋಣ.
ಮಹಾ ಭೂಕಂಪ!
13. ಮಹಾ ಭೂಕಂಪವು ಯಾವ ರೀತಿಯಲ್ಲಿ ಮಾನವ ಅನುಭವಕ್ಕೆ ಸಂಪೂರ್ಣವಾಗಿ ಹೊಸತಾಗಿರುವುದು?
13 ಹೌದು, ಈ ಸಂಕಟಮಯ ಕಡೇ ದಿನಗಳು ಭೂಕಂಪಗಳ ಸಮಯವಾಗಿವೆ—ಅಕ್ಷರಶಃ ಮತ್ತು ಲಾಕ್ಷಣಿಕ. (2 ತಿಮೊಥೆಯ 3:1) ಆದರೆ ಇವುಗಳಲ್ಲಿ ಒಂದೂ ಆರನೆಯ ಮುದ್ರೆಯನ್ನು ಬಿಚ್ಚುವಾಗ ಯೋಹಾನನು ನೋಡುವ ಕೊನೆಯ ಮಹಾ ನಡುಕವಾಗಿರುವುದಿಲ್ಲ. ಮುನ್ನಡುಕಗಳ ಸಮಯವು ಈಗ ಕೊನೆಗೊಂಡಿದೆ. ಈಗ ಮಾನವ ಅನುಭವಕ್ಕೆ ಸಮಗ್ರವಾಗಿ ಹೊಸತು ಆಗಿರುವ ಒಂದು ಮಹಾ ಭೂಕಂಪವು ಬರುತ್ತದೆ. ಆ ಭೂಕಂಪವು ಎಷ್ಟು ಬೃಹತ್ ಪ್ರಮಾಣದ್ದು ಅಂದರೆ ಅದು ಉಂಟುಮಾಡುವ ಭಾರಿ ಬದಲಾವಣೆಗಳನ್ನು ಮತ್ತು ಉತ್‌ಪವ್ಲನಗಳನ್ನು ರಿಕರ್ಟ್ ಭೂಕಂಪಮಾಪನ ಯಾ ಬೇರೆ ಯಾವುದೇ ಮಾನವ ಮಾಪನ ಯಂತ್ರದಿಂದ ಅಳೆಯಲು ಸಾಧ್ಯವಿಲ್ಲ. ಇದೊಂದು ಬರಿಯ ಸ್ಥಳಿಕ ಧಕ್ಕೆಯಾಗಿರುವುದಿಲ್ಲ, ಬದಲು ಘೋರ ಉತ್ಕಂಪದ ತತ್ತರಿಸುವಿಕೆಯಾಗಿದ್ದು, ಇಡೀ “ಭೂಮಿ” ಯನ್ನು ಅಂದರೆ ಅಧೋಗತಿಗಿಳಿದ ಎಲ್ಲಾ ಮಾನವ ಸಮಾಜವನ್ನು ಧ್ವಂಸಗೊಳಿಸುತ್ತದೆ.
14. (ಎ) ಒಂದು ಮಹಾ ಭೂಕಂಪದ ಮತ್ತು ಅದರ ಫಲಿತಾಂಶಗಳ ಕುರಿತಾಗಿ ಯಾವ ಪ್ರವಾದನೆಯು ಮುನ್ನುಡಿಯುತ್ತದೆ? (ಬಿ) ಯೋವೇಲನ ಪ್ರವಾದನೆ ಮತ್ತು ಪ್ರಕಟನೆ 6:12, 13 ಯಾವುದನ್ನು ಸೂಚಿಸುತ್ತಿರಬೇಕು?
14 ಅಂತಹ ಭೂಕಂಪದ ಮತ್ತು ಅದರ ವಿಪತ್ಕಾರಕ ಪರಿಣಾಮಗಳ ಕುರಿತು ಯೆಹೋವನ ಇತರ ಪ್ರವಾದಿಗಳು ಮುನ್ನುಡಿದಿದ್ದಾರೆ. ಉದಾಹರಣೆಗೆ, ಸುಮಾರು ಸಾ. ಶ. ಪೂ. 820 ರಲ್ಲಿ ಯೋವೇಲನು “ಯೆಹೋವನ ಬರಲಿರುವ ಮಹಾ ಮತ್ತು ಅತಿ ಭಯಂಕರ ದಿನದ” ಕುರಿತು ಮಾತಾಡುತ್ತಾ, “ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು” ಎಂದು ಹೇಳಿರುತ್ತಾನೆ. ಅನಂತರ, ಅವನು ಈ ಮಾತುಗಳನ್ನು ಕೂಡಿಸುತ್ತಾನೆ: “ಆಹಾ, ತೀರ್ಪಿನ ತಗ್ಗಿನಲ್ಲಿ ಗುಂಪು ಗುಂಪು! ತೀರ್ಪಿನ ತಗ್ಗಿನಲ್ಲಿ ಯೆಹೋವನ ದಿನವು ಸಮೀಪಿಸಿದೆ. ಸೂರ್ಯಚಂದ್ರರು ಮಂಕಾಗುತ್ತಾರೆ, ನಕ್ಷತ್ರಗಳು ಕಾಂತಿಯನ್ನು ಅಡಗಿಸಿಕೊಳ್ಳುತ್ತವೆ. ಯೆಹೋವನು ಚೀಯೋನಿನಿಂದ ಗರ್ಜಿಸುತ್ತಾನೆ, ಯೆರೂಸಲೇಮಿನಿಂದ ದನಿಗೈಯುತ್ತಾನೆ; ಭೂಮ್ಯಾಕಾಶಗಳು ನಡುಗುತ್ತವೆ. ಆದರೆ ಯೆಹೋವನು ತನ್ನ ಜನರಿಗೆ ಆಶ್ರಯವೂ ಇಸ್ರಾಯೇಲ್ಯರಿಗೆ ರಕ್ಷಣದುರ್ಗವೂ ಆಗುವನು.” (ಯೋವೇಲ 2:31; 3:14-16) ಈ ನಡುಗಿಸುವಿಕೆಯನ್ನು ಮಹಾ ಸಂಕಟದ ಸಮಯದಲ್ಲಿ ಯೆಹೋವನ ನ್ಯಾಯತೀರ್ಪನ್ನು ಜಾರಿಗೊಳಿಸುವಾಗ ಮಾತ್ರವೇ ಅನ್ವಯಿಸುವುದು ಸಾಧ್ಯ. (ಮತ್ತಾಯ 24:21) ಆದುದರಿಂದ ಪ್ರಕಟನೆ 6:12, 13 ರಲ್ಲಿರುವ ಸಮಾನಾಂತರ ದಾಖಲೆಯು ತಾರ್ಕಿಕವಾಗಿ ಅದೇ ಅನ್ವಯವನ್ನು ಹೊಂದಿರಬೇಕು.—ಯೆರೆಮೀಯ 10:10; ಚೆಫನ್ಯ 1:14, 15ನ್ನು ಸಹ ನೋಡಿರಿ.
15. ಪ್ರವಾದಿ ಹಬಕ್ಕೂಕನು ಯಾವ ಒಂದು ಬಲವಾದ ಅಲುಗಾಡಿಸುವಿಕೆಯ ಕುರಿತು ಮುನ್ನುಡಿದನು?
15 ಯೋವೇಲನಿಂದ ಸುಮಾರು 200 ವರ್ಷಗಳ ಅನಂತರ ಪ್ರವಾದಿ ಹಬಕ್ಕೂಕನು ಅವನ ದೇವರಿಗೆ ಮಾಡಿದ ಪ್ರಾರ್ಥನೆಯಲ್ಲಿ ಹೇಳಿದ್ದು: “ಓ ಯೆಹೋವನೇ, ನಾನು ನಿನ್ನ ಸುದ್ದಿಯನ್ನು ಕೇಳಿದ್ದೇನೆ. ಓ ಯೆಹೋವನೇ, ನಿನ್ನ ಕ್ರಿಯಾಶಕ್ತಿಯ ಕುರಿತು ನಾನು ಭಯಪಟ್ಟಿದ್ದೇನೆ. ವರ್ಷಗಳ ಮಧ್ಯದಲ್ಲಿ, ಅದನ್ನು ಪುನಃ ಸಜೀವಗೊಳಿಸು! ವರ್ಷಗಳ ಮಧ್ಯದಲ್ಲಿ ನೀನು ಅದನ್ನು ಪ್ರಸಿದ್ಧಪಡಿಸುವಂತಾಗಲಿ. ಕ್ಷೋಭೆಯ ಸಮಯದಲ್ಲಿ, ಕರುಣೆಯನ್ನು ತೋರಿಸಲು ನೀನು ಜ್ಞಾಪಿಸಿಕೊಳ್ಳುವಂತಾಗಲಿ.” ಆ “ಕ್ಷೋಭೆ” ಏನಾಗಿರಬಹುದು? ಮಹಾ ಸಂಕಟದ ಸುಸ್ಪಷ್ಟ ವಿವರಣೆಯನ್ನು ಕೊಡುವುದನ್ನು ಮುಂದರಿಸುತ್ತಾ, ಯೆಹೋವನ ಕುರಿತಾಗಿ ಹಬಕ್ಕೂಕನು ಹೇಳುವುದು: “ಅವನು ಭೂಮಿಯನ್ನು ಅಲುಗಾಡಿಸುವಂತೆ, ಚಲಿಸದೆ ಅವನು ನಿಂತನು. ಅವನು ನೋಡಿದನು, ಮತ್ತು ಆಗ ಜನಾಂಗಗಳು ನೆಗೆಯುವಂತೆ ಮಾಡಿದನು. . . . ನೀನು ದೂಷಣೆಯಿಂದ ಭೂಮಿಯ ಮೇಲೆ ಮುನ್ನಡೆದೀ. ಸಿಟ್ಟಿನಿಂದ ನೀನು ಜನಾಂಗಗಳನ್ನು ಒಕ್ಕುತ್ತಾ ಹೋದೀ. ಆಗಲೂ, ನಾನಾದರೋ ಯೆಹೋವನಲ್ಲಿಯೇ ಉಲ್ಲಾಸಿಸುವೆನು; ನನ್ನ ರಕ್ಷಣೆಯ ದೇವರಲ್ಲಿ ಆನಂದಿಸುವೆನು.” (ಹಬಕ್ಕೂಕ 3:1, 2, 6, 12, 18, NW) ಅವನು ಜನಾಂಗಗಳನ್ನು ಒಕ್ಕುವಾಗ, ಭೂಮಿಯಲ್ಲಿಲ್ಲಾ ಯೆಹೋವನು ಎಂತಹ ಬಲವಾದ ಕಂಪನಕ್ಕೆ ಕಾರಣನಾಗುವನು!
