ಮಾಹಿತಿ ಇರುವಲ್ಲಿ ಹೋಗಲು

ಅನ್ಯಾಯ ಇಲ್ಲದಿರೋ ಲೋಕದ ಬಗ್ಗೆ ನಾನು ತಿಳಿದುಕೊಂಡೆ

ಅನ್ಯಾಯ ಇಲ್ಲದಿರೋ ಲೋಕದ ಬಗ್ಗೆ ನಾನು ತಿಳಿದುಕೊಂಡೆ

ಅನ್ಯಾಯ ಇಲ್ಲದಿರೋ ಲೋಕದ ಬಗ್ಗೆ ನಾನು ತಿಳಿದುಕೊಂಡೆ

ಉರ್ಸುಲ ಮೆನ್ನೆ ಹೇಳಿದ ಪ್ರಕಾರ

ಚಿಕ್ಕ ವಯಸ್ಸಿಂದನೂ ಎಲ್ಲರಿಗೂ ನ್ಯಾಯ ಸಿಗ್ಬೇಕು. ಎಲ್ಲರೂ ಚೆನ್ನಾಗಿರಬೇಕು ಅನ್ನೋದೇ ನನ್ನ ಆಸೆ ಆಗಿತ್ತು. ಆದ್ರೆ ಈ ಆಸೆಯಿಂದಾನೇ ನಾನು ಒಂದಿನ ಕಮ್ಯುನಿಸ್ಟ್‌ ಈಸ್ಟ್‌ ಜರ್ಮನಿಯಲ್ಲಿರೋ ಜೈಲಿಗೆ ಹೋಗೋ ಪರಿಸ್ಥಿತಿ ಬಂತು. ಅನ್ಯಾಯ ಇಲ್ಲದ ಲೋಕದ ಬಗ್ಗೆ ಅಲ್ಲೇ ನಾನು ತಿಳ್ಕೊಂಡಿದ್ದು, ಹೇಗಂತ ಹೇಳ್ತೀನಿ.

ನಾನು ಜರ್ಮನಿಯ ಹ್ಯಾಲೆಯಲ್ಲಿ 1922ರಲ್ಲಿ ಹುಟ್ಟಿದೆ. ಈ ಸ್ಥಳಕ್ಕೆ 1200ಕ್ಕಿಂತ ಜಾಸ್ತಿ ವರ್ಷಗಳ ಇತಿಹಾಸ ಇದೆ. ಇದು ನೈಋತ್ಯ ಬರ್ಲಿನಿಂದ 200 ಕಿ.ಮೀ ದೂರದಲ್ಲಿದೆ. ತುಂಬ ಜನರು ಪ್ರೋಟೆಸ್ಟೆಂಟರಾಗಿದ್ದ ಸ್ಥಳಗಳಲ್ಲಿ ಇದೂ ಒಂದು. ನನ್ನ ತಂಗಿ ಕ್ಯಾಥಿ 1923ರಲ್ಲಿ ಹುಟ್ಟಿದಳು. ಅಪ್ಪ ಮಿಲಿಟರಿಯಲ್ಲಿದ್ರು. ಅಮ್ಮ ಥಿಯೇಟರಲ್ಲಿ ಹಾಡು ಹೇಳ್ತಿದ್ರು.

ಅನ್ಯಾಯದ ವಿರುದ್ಧ ಹೋರಾಡಬೇಕು ಅಂತ ನನಗನಿಸಿದ್ದಕ್ಕೆ ಕಾರಣನೇ ನಮ್ಮಪ್ಪ. ಅವರು ಮಿಲಿಟರಿ ಬಿಟ್ಟು ಬಂದ ಮೇಲೆ ಒಂದು ಅಂಗಡಿಯನ್ನ ಹಾಕಿದ್ರು. ಅಲ್ಲಿಗೆ ಬರೋ ಗಿರಾಕಿಗಳು ಬಡವರಾಗಿದ್ರು. ಅಪ್ಪನಿಗೆ ಅವ್ರ ಮೇಲೆ ಅಯ್ಯೋ ಪಾಪ ಅನಿಸಿ ಅಂಗಡಿಯಲ್ಲಿರೋ ಸಾಮಾನುಗಳನ್ನ ಕೊಡ್ತಿದ್ರು. ಆದ್ರೆ ದುಡ್ಡು ತಗೊಳ್ತಿರ್ಲಿಲ್ಲ, ಆಮೇಲೆ ಕೊಡಿ ಅಂತ ಹೇಳ್ತಾ ಇದ್ರು. ಹೀಗೆ ಮಾಡಿಮಾಡಿ ಅಂಗಡಿನೇ ಮುಚ್ಚಬೇಕಾದ ಪರಿಸ್ಥಿತಿ ಬಂತು. ಅನ್ಯಾಯದ ವಿರುದ್ಧ ಹೋರಾಡೋದು ನಾನು ಅಂದ್ಕೊಂಡಿದ್ದಷ್ಟು ಸುಲಭ ಆಗಿರಲಿಲ್ಲ ಅಂತ ಈ ಅನುಭವದಿಂದ ನಂಗೆ ಗೊತ್ತಾಯ್ತು. ಆದ್ರೆ ನನ್ನಲ್ಲಿ ಬಿಸಿ ರಕ್ತ ಹರಿಯುತ್ತಿದ್ದರಿಂದ ಇದನ್ನ ಒಂದಲ್ಲ ಒಂದಿನ ಸರಿ ಮಾಡಬಹುದು ಅಂತ ಅಂದ್ಕೊಂಡೆ.

