ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಏದೆನ್‌ ತೋಟದ ಬಗ್ಗೆ ತಿಳ್ಕೊಳ್ಳೋದು—ಯಾಕೆ ಮುಖ್ಯ?

ಏದೆನ್‌ ತೋಟದ ಬಗ್ಗೆ ತಿಳ್ಕೊಳ್ಳೋದು—ಯಾಕೆ ಮುಖ್ಯ?

ಏದೆನ್‌ ತೋಟದ ಬಗ್ಗೆ ತಿಳ್ಕೊಳ್ಳೋದು—ಯಾಕೆ ಮುಖ್ಯ?

ಕೆಲವು ಜನ್ರು ಏದೆನ್‌ ತೋಟದಲ್ಲಿ ಆದ ಘಟನೆಯನ್ನ ನಂಬಲ್ಲ. ಯಾಕಂದ್ರೆ ಬೈಬಲಿನ ಬೇರೆ ಪುಸ್ತಕಗಳಲ್ಲಿ ಈ ಘಟನೆ ಬಗ್ಗೆ ಯಾವುದೇ ವಿಷಯ ಇಲ್ಲದೇ ಇರೋದ್ರಿಂದ ಜನ್ರಿಗೆ ಈ ಅಭಿಪ್ರಾಯ ಇದೆ. ಧರ್ಮಗಳ ಬಗ್ಗೆ ಅಧ್ಯಯನ ಮಾಡೋ ಪ್ರೊಫೆಸರಾದ ಪೌಲ್‌ ಮೋರಿಸ್‌ ಹೀಗೆ ಬರೆದಿದ್ದಾರೆ: “ಆದಿಕಾಂಡ ಪುಸ್ತಕದ ನಂತ್ರ ಬೈಬಲಿನ ಬೇರೆ ಪುಸ್ತಕಗಳಲ್ಲಿ ಏದೆನ್‌ ತೋಟದ ಬಗ್ಗೆ ನೇರವಾದ ಅಥವಾ ಸ್ಪಷ್ಟವಾದ ಉಲ್ಲೇಖ ಇಲ್ಲ.” ಬೇರೆ ತಜ್ಞರು ಕೂಡ ಇದನ್ನ ಒಪ್ಕೊಳ್ತಾರೆ. ಆದ್ರೆ ನಿಜಾಂಶನೇ ಬೇರೆ.

ಬೈಬಲ್‌ನಲ್ಲಿ ಏದೆನ್‌ ತೋಟ, ಆದಾಮ-ಹವ್ವ ಮತ್ತು ಹಾವಿನ ಬಗ್ಗೆ ಅನೇಕ ಉಲ್ಲೇಖಗಳಿವೆ. a ಕೆಲವು ವಿದ್ವಾಂಸರು ಆದಿಕಾಂಡ ಪುಸ್ತಕದಲ್ಲಿರೋ ವಿಷಯಗಳನ್ನ ಸುಳ್ಳು ಅಂತ ಹೇಳೋದು ದೊಡ್ಡ ತಪ್ಪಾಗುತ್ತೆ. ಯಾಕಂದ್ರೆ ಅವರು ಹೀಗೆ ಹೇಳೋ ಮೂಲಕ ಇಡೀ ಬೈಬಲೇ ತಪ್ಪು ಅಂತ ಹೇಳ್ತಿದ್ದಾರೆ. ಅದು ಹೇಗೆ?

ಇಡೀ ಬೈಬಲನ್ನ ನಾವು ಅರ್ಥ ಮಾಡ್ಕೊಳ್ಳೋಕೆ ಮೊದಲು ಏದೆನ್‌ ತೋಟದಲ್ಲಿ ಏನಾಯ್ತು ಅಂತ ತಿಳ್ಕೊಳ್ಳೋದು ತುಂಬಾ ಮುಖ್ಯ. ಈ ಪ್ರಶ್ನೆ ಅಲ್ಲದೆ ನಮಗೆ ಬರೋ ಬೇರೆ ಪ್ರಮುಖ ಪ್ರಶ್ನೆಗಳಿಗೆ ಉತ್ತರ ತಿಳ್ಕೊಳ್ಳೋಕೆ ದೇವರು ನಮಗೆ ಇಡೀ ಬೈಬಲನ್ನ ಕೊಟ್ಟಿದ್ದಾರೆ. ನಮಗೆ ಬರೋ ಎಲ್ಲ ಪ್ರಶ್ನೆಗಳ ಮೂಲ ಏದೆನ್‌ ತೋಟದಲ್ಲಿ ಏನು ನಡೀತೋ ಅದೇ. ಈಗ ಕೆಲವು ಉದಾಹರಣೆಗಳನ್ನ ನೋಡೋಣ.

