ಪಾಠ 60
ಯೆಹೋವನ ಸೇವೆಯಲ್ಲಿ ಪ್ರಗತಿ ಮಾಡುತ್ತಾ ಇರಿ
ಈ ಪುಸ್ತಕದಿಂದ ಯೆಹೋವ ದೇವರ ಬಗ್ಗೆ ನೀವು ತುಂಬ ವಿಷಯಗಳನ್ನ ಕಲಿತಿದ್ದೀರ. ಅದರಿಂದ ನೀವು ಯೆಹೋವನನ್ನು ತುಂಬಾ ಪ್ರೀತಿಸೋಕೆ ಶುರುಮಾಡಿರುತ್ತೀರ. ಇಷ್ಟರೊಳಗೆ ನೀವು ಯೆಹೋವನಿಗೆ ಸಮರ್ಪಣೆ ಮತ್ತು ದೀಕ್ಷಾಸ್ನಾನ ಮಾಡಿಕೊಂಡಿರುತ್ತೀರ. ಒಂದುವೇಳೆ ಇಲ್ಲಾ ಅಂದರೆ ಆದಷ್ಟು ಬೇಗನೇ ಅದಕ್ಕಾಗಿ ಪ್ರಯತ್ನ ಮಾಡ್ತಿರಬಹುದು. ದೀಕ್ಷಾಸ್ನಾನ ಆದ ಮೇಲೂ ನಿಮ್ಮ ಪ್ರಗತಿಯನ್ನ ಮುಂದುವರಿಸುತ್ತಾ ಇರಿ ಮತ್ತು ಯೆಹೋವ ದೇವರ ಜೊತೆ ಆಪ್ತ ಸ್ನೇಹವನ್ನ ಬೆಳೆಸಿಕೊಳ್ಳುತ್ತಾ ಇರಿ. ಅದನ್ನ ಹೇಗೆ ಮಾಡೋದು ಅಂತ ನೋಡೋಣ.
1. ನಾವು ಯಾಕೆ ಯೆಹೋವ ದೇವರ ಜೊತೆ ಆಪ್ತ ಸ್ನೇಹವನ್ನ ಬಲಪಡಿಸಿಕೊಳ್ಳುತ್ತಾ ಇರಬೇಕು?
ಯೆಹೋವ ದೇವರ ಜೊತೆ ಆಪ್ತ ಸ್ನೇಹವನ್ನ ಬಲಪಡಿಸಿಕೊಳ್ಳಲು ನಮ್ಮಿಂದಾದ ಎಲ್ಲಾ ಪ್ರಯತ್ನ ಮಾಡಬೇಕು. ಯಾಕಂದ್ರೆ ಹೀಗೆ ಮಾಡೋದಾದರೆ, ‘ನಾವು ಯಾವತ್ತೂ ಯೆಹೋವನಿಂದ ದೂರ ತೇಲಿ ಹೋಗಲ್ಲ.’ (ಇಬ್ರಿಯ 2:1) ನಾವು ಯೆಹೋವ ದೇವರ ಸೇವೆಯನ್ನ ನಂಬಿಗಸ್ತಿಕೆಯಿಂದ ಮಾಡುತ್ತಾ ಇರಲು ಏನು ಮಾಡಬೇಕು? ನಾವು ಸಿಹಿಸುದ್ದಿಯನ್ನ ನಮ್ಮಿಂದ ಆದಷ್ಟು ಸಾರಬೇಕು ಮತ್ತು ದೇವರ ಸೇವೆಯನ್ನ ಇನ್ನೂ ಹೇಗೆಲ್ಲಾ ಮಾಡಬಹುದು ಅಂತ ಅವಕಾಶಗಳಿಗಾಗಿ ಹುಡುಕಬೇಕು. (ಫಿಲಿಪ್ಪಿ 3:16 ಓದಿ.) ಯಾಕಂದ್ರೆ ಯೆಹೋವ ದೇವರ ಸೇವೆ ಮಾಡಿದರೆ ಮಾತ್ರ ನಮ್ಮ ಜೀವನ ಸಾರ್ಥಕ!—ಕೀರ್ತನೆ 84:10.