ಅಮ್ಮ ನಂಗೆ ಮತ್ತು ನನ್ನ ತಂಗಿಗೆ ಹಾಡು, ಡ್ಯಾನ್ಸ್‌ ಮತ್ತು ಸಂಗೀತವನ್ನ ಕಲಿಸಿದ್ರು. ಈ ಕಲೆ ನನ್ಗೆ ಮತ್ತು ನನ್ನ ತಂಗಿಗೆ ಅಮ್ಮನಿಂದಾನೇ ಬಂದಿದ್ದು. ನಾನು ತುಂಬ ಚೂಟಿಯಾಗಿದ್ದೆ. 1939ರವರೆಗೆ ಎಲ್ರೂ ಖುಷಿಖುಷಿಯಾಗಿ ಚೆನ್ನಾಗಿದ್ವಿ. ಆದ್ರೆ ಅದಾದ ಮೇಲೆ ನಮ್ಮ ಜೀವನಾನೇ ತಲೆಕೆಳಗಾಯ್ತು.

ಜೀವನದ ಕರಾಳ ದಿನಗಳು

ಹೈಸ್ಕೂಲ್‌ ಆದ್ಮೇಲೆ ನಾನು ಬ್ಯಾಲೆ ಸ್ಕೂಲಿಗೆ ಸೇರ್ಕೊಂಡೆ. ನಮ್ಮ ಭಾವನೆಗಳನ್ನ ವ್ಯಕ್ತಪಡಿಸುವಂಥ ಒಂದು ವಿಶೇಷ ರೀತಿಯ ಡ್ಯಾನ್ಸನ್ನ ಕಲ್ತೆ. ನಾನು ಚಿತ್ರ ಬಿಡಿಸೋಕೂ ಶುರು ಮಾಡಿದೆ. ನಾನು ಹದಿವಯಸಲ್ಲಿ ತುಂಬ ವಿಷಯಗಳನ್ನ ಕಲ್ತೆ, ಖುಷಿಖುಷಿಯಾಗಿದ್ದೆ. ಆದ್ರೆ 1939ರಲ್ಲಿ ಎರಡನೇ ಲೋಕ ಯುದ್ಧ ಶುರುವಾಯ್ತು. ಆಮೇಲೆ 1941ರಲ್ಲಿ ಅಪ್ಪ ಟಿಬಿ ಕಾಯಿಲೆ ಬಂದು ಸತ್ತು ಹೋದರು.

ಯುದ್ಧದಿಂದ ಭೀಕರ ದಿನಗಳು ಶುರುವಾದವು. ನಂಗೆ 17 ವರ್ಷ ಇರುವಾಗ ಯುದ್ಧ ಶುರುವಾಯ್ತು. ‘ಜನ್ರಿಗೆಲ್ಲ ಏನಾಗಿದ್ಯಪ್ಪಾ’ ಅಂತ ನಾನು ಯೋಚನೆ ಮಾಡ್ತಾ ಇದ್ದೆ. ಸಾಧಾರಣ ಜನರು ಕೂಡ ನಾಜಿ ಪಾರ್ಟಿಗೆ ಸೇರಿಕೊಂಡ್ರು. ಯುದ್ಧದಿಂದಾಗಿ ಪ್ರತಿದಿನಕ್ಕೆ ಬೇಕಾಗೋ ಅವಶ್ಯಕ ಸಾಮಾನುಗಳು ಸಿಗದೇ ಇರೋ ತರ ಆಯ್ತು. ಎಲ್ಲಿ ನೋಡಿದ್ರೂ ಸಾವು, ನಾಶ ಆಗ್ತಿತ್ತು. ನಮ್ಮ ಮನೆ ಮೇಲೂ ಬಾಂಬ್‌ ಬಿತ್ತು, ನಮ್ಮ ಕುಟುಂಬದಲ್ಲಿ ತುಂಬ ಜನರನ್ನ ಕಳ್ಕೊಂಡ್ವಿ.

