ಪರಿಶಿಷ್ಟ ಎ
ನಾನು ಮಾತನ್ನ ಹೇಗೆ ಶುರುಮಾಡ್ಲಿ?
ಒಳ್ಳೇ ಮನಸ್ಸಿರೋ ಜನ್ರು ಸತ್ಯ ಕೇಳಿಸ್ಕೊಂಡ ತಕ್ಷಣ ಇದೇ ಸತ್ಯ ಅಂತ ಅವ್ರಿಗೆ ಗೊತ್ತಾಗುತ್ತೆ ಅಂತ ಯೇಸು ಹೇಳಿದನು. (ಯೋಹಾ. 10:4, 27) ಅದಕ್ಕೇ ನಾವು ಜನ್ರ ಹತ್ರ ಮಾತಾಡುವಾಗೆಲ್ಲ ಸರಳವಾಗಿರೋ ಬೈಬಲ್ ಸತ್ಯಗಳನ್ನ ಹೇಳೋಕೆ ಪ್ರಯತ್ನ ಮಾಡಬೇಕು. “ನಿಮಗೆ ಗೊತ್ತಾ?” “ನೀವಿದನ್ನ ಯಾವತ್ತಾದ್ರೂ ಕೇಳಿಸ್ಕೊಂಡಿದ್ರಾ?” ಅಂತ ಹೇಳ್ತಾ ನಾವು ಬೈಬಲ್ ಸತ್ಯನ ಪರಿಚಯಿಸಬಹುದು. ಆಮೇಲೆ ಅದಕ್ಕೆ ಸಂಬಂಧಪಟ್ಟ ಬೈಬಲ್ ವಚನ (ಗಳನ್ನ) ಹೇಳಿ ವಿವರಿಸಬಹುದು. ಜನ್ರಿಗೆ ಸರಳವಾದ ಬೈಬಲ್ ಸತ್ಯಗಳನ್ನ ಹೇಳೋದು ಅವ್ರ ಹೃದಯದಲ್ಲಿ ಬೀಜ ಬಿತ್ತಿದ ಹಾಗೆ. ಅದನ್ನ ದೇವರೇ ಬೆಳೆಸ್ತಾನೆ.—1 ಕೊರಿಂ. 3:6, 7.
ಭವಿಷ್ಯ
-
1. ನಡೀತಿರೋ ಘಟನೆಗಳು ಮತ್ತು ಜನ್ರ ಸ್ವಭಾವ ಮುಂದೆ ಒಳ್ಳೇದಾಗುತ್ತೆ ಅಂತ ತೋರಿಸುತ್ತೆ.—ಮತ್ತಾ. 24:3, 7, 8; ಲೂಕ 21:10, 11; 2 ತಿಮೊ. 3:1-5.
-
2. ಈ ಭೂಮಿ ಯಾವತ್ತೂ ನಾಶ ಆಗಲ್ಲ.—ಕೀರ್ತ. 104:5; ಪ್ರಸಂ. 1:4.
-
3. ಇಡೀ ಭೂಮಿ ಸುಂದರ ಪರದೈಸ್ ಆಗುತ್ತೆ.—ಯೆಶಾ. 35:1, 2; ಪ್ರಕ. 11:18.
-
4. ಎಲ್ರಿಗೂ ಒಳ್ಳೇ ಆರೋಗ್ಯ ಇರುತ್ತೆ.—ಯೆಶಾ. 33:24; 35:5, 6.
-
5. ಜನ್ರು ಭೂಮಿ ಮೇಲೆ ಸಾವಿಲ್ಲದೆ ಬದುಕ್ತಾರೆ.—ಕೀರ್ತ. 37:29; ಮತ್ತಾ. 5:5.
ಕುಟುಂಬ
-
6. ಗಂಡ “ತನ್ನನ್ನ ಪ್ರೀತಿಸೋ ತರಾನೇ ತನ್ನ ಹೆಂಡತಿಯನ್ನ ಪ್ರೀತಿಸಬೇಕು.”—ಎಫೆ. 5:33; ಕೊಲೊ. 3:19.
-
7. ಹೆಂಡ್ತಿ ಗಂಡನಿಗೆ ತುಂಬ ಗೌರವ ಕೊಡಬೇಕು.—ಎಫೆ. 5:33; ಕೊಲೊ. 3:18.
