ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 34

ನಾವು ಯೆಹೋವನನ್ನು ಪ್ರೀತಿಸುತ್ತೇವೆ ಅಂತ ಹೇಗೆಲ್ಲಾ ತೋರಿಸಬಹುದು?

ನಾವು ಯೆಹೋವನನ್ನು ಪ್ರೀತಿಸುತ್ತೇವೆ ಅಂತ ಹೇಗೆಲ್ಲಾ ತೋರಿಸಬಹುದು?

ಬೈಬಲ್‌ ಬಗ್ಗೆ ಕಲಿಯುತ್ತಾ ಹೋದಂತೆ ನಿಮಗೆ ದೇವರ ಮೇಲೆ ಪ್ರೀತಿ ಜಾಸ್ತಿ ಆಗಿದೆಯಾ? ಆತನ ಜೊತೆ ಇನ್ನೂ ಹೆಚ್ಚು ಸ್ನೇಹ ಬೆಳೆಸಿಕೊಳ್ಳಬೇಕು ಅಂತ ಇಷ್ಟಪಡ್ತೀರಾ? ಹಾಗಿದ್ರೆ ಒಂದು ವಿಷಯ ನೆನಪಿಟ್ಟುಕೊಳ್ಳಿ. ನೀವು ಎಷ್ಟು ಹೆಚ್ಚು ಆತನನ್ನ ಪ್ರೀತಿಸುತ್ತೀರೋ ಅಷ್ಟು ಹೆಚ್ಚು ಆತನು ನಿಮ್ಮನ್ನ ಪ್ರೀತಿಸುತ್ತಾನೆ ಮತ್ತು ಕಾಳಜಿವಹಿಸುತ್ತಾನೆ. ಹಾಗಾದ್ರೆ ನಾವು ದೇವರನ್ನ ಪ್ರೀತಿಸ್ತೇವೆ ಅಂತ ಹೇಗೆಲ್ಲಾ ತೋರಿಸಿಕೊಡಬಹುದು ಅನ್ನೋದನ್ನ ನೋಡೋಣ.

1. ನಾವು ಯೆಹೋವ ದೇವರನ್ನ ಪ್ರೀತಿಸ್ತೇವೆ ಅಂತ ಹೇಗೆ ತೋರಿಸಬಹುದು?

ನಾವು ಯೆಹೋವ ದೇವರ ಮಾತನ್ನ ಕೇಳುವ ಮೂಲಕ ಆತನನ್ನ ಪ್ರೀತಿಸ್ತೇವೆ ಅಂತ ತೋರಿಸಿಕೊಡುತ್ತೇವೆ. (1 ಯೋಹಾನ 5:3 ಓದಿ.) ಆದರೆ ಹೀಗೇ ಮಾಡಬೇಕು ಅಂತ ಆತನು ಯಾರಿಗೂ ಒತ್ತಾಯ ಮಾಡಲ್ಲ. ಬದಲಿಗೆ ನಾವು ಯೆಹೋವ ದೇವರ ಮಾತನ್ನ ಕೇಳಬೇಕಾ ಬೇಡ್ವಾ ಅನ್ನೋದನ್ನ ನಮ್ಮ ಇಷ್ಟಕ್ಕೆ ಬಿಟ್ಟಿದ್ದಾನೆ. ಯಾಕಂದ್ರೆ ನಾವು ಆತನ ಮಾತನ್ನ ‘ಮನಸಾರೆ ಕೇಳಬೇಕು’ ಅಂತ ಆತನು ಇಷ್ಟಪಡ್ತಾನೆ. (ರೋಮನ್ನರಿಗೆ 6:17) ನಾವು ದೇವರ ಮಾತನ್ನ ಕೇಳಬೇಕಲ್ಲಾ ಅಂತ ಕೇಳುವ ಬದಲು ಅದಕ್ಕೆ ಪ್ರೀತಿಯಿಂದ ವಿಧೇಯರಾಗಬೇಕು ಅಂತ ಆತನು ಬಯಸ್ತಾನೆ. ಯೆಹೋವ ದೇವರಿಗೆ ಇಷ್ಟ ಇರುವ ವಿಷಯಗಳನ್ನ ಮಾಡುವ ಮೂಲಕ ಮತ್ತು ಇಷ್ಟ ಇಲ್ಲದ ವಿಷಯಗಳನ್ನ ಮಾಡದೇ ಇರೋ ಮೂಲಕ ಆತನನ್ನ ಪ್ರೀತಿಸುತ್ತೇವೆ ಅಂತ ತೋರಿಸಬಹುದು. ಈ ಪುಸ್ತಕದ 3 ಮತ್ತು 4ನೇ ಭಾಗಗಳಲ್ಲಿ ಇದರ ಬಗ್ಗೆ ಹೆಚ್ಚನ್ನ ಕಲಿಯಲಿದ್ದೇವೆ.