16. (ಎ) ದೇವ ಜನರ ಮೇಲೆ ಸೈತಾನನು ತನ್ನ ಕೊನೆಯ ಆಕ್ರಮಣವನ್ನು ಮಾಡುವ ಸಮಯದ ಕುರಿತು ಯೆಹೆಜ್ಕೇಲನಿಂದ ಏನು ಮುಂತಿಳಿಸಲ್ಪಡುತ್ತದೆ? (ಬಿ) ಪ್ರಕಟನೆ 6:12ರ ಮಹಾ ಭೂಕಂಪದ ಫಲಿತಾಂಶಗಳೇನು?
16 ಯೆಹೆಜ್ಕೇಲನು ಕೂಡ, ದೇವ ಜನರ ಮೇಲೆ ಮಾಗೋಗಿನ ಗೋಗನು (ಕೆಳಗೆ ದೊಬ್ಬಲ್ಪಟ್ಟ ಸೈತಾನನು) ತನ್ನ ಕೊನೆಯ ಆಕ್ರಮಣವನ್ನು ಮಾಡುವಾಗ, ಯೆಹೋವನು “ಇಸ್ರಾಯೇಲ್ ನೆಲದಲ್ಲಿ” “ಒಂದು ಮಹಾ ಕಂಪನ” ವನ್ನು ಉಂಟುಮಾಡುವನು ಎಂದು ಮುಂತಿಳಿಸಿದನು. ಯೆಹೆಜ್ಕೇಲ 38:18, 19, NW) ಅಕ್ಷರಶಃ ಭೂಕಂಪಗಳು ಒಳಗೂಡಿರಬಹುದಾದರೂ, ಪ್ರಕಟನೆಯು ಸಂಕೇತಗಳಲ್ಲಿ ಸಾದರಪಡಿಸಲ್ಪಟ್ಟಿದೆ ಎಂಬುದನ್ನು ನಾವು ನೆನಪಿನಲ್ಲಿಡತಕ್ಕದ್ದು. ಈ ಪ್ರವಾದನೆ ಮತ್ತು ಉಲ್ಲೇಖಿಸಲ್ಪಟ್ಟ ಇತರ ಪ್ರವಾದನೆಗಳು ಅಧಿಕವಾಗಿ ಸಾಂಕೇತಿಕವಾಗಿವೆ. ಆದುದರಿಂದ, ಆರನೆಯ ಮುದ್ರೆಯ ಒಡೆಯುವಿಕೆಯು ಈ ಐಹಿಕ ವಿಷಯಗಳ ವ್ಯವಸ್ಥೆಯ ಎಲ್ಲಾ ನಡುಗಿಸುವಿಕೆಗಳ ಅತ್ಯುನ್ನತ ಬಿಂದುವನ್ನು—ಯೆಹೋವ ದೇವರ ಸಾರ್ವಭೌಮತೆಗೆ ವಿರೋಧವಾಗಿರುವ ಎಲ್ಲಾ ಮಾನವರನ್ನು ನಾಶಮಾಡಲಿರುವ ಒಂದು ಮಹಾ ಭೂಕಂಪವನ್ನು—ಬಹಿರಂಗಪಡಿಸುತ್ತದೆ ಎಂದು ತೋರುತ್ತದೆ.
(ಕತ್ತಲೆಯ ಒಂದು ಸಮಯ
17. ಮಹಾ ಭೂಕಂಪವು ಸೂರ್ಯ, ಚಂದ್ರ ಮತ್ತು ನಕ್ಷತ್ರಗಳನ್ನು ಬಾಧಿಸುವುದು ಹೇಗೆ?
17 ಯೋಹಾನನು ಮುಂದರಿಸುತ್ತಾ ತೋರಿಸುವಂತೆ, ಮಹಾ ಭೂಕಂಪವು ಆಕಾಶಗಳನ್ನು ಕೂಡ ಒಳಗೊಂಡಿರುವ ಭಯಭೀತಿಯ ಘಟನೆಗಳೊಂದಿಗೆ ಜೊತೆಗೂಡಿರುತ್ತದೆ. ಅವನು ಹೇಳುವುದು: “ಮತ್ತು ಸೂರ್ಯನು ಕೂದಲಿನ ಗೋಣಿಯ ಪಟ್ಟೆಯಂತೆ ಕಪ್ಪಾದನು, ಮತ್ತು ಇಡೀ ಚಂದ್ರನು ರಕ್ತದಂತೆ ಆದನು, ಮತ್ತು ಅಂಜೂರ ಮರವು ಬಿರುಗಾಳಿಯಿಂದ ಅಲ್ಲಾಡಿಸಲ್ಪಟ್ಟಾಗ ತನ್ನ ಕಾಯಿಗಳನ್ನು ಉದುರಿಸುವ ಪ್ರಕಾರ, ಆಕಾಶದ ನಕ್ಷತ್ರಗಳು ಭೂಮಿಗೆ ಬಿದ್ದವು.” (ಪ್ರಕಟನೆ 6:12 ಬಿ, 13, NW) ಎಂತಹ ಎದ್ದು ತೋರುವ ಒಂದು ಪ್ರಕೃತಿ ಘಟನೆ! ಈ ಪ್ರವಾದನೆಯು ಅಕ್ಷರಶಃ ನೆರವೇರಲಿರುವುದಾದರೆ, ಪರಿಣಮಿಸುವ ಭೀತಿಕಾರಕ ಅಂಧಕಾರವನ್ನು ನೀವು ಊಹಿಸಬಲ್ಲಿರೋ? ಹಗಲಿನಲ್ಲಿ ಬೆಚ್ಚಗಿನ, ತೃಪ್ತಿಗೊಳಿಸುವ ಸೂರ್ಯಬೆಳಕು ಇನ್ನು ಮುಂದೆ ಇಲ್ಲ! ರಾತ್ರಿಯಲ್ಲಿ ಸ್ನೇಹಭಾವದ, ಬೆಳ್ಳಿ ಹೊಳಪಿನ ಚಂದ್ರನ ಬೆಳಕು ಇನ್ನಿಲ್ಲ! ಮತ್ತು ಆಕಾಶದ ಮಖಮಲ್ಲಿನಂತಹ ಪರದೆಯ ಹಿನ್ನೆಲೆಯಲ್ಲಿ ಅಗಣಿತ ಸಂಖ್ಯೆಯ ನಕ್ಷತ್ರಗಳು ಇನ್ನು ಮುಂದೆ ಮಿನುಗುವುದಿಲ್ಲ. ಬದಲಿಗೆ, ಅಲ್ಲಿ ತಣ್ಣಗಾದ ಪಟ್ಟು ಸಡಿಲಿಸದ ಕತ್ತಲೆಯು ಇರುವುದು.—ಹೋಲಿಸಿ ಮತ್ತಾಯ 24:29.
18. ಯಾವ ರೀತಿಯಲ್ಲಿ ಸಾ. ಶ. ಪೂ. 607 ರಲ್ಲಿ ಯೆರೂಸಲೇಮಿಗಾಗಿ ‘ಆಕಾಶವು ಕತ್ತಲಾಯಿತು’?