ನಾವ್ಯಾಕೆ ವಯಸ್ಸಾಗಿ ಸಾಯ್ತೀವಿ? ಆದಾಮ ಹವ್ವ ಯೆಹೋವನ ಮಾತನ್ನ ಕೇಳಿದ್ರೆ ಶಾಶ್ವತ ಜೀವನವನ್ನ ಆನಂದಿಸಬಹುದಿತ್ತು. ಆದ್ರೆ ಅವರು ಮಾತು ಕೇಳ್ದೆ ಇದ್ದಿದ್ರಿಂದ ಸತ್ತು ಹೋದ್ರು. ಯಾವ ದಿನ ಅವರು ಮಾತು ಕೇಳಿಲಿಲ್ವೋ, ಅದೇ ದಿನ ಸತ್ತು ಹೋದ್ರು ಅಂತ ಹೇಳ್ಬಹುದು. (ಆದಿಕಾಂಡ 2:16, 17; 3:19) ಯಾಕಂದ್ರೆ ಆ ದಿನ ಅವರು ಪರಿಪೂರ್ಣತೆಯನ್ನ ಕಳ್ಕೊಂಡ್ರು ಮತ್ತು ತಮ್ಮ ಸಂತತಿಯವರಿಗೆ ಪಾಪ ಮತ್ತು ಅಪರಿಪೂರ್ಣತೆಯನ್ನ ದಾಟಿಸಿದ್ರು. ಅದಕ್ಕೆ ಬೈಬಲ್‌ ಹೀಗೆ ಹೇಳುತ್ತೆ: “ಒಬ್ಬ ಮನುಷ್ಯನಿಂದ ಪಾಪ ಲೋಕದೊಳಗೆ ಬಂತು, ಪಾಪದಿಂದ ಸಾವು ಬಂತು. ಎಲ್ಲ ಮನುಷ್ಯರು ಪಾಪಮಾಡಿದ್ರಿಂದ ಎಲ್ರೂ ಸಾಯ್ತಾರೆ.”—ರೋಮನ್ನರಿಗೆ 5:12.

