ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 59

ಹಿಂಸೆಯನ್ನ ತಾಳಿಕೊಳ್ಳೋಕೆ ನಿಮ್ಮಿಂದ ಖಂಡಿತ ಆಗುತ್ತೆ!

ಹಿಂಸೆಯನ್ನ ತಾಳಿಕೊಳ್ಳೋಕೆ ನಿಮ್ಮಿಂದ ಖಂಡಿತ ಆಗುತ್ತೆ!

ಕ್ರೈಸ್ತರಾದ ನಾವೆಲ್ಲರೂ ಇವತ್ತಲ್ಲ ನಾಳೆ, ಹಿಂಸೆ ಮತ್ತು ವಿರೋಧವನ್ನ ಎದುರಿಸಬೇಕಾಗುತ್ತೆ. ಹಾಗಂತ ನಾವದಕ್ಕೆ ಹೆದರಬೇಕಾ?

1. ನಮಗೆ ಹಿಂಸೆ ಬಂದೇ ಬರುತ್ತೆ ಅಂತ ಹೇಗೆ ಹೇಳಬಹುದು?

ಬೈಬಲ್‌ ಹೀಗೆ ಹೇಳುತ್ತೆ: “ಕ್ರಿಸ್ತ ಯೇಸುವಿನ ಶಿಷ್ಯರಾಗಿ ದೇವರನ್ನ ಆರಾಧಿಸ್ತಾ ಜೀವಿಸೋಕೆ ಬಯಸೋ ಎಲ್ರಿಗೂ ಹಿಂಸೆ ಬರುತ್ತೆ.” (2 ತಿಮೊತಿ 3:12) ಯೇಸು ಲೋಕದ ಜನರ ತರ ಇಲ್ಲದೇ ಇದ್ದಿದ್ರಿಂದ ಆತನಿಗೆ ಹಿಂಸೆ ಬಂತು. ನಾವು ಕೂಡ ಲೋಕದ ಜನರ ತರ ಇಲ್ಲ. ಹಾಗಾಗಿ ನಮಗೂ ಹಿಂಸೆ ಬಂದೇ ಬರುತ್ತೆ, ಅದರಲ್ಲಿ ಆಶ್ಚರ್ಯವೇನಿಲ್ಲ. ಸರ್ಕಾರಗಳು ಮತ್ತು ಧಾರ್ಮಿಕ ಸಂಘಟನೆಗಳು ನಮ್ಮ ಮೇಲೆ ವಿರೋಧ ಮತ್ತು ಹಿಂಸೆಯನ್ನ ತರುತ್ತೆ ಅಂತ ನಮಗೆ ಚೆನ್ನಾಗಿ ಗೊತ್ತು.—ಯೋಹಾನ 15:18, 19.

2. ಹಿಂಸೆಯನ್ನ ತಾಳಿಕೊಳ್ಳೋಕೆ ನಾವು ಈಗಲೇ ಹೇಗೆ ರೆಡಿಯಾಗಬಹುದು?

ನಾವು ಈಗಲೇ ಯೆಹೋವ ದೇವರ ಮೇಲೆ ನಂಬಿಕೆ, ಭರವಸೆಯನ್ನ ಜಾಸ್ತಿ ಮಾಡಿಕೊಳ್ಳಬೇಕು. ಅದಕ್ಕಾಗಿ ಪ್ರತಿದಿನ ಪ್ರಾರ್ಥನೆ ಮಾಡಬೇಕು, ಬೈಬಲ್‌ ಓದಬೇಕು, ತಪ್ಪದೇ ಕೂಟಗಳಿಗೆ ಹಾಜರಾಗಬೇಕು. ನಾವು ಹೀಗೆಲ್ಲಾ ಮಾಡೋದಾದ್ರೆ ಕುಟುಂಬದಿಂದ ಅಥವಾ ಹೊರಗಿನಿಂದ ಹಿಂಸೆ, ವಿರೋಧ ಬಂದರೂ ಧೈರ್ಯವಾಗಿ ತಾಳಿಕೊಳ್ಳುತ್ತೇವೆ. ಅಪೊಸ್ತಲ ಪೌಲನಿಗೂ ಹಿಂಸೆ ವಿರೋಧ ಬಂತು. ಅವನು ಹೇಳಿದ್ದು: “ಯೆಹೋವ ನನಗೆ ಸಹಾಯ ಮಾಡ್ತಾನೆ. ನಾನು ಹೆದ್ರಲ್ಲ.”ಇಬ್ರಿಯ 13:6.