18 ಆತ್ಮಿಕ ಅರ್ಥದಲ್ಲಿ, ಅಂತಹ ಒಂದು ಅಂಧಕಾರವನ್ನು ಪ್ರಾಚೀನ ಇಸ್ರಾಯೇಲಿಗಾಗಿ ಪ್ರವಾದಿಸಲಾಗಿತ್ತು. ಯೆರೆಮೀಯನು ಎಚ್ಚರಿಸಿದ್ದು: “ಇಡೀ ದೇಶವು ನಿರ್ಜನತೆಯಿಂದ ಪಾಳುಬೀಳುವುದು, ಮತ್ತು ನಾನು ಸಂಪೂರ್ಣವಾಗಿ ಲಯಮಾಡುವುದನ್ನು ಪೂರೈಸುವುದಿಲ್ಲವೇ? ಆದುದರಿಂದ, ದೇಶವು ಪ್ರಲಾಪಿಸುವುದು, ಮತ್ತು ಮೇಲೆ ಆಕಾಶವು ಖಂಡಿತವಾಗಿಯೂ ಕಪ್ಪಾಗುವುದು.” (ಯೆರೆಮೀಯ 4:27, 28, NW) ಸಾ. ಶ. ಪೂ. 607 ರಲ್ಲಿ ಆ ಪ್ರವಾದನೆಯು ನೆರವೇರಿದಾಗ, ಯೆಹೋವನ ಜನರಿಗೆ ವಿಷಯಗಳು ಖಂಡಿತವಾಗಿಯೂ ಅಂಧಕಾರಮಯವಾಗಿದ್ದವು. ಅವರ ರಾಜಧಾನಿ ನಗರವಾದ ಯೆರೂಸಲೇಮ್ ಬಾಬೆಲಿನವರಿಂದ ಪತನವಾಯಿತು. ಅವರ ಆಲಯವು ನಾಶಗೊಳಿಸಲ್ಪಟ್ಟಿತು, ಮತ್ತು ಅವರ ದೇಶವು ತ್ಯಜಿಸಲ್ಪಟ್ಟಿತು. ಸ್ವರ್ಗದಿಂದ ಅವರನ್ನು ಸಂತೈಸುವ ಯಾವ ಬೆಳಕೂ ಅಲ್ಲಿರಲಿಲ್ಲ. ಬದಲಿಗೆ, ಯೆರೆಮೀಯನು ಪ್ರಲಾಪಿಸುತ್ತಾ ಯೆಹೋವನಿಗೆ ಹೇಳಿದಂತೆ ಅದಿತ್ತು: “ನೀನು ಹತಿಸಿದ್ದೀ; ನೀನು ಯಾವ ಕರುಣೆಯನ್ನೂ ತೋರಿಸಲಿಲ್ಲ. ಪ್ರಾರ್ಥನೆಯು ದಾಟಿಹೋಗಬಾರದೆಂದು ನೀನು ಮೇಘರಾಶಿಗಳಿಂದ ನಿನ್ನನ್ನು ಸಮೀಪಿಸುವ ಹಾದಿಗೆ ತಡೆಹಾಕಿದ್ದೀ.” (ಪ್ರಲಾಪಗಳು 3:43, 44, NW) ಯೆರೂಸಲೇಮಿಗೆ ಆ ದಿವ್ಯ ಕತ್ತಲೆಯು ಮರಣ ಮತ್ತು ನಾಶನದ ಅರ್ಥದಲ್ಲಿತ್ತು.
19. (ಎ) ಪ್ರಾಚೀನ ಬಾಬೆಲಿನ ಕುರಿತಾಗಿ ಆಕಾಶದಲ್ಲಿ ಕತ್ತಲಾಗುವುದರ ಕುರಿತು ದೇವರ ಪ್ರವಾದಿಯಾದ ಯೆಶಾಯನು ಹೇಗೆ ವಿವರಿಸುತ್ತಾನೆ? (ಬಿ) ಯೆಶಾಯನ ಪ್ರವಾದನೆಯು ಯಾವಾಗ ಮತ್ತು ಹೇಗೆ ನೆರವೇರಿತು?
19 ಅನಂತರ, ಪ್ರಾಚೀನ ಬಾಬೆಲಿಗೆ ಸ್ವರ್ಗದಿಂದ ಬಂದ ತದ್ರೀತಿಯ ಕತ್ತಲೆಯು ವಿಪತ್ತನ್ನು ಸೂಚಿಸಿತು. ಇದರ ಕುರಿತು, ದೇವರ ಪ್ರವಾದಿಯು ಹೀಗೆ ಬರೆಯಲು ಪ್ರೇರಿಸಲ್ಪಟ್ಟನು: “ಇಗೋ, ಯೆಹೋವನ ದಿನವು ಬರುತ್ತಿದೆ; ಅದು ಭೂಮಿಯನ್ನು ಹಾಳುಮಾಡಿ ಪಾಪಿಗಳನ್ನು ನಿರ್ಮೂಲಪಡಿಸುವುದಕ್ಕೆ [ಆತನ] ಕೋಪೋದ್ರೇಕದಿಂದಲೂ ತೀಕ್ಷೈರೋಷದಿಂದಲೂ ಕ್ರೂರವಾಗಿರುವದು. ಆಕಾಶದ ತಾರೆಗಳೂ ನಕ್ಷತ್ರರಾಶಿಗಳೂ ಬೆಳಗವು, ಸೂರ್ಯನು ಮೂಡುತ್ತಲೇ ಕತ್ತಲಾಗುವನು, ಚಂದ್ರನು ಪ್ರಕಾಶಿಸನು. ನಾನು ಲೋಕದವರಿಗೆ ಅವರ ಪಾಪದ ಫಲವನ್ನೂ ದುಷ್ಟರಿಗೆ ಅವರ ದುಷ್ಕೃತ್ಯಗಳ ಫಲವನ್ನೂ ತಿನ್ನಿಸಿ ಸೊಕ್ಕಿದವರ ಯೆಶಾಯ 13:9-11) ಬಾಬೆಲು ಸಾ. ಶ. ಪೂ. 539 ರಲ್ಲಿ ಮೇದ್ಯ ಮತ್ತು ಪಾರಸಿಯರ ವಶವಾಗಿ ಪತನಗೊಂಡಾಗ, ಈ ಪ್ರವಾದನೆಯು ನೆರವೇರಿತು. ಬಾಬೆಲು ಲೋಕ ಶಕ್ತಿಯ ಪ್ರಧಾನ ಸ್ಥಾನದಿಂದ ಸದಾಕಾಲಕ್ಕೂ ಪತನಗೊಂಡಾಗ, ಅದಕ್ಕಿದ್ದ ಕತ್ತಲೆಯನ್ನು, ನಿರೀಕ್ಷಾಹೀನತೆಯನ್ನು, ಸಂತೈಸುವ ಯಾವುದೇ ಬೆಳಕಿನ ಕೊರತೆಯನ್ನು ಅದು ಚೆನ್ನಾಗಿ ವರ್ಣಿಸುತ್ತದೆ.
ಸೊಕ್ಕನ್ನು ಅಡಗಿ” ಸುವೆನು. (20. ಮಹಾ ಭೂಕಂಪವು ಹೊಡೆದಾಗ, ವಿಷಯಗಳ ಈ ವ್ಯವಸ್ಥೆಗೆ ಯಾವ ಭೀತಿಕಾರಕ ಫಲಿತಾಂಶವು ಕಾದಿರುತ್ತದೆ?
20 ತದ್ರೀತಿಯಲ್ಲಿ, ಮಹಾ ಭೂಕಂಪವು ಹೊಡೆಯುವಾಗ, ಈ ಇಡೀ ಲೋಕ ವ್ಯವಸ್ಥೆಯು ಸಮಗ್ರ ಅಂಧಕಾರದ ನಿರಾಶೆಯಲ್ಲಿ ಮುಳುಗಿಹೋಗಲಿದೆ. ಸೈತಾನನ ಐಹಿಕ ವ್ಯವಸ್ಥೆಯ ಬೆಳಗುವ, ಕಾಂತಿಬೀರುವ ಜ್ಯೋತಿಗಳು ನಿರೀಕ್ಷೆಯ ಯಾವುದೇ ಕಿರಣವನ್ನು ಪ್ರಕಾಶಿಸವು. ಇಂದು ಈಗಾಗಲೇ, ಭೂಮಿಯ ರಾಜಕೀಯ ಧುರೀಣರು, ವಿಶೇಷವಾಗಿ ಕ್ರೈಸ್ತಪ್ರಪಂಚದಲ್ಲಿ, ಅವರ ಭ್ರಷ್ಟಾಚಾರ, ಸುಳ್ಳು ಹೇಳುವಿಕೆ, ಮತ್ತು ಅನೈತಿಕ ಜೀವನಶೈಲಿಗಾಗಿ ಕುಖ್ಯಾತರಾಗಿರುತ್ತಾರೆ. (ಯೆಶಾಯ 28:14-19) ಅವರು ಇನ್ನು ಮುಂದೆ ವಿಶ್ವಾಸಪಾತ್ರರಾಗಸಾಧ್ಯವಿಲ್ಲ. ಅವರ ನಂದಿಹೋಗುವ ಬೆಳಕು, ಯೆಹೋವನು ನ್ಯಾಯತೀರ್ಪನ್ನು ಜಾರಿಗೊಳಿಸುವಾಗ ಪೂರ್ಣವಾಗಿ ಗ್ರಹಣವಾಗಿ ಹೋಗಲಿರುವುದು. ಭೂಮಿಯ ಮೇಲೆ ಅವರ ಚಂದ್ರನಂತಹ ಪ್ರಭಾವವು ಮರಣಕ್ಕೆ ನಡಿಸುವ, ರಕ್ತದಿಂದೊಡಗೂಡಿದವುಗಳೆಂದು ಬಹಿರಂಗಗೊಳಿಸಲ್ಪಡುವವು. ಅವರ ಲೌಕಿಕ ಪ್ರಸಿದ್ಧ ತಾರೆಗಳು ಪತನಗೊಳ್ಳುವ ಉಲ್ಕಾಪಾತಗಳಂತೆ ಮತ್ತು ಬಿರುಸಿನಿಂದ ಬೀಸುವ ಬಿರುಗಾಳಿಗೆ ಎಲ್ಲೆಡೆಗಳಲ್ಲಿಯೂ ಚದರುವ ಪಕ್ವವಾಗದ ಅಂಜೂರದ ಕಾಯಿಗಳಂತೆ ಇಲ್ಲವಾಗಿ ಹೋಗುವರು. ನಮ್ಮ ಇಡೀ ಭೂಗೋಲವು “ಲೋಕದ ಆದಿ ಮೊದಲುಗೊಂಡು ಇಂದಿನ ತನಕ ಸಂಭವಿಸಿಲ್ಲದ, ಇಲ್ಲ, ಪುನಃ ಸಂಭವಿಸದ ಮಹಾ ಸಂಕಟದಿಂದ” ಅಲ್ಲಾಡಿಸಲ್ಪಡುವುದು. (ಮತ್ತಾಯ 24:21, NW) ಎಂತಹ ಒಂದು ಭಯಾನಕ ಪ್ರತೀಕ್ಷೆ!
