Privacy Settings

To provide you with the best possible experience, we use cookies and similar technologies. Some cookies are necessary to make our website work and cannot be refused. You can accept or decline the use of additional cookies, which we use only to improve your experience. None of this data will ever be sold or used for marketing. To learn more, read the Global Policy on Use of Cookies and Similar Technologies. You can customize your settings at any time by going to Privacy Settings.

ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇಡೀ ಭೂಮಿ ಸುಂದರ ತೋಟವಾದಾಗ ಆಗಲಿರುವ ಪುನರುತ್ಥಾನದ ಆನಂದಭರಿತ ದೃಶ್ಯ

ಮೃತರಿಗಾಗಿ ಆಶಾಕಿರಣ—ಪುನರುತ್ಥಾನ

ಮೃತರಿಗಾಗಿ ಆಶಾಕಿರಣ—ಪುನರುತ್ಥಾನ

ಪುನರುತ್ಥಾನದ ಕುರಿತ ಬೈಬಲ್‌ ವಾಗ್ದಾನವನ್ನು ನಂಬುತ್ತೀರೊ? * ಮರಣದಿಂದಾಗಿ ನಮ್ಮನ್ನು ಅಗಲಿದ ಆಪ್ತರೊಂದಿಗಿನ ಪುನರ್ಮಿಲನದ ಆ ನಿರೀಕ್ಷೆ ಆಕರ್ಷಕ ಎಂಬುದಂತೂ ನಿಜ. ಆದರೆ ನಿಜವಾಗಿ ಹಾಗೆ ಆಗುತ್ತದೆಂದು ನಿರೀಕ್ಷಿಸಬಹುದಾ? ಇದಕ್ಕೆ ಉತ್ತರ ಯೇಸು ಕ್ರಿಸ್ತನ ಆಪ್ತ ಶಿಷ್ಯರ ಮಾದರಿಯಿಂದ ಸಿಗುತ್ತದೆ.

ಈ ಶಿಷ್ಯರು ಮೃತಜನರ ಪುನರುತ್ಥಾನ ಆಗಲಿದೆಯೆಂದು ದೃಢವಾಗಿ ನಂಬಿದ್ದರು. ಏಕೆ? ಕಡಿಮೆಪಕ್ಷ ಎರಡು ಕಾರಣಗಳಿಗಾಗಿ. ಮೊದಲನೇದು, ಅವರ ಆಶಾಕಿರಣ ಒಂದು ನಿಜಾಂಶದ ಮೇಲೆ ಆಧರಿಸಿತ್ತು. ಅದೇನೆಂದರೆ, ಯೇಸುವೇ ಪುನರುತ್ಥಾನ ಹೊಂದಿದ್ದನು. ಒಂದು ಸಮಯದಲ್ಲಿ ಆ ಆಪ್ತ ಶಿಷ್ಯರು ಮತ್ತು ‘ಐನೂರಕ್ಕಿಂತಲೂ ಹೆಚ್ಚು ಮಂದಿ ಸಹೋದರರು’ ಪುನರುತ್ಥಿತ ಯೇಸುವನ್ನು ಕಣ್ಣಾರೆ ಕಂಡಿದ್ದರು. (1 ಕೊರಿಂಥ 15:6) ಅಷ್ಟುಮಾತ್ರವಲ್ಲ ಯೇಸುವಿನ ಪುನರುತ್ಥಾನ ಆಗಿತ್ತೆಂಬ ಮಾತಿಗೆ ಸಾಕ್ಷ್ಯಾಧಾರಗಳು ಇದ್ದವು. ಅಧಿಕಾಂಶ ಜನರು ಅದನ್ನು ಒಪ್ಪಿಕೊಂಡಿದ್ದರು. ಇದನ್ನೇ ಬೈಬಲಿನ ನಾಲ್ಕು ಸುವಾರ್ತಾ ಪುಸ್ತಕಗಳು ತೋರಿಸುತ್ತವೆ.—ಮತ್ತಾಯ 27:62–28:20; ಮಾರ್ಕ 16:1-8; ಲೂಕ 24:1-53; ಯೋಹಾನ 20:1–21:25.

ಎರಡನೇದು, ಯೇಸು ಮಾಡಿದ ಪುನರುತ್ಥಾನಗಳಲ್ಲಿ ಕಡಿಮೆಪಕ್ಷ ಮೂರನ್ನು ಆ ಆಪ್ತ ಶಿಷ್ಯರು ಕಣ್ಣಾರೆ ನೋಡಿದ್ದರು. ಒಂದು ಪುನರುತ್ಥಾನವನ್ನು ನಾಯಿನೆಂಬ ಊರಿನಲ್ಲಿ, ಎರಡನೆಯದನ್ನು ಕಪೆರ್ನೌಮಿನಲ್ಲಿ, ಮೂರನೆಯದ್ದನ್ನು ಬೇಥಾನ್ಯದಲ್ಲಿ ನೋಡಿದ್ದರು. (ಲೂಕ 7:11-17; 8:49-56; ಯೋಹಾನ 11:1-44) ಇವುಗಳಲ್ಲಿ ಕೊನೆಯದ್ದನ್ನು ಇದೇ ಸಂಚಿಕೆಯ ಪುಟ 6ರಲ್ಲಿ ವರ್ಣಿಸಲಾಗಿತ್ತು. ಇದು ಯೇಸುವಿಗೆ ತುಂಬ ಆಪ್ತವಾಗಿದ್ದ ಕುಟುಂಬದಲ್ಲಿ ನಡೆದದ್ದು. ಅಲ್ಲಿ ಏನು ನಡೆಯಿತೆಂಬದನ್ನು ಇನ್ನೂ ಸೂಕ್ಷ್ಮವಾಗಿ ಗಮನಿಸೋಣ.

“ನಾನೇ ಪುನರುತ್ಥಾನ”

ಮಾರ್ಥಳ ಸಹೋದರ ಲಾಜರ ಸತ್ತು ನಾಲ್ಕು ದಿನಗಳಾಗಿದ್ದವು. ಯೇಸು ಆಕೆಗೆ “ನಿನ್ನ ಸಹೋದರನು ಎದ್ದುಬರುವನು” ಎಂದು ಹೇಳಿದಾಗ ಅವಳಿಗೆ ಮೊದಲು ಆ ಮಾತು ಅರ್ಥ ಆಗಲಿಲ್ಲ. ‘ಅವನು ಎದ್ದುಬರುವನೆಂದು ಬಲ್ಲೆನು’ ಎಂದು ಹೇಳಿದಳು. ಅವನ ಪುನರುತ್ಥಾನ ಭವಿಷ್ಯದಲ್ಲಿ ನಡೆಯಲಿದೆಯೆಂದು ನೆನಸಿದಳು. ಆಗ ಯೇಸು ‘ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ’ ಎಂದು ಹೇಳಿದನು. ನಂತರ ಆತನು ಲಾಜರನನ್ನು ಜೀವಕ್ಕೆ ತಂದಾಗ ಅವಳಿಗಾದ ಆಶ್ಚರ್ಯವನ್ನು ಸ್ವಲ್ಪ ಊಹಿಸಿಕೊಳ್ಳಿ!—ಯೋಹಾನ 11:23-25.

ಲಾಜರ ಮೃತಪಟ್ಟ ನಂತರದ ನಾಲ್ಕು ದಿನ ಎಲ್ಲಿದ್ದನು? ತಾನು ಬೇರೆಲ್ಲೊ ಜೀವಂತವಾಗಿದ್ದೆ ಎಂದು ಸೂಚಿಸುವ ಯಾವುದೇ ಮಾತನ್ನು ಲಾಜರ ಹೇಳಲಿಲ್ಲ. ಅವನಲ್ಲಿ ಅಮರ ಆತ್ಮವೂ ಇರಲಿಲ್ಲ, ಅದು ಸ್ವರ್ಗಕ್ಕೆ ಹೋಗಲೂ ಇಲ್ಲ. ಹೋಗಿರುತ್ತಿದ್ದಲ್ಲಿ, ಲಾಜರನನ್ನು ಪುನರುತ್ಥಾನ ಮಾಡುವ ಮೂಲಕ ದೇವರ ಹತ್ತಿರ ಸ್ವರ್ಗದಲ್ಲಿ ಸಂತೋಷವಾಗಿದ್ದ ಅವನನ್ನು ಯೇಸು ವಾಪಸ್‌ ಭೂಮಿಗೆ ಎಳೆದು ತಂದ ಹಾಗಾಗುತ್ತಿತ್ತಲ್ಲವೇ? ಹಾಗಾದರೆ ಆ ನಾಲ್ಕು ದಿನ ಲಾಜರ ಇದ್ದದ್ದಾದರೂ ಎಲ್ಲಿ? ಸಮಾಧಿಯೊಳಗೆ ಮರಣನಿದ್ರೆಯಲ್ಲಿ.—ಪ್ರಸಂಗಿ 9:5, 10.

ನಿಮಗೆ ನೆನಪಿರಬಹುದು, ಯೇಸು ಮರಣವನ್ನು ನಿದ್ರೆಗೆ ಹೋಲಿಸಿದ್ದನು. ಏಕೆಂದರೆ ಮೃತ ವ್ಯಕ್ತಿಯನ್ನು ಪುನರುತ್ಥಾನ ಮಾಡಿ ಎಬ್ಬಿಸಬಹುದು. ಲಾಜರನ ಕುರಿತ ಆ ವೃತ್ತಾಂತದಲ್ಲಿ ಯೇಸು ಹೇಳಿದ್ದು:  “ನಮ್ಮ ಮಿತ್ರನಾದ ಲಾಜರನು ವಿಶ್ರಾಂತಿಮಾಡುತ್ತಿದ್ದಾನೆ; ಅವನನ್ನು ನಿದ್ರೆಯಿಂದ ಎಬ್ಬಿಸಲಿಕ್ಕಾಗಿ ನಾನು ಅಲ್ಲಿಗೆ ಪ್ರಯಾಣಿಸುತ್ತಿದ್ದೇನೆ.” ಅದಕ್ಕೆ ಶಿಷ್ಯರು, “ಕರ್ತನೇ, ಅವನು ವಿಶ್ರಾಂತಿ ಪಡೆಯುತ್ತಿರುವಲ್ಲಿ ಸ್ವಸ್ಥನಾಗುವನು” ಎಂದರು. ಆದರೆ ಯೇಸು ಮಾತಾಡುತ್ತಿದ್ದದ್ದು ಅವನ ಮರಣದ ಕುರಿತು. ಶಿಷ್ಯರು ಅರ್ಥಮಾಡಿಕೊಂಡಿದ್ದು ಲಾಜರ ನಿದ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾನೆಂದು. ಆಗ ಯೇಸು ಅವರಿಗೆ ಸ್ಪಷ್ಟವಾಗಿ, “ಲಾಜರನು ಮೃತಪಟ್ಟಿದ್ದಾನೆ” ಎಂದು ಹೇಳಿದನು. (ಯೋಹಾನ 11:11-14) ಲಾಜರನನ್ನು ಪುನರುತ್ಥಾನ ಮಾಡುವ ಮೂಲಕ ಯೇಸು ಅವನಿಗೆ ಪುನಃ ಜೀವಕೊಟ್ಟು ಅವನ ಕುಟುಂಬದೊಂದಿಗೆ ಪುನರ್ಮಿಲನ ಮಾಡಿಸಿದನು. ಆ ಕುಟುಂಬಕ್ಕೆ ಅದೆಷ್ಟು ಅದ್ಭುತ ಉಡುಗೊರೆ ಆಗಿತ್ತು!

ಭೂಮಿ ಮೇಲೆ ಯೇಸು ನಡೆಸಿದ ಪುನರುತ್ಥಾನಗಳು ಆತನು ಭವಿಷ್ಯದಲ್ಲಿ ದೇವರ ರಾಜ್ಯದ ರಾಜನಾಗಿ ಏನು ಮಾಡಲಿರುವನೊ ಅದರ ಮುನ್‌ ಛಾಯೆಯಾಗಿತ್ತು. * ಯೇಸು ಸ್ವರ್ಗದಿಂದ ಭೂಮಿಯನ್ನು ಆಳುವಾಗ ಸಮಾಧಿಗಳಲ್ಲಿ ಮರಣನಿದ್ರೆಯಲ್ಲಿರುವ ಮಾನವರೆಲ್ಲರನ್ನು ಪುನಃ ಜೀವಕ್ಕೆ ತರುವನು. ಆದ್ದರಿಂದಲೇ ಆತನು ‘ನಾನೇ ಪುನರುತ್ಥಾನ’ ಎಂದು ಹೇಳಿದ್ದು. ನಿಮ್ಮ ಆತ್ಮೀಯರು ಪುನಃ ಜೀವಕ್ಕೆ ಬರುವುದನ್ನು ನೋಡಿ ನಿಮಗಾಗುವ ಸಂತೋಷದ ಕುರಿತು ಯೋಚಿಸಿ! ಪುನರುತ್ಥಾನವಾಗಿ ಬರುವವರಿಗೂ ಆಗುವ ಆನಂದದ ಬಗ್ಗೆ ಯೋಚಿಸಿ!—ಲೂಕ 8:56.

ನಿಮ್ಮ ಆತ್ಮೀಯರು ಪುನಃ ಜೀವಕ್ಕೆ ಬರುವುದನ್ನು ನೋಡಿ ನಿಮಗಾಗುವ ಸಂತೋಷದ ಕುರಿತು ಯೋಚಿಸಿ!

ನಿತ್ಯಜೀವ ಪಡೆಯಲು ನಂಬಿಕೆ ಅಗತ್ಯ

ಯೇಸು ಮಾರ್ಥಳಿಗೆ ‘ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ. ನನ್ನಲ್ಲಿ ನಂಬಿಕೆಯಿಡುವವನು ಸತ್ತರೂ ಜೀವಿತನಾಗುವನು; ಮತ್ತು ಬದುಕಿದ್ದು ನನ್ನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನು ಎಂದಿಗೂ ಸಾಯುವುದೇ ಇಲ್ಲ’ ಎಂದು ಹೇಳಿದನು. (ಯೋಹಾನ 11:25, 26) ತನ್ನ ಸಾವಿರ ವರ್ಷದ ಆಳ್ವಿಕೆಯ ಸಮಯದಲ್ಲಿ ಯೇಸು ಯಾರನ್ನೆಲ್ಲ ಪುನರುತ್ಥಾನ ಮಾಡುವನೋ ಅವರಿಗೆ ಶಾಶ್ವತವಾಗಿ ಜೀವಿಸುವ ಪ್ರತೀಕ್ಷೆ ಇದೆ. ಆದರೆ ಅವರು ಆತನಲ್ಲಿ ನಿಜವಾಗಿ ನಂಬಿಕೆ ಇಡಬೇಕು.

“ನನ್ನಲ್ಲಿ ನಂಬಿಕೆಯಿಡುವವನು ಸತ್ತರೂ ಜೀವಿತನಾಗುವನು.” —ಯೋಹಾನ 11:25.

ಪುನರುತ್ಥಾನದ ಬಗ್ಗೆ ಆ ಗಮನಾರ್ಹ ಮಾತುಗಳನ್ನು ಹೇಳಿದ ನಂತರ ಯೇಸು ಮಾರ್ಥಳಿಗೆ ತನ್ನನ್ನೇ ಪರೀಕ್ಷಿಸಿಕೊಳ್ಳುವಂತೆ ಮಾಡಿದ ಈ ಪ್ರಶ್ನೆ ಕೇಳಿದನು: ‘ನೀನು ಇದನ್ನು ನಂಬುತ್ತೀಯೋ?’ ಆಕೆ ಅವನಿಗೆ ‘ಲೋಕಕ್ಕೆ ಬರಲಿರುವ ದೇವರ ಮಗನಾದ ಕ್ರಿಸ್ತನು ನೀನೇ ಎಂದು ನಾನು ವಿಶ್ವಾಸವಿಟ್ಟಿದ್ದೇನೆ’ ಎಂದು ಹೇಳಿದಳು. (ಯೋಹಾನ 11:26, 27) ನಿಮ್ಮ ಕುರಿತೇನು? ಪುನರುತ್ಥಾನದ ವಿಷಯದಲ್ಲಿ ಮಾರ್ಥಳಿಗಿದ್ದಂಥ ರೀತಿಯ ನಂಬಿಕೆಯನ್ನು ಬೆಳೆಸಿಕೊಳ್ಳಲು ಇಷ್ಟಪಡುತ್ತೀರೊ? ಈ ನಿಟ್ಟಿನಲ್ಲಿ ನೀವು ತೆಗೆದುಕೊಳ್ಳಬೇಕಾದ ಪ್ರಥಮ ಹೆಜ್ಜೆ, ಮಾನವಕುಲಕ್ಕಾಗಿರುವ ದೇವರ ಉದ್ದೇಶದ ಜ್ಞಾನವನ್ನು ಪಡೆದುಕೊಳ್ಳುವುದೇ. (ಯೋಹಾನ 17:3; 1 ತಿಮೊಥೆಯ 2:4) ಈ ಜ್ಞಾನ ನಂಬಿಕೆಗೆ ನಡೆಸುತ್ತದೆ. ಪುನರುತ್ಥಾನದ ಬಗ್ಗೆ ಬೈಬಲ್ ಏನು ಕಲಿಸುತ್ತದೆಂದು ಯೆಹೋವನ ಸಾಕ್ಷಿಗಳನ್ನು ಕೇಳಿ. ಅದರ ಬಗ್ಗೆ ನಿಮ್ಮೊಂದಿಗೆ ಚರ್ಚಿಸಲು ಅವರು ಸಂತೋಷಪಡುವರು. (w14-E 01/01)

^ ಪ್ಯಾರ. 2 ಇದೇ ಸಂಚಿಕೆಯ ಪುಟ 6ರಲ್ಲಿ “ಸಾವೇ ಕೊನೆಯಲ್ಲ!” ಲೇಖನ ನೋಡಿ.

^ ಪ್ಯಾರ. 9 ಭವಿಷ್ಯದಲ್ಲಾಗುವ ಪುನರುತ್ಥಾನದ ಕುರಿತು ಬೈಬಲ್‌ ಕೊಡುವ ನಿರೀಕ್ಷೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 7ನ್ನು ನೋಡಿ.