2. ಪ್ರಗತಿ ಮಾಡೋಕೆ ಇನ್ನೂ ಏನೆಲ್ಲಾ ಮಾಡುತ್ತಾ ಇರಬೇಕು?
ನಿಮ್ಮ ಬೈಬಲ್ ಸ್ಟಡಿಯೇನೋ ಈಗ ಮುಗಿಯುತ್ತಾ ಇದೆ, ಆದರೆ ಯೆಹೋವ ದೇವರ ಜೊತೆ ನಿಮ್ಮ ಪ್ರಯಾಣ ಈಗಷ್ಟೇ ಶುರುವಾಗಿದೆ. ಬೈಬಲ್ ಹೀಗೆ ಹೇಳುತ್ತೆ: “ನೀವು ಹೊಸ ವ್ಯಕ್ತಿತ್ವವನ್ನ ಬಟ್ಟೆ ತರ ಹಾಕಬೇಕು.” (ಎಫೆಸ 4:23, 24) ನೀವು ಬೈಬಲನ್ನ ಇನ್ನಷ್ಟು ಕಲಿಯುತ್ತಾ ಹೋದಂತೆ, ಕೂಟಗಳಿಗೆ ಹಾಜರಾಗುತ್ತಿದ್ದಂತೆ ಯೆಹೋವ ದೇವರ ಬಗ್ಗೆ ಆತನ ಗುಣಗಳ ಬಗ್ಗೆ ಹೊಸ ಹೊಸ ವಿಷಯಗಳನ್ನ ಕಲಿಯುತ್ತೀರ. ಆತನ ಬಗ್ಗೆ ನೀವೇನು ಕಲಿಯುತ್ತೀರೋ ಅದನ್ನ ನಿಮ್ಮ ಜೀವನದಲ್ಲಿ ಅನ್ವಯಿಸಿಕೊಳ್ಳಿ. ಯೆಹೋವ ದೇವರ ಮನಸ್ಸನ್ನ ಖುಷಿಪಡಿಸಲಿಕ್ಕೆ ನೀವು ಇನ್ನೂ ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ ಮಾಡುತ್ತಾ ಇರಿ.
3. ಪ್ರಗತಿ ಮಾಡೋಕೆ ಯೆಹೋವನು ನಿಮಗೆ ಹೇಗೆ ಸಹಾಯ ಮಾಡ್ತಾನೆ?
‘ದೇವರೇ ನಿಮ್ಮ ತರಬೇತಿಯನ್ನ ಮುಗಿಸಿ ನಿಮ್ಮನ್ನ ಬಲಪಡಿಸ್ತಾನೆ. ನೀವು ನಂಬಿಗಸ್ತರಾಗಿ ಉಳಿಯೋಕೆ ಸಹಾಯ ಮಾಡ್ತಾನೆ. ನಿಮ್ಮನ್ನ ಗಟ್ಟಿ ನೆಲದ ಮೇಲೆ ನಿಲ್ಲಿಸ್ತಾನೆ’ ಅಂತ ಬೈಬಲ್ ಹೇಳುತ್ತೆ. (1 ಪೇತ್ರ 5:10) ನಿಜ, ನಮಗೆಲ್ಲರಿಗೂ ಒಂದಲ್ಲಾ ಒಂದು ರೀತಿಯ ನಂಬಿಕೆಯ ಪರೀಕ್ಷೆಗಳು ಬರುತ್ತೆ. ಆದರೆ ಅದನ್ನು ಎದುರಿಸಲು ಬೇಕಾದ ಶಕ್ತಿಯನ್ನ ಯೆಹೋವ ದೇವರು ನಮಗೆ ಕೊಡ್ತಾನೆ. (ಕೀರ್ತನೆ 139:23, 24) ಯೆಹೋವ ದೇವರ ಸೇವೆಯನ್ನ ನಂಬಿಗಸ್ತಿಕೆಯಿಂದ ಮಾಡಲು ಬೇಕಾಗಿರುವ ಬಯಕೆಯನ್ನ ಮತ್ತು ಶಕ್ತಿಯನ್ನ ನಮಗೆ ಕೊಡ್ತಾನೆ ಅಂತಾನೂ ಮಾತು ಕೊಟ್ಟಿದ್ದಾನೆ.—ಫಿಲಿಪ್ಪಿ 2:13 ಓದಿ.