“ಆಕಾಶವು” ಅಗಲುತ್ತದೆ
21. ಯೋಹಾನನ ದರ್ಶನದಲ್ಲಿ, “ಆಕಾಶ” ಮತ್ತು “ಪ್ರತಿಯೊಂದು ಪರ್ವತ ಮತ್ತು ಪ್ರತಿಯೊಂದು ದ್ವೀಪ”ದ ಕುರಿತು ಅವನು ಏನನ್ನು ಕಾಣುತ್ತಾನೆ?
21 ಯೋಹಾನನ ದರ್ಶನವು ಮುಂದರಿಯುತ್ತದೆ: “ಮತ್ತು ಆಕಾಶವು ಸುತ್ತಲ್ಪಡುತ್ತಿರುವ ಒಂದು ಸುರುಳಿಯೋಪಾದಿ ಅಗಲಿತು, ಮತ್ತು ಪ್ರತಿಯೊಂದು ಪರ್ವತ ಮತ್ತು ಪ್ರತಿಯೊಂದು ದ್ವೀಪ ಅವುಗಳ ಸ್ಥಾನದಿಂದ ತೆಗೆದು ಹಾಕಲ್ಪಟ್ಟವು.” (ಪ್ರಕಟನೆ 6:14, NW) ಸ್ಪಷ್ಟವಾಗಿ, ಇವುಗಳು ಅಕ್ಷರಾರ್ಥಕ ಆಕಾಶಗಳು ಇಲ್ಲವೇ ಅಕ್ಷರಾರ್ಥಕ ಪರ್ವತಗಳು ಮತ್ತು ದ್ವೀಪಗಳಾಗಿರುವುದಿಲ್ಲ. ಆದರೆ ಅವುಗಳು ಏನನ್ನು ಸಾಂಕೇತಿಸುತ್ತವೆ?
22. ಎದೋಮಿನಲ್ಲಿ ಯಾವ ರೀತಿಯ “ಆಕಾಶಗಳು” “ಪುಸ್ತಕದ ಸುರುಳಿಯಂತೆ ಸುತ್ತಲ್ಪಟ್ಟವು”?
22 “ಆಕಾಶದ” ಕುರಿತಾಗಿ, ತದ್ರೀತಿಯ ಒಂದು ಪ್ರವಾದನೆಯಿಂದ ತಿಳಿವಳಿಕೆಗೆ ನಮಗೆ ಸಹಾಯ ಕೊಡಲಾಗಿದೆ. ಅದು ಎಲ್ಲಾ ಜನಾಂಗಗಳ ವಿರುದ್ಧವಾಗಿರುವ ಯೆಹೋವನ ಕೋಪವನ್ನು ತಿಳಿಸುತ್ತದೆ: “ನಕ್ಷತ್ರ ಸೈನ್ಯವೆಲ್ಲಾ ಕ್ಷಯಿಸುವುದು. ಮತ್ತು ಆಕಾಶಮಂಡಲವು ಸುರುಳಿಯಂತೆ ಸುತ್ತಿಕೊಳ್ಳುವುದು.” (ಯೆಶಾಯ 34:4) ವಿಶೇಷವಾಗಿ ಎದೋಮ್ ಬಾಧೆಯನ್ನನುಭವಿಸಲೇಬೇಕು. ಹೇಗೆ? ಸಾ. ಶ. ಪೂ. 607 ರಲ್ಲಿ ಯೆರೂಸಲೇಮಿನ ನಾಶನವು ಆದ ತಕ್ಷಣವೇ ಅದು ಬಾಬೆಲಿನವರಿಂದ ಆಕ್ರಮಣಕ್ಕೊಳಗಾಯಿತು. ಅಕ್ಷರಶಃ ಆಕಾಶಗಳಲ್ಲಿ ಆ ಸಮಯದಲ್ಲಿ ಯಾವುದೇ ವಿಶೇಷ ಘಟನೆಗಳು ಸಂಭವಿಸಿರುವುದನ್ನು ದಾಖಲಾತಿ ಮಾಡಿರುವುದಿಲ್ಲ. ಆದರೆ ಎದೋಮಿನ “ಆಕಾಶಗಳಲ್ಲಿ” ವಿಪತ್ಕಾರೀ ಘಟನೆಗಳು ನಡೆದಿದ್ದವು. * ಅವಳ ಮಾನವ ಸರಕಾರೀ ಶಕ್ತಿಗಳು ಅವುಗಳ ಆಕಾಶದಷ್ಟು ಎತ್ತರಕ್ಕೋ ಎಂಬಂತೆ ಮೇಲೇರಿಸಲ್ಪಟ್ಟ ಸ್ಥಾನದಿಂದ ಕೆಳಗೆ ದೊಬ್ಬಲ್ಪಟ್ಟವು. (ಯೆಶಾಯ 34:5) ಬೇರೆ ಯಾರಿಗೂ ಯಾವುದೇ ಪ್ರಯೋಜನವಿಲ್ಲದ ಹಳೆಯ ಸುರುಳಿಯೋ ಎಂಬಂತೆ, ಅವುಗಳು “ಸುತ್ತಲ್ಪಟ್ಟವು” ಮತ್ತು ಪಕ್ಕಕ್ಕೆ ದೂಡಲ್ಪಟ್ಟವು.
23. ‘ಸುರುಳಿಯಂತೆ ಅಗಲುವ’ “ಆಕಾಶವು” ಏನಾಗಿರುತ್ತದೆ ಮತ್ತು ಈ ತಿಳಿವಳಿಕೆಯನ್ನು ಪೇತ್ರನ ಮಾತುಗಳು ಕೂಡ ಹೇಗೆ ಸ್ಥಿರೀಕರಿಸುತ್ತವೆ?
23 ಈ ರೀತಿಯಲ್ಲಿ, ‘ಸುರುಳಿಯಂತೆ ಹೋಗಿಬಿಡುವ’ “ಆಕಾಶವು” ಈ ಭೂಮಿಯ ಮೇಲೆ ಆಳುವ ದೇವ-ವಿರೋಧಿ ಸರಕಾರಗಳನ್ನು ಸೂಚಿಸುತ್ತದೆ. ಎಲ್ಲವನ್ನು ಜಯಿಸುವ ಬಿಳಿ ಕುದುರೆಯ ರಾಹುತನಿಂದ ಅವುಗಳು ಕೊನೆಯ ಕಾರ್ಯವಾಗಿ ತೆಗೆಯಲ್ಪಡುವುವು. (ಪ್ರಕಟನೆ 19:11-16, 19-21) ಆರನೆಯ ಮುದ್ರೆಯನ್ನು ಬಿಚ್ಚುವುದರಿಂದ ಸೂಚಿಸಲ್ಪಟ್ಟ ಘಟನೆಗಳ ಕಡೆಗೆ ಪೇತ್ರನು ಮುನ್ನೋಡುತ್ತಾ ಏನು ಹೇಳಿದನೋ ಅದರಿಂದ ಇದು ಸ್ಥಿರೀಕರಿಸಲ್ಪಡುತ್ತದೆ: “ಆದರೆ ಈಗಿರುವ ಆಕಾಶಗಳು ಮತ್ತು ಭೂಮಿ ಬೆಂಕಿಗಾಗಿ ಸಿದ್ಧವಾಗಿಡಲ್ಪಟ್ಟಿರುತ್ತವೆ ಮತ್ತು ನ್ಯಾಯತೀರ್ಪಿನ ದಿನಕ್ಕಾಗಿ ಮತ್ತು ಭಕ್ತಿಹೀನ ಜನರ ನಾಶನ ಕ್ಕಾಗಿ ಕಾದಿರಿಸಲ್ಪಟ್ಟಿರುತ್ತವೆ.” (2 ಪೇತ್ರ 3:7, NW) ಆದರೆ “ಪ್ರತಿಯೊಂದು ಪರ್ವತ ಮತ್ತು ಪ್ರತಿಯೊಂದು ದ್ವೀಪ ಅವುಗಳ ಸ್ಥಾನದಿಂದ ತೆಗೆದು ಹಾಕಲ್ಪಟ್ಟವು” ಎಂಬ ವಾಕ್ಸರಣಿಯ ಕುರಿತಾಗಿ ಏನು?
24. (ಎ) ಬೈಬಲ್ ಪ್ರವಾದನೆಯಲ್ಲಿ, ಪರ್ವತಗಳು ಮತ್ತು ದ್ವೀಪಗಳು ಅಲುಗಾಡಿಸಲ್ಪಡುತ್ತವೆ ಯಾ ಅಸ್ಥಿರಗೊಳಿಸಲ್ಪಡುತ್ತವೆ ಎಂದು ಹೇಳಲಾಗುವುದು ಯಾವಾಗ? (ಬಿ) ನಿನೆವೆಯು ಪತನಗೊಂಡಾಗ, ‘ಪರ್ವತವು ಅಲುಗಾಡಿಸಲ್ಪಟ್ಟದ್ದು’ ಹೇಗೆ?