ಸಿಹಿಸುದ್ದಿ ಸಾರೋದ್ರಿಂದ ಕೂಡ ನಮ್ಮ ಧೈರ್ಯ ಹೆಚ್ಚಾಗುತ್ತೆ. ಯಾಕಂದ್ರೆ ಸಾರೋದ್ರಿಂದ ದೇವರ ಮೇಲೆ ನಮ್ಮ ಭರವಸೆ ಹೆಚ್ಚಾಗುತ್ತೆ, ಮನುಷ್ಯರ ಮೇಲಿರುವ ಭಯ ಹೋಗುತ್ತೆ. (ಜ್ಞಾನೋಕ್ತಿ 29:25) ನಾವು ಈಗ ಧೈರ್ಯದಿಂದ ಸಿಹಿಸುದ್ದಿ ಸಾರಿದರೆ ಮುಂದೆ ಸರ್ಕಾರಗಳು ‘ಇನ್ನುಮುಂದೆ ಸಾರಬೇಡಿ’ ಅಂತ ಹೇಳಿದ್ರೂ ಧೈರ್ಯದಿಂದ ಸಾರಕ್ಕೆ ರೆಡಿಯಾಗಿ ಇರುತ್ತೇವೆ.—1 ಥೆಸಲೊನೀಕ 2:2.

3. ಹಿಂಸೆಯನ್ನ ತಾಳಿಕೊಂಡರೆ ನಮಗೆ ಯಾವ ಪ್ರಯೋಜನ ಸಿಗುತ್ತೆ?

ಹಿಂಸೆ ಬಂದಾಗ ನಮಗೆ ನೋವಾಗುತ್ತೆ ಅನ್ನೋದು ನಿಜ. ಆದರೆ ನಾವು ತಾಳಿಕೊಂಡರೆ ನಮ್ಮ ನಂಬಿಕೆ ಬಲವಾಗುತ್ತೆ. ‘ಇನ್ನುಮುಂದೆ ನನ್ನಿಂದ ತಾಳಿಕೊಳ್ಳೋಕೇ ಆಗಲ್ಲ’ ಅಂತ ನಮಗೆ ಅನಿಸುವಾಗ ಯೆಹೋವ ದೇವರು ನಮ್ಮ ಕೈಹಿಡಿದು ಸಹಾಯ ಮಾಡುತ್ತಾನೆ. ಆಗ ನಾವು ಆತನಿಗೆ ಇನ್ನೂ ಆಪ್ತರಾಗುತ್ತೇವೆ. (ಯಾಕೋಬ 1:2-4 ಓದಿ.) ನಾವು ಕಷ್ಟಪಡುವುದನ್ನ ನೋಡುವಾಗ ಯೆಹೋವನಿಗೂ ನೋವಾಗುತ್ತೆ, ಆದರೆ ನಾವು ಅದನ್ನ ತಾಳಿಕೊಳ್ಳೋದನ್ನ ನೋಡುವಾಗ ಆತನಿಗೆ ತುಂಬ ಖುಷಿಯಾಗುತ್ತೆ. “ನೀವು ಒಳ್ಳೇದನ್ನ ಮಾಡಿ ಕಷ್ಟ ಅನುಭವಿಸ್ತಾ ಇದ್ರೆ ದೇವರ ದೃಷ್ಟಿಯಲ್ಲಿ ಅದು ತುಂಬ ಒಳ್ಳೇದು” ಅಂತ ಬೈಬಲ್‌ ಹೇಳುತ್ತೆ. (1 ಪೇತ್ರ 2:20) ಯೆಹೋವ ದೇವರಿಗೆ ನಂಬಿಗಸ್ತರಾಗಿ ಇದ್ದರೆ ಆತನು ಶಾಶ್ವತ ಜೀವನವನ್ನ ಕೊಡುತ್ತಾನೆ. ಪರದೈಸಿನಲ್ಲಿ ಯಾವುದೇ ಅಡ್ಡಿತಡೆ ಇಲ್ಲದೆ ಆತನ ಆರಾಧನೆ ಮಾಡಕ್ಕಾಗುತ್ತೆ.—ಮತ್ತಾಯ 24:13.