ದೇವರು ಯಾಕೆ ಕೆಟ್ಟತನವನ್ನ ಅನುಮತಿಸಿದ್ದಾನೆ? ಏದೆನ್‌ ತೋಟದಲ್ಲಿ ಸೈತಾನ, ದೇವರು ಮನುಷ್ಯರಿಗೆ ಒಳ್ಳೇದನ್ನ ತಡಿತಿದ್ದಾನೆ ಅಂತ ಹೇಳೋ ಮೂಲಕ ದೇವರು ಸುಳ್ಳು ಹೇಳ್ತಿದ್ದಾನೆ ಅನ್ನೋ ಆರೋಪ ಹಾಕಿದ. (ಆದಿಕಾಂಡ 3:3-5) ಯೆಹೋವನಿಗೆ ಸರಿಯಾಗಿ ಆಳ್ವಿಕೆ ಮಾಡೋಕೆ ಬರಲ್ಲ ಅಂತನೂ ಸೈತಾನ ಹೇಳಿದ. ಆದಾಮ-ಹವ್ವ ಸೈತಾನನನ್ನ ಮಾತು ಕೇಳಿ ಯೆಹೋವನಿಗಿರೋ ಆಳುವ ಹಕ್ಕನ್ನ ತಿರಸ್ಕರಿಸಿದ್ರು. ಹೀಗೆ ಅವರು ‘ನಾವು ಇಷ್ಟ ಬಂದಿದ್ದನ್ನ ಮಾಡ್ತೀವಿ’ ಅಂತ ತೋರಿಸ್ಕೊಟ್ರು. ಯೆಹೋವನು ಪರಿಪೂರ್ಣವಾಗಿ ನ್ಯಾಯ ಮಾಡೋನು ಮತ್ತು ಆತನಲ್ಲಿ ಪರಿಪೂರ್ಣ ವಿವೇಕ ಇರೋದ್ರಿಂದ ತನ್ನ ಮೇಲೆ ಬಂದ ಸವಾಲಿಗೆ ಉತ್ತರ ಕೊಡೋಕೆ ಇರೋದು ಒಂದೇ ದಾರಿ ಅಂತ ಆತನಿಗೆ ಗೊತ್ತಿತ್ತು. ಅದೇನಂದ್ರೆ ಸಮಯವನ್ನ ಅನುಮತಿಸೋ ಮೂಲಕ ಜನ ತಮ್ಮನ್ನ ತಾವೇ ಆಳೋಕೆ ಯೆಹೋವನು ಬಿಟ್ಟನು. ಹೀಗೆ ಮಾಡಿದ್ರಿಂದ ಜನ್ರು ಸೈತಾನನ ಪ್ರಭಾವದ ಅಡಿಯಲ್ಲಿದ್ದಾರೆ ಮತ್ತು ಬೈಬಲ್‌ ಹೇಳೋ ಪ್ರಕಾರ ತಮ್ಮನ್ನ ತಾವೇ ಆಳುವ ಸಾಮರ್ಥ್ಯ ತಮಗೆ ಇಲ್ಲ ಅನ್ನೋದನ್ನೂ ಜನ್ರು ತೋರಿಸ್ಕೊಟ್ಟಿದ್ದಾರೆ.—ಯೆರೆಮೀಯ 10:23.

ಭೂಮಿಗಾಗಿ ದೇವರ ಉದ್ದೇಶ ಏನು? ಯೆಹೋವನು ಏದೆನ್‌ ತೋಟವನ್ನ ಸೃಷ್ಟಿ ಮಾಡಿದಾಗ ಇಡೀ ಭೂಮಿ ಅದೇ ತರ ಸುಂದರವಾಗಿ ಇರಬೇಕು ಅನ್ನೋದು ಆತನ ಆಸೆಯಾಗಿತ್ತು. ಹಾಗಾಗಿ ಆತನು ಆದಾಮ ಹವ್ವರಿಗೆ, ನೀವು ತುಂಬ ಮಕ್ಕಳನ್ನ ಪಡೆದು ಜಾಸ್ತಿ ಜನ ಆಗಿ ಇಡೀ ಭೂಮಿ “ತುಂಬ್ಕೊಳಿ” ಅಂತ ಹೇಳಿದನು. ಆಗ ಇಡೀ ಭೂಮಿ ಸುಂದರ ತೋಟ ಆಗೋ ಸಾಧ್ಯತೆ ಇತ್ತು. (ಆದಿಕಾಂಡ 1:28) ಯೆಹೋವನ ಮುಖ್ಯ ಉದ್ದೇಶ ಇದಾಗಿದ್ರಿಂದ ಬೈಬಲಿನ ತಿರುಳು, ಇಡೀ ಭೂಮಿ ಒಂದು ಸುಂದರ ತೋಟ ಆಗ್ಬೇಕು ಅನ್ನೋದೇ ಆಗಿದೆ.

