ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 11

ಗೀತೆ 57 ಎಲ್ಲಾ ರೀತಿಯ ಜನರಿಗೆ ಸಾರೋಣ

ಯೇಸು ತರ ಹುರುಪಿಂದ ಸಾರಿ

ಯೇಸು ತರ ಹುರುಪಿಂದ ಸಾರಿ

“ಒಡೆಯ . . . ತಾನೇ ಹೋಗಬೇಕಿದ್ದ ಒಂದೊಂದು ಊರಿಗೆ, ಸ್ಥಳಕ್ಕೆ ತನಗಿಂತ ಮುಂಚೆ ಅವ್ರನ್ನ ಇಬ್ಬಿಬ್ಬರನ್ನಾಗಿ ಕಳಿಸಿದನು.”ಲೂಕ 10:1.

ಈ ಲೇಖನದಲ್ಲಿ ಏನಿದೆ?

ಹುರುಪಿಂದ ಸೇವೆ ಮಾಡೋಕೆ ಯೇಸುವಿನ ಮಾದರಿ ಹೇಗೆ ಸಹಾಯ ಮಾಡುತ್ತೆ ಅಂತ ನೋಡೋಣ.

1. ಯೆಹೋವನ ಆರಾಧಕರಿಗೂ ಬೇರೆ ಕ್ರೈಸ್ತರಿಗೂ ಇರೋ ಒಂದು ದೊಡ್ಡ ವ್ಯತ್ಯಾಸ ಏನು?

 ಯೆಹೋವನ ಆರಾಧಕರಾಗಿರೋ ನಮಗೂ ಮತ್ತು ಕ್ರೈಸ್ತರು ಅಂತ ಹೇಳ್ಕೊಳ್ಳೋ ಲೋಕದವ್ರಿಗೂ ಒಂದು ದೊಡ್ಡ ವ್ಯತ್ಯಾಸ ಇದೆ. ಅದೇ ಸೇವೆ ಕಡೆಗೆ ನಮಗಿರೋ ಹುರುಪು! a (ತೀತ 2:14) ಆದ್ರೆ ಒಂದೊಂದು ಸಲ ಸಿಹಿಸುದ್ದಿ ಸಾರೋಕೆ ನಮ್ಮಲ್ಲೂ ಹುರುಪು ಕಮ್ಮಿ ಆಗಿಬಿಡುತ್ತೆ. “ನನಗಂತೂ ಒಂದೊಂದು ಸಲ ಸಿಹಿಸುದ್ದಿ ಸಾರಕ್ಕೆ ಮನಸ್ಸೇ ಬರಲ್ಲ” ಅಂತ ಸಭೆಲಿ ಚೆನ್ನಾಗಿ ಕೆಲಸ ಮಾಡ್ತಿರೋ ಒಬ್ಬ ಹಿರಿಯ ಹೇಳ್ತಾನೆ. ನಿಮಗೂ ಯಾವತ್ತಾದ್ರೂ ಈ ತರ ಅನಿಸಿದ್ಯಾ?

2. ಹುರುಪಿಂದ ಸೇವೆ ಮಾಡೋಕೆ ಯಾಕೆ ಕೆಲವೊಮ್ಮೆ ಕಷ್ಟ ಆಗಬಹುದು?

2 ಸಿಹಿಸುದ್ದಿ ಸಾರೋದಕ್ಕಿಂತ ಬೇರೆಬೇರೆ ರೀತಿಯ ಸೇವೆ ಮಾಡೋಕೆ ನಮಗೆ ಜಾಸ್ತಿ ಹುರುಪಿರಬಹುದು. ಯಾಕೆ? ಕಟ್ಟಡ ಕಟ್ಟೋದು, ವಿಪತ್ತು ಪರಿಹಾರ ಕೆಲಸ ಮಾಡೋದು, ನಮ್ಮ ಸಹೋದರರನ್ನ ಪ್ರೋತ್ಸಾಹಿಸೋದು ಇಂಥ ಸೇವೆಗಳಲ್ಲಿ ತಕ್ಷಣ ಪ್ರತಿಫಲ ಸಿಗುತ್ತೆ, ಸಂತೃಪ್ತಿ ಸಿಗುತ್ತೆ. ಅಷ್ಟೇ ಅಲ್ಲ ಈ ಎಲ್ಲಾ ಸೇವೆಗಳಲ್ಲಿ ನಮ್ಮ ಸಹೋದರರು ಶಾಂತಿಯಿಂದ ಪ್ರೀತಿಯಿಂದ ಇರೋದನ್ನ ನಾವು ನೋಡ್ತೀವಿ. ನಾವು ಮಾಡೋ ಸೇವೆನ ಅವ್ರೆಲ್ಲ ಮೆಚ್ಕೊಳ್ತಾರೆ. ಆದ್ರೆ ಸಿಹಿಸುದ್ದಿ ಸಾರೋಕೆ ಹೋದಾಗ ಪರಿಸ್ಥಿತಿ ಹೀಗಿರಲ್ಲ. ನಾವು ಹೋಗೋ ಟೆರಿಟೊರಿಯಲ್ಲಿ ಜನ ಅಷ್ಟೇನೂ ಆಸಕ್ತಿ ತೋರಿಸದೇ ಇರಬಹುದು ಅಥವಾ ನಮ್ಮನ್ನ ಬೈದು ಕಳಿಸಬಹುದು. ಅಂತ್ಯ ಹತ್ರ ಇರೋದ್ರಿಂದ ಇನ್ನೂ ಜಾಸ್ತಿ ವಿರೋಧ ಬರಬಹುದು. (ಮತ್ತಾ. 10:22) ಇದೆಲ್ಲದ್ರ ಮಧ್ಯೆ ನಾವು ಹುರುಪಿಂದ ಸೇವೆ ಮಾಡೋಕೆ ಯಾವುದು ಸಹಾಯ ಮಾಡುತ್ತೆ?

3. ಲೂಕ 13:6-9ರಲ್ಲಿರೋ ತೋಟಗಾರನ ಉದಾಹರಣೆಯಿಂದ ಯೇಸುವಿನ ಹುರುಪಿನ ಬಗ್ಗೆ ಏನು ಗೊತ್ತಾಗುತ್ತೆ?

