ಪಾಠ 47
ನೀವು ದೀಕ್ಷಾಸ್ನಾನಕ್ಕೆ ರೆಡಿನಾ?
ಯೆಹೋವ ದೇವರ ಬಗ್ಗೆ ನೀವು ಈಗಾಗ್ಲೇ ತುಂಬ ವಿಷಯಗಳನ್ನ ಕಲಿತಿದ್ದೀರ. ಅದಕ್ಕೆ ತಕ್ಕಂತೆ ಜೀವನದಲ್ಲಿ ಕೆಲವು ಬದಲಾವಣೆಗಳನ್ನೂ ಮಾಡಿಕೊಂಡಿದ್ದೀರ. ಹಾಗಿದ್ರೂ ಯೆಹೋವ ದೇವರಿಗೆ ಸಮರ್ಪಿಸಿಕೊಳ್ಳೋಕೆ ಮತ್ತು ‘ದೀಕ್ಷಾಸ್ನಾನ ಪಡೆದುಕೊಳ್ಳೋಕೆ ನಾನಿನ್ನೂ ರೆಡಿ ಇಲ್ಲ’ ಅಂತ ನಿಮಗೆ ಅನಿಸಬಹುದು. ಯಾವೆಲ್ಲಾ ವಿಷಯಗಳು ದೀಕ್ಷಾಸ್ನಾನ ಪಡೆದುಕೊಳ್ಳದಂತೆ ನಿಮ್ಮನ್ನ ತಡೆಯಬಹುದು ಮತ್ತು ಅವುಗಳನ್ನ ನೀವು ಹೇಗೆ ನಿಭಾಯಿಸಬಹುದು ಅಂತ ಈ ಪಾಠದಲ್ಲಿ ನೋಡೋಣ.
1. ದೀಕ್ಷಾಸ್ನಾನ ಪಡೆದುಕೊಳ್ಳಬೇಕಾದ್ರೆ ನೀವು ಬೈಬಲಿನ ಬಗ್ಗೆ ಎಷ್ಟು ತಿಳಿದುಕೊಂಡಿರಬೇಕು?
ದೀಕ್ಷಾಸ್ನಾನ ಪಡೆದುಕೊಳ್ಳಬೇಕಾದ್ರೆ ನಿಮಗೆ “ಸತ್ಯದ ಬಗ್ಗೆ ಸರಿಯಾದ ಜ್ಞಾನ” ಇರಬೇಕು. (1 ತಿಮೊತಿ 2:4) ಇದರ ಅರ್ಥ ದೀಕ್ಷಾಸ್ನಾನಕ್ಕೆ ಮುಂಚೆನೇ ನೀವು ಬೈಬಲಲ್ಲಿ ಇರೋದನ್ನೆಲ್ಲ ತಿಳಿದುಕೊಂಡಿರಬೇಕು ಅಂತ ಅಲ್ಲ. ದೀಕ್ಷಾಸ್ನಾನ ಪಡೆದುಕೊಂಡು ತುಂಬ ವರ್ಷಗಳಾಗಿರುವ ಕ್ರೈಸ್ತರು ಕೂಡ ಈಗಲೂ ಕಲಿಯುತ್ತಾ ಇದ್ದಾರೆ. (ಕೊಲೊಸ್ಸೆ 1:9, 10) ಆದರೆ ಬೈಬಲಿನಲ್ಲಿ ಇರುವ ಕೆಲವು ಮುಖ್ಯ ವಿಷಯಗಳು ನಿಮಗೆ ಗೊತ್ತಿರಬೇಕು. ನಿಮಗೆ ಅದು ಗೊತ್ತಿದೆಯಾ ಅಂತ ಕಂಡುಹಿಡಿಯೋಕೆ ಸಭೆಯ ಹಿರಿಯರು ಸಹಾಯ ಮಾಡುತ್ತಾರೆ.
2. ದೀಕ್ಷಾಸ್ನಾನ ಪಡೆದುಕೊಳ್ಳೋ ಮುಂಚೆ ಏನೆಲ್ಲಾ ಮಾಡಬೇಕು?