ಯೇಸು ಯಾಕೆ ಭೂಮಿಗೆ ಬಂದನು? ಆದಾಮ ಹವ್ವ ದೇವರಿಗೆ ಅವಿಧೇಯತೆ ತೋರಿಸಿ ತಪ್ಪು ಮಾಡಿದಾಗ ತಮ್ಮ ಮೇಲೆ ಮತ್ತು ತಮ್ಮ ಸಂತತಿಯವರ ಮೇಲೆ ಮರಣ ದಂಡನೆ ತಂದ್ರು. ಆದ್ರೆ ದೇವರು ತನ್ನ ಮಕ್ಕಳನ್ನ ತುಂಬಾ ಪ್ರೀತಿಸೋದ್ರಿಂದ ತನ್ನ ಮಗನನ್ನ ಬಿಡುಗಡೆ ಬೆಲೆಯಾಗಿ ಭೂಮಿಗೆ ಕಳಿಸೋ ಮೂಲಕ ತನ್ನ ಎಲ್ಲಾ ಮಕ್ಕಳನ್ನ ರಕ್ಷಿಸೋ ಏರ್ಪಾಡನ್ನ ಮಾಡಿದನು. (ಮತ್ತಾಯ 20:28) ಬೈಬಲ್‌ ಯೇಸುವನ್ನ “ಕೊನೇ ಆದಾಮ” ಅಂತ ಕರೆಯುತ್ತೆ. ಯಾಕಂದ್ರೆ ಮೊದಲನೇ ಆದಾಮ ಮನುಷ್ಯರಿಗೆ ಮರಣ ದಂಡನೆ ತಂದ. ಆದ್ರೆ ಯೇಸು ತನ್ನ ಜೀವವನ್ನ ಬಿಡುಗಡೆ ಬೆಲೆಯಾಗಿ ಕೊಡೋ ಮೂಲಕ ನಮ್ಮ ಪಾಪಗಳಿಗೆ ಕ್ಷಮಾಪಣೆ ಸಿಗೋ ತರ ಮಾಡಿದ್ದಾನೆ ಮತ್ತು ಇಡೀ ಭೂಮಿ ಏದೆನ್‌ ತೋಟ ತರ ಆದಾಗ ಶಾಶ್ವತ ಜೀವನವನ್ನ ಆನಂದಿಸೋ ಅವಕಾಶವನ್ನೂ ಮಾಡ್ಕೊಟ್ಟಿದ್ದಾನೆ. (1 ಕೊರಿಂಥ 15:22, 45; ಯೋಹಾನ 3:16) ಯೇಸು ಮಾಡಿದ ಈ ಮಹಾ ತ್ಯಾಗದಿಂದ ಯೆಹೋವನ ಮುಖ್ಯ ಉದ್ದೇಶದಂತೆ ಇಡೀ ಭೂಮಿ ಸುಂದರ ತೋಟ ಆಗುತ್ತೆ ಅಂತ ನಾವು ಖಂಡಿತ ನಂಬಬಹುದು. b

ದೇವರ ಉದ್ದೇಶ ಒಂದು ಕಟ್ಟುಕಥೆ ಅಲ್ಲ ಅಥವಾ ಧಾರ್ಮಿಕ ಕಲ್ಪನೆನೂ ಅಲ್ಲ. ಅದು ನಿಜವಾದ ಉದ್ದೇಶ. ಹೇಗೆ ಏದೆನ್‌ ತೋಟದಲ್ಲಿ ಪ್ರಾಣಿಗಳು ಮತ್ತು ಮನುಷ್ಯರು ನಿಜವಾಗಿದ್ರೋ, ಅದೇ ತರ ಭವಿಷ್ಯತ್ತಿಗಾಗಿ ದೇವರು ಕೊಟ್ಟಿರೋ ಮಾತು ನಿಜ ಆಗಲಿದೆ. ಇಂಥ ಭವಿಷ್ಯತ್ತಿನಲ್ಲಿ ಇರಬೇಕು ಅಂತ ನಿಮಗೂ ಆಸೆ ಇದ್ಯಾ? ಅದು ನಿಮಗೆ ಬಿಟ್ಟಿದ್ದು. ಆದ್ರೆ ದೇವರು ಮಾತ್ರ ಇದನ್ನ ಎಲ್ಲಾ ಮನುಷ್ಯರಿಗೋಸ್ಕರ ಮಾಡಿದ್ದಾನೆ. ಅದ್ರಲ್ಲಿ ಕೆಟ್ಟ ವಿಷಯಗಳನ್ನ ಮಾಡಿದವರೂ ಸೇರಿದ್ದಾರೆ.—1 ತಿಮೊತಿ 2:3, 4.