24 ಬೈಬಲ್ ಪ್ರವಾದನೆಯಲ್ಲಿ, ಮಹಾ ರಾಜಕೀಯ ಉತ್‌ಪವ್ಲನಗಳ ಸಮಯಗಳಲ್ಲಿ ಪರ್ವತಗಳು ಮತ್ತು ದ್ವೀಪಗಳು ಅಲುಗಾಡುತ್ತವೆ ಯಾ ಇನ್ನೊಂದು ರೀತಿಯಲ್ಲಿ ಅಸ್ಥಿರಗೊಳಿಸಲ್ಪಡುತ್ತವೆ ಎಂದು ಹೇಳಲ್ಪಟ್ಟಿದೆ. ಉದಾಹರಣೆಗೆ, ನಿನೆವೆಯ ವಿರುದ್ಧ ಯೆಹೋವನ ನ್ಯಾಯತೀರ್ಪನ್ನು ಮುನ್ನುಡಿಯುವಾಗ, ಪ್ರವಾದಿ ನಹೂಮನು ಬರೆದದ್ದು: “ಆತನ ಕಾರಣದಿಂದ ಪರ್ವತಗಳು ತಾವೇ ಅದುರಿದವು, ಬೆಟ್ಟಗಳು ತಾವು ಕರಗುತ್ತಿದ್ದೇವೆಂದು ಕಂಡುಕೊಂಡವು. ಮತ್ತು ಆತನ ಮುಖದ ಕಾರಣ ಭೂಮಿಯು ಮೇಲೆತ್ತಲ್ಪಡಲಿರುವುದು.” (ನಹೂಮ 1:5, NW) ಸಾ. ಶ. ಪೂ. 632 ರಲ್ಲಿ ನಿನೆವೆಯು ನೈಜವಾಗಿ ಪತನಗೊಂಡಾಗ, ಅಲ್ಲಿ ಅಕ್ಷರಾರ್ಥಕವಾಗಿ ಯಾವುದೇ ಪರ್ವತವು ಒಡೆದಿರುವುದರ ದಾಖಲೆ ಇರುವುದಿಲ್ಲ. ಆದರೆ ಮೊದಲು ಅದರ ಬಲದಲ್ಲಿ ಒಂದು ಪರ್ವತದಂತೆ ತೋರುತ್ತಿದ್ದ ಲೋಕ ಶಕ್ತಿಯೊಂದು ಫಕ್ಕನೆ ಕುಸಿದುಬಿತ್ತು.—ಯೆರೆಮೀಯ 4:24 ಹೋಲಿಸಿರಿ.
25. ವಿಷಯಗಳ ಈ ವ್ಯವಸ್ಥೆಯ ಬರಲಿರುವ ಅಂತ್ಯದಲ್ಲಿ, “ಪ್ರತಿಯೊಂದು ಪರ್ವತ ಮತ್ತು ಪ್ರತಿಯೊಂದು ದ್ವೀಪವು” ಅವುಗಳ ಸ್ಥಾನದಿಂದ ಹೇಗೆ ತೆಗೆಯಲ್ಪಡುವುವು?
25 ಆದಕಾರಣ, ಆರನೆಯ ಮುದ್ರೆಯ ಒಡೆಯುವಿಕೆಯಲ್ಲಿ ಸೂಚಿಸಲ್ಪಟ್ಟ “ಪ್ರತಿಯೊಂದು ಪರ್ವತ ಮತ್ತು ಪ್ರತಿಯೊಂದು ದ್ವೀಪ”ವು, ತಾರ್ಕಿಕವಾಗಿ, ಮಾನವ ಕುಲದವರಲ್ಲಿ ಅನೇಕರಿಗೆ ಬಹಳಷ್ಟು ಸ್ಥಿರವೆಂದು ಭಾಸವಾಗುತ್ತಿದ್ದ ಈ ಲೋಕದ ರಾಜಕೀಯ ಸರಕಾರಗಳು ಮತ್ತು ಅವಲಂಬಿತ ಸಂಸ್ಥೆಗಳಾಗಿರಬೇಕು. ಅವುಗಳಲ್ಲಿ ಈ ಮೊದಲು ಭರವಸೆಯಿಟ್ಟವರ ದಿಗ್ಭ್ರಾಂತಿ ಮತ್ತು ಥರಥರಿಕೆಗೆ ನಡಿಸುವಂತೆ, ಅವುಗಳು ತಮ್ಮ ಸ್ಥಾನದಿಂದ ಅಲುಗಾಡಿಸಲ್ಪಡುವುವು. ಪ್ರವಾದನೆಯು ವರ್ಣಿಸುವುದನ್ನು ಮುಂದರಿಸುವಂತೆ, ಯೆಹೋವನ ಮತ್ತು ಅವನ ಪುತ್ರನ ರೋಷದ ಮಹಾ ದಿನವು—ಸೈತಾನನ ಸಂಸ್ಥೆಯ ಎಲ್ಲವನ್ನು ನಿರ್ಮೂಲಗೊಳಿಸುವ ಕೊನೆಯ ಕಂಪನವು—ಸೇಡು ತೀರಿಸುವದರೊಟ್ಟಿಗೆ ಬಂದಿದೆ ಎನ್ನುವುದರಲ್ಲೇನೂ ಸಂಶಯವೇ ಇಲ್ಲ!
“ನಮ್ಮ ಮೇಲೆ ಬೀಳಿರಿ ಮತ್ತು ನಮ್ಮನ್ನು ಮರೆಮಾಡಿರಿ”
26. ತಮ್ಮ ದುಃಸ್ಥಿತಿಯ ಭೀತಿಯಲ್ಲಿ ದೇವರ ಸಾರ್ವಭೌಮತೆಯನ್ನು ವಿರೋಧಿಸುವ ಮಾನವರು ಹೇಗೆ ವರ್ತಿಸುವರು, ಮತ್ತು ಯಾವ ದಿಗಿಲಿನ ಹೇಳಿಕೆಗಳನ್ನು ಅವರು ವ್ಯಕ್ತಪಡಿಸುವರು?
26 ಯೋಹಾನನ ಮಾತುಗಳು ಹೀಗೆ ಮುಂದರಿಯುತ್ತವೆ: “ಮತ್ತು ಭೂರಾಜರು ಮತ್ತು ಉಚ್ಚ ಪದವಿಯವರು ಮತ್ತು ಮಿಲಿಟರಿ ಅಧಿಪತಿಗಳು ಮತ್ತು ಐಶ್ವರ್ಯವಂತರು ಮತ್ತು ಬಲಿಷ್ಠರು ಮತ್ತು ಪ್ರತಿಯೊಬ್ಬ ದಾಸನು ಮತ್ತು ಪ್ರತಿಯೊಬ್ಬ ಸ್ವತಂತ್ರನು ತಮ್ಮನ್ನು ಗುಹೆಗಳಲ್ಲಿ ಮತ್ತು ಪರ್ವತಗಳ ಬಂಡೆ ರಾಶಿಗಳಲ್ಲಿ ಅಡಗಿಸಿಕೊಂಡರು. ಮತ್ತು ಅವರು ಪರ್ವತಗಳಿಗೆ ಮತ್ತು ಬಂಡೆ ರಾಶಿಗಳಿಗೆ ಹೀಗೆ ಹೇಳುವುದನ್ನು ಮುಂದರಿಸಿದರು: ‘ನಮ್ಮ ಮೇಲೆ ಬೀಳಿರಿ ಮತ್ತು ಸಿಂಹಾಸನಾಸೀನನಾದಾತನ ಮುಖದಿಂದ ಮತ್ತು ಕುರಿಮರಿಯ ಕೋಪದಿಂದ ನಮ್ಮನ್ನು ಮರೆಮಾಡಿರಿ, ಯಾಕಂದರೆ ಅವರ ಕೋಪದ ಮಹಾ ದಿನವು ಬಂದಿದೆ, ಮತ್ತು ಯಾರು ನಿಲ್ಲಲು ಶಕ್ತರು?’”—ಪ್ರಕಟನೆ 6:15-17, NW.
27. ಸಮಾರ್ಯದ ಅಪನಂಬಿಗಸ್ತ ಇಸ್ರಾಯೇಲ್ಯರು ಯಾವ ಗೋಳಾಟವನ್ನು ಮಾಡಿದರು, ಮತ್ತು ಆ ಮಾತುಗಳು ಹೇಗೆ ನೆರವೇರಿಸಲ್ಪಟ್ಟವು?
27 ಹೋಶೇಯನು ಇಸ್ರಾಯೇಲಿನ ಉತ್ತರ ರಾಜ್ಯದ ರಾಜಧಾನಿಯಾದ ಸಮಾರ್ಯದ ಮೇಲೆ ಯೆಹೋವನ ನ್ಯಾಯತೀರ್ಪನ್ನು ಉಚ್ಚರಿಸುವಾಗ, ಅವನಂದದ್ದು: “ಇಸ್ರಾಯೇಲಿನ ಪಾಪವಾದ, ಬೆತ್-ಆವೆನಿನ ಉನ್ನತ [ಪೂಜಾ] ಸ್ಥಳಗಳು ವಾಸ್ತವದಲ್ಲಿ ನಾಶವಾಗುವುವು. ಮುಳ್ಳುಗಿಡಗಳು ಮತ್ತು ಕಳೆಗಳು ತಾವಾಗಿಯೇ ಅವುಗಳ ಯಜ್ಞವೇದಿಯ ಮೇಲೆ ಹುಟ್ಟಿ ಬರುವುವು. ಮತ್ತು ಪರ್ವತಗಳಿಗೆ ಜನರು ವಾಸ್ತವದಲ್ಲಿ ಹೀಗನ್ನುವರು, ‘ನಮ್ಮನ್ನು ಮರೆಮಾಡಿರಿ!’ ಮತ್ತು ಬೆಟ್ಟಗಳಿಗೆ ‘ನಮ್ಮ ಮೇಲೆ ಬೀಳಿರಿ!’” (ಹೋಶೇಯ 10:8, NW) ಈ ಮಾತುಗಳು ಹೇಗೆ ನೆರವೇರಿದವು? ಒಳ್ಳೆಯದು, ಸಾ. ಶ. ಪೂ. 740 ರಲ್ಲಿ ಸಮಾರ್ಯವು ಕ್ರೂರಿ ಅಶ್ಯೂರ್ಯದವರ ವಶವಾದಾಗ, ಪಲಾಯನ ಮಾಡಲು ಇಸ್ರಾಯೇಲ್ಯರಿಗೆ ಯಾವ ಸ್ಥಳವೂ ಇರಲಿಲ್ಲ. ಹೋಶೇಯನ ಮಾತುಗಳು ನಿಸ್ಸಹಾಯಕತೆಯ ಭಾವನೆ, ದುಃಸ್ಥಿತಿಯ ಭೀತಿ, ಮತ್ತು ವಶವಾದ ಜನರು ಹೊಂದುವ ತೊರೆಯಲ್ಪಡುವಿಕೆಯನ್ನು ವ್ಯಕ್ತಪಡಿಸುತ್ತವೆ. ಗತಕಾಲದಲ್ಲಿ ಬಹಳಷ್ಟು ಶಾಶ್ವತವೆಂದು ಅವರಿಗೆ ಭಾಸವಾಗಿದ್ದರೂ ಕೂಡ, ಅಕ್ಷರಶಃ ಬೆಟ್ಟಗಳಾಗಲಿ, ಪರ್ವತಗಳಂತಹ ಸಮಾರ್ಯದ ಸಂಘಟನೆಗಳಾಗಲಿ ಅವರನ್ನು ರಕ್ಷಿಸಶಕ್ತವಾಗಿರಲಿಲ್ಲ.