ದೀಕ್ಷಾಸ್ನಾನ ಪಡೆದುಕೊಳ್ಳೋ ಮುಂಚೆ ಒಬ್ಬ ವ್ಯಕ್ತಿ, “ಪಶ್ಚಾತ್ತಾಪಪಟ್ಟು ಸರಿಯಾದ ದಾರಿಗೆ” ಬರಬೇಕು ಅಂತ ಬೈಬಲ್ ಹೇಳುತ್ತೆ. (ಅಪೊಸ್ತಲರ ಕಾರ್ಯ 3:19 ಓದಿ.) ಅದರ ಅರ್ಥ, ಅವನು ಮಾಡಿದ ತಪ್ಪಿಗೆ ನಿಜವಾಗಿ ಪಶ್ಚಾತ್ತಾಪಪಟ್ಟು ಯೆಹೋವನ ಹತ್ತಿರ ಹೃದಯಾಳದಿಂದ ಕ್ಷಮೆ ಕೇಳಬೇಕು. ಅಷ್ಟೇ ಅಲ್ಲ, ಕೆಟ್ಟ ಅಭ್ಯಾಸಗಳಿದ್ದರೆ ಅದನ್ನ ಬಿಟ್ಟುಬಿಡಬೇಕು. ಯೆಹೋವ ದೇವರ ಇಷ್ಟದ ಪ್ರಕಾರ ಜೀವನ ಮಾಡುತ್ತೇನೆ ಅಂತ ದೃಢ ನಿರ್ಧಾರ ಮಾಡಬೇಕು. ಜೊತೆಗೆ ಕೂಟಗಳಿಗೆ ಹೋಗಬೇಕು ಮತ್ತು ಸಹೋದರ ಸಹೋದರಿಯರ ಜೊತೆ ಸೇರಿ ಸಿಹಿಸುದ್ದಿಯನ್ನ ಸಾರಬೇಕು.
3. ದೀಕ್ಷಾಸ್ನಾನ ಪಡೆದುಕೊಳ್ಳಲು ಯಾಕೆ ಹೆದರಬಾರದು?
ನಾವು ದೇವರಿಗೆ ಮಾತು ಕೊಟ್ಟ ಮೇಲೆ ಅದರಂತೆ ನಡೆಯಬೇಕು, ಆದರೆ ನಮಗೆ ಹಾಗೆ ಮಾಡಕ್ಕಾಗಲ್ಲ ಅಂತ ಕೆಲವರು ಹಿಂಜರಿಯುತ್ತಾರೆ. ನಾವು ತಪ್ಪನ್ನ ಮಾಡುತ್ತೇವೆ ನಿಜ, ಆದರೆ ಬೈಬಲಿನಲ್ಲಿ ತಿಳಿಸಲಾಗಿರುವ ನಂಬಿಗಸ್ತ ಸ್ತ್ರೀಪುರುಷರು ಸಹ ತಪ್ಪುಗಳನ್ನ ಮಾಡಿದ್ದಾರೆ. ನಾವು ಅಪರಿಪೂರ್ಣರು, ನಮ್ಮಲ್ಲಿ ತಪ್ಪುಮಾಡುವ ಸ್ವಭಾವ ಇದೆ ಅಂತ ಯೆಹೋವ ದೇವರು ಅರ್ಥ ಮಾಡಿಕೊಳ್ಳುತ್ತಾನೆ. (ಕೀರ್ತನೆ 103:13, 14 ಓದಿ.) ಯೆಹೋವ ದೇವರನ್ನ ಮೆಚ್ಚಿಸೋಕೆ ನಮ್ಮಿಂದಾದ ಎಲ್ಲವನ್ನ ಮಾಡುವಾಗ ಆತನು ನಮಗೆ ಸಹಾಯ ಮಾಡುತ್ತಾನೆ. ‘ಯಾವುದೂ ನಮ್ಮನ್ನ ಆತನ ಪ್ರೀತಿಯಿಂದ ದೂರ ಮಾಡಕ್ಕಾಗಲ್ಲ’ ಅಂತ ಯೆಹೋವನೇ ನಮಗೆ ಆಶ್ವಾಸನೆ ಕೊಟ್ಟಿದ್ದಾನೆ.—ರೋಮನ್ನರಿಗೆ 8:38, 39 ಓದಿ.
ಹೆಚ್ಚನ್ನ ತಿಳಿಯೋಣ
ಯೆಹೋವ ದೇವರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುವ ಮೂಲಕ ಮತ್ತು ಆತನ ಸಹಾಯವನ್ನ ಸ್ವೀಕರಿಸುವ ಮೂಲಕ ದೀಕ್ಷಾಸ್ನಾನಕ್ಕೆ ಬರುವ ಸಮಸ್ಯೆಗಳನ್ನ ನೀವು ಹೇಗೆ ಜಯಿಸಬಹುದು ಅಂತ ತಿಳಿದುಕೊಳ್ಳಿ.