1945ರಷ್ಟಕ್ಕೆ ಯುದ್ಧ ಮುಗಿತು. ನಾನು, ಅಮ್ಮ ಮತ್ತು ಕ್ಯಾಥಿ ಹ್ಯಾಲೆಯಲ್ಲೇ ಇನ್ನೂ ಇದ್ವಿ. ಈ ಸಮಯದಷ್ಟಕ್ಕೆ ನಂಗೆ ಮದುವೆ ಆಗಿತ್ತು, ನಮಗೆ ಒಬ್ಬಳು ಮಗಳೂ ಇದ್ದಳು. ಆದರೆ ನಮ್ಮ ಕುಟುಂಬ ಜೀವನ ಅಷ್ಟೇನು ಚೆನ್ನಾಗಿರಲಿಲ್ಲ. ಹಾಗಾಗಿ ನಾವಿಬ್ರೂ ಬೇರೆ ಬೇರೆ ಆದ್ವಿ. ಇದರಿಂದ ನಮ್ಮ ಜೀವನವನ್ನ ನಡೆಸೋಕೆ, ನನ್ನ ಮಗಳನ್ನ ಸಾಕೋಕೆ ಡ್ಯಾನ್ಸರ್‌ ಆಗಿ ಮತ್ತು ಪೇಂಟರ್‌ ಆಗಿ ಕೆಲಸ ಮಾಡಿದೆ.

ಯುದ್ಧದ ನಂತರ ಜರ್ಮನಿ ನಾಲ್ಕು ಭಾಗ ಆಯ್ತು. ನಾವಿದ್ದ ಸ್ಥಳದಲ್ಲಿ ಸೋವಿಯತ್‌ ಯೂನಿಯನ್‌ ಆಳ್ವಿಕೆ ನಡೆಸ್ತಿತ್ತು. ಹಾಗಾಗಿ ನಾವು ಕಮ್ಯುನಿಸ್ಟ್‌ ಆಡಳಿತಕ್ಕೆ ಹೊಂದ್ಕೊಂಡು ಹೋಗಬೇಕಿತ್ತು. 1949ರಲ್ಲಿ ನಾವಿದ್ದ ಜರ್ಮನಿಯನ್ನ ಈಸ್ಟ್‌ ಜರ್ಮನಿ ಅಂತ ಕರೆಯಲಾಯ್ತು, ಮುಂದೆ ಅದು ಜರ್ಮನ್‌ ಡೆಮೊಕ್ರಾಟಿಕ್‌ ರಿಪಬ್ಲಿಕ್‌ (GDR) ಆಯ್ತು.

ಕಮ್ಯುನಿಸ್ಟ್‌ ಆಡಳಿತದ ಕೆಳಗೆ ಜೀವನ

ಆಗ ಅಮ್ಮನಿಗೆ ಹುಷಾರಿರಲಿಲ್ಲ, ಅವ್ರನ್ನ ನೋಡ್ಕೊಬೇಕಾಯ್ತು. ಅದಕ್ಕೆ ಒಂದು ಸರ್ಕಾರಿ ಕೆಲಸಕ್ಕೆ ಸೇರ್ಕೊಂಡೆ. ಈ ಸಮಯದಲ್ಲಿ ಸರ್ಕಾರ ಮಾಡೋ ಅನ್ಯಾಯದ ವಿರುದ್ಧ ಹೋರಾಡ್ತಿದ್ದ ಕೆಲವು ವಿದ್ಯಾರ್ಥಿಗಳ ಪರಿಚಯ ನನಗಾಯ್ತು. ಒಂದ್ಸಲ ಒಬ್ಬ ಹುಡುಗ ಯುನಿವರ್ಸಿಟಿ ವಿದ್ಯಾಭ್ಯಾಸ ಮಾಡಬಾರದು ಅಂತ ಅವ್ರು ಅವನನ್ನ ತಡೆದ್ರು. ಯಾಕಂದ್ರೆ ಅವನ ಅಪ್ಪ ನಾಜಿ ಪಾರ್ಟಿಯಲ್ಲಿ ಇದ್ದ. ನಾನು ಮ್ಯೂಸಿಕ್‌ ಕ್ಲಾಸಿನಲ್ಲಿದ್ದಾಗ ನನಗೆ ಅವನ ಪರಿಚಯ ಆಗಿತ್ತು. ಆಗ ನಂಗೆ, ‘ಅಪ್ಪ ಮಾಡಿದ ತಪ್ಪಿಗೆ ಯಾಕೆ ಮಗ ಶಿಕ್ಷೆ ಅನುಭವಿಸಬೇಕು?’ ಅಂತ ಅನಿಸ್ತು. ನಾನು ಸರ್ಕಾರದ ವಿರುದ್ಧ ಹೋರಾಡ್ತಿದ್ದ ವಿದ್ಯಾರ್ಥಿಗಳ ಜೊತೆ ಸೇರಿ ಪ್ರತಿಭಟನೆಗಳನ್ನ ಮಾಡೋಕೆ ತೀರ್ಮಾನ ಮಾಡಿದೆ. ಹೀಗೆ ಒಂದ್ಸಲ ಕೋರ್ಟ್‌ನ ಹೊರಗಿರೋ ಗೋಡೆ ಮೇಲೆ ಪೋಸ್ಟರನ್ನ ಅಂಟಿಸಿದೆ.