ಹೆಚ್ಚನ್ನ ತಿಳಿಯೋಣ
ನಾವು ಹೇಗೆ ಪ್ರಗತಿ ಮಾಡುತ್ತಾ ಇರಬಹುದು ಮತ್ತು ಯೆಹೋವನು ನಮ್ಮನ್ನ ಹೇಗೆ ಆಶೀರ್ವದಿಸುತ್ತಾನೆ ಅಂತ ತಿಳಿಯಿರಿ.
4. ನಿಮ್ಮ ಆಪ್ತ ಸ್ನೇಹಿತನ ಜೊತೆ ಸಂವಾದ ಮಾಡುತ್ತಾ ಇರಿ
ಇಲ್ಲಿವರೆಗೆ ಯೆಹೋವ ದೇವರ ಸ್ನೇಹಿತರಾಗೋಕೆ ಪ್ರಾರ್ಥನೆ ಮತ್ತು ಬೈಬಲ್ ಕಲಿಯುವುದು ನಿಮಗೆ ಸಹಾಯ ಮಾಡಿದೆ. ಆತನಿಗೆ ಇನ್ನೂ ಆಪ್ತರಾಗೋಕೆ ಇವು ಹೇಗೆ ಸಹಾಯ ಮಾಡುತ್ತೆ?
ಕೀರ್ತನೆ 62:8 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
-
ಯೆಹೋವ ದೇವರ ಜೊತೆ ನಿಮ್ಮ ಸ್ನೇಹವನ್ನ ಬಲಪಡಿಸೋಕೆ ನೀವು ಪ್ರಾರ್ಥನೆಯನ್ನ ಇನ್ನೂ ಚೆನ್ನಾಗಿ ಹೇಗೆ ಮಾಡಬಹುದು?
ಕೀರ್ತನೆ 1:2 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
-
ಯೆಹೋವ ದೇವರ ಜೊತೆ ನಿಮ್ಮ ಸ್ನೇಹವನ್ನ ಬಲಪಡಿಸೋಕೆ ಬೈಬಲ್ ಓದುವಾಗ ಇನ್ನೂ ಏನೆಲ್ಲಾ ಮಾಡಬೇಕು ಅಂತ ನಿಮಗೆ ಅನಿಸುತ್ತೆ?
ನಿಮ್ಮ ವೈಯಕ್ತಿಕ ಬೈಬಲ್ ಅಧ್ಯಯನವನ್ನ ಇನ್ನೂ ಹೆಚ್ಚು ಆನಂದಿಸೋಕೆ ಏನು ಮಾಡಬೇಕೆಂದು ತಿಳಿಯಲು ವಿಡಿಯೋ ನೋಡಿ, ನಂತರ ಪ್ರಶ್ನೆಗಳನ್ನ ಚರ್ಚಿಸಿ.
-
ಈ ವಿಡಿಯೋದಲ್ಲಿ ನೋಡಿದ ಯಾವ ವಿಷಯಗಳನ್ನ ನೀವು ಮಾಡಕ್ಕೆ ಇಷ್ಟಪಡುತ್ತೀರಾ?
-
ಯಾವ ವಿಷಯಗಳ ಬಗ್ಗೆ ಹೆಚ್ಚನ್ನ ಕಲಿಯಲಿಕ್ಕೆ ಇಷ್ಟಪಡುತ್ತೀರಾ?