4. ಯೆಹೋವನ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ
ದೀಕ್ಷಾಸ್ನಾನಕ್ಕೆ ಮುಂಚೆ ಯೆಹೋವ ದೇವರ ಬಗ್ಗೆ ನೀವು ಎಷ್ಟು ತಿಳಿದುಕೊಂಡಿರಬೇಕು? ದೇವರನ್ನ ಪ್ರೀತಿಸೋಕೆ ಮತ್ತು ಆತನನ್ನು ಮೆಚ್ಚಿಸೋಕೆ ಏನೆಲ್ಲಾ ಮಾಡಬೇಕು ಅಂತ ತಿಳಿದುಕೊಂಡಿರಬೇಕು. ವಿಡಿಯೋ ನೋಡಿ ಇಡೀ ಭೂಮಿಯಲ್ಲಿರುವ ಬೈಬಲ್ ವಿದ್ಯಾರ್ಥಿಗಳು ಹೇಗೆ ಇದನ್ನ ಮಾಡಿದ್ದಾರೆ ಅಂತ ತಿಳಿದುಕೊಳ್ಳಿ. ನಂತರ ಕೆಳಗಿರುವ ಪ್ರಶ್ನೆಯನ್ನ ಚರ್ಚಿಸಿ.
-
ಕೆಲವರಿಗೆ ದೀಕ್ಷಾಸ್ನಾನಕ್ಕೆ ತಯಾರಾಗಲು ಯಾವುದು ಸಹಾಯ ಮಾಡಿತು?
ರೋಮನ್ನರಿಗೆ 12:2 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
-
ಬೈಬಲಿನಲ್ಲಿರುವ ವಿಷಯಗಳ ಬಗ್ಗೆ ಅಥವಾ ಯೆಹೋವನ ಸಾಕ್ಷಿಗಳು ಕಲಿಸುತ್ತಿರುವುದರ ಬಗ್ಗೆ ನಿಮಗೇನಾದ್ರೂ ಸಂಶಯ ಇದೆಯಾ?
-
ಹಾಗಿದ್ರೆ ಈ ವಚನದ ಪ್ರಕಾರ ನೀವೇನು ಮಾಡಬೇಕು?
5. ದೀಕ್ಷಾಸ್ನಾನಕ್ಕೆ ಬರುವ ತಡೆಗಳನ್ನ ಜಯಿಸಿ
ನಮ್ಮನ್ನ ಯೆಹೋವನಿಗೆ ಸಮರ್ಪಿಸಿಕೊಳ್ಳೋಕೆ ಮತ್ತು ದೀಕ್ಷಾಸ್ನಾನ ಪಡೆದುಕೊಳ್ಳೋಕೆ ನಿರ್ಧಾರ ಮಾಡುವಾಗ ನಮ್ಮೆಲ್ಲರಿಗೂ ಒಂದಲ್ಲಾ ಒಂದು ರೀತಿಯ ಅಡೆತಡೆಗಳು ಬರಬಹುದು. ಉದಾಹರಣೆಗೆ ಈ ವಿಡಿಯೋ ನೋಡಿ ನಂತರ ಕೆಳಗಿರುವ ಪ್ರಶ್ನೆಗಳನ್ನ ಚರ್ಚಿಸಿ.
-
ವಿಡಿಯೋದಲ್ಲಿದ್ದ ಸ್ತ್ರೀಗೆ ಒಬ್ಬ ಯೆಹೋವನ ಸಾಕ್ಷಿಯಾಗೋಕೆ ಯಾವೆಲ್ಲಾ ಅಡೆತಡೆಗಳು ಬಂದವು?
-
ಯೆಹೋವನ ಮೇಲಿದ್ದ ಪ್ರೀತಿ ಅಡೆತಡೆಗಳನ್ನ ಜಯಿಸೋಕೆ ಅವಳಿಗೆ ಹೇಗೆ ಸಹಾಯ ಮಾಡಿತು?
ಜ್ಞಾನೋಕ್ತಿ 29:25 ಮತ್ತು 2 ತಿಮೊತಿ 1:7 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
-
ಅಡೆತಡೆಗಳನ್ನ ಜಯಿಸೋಕೆ ನಿಮಗೆ ಯಾವುದು ಸಹಾಯ ಮಾಡುತ್ತೆ?