ನಾನು ರೀಜನಲ್‌ ಪೀಸ್‌ ಕಮಿಟಿಯ ಸೆಕ್ರೆಟರಿಯಾಗಿದ್ದೆ. ಹಾಗಾಗಿ ಅದಕ್ಕೆ ಸಂಬಂಧಪಟ್ಟ ಕೆಲವು ಪತ್ರಗಳನ್ನ ಬರಿಬೇಕಾಗಿತ್ತು. ಅದ್ರಲ್ಲಿದ್ದ ಮಾಹಿತಿ ನೋಡಿ ನಂಗೆ ತುಂಬ ಬೇಜಾರಾಯ್ತು. ಇನ್ನೊಂದು ಸಲ ರಾಜಕೀಯ ಕಾರಣಕ್ಕಾಗಿ ಕಮ್ಯುನಿಸ್ಟ್‌ ಸಿದ್ಧಾಂತಗಳಿರುವ ಒಂದು ಪಾರ್ಸಲನ್ನ ವೆಸ್ಟ್‌ ಜರ್ಮನಿಯಲ್ಲಿರೋ ಒಬ್ಬ ವಯಸ್ಕನಿಗೆ ಕಳಿಸಬೇಕಾಗಿತ್ತು. ಆ ಪ್ರದೇಶದ ಸರ್ಕಾರ ಅವನ ಮೇಲೆ ಅನುಮಾನ ಪಡಬೇಕು, ಅವ್ನಿಗೆ ತೊಂದರೆ ಕೊಡಬೇಕು ಅಂತ ಹೀಗೆ ಮಾಡಿದ್ರು. ಆ ವ್ಯಕ್ತಿಗೆ ಅಗ್ತಿದ್ದಂತ ಅನ್ಯಾಯ ನೋಡಿ ನಂಗೆ ತುಂಬ ಕೋಪ ಬಂತು, ನಾನು ಆ ಪಾರ್ಸಲನ್ನ ಆಫೀಸಲ್ಲೇ ಬಚ್ಚಿಟ್ಟೆ. ಅದಕ್ಕೆ ಆ ಪಾರ್ಸಲನ್ನ ಕಳಿಸಕ್ಕಾಗ್ಲಿಲ್ಲ.

ಎಲ್ರೂ ಕಡೆಗಣಿಸ್ತಿದ್ದ ವ್ಯಕ್ತಿಯಿಂದ ಸಹಾಯ

1951 ಜೂನಿನಲ್ಲಿ ಇಬ್ಬರು ನನ್ನ ಆಫೀಸಿಗೆ ಬಂದು “ನಿನ್ನನ್ನ ಅರೆಸ್ಟ್‌ ಮಾಡ್ತಿದ್ದೀವಿ” ಅಂತ ಹೇಳಿದ್ರು. ಆಮೇಲೆ ನನ್ನನ್ನ ರೋಟರ್‌ ಒಕ್ಸೇ ಅಥವಾ ರೆಡ್‌ ಆಕ್ಸ್‌ ಜೈಲಿಗೆ ಹಾಕಿದ್ರು. ಒಂದು ವರ್ಷ ಆದಮೇಲೆ ಸರ್ಕಾರದ ವಿರುದ್ಧ ಹೋರಾಡಿದವಳು ಅಂತ ನನ್ನ ಮೇಲೆ ಕೇಸ್‌ ಹಾಕಿದ್ರು. ನಾನು ಹಿಂದೆ ಸೇರ್ಕೊಂಡಿದ್ದ ಗುಂಪಿನ ವಿದ್ಯಾರ್ಥಿಯೊಬ್ಬ, ನಾನು ಕೋರ್ಟಿನ ಗೋಡೆಗೆ ಪೋಸ್ಟರ್‌ ಹಚ್ಚಿ ಪ್ರತಿಭಟನೆ ಮಾಡಿದ್ದೀನಿ ಅನ್ನೋ ವಿಷಯವನ್ನ ಗುಪ್ತ ಪೊಲೀಸ್‌ ಹತ್ತಿರ ಹೇಳಿಬಿಟ್ಟ. ನನ್ನ ಕೇಸ್‌ ವಿಚಾರಣೆ ಮಾಡಿದಾಗ, ನಾನು ಹೇಳಿದ್ದನ್ನ ಯಾವುದೂ ಅವರು ತಲೆಗೇ ಹಾಕೊಳ್ಳಲಿಲ್ಲ. ಆರು ವರ್ಷ ನಂಗೆ ಜೈಲು ಶಿಕ್ಷೆ ವಿಧಿಸಿದ್ರು. ಆಗ ನಂಗೆ ಹುಷಾರಿಲ್ಲದೇ ಇದ್ದ ಕಾರಣ ನನ್ನನ್ನ ಜೈಲಿನಲ್ಲಿದ್ದ ಹಾಸ್ಪಿಟಲಿನ ಡಾರ್ಮೆಟ್ರಿಗೆ ಹಾಕಿದ್ರು. ಅಲ್ಲಿ 40 ಬೇರೆ ಸ್ತ್ರೀಯರು ಇದ್ದರು. ಅವರ ಮುಖದಲ್ಲಿ ಒಂಚೂರೂ ಕಳೆ ಇರಲಿಲ್ಲ, ಎಲ್ಲರೂ ಕುಗ್ಗಿ ಹೋಗಿದ್ರು. ಅವ್ರನ್ನ ನೋಡಿ ನಂಗೆ ಭಯ ಆಯ್ತು, ಬಾಗಿಲ ಹತ್ರ ಓಡಿ ಹೋಗಿ ಅದನ್ನ ಜೋರಾಗಿ ಬಡಿದೆ.