-
8. ಗಂಡ-ಹೆಂಡ್ತಿ ಒಬ್ರಿಗೊಬ್ರು ನಿಯತ್ತಾಗಿ ಇರಬೇಕು.—ಮಲಾ. 2:16; ಮತ್ತಾ. 19:4-6, 9; ಇಬ್ರಿ. 13:4.
-
9. ಮಕ್ಕಳು ಅಪ್ಪಅಮ್ಮ ಮಾತು ಕೇಳಿದ್ರೆ, ಗೌರವ ಕೊಟ್ರೆ ಅವ್ರಿಗೇ ಒಳ್ಳೇದಾಗುತ್ತೆ.—ಜ್ಞಾನೋ. 1:8, 9; ಎಫೆ. 6:1-3.
ದೇವರು
-
10. ನಮ್ಮನ್ನ ಸೃಷ್ಟಿ ಮಾಡಿರೋ ದೇವರಿಗೆ ಒಂದು ಹೆಸ್ರಿದೆ.—ಕೀರ್ತ. 83:18; ಯೆರೆ. 10:10.
-
11. ದೇವರು ನಮಗೆ ಏನೆಲ್ಲ ಹೇಳಬೇಕೋ ಅದನ್ನೆಲ್ಲ ಒಂದು ಪುಸ್ತಕದಲ್ಲಿ ಬರೆಸಿಟ್ಟಿದ್ದಾನೆ.—2 ತಿಮೊ. 3:16, 17; 2 ಪೇತ್ರ 1:20, 21.
-
12. ದೇವರು ಭೇದಭಾವ ಮಾಡಲ್ಲ.—ಧರ್ಮೋ. 10:17; ಅ. ಕಾ. 10:34, 35.
-
13. ದೇವರು ನಮಗೆ ಸಹಾಯ ಮಾಡೋಕೆ ಇಷ್ಟಪಡ್ತಾನೆ.—ಕೀರ್ತ. 46:1; 145:18, 19.
ಪ್ರಾರ್ಥನೆ
-
14. ನಾವು ಪ್ರಾರ್ಥನೆ ಮಾಡಬೇಕು ಅಂತ ದೇವರು ಇಷ್ಟಪಡ್ತಾನೆ.—ಕೀರ್ತ. 62:8; 65:2; 1 ಪೇತ್ರ 5:7.
-
15. ನಾವು ಹೇಗೆ ಪ್ರಾರ್ಥನೆ ಮಾಡಬೇಕು ಅಂತ ಬೈಬಲಲ್ಲಿದೆ.—ಮತ್ತಾ. 6:7-13; ಲೂಕ 11:1-4.
-
16. ನಾವು ಯಾವಾಗ್ಲೋ ಒಂದುಸಲ ಅಲ್ಲ, ಯಾವಾಗ್ಲೂ ಪ್ರಾರ್ಥನೆ ಮಾಡಬೇಕು.—ಮತ್ತಾ. 7:7, 8; 1 ಥೆಸ. 5:17.
ಯೇಸು
-
17. ಯೇಸು ತುಂಬಾ ವರ್ಷಗಳ ಹಿಂದೆ ಜೀವಿಸಿದ್ರೂ ಅವಾಗ ಹೇಳಿದ ವಿಷ್ಯಗಳಿಂದ ನಮಗೆ ಈಗ್ಲೂ ಪ್ರಯೋಜನ ಇದೆ.—ಮತ್ತಾ. 6:14, 15, 34; 7:12.
-
18. ಈಗ ಲೋಕದಲ್ಲಿ ನಡೀತಿರೋ ಎಷ್ಟೋ ವಿಷ್ಯಗಳನ್ನ ಯೇಸು ಮುಂಚೆನೇ ಹೇಳಿದ್ರು.—ಮತ್ತಾ. 24:3, 7, 8, 14; ಲೂಕ 21:10, 11.
-
19. ಯೇಸು ದೇವರ ಮಗ. —ಮತ್ತಾ. 16:16; ಯೋಹಾ. 3:16; 1 ಯೋಹಾ. 4:15.
-
20. ಯೇಸು ಸರ್ವಶಕ್ತ ದೇವರಲ್ಲ.—ಯೋಹಾ. 14:28; 1 ಕೊರಿಂ. 11:3.
ದೇವರ ಆಳ್ವಿಕೆ
-
21. ದೇವರ ಸರ್ಕಾರ ಇದೆ, ಅದು ಸ್ವರ್ಗದಲ್ಲಿದೆ.—ದಾನಿ. 2:44; 7:13, 14; ಮತ್ತಾ. 6:9, 10; ಪ್ರಕ. 11:15.