ಹೆಚ್ಚನ್ನ ತಿಳಿಯೋಣ

ಹಿಂಸೆ ಬಂದಾಗ ಅದನ್ನ ತಾಳಿಕೊಳ್ಳೋದು ಹೇಗೆ ಅಂತ ತಿಳಿದುಕೊಳ್ಳಿ. ಅಂಥ ಸಮಯದಲ್ಲಿ ಯೆಹೋವ ದೇವರಿಗೆ ನಿಷ್ಠೆ ತೋರಿಸೋದ್ರಿಂದ ಏನು ಪ್ರಯೋಜನ ಇದೆ ಅಂತ ನೋಡೋಣ.

4. ಕುಟುಂಬದಿಂದ ಬರುವ ಹಿಂಸೆಯನ್ನ ತಾಳಿಕೊಳ್ಳೋಕೆ ನಿಮ್ಮಿಂದ ಆಗುತ್ತೆ

ನಾವು ಯೆಹೋವನನ್ನು ಆರಾಧಿಸೋಕೆ ನಿರ್ಧಾರ ಮಾಡುವಾಗ ಕುಟುಂಬದಲ್ಲಿರುವ ಕೆಲವರಿಗೆ ಅದು ಇಷ್ಟ ಆಗಲ್ಲ ಅಂತ ಯೇಸು ಮುಂಚೆನೇ ಹೇಳಿದ್ದನು. ಮತ್ತಾಯ 10:34-36 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಕುಟುಂಬದಲ್ಲಿ ಇರುವ ಯಾರಾದ್ರು ಒಬ್ಬರು ಯೆಹೋವನ ಆರಾಧಕನಾಗಲು ಬಯಸುವಾಗ ಏನಾಗಬಹುದು?

ಇದಕ್ಕೊಂದು ಉದಾಹರಣೆಗೆ, ವಿಡಿಯೋ ನೋಡಿ ನಂತರ ಪ್ರಶ್ನೆಯನ್ನ ಚರ್ಚಿಸಿ.

  • ನೀವು ಯೆಹೋವನನ್ನು ಆರಾಧಿಸಬಾರದು ಅಂತ ನಿಮ್ಮ ಸಂಬಂಧಿಕರು ಅಥವಾ ಸ್ನೇಹಿತರು ಹೇಳಿದರೆ ಏನು ಮಾಡುತ್ತೀರಾ?

ಕೀರ್ತನೆ 27:10 ಮತ್ತು ಮಾರ್ಕ 10:29, 30 ಓದಿ. ಪ್ರತಿಯೊಂದು ವಚನವನ್ನ ಓದಿದ ಮೇಲೆ ಈ ಪ್ರಶ್ನೆಯನ್ನ ಚರ್ಚಿಸಿ:

  • ಕುಟುಂಬದವರಿಂದ ಅಥವಾ ಸ್ನೇಹಿತರಿಂದ ವಿರೋಧ ಬಂದರೆ ಈ ವಚನದಲ್ಲಿರುವ ಮಾತು ನಿಮಗೆ ಹೇಗೆ ಸಹಾಯ ಮಾಡುತ್ತೆ?

5. ಹಿಂಸೆಯಿದ್ದರೂ ಯೆಹೋವನನ್ನು ಆರಾಧಿಸುತ್ತಾ ಇರಿ

ಹಿಂಸೆ ವಿರೋಧ ಬಂದಾಗಲೂ ಯೆಹೋವ ದೇವರನ್ನ ಆರಾಧಿಸುತ್ತಾ ಇರಲು ನಮಗೆ ಧೈರ್ಯಬೇಕು. ವಿಡಿಯೋ ನೋಡಿ ನಂತರ ಪ್ರಶ್ನೆಯನ್ನ ಚರ್ಚಿಸಿ.