2. ಯೆಹೋವ ದೇವರ ಮಾತನ್ನ ಕೇಳೋಕೆ ಯಾಕೆ ಕೆಲವೊಮ್ಮೆ ಕಷ್ಟ ಆಗುತ್ತೆ?

“ನೀತಿವಂತನಿಗೆ ಒಂದಲ್ಲ ಎರಡಲ್ಲ ನೂರಾರು ಕಷ್ಟಸಂಕಟಗಳು.” (ಕೀರ್ತನೆ 34:19) ನಾವೆಲ್ಲರೂ ಅಪರಿಪೂರ್ಣರು. ಹಾಗಾಗಿ ನಮ್ಮಲ್ಲಿ ತಪ್ಪು ಮಾಡುವ ಸ್ವಭಾವ ಇದೆ. ಅಷ್ಟೇ ಅಲ್ಲ ಬಡತನ, ಅನ್ಯಾಯ ಮತ್ತು ಬೇರೆ ರೀತಿಯ ಸಮಸ್ಯೆಗಳನ್ನ ಎದುರಿಸ್ತೇವೆ. ಈ ರೀತಿ ಸಮಸ್ಯೆಗಳನ್ನ ಎದುರಿಸುವಾಗ ಯೆಹೋವನ ಮಾತು ಕೇಳೋದು ಸ್ವಲ್ಪ ಕಷ್ಟನೇ. ಯಾಕಂದ್ರೆ ಕೆಟ್ಟದು ಮಾಡೋದೇ ನಮಗೆ ತುಂಬ ಸುಲಭ. ಆದ್ರೆ ಇಂಥ ಸನ್ನಿವೇಶದಲ್ಲಿ ಯೆಹೋವನ ಮಾತು ಕೇಳಿದ್ರೆ ಆತನನ್ನ ನಾವೆಷ್ಟರ ಮಟ್ಟಿಗೆ ಪ್ರೀತಿಸ್ತೇವೆ ಅಂತ ತೋರಿಸಿಕೊಡ್ತೇವೆ. ನಾವು ಯಾವಾಗಲೂ ಆತನಿಗೆ ನಿಷ್ಠರಾಗಿದ್ದರೆ, ಆತನೂ ನಮಗೆ ನಿಷ್ಠನಾಗಿರುತ್ತಾನೆ ಮತ್ತು ಯಾವತ್ತೂ ನಮ್ಮ ಕೈಬಿಡಲ್ಲ.—ಕೀರ್ತನೆ 4:3 ಓದಿ.

ಹೆಚ್ಚನ್ನ ತಿಳಿಯೋಣ

ಯೆಹೋವನ ಮಾತನ್ನ ಕೇಳೋಕೆ ನಮಗೆ ಯಾವುದು ಸಹಾಯ ಮಾಡುತ್ತೆ ಮತ್ತು ಹಾಗೆ ಮಾಡಿದರೆ ಆತನಿಗೆ ಯಾಕೆ ಸಂತೋಷ ಆಗುತ್ತೆ ಅಂತ ನೋಡಿ.

3. ಸೈತಾನ ನಿಮ್ಮ ಮೇಲೆ ಸವಾಲು ಹಾಕುತ್ತಿದ್ದಾನೆ

ದೇವರ ಸೇವಕನಾದ ಯೋಬನ ಮೇಲೆ ಮಾತ್ರ ಅಲ್ಲ ಯೆಹೋವನ ಸೇವೆ ಮಾಡಲು ಬಯಸುವ ಎಲ್ಲಾ ಮನುಷ್ಯರ ಮೇಲೆ ಸೈತಾನ ಸವಾಲು ಹಾಕಿದ್ದಾನೆ ಅಂತ ಬೈಬಲ್‌ ಹೇಳುತ್ತೆ. ಯೋಬ 1:1, 6–2:10 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಯೋಬ ಯಾಕೆ ದೇವರ ಮಾತು ಕೇಳುತ್ತಿದ್ದಾನೆ ಅಂತ ಸೈತಾನ ಹೇಳಿದ?—ಯೋಬ 1:9-11 ನೋಡಿ.

  • ನಿಮ್ಮನ್ನೂ ಸೇರಿಸಿ ಎಲ್ಲಾ ಮನುಷ್ಯರ ಬಗ್ಗೆ ಸೈತಾನ ಏನಂತ ದೂರುತ್ತಿದ್ದಾನೆ?—ಯೋಬ 2:4.