ಆಗ ಗಾರ್ಡ್‌, ‘ನಿಂಗೇನ್‌ ಬೇಕು?’ ಅಂತ ಕೇಳಿದ.

ಆಗ ನಾನು “ನಂಗೆ ಇಲ್ಲಿಂದ ಹೇಗಾದ್ರೂ ತಪ್ಪಿಸಿಕೊಳ್ಳಬೇಕು” ಅಂತ ಕಿರಿಚಿದೆ. “ನನ್ನನ್ನ ಒಬ್ಬರನ್ನೇ ಕೂಡಿ ಹಾಕೋ ಕೋಣೆಗಾದ್ರೂ ಹಾಕಿ, ಆದ್ರೆ ಇಲ್ಲಿಂದ ಹೇಗಾದ್ರೂ ತಪ್ಪಿಸಿ!” ಅಂತ ಕೇಳ್ಕೊಂಡೆ. ಆದ್ರೆ ಅವ್ರು ನನ್ನ ಮಾತನ್ನ ಕಿವಿಗೆ ಹಾಕೊಳ್ಳಲೇ ಇಲ್ಲ. ಸ್ವಲ್ಪ ಸಮ್ಯ ಆದ ಮೇಲೆ ಆ ಗುಂಪಿನಲ್ಲಿ ನಾನೊಬ್ಬ ಸ್ತ್ರೀಯನ್ನ ನೋಡಿದೆ. ಅವ್ರು ಬೇರೆಯವ್ರ ತರ ಇರ್ಲಿಲ್ಲ, ಅವ್ರ ಮುಖದಲ್ಲಿ ಕಳೆ ಇತ್ತು. ಅದಕ್ಕೆ ನಾನು ಅವ್ರ ಪಕ್ಕ ಹೋಗಿ ಕೂತ್ಕೊಂಡೆ.

ಆಗ ಅವ್ರು ನಂಗೆ, “ನೀನು ನನ್ನ ಪಕ್ಕ ಕೂತ್ಕೊಂಡ್ರೆ ಸ್ವಲ್ಪ ಹುಷಾರು” ಅಂದಾಗ ನಂಗೆ ಆಶ್ಚರ್ಯ ಆಯ್ತು. ಅವ್ರು ನಂಗೆ, “ನಾನೊಬ್ಬ ಯೆಹೋವನ ಸಾಕ್ಷಿ ಆಗಿದ್ರಿಂದ ಇಲ್ಲಿರೋರಿಗೆ ನನ್ನ ಕಂಡ್ರೆ ಆಗಲ್ಲ” ಅಂತ ಹೇಳಿದ್ರು.

ಕಮ್ಯುನಿಸ್ಟ್‌ ಸರ್ಕಾರ ಯಾಕೆ ಯೆಹೋವನ ಸಾಕ್ಷಿಗಳನ್ನ ಶತ್ರುಗಳ ತರ ನೋಡ್ತಿದೆ ಅಂತ ನಂಗಾಗ ಗೊತ್ತಾಗ್ಲಿಲ್ಲ. ಆದ್ರೆ ನಾನು ಚಿಕ್ಕವಳಿದ್ದಾಗ ಇಬ್ಬರು ಬೈಬಲ್‌ ವಿದ್ಯಾರ್ಥಿಗಳು (ಆಗ ಯೆಹೋವನ ಸಾಕ್ಷಿಗಳನ್ನ ಹಾಗೆ ಕರೆಯುತ್ತಿದ್ರು) ನನ್ನ ಅಪ್ಪನನ್ನ ಭೇಟಿ ಮಾಡ್ತಾ ಇದ್ದರು. ಹಾಗಾಗಿ ನಂಗೆ ಅವ್ರ ಪರಿಚಯ ಇತ್ತು. “ಬೈಬಲ್‌ ವಿದ್ಯಾರ್ಥಿಗಳು ಹೇಳೋದೇ ಸರಿ!” ಅಂತ ನನ್ನ ಅಪ್ಪ ಹೇಳ್ತಿದ್ರು.