ಇನ್ನೇನು ಯೇಸುವಿನ ಜೀವ ಹೋಗುತ್ತೆ ಅನ್ನೋ ಸಮಯದಲ್ಲಿ ಮರಣ ದಂಡನೆ ವಿಧಿಸಲಾಗಿದ್ದ ಒಬ್ಬ ಅಪರಾಧಿ ಯೇಸು ಜೊತೆ ಇದ್ದನು. ಅವನು ನಿರೀಕ್ಷೆ ಮತ್ತು ಸಾಂತ್ವನಕೋಸ್ಕರ ಯೇಸು ಹತ್ತಿರ ಮಾತಾಡ್ತಾನೆ. ಆಗ ಯೇಸು ಅವನಿಗೆ: “ನೀನು ನನ್ನ ಜೊತೆ ಪರದೈಸಲ್ಲಿ ಇರ್ತಿಯ” ಅಂತ ಹೇಳಿದನು. (ಲೂಕ 23:43) ಒಬ್ಬ ಅಪರಾಧಿ ಪರದೈಸಲ್ಲಿ ಇರಬೇಕು ಅಂತ ಯೇಸು ಇಷ್ಟಪಟ್ಟ ಮೇಲೆ ನೀವೂ ಸಹ ಅಂಥ ಒಳ್ಳೇ ಜೀವನ ಆನಂದಿಸಬೇಕು ಅಂತ ಯೇಸು ಮತ್ತು ಆತನ ತಂದೆ ಆಸೆಪಡ್ತಾರೆ. ನಿಮ್ಮ ಆಸೆನೂ ಇದೇ ಆಗಿದ್ರೆ ನಿಮ್ಮಿಂದ ಎಷ್ಟು ಆಗುತ್ತೋ ಅಷ್ಟು ಹೆಚ್ಚು ದೇವರ ಬಗ್ಗೆ ಕಲಿಯಿರಿ.

[ಪಾದಟಿಪ್ಪಣಿಗಳು]

b ಯೇಸುವಿನ ಬಿಡುಗಡೆ ಬೆಲೆ ಬಗ್ಗೆ ತಿಳಿಯೋಕೆ ಬೈಬಲ್‌ ನಮಗೆ ಏನು ಕಲಿಸುತ್ತದೆ? ಪುಸ್ತಕದ 5ನೇ ಅಧ್ಯಾಯ ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

[ಚೌಕ/​ಚಿತ್ರ]

ಇಡೀ ಬೈಬಲಿನ ತಿರುಳಾದ ಒಂದು ಭವಿಷ್ಯವಾಣಿ

“ನಿನ್ನ ಮತ್ತು ಸ್ತ್ರೀಯ ಮಧ್ಯ, ನಿನ್ನ ಸಂತಾನ ಮತ್ತು ಸ್ತ್ರೀಯ ಸಂತಾನದ ಮಧ್ಯ ದ್ವೇಷ ಇರೋ ಹಾಗೆ ಮಾಡ್ತೀನಿ. ಅವನು ನಿನ್ನ ತಲೆ ಜಜ್ಜುತ್ತಾನೆ, ನೀನು ಅವನ ಹಿಮ್ಮಡಿಗೆ ಗಾಯ ಮಾಡ್ತಿಯ ಅಂದನು.”—ಆದಿಕಾಂಡ 3:15.

ಇದು ಬೈಬಲಿನ, ಮೊದಲ ಭವಿಷ್ಯವಾಣಿ ಆಗಿದೆ. ದೇವರು ಇದನ್ನ ಏದೆನ್‌ ತೋಟದಲ್ಲಿ ಹೇಳಿದನು. ಅದ್ರಲ್ಲಿರೋ ಸ್ತ್ರೀ ಮತ್ತು ಅವಳ ಸಂತಾನ, ಹಾವು ಮತ್ತು ಅದ್ರ ಸಂತಾನ ಯಾರು? ಅವ್ರ ಮಧ್ಯ ಯಾವ ರೀತಿ “ದ್ವೇಷ” ಇರುತ್ತೆ?

ಹಾವು

ಪಿಶಾಚನಾದ ಸೈತಾನ.—ಪ್ರಕಟನೆ 12:9.

ಸ್ತ್ರೀ

ನಂಬಿಗಸ್ತ ದೇವದೂತರಿರೋ ಯೆಹೋವನ ಸ್ವರ್ಗೀಯ ಸಂಘಟನೆ. (ಗಲಾತ್ಯ 4:26, 27) ಯೆಶಾಯ ಆ ಸ್ತ್ರೀಯ ಬಗ್ಗೆ ಬರೆದನು. ಅವಳು ಒಂದು ಆಧ್ಯಾತ್ಮಿಕ ಜನಾಂಗವನ್ನ ಹೆರ್ತಾಳೆ ಅಂತ ಭವಿಷ್ಯವಾಣಿ ಹೇಳಿದನು.—ಯೆಶಾಯ 54:1; 66:8.