ಯೋಬ 27:5ಬಿ ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಯೆಹೋವ ದೇವರನ್ನ ‘ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತೀನಿ’ ಅಂತ ಯೋಬ ಹೇಗೆ ತೋರಿಸಿಕೊಟ್ಟ?

ಯೋಬ ಯೆಹೋವ ದೇವರಿಗೆ ನಿಷ್ಠೆ ತೋರಿಸಿದ. ಹೀಗೆ ‘ಯೆಹೋವನನ್ನು ಪ್ರೀತಿಸ್ತೀನಿ’ ಅಂತ ತೋರಿಸಿಕೊಟ್ಟ

ನಾವು ಯೆಹೋವ ದೇವರಿಗೆ ನಿಷ್ಠೆ ತೋರಿಸುವ ಮೂಲಕ ಆತನನ್ನ ಪ್ರೀತಿಸ್ತೇವೆ ಅಂತ ತೋರಿಸಿಕೊಡುತ್ತೇವೆ

4. ಯೆಹೋವನ ಮನಸ್ಸನ್ನ ಸಂತೋಷಪಡಿಸಿ

ಜ್ಞಾನೋಕ್ತಿ 27:11 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ನಾವು ಯೆಹೋವ ದೇವರ ಮಾತನ್ನ ಕೇಳಿ ವಿವೇಕಿಗಳಾಗಿದ್ರೆ ಆತನಿಗೆ ಹೇಗನಿಸುತ್ತೆ? ಯಾಕೆ?

5. ನೀವು ಯೆಹೋವ ದೇವರಿಗೆ ನಿಷ್ಠೆ ತೋರಿಸಲು ಸಾಧ್ಯ

ಯೆಹೋವನ ಮೇಲೆ ನಮಗೆ ಪ್ರೀತಿ ಇರೋದ್ರಿಂದ ಆತನ ಬಗ್ಗೆ ಬೇರೆಯವರಿಗೆ ಹೇಳುತ್ತೇವೆ. ಎಷ್ಟೇ ಕಷ್ಟ ಬಂದರೂ ಇದನ್ನ ಮಾಡೋಕೆ ನಮಗೆ ನಿಷ್ಠೆ ಸಹಾಯ ಮಾಡುತ್ತೆ. ವಿಡಿಯೋ ನೋಡಿ, ನಂತರ ಪ್ರಶ್ನೆಗಳನ್ನ ಚರ್ಚಿಸಿ.

  • ಯೆಹೋವ ದೇವರ ಬಗ್ಗೆ ಬೇರೆಯವರ ಹತ್ತಿರ ಹೇಳೋಕೆ ನಿಮಗೆ ಯಾವಾಗಾದ್ರೂ ಕಷ್ಟ ಅನಿಸಿದೆಯಾ?

  • ಧೈರ್ಯದಿಂದ ಸಾರೋಕೆ ಗ್ರೇಸನ್‌ಗೆ ಯಾವುದು ಸಹಾಯ ಮಾಡಿತು?

ನಾವು ಯೆಹೋವನು ಪ್ರೀತಿಸೋದನ್ನ ಪ್ರೀತಿಸಬೇಕು ಮತ್ತು ಆತನು ದ್ವೇಷಿಸೋದನ್ನ ದ್ವೇಷಿಸಬೇಕು. ಆಗ ಆತನಿಗೆ ನಿಷ್ಠರಾಗಿ ಉಳಿಯೋಕೆ ಸಾಧ್ಯವಾಗುತ್ತೆ. ಕೀರ್ತನೆ 97:10 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಯೆಹೋವ ದೇವರು ಏನನ್ನ ಪ್ರೀತಿಸ್ತಾನೆ ಮತ್ತು ಏನನ್ನ ದ್ವೇಷಿಸ್ತಾನೆ ಅಂತ ನೀವು ಕಲಿತ್ರಿ?

  • ಒಳ್ಳೇದನ್ನ ಪ್ರೀತಿಸಲು ಮತ್ತು ಕೆಟ್ಟದ್ದನ್ನ ದ್ವೇಷಿಸಲು ನೀವು ಹೇಗೆ ಕಲಿಯಬಹುದು?

6. ಯೆಹೋವನ ಮಾತು ಕೇಳೋದ್ರಿಂದ ನಮಗೆ ತುಂಬ ಪ್ರಯೋಜನ ಇದೆ

ಯೆಹೋವನ ಮಾತು ಕೇಳೋದು ನಮಗೆ ಯಾವಾಗ್ಲೂ ಒಳ್ಳೇದು. ಯೆಶಾಯ 48:17, 18 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ನಮಗೆ ಯಾವುದು ಒಳ್ಳೇದು ಅಂತ ಯೆಹೋವ ದೇವರಿಗೆ ಚೆನ್ನಾಗಿ ಗೊತ್ತು. ಇದನ್ನ ನೀವು ನಂಬುತ್ತೀರಾ? ಯಾಕೆ?