-
22. ದೇವರ ಸರ್ಕಾರ ಈಗಿರೋ ಎಲ್ಲಾ ಸರ್ಕಾರಗಳನ್ನ ತೆಗೆದುಹಾಕಿಬಿಡುತ್ತೆ.—ಕೀರ್ತ. 2:7-9; ದಾನಿ. 2:44.
-
23. ನಮ್ಮ ಎಲ್ಲಾ ಕಷ್ಟ, ಸಮಸ್ಯೆಗಳನ್ನ ದೇವರ ಸರ್ಕಾರ ಮಾತ್ರ ತೆಗೆದುಹಾಕೋಕೆ ಸಾಧ್ಯ.—ಕೀರ್ತ. 37:10, 11; 46:9; ಯೆಶಾ. 65:21-23.
ಕಷ್ಟ
-
24. ನಮ್ಮ ಕಷ್ಟಗಳಿಗೆ ದೇವರು ಕಾರಣ ಅಲ್ಲ.—ಧರ್ಮೋ. 32:4; ಯಾಕೋ. 1:13.
-
25. ಇಡೀ ಲೋಕನ ಸೈತಾನ ಆಳ್ತಿದ್ದಾನೆ.—ಲೂಕ 4:5, 6; 1 ಯೋಹಾ. 5:19.
-
26. ದೇವರು ನಿಮ್ಮ ಕಷ್ಟಗಳನ್ನ ನೋಡ್ತಾನೆ, ನಿಮಗೆ ಸಹಾಯನೂ ಮಾಡ್ತಾನೆ.—ಕೀರ್ತ. 34:17-19; ಯೆಶಾ. 41:10, 13.
-
27. ದೇವರು ತುಂಬ ಬೇಗ ಎಲ್ಲಾ ಕಷ್ಟಗಳನ್ನ ತೆಗೆದುಹಾಕ್ತಾನೆ.—ಯೆಶಾ. 65:17; ಪ್ರಕ. 21:3, 4.
ಸಾವು
-
28. ಸತ್ತವ್ರಿಗೆ ಏನೂ ಗೊತ್ತಾಗಲ್ಲ, ಅವರು ಎಲ್ಲೂ ಚಿತ್ರಹಿಂಸೆ ಅನುಭವಿಸಲ್ಲ.—ಪ್ರಸಂ. 9:5; ಯೋಹಾ. 11:11-14.
-
29. ಸತ್ತವರು ನಮಗೆ ಸಹಾಯನೂ ಮಾಡಲ್ಲ, ತೊಂದರೆನೂ ಕೊಡಲ್ಲ.—ಕೀರ್ತ. 146:4; ಪ್ರಸಂ. 9:6, 10.
-
30. ತೀರಿಹೋಗಿರೋ ನಮ್ಮ ಪ್ರೀತಿಯ ಜನ್ರು ಮತ್ತೆ ಎದ್ದು ಬರ್ತಾರೆ.—ಯೋಬ 14:13-15; ಯೋಹಾ. 5:28, 29; ಅ. ಕಾ. 24:15.
-
31. “ಇನ್ಮುಂದೆ ಸಾವೇ ಇರಲ್ಲ.” —ಪ್ರಕ. 21:3, 4; ಯೆಶಾ. 25:8.
ಧರ್ಮ
-
32. ದೇವರು ಕೆಲವರ ಆರಾಧನೆನ ಇಷ್ಟಪಡಲ್ಲ.—ಯೆರೆ. 7:11; ಮತ್ತಾ. 7:13, 14, 21-23.
-
33. ಕೆಲವರು ಹೇಳೋದೇ ಒಂದು ಮಾಡೋದೇ ಒಂದು. ಅದು ದೇವರಿಗೆ ಇಷ್ಟ ಆಗಲ್ಲ.—ಯೆಶಾ. 29:13; ಮೀಕ 3:11; ಮಾರ್ಕ 7:6-8.
-
34. ಸತ್ಯಧರ್ಮದಲ್ಲಿ ಇರೋರು ಜನ್ರನ್ನ ನಿಜವಾಗ್ಲೂ ಪ್ರೀತಿಸ್ತಾರೆ.—ಮೀಕ 4:3; ಯೋಹಾ. 13:34, 35.