  • ಈ ವಿಡಿಯೋದಿಂದ ನಿಮಗೆ ಹೇಗೆ ಬಲ ಸಿಕ್ಕಿತು?

ಅಪೊಸ್ತಲರ ಕಾರ್ಯ 5:27-29 ಮತ್ತು ಇಬ್ರಿಯ 10:24, 25 ಓದಿ. ಪ್ರತಿಯೊಂದು ವಚನವನ್ನ ಓದಿದ ಮೇಲೆ ಈ ಪ್ರಶ್ನೆಯನ್ನ ಚರ್ಚಿಸಿ:

  • ಸಾರಬಾರದು ಅಥವಾ ಕೂಟಗಳಿಗೆ ಹೋಗಬಾರದು ಅಂತ ಸರ್ಕಾರಗಳು ಹೇಳಿದರೆ ನಾವು ಯಾಕೆ ಯೆಹೋವನ ಆರಾಧನೆಯನ್ನು ಬಿಟ್ಟುಬಿಡಬಾರದು?

6. ಹಿಂಸೆಯನ್ನ ತಾಳಿಕೊಳ್ಳಲು ಯೆಹೋವನು ನಿಮಗೆ ಸಹಾಯ ಮಾಡುತ್ತಾನೆ

ಬೇರೆಬೇರೆ ವಯಸ್ಸಿನ, ಹಿನ್ನೆಲೆಯ ಯೆಹೋವನ ಸಾಕ್ಷಿಗಳು ಹಿಂಸೆಯನ್ನ ಎದುರಿಸುತ್ತಾ ಇದ್ದಾರೆ. ಅವುಗಳನ್ನೆಲ್ಲಾ ತಾಳಿಕೊಳ್ಳೋಕೆ ಅವರಿಗೆ ಯಾವುದು ಸಹಾಯ ಮಾಡಿತು ಅಂತ ತಿಳಿದುಕೊಳ್ಳಲು ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.

  • ಈ ವಿಡಿಯೋದಲ್ಲಿ ನೋಡಿದ ಹಾಗೆ ಯೆಹೋವನ ಜನರಿಗೆ ತಾಳಿಕೊಳ್ಳಲು ಯಾವುದು ಸಹಾಯ ಮಾಡಿತು?

ರೋಮನ್ನರಿಗೆ 8:35, 37-39 ಮತ್ತು ಫಿಲಿಪ್ಪಿ 4:13 ಓದಿ. ಪ್ರತಿಯೊಂದು ವಚನವನ್ನ ಓದಿದ ಮೇಲೆ ಈ ಪ್ರಶ್ನೆಯನ್ನ ಚರ್ಚಿಸಿ:

  • ಯಾವುದೇ ಕಷ್ಟ ಬಂದರೂ ಅದನ್ನ ತಾಳಿಕೊಳ್ಳೋಕೆ ನಿಮ್ಮಿಂದ ಆಗುತ್ತೆ ಅಂತ ಈ ವಚನ ಹೇಗೆ ಭರವಸೆ ಕೊಡುತ್ತೆ?

ಮತ್ತಾಯ 5:10-12 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಹಿಂಸೆ ವಿರೋಧ ಬಂದರೂ ನೀವು ಖುಷಿಯಾಗಿ ಇರಬಹುದು ಅಂತ ಹೇಗೆ ಹೇಳಬಹುದು?

ಲಕ್ಷಾಂತರ ಯೆಹೋವನ ಆರಾಧಕರು ಹಿಂಸೆಯನ್ನ ತಾಳಿಕೊಂಡಿದ್ದಾರೆ, ನಿಮ್ಮಿಂದನೂ ಖಂಡಿತ ಸಾಧ್ಯ!

ಕೆಲವರು ಹೀಗಂತಾರೆ: “ಹಿಂಸೆ ಬಂದರೆ ನನ್ನಿಂದ ತಾಳಕ್ಕಾಗಲ್ಲ.”