28. (ಎ) ಯೆರೂಸಲೇಮಿನ ಸ್ತ್ರೀಯರಿಗೆ ಯೇಸುವು ಯಾವ ಎಚ್ಚರಿಕೆಯನ್ನು ಕೊಟ್ಟನು? (ಬಿ) ಯೇಸುವಿನ ಎಚ್ಚರಿಕೆಯು ಹೇಗೆ ನೆರವೇರಿತು?
28 ತದ್ರೀತಿಯಲ್ಲಿ ರೋಮನ್ ಸೈನಿಕರಿಂದ ಯೇಸು ಅವನ ಮರಣಕ್ಕೆ ನಡಿಸಲ್ಪಟ್ಟಾಗ, ಅವನು ಯೆರೂಸಲೇಮಿನ ಸ್ತ್ರೀಯರನ್ನು ಸಂಬೋಧಿಸಿ ಹೇಳಿದ್ದು: “ಜನರು, ‘ಬಂಜೆಯರಾದ ಸ್ತ್ರೀಯರು, ಹುಟ್ಟಿಸದ ಗರ್ಭಗಳು ಮತ್ತು ಪೋಷಿಸದ ಮೊಲೆಗಳು ಧನ್ಯ!’ ಎಂದು ಹೇಳುವ ದಿನಗಳು ಬರುತ್ತಿವೆ. ಆಗ ಅವರು ಪರ್ವತಗಳಿಗೆ, ‘ನಮ್ಮ ಮೇಲೆ ಬೀಳಿರಿ!’ ಮತ್ತು ಬೆಟ್ಟಗಳಿಗೆ, ‘ನಮ್ಮನ್ನು ಮರೆ ಮಾಡಿರಿ!’ ಎಂದು ಹೇಳಲಾರಂಭಿಸುವರು.” (ಲೂಕ 23:29, 30, NW) ಸಾ. ಶ. 70 ರಲ್ಲಿ ರೋಮನರಿಂದ ಯೆರೂಸಲೇಮ್ ನಾಶನವು ಸರಿಯಾಗಿಯೇ ದಾಖಲಾತಿಹೊಂದಿದೆ, ಮತ್ತು ಯೇಸುವಿನ ಮಾತುಗಳಿಗೂ ಹೋಶೇಯನ ಮಾತುಗಳ ತದ್ರೀತಿಯ ಅರ್ಥವಿತ್ತು ಎಂದು ಸಾಬೀತಾಗುತ್ತದೆ. ಆಗ ಯೂದಾಯದಲ್ಲಿ ಉಳಿದುಕೊಂಡಿದ್ದ ಯೆಹೂದ್ಯರಿಗೆ ಅಡಗಿಕೊಳ್ಳುವ ಯಾವುದೇ ಸ್ಥಳವು ಇರಲಿಲ್ಲ. ಯೆರೂಸಲೇಮಿನಲ್ಲಿ ಅವರು ಎಲ್ಲಿಯೇ ಅಡಗಿಕೊಳ್ಳಲು ಪ್ರಯತ್ನಿಸಿದಾಗಲೂ, ಯಾ ಮಸಾಡದ ಪರ್ವತ ಶಿಖರದ ತಾಣಕ್ಕೆ ಅವರು ಪಲಾಯನ ಮಾಡಿದಾಗಲೂ, ಯೆಹೋವನ ನ್ಯಾಯತೀರ್ಪಿನ ಹಿಂಸಾಚಾರದ ವ್ಯಕ್ತಪಡಿಸುವಿಕೆಯಿಂದ ಪಾರಾಗಲು ಅವರು ಅಶಕ್ತರಾಗಿದ್ದರು.
29. (ಎ) ಯೆಹೋವನ ಕೋಪದ ದಿನವು ಬರುವಾಗ, ವಿಷಯಗಳ ಈ ವ್ಯವಸ್ಥೆಯನ್ನು ಬೆಂಬಲಿಸಲು ಬದ್ಧರಾಗಿರುವವರ ಗತಿಯು ಏನಾಗಲಿರುವುದು? (ಬಿ) ಯೆಹೋವನು ತನ್ನ ರೋಷವನ್ನು ವ್ಯಕ್ತಪಡಿಸುವಾಗ, ಯೇಸುವಿನ ಯಾವ ಪ್ರವಾದನೆಯು ನೆರವೇರಲಿರುವುದು?
29 ಈಗ, ಆರನೆಯ ಮುದ್ರೆಯ ಒಡೆಯುವಿಕೆಯು ಯೆಹೋವನ ರೋಷದ ಬರಲಿರುವ ದಿನದ ಸಮಯದಲ್ಲಿ ತದ್ರೀತಿಯ ವಿಷಯವೊಂದು ಸಂಭವಿಸಲಿದೆ ಎಂದು ತೋರಿಸಿದೆ. ಈ ಐಹಿಕ ವಿಷಯಗಳ ವ್ಯವಸ್ಥೆಯ ಕೊನೆಯ ಅಲುಗಾಟದಲ್ಲಿ, ಅದಕ್ಕೆ ಬೆಂಬಲಕೊಡಲು ಬದ್ಧರಾಗಿರುವವರೆಲ್ಲರೂ, ಒಂದು ಅಡಗಿಕೊಳ್ಳುವ ಸ್ಥಳಕ್ಕಾಗಿ ಹತಾಶೆಯಿಂದ ಹುಡುಕುವರು, ಆದರೆ ಅವರು ಒಂದನ್ನು ಕೂಡ ಕಂಡುಕೊಳ್ಳರು. ಸುಳ್ಳು ಧರ್ಮವಾದ ಮಹಾ ಬಾಬೆಲ್, ಈಗಾಗಲೇ ದುಃಖಾರ್ತ ರೀತಿಯಲ್ಲಿ ಅವರನ್ನು ನಿಷ್ಫಲಗೊಳಿಸಿದೆ. ಅಕ್ಷರಶಃ ಪರ್ವತಗಳ ಗುಹೆಗಳಾಗಲಿ, ಯಾ ಸಾಂಕೇತಿಕ ಪರ್ವತದಂತಹ ರಾಜಕೀಯ ಮತ್ತು ವಾಣಿಜ್ಯ ಸಂಸ್ಥೆಗಳು ಅವರಿಗೆ ಹಣಕಾಸಿನ ಭದ್ರತೆಯನ್ನಾಗಲಿ ಯಾ ಇನ್ನಿತರ ಯಾವುದೇ ರೀತಿಯ ಸಹಾಯವನ್ನಾಗಲಿ ಒದಗಿಸಲಾರವು. ಯೆಹೋವನ ಕೋಪದಿಂದ ಅವರಿಗೆ ಯಾವುದೂ ಆಶ್ರಯ ನೀಡಲಾರದು. ಅವರ ಭಯವನ್ನು ಯೇಸುವು ಚೆನ್ನಾಗಿ ವರ್ಣಿಸಿರುತ್ತಾನೆ: “ಆಗ ಮನುಷ್ಯ ಕುಮಾರನ ಸೂಚನೆಯು ಆಕಾಶದಲ್ಲಿ ತೋರಿಬರುವುದು, ಮತ್ತು ಆಗ ಭೂಮಿಯ ಎಲ್ಲಾ ಕುಲಗಳು ಶೋಕದಿಂದ ಎದೆಬಡಿದುಕೊಳ್ಳುವರು, ಮತ್ತು ಮನುಷ್ಯ ಕುಮಾರನು ಬಲದಿಂದ ಮತ್ತು ಮಹಾ ಮಹಿಮೆಯಿಂದ ಆಕಾಶದ ಮೇಘಗಳ ಮೇಲೆ ಬರುವುದನ್ನು ಅವರು ಕಾಣುವರು.”—ಮತ್ತಾಯ 24:30, NW.
30. (ಎ) ‘ಯಾರು ನಿಲ್ಲಲು ಶಕ್ತರು?’ ಎಂಬ ಪ್ರಶ್ನೆಯಲ್ಲಿ ಏನು ಒಳಗೂಡಿರುತ್ತದೆ? (ಬಿ) ಯೆಹೋವನ ನ್ಯಾಯತೀರ್ಪಿನ ಸಮಯದಲ್ಲಿ ಯಾರಾದರೂ ನಿಲ್ಲಲು ಶಕ್ತರಾಗಿರುವರೋ?