5. ದೇವರ ಸೇವೆಯಲ್ಲಿ ಗುರಿಗಳನ್ನ ಇಡಿ
ಯೆಹೋವ ದೇವರ ಸೇವೆಯಲ್ಲಿ ಗುರಿಗಳನ್ನ ಇಡೋದು ಪ್ರಗತಿ ಮಾಡಲು ನಿಮಗೆ ಸಹಾಯ ಮಾಡುತ್ತೆ. ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.
-
ವಿಡಿಯೋದಲ್ಲಿ ನೋಡಿದ ಹಾಗೆ ಗುರಿಗಳನ್ನ ಇಟ್ಟಿದ್ದರಿಂದ ಸಹೋದರಿ ಕ್ಯಾಮರೂನ್ ಹೇಗೆ ಪ್ರಯೋಜನ ಪಡೆದರು?
ನಮ್ಮೆಲ್ಲರಿಗೂ ಬೇರೆಬೇರೆ ದೇಶಕ್ಕೆ ಹೋಗಿ ಸಿಹಿಸುದ್ದಿಯನ್ನ ಸಾರಕ್ಕೆ ಆಗದೇ ಇರಬಹುದು. ಆದರೆ ನಾವೆಲ್ಲರೂ ನಮ್ಮಿಂದ ಆಗುವ ಚಿಕ್ಕಚಿಕ್ಕ ಗುರಿಗಳನ್ನ ಇಡಬಹುದು. ಜ್ಞಾನೋಕ್ತಿ 21:5 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
-
ನೀವು ಸಭೆಯಲ್ಲಿ ಯಾವ ಗುರಿಗಳನ್ನ ಇಡಕ್ಕೆ ಇಷ್ಟಪಡುತ್ತೀರಾ?
-
ಸಾರುವ ಕೆಲಸದಲ್ಲಿ ಯಾವ ಗುರಿಗಳನ್ನ ಇಡಕ್ಕೆ ಇಷ್ಟಪಡುತ್ತೀರಾ?
ನೀವು ಇಟ್ಟಿರುವ ಗುರಿಗಳನ್ನ ತಲುಪಲಿಕ್ಕೆ ಈ ವಚನ ಹೇಗೆ ಸಹಾಯ ಮಾಡುತ್ತೆ?
ನೀವು ಇಡಬಹುದಾದ ಗುರಿಗಳು . . .
-
ಪ್ರಾರ್ಥನೆಯ ಗುಣಮಟ್ಟವನ್ನ ಇನ್ನೂ ಹೆಚ್ಚಿಸಿ.
-
ಪೂರ್ತಿ ಬೈಬಲನ್ನ ಓದಿ.
-
ಸಭೆಯಲ್ಲಿರುವ ಪ್ರತಿಯೊಬ್ಬರನ್ನ ಚೆನ್ನಾಗಿ ಪರಿಚಯ ಮಾಡಿಕೊಳ್ಳಿ.
-
ಒಂದು ಬೈಬಲ್ ಸ್ಟಡಿಯನ್ನ ಶುರುಮಾಡಿ.
-
ಪಯನೀಯರ್ ಸೇವೆ ಮಾಡಿ.
-
ನೀವು ಒಬ್ಬ ಸಹೋದರನಾಗಿದ್ರೆ ಸಹಾಯಕ ಸೇವಕನಾಗಲು ಪ್ರಗತಿ ಮಾಡಿ.
6. ಎಂದೆಂದೂ ಖುಷಿಯಾಗಿ ಬಾಳೋಣ!
ಕೀರ್ತನೆ 22:26 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
-
ಈಗ ಮತ್ತು ಎಂದೆಂದೂ ಖುಷಿಯಾಗಿ ಬಾಳೋಕೆ ನೀವೇನು ಮಾಡಬೇಕು?