6. ಯೆಹೋವ ದೇವರ ಮೇಲೆ ಭರವಸೆಯಿಡಿ
ಯೆಹೋವ ದೇವರು ನಿಮಗೆ ಸಹಾಯ ಮಾಡ್ತಾನೆ. ವಿಡಿಯೋ ನೋಡಿ, ನಂತರ ಪ್ರಶ್ನೆಗಳನ್ನ ಚರ್ಚಿಸಿ.
-
ವಿಡಿಯೋದಲ್ಲಿದ್ದ ವ್ಯಕ್ತಿಗೆ ದೀಕ್ಷಾಸ್ನಾನ ಪಡೆದುಕೊಳ್ಳೋಕೆ ಯಾಕೆ ಹಿಂಜರಿಕೆ ಇತ್ತು?
-
ಅವರು ಕಲಿತ ಯಾವ ವಿಷಯ ಅವರ ನಂಬಿಕೆಯನ್ನ ಜಾಸ್ತಿ ಮಾಡಿತು?
ಯೆಶಾಯ 41:10, 13 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
-
ಸಮರ್ಪಣೆಯ ಸಮಯದಲ್ಲಿ ನೀವು ಕೊಟ್ಟ ಮಾತನ್ನ ಪಾಲಿಸೋಕೆ ನಿಮ್ಮಿಂದ ಆಗುತ್ತೆ ಅಂತ ಹೇಗೆ ಹೇಳಬಹುದು?
7. ಯೆಹೋವ ದೇವರ ಪ್ರೀತಿಯ ಬಗ್ಗೆ ಇನ್ನೂ ಚೆನ್ನಾಗಿ ಯೋಚನೆ ಮಾಡಿ
ದೇವರು ನಮಗಾಗಿ ತುಂಬ ವಿಷಯಗಳನ್ನ ಮಾಡಿದ್ದಾನೆ. ಅದರ ಬಗ್ಗೆ ನೀವು ಎಷ್ಟು ಯೋಚಿಸುತ್ತೀರೋ ಅಷ್ಟು ಹೆಚ್ಚು ಆತನಿಗೆ ಋಣಿಗಳಾಗಿ ಇರುತ್ತೀರ. ಅಷ್ಟೇ ಅಲ್ಲ, ಆತನ ಸೇವೆಯನ್ನ ಹೆಚ್ಚು ಮಾಡಕ್ಕೂ ಬಯಸ್ತೀರ. ಕೀರ್ತನೆ 40:5 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
-
ನಿಮ್ಮ ಜೀವನದಲ್ಲಿ ಯೆಹೋವನು ಮಾಡಿರುವ ಯಾವ ವಿಷಯಕ್ಕಾಗಿ ತುಂಬ ಋಣಿಗಳಾಗಿದ್ದೀರಾ?
ಪ್ರವಾದಿಯಾದ ಯೆರೆಮೀಯ ಯೆಹೋವ ದೇವರನ್ನ ಮತ್ತು ಆತನ ಸಂದೇಶವನ್ನ ತುಂಬ ಪ್ರೀತಿಸಿದನು. ಹಾಗಾಗಿ ಯೆಹೋವ ದೇವರ ಸೇವಕನಾಗಿರೋದು ಒಂದು ವಿಶೇಷ ಅವಕಾಶ ಅಂತ ಅಂದುಕೊಂಡ. ಅವನು ಹೀಗೆ ಹೇಳಿದ: “ಆಗ ನಿನ್ನ ಮಾತುಗಳು ನನಗೆ ಖುಷಿ ಕೊಡ್ತು, ಹೃದಯಕ್ಕೆ ಉಲ್ಲಾಸ ಬಂತು, ಯಾಕಂದ್ರೆ ಸೈನ್ಯಗಳ ದೇವರಾದ ಯೆಹೋವನೇ, ನನ್ನನ್ನ ನಿನ್ನ ಹೆಸ್ರಿಂದ ಕರಿತಾರೆ.” (ಯೆರೆಮೀಯ 15:16) ಈ ಪ್ರಶ್ನೆಗಳನ್ನ ಚರ್ಚಿಸಿ:
-
ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿರೋದು ನಮಗೆ ಸಿಕ್ಕಿರುವ ದೊಡ್ಡ ಆಶೀರ್ವಾದ ಯಾಕೆ?
-
ದೀಕ್ಷಾಸ್ನಾನ ಪಡೆದುಕೊಳ್ಳೋಕೆ ನೀವು ಇಷ್ಟಪಡ್ತೀರಾ?