3 ಯೇಸು ಹುರುಪಿಂದ ಸಿಹಿಸುದ್ದಿ ಸಾರಿದ್ದನ್ನ ಚೆನ್ನಾಗಿ ಗಮನಿಸಿದ್ರೆ ನಮ್ಮ ಹುರುಪು ಜಾಸ್ತಿ ಆಗುತ್ತೆ. ಯೇಸು ಭೂಮಿಲಿದ್ದಾಗ ಯಾವತ್ತೂ ತನ್ನ ಹುರುಪು ಆರಿ ಹೋಗೋಕೆ ಬಿಡಲಿಲ್ಲ. ಅದ್ರ ಬದಲು ಹೋಗ್ತಾಹೋಗ್ತಾ ಸೇವೆನ ಹೆಚ್ಚು ಮಾಡಿದನು. (ಲೂಕ 13:6-9 ಓದಿ) ಒಂದು ಉದಾಹರಣೆಯಲ್ಲಿ ಯೇಸು ತನ್ನ ಸೇವೆನ ಒಬ್ಬ ತೋಟಗಾರನ ಕೆಲಸಕ್ಕೆ ಹೋಲಿಸಿದನು. ಆ ತೋಟಗಾರ ಮೂರು ವರ್ಷ ಕಷ್ಟಪಟ್ಟು ಒಂದು ಅಂಜೂರ ಮರ ಬೆಳೆಸಿದ್ದ. ಆದ್ರೆ ಅದು ಒಂದೇ ಒಂದು ಹಣ್ಣು ಕೊಟ್ಟಿರಲಿಲ್ಲ. ಅದೇ ತರ ಯೇಸು ಮೂರು ವರ್ಷ ಯೆಹೂದ್ಯರಿಗೆ ಸಿಹಿಸುದ್ದಿ ಸಾರಿದನು. ಆದ್ರೆ ಎಷ್ಟೋ ಜನ ಅದನ್ನ ಕಿವಿಗೆ ಹಾಕೊಳ್ಳಿಲ್ಲ. ಹಾಗಂತ ಯೇಸು ಸೇವೆ ಮಾಡೋದನ್ನ ಬಿಟ್ಟುಬಿಟ್ನಾ? ಆ ತೋಟಗಾರ ಹೇಗೆ ಪ್ರಯತ್ನ ಹಾಕೋದನ್ನ ನಿಲ್ಲಿಸಲ್ಲಿಲ್ವೋ ಅದೇ ತರ ಯೇಸುನೂ ಪ್ರಯತ್ನ ಹಾಕೋದನ್ನ ಬಿಡಲಿಲ್ಲ. ಬದಲಿಗೆ ಜನ್ರ ಹೃದಯ ಮುಟ್ಟೋಕೆ ಇನ್ನೂ ಬೇರೆಬೇರೆ ರೀತಿಲಿ ಪ್ರಯತ್ನ ಹಾಕಿದನು.

4. ಹುರುಪನ್ನ ಬೆಳೆಸ್ಕೊಳ್ಳೋಕೆ ಯೇಸುವಿಂದ ನಾವು ಯಾವ ನಾಲ್ಕು ವಿಷ್ಯಗಳನ್ನ ಕಲಿಬಹುದು?

4 ಈ ಲೇಖನದಲ್ಲಿ, ಯೇಸು ತನ್ನ ಕೊನೇ ಆರು ತಿಂಗಳಲ್ಲಿ ಹೇಗೆ ಹುರುಪಿಂದ ಸಿಹಿಸುದ್ದಿ ಸಾರಿದನು ಅಂತ ನೋಡೋಣ. (ಲೂಕ 10:1) ಈ ಸಮಯದಲ್ಲಿ ಯೇಸು ಏನು ಹೇಳಿದ ಅಂತ ತಿಳ್ಕೊಂಡು ಅದನ್ನ ಪಾಲಿಸಿದ್ರೆ ಮತ್ತು ಅವನ ತರಾನೇ ನಡ್ಕೊಂಡ್ರೆ ನಾವೂ ಕೂಡ ಹುರುಪಿಂದ ಸಿಹಿಸುದ್ದಿ ಸಾರೋಕೆ ಸಹಾಯ ಆಗುತ್ತೆ. ನಾಲ್ಕು ವಿಷ್ಯಗಳಲ್ಲಿ ಯೇಸು ಇಟ್ಟಿರೋ ಮಾದರಿನ ನಾವೀಗ ನೋಡೋಣ. (1) ಯೆಹೋವನ ಇಷ್ಟದ ಮೇಲೆ ಗಮನ ಇಟ್ಟನು. (2) ಭವಿಷ್ಯವಾಣಿಗಳ ಮೇಲೆ ಗಮನ ಇಟ್ಟನು. (3) ಯೆಹೋವನ ಮೇಲೆ ಆತ್ಕೊಂಡನು. (4) ಕೆಲವು ಜನ್ರಾದ್ರೂ ತನ್ನ ಮಾತು ಕೇಳ್ತಾರೆ ಅಂತ ನಂಬಿಕೆ ಇಟ್ಟನು.

ಯೇಸು ಯೆಹೋವನ ಇಷ್ಟ ಮಾಡೋದ್ರ ಮೇಲೆ ಗಮನ ಇಟ್ಟನು

5. ಯೇಸುಗೆ ದೇವರ ಇಷ್ಟ ಮಾಡೋದೇ ಮುಖ್ಯ ಆಗಿತ್ತು ಅಂತ ನಮಗೆ ಹೇಗೆ ಗೊತ್ತಾಗುತ್ತೆ?

5 “ದೇವರ ಆಳ್ವಿಕೆಯ ಸಿಹಿಸುದ್ದಿನ” ಸಾರೋದು ಯೆಹೋವನ ಇಷ್ಟ ಅಂತ ಯೇಸುಗೆ ಗೊತ್ತಿದ್ರಿಂದ ಯೇಸು ಹುರುಪಿಂದ ಆ ಕೆಲ್ಸ ಮಾಡಿದನು. (ಲೂಕ 4:43) ಆತನಿಗೆ ತನ್ನ ಜೀವನದಲ್ಲಿ ಸಿಹಿಸುದ್ದಿ ಸಾರೋದಕ್ಕಿಂತ ಬೇರೆ ಯಾವುದೂ ಮುಖ್ಯ ಆಗಿರಲಿಲ್ಲ. ಅದಕ್ಕೆ ಯೇಸು ತಾನು ಸಾಯೋ ಕೊನೆ ಕೆಲವು ತಿಂಗಳಲ್ಲೂ “ಒಂದು ಊರಿಂದ ಇನ್ನೊಂದು ಊರಿಗೆ, ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಹೋಗಿ ಜನ್ರಿಗೆ ಕಲಿಸ್ತಾ ಇದ್ದನು.” (ಲೂಕ 13:22) ಅಷ್ಟೇ ಅಲ್ಲ, ತನ್ನ ಜೊತೇಲಿ ಈ ಸೇವೆಯನ್ನ ಮಾಡೋಕೆ ಬೇರೆ ಶಿಷ್ಯರಿಗೆ ತರಬೇತಿನೂ ಕೊಟ್ಟನು.—ಲೂಕ 10:1.

6. ನಾವು ಯಾವುದೇ ಸೇವೆ ಮಾಡಿದ್ರೂ ಅದೆಲ್ಲ ಸಿಹಿಸುದ್ದಿ ಸಾರೋ ಕೆಲಸಕ್ಕೆ ಬೆಂಬಲ ಕೊಡುತ್ತೆ ಅಂತ ಹೇಗೆ ಹೇಳಬಹುದು? (ಚಿತ್ರ ನೋಡಿ.)