ನಾವೇನು ಕಲಿತ್ವಿ
ಯೆಹೋವ ದೇವರ ಜೊತೆ ಆಪ್ತ ಸ್ನೇಹವನ್ನ ಬಲಪಡಿಸಿಕೊಳ್ಳೋಣ, ಆತನ ಸೇವೆಯಲ್ಲಿ ಗುರಿಗಳನ್ನ ಇಡೋಣ, ಹೀಗೆ ಎಂದೆಂದೂ ಖುಷಿಯಾಗಿ ಬಾಳೋಣ!
ನೆನಪಿದೆಯಾ
-
ಯೆಹೋವನ ಸೇವೆ ಮಾಡಲು ಆತನೇ ನಮಗೆ ಸಹಾಯ ಮಾಡುತ್ತಾನೆ ಅಂತ ಹೇಗೆ ಹೇಳಬಹುದು?
-
ಯೆಹೋವ ದೇವರ ಜೊತೆ ಆಪ್ತ ಸ್ನೇಹವನ್ನ ಬಲಪಡಿಸಿಕೊಳ್ಳೋಕೆ ಏನು ಮಾಡಬೇಕು?
-
ದೇವರ ಸೇವೆಯಲ್ಲಿ ನೀವು ಇಡುವ ಗುರಿಗಳು ಪ್ರಗತಿ ಮಾಡಕ್ಕೆ ಹೇಗೆ ಸಹಾಯ ಮಾಡುತ್ತೆ?
ಇದನ್ನೂ ನೋಡಿ
ಯೆಹೋವನು ಯಾವುದನ್ನ ಮೆಚ್ಚುತ್ತಾನೆ: ಭಕ್ತಿಯ ಮುಖವಾಡ ಹಾಕಿಕೊಂಡಿರೋದಾ ಅಥವಾ ಜೀವನ ಪೂರ್ತಿ ಆತನಿಗೆ ನಂಬಿಗಸ್ತರಾಗಿರೋದಾ?
ಯೆಹೋವನ ಸೇವೆಯನ್ನ ನಂಬಿಗಸ್ತಿಕೆಯಿಂದ ಮಾಡುವವರಿಗೂ ಕೆಲವೊಮ್ಮೆ ನಿರುತ್ಸಾಹ ಆಗಬಹುದು. ಅಂಥ ಸಮಯದಲ್ಲೂ ಉತ್ಸಾಹದಿಂದ ದೇವರ ಸೇವೆ ಮಾಡಕ್ಕೆ ಯಾವುದು ಸಹಾಯ ಮಾಡುತ್ತೆ ಅಂತ ನೋಡಿ.
ಅಧ್ಯಯನ ಮತ್ತು ಧ್ಯಾನದ ಮೂಲಕ ಸಂತೋಷವನ್ನು ಮತ್ತೆ ಪಡೆದುಕೊಳ್ಳಿ (5:26)
ದೇವರ ಸೇವೆಯಲ್ಲಿ ಗುರಿಗಳನ್ನ ಇಡೋದು ಮತ್ತು ಅದನ್ನ ಮುಟ್ಟೋದು ಹೇಗೆ?
“ನಿಮ್ಮ ಸೃಷ್ಟಿಕರ್ತನನ್ನು ಮಹಿಮೆಪಡಿಸಲು ಆಧ್ಯಾತ್ಮಿಕ ಗುರಿಗಳನ್ನು ಉಪಯೋಗಿಸಿರಿ” (ಕಾವಲಿನಬುರುಜು, ಜುಲೈ 15, 2004)
ಒಬ್ಬ ಪ್ರೌಢ ಕ್ರೈಸ್ತನಾಗೋದು ಯಾಕೆ ಪ್ರಾಮುಖ್ಯ ಮತ್ತು ಅದಕ್ಕಾಗಿ ಏನು ಮಾಡಬೇಕು?
“ಪ್ರೌಢತೆಯ ಕಡೆಗೆ ಮುಂದೊತ್ತಿ—‘ಯೆಹೋವನ ಮಹಾದಿನ ಹತ್ತಿರವಿದೆ’” (ಕಾವಲಿನಬುರುಜು, ಮೇ 15, 2009)