-
ದೀಕ್ಷಾಸ್ನಾನ ಪಡೆದುಕೊಳ್ಳೋದಕ್ಕೆ ನಿಮ್ಮನ್ನ ಯಾವುದಾದ್ರೂ ವಿಷಯ ತಡೆಯುತ್ತಿದೆಯಾ?
-
ದೀಕ್ಷಾಸ್ನಾನದ ಗುರಿಯನ್ನ ಮುಟ್ಟೋಕೆ ನೀವು ಇನ್ನೂ ಏನೆಲ್ಲಾ ಮಾಡಬೇಕು ಅಂತ ಅನಿಸುತ್ತೆ?
ಕೆಲವರು ಹೀಗಂತಾರೆ: “ಕೊಟ್ಟ ಮಾತಿನಂತೆ ನಡೆಯಕ್ಕೆ ನನಗೆ ಆಗಲ್ಲ ಅಂತ ಅನಿಸುತ್ತೆ, ಅದಕ್ಕೆ ದೀಕ್ಷಾಸ್ನಾನ ಪಡೆದುಕೊಳ್ಳೋಕೆ ಹೆದರಿಕೆ ಆಗುತ್ತೆ.”
-
ನಿಮಗೂ ಹಾಗನಿಸುತ್ತಾ?
ನಾವೇನು ಕಲಿತ್ವಿ
ದೀಕ್ಷಾಸ್ನಾನಕ್ಕೆ ಬರುವ ಯಾವುದೇ ಅಡೆತಡೆಗಳನ್ನ ಯೆಹೋವನ ಸಹಾಯದಿಂದ ಜಯಿಸಲು ಸಾಧ್ಯ.
ನೆನಪಿದೆಯಾ
-
ದೀಕ್ಷಾಸ್ನಾನ ಪಡೆದುಕೊಳ್ಳೋಕೆ ನೀವು ಬೈಬಲಿನ ಬಗ್ಗೆ ಎಷ್ಟು ತಿಳಿದುಕೊಂಡಿರಬೇಕು?
-
ದೀಕ್ಷಾಸ್ನಾನಕ್ಕೆ ಮುಂಚೆ ನೀವು ಯಾವೆಲ್ಲಾ ಬದಲಾವಣೆಗಳನ್ನ ಮಾಡಿಕೊಳ್ಳಬೇಕು?
-
ದೀಕ್ಷಾಸ್ನಾನ ಪಡೆದುಕೊಳ್ಳೋಕೆ ನೀವು ಯಾಕೆ ಹೆದರಬಾರದು?
ಇದನ್ನೂ ನೋಡಿ
ದೀಕ್ಷಾಸ್ನಾನ ಪಡೆದುಕೊಳ್ಳೋಕೆ ಯಾವುದು ಮುಖ್ಯ ಕಾರಣವಾಗಿರಬೇಕು ಅಂತ ನೋಡಿ.
“ನೀವು ದೀಕ್ಷಾಸ್ನಾನಕ್ಕೆ ತಯಾರಾಗಿದ್ದೀರಾ?” (ಕಾವಲಿನಬುರುಜು, ಮಾರ್ಚ್ 2020)
ದೀಕ್ಷಾಸ್ನಾನಕ್ಕೆ ತಡೆಯಾಗುವ ಕೆಲವು ಸವಾಲುಗಳ ಬಗ್ಗೆ ನೋಡಿ.
“ನಾನ್ಯಾಕೆ ಇನ್ನೂ ದೀಕ್ಷಾಸ್ನಾನ ತಗೊಂಡಿಲ್ಲ?” (ಕಾವಲಿನಬುರುಜು, ಮಾರ್ಚ್ 2019)
ಒಬ್ಬ ವ್ಯಕ್ತಿ ದೀಕ್ಷಾಸ್ನಾನಕ್ಕೆ ಬಂದ ಅಡೆತಡೆಯನ್ನ ಹೇಗೆ ಜಯಿಸಿದ ಅಂತ ನೋಡಿ.
ಮೊದಮೊದಲು ಹಿಂಜರಿಯುತ್ತಿದ್ದ ವ್ಯಕ್ತಿ ಆಮೇಲೆ ದೀಕ್ಷಾಸ್ನಾನ ಪಡೆದುಕೊಂಡನು. ಅದಕ್ಕೆ ಅವನನ್ನ ಯಾವುದು ಪ್ರೇರೇಪಿಸಿತು ಅಂತ ನೋಡಿ.