  • ಅಂಥವರಲ್ಲಿ ಧೈರ್ಯ ತುಂಬಿಸೋಕೆ ನೀವು ಯಾವ ವಚನಗಳನ್ನ ತೋರಿಸುತ್ತೀರಾ?

ನಾವೇನು ಕಲಿತ್ವಿ

ಹಿಂಸೆ ಬಂದಾಗಲೂ ಯೆಹೋವನ ಸೇವೆ ಮಾಡಕ್ಕೆ ನಾವು ಮಾಡುವ ಪ್ರಯತ್ನವನ್ನ ನೋಡುವಾಗ ಆತನಿಗೆ ತುಂಬ ಖುಷಿಯಾಗುತ್ತೆ. ದೇವರ ಸಹಾಯದಿಂದ ಯಾವುದೇ ಸಮಸ್ಯೆಯನ್ನ ಎದುರಿಸಲು ನಮ್ಮಿಂದ ಸಾಧ್ಯ!

ನೆನಪಿದೆಯಾ

  • ಕ್ರೈಸ್ತರಿಗೆ ಯಾಕೆ ಹಿಂಸೆ ಬಂದೇ ಬರುತ್ತೆ?

  • ಮುಂದೆ ಬರುವ ಹಿಂಸೆಯನ್ನ ಎದುರಿಸಲಿಕ್ಕೆ ನಾವು ಈಗಲೇ ಹೇಗೆ ತಯಾರಾಗಬಹುದು?

  • ಏನೇ ಸಮಸ್ಯೆ ಬಂದರೂ ಯೆಹೋವನ ಸೇವೆಯನ್ನ ಮಾಡುತ್ತಾ ಇರಕ್ಕೆ ನಮಗೆ ಯಾವುದು ಸಹಾಯ ಮಾಡುತ್ತೆ?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ಒಬ್ಬ ಯುವ ಸಹೋದರ ನಂಬಿಕೆಯ ಕಾರಣ ಜೈಲಿಗೆ ಹೋದಾಗ ಯೆಹೋವ ದೇವರು ಅವನಿಗೆ ಹೇಗೆ ಸಹಾಯ ಮಾಡಿದನು ಅಂತ ನೋಡಿ.

ಹಿಂಸೆ ವಿರೋಧ ಬಂದರೂ ತಾಳ್ಮೆ ತೋರಿಸಿ (2:37)

ವಿರೋಧ ಇದ್ದರೂ ತುಂಬ ವರ್ಷಗಳವರೆಗೆ ಯೆಹೋವನ ಸೇವೆಯನ್ನ ನಂಬಿಗಸ್ತಿಕೆಯಿಂದ ಮಾಡಲು ಒಂದು ದಂಪತಿಗೆ ಯಾವುದು ಸಹಾಯ ಮಾಡಿತು ಅಂತ ನೋಡಿ.

ವಿರೋಧದ ಮಧ್ಯೆನೂ ಯೆಹೋವನನ್ನು ಆರಾಧಿಸಿದರು (7:11)

ಹಿಂಸೆಯನ್ನ ಧೈರ್ಯದಿಂದ ಹೇಗೆ ಎದುರಿಸಬಹುದು ಅಂತ ತಿಳಿಯಿರಿ.

“ಹಿಂಸೆ ಎದುರಿಸಲು ಈಗಲೇ ತಯಾರಾಗಿ” (ಕಾವಲಿನಬುರುಜು, ಜುಲೈ 2019)

ಕುಟುಂಬದಿಂದ ವಿರೋಧ ಬಂದಾಗ ನಾವು ಹೇಗೆ ನಡೆದುಕೊಳ್ಳಬೇಕು ಮತ್ತು ಅದರಿಂದ ಬರುವ ಸವಾಲುಗಳನ್ನ ಹೇಗೆ ಜಯಿಸಬಹುದು ಅಂತನೂ ನೋಡಿ.

“ಸತ್ಯವು ‘ಶಾಂತಿಯನ್ನಲ್ಲ ಖಡ್ಗವನ್ನು ಹಾಕುತ್ತದೆ’” (ಕಾವಲಿನಬುರುಜು, ಅಕ್ಟೋಬರ್‌ 2017)