ಇವ್ರ ಪರಿಚಯ ಆಗಿದ್ದಕ್ಕೆ ನಂಗೆಷ್ಟು ಖುಷಿ ಆಯ್ತು ಅಂದರೆ ನನ್ನ ಕಣ್ಣಲ್ಲಿ ನೀರೇ ಬಂತು. ಅವ್ರ ಹೆಸ್ರು, ಬೇರ್ಟಾ ಬ್ರುಗೆಮಾಯ. ನಾನು ಅವ್ರ ಹತ್ರ, “ದಯವಿಟ್ಟು ಯೆಹೋವನ ಬಗ್ಗೆ ಹೇಳಿ” ಅಂತ ಕೇಳಿದೆ. ಅವಾಗಿಂದ ನಾವು ಬೈಬಲ್‌ ವಿಷಯಗಳನ್ನ ಚರ್ಚೆ ಮಾಡೋಕೆ ಶುರು ಮಾಡಿದ್ವಿ. ಆಗ ಯೆಹೋವ ಪ್ರೀತಿಯ, ನ್ಯಾಯದ, ಶಾಂತಿಯ ದೇವರು ಅಂತ ಗೊತ್ತಾಯ್ತು. ಕೆಟ್ಟ ಮನುಷ್ಯರು ಮಾಡಿರೋ ಎಲ್ಲ ಹಾನಿಯನ್ನ ಸರಿ ಮಾಡ್ತಾನೆ ಅಂತನೂ ಗೊತ್ತಾಯ್ತು. “ಇನ್ನು ಸ್ವಲ್ಪ ಸಮಯದಲ್ಲೇ ಕೆಟ್ಟವರು ಇಲ್ಲದೆ ಹೋಗ್ತಾರೆ. . . . ಆದ್ರೆ ದೀನ ಜನ್ರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ, ನೆಮ್ಮದಿಯಾಗಿ ಖುಷಿಖುಷಿಯಾಗಿ ಅದನ್ನ ಅನುಭವಿಸ್ತಾರೆ” ಅಂತ ಕೀರ್ತನೆ 37:10, 11 ಹೇಳುತ್ತೆ.

ಜೈಲಿನಿಂದ ಬಿಡುಗಡೆಯಾಗಿ ವೆಸ್ಟ್‌ ಜರ್ಮನಿಗೆ

ಜೈಲಿನಲ್ಲಿ ಸುಮಾರು 5 ವರ್ಷ ಕಳೆದ ಮೇಲೆ ಅಂದ್ರೆ 1956ರಲ್ಲಿ ನಂಗೆ ಬಿಡುಗಡೆ ಆಯ್ತು. ಐದು ದಿನ ಕಳೆದ ಮೇಲೆ ನಾನು ಈಸ್ಟ್‌ ಜರ್ಮನಿಯಿಂದ ವೆಸ್ಟ್‌ ಜರ್ಮನಿಗೆ ಹೋದೆ. ಅಷ್ಟೊತ್ತಿಗಾಗ್ಲೇ ನಂಗೆ ಇಬ್ಬರು ಹೆಣ್ಣು ಮಕ್ಕಳಿದ್ರು. ಹ್ಯಾನಿಲೋರೆ ಮತ್ತು ಸಬಿನಾ. ಅವ್ರನ್ನೂ ನನ್ನ ಜೊತೆ ಕರ್ಕೊಂಡು ಹೋದೆ. ಆಮೇಲೆ ನಂಗೂ ನನ್ನ ಗಂಡನಿಗೂ ಡೈವೋರ್ಸ್‌ ಆಯ್ತು. ನಂಗೆ ಯೆಹೋವನ ಸಾಕ್ಷಿಗಳು ಮತ್ತೆ ಸಿಕ್ಕಿದ್ರು. ನಾನು ಬೈಬಲನ್ನ ಕಲ್ತೆ, ಆಗ ನಾನು ಯೆಹೋವನ ನೀತಿನಿಯಮಗಳಿಗೆ ಅನುಸಾರವಾಗಿ ಜೀವನ ಮಾಡ್ಬೇಕಂದ್ರೆ ತುಂಬ ಬದಲಾವಣೆಗಳನ್ನ ಮಾಡ್ಬೇಕು ಅಂತ ಗೊತ್ತಾಯ್ತು. ಆ ಬದಲಾವಣೆಗಳನ್ನ ಮಾಡ್ಕೊಂಡು 1958ರಲ್ಲಿ ದೀಕ್ಷಾಸ್ನಾನ ಪಡ್ಕೊಂಡೆ.