30 ಹೌದು, ಬಿಳಿ ಕುದುರೆಯ ವಿಜಯಗಳಿಸುವ ರಾಹುತನ ಅಧಿಕಾರವನ್ನು ಅಂಗೀಕರಿಸಲು ನಿರಾಕರಿಸುವವರೆಲ್ಲರು, ತಮ್ಮ ತಪ್ಪನ್ನು ಒಪ್ಪಿಕೊಳ್ಳುವಂತೆ ಬಲಾತ್ಕರಿಸಲ್ಪಡುವರು. ಸ್ವ-ಇಚ್ಛೆಯಿಂದ ಸೈತಾನನ ಸಂತಾನದ ಭಾಗವಾದ ಮಾನವರು ಸೈತಾನನ ಲೋಕವು ಗತಿಸಿಹೋಗುವಾಗ ನಾಶನವನ್ನು ಎದುರಿಸಲಿರುವರು. (ಆದಿಕಾಂಡ 3:15; 1 ಯೋಹಾನ 2:17) ಆ ಸಮಯದಲ್ಲಿ, ಲೋಕ ಪರಿಸ್ಥಿತಿಯು ಅನೇಕರು ಕಾರ್ಯತಃ “ಯಾರು ನಿಲ್ಲಲು ಶಕ್ತರು?” ಎಂದು ಕೇಳುವಂತಿರುವುದು. ಯೆಹೋವನ ನ್ಯಾಯತೀರ್ಪಿನ ಆ ದಿನದಲ್ಲಿ ಯೆಹೋವನ ಮುಂದೆ ಒಪ್ಪಿಗೆ ಪಡೆದವರಾಗಿ ನಿಲ್ಲಲು ಯಾರೂ ಕೂಡ ಶಕ್ತರಿಲ್ಲ ಎಂದು ಅವರು ಪ್ರಾಯಶಃ ಎಣಿಸುತ್ತಿರಬಹುದು. ಆದರೆ ಪ್ರಕಟನೆಯ ಪುಸ್ತಕ ಮುಂದರಿಯುತ್ತಾ ತೋರಿಸುವಂತೆ, ಅವರು ತಪ್ಪಾಗಿ ತೋರಿಬರಲಿರುವರು.
[ಅಧ್ಯಯನ ಪ್ರಶ್ನೆಗಳು]
^ ಪ್ಯಾರ. 3 ಅಕ್ಷರಶಃ ಭೂಕಂಪಗಳು ಕೆಲವೊಮ್ಮೆ ನೆಲಗುಡುಗಿನ ಗೊಂದಲದೊಂದಿಗೆ ಆರಂಭಗೊಳ್ಳುತ್ತವೆ, ಇದು ನಾಯಿಗಳು ಬೊಗಳುವಂತೆ ಇಲ್ಲವೇ ಚಡಪಡಿಸುವ ರೀತಿಯಲ್ಲಿ ವರ್ತಿಸುವಂತೆ ಮತ್ತು ಇತರ ಪ್ರಾಣಿ ಮತ್ತು ಮೀನುಗಳನ್ನು ಉದ್ರೇಕಿಸುವಂತೆ ನಡಿಸುತ್ತದಾದರೂ, ವಾಸ್ತವವಾದ ಕಂಪನವು ತಟ್ಟುವ ತನಕ ಮಾನವನು ನಿಸ್ಸಂಶಯವುಳ್ಳವನಾಗಿರಬಹುದು.—ಅವೇಕ್! ಜ ಲೈ 8, 1982ರ ಪುಟ 14 ನೋಡಿರಿ.
^ ಪ್ಯಾರ. 4 ಹೆಚ್ಚಿನ ವಿವರಕ್ಕಾಗಿ, ಪುಟಗಳು 22, 24 ನೋಡಿರಿ.
^ ಪ್ಯಾರ. 9 ಮೂವತ್ತೈದಕ್ಕಿಂತಲೂ ಹೆಚ್ಚು ವರ್ಷಗಳಲ್ಲಿ, 1896 ರಿಂದ 1931ರ ತನಕ ಲೂಕ 21:25, 28, 31ರ ಮಾತುಗಳು ವಾಚ್‌ಟವರ್ ಪತ್ರಿಕೆಯ ಮುಖಪುಟದ ಮೇಲೆ, ಉಲ್ಬಣಗೊಂಡಿರುವ ಸಮುದ್ರದ ಮೇಲೆ ತುಫಾನಿನ ಆಕಾಶವನ್ನು ಬೆಳಗಿಸುವ ಒಂದು ಲೈಟ್‌ಹೌಸಿನ ಹಿನ್ನೆಲೆಯಲ್ಲಿ ಉಲ್ಲೇಖಿಸಲ್ಪಡುತ್ತಿದ್ದವು.
^ ಪ್ಯಾರ. 11 ಉದಾಹರಣೆಗೆ, 1931ರ ವಿಶೇಷ ಚಟುವಟಿಕೆಯೊಂದರಲ್ಲಿ ಯೆಹೋವನ ಸಾಕ್ಷಿಗಳು ವೈಯಕ್ತಿಕವಾಗಿ ದ ಕಿಂಗ್‌ಡಮ್, ದ ಹೋಪ್ ಆಫ್ ದ ವಲ್ಡ್ ಪುಸ್ತಿಕೆಯನ್ನು ಭೂವ್ಯಾಪಕವಾಗಿ ವೈದಿಕರಿಗೆ, ರಾಜಕೀಯಸ್ಥರಿಗೆ, ಮತ್ತು ವ್ಯಾಪಾರಸ್ಥರಿಗೆ ನೀಡಿದರು.
^ ಪ್ಯಾರ. 22 “ಆಕಾಶಗಳು” ಶಬ್ದದ ತದ್ರೂಪದ ಉಪಯೋಗದಲ್ಲಿ ಯೆಶಾಯ 65:17, 18 ರಲ್ಲಿ “ನೂತನಾಕಾಶಗಳ” ಪ್ರವಾದನೆಗೆ ಅದರ ಮೊದಲ ನೆರವೇರಿಕೆಯು, ಬಾಬೆಲಿನ ದೇಶಭ್ರಷ್ಟತೆಯಿಂದ ಯೆಹೂದ್ಯರ ಹಿಂದೆರಳುವಿಕೆಯ ಅನಂತರ ವಾಗ್ದತ್ತ ದೇಶದಲ್ಲಿ ಸ್ಥಾಪಿತಗೊಂಡ ದೇಶಾಧಿಪತಿ ಜೆರುಬ್ಬಾಬೆಲ್ ಮತ್ತು ಮಹಾಯಾಜಕನಾದ ಯೆಹೋಶುವನನ್ನು ಒಳಗೊಂಡಿದ್ದ ಹೊಸ ಸರಕಾರೀ ವ್ಯವಸ್ಥೆಯಿಂದ ಆಯಿತು.—2 ಪೂರ್ವಕಾಲವೃತ್ತಾಂತ 36:23; ಎಜ್ರ 5:1, 2; ಯೆಶಾಯ 44:28.
[ಅಧ್ಯಯನ ಪ್ರಶ್ನೆಗಳು]
[ಪುಟ 216 ರಲ್ಲಿರುವ ಚೌಕ]
ಮುನ್ನೋಡಲ್ಪಟ್ಟ 1914
“ದೇವರ ರಾಜ್ಯವು ಅಂತ್ಯಗೊಂಡದ್ದು, ರಾಜ ಮುಕುಟ ತೆಗೆಯಲ್ಪಟ್ಟದ್ದು, ಮತ್ತು ಭೂಮಿಯೆಲ್ಲ ಅನ್ಯರಿಗೆ ಕೊಡಲ್ಪಟ್ಟದ್ದು ಸಾ. ಶ. ಪೂ. 606 ರಲ್ಲಿ. ಕ್ರಿ. ಪೂ. 606 ರಿಂದ 2520 ವರ್ಷಗಳು ಕ್ರಿ. ಶ. 1914 ರಲ್ಲಿ ಅಂತ್ಯಗೊಳ್ಳುವುವು.” *—ದ ತ್ರೀ ವಲ್ಡ್, 1877 ರಲ್ಲಿ ಪ್ರಕಾಶಿಸಲ್ಪಟ್ಟಿತು, ಪುಟ 83.
“ಬೈಬಲಿನ ಪುರಾವೆಯು ‘ಅನ್ಯ ಜನಾಂಗಗಳ ಸಮಯವು’ ಕ್ರಿ. ಪೂ. 606 ನೆಯ ವರ್ಷದಿಂದ ಕ್ರಿ. ಶ. 1914ನ್ನು ಸೇರಿಸಿ, 2520 ವರ್ಷಗಳ ಕಾಲಾವಧಿಯೆನ್ನುವುದರಲ್ಲಿ ಸ್ಪಷ್ಟ ಮತ್ತು ಬಲವಾದದ್ದಾಗಿದೆ.”—ಸಡ್ಟೀಸ್ ಇನ್ ದ ಸ್ಕ್ರಿಪ್ಚರ್ಸ್, ಸಂಪುಟ 2, ಸಿ. ಟಿ. ರಸಲ್‌ರಿಂದ ಬರೆಯಲ್ಪಟ್ಟು, 1889 ರಲ್ಲಿ ಪ್ರಕಾಶಿತ, ಪುಟ 79.
