ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು


ಈ ಪುಸ್ತಕದ ವಿಶೇಷತೆಗಳನ್ನ ನೋಡಿ

ಈ ಪುಸ್ತಕದ ವಿಶೇಷತೆಗಳನ್ನ ನೋಡಿ

ಇಲ್ಲಿ ಕೊಡಲಾಗಿರುವ ಮಾಹಿತಿಯನ್ನ ಓದಿ ನಂತರ ವಿಡಿಯೋ ನೋಡಿ.

ಮೊದಲನೇ ಭಾಗ

ಪ್ರತಿಯೊಂದು ಪಾಠವನ್ನ ತಯಾರಿ ಮಾಡುವಾಗ, ಈ ಭಾಗದಲ್ಲಿರುವ ಪ್ಯಾರಗಳನ್ನ ಓದಿ, ದಪ್ಪಕ್ಷರದಲ್ಲಿ ಕೊಡಲಾಗಿರುವ ಪ್ರಶ್ನೆಗಳನ್ನ (A) ಮತ್ತು ಮುಖ್ಯ ವಿಷಯವನ್ನ ಒತ್ತಿ ಹೇಳುವ ವಚನಗಳನ್ನ (B) ಓದಿ. ಕೆಲವು ವಚನಗಳ ಪಕ್ಕ “ಓದಿ” ಅಂತ ಕೊಡಲಾಗಿದೆ, ಅವುಗಳನ್ನ ದಯವಿಟ್ಟು ಓದಿ.

ಮಧ್ಯ ಭಾಗ

ಹೆಚ್ಚನ್ನ ತಿಳಿಯೋಣ ಅನ್ನೋ ವಿಷಯದ ಕೆಳಗಿರೋ ಆರಂಭದ ಮಾತು (C) ನಾವೇನನ್ನ ಕಲಿಯಬಹುದು ಅಂತ ತಿಳಿಸುತ್ತೆ. ಉಪಶೀರ್ಷಿಕೆಗಳು (D) ಮುಖ್ಯ ವಿಷಯವನ್ನ ತಿಳಿದುಕೊಳ್ಳಲು ಸಹಾಯ ಮಾಡುತ್ತವೆ. ನಿಮ್ಮ ಬೈಬಲ್‌ ಟೀಚರ್‌ ಜೊತೆ ವಚನಗಳನ್ನ ಓದಿ, ಪ್ರಶ್ನೆಗಳನ್ನ ಉತ್ತರಿಸಿ ಮತ್ತು ವಿಡಿಯೋಗಳನ್ನ ನೋಡಿ.

ವಿಡಿಯೋ ಮತ್ತು ಆಡಿಯೋ ರೆಕಾರ್ಡಿಂಗಳು ಪಾಠದಲ್ಲಿರೋ ವಿಷಯಗಳನ್ನ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತೆ. ಕೆಲವೊಂದು ವಿಡಿಯೋಗಳು ನಿಜ ಘಟನೆಗಳನ್ನ ತೋರಿಸುತ್ತವೆ. ಇನ್ನೂ ಕೆಲವು ವಿಡಿಯೋಗಳು ನಮ್ಮ ಜೀವನದಲ್ಲಿ ನಡೆಯಬಹುದಾದ ಘಟನೆಗಳ ನಾಟಕರೂಪವಾಗಿವೆ.

ಚಿತ್ರ ಮತ್ತು ಚಿತ್ರ ವಿವರಣೆಗಳನ್ನ (E) ಸಹ ಚರ್ಚಿಸಿ. ಕೆಲವರು ಹೀಗಂತಾರೆ (F) ಅನ್ನೋದ್ರ ಕೆಳಗಿರೋ ಪ್ರಶ್ನೆಗೆ ಹೇಗೆ ಉತ್ತರ ಕೊಡಬಹುದು ಅಂತ ಯೋಚಿಸಿ.

ಕೊನೆಯ ಭಾಗ

ನಾವೇನು ಕಲಿತ್ವಿ ಮತ್ತು ನೆನಪಿದೆಯಾ (G) ಇವೆರಡೂ ಪ್ರತಿ ಪಾಠದ ಕೊನೆಯಲ್ಲಿ ಬರುತ್ತೆ. ಪಾಠವನ್ನ ಮುಗಿಸಿದ ದಿನಾಂಕವನ್ನ ಬರೆದಿಡಿ. ಇದನ್ನ ಮಾಡಿ ನೋಡಿ (H) ಇನ್ನೂ ಹೆಚ್ಚನ್ನ ಕಲಿಯಲಿಕ್ಕಾಗಿ ಅಥವಾ ಕಲಿತದ್ದನ್ನ ಅನ್ವಯಿಸಲಿಕ್ಕಾಗಿ ಇದು ಸಹಾಯ ಮಾಡುತ್ತೆ. ಇದನ್ನೂ ನೋಡಿ (I) ಎಂಬಲ್ಲಿ ನೀವು ಬಯಸೋದಾದ್ರೆ ನೋಡೋಕೆ ವಿಡಿಯೋಗಳನ್ನ ಮತ್ತು ಲೇಖನಗಳನ್ನ ಕೊಡಲಾಗಿದೆ.

ಬೈಬಲ್‌ ವಚನಗಳನ್ನ ಹುಡುಕೋದು ಹೇಗೆ?

ಬೈಬಲಿನಲ್ಲಿ 66 ಚಿಕ್ಕಚಿಕ್ಕ ಪುಸ್ತಕಗಳಿವೆ. ಇದರಲ್ಲಿ ಎರಡು ಭಾಗಗಳಿವೆ. ಒಂದು, ಹೀಬ್ರು-ಅರಾಮಿಕ್‌ ಪುಸ್ತಕಗಳು (“ಹಳೇ ಒಡಂಬಡಿಕೆ”). ಇನ್ನೊಂದು, ಗ್ರೀಕ್‌ ಪುಸ್ತಕಗಳು (“ಹೊಸ ಒಡಂಬಡಿಕೆ”).

ವಚನಗಳಲ್ಲಿ ಮೊದಲಿಗೆ ಬೈಬಲ್‌ ಪುಸ್ತಕದ (A) ಹೆಸರನ್ನ ಕೊಡಲಾಗಿದೆ. ನಂತರ ಅಧ್ಯಾಯದ (B) ಸಂಖ್ಯೆಯನ್ನ ಮತ್ತು ವಚನ (C) ಅಥವಾ ವಚನಗಳ ಸಂಖ್ಯೆಯನ್ನ ಕೊಡಲಾಗಿದೆ.

ಉದಾಹರಣೆಗೆ ಯೋಹಾನ 17:3 ಅಂತ ಇದ್ದರೆ ಯೋಹಾನನ ಪುಸ್ತಕ, ಅಧ್ಯಾಯ 17, ವಚನ 3 ಅಂತ ಅರ್ಥ.