  • ಯೆಹೋವ ದೇವರ ಬಗ್ಗೆ ಮತ್ತು ಬೈಬಲ್‌ ಬಗ್ಗೆ ಕಲಿತಿದ್ದರಿಂದ ನಿಮಗೆ ಇಲ್ಲಿವರೆಗೂ ಏನೆಲ್ಲಾ ಪ್ರಯೋಜನ ಸಿಕ್ಕಿದೆ?

ಕೆಲವರು ಹೀಗಂತಾರೆ: “ನಾವು ಕೆಟ್ಟದ್ದು ಮಾಡಿದ್ರೂ ಒಳ್ಳೇದು ಮಾಡಿದ್ರೂ ದೇವರಿಗೆ ಏನೂ ಅನಿಸಲ್ಲ, ಅವನು ಕಣ್ಣು ಮುಚ್ಚಿ ಕೂತಿದ್ದಾನೆ.”

  • ನಾವು ಒಳ್ಳೇ ಕೆಲಸ ಮಾಡಿದ್ರೆ ದೇವರಿಗೆ ಖುಷಿಯಾಗುತ್ತೆ, ಕೆಟ್ಟದ್ದು ಮಾಡಿದ್ರೆ ಆತನಿಗೆ ದುಃಖ ಆಗುತ್ತೆ ಅಂತ ತಿಳಿಸೋಕೆ ನೀವು ಯಾವ ವಚನ ತೋರಿಸ್ತೀರಾ?

ನಾವೇನು ಕಲಿತ್ವಿ

ದೇವರ ಮಾತನ್ನ ಕೇಳಿದ್ರೆ ಮತ್ತು ಏನೇ ಸಮಸ್ಯೆ ಬಂದರೂ ಆತನಿಗೆ ನಿಷ್ಠೆ ತೋರಿಸಿದ್ರೆ ನಾವು ದೇವರನ್ನ ಪ್ರೀತಿಸುತ್ತೇವೆ ಅಂತ ತೋರಿಸಬಹುದು.

ನೆನಪಿದೆಯಾ

  • ಯೋಬನ ಉದಾಹರಣೆಯಿಂದ ನೀವೇನು ಕಲಿತ್ರಿ?

  • ಯೆಹೋವನನ್ನು ಪ್ರೀತಿಸ್ತೀರ ಅಂತ ನೀವು ಹೇಗೆ ತೋರಿಸಿಕೊಡುತ್ತೀರಾ?

  • ಯೆಹೋವನಿಗೆ ನಿಷ್ಠರಾಗಿರಲು ನಿಮಗೆ ಯಾವುದು ಸಹಾಯ ಮಾಡುತ್ತೆ?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ಯೆಹೋವ ದೇವರಿಗೆ ಮತ್ತು ಸಭೆಗೆ ಹೇಗೆ ನಿಷ್ಠರಾಗಿರಬಹುದು ಅಂತ ಕಲಿಯಿರಿ.

“ನಿಷ್ಠಾವಂತನ ಜೊತೆ ನಿಷ್ಠೆಯಿಂದ ನಡ್ಕೊಳ್ತೀಯ” (16:49)

ಮಾನವರ ಮೇಲೆ ಸೈತಾನ ಹಾಕಿದ ಸವಾಲಿನ ಬಗ್ಗೆ ಹೆಚ್ಚನ್ನ ಕಲಿಯಿರಿ.

ಯೋಬನ ಸಮಗ್ರತೆ (ಬೈಬಲ್‌—ಅದರಲ್ಲಿ ಏನಿದೆ? ಅಧ್ಯಾಯ 6)

ಯೆಹೋವನನ್ನು ಖುಷಿಪಡಿಸೋಕೆ ಚಿಕ್ಕ ಮಕ್ಕಳಿಗೂ ಸಾಧ್ಯ.

ಯೆಹೋವನ ಹೃದಯವನ್ನು ಸಂತೋಷಪಡಿಸಿ (8:16)

ಯುವಜನರೇ, ನಿಮಗೆ ಬೇರೆಯವರು ತಪ್ಪು ಮಾಡಲು ಒತ್ತಾಯ ಮಾಡಿದಾಗ ಯೆಹೋವನಿಗೆ ನಿಷ್ಠರಾಗಿ ಉಳಿಯಲು ಯಾವುದು ಸಹಾಯ ಮಾಡುತ್ತೆ ಅಂತ ನೋಡಿ.

ಇತರರ ಒತ್ತಡಕ್ಕೆ ಮಣಿಯದಿರಿ! (3:59)