ನಿಜ ಶಾಂತಿ ಮತ್ತು ಭದ್ರತೆ —ಯಾವಾಗ?
ವಿಶೇಷ ಸಾರ್ವಜನಿಕ ಭಾಷಣ
ನಿಜ ಶಾಂತಿ ಮತ್ತು ಭದ್ರತೆ —ಯಾವಾಗ?
ಸಾವಿರಾರು ವರ್ಷಗಳಿಂದ ಮಾನವರು ಶಾಂತಿ ಮತ್ತು ಭದ್ರತೆಗಾಗಿ ಪ್ರಯತ್ನಿಸಿದ್ದಾರೆ. ಆದರೆ ನಿಜ ಶಾಂತಿ ಮಾನವಕುಲದ ಕೈಗೆಟಕಿಲ್ಲ. ಏಕೆ? ಇದಕ್ಕೆ ಬೈಬಲ್ ಎರಡು ಮುಖ್ಯ ಕಾರಣಗಳನ್ನು ಕೊಡುತ್ತದೆ. ಮಾತ್ರವಲ್ಲ ಸಮಾಧಾನಕರ ಆಶ್ವಾಸನೆಯನ್ನೂ ಕೊಡುತ್ತದೆ. ಅದೇನೆಂದರೆ, ಮಾನವಕುಲಕ್ಕಾಗಿ ಇಡೀ ಲೋಕದಲ್ಲಿ ಶಾಶ್ವತವಾದ ನಿಜ ಶಾಂತಿಭದ್ರತೆಯನ್ನು ತರುವೆನೆಂದು ದೇವರು ವಾಗ್ದಾನಿಸಿದ್ದಾನೆ.
ಶಾಂತಿಭದ್ರತೆಯ ಈ ವಾಗ್ದಾನ ಹೇಗೆ ಮತ್ತು ಯಾವಾಗ ಸಾಕಾರಗೊಳ್ಳುವುದು? ಈ ಆಶೀರ್ವದಿತ ಪರಿಸ್ಥಿತಿಗಳನ್ನು ಆನಂದಿಸಲು ನೀವೇನು ಮಾಡಬೇಕು? ಇವುಗಳನ್ನೂ ಇತರ ಪ್ರಶ್ನೆಗಳನ್ನೂ “ನಿಜ ಶಾಂತಿ ಮತ್ತು ಭದ್ರತೆ—ಯಾವಾಗ?” ಎಂಬ ಸಾರ್ವಜನಿಕ ಭಾಷಣದಲ್ಲಿ ಉತ್ತರಿಸಲಾಗುವುದು. ಈ ಬೈಬಲ್ ಆಧಾರಿತ ಭಾಷಣವನ್ನು ಭೂವ್ಯಾಪಕವಾಗಿ 230ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ಕೊಡಲಾಗುವುದು. ಹೆಚ್ಚಿನ ಸ್ಥಳಗಳಲ್ಲಿ ಈ ಭಾಷಣವನ್ನು ಯೆಹೋವನ ಸಾಕ್ಷಿಗಳ ಸ್ಥಳೀಯ ರಾಜ್ಯ ಸಭಾಗೃಹದಲ್ಲಿ 2010, ಏಪ್ರಿಲ್ 18ರ ಭಾನುವಾರದಂದು ಕೊಡಲಾಗುವುದು. ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳು ನಿಮಗೆ ಸಮಯ ಹಾಗೂ ವಿಳಾಸವನ್ನು ತಿಳಿಸಲು ಸಂತೋಷಿಸುವರು. ಈ ಭಾಷಣವನ್ನು ಆಲಿಸಲು ನಿಮಗೆ ಹಾರ್ದಿಕ ಸ್ವಾಗತ. (w10-E 04/01)