ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ತಿಳಿದಿತ್ತೋ?

ನಿಮಗೆ ತಿಳಿದಿತ್ತೋ?

ನಿಮಗೆ ತಿಳಿದಿತ್ತೋ?

ಅಪೊಸ್ತಲ ಪೌಲನು ಯಾವ ವಿಚಾರವನ್ನು ಮನಸ್ಸಿನಲ್ಲಿಟ್ಟು “ವಿಜಯೋತ್ಸವದ ಮೆರವಣಿಗೆ” ಎಂದು ಹೇಳಿದನು?

“ಕ್ರಿಸ್ತನೊಂದಿಗೆ ಅನ್ಯೋನ್ಯತೆಯಲ್ಲಿ ನಮ್ಮನ್ನು . . . ವಿಜಯೋತ್ಸವದ ಮೆರವಣಿಗೆಯಲ್ಲಿ ನಡೆಸುವ ಹಾಗೂ ದೇವರ ಕುರಿತಾದ ಜ್ಞಾನವೆಂಬ ಸುವಾಸನೆಯನ್ನು ನಮ್ಮ ಮೂಲಕ ಎಲ್ಲ ಸ್ಥಳಗಳಲ್ಲಿ ಪ್ರಸರಿಸುವ ದೇವರಿಗೆ ಕೃತಜ್ಞತೆ ಸಲ್ಲಿಸಲ್ಪಡಲಿ! ರಕ್ಷಣೆಯ ಮಾರ್ಗದಲ್ಲಿರುವವರ ಮತ್ತು ನಾಶನದ ಮಾರ್ಗದಲ್ಲಿರುವವರ ನಡುವೆ ನಾವು ದೇವರಿಗೆ ಕ್ರಿಸ್ತನ ಪರಿಮಳವಾಗಿದ್ದೇವೆ. ನಾಶನದ ಮಾರ್ಗದಲ್ಲಿರುವವರಿಗೆ ಮರಣದಿಂದ ಹುಟ್ಟಿ ಮರಣಕ್ಕೆ ನಡೆಸುವ ವಾಸನೆಯಾಗಿಯೂ ರಕ್ಷಣೆಯ ಮಾರ್ಗದಲ್ಲಿರುವವರಿಗೆ ಜೀವದಿಂದ ಹುಟ್ಟಿ ಜೀವಕ್ಕೆ ನಡೆಸುವ ವಾಸನೆಯಾಗಿಯೂ ಇದ್ದೇವೆ” ಎಂದು ಪೌಲನು ಬರೆದನು.—2 ಕೊರಿಂ. 2:14-16.

ಶತ್ರುಗಳ ಮೇಲೆ ಜಯಸಾಧಿಸಿದ ಸೇನಾಧಿಪತಿಗೆ ಗೌರವ ಸಲ