6 ಇವತ್ತೂ ಸಿಹಿಸುದ್ದಿ ಸಾರೋದೇ ನಮ್ಮ ಮುಖ್ಯ ಕೆಲ್ಸ ಆಗಿರಬೇಕು ಅಂತ ಯೆಹೋವ ಯೇಸು ಬಯಸ್ತಾರೆ. (ಮತ್ತಾ. 24:14; 28:19, 20) ನಾವು ಯಾವುದೇ ಸೇವೆ ಮಾಡ್ಲಿ, ಅವೆಲ್ಲ ಒಂದಲ್ಲ ಒಂದು ರೀತಿಲಿ ಸಿಹಿಸುದ್ದಿ ಸಾರೋ ಕೆಲಸಕ್ಕೆ ಬೆಂಬಲ ಕೊಡುತ್ತೆ. ಉದಾಹರಣೆಗೆ, ನಾವು ಯೆಹೋವನ ಆರಾಧನೆಗಂತ ಕಟ್ಟಡಗಳನ್ನ ಕಟ್ಟಲಿ ಅಥವಾ ಬೆತೆಲಲ್ಲಿ ಸೇವೆ ಮಾಡ್ಲಿ ಇದೆಲ್ಲ ಸಿಹಿಸುದ್ದಿ ಸಾರೋ ಕೆಲಸಕ್ಕೆ ಬೆಂಬಲ ಕೊಡಬೇಕು ಅಂತಾನೇ! ನಾವು ವಿಪತ್ತು ಪರಿಹಾರ ಕೆಲಸ ಮಾಡೋದು ನಮ್ಮ ಸಹೋದರರಿಗೆ ಸಹಾಯ ಆಗಲಿ ಅನ್ನೋ ಕಾರಣಕ್ಕೆ ನಿಜ. ಆದ್ರೆ ನಮ್ಮ ಮುಖ್ಯ ಉದ್ದೇಶ, ಅವರು ಮುಂಚೆ ತರ ಮೀಟಿಂಗ್‌ ಹೋಗಬೇಕು, ಅದ್ರಲ್ಲೂ ಸಿಹಿಸುದ್ದಿ ಸಾರೋದನ್ನ ಬೇಗ ಶುರು ಮಾಡಬೇಕು ಅನ್ನೋದೇ. ಹಾಗಾಗಿ ‘ನಾವು ಸಿಹಿಸುದ್ದಿ ಸಾರಬೇಕಂತ ಯೆಹೋವ ಬಯಸ್ತಾನೆ, ಅದೇ ಮುಖ್ಯ’ ಅಂತ ಅರ್ಥ ಮಾಡ್ಕೊಂಡ್ರೆ ನಾವು ತಪ್ಪದೇ ಸಿಹಿಸುದ್ದಿ ಸಾರ್ತೀವಿ. ಹಂಗೇರಿಲಿ ಹಿರಿಯನಾಗಿ ಸೇವೆ ಮಾಡ್ತಿರೋ ಯಾನೋಸ್‌ ಹೀಗೆ ಹೇಳ್ತಾರೆ, “ನಾವು ಯೆಹೋವನಿಗೋಸ್ಕರ ಎಷ್ಟೊಂದು ರೀತಿಲಿ ಸೇವೆ ಮಾಡಬಹುದು ನಿಜ. ಆದ್ರೆ ಸಿಹಿಸುದ್ದಿ ಸಾರೋದಕ್ಕಿಂತ ಮುಖ್ಯವಾಗಿರೋ ಕೆಲ್ಸ ಬೇರೆ ಯಾವುದೂ ಇಲ್ಲ ಅನ್ನೋದನ್ನ ನಾನು ನೆನಪಿಸ್ಕೊಳ್ತಾ ಇರ್ತೀನಿ.”

ಇವತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಿಹಿಸುದ್ದಿ ಸಾರಬೇಕಂತ ಯೆಹೋವ ಮತ್ತು ಯೇಸು ನಮ್ಮಿಂದ ಬಯಸ್ತಾರೆ (ಪ್ಯಾರ 6 ನೋಡಿ)


7. ನಾವು ಸಿಹಿಸುದ್ದಿ ಸಾರುತ್ತಾ ಇರಬೇಕಂತ ಯೆಹೋವ ಯಾಕೆ ಬಯಸ್ತಾನೆ? (1 ತಿಮೊತಿ 2:3, 4)

7 ಯೆಹೋವ ದೇವರು ಜನ್ರನ್ನ ಹೇಗೆ ನೋಡ್ತಾನೋ ನಾವು ಅದೇ ತರ ನೋಡಬೇಕು. ಆಗ ಸಿಹಿಸುದ್ದಿ ಸಾರೋಕೆ ನಮ್ಮ ಹುರುಪು ಜಾಸ್ತಿ ಆಗುತ್ತೆ. ಸಾಧ್ಯ ಆದಷ್ಟು ಜನ ಸಿಹಿಸುದ್ದಿನ ಕೇಳ್ಬೇಕು, ಸತ್ಯಕ್ಕೆ ಬರಬೇಕು ಅನ್ನೋದು ಯೆಹೋವನ ಆಸೆ. (1 ತಿಮೊ. 2:3, 4 ಓದಿ) ಸಿಹಿಸುದ್ದಿಗೆ ಜೀವ ಕಾಪಾಡೋ ಶಕ್ತಿ ಇರೋದ್ರಿಂದ ನಾವದನ್ನ ಚೆನ್ನಾಗಿ ಸಾರೋಕೆ ಯೆಹೋವ ಕಲಿಸ್ತಿದ್ದಾನೆ. ಉದಾಹರಣೆಗೆ, ಯೆಹೋವ ನಮಗೆ ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ ಅನ್ನೋ ಬ್ರೋಷರ್‌ ಕೊಟ್ಟಿದ್ದಾನೆ. ಇದ್ರಲ್ಲಿ, ಜನರತ್ರ ನಾವು ಮಾತನ್ನ ಶುರು ಮಾಡೋದು ಹೇಗೆ? ಅವ್ರನ್ನ ಶಿಷ್ಯರನ್ನಾಗಿ ಮಾಡೋಕೆ ಆ ಮಾತನ್ನ ಮುಂದುವರಿಸೋದು ಹೇಗೆ? ಅನ್ನೋ ಸಲಹೆಗಳಿವೆ. ನಾವು ಹೇಳೋದನ್ನ ಜನ ಕೇಳಿ ಈಗ ಸತ್ಯಕ್ಕೆ ಬರದೇ ಇದ್ರೂ ಮಹಾಸಂಕಟದ ಕೊನೆವರೆಗೂ ಅವ್ರಿಗೆ ಅವಕಾಶ ಇದೆ ಅನ್ನೋದನ್ನ ನಾವು ನೆನಪಿಡಬೇಕು. ನಾವು ಈಗ ಏನು ಹೇಳ್ತಿವೋ ಅದನ್ನ ಅವರು ಮುಂದೆ ನೆನಸ್ಕೊಂಡು ಸತ್ಯ ಕಲಿಬಹುದು. ಅವರು ಆ ತರ ಮಾಡಬೇಕಂದ್ರೆ ನಾವು ಈಗ ಹುರುಪಿಂದ ಸಿಹಿಸುದ್ದಿನ ಸಾರುತ್ತಾ ಇರಬೇಕು.

ಯೇಸು ಭವಿಷ್ಯವಾಣಿಗಳನ್ನ ಅರ್ಥ ಮಾಡ್ಕೊಂಡನು

8. ಭವಿಷ್ಯವಾಣಿಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಂಡಿದ್ರಿಂದ ಯೇಸುಗೆ ಏನು ಸಹಾಯ ಆಯ್ತು?