ಚಾರ್ಲ್ಸ್ ಟೇಜ್ ರಸಲ್ ಮತ್ತು ಅವರ ಸಹ ಬೈಬಲ್ ವಿದ್ಯಾರ್ಥಿಗಳು, 1914 ಅನ್ಯ ಜನಾಂಗಗಳ ಕಾಲದ ಇಲ್ಲವೆ ಜನಾಂಗಗಳಿಗಾಗಿ ನೇಮಿಸಲ್ಪಟ್ಟ ಸಮಯದ ಅಂತ್ಯವನ್ನು ಗುರುತಿಸುವುದೆಂದು ದಶಕಗಳ ಮೊದಲೇ ಅರಿತಿದ್ದರು. (ಲೂಕ 21:24) ಇದರ ಅರ್ಥವೇನು ಎಂದು ಆರಂಭದ ದಿನಗಳಲ್ಲಿ ಪೂರ್ಣವಾಗಿ ಅವರಿಗೆ ತಿಳಿಯದೆ ಇದ್ದರೂ, 1914 ಲೋಕ ಇತಿಹಾಸದಲ್ಲಿ ಒಂದು ಪ್ರಮುಖ ಸಂಧಿಕಾಲವಾಗಲಿರುವುದು ಎನ್ನುವ ಬಗ್ಗೆ ಮನವರಿಕೆಯುಳ್ಳವರಾಗಿದ್ದರು, ಮತ್ತು ಅವರು ಸರಿಯಾಗಿದ್ದರು. ಮುಂದಿನ ವಾರ್ತಾಪತ್ರದ ಉಲ್ಲೇಖವನ್ನು ಗಮನಿಸಿರಿ:
“ಭಯಂಕರ ಯುದ್ಧದ ಸ್ಫೋಟವು ಯೂರೋಪಿನಲ್ಲಿ ಒಂದು ಅಸಾಮಾನ್ಯ ಪ್ರವಾದನೆಯನ್ನು ನೆರವೇರಿಸಿದೆ. ಗತಿಸಿದ ಕಾಲು ಶತಮಾನದಿಂದಲೂ, ಪ್ರಚಾರಕರ ಮೂಲಕ ಮತ್ತು ವಾರ್ತಾ ಮಾಧ್ಯಮದ ಮೂಲಕ, ಮಿಲೆನಿಯಲ್ ಡಾನರ್ಸ್ ಎಂದು ಹೆಚ್ಚು ಪ್ರಸಿದ್ಧರಾದ ‘ಅಂತ್ರರಾಷ್ಟ್ರೀಯ ವೇದ ವಿದ್ಯಾರ್ಥಿಗಳು,’ ಬೈಬಲಿನಲ್ಲಿ ಪ್ರವಾದಿಸಲ್ಪಟ್ಟ ಕೋಪದ ದಿನವು 1914 ರಲ್ಲಿ ಉದಯಿಸುವುದೆಂದು ಲೋಕದಲ್ಲಿಲ್ಲಾ ಪ್ರಚುರಿಸುತ್ತಾ ಇದ್ದರು. ಇಸವಿ ‘1914 ಕ್ಕಾಗಿ ಮುನ್ನೋಡಿರಿ!’ ಎಂಬುದು ನೂರಾರು ಸಂಚರಣಾ ಸುವಾರ್ತಿಕರ ಕೂಗು ಆಗಿತ್ತು.”—ದ ವರ್ಲ್ಡ್, ನ್ಯೂ ರ್ಕ್‌ನ ಒಂದು ವಾರ್ತಾಪತ್ರಿಕೆ, ಆಗಸ್ಟ್ 30, 1914.
[ಅಧ್ಯಯನ ಪ್ರಶ್ನೆಗಳು]
^ ಪ್ಯಾರ. 75 ದೈವಾಯುತವಾಗಿ, “ಕ್ರಿ. ಪೂ.” ಮತ್ತು “ಕ್ರಿ. ಶ.”ದ ನಡುವೆ ಒಂದು ಸೊನ್ನೆ ವರ್ಷ ಇಲ್ಲ ಎಂದು ಆ ವೇದ ವಿದ್ಯಾರ್ಥಿಗಳಿಗೆ ತಿಳಿದಿರಲಿಲ್ಲ. ಅನಂತರ, ಸಂಶೋಧನೆಯು ಕ್ರಿ. ಪೂ. 606ನ್ನು ಸಾ. ಶ. ಪೂ. 607 ಆಗಿ ಬದಲಾಯಿಸಬೇಕಾಗಿ ಬಂದಾಗ, ಸೊನ್ನೆ ವರ್ಷವನ್ನು ತೆಗೆಯಬೇಕಾಗಿ ಬಂತು, ಹೀಗೆ, ಭವಿಷ್ಯವಾಣಿಯು ಇನ್ನೂ ಸರಿಯಾಗಿಯೇ “ಕ್ರಿ. ಶ. 1914” ಆಗಿ ಉಳಿಯಿತು.—ವಾಚ್ ಟವರ್ ಸೊಸೈಟಿಯಿಂದ 1943 ರಲ್ಲಿ ಪ್ರಕಾಶಿತವಾದ “ದ ಟ್ರೂತ್ ಷಲ್ ಮೇಕ್ ಯು ಫ್ರೀ” ಪುಟ 239ನ್ನು ನೋಡಿರಿ.
[ಪುಟ 217 ರಲ್ಲಿರುವ ಚೌಕ]
1914—ಒಂದು ಸಂಧಿಕಾಲ
ಒಂದು ಕೃತಿ ಪೊಲಿಟಿಕೆನ್ಸ್ ವರ್ಡಿನ್ಸ್‌ಹಿಸ್ಟೊರಿ—ಹಿಸ್ಟೊರಿ
ಯನ್ಸ್ ಮಾಗ್ಟ್ ಆಗ್ ಮೆನಿಂಗ್ (ರಾಜಕೀಯದ ಲೋಕ ಇತಿಹಾಸ—ಇತಿಹಾಸದ ಶಕ್ತಿ ಮತ್ತು ಅರ್ಥ), 1987 ರಲ್ಲಿ ಕೋಪನ್‌ಹೇಗನ್‌ನಲ್ಲಿ ಪ್ರಕಾಶಿತವಾಗಿದ್ದು ಅದರ 40 ನೆಯ ಪುಟದಲ್ಲಿ ಈ ಮುಂದಿನ ಅವಲೋಕನೆಯನ್ನು ಮಾಡುತ್ತದೆ:
“ಹತ್ತೊಂಭತ್ತನೆಯ ಶತಕದ ನಂಬಿಕೆಯು ಪ್ರಗತಿಯಲ್ಲಿರುವಾಗಲೇ 1914 ರಲ್ಲಿ ಒಂದು ಮಾರಕ ಹೊಡೆತವನ್ನು ಪಡೆಯಿತು. ಯುದ್ಧವು ಸ್ಫೋಟಗೊಳ್ಳುವುದಕ್ಕೆ ಮುಂಚಿನ ವರ್ಷ, ಡೇನಿಷ್ ಇತಿಹಾಸಕಾರ ಮತ್ತು ರಾಜಕೀಯ ಧುರೀಣನಾದ ಪೀಟರ್ ಮಂಚ್ ಆಶಾವಾದಿಯಾಗಿ ಬರೆದದ್ದು: ‘ಎಲ್ಲಾ ಪುರಾವೆಯು ಮಹಾ ಐರೋಪ್ಯ ಶಕ್ತಿಗಳ ನಡುವೆ ಯುದ್ಧವೊಂದರ ಸಂಭಾವ್ಯತೆಯ ವಿರುದ್ಧವಿದೆ. “ಯುದ್ಧದ ಅಪಾಯವು” ಕೂಡ ಭವಿಷ್ಯದಲ್ಲಿ—1871 ರಿಂದ ಸಮಯದಿಂದ ಸಮಯಕ್ಕೆ ಮಾಡಿದಂತೆ,—ಕಾಣೆಯಾಗುವುದು.’
“ಅದಕ್ಕೆ ವ್ಯತಿರಿಕ್ತವಾಗಿ, ಅವನ ನಂತರದ ನೆನಹುಗಳಲ್ಲಿ ನಾವು ಓದುವುದು: ‘1914ರ ಯುದ್ಧದ ಸ್ಫೋಟನವು ಮಾನವಕುಲದ ಇತಿಹಾಸದ ಒಂದು ಮಹಾ ಸಂಧಿಕಾಲವಾಗಿದೆ. ಎಲ್ಲಿ ಹವ್ಯಾಸಗಳನ್ನು ಸಮಂಜಸತೆಯ ಭದ್ರತೆಯಲ್ಲಿ ಹಿಂಬಾಲಿಸಬಹುದಿತ್ತೋ ಆ ಪ್ರಗತಿಯ ಒಂದು ಹೊಂಬೆಳಕಿನ ಯುಗದಿಂದ, ಎಲ್ಲೆಡೆಗಳಲ್ಲಿಯೂ ವಿಪತ್ತಿನ, ದಿಗಿಲುಗೊಳಿಸುವ, ಮತ್ತು ದ್ವೇಷದ ಒಂದು ಯುಗವನ್ನು ನಾವು ಪ್ರವೇಶಿಸಿದೆವು. ಈ ಸಮಯದಲ್ಲಿ ನಮ್ಮ ಮೇಲೆ ಬಿದ್ದ ಕತ್ತಲೆಯು ಮನುಷ್ಯನು ತನಗಾಗಿ ಸಹಸ್ರಾರು ವರ್ಷಗಳಲ್ಲಿ ಸೃಷ್ಟಿಸಿದ ಇಡೀ ಸಾಂಸ್ಕೃತಿಕ ರಚನೆಯ ಶಾಶ್ವತ ನಾಶನದ ಅರ್ಥದಲ್ಲಿದೆಯೋ ಎಂದು ಯಾವನೂ ಹೇಳಸಾಧ್ಯವಿರಲಿಲ್ಲ ಮತ್ತು ಇಂದು ಸಹ ಯಾರೂ ಹೇಳಸಾಧ್ಯವಿಲ್ಲ.’”
[Picture on page 110]
‘ಪ್ರತಿಯೊಂದು ಪರ್ವತವು ಅದರ ಸ್ಥಾನದಿಂದ ತೆಗೆಯಲ್ಪಟ್ಟಿತು’
[Picture on page 111]
ಅವರು ತಮ್ಮನ್ನು ಗುಹೆಗಳಲ್ಲಿ ಅಡಗಿಸಿಕೊಂಡರು