ಹಾವಿನ ಸಂತಾನ

ಸೈತಾನನ ಇಷ್ಟದ ಪ್ರಕಾರ ಜೀವನ ಮಾಡೋರು.—ಯೋಹಾನ 8:44.

ಸ್ತ್ರೀ ಸಂತಾನ

ಯೆಹೋವನ ಸಂಘಟನೆಯ ಸ್ವರ್ಗೀಯ ಭಾಗದಿಂದ ಬಂದ ಯೇಸು ಕ್ರಿಸ್ತನೇ ಇದ್ರ ಪ್ರಾಮುಖ್ಯ ಭಾಗ. ಈ ‘ಸಂತಾನದಲ್ಲಿ’ ಯೇಸುವಿನ ಜೊತೆ ಆಳೋ 1,44,000 ಅಭಿಷಿಕ್ತರೂ ಇದ್ದಾರೆ. ಈ ಅಭಿಷಿಕ್ತ ಕ್ರೈಸ್ತರಿಗೆ ‘ದೇವರ ಇಸ್ರಾಯೇಲ್ಯರು’ ಅನ್ನೋ ಹೆಸರು ಕೂಡ ಇದೆ. ಇವರೆಲ್ಲ ಸೇರಿ ಒಂದು ಆಧ್ಯಾತ್ಮಿಕ ದೇಶದ ಭಾಗವಾಗ್ತಾರೆ.—ಗಲಾತ್ಯ 3:16, 29; 6:16; ಆದಿಕಾಂಡ 22:18.

ಹಿಮ್ಮಡಿಗೆ ಗಾಯ

ಮೆಸ್ಸೀಯನಿಗೆ ನೋವು ತರೋ ಒಂದು ಗಾಯ ಆಗುತ್ತೆ. ಆದ್ರೆ ಅದು ವಾಸಿ ಆಗುತ್ತೆ. ಯೇಸು ಭೂಮಿಯಲ್ಲಿದಾಗ ಆತನನ್ನ ಕೊಲ್ಲಿಸೋದ್ರಲ್ಲಿ ಸೈತಾನನಿಗೆ ಜಯ ಸಿಕ್ತು. ಆದ್ರೆ ದೇವರು ಯೇಸುನ ಮತ್ತೆ ಎಬ್ಬಿಸಿದನು.

ತಲೆಗೆ ಗಾಯ

ಸೈತಾನನಿಗೆ ಆಗೋ ಗಾಯದಿಂದ ಅವನು ಸತ್ತೇ ಹೋಗ್ತಾನೆ. ಯೇಸು ಸೈತಾನನನ್ನ ಶಾಶ್ವತವಾಗಿ ನಾಶ ಮಾಡ್ತಾನೆ. ಅದಕ್ಕಿಂತ ಮುಂಚೆ, ಏದೆನ್‌ ತೋಟದಲ್ಲಿ ಸೈತಾನನಿಂದ ಶುರುವಾದ ಕೆಟ್ಟ ವಿಷಯಗಳನ್ನ ಯೇಸು ಸಂಪೂರ್ಣವಾಗಿ ತೆಗೆದುಹಾಕ್ತಾನೆ.—1 ಯೋಹಾನ 3:8; ಪ್ರಕಟನೆ 20:10.

ಬೈಬಲಿನ ಮುಖ್ಯ ವಿಷಯದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಕೆ ಬೈಬಲ್‌ ಅದರಲ್ಲಿ ಏನಿದೆ? ಅನ್ನೋ ಕಿರುಹೊತ್ತಗೆ ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

[ಚಿತ್ರ]

ಆದಾಮ ಹವ್ವ ಪಾಪ ಮಾಡಿದ್ರಿಂದ ಅದ್ರ ಕೆಟ್ಟ ಪರಿಣಾಮವನ್ನ ಅನುಭವಿಸಿದ್ರು