ಆಮೇಲೆ ನಾನು ಯೆಹೋವನ ಸಾಕ್ಷಿಯಾದ ಕ್ಲಾವ್ಸ್‌ ಮೆನ್ನೆಯನ್ನ ಮದುವೆಯಾದೆ. ನಮ್ಮ ಮದುವೆ ಜೀವನ ತುಂಬ ಚೆನ್ನಾಗಿತ್ತು. ನಮಗೆ ಇಬ್ಬರು ಮಕ್ಕಳು ಹುಟ್ಟಿದ್ರು, ಬೆಂಜಮಿನ್‌ ಮತ್ತು ಟಾಬಿಯ. ದುಃಖಕರವಾದ ವಿಷಯ ಏನಂದ್ರೆ 20 ವರ್ಷಗಳ ಹಿಂದೆ ಕ್ಲಾವ್ಸ್‌ ಒಂದು ಆಕ್ಸಿಡೆಂಟ್‌ನಲ್ಲಿ ತೀರಿ ಹೋದ್ರು. ನಾನು ವಿಧವೆಯಾದೆ. ಆದ್ರೆ ಸತ್ತು ಹೋಗಿರುವವರನ್ನ ದೇವರು ಮತ್ತೆ ತನ್ನ ಆಳ್ವಿಕೆಯಲ್ಲಿ ಜೀವಂತವಾಗಿ ಎಬ್ಬಿಸ್ತಾನೆ ಅನ್ನೋ ನಿರೀಕ್ಷೆ ತುಂಬ ಸಾಂತ್ವನ ಕೊಡ್ತು. (ಲೂಕ 23:43; ಅಪೊಸ್ತಲರ ಕಾರ್ಯ 24:15) ಈಗ ನನ್ನ ನಾಲ್ಕೂ ಮಕ್ಕಳು ಯೆಹೋವನ ಸೇವೆ ಮಾಡ್ತಿರೋದನ್ನ ನೋಡ್ವಾಗ ತುಂಬ ಖುಷಿಯಾಗುತ್ತೆ.

ಯೆಹೋವನೊಬ್ಬನೇ ನ್ಯಾಯ ಕೊಡೋಕೆ ಸಾಧ್ಯ ಅಂತ ನಂಗೆ ಬೈಬಲ್‌ ಕಲಿತ ಮೇಲೆ ಗೊತ್ತಾಯ್ತು. ದೇವರು ಮನುಷ್ಯರ ತರ ಅಲ್ಲ. ಆತನು ಎಲ್ಲ ವಿಷಯಗಳನ್ನ ನೋಡ್ತಾನೆ. ಜನರ ಕಣ್ಣಿಗೆ ಕಾಣದೇ ಇರೋದು ಕೂಡ ಆತನಿಗೆ ಅರ್ಥ ಆಗುತ್ತೆ. ನಾನು ಅನ್ಯಾಯ ಆಗೋದನ್ನ ನೋಡಿದಾಗ ಅಥವಾ ನನಗೇ ಅನ್ಯಾಯ ಆದಾಗ ಈ ವಿಷಯ ನಂಗೆ ಸಹಾಯ ಮಾಡುತ್ತೆ. ಪ್ರಸಂಗಿ 5:8 ಹೀಗೆ ಹೇಳುತ್ತೆ: “ನಿನ್ನ ಪ್ರದೇಶದಲ್ಲಿ ದೊಡ್ಡ ಅಧಿಕಾರಿಯೊಬ್ಬ ಬಡವನ ಮೇಲೆ ದಬ್ಬಾಳಿಕೆ ಮಾಡ್ತಿದ್ರೆ, ನೀತಿನ್ಯಾಯ ಮೀರಿ ನಡಿತಿದ್ರೆ ಆಶ್ಚರ್ಯ ಪಡಬೇಡ. ಯಾಕಂದ್ರೆ ಅವನಿಗಿಂತ ಮೇಲಿರೋ ಅಧಿಕಾರಿ ಅವನನ್ನ ಗಮನಿಸ್ತಾ ಇರ್ತಾನೆ. ಅವರಿಬ್ರ ಮೇಲೆ ಇನ್ನೂ ದೊಡ್ಡ ಅಧಿಕಾರಿಗಳು ಇದ್ದಾರೆ.” ಇಲ್ಲಿ ಹೇಳಿರೋ “ದೊಡ್ಡ ಅಧಿಕಾರಿ” ಯೆಹೋವ ದೇವರಾಗಿದ್ದಾನೆ. “ಆತನ ದೃಷ್ಟಿಗೆ ಮರೆಯಾದ ಸೃಷ್ಟಿ ಒಂದೂ ಇಲ್ಲ. ಆತನ ಕಣ್ಣಿಗೆ ಎಲ್ಲ ಬಯಲಾಗಿದೆ, ಎಲ್ಲವನ್ನೂ ಆತನು ನೋಡ್ತಾನೆ. ನಾವು ಲೆಕ್ಕ ಕೊಡಬೇಕಾಗಿರೋದು ಆತನಿಗೇ” ಅಂತ ಇಬ್ರಿಯ 4:13 ಹೇಳುತ್ತೆ.

ಸುಮಾರು 90 ವರ್ಷ ಹಿಂತಿರುಗಿ ನೋಡಿದಾಗ

ನಾಜಿ ಸರ್ಕಾರದ ಕೆಳಗೆ ಜೀವನ ಹೇಗಿತ್ತು ಅಂತ ನನ್ನ ಹತ್ರ ಕೆಲವರು ಕೇಳ್ತಾರೆ. ಆ ಎರಡು ಸರ್ಕಾರಗಳ ಕೆಳಗೆ ಜೀವನ ತುಂಬ ಕಷ್ಟ ಆಗಿತ್ತು. ಎರಡು ಸರ್ಕಾರನೂ ಮನುಷ್ಯರ ಮೇಲೆ ತಮಗೆ ಅಧಿಕಾರ ನಡೆಸಕ್ಕೆ ಅರ್ಹತೆ ಇಲ್ಲ ಅಂತನೇ ತೋರಿಸಿಕೊಟ್ಟಿವೆ. ಬೈಬಲ್‌ ಸರಿಯಾಗಿಯೇ ಹೇಳುತ್ತೆ: “ಮನುಷ್ಯ ಮನುಷ್ಯನ ಮೇಲೆ ಅಧಿಕಾರ ನಡೆಸಿ ಹಾನಿ ಮಾಡಿದ್ದಾನೆ ಅನ್ನೋದನ್ನ ನೋಡಿದೆ.”—ಪ್ರಸಂಗಿ 8:9.

ನಾನು ಯುವತಿಯಾಗಿದ್ದಾಗ ನ್ಯಾಯಕ್ಕಾಗಿ ಮಾನವ ಸರ್ಕಾರಗಳ ಕಡೆ ನೋಡ್ತಿದ್ದೆ. ಆದ್ರೆ ಈಗ ನಂಗೆ ನಿಜ ವಿಷಯ ಗೊತ್ತಾಗಿದೆ. ನ್ಯಾಯ ಕೊಡೋಕಾಗೋದು ಸೃಷ್ಟಿಮಾಡಿದ ದೇವರಿಗೆ ಮಾತ್ರ. ಆತನು ಆದಷ್ಟು ಬೇಗನೇ ಕೆಟ್ಟ ವಿಷಯವನ್ನ ತೆಗೆದು ಹಾಕ್ತಾನೆ ಮತ್ತು ತನ್ನ ಆಡಳಿತವನ್ನ ತರ್ತಾನೆ. ಆ ಆಡಳಿತವನ್ನ ತನ್ನ ಮಗನಾದ ಯೇಸುವಿಗೆ ಕೊಟ್ಟಿದ್ದಾನೆ. ಯೇಸು ತನ್ನ ಬಗ್ಗೆ ಅಲ್ಲ ಬೇರೆಯವ್ರ ಬಗ್ಗೆ ಯೋಚಿಸ್ತಾನೆ, ಆತನಿಗೆ ಬೇರೆಯವ್ರ ಬಗ್ಗೆನೇ ಕಾಳಜಿ. ಯೇಸುವಿನ ಬಗ್ಗೆ ಬೈಬಲ್‌ ಹೀಗೆ ಹೇಳುತ್ತೆ: “ನೀನು ಒಳ್ಳೇದನ್ನ ಪ್ರೀತಿಸಿದೆ, ಕೆಟ್ಟದನ್ನ ದ್ವೇಷಿಸಿದೆ.” (ಇಬ್ರಿಯ 1:9) ಇಂಥ ಒಂದು ಅದ್ಭುತ, ನ್ಯಾಯವಂತ ರಾಜನ ಕಡೆಗೆ ನನ್ನನ್ನ ಸೆಳೆದಿದ್ದಕ್ಕೆ ದೇವರಿಗೆ ತುಂಬ ತುಂಬ ಥ್ಯಾಂಕ್ಸ್‌ ಹೇಳ್ತೀನಿ. ಆ ಆಡಳಿತದ ಕೆಳಗೆ ಸದಾಕಾಲ ಬದುಕೋಕೆ ನಾನು ಇಷ್ಟಪಡ್ತೀನಿ!

[ಚಿತ್ರ]

ವೆಸ್ಟ್‌ ಜರ್ಮನಿಗೆ ಬಂದ ನಂತರ ನನ್ನ ಹೆಣ್ಣು ಮಕ್ಕಳಾದ ಹ್ಯಾನಿಲೋರೆ ಮತ್ತು ಸಬಿನಾ ಜೊತೆ

[ಚಿತ್ರ]

ಇವತ್ತು ನನ್ನ ಮಗ ಬೆಂಜಮಿನ್‌ ಮತ್ತು ಅವನ ಹೆಂಡತಿ ಸ್ಯಾಂಡ್ರ ಜೊತೆ