8 ಬೈಬಲಲ್ಲಿರೋ ಭವಿಷ್ಯವಾಣಿಗಳು ಹೇಗೆ ನೆರವೇರುತ್ತೆ ಅಂತ ಯೇಸು ಅರ್ಥ ಮಾಡ್ಕೊಂಡಿದ್ದನು. ಉದಾಹರಣೆಗೆ, ತನ್ನ ಕೈಯಲ್ಲಿ ಬರೀ ಮೂರೂವರೆ ವರ್ಷ ಮಾತ್ರ ಸಿಹಿಸುದ್ದಿ ಸಾರೋಕೆ ಆಗುತ್ತೆ ಅನ್ನೋದು ಆತನಿಗೆ ಗೊತ್ತಿತ್ತು. (ದಾನಿ. 9:26, 27) ಆತನು ಯಾವಾಗ ಮತ್ತು ಹೇಗೆ ಸಾಯಬೇಕಾಗುತ್ತೆ ಅನ್ನೋದ್ರ ಬಗ್ಗೆನೂ ಭವಿಷ್ಯವಾಣಿಗಳನ್ನ ಓದಿ ತಿಳ್ಕೊಂಡಿದ್ದನು. (ಲೂಕ 18:31-34) ಆತನು ಈ ತರ ಭವಿಷ್ಯವಾಣಿಗಳನ್ನ ಅರ್ಥ ಮಾಡ್ಕೊಂಡಿದ್ರಿಂದ ಸಮಯನ ಚೆನ್ನಾಗಿ ಬಳಸಿದನು. ಅದಕ್ಕೆ ಕೊಟ್ಟಿದ್ದ ಕೆಲಸನ ಮಾಡಿ ಮುಗಿಸೋಕೆ ಹುರುಪಿಂದ ಸಿಹಿಸುದ್ದಿ ಸಾರಿದನು.

9. ಬೈಬಲ್‌ ಭವಿಷ್ಯವಾಣಿಗಳನ್ನು ಅರ್ಥ ಮಾಡ್ಕೊಂಡ್ರೆ ಹುರುಪಿಂದ ಸಿಹಿಸುದ್ದಿ ಸಾರೋಕೆ ಹೇಗೆ ಸಹಾಯ ಆಗುತ್ತೆ?

9 ಬೈಬಲ್‌ ಭವಿಷ್ಯವಾಣಿಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಂಡ್ರೆ ನಾವು ಹುರುಪಿಂದ ಸೇವೆ ಮಾಡೋಕೆ ಆಗುತ್ತೆ. ಈ ಲೋಕದ ಅಂತ್ಯ ತುಂಬ ಹತ್ರ ಇದೆ ಅಂತ ನಮಗೆ ಗೊತ್ತು. ನಮ್ಮ ಸಮಯದಲ್ಲಿ ಯಾವೆಲ್ಲ ಭವಿಷ್ಯವಾಣಿಗಳು ನೆರವೇರುತ್ತಿದೆ? ಈ ಪ್ರಪಂಚದಲ್ಲಿ ಆಗ್ತಿರೋ ಘಟನೆಗಳನ್ನ, ಜನ್ರಲ್ಲಿ ಆಗ್ತಿರೋ ಬದಲಾವಣೆಗಳನ್ನ ನೋಡಿದ್ರೆ, ಕೊನೇ ದಿನಗಳ ಬಗ್ಗೆ ಬೈಬಲಲ್ಲಿರೋ ಭವಿಷ್ಯವಾಣಿ ನಿಜ ಆಗ್ತಿದೆ ಅಂತ ಗೊತ್ತಾಗ್ತಿದೆ. “ಅಂತ್ಯದ ಸಮಯದಲ್ಲಿ” ದಕ್ಷಿಣದ ರಾಜನಿಗೂ ಉತ್ತರದ ರಾಜನಿಗೂ ಕಾಳಗ ಇರುತ್ತೆ ಅಂತ ಬೈಬಲಲ್ಲಿ ಭವಿಷ್ಯವಾಣಿ ಇದೆ. ಇದು ಆಂಗ್ಲೋ-ಅಮೆರಿಕನ್‌ ಲೋಕಶಕ್ತಿಗೂ ರಷ್ಯ ಮತ್ತು ಅದ್ರ ಮಿತ್ರ ರಾಷ್ಟ್ರಗಳಿಗೂ ಇರೋ ವೈರತ್ವನ ಸೂಚಿಸುತ್ತೆ ಅಂತ ನಾವು ಅರ್ಥ ಮಾಡ್ಕೊಂಡಿದ್ದೀವಿ. (ದಾನಿ. 11:40) ಜೊತೆಗೆ ದಾನಿಯೇಲ 2:43-45ರಲ್ಲಿ ಹೇಳಿರೋ ದೊಡ್ಡ ಮೂರ್ತಿಯ ಪಾದಗಳು ಆಂಗ್ಲೋ-ಅಮೆರಿಕನ್‌ ಲೋಕಶಕ್ತಿನ ಸೂಚಿಸುತ್ತೆ ಅಂತಾನೂ ನಮಗೆ ಗೊತ್ತು. ಈ ಎಲ್ಲಾ ಭವಿಷ್ಯವಾಣಿಗಳಿಂದ ದೇವರ ಆಳ್ವಿಕೆ ಮನುಷ್ಯ ಸರ್ಕಾರಗಳನ್ನ ಬೇಗ, ತುಂಬ ಬೇಗ ಸರ್ವನಾಶ ಮಾಡುತ್ತೆ ಅಂತ ನಾವು ಅರ್ಥ ಮಾಡ್ಕೊಂಡಿದ್ದೀವಿ ಮತ್ತು ಪೂರ್ತಿ ನಂಬಿದ್ದೀವಿ. ಈ ಎಲ್ಲ ಭವಿಷ್ಯವಾಣಿಗಳು ಲೋಕದ ಅಂತ್ಯಕ್ಕೆ ನಾವು ಎಷ್ಟು ಹತ್ರ ಇದ್ದೀವಿ ಅನ್ನೋದನ್ನ ತೋರಿಸುತ್ತೆ. ಸಮಯ ಕಮ್ಮಿ ಇರೋದ್ರಿಂದ ಸಿಹಿಸುದ್ದಿ ಸಾರೋ ಕೆಲಸನ ಇನ್ನೂ ಜಾಸ್ತಿ ಮಾಡಬೇಕು ಅಂತ ಇದು ನಮ್ಮನ್ನ ಪ್ರೇರಿಸುತ್ತೆ.

10. ಬೈಬಲ್‌ ಭವಿಷ್ಯವಾಣಿಗಳು ಹುರುಪಿಂದ ಸೇವೆ ಮಾಡೋಕೆ ಇನ್ನೂ ಹೇಗೆಲ್ಲ ಸಹಾಯ ಮಾಡುತ್ತೆ?

10 ಬೈಬಲ್‌ ಭವಿಷ್ಯವಾಣಿಗಳಲ್ಲಿರೋ ಸಂದೇಶ ಸಿಹಿಸುದ್ದಿ ಸಾರೋಕೆ ನಮ್ಮಲ್ಲಿ ಆಸೆ ಬೆಳೆಸುತ್ತೆ. ಉದಾಹರಣೆಗೆ ಒಂದು ಅನುಭವ ನೋಡಿ. “ಯೆಹೋವ ಭವಿಷ್ಯದಲ್ಲಿ ಏನೆಲ್ಲಾ ಮಾಡ್ತೀನಿ ಅಂತ ಮಾತು ಕೊಟ್ಟಿದ್ದಾನೋ ಅದನ್ನೆಲ್ಲ ನಾನು ನೆನಸ್ಕೊಳ್ತೀನಿ. ಜನ್ರು ಕಷ್ಟ ಪಡ್ತಿರೋದನ್ನ ನೋಡುವಾಗ ಯೆಹೋವ ಮಾತು ಕೊಟ್ಟಿರೋದು ಬರೀ ನನಗಷ್ಟೇ ಅಲ್ಲ, ಇವ್ರಿಗೋಸ್ಕರನೂ ಅಂತ ನಾನು ನೆನಸ್ಕೊಂಡಾಗ ಇವ್ರಿಗೆಲ್ಲ ಹೋಗಿ ಸಾರಬೇಕು ಅನ್ನೋ ಆಸೆ ನನಗೆ ಬರುತ್ತೆ” ಅಂತ ಡೊಮಿನಿಕನ್‌ ರಿಪಬ್ಲಿಕಲ್ಲಿ ಸೇವೆ ಮಾಡ್ತಿರೋ ಸಹೋದರಿ ಕ್ಯಾರಿ ಹೇಳ್ತಾರೆ. ಸಿಹಿಸುದ್ದಿ ಸಾರೋಕೆ ಯೆಹೋವ ನಮಗೆ ಸಹಾಯ ಮಾಡ್ತಾನೆ ಅಂತ ಭವಿಷ್ಯವಾಣಿಗಳಿಂದ ನಮಗೆ ಗೊತ್ತಾಗುತ್ತೆ. ಇದು ಹುರುಪಿಂದ ಸಾರುತ್ತಾ ಇರೋಕೆ ಸಹಾಯ ಮಾಡುತ್ತೆ. “ಕೆಲವ್ರನ್ನ ನೋಡಿದಾಗ ಇವರು ಸತ್ಯ ಸ್ವೀಕರಿಸಲ್ವೇನೋ ಅಂತ ನಮಗೆ ಅನ್ಸುತ್ತೆ. ಆದ್ರೆ ಅಂಥವ್ರಿಗೂ ಸಿಹಿಸುದ್ದಿ ಸಾರೋಕೆ ಯೆಶಾಯ 11:6-9ರಲ್ಲಿರೋ ವಿಷ್ಯ ನನಗೆ ಸಹಾಯ ಮಾಡಿದೆ. ಯಾಕಂದ್ರೆ ಯೆಹೋವ ಸಹಾಯ ಮಾಡೋದ್ರಿಂದ ಯಾವುದೇ ರೀತಿಯ ವ್ಯಕ್ತಿ ಬೇಕಾದ್ರೂ ಬದಲಾಗ್ತಾನೆ” ಅಂತ ಹಂಗೇರಿಲಿರೋ ಸಹೋದರಿ ಲೈಲಾ ಹೇಳ್ತಾರೆ. “ಮಾರ್ಕ 13:10ರಲ್ಲಿ ‘ಎಲ್ಲ ದೇಶಗಳಲ್ಲಿ ಮೊದಲು ಸಿಹಿಸುದ್ದಿ ಸಾರಬೇಕು’ ಅನ್ನೋ ಭವಿಷ್ಯವಾಣಿ ಇದೆ. ಈ ಭವಿಷ್ಯವಾಣಿ ನೆರವೇರೋದ್ರಲ್ಲಿ ನಂದೂ ಒಂದು ಪಾಲಿದೆ ಅಂತ ನೆನಸ್ಕೊಂಡಾಗ ನಂಗೆ ಖುಷಿ ಆಗುತ್ತೆ” ಅಂತ ಜಾಂಬಿಯಾದಲ್ಲಿ ಸೇವೆ ಮಾಡ್ತಿರೋ ಕ್ರಿಸ್ಟಫರ್‌ ಅನ್ನೋ ಒಬ್ಬ ಸಹೋದರ ಹೇಳ್ತಾನೆ. ಈಗ ನೀವು ಹೇಳಿ, ಹುರುಪಿಂದ ಸಿಹಿಸುದ್ದಿ ಸಾರ್ತಾ ಇರೋಕೆ ನಿಮಗೆ ಯಾವ ಬೈಬಲ್‌ ಭವಿಷ್ಯವಾಣಿಗಳು ಸಹಾಯ ಮಾಡಿವೆ?

ಯೇಸು ಯೆಹೋವನ ಮೇಲೆ ಆತ್ಕೊಂಡನು

11. ಹುರುಪಿಂದ ಸಿಹಿಸುದ್ದಿ ಸಾರೋಕೆ ಯೇಸು ಯಾಕೆ ಯೆಹೋವನ ಮೇಲೆ ಆತ್ಕೊಂಡನು? (ಲೂಕ 12:49, 53)

11 ಹುರುಪಿಂದ ಸಿಹಿಸುದ್ದಿ ಸಾರೋಕೆ ಯೇಸು ಯಾವಾಗ್ಲೂ ಯೆಹೋವನ ಮೇಲೆ ಆತ್ಕೊಂಡನು. ಎಷ್ಟೇ ಜಾಣ್ಮೆ ತೋರಿಸಿದ್ರೂ ದೇವರ ಆಳ್ವಿಕೆಯ ಸಿಹಿಸುದ್ದಿ ಸಾರಿದಾಗ ಸ್ವಲ್ಪ ಜನ ಬೈತಾರೆ, ವಿರೋಧ ಮಾಡ್ತಾರೆ ಅಂತ ಯೇಸುಗೆ ಗೊತ್ತಿತ್ತು. (ಲೂಕ 12:49, 53 ಓದಿ) ಯೇಸು ಸಿಹಿಸುದ್ದಿ ಸಾರುತ್ತಾ ಇರೋದನ್ನ ನೋಡಿ ಎಷ್ಟೋ ಧರ್ಮಗುರುಗಳು ಆತನನ್ನ ಕೊಲ್ಲಬೇಕು ಅಂತ ಪದೇಪದೇ ಪ್ರಯತ್ನ ಮಾಡಿದ್ರು. (ಯೋಹಾ. 8:59; 10:31, 39) ಇಷ್ಟೆಲ್ಲಾ ಆಗ್ತಿದ್ರೂ ಯೆಹೋವ ತನ್ನ ಜೊತೆಯಲ್ಲಿದ್ದಾನೆ ಅಂತ ಯೇಸುಗೆ ಗೊತ್ತಿದ್ರಿಂದ ಬಿಡದೇ ಸಿಹಿಸುದ್ದಿ ಸಾರುತ್ತಾ ಇದ್ದನು. ಅದಕ್ಕೆ ಯೇಸು “ನನ್ನನ್ನ ಕಳಿಸಿದ ಅಪ್ಪ ನನ್ನ ಜೊತೆ ಇದ್ದಾನೆ. ಆತನು ಯಾವತ್ತೂ ನನ್ನ ಕೈ ಬಿಡಲ್ಲ. ಯಾಕಂದ್ರೆ ಆತನು ಇಷ್ಟ ಪಡೋದನ್ನೇ ನಾನು ಯಾವಾಗ್ಲೂ ಮಾಡ್ತೀನಿ” ಅಂದನು.—ಯೋಹಾ. 8:16, 29.

12. ಹಿಂಸೆ ಬಂದ್ರೂ ಸಿಹಿಸುದ್ದಿ ಸಾರುತ್ತಾ ಇರೋಕೆ ಯೇಸು ತನ್ನ ಶಿಷ್ಯರನ್ನ ಹೇಗೆ ತಯಾರಿ ಮಾಡಿದನು?

12 ತನ್ನ ಶಿಷ್ಯರು ಕೂಡ ಯೆಹೋವನ ಮೇಲೆ ಆತ್ಕೊಳ್ಳಬಹುದು ಅಂತ ಯೇಸು ಅವ್ರಿಗೆ ನೆನಪು ಮಾಡಿದನು. ಅವ್ರಿಗೆ ಹಿಂಸೆ ಬಂದಾಗೆಲ್ಲ ಯೆಹೋವ ಸಹಾಯ ಮಾಡ್ತಾನೆ ಅಂತ ಯೇಸು ಪದೇಪದೇ ಅವ್ರಿಗೆ ಭರವಸೆ ಕೊಟ್ಟನು. (ಮತ್ತಾ. 10:18-20; ಲೂಕ 12:11, 12) ಆದ್ರೂ ಜನ ಹಿಂಸೆ ಮಾಡೋದು ಗ್ಯಾರಂಟಿ ಆಗಿರೋದ್ರಿಂದ ‘ಸ್ವಲ್ಪ ಹುಷಾರಾಗಿರಿ’ ಅಂತ ಅವರಿಗೆ ಬುದ್ಧಿ ಕೂಡ ಹೇಳಿದನು. (ಮತ್ತಾ. 10:16; ಲೂಕ 10:3) ಆದ್ರೆ ಜನ ಸಿಹಿಸುದ್ದಿನ ಕೇಳಲೇಬೇಕು ಅಂತ ಯಾವತ್ತೂ ಒತ್ತಾಯ ಮಾಡಬೇಡಿ ಅಂತಾನೂ ಅವ್ರಿಗೆ ಹೇಳಿಕೊಟ್ಟನು. (ಲೂಕ 10:10, 11) ಒಂದುವೇಳೆ ಯಾರಾದ್ರೂ ಹಿಂಸೆ ಮಾಡೋಕೆ ಬಂದ್ರೆ ‘ಅಲ್ಲಿಂದ ಓಡಿ ಹೋಗಿ’ ಅನ್ನೋ ಸಲಹೆನೂ ಕೊಟ್ಟನು. (ಮತ್ತಾ. 10:23) ಯೇಸುಗೆ ತುಂಬ ಹುರುಪಿದ್ರೂ ಯೆಹೋವನ ಮೇಲೆ ತುಂಬ ಆತ್ಕೊಂಡಿದ್ರೂ ಅತಿಯಾದ ಧೈರ್ಯ ತೋರಿಸಿ ಯಾವತ್ತೂ ಸಮಸ್ಯೆನ ಮೈ ಮೇಲೆ ಎಳ್ಕೊಳ್ಳಲಿಲ್ಲ.—ಯೋಹಾ. 11:53, 54.

13. ಯೆಹೋವ ನಮಗೆ ಸಹಾಯ ಮಾಡೇ ಮಾಡ್ತಾನೆ ಅಂತ ಹೇಗೆ ಗ್ಯಾರಂಟಿಯಾಗಿ ಹೇಳಬಹುದು?

13 ಇವತ್ತು ನಮಗೂ ವಿರೋಧದ ಮಧ್ಯೆ ಹುರುಪಿಂದ ಸಿಹಿಸುದ್ದಿ ಸಾರ್ತಾ ಇರೋಕೆ ಯೆಹೋವನ ಸಹಾಯ ಬೇಕೇಬೇಕು. (ಪ್ರಕ. 12:17) ಆದ್ರೆ ಯೆಹೋವ ಸಹಾಯ ಮಾಡೇ ಮಾಡ್ತಾನೆ ಅಂತ ಹೇಗೆ ಹೇಳಬಹುದು? ಯೋಹಾನ 17​ನೇ ಅಧ್ಯಾಯದಲ್ಲಿ ಯೇಸು ಮಾಡಿರೋ ಪ್ರಾರ್ಥನೆನೇ ನಮಗೆ ಗ್ಯಾರಂಟಿ ಕೊಡುತ್ತೆ. ಯೇಸು ಯೆಹೋವ ದೇವರ ಹತ್ರ ‘ಅಪೊಸ್ತಲರನ್ನ ಕಾಪಾಡು’ ಅಂತ ಪ್ರಾರ್ಥನೆ ಮಾಡಿದನು. ಯೆಹೋವ ಈ ಪ್ರಾರ್ಥನೆಗೆ ಉತ್ರ ಕೊಟ್ಟನು. ಇದು ನಮಗೆ ಹೇಗೆ ಗೊತ್ತಾಗುತ್ತೆ? ಅಪೊಸ್ತಲರು ಹಿಂಸೆ ಮಧ್ಯೆನೂ ಹುರುಪಿಂದ ಸಿಹಿಸುದ್ದಿ ಸಾರೋಕೆ ಯೆಹೋವ ಸಹಾಯ ಮಾಡಿದ್ರ ಬಗ್ಗೆ ಅಪೊಸ್ತಲರ ಕಾರ್ಯ ಪುಸ್ತಕದಲ್ಲಿ ಎಷ್ಟೊಂದು ವರದಿಗಳಿವೆ. ಯೇಸು ಮಾಡಿದ ಆ ಪ್ರಾರ್ಥನೇಲಿ ‘ಅಪೊಸ್ತಲರ ಮಾತುಗಳನ್ನ ಕೇಳಿ ತನ್ನ ಮೇಲೆ ನಂಬಿಕೆ ಇಡೋರನ್ನ ಕಾಪಾಡು’ ಅಂತನೂ ಬೇಡ್ಕೊಂಡನು. ಈ ತರ ಅಪೊಸ್ತಲರ ಮಾತುಗಳಲ್ಲಿ ನಂಬಿಕೆ ಇಟ್ಟವ್ರಲ್ಲಿ ನೀವೂ ಒಬ್ಬರು! ಆ ಪ್ರಾರ್ಥನೆ ಪ್ರಕಾರ ಯೆಹೋವ ಇವತ್ತಿಗೂ ತನ್ನ ಸೇವಕರನ್ನ ಕಾಪಾಡ್ತಾ ಇದ್ದಾನೆ. ಹಾಗಾಗಿ ಅವರಿಗೆ ಸಹಾಯ ಮಾಡಿದ ತರಾನೇ ಖಂಡಿತ ನಮಗೂ ಮಾಡ್ತಾನೆ.—ಯೋಹಾ. 17:11, 15, 20.

14. ಹಿಂಸೆ ವಿರೋಧ ಬಂದ್ರೂ ಹುರುಪಿಂದ ಸಿಹಿಸುದ್ದಿ ಸಾರೋಕೆ ಆಗುತ್ತೆ ಅಂತ ನಾವು ಹೇಗೆ ಹೇಳಬಹುದು? (ಚಿತ್ರ ನೋಡಿ.)

14 ಅಂತ್ಯ ಹತ್ರ ಆಗ್ತಾಆಗ್ತಾ ಹುರುಪಿಂದ ಸಿಹಿಸುದ್ದಿ ಸಾರೋಕೆ ಇನ್ನೂ ಕಷ್ಟ ಆಗಬಹುದು. ಹಾಗಿದ್ರೂ ನಮಗೆ ಬೇಕಾಗಿರೋ ಎಲ್ಲ ಸಹಾಯನ ಯೆಹೋವ ಕೊಟ್ಟೇ ಕೊಡ್ತಾನೆ. (ಲೂಕ 21:12-15) ‘ಸಿಹಿಸುದ್ದಿ ಕೇಳಿ’ ಅಂತ ಜನ್ರನ್ನ ಯೇಸು ಮತ್ತು ಶಿಷ್ಯರು ಒತ್ತಾಯ ಮಾಡಲಿಲ್ಲ. ಹಾಗೇ ನಾವೂ ಯಾರನ್ನೂ ಒತ್ತಾಯ ಮಾಡಲ್ಲ, ವಾದ ಮಾಡೋಕೂ ಹೋಗಲ್ಲ. ಈಗಾಗ್ಲೇ ನಮ್ಮ ಸೇವೆಗೆ ನಿಷೇಧ ಇರೋ ಕಡೆನೂ ನಮ್ಮ ಸಹೋದರರು ತಮ್ಮ ಸ್ವಂತ ಶಕ್ತಿ ಮೇಲೆ ಆತ್ಕೊಳ್ಳದೇ ಯೆಹೋವನ ಮೇಲೆ ಆತ್ಕೊಂಡಿದ್ದಾರೆ. ಅದಕ್ಕೆ ಕಷ್ಟದ ಪರಿಸ್ಥಿತಿಯಲ್ಲೂ ಸಾರುತ್ತಾ ಇರೋಕೆ ಸಾಧ್ಯ ಆಗಿದೆ. ಒಂದನೇ ಶತಮಾನದಲ್ಲಿ ಯೆಹೋವ ತನ್ನ ಜನ್ರಿಗೆ ಹೇಗೆ ಈ ಕೆಲಸ ಮಾಡೋಕೆ ಶಕ್ತಿ ಕೊಟ್ಟನೋ ಹಾಗೆ ಇವತ್ತೂ “ಸಿಹಿಸುದ್ದಿಯನ್ನ ಪೂರ್ತಿಯಾಗಿ ಸಾರೋಕೆ” ನಮಗೂ ಶಕ್ತಿ ಕೊಡ್ತಾನೆ. (2 ತಿಮೊ. 4:17) ನೀವು ಹೀಗೆ ಯೆಹೋವನ ಮೇಲೆ ಆತ್ಕೊಂಡ್ರೆ ಹುರುಪಿಂದ ಸಾರುತ್ತಾ ಇರ್ತೀರ!

ನಿಷೇಧ ಇರೋ ಕಡೆ ಸಹ ಹುರುಪಿನ ಪ್ರಚಾರಕರು ಬೇರೆಬೇರೆ ದಾರಿಗಳನ್ನ ಹುಡುಕಿ ಜಾಣ್ಮೆಯಿಂದ ಸಾರ್ತಾರೆ (ಪ್ಯಾರ 14 ನೋಡಿ) b


ಕೆಲವ್ರಾದ್ರೂ ಕೇಳ್ತಾರೆ ಅಂತ ಯೇಸು ನಂಬಿದ್ದನು

15. ಜನ ಸಿಹಿಸುದ್ದಿನ ಕೇಳಿಸ್ಕೊಳ್ತಾರೆ ಅಂತ ಯೇಸುಗೆ ನಂಬಿಕೆ ಇತ್ತು ಅಂತ ಹೇಗೆ ಹೇಳಬಹುದು?

15 ಕೆಲವ್ರಾದ್ರೂ ತನ್ನ ಮಾತನ್ನು ಕೇಳ್ತಾರೆ ಅಂತ ಯೇಸು ನಂಬಿಕೆ ಇಟ್ಟಿದ್ದನು. ಅದಕ್ಕೆ ಆತನು ಹುರುಪನ್ನ ಕಳ್ಕೊಳ್ಳದೆ ಸಿಹಿಸುದ್ದಿ ಸಾರೋಕೆ ಆಯ್ತು. ಉದಾಹರಣೆಗೆ, ಕ್ರಿಸ್ತ ಶಕ 30ರ ಕೊನೇಲಿ ಯೇಸುವಿನ ಮಾತನ್ನ ತುಂಬ ಜನ ಕೇಳೋಕೆ ರೆಡಿ ಇದ್ರು. ಅದಕ್ಕೇ ಯೇಸು ಅವ್ರನ್ನ ಕೊಯ್ಲಿಗೆ ಸಿದ್ಧವಾದ ಹೊಲಕ್ಕೆ ಹೋಲಿಸಿದನು. (ಯೋಹಾ. 4:35) ಒಂದು ವರ್ಷ ಆದ್ಮೇಲೆ ಯೇಸು ತನ್ನ ಶಿಷ್ಯರಿಗೆ “ಕೊಯ್ಲು ಜಾಸ್ತಿ ಇದೆ” ಅಂತ ಹೇಳಿದನು. (ಮತ್ತಾ. 9:37, 38) ಇನ್ನೂ ಸ್ವಲ್ಪ ದಿನ ಆದ್ಮೇಲೆ ಯೇಸು ಮತ್ತೆ ಅವ್ರಿಗೆ “ಕೊಯ್ಲು ಜಾಸ್ತಿ ಇದೆ . . . ಹಾಗಾಗಿ ಹೊಲದ ಯಜಮಾನನ ಹತ್ರ ಕೆಲಸದವ್ರನ್ನ ಕಳಿಸು ಅಂತ ಬೇಡ್ಕೊಳ್ಳಿ” ಅಂತ ಹೇಳಿದನು. (ಲೂಕ 10:2) ಸಿಹಿಸುದ್ದಿನ ಜನ್ರು ಮುಂದೆ ಖಂಡಿತ ಕೇಳಿಸ್ಕೊಳ್ತಾರೆ ಅನ್ನೋ ನಂಬಿಕೆ ಯೇಸುಗಿತ್ತು. ಅದೇ ತರ ಜನ ಸತ್ಯ ಸ್ವೀಕರಿಸಿದಾಗ ಯೇಸುಗೆ ತುಂಬ ಖುಷಿಯಾಯ್ತು.—ಲೂಕ 10:21.

16. ಯೇಸು ಕೊಟ್ಟ ಎರಡು ಉದಾಹರಣೆಗಳಿಂದ ನಮಗೇನು ಅರ್ಥ ಆಗುತ್ತೆ? (ಲೂಕ 13:18-21) (ಚಿತ್ರ ನೋಡಿ.)

16 ನಾವು ಸಾರೋ ಸಂದೇಶದಿಂದ ಒಳ್ಳೇ ಪ್ರತಿಫಲ ಸಿಗುತ್ತೆ ಅಂತ ಯೇಸು ಶಿಷ್ಯರಿಗೆ ನೆನಪಿಸಿದನು. ಇದು ಅವ್ರ ಹುರುಪನ್ನ ಕಾಪಾಡ್ಕೊಳ್ಳೋಕೆ ಪ್ರೋತ್ಸಾಹಿಸಿತು. ಇದನ್ನ ಹೇಗೆ ಹೇಳಬಹುದು ಅನ್ನೋದಕ್ಕೆ ಎರಡು ಉದಾಹರಣೆ ನೋಡೋಣ. (ಲೂಕ 13:18-21 ಓದಿ.) ಒಂದ್ಸಲ ಯೇಸು ದೇವರ ಆಳ್ವಿಕೆಯ ಸಂದೇಶನ ಒಂದು ಚಿಕ್ಕ ಸಾಸಿವೆ ಕಾಳಿಗೆ ಹೋಲಿಸಿದನು. ಅದು ಬೆಳೆದು ಮರ ಆಗೋ ತರನೇ ತುಂಬ ಜನ ಸತ್ಯನ ಸ್ವೀಕರಿಸ್ತಾರೆ. ಯಾವುದೂ ಅವ್ರನ್ನ ತಡಿಯೋಕೆ ಆಗಲ್ಲ ಅಂತ ಹೇಳಿದನು. ಇನ್ನೊಂದು ಸಲ ಯೇಸು ದೇವರ ಆಳ್ವಿಕೆಯ ಸಂದೇಶನ ಹಿಟ್ಟನ್ನು ಉಬ್ಬಿಸೋ ಹುಳಿಗೆ ಹೋಲಿಸಿದನು. ಹಿಟ್ಟಲ್ಲಿ ಹುಳಿ ಹರಡೋದು ಯಾರಿಗೂ ಕಾಣಿಸಲ್ಲ ಅಂದ್ರೂ ಅದು ಹರಡೋದು ಗ್ಯಾರಂಟಿ. ಹಾಗೇ ಸತ್ಯ ಕೂಡ ಜನ್ರಲ್ಲಿ ಹಬ್ಬುತ್ತೆ, ಅವ್ರಲ್ಲಿ ಬದಲಾವಣೆ ತರುತ್ತೆ ಅನ್ನೋದು ಗ್ಯಾರಂಟಿ ಅಂತ ಅರ್ಥ ಮಾಡಿಸಿದನು. ಹೀಗೆ ಸಾರೋ ಸಂದೇಶ ಖಂಡಿತ ಪ್ರತಿಫಲ ಕೊಟ್ಟೆ ಕೊಡುತ್ತೆ ಅಂತ ಯೇಸು ಶಿಷ್ಯರಿಗೆ ಕಲಿಸಿದನು.

ಜನ ಸತ್ಯನ ಕೇಳಿಸ್ಕೊಳ್ತಾರೆ ಅಂತ ಯೇಸು ನಂಬಿದ ತರಾನೇ ನಾವೂ ನಂಬ್ತೀವಿ (ಪ್ಯಾರ 16 ನೋಡಿ)


17. ಸಿಹಿಸುದ್ದಿಯನ್ನ ಹುರುಪಿಂದ ಸಾರೋಕೆ ನಮಗೆ ಇನ್ಯಾವ ಕಾರಣ ಇದೆ?

17 ಸಿಹಿಸುದ್ದಿ ಸಾರೋದ್ರಿಂದ ಪ್ರಪಂಚದ ಎಲ್ಲ ಕಡೆ ಇರೋ ಜನ್ರಿಗೆ ತುಂಬ ಪ್ರಯೋಜನ ಆಗ್ತಿದೆ. ಇದನ್ನ ನಾವು ತಿಳ್ಕೊಂಡ್ರೆ ಸಿಹಿಸುದ್ದಿ ಸಾರೋಕೆ ಹುರುಪು ಜಾಸ್ತಿ ಆಗುತ್ತೆ. ಪ್ರತಿವರ್ಷ ಆಸಕ್ತಿ ಇರೋ ಲಕ್ಷಾಂತರ ಜನ ಸ್ಮರಣೆಗೆ ಹಾಜರಾಗ್ತಿದ್ದಾರೆ ಮತ್ತು ಬೈಬಲ್‌ ಕಲೀತಾ ಇದ್ದಾರೆ. ಸಾವಿರಾರು ಜನ ದೀಕ್ಷಾಸ್ನಾನ ತಗೊಂಡು ನಮ್ಮ ಜೊತೇಲಿ ಸಿಹಿಸುದ್ದಿ ಸಾರೋಕೆ ಕೈ ಜೋಡಿಸ್ತಿದ್ದಾರೆ. ಮುಂದೆ ಇನ್ನೂ ಎಷ್ಟು ಜನ ಸತ್ಯಕ್ಕೆ ಬರ್ತಾರೋ ನಮಗೆ ಗೊತ್ತಿಲ್ಲ! ಆದ್ರೆ ಮಹಾ ಸಂಕಟವನ್ನ ಪಾರಾಗೋಕೆ ಒಂದು ದೊಡ್ಡ ಗುಂಪನ್ನೇ ಯೆಹೋವ ಒಟ್ಟು ಸೇರಿಸ್ತಿದ್ದಾನೆ ಅಂತ ನಮಗೆ ಗ್ಯಾರಂಟಿಯಾಗಿ ಗೊತ್ತು. (ಪ್ರಕ. 7:9, 14) ಯೆಹೋವ ಕೊಯ್ಲಿನ ಯಜಮಾನ ಆಗಿದ್ದಾನೆ, ಜನ ಸಿಹಿಸುದ್ದಿನ ಇನ್ನೂ ಸ್ವೀಕರಿಸ್ತಾರೆ ಅಂತ ಆತನಿಗೆ ಭರವಸೆ ಇದೆ. ಆದ್ರಿಂದ ನಾವು ಹುರುಪಿಂದ ಸಿಹಿಸುದ್ದಿ ಸಾರುತ್ತಾ ಇರೋಣ.

18. ಜನ ನಮ್ಮನ್ನ ಏನಂತ ಗುರುತಿಸಬೇಕು ಅಂತ ಇಷ್ಟಪಡ್ತೀವಿ?

18 ಯೇಸುವಿನ ನಿಜ ಶಿಷ್ಯರು ಯಾವಾಗ್ಲೂ ಹುರುಪಿಂದ ಸಿಹಿಸುದ್ದಿ ಸಾರಿದ್ದಾರೆ! ಅಪೊಸ್ತಲರು ಸಿಹಿಸುದ್ದಿನ ಹುರುಪಿಂದ ಸಾರೋದನ್ನ ನೋಡಿದ ಜನ್ರಿಗೆ ‘ಯೇಸು ಜೊತೆ ಇವರು ಇದ್ರು ಅಂತ ಗೊತ್ತಾಯ್ತು.’ (ಅ. ಕಾ. 4:13) ಹಾಗಾಗಿ ನಾವೂ ಹುರುಪಿಂದ ಸೇವೆ ಮಾಡೋಣ. ಆಗ ಜನ ನಮ್ಮ ಹುರುಪನ್ನ ನೋಡಿ ‘ಇವ್ರೇ ಯೇಸುವಿನ ನಿಜವಾದ ಶಿಷ್ಯರು’ ಅಂತ ಗುರುತಿಸ್ತಾರೆ!

ಗೀತೆ 58 ಯೋಗ್ಯರನು ಪತ್ತೆ ಹಚ್ಚೋಣ

a ಪದ ವಿವರಣೆ: ಈ ಲೇಖನದಲ್ಲಿ ಬಳಸಿರೋ ಹುರುಪು ಅನ್ನೋ ಪದ ಯೆಹೋವನನ್ನ ಆರಾಧಿಸೋಕೆ ಕ್ರೈಸ್ತರಿಗಿರೋ ಉತ್ಸಾಹವನ್ನ ಸೂಚಿಸುತ್ತೆ.

b ಚಿತ್ರ ವಿವರಣೆ : ಪೆಟ್ರೋಲ್‌ ಬಂಕ್‌ನಲ್ಲಿ ಒಬ್ಬ ಸಹೋದರ ಜಾಣ್ಮೆಯಿಂದ ಸಾಕ್ಷಿ ಕೊಡ್ತಿದ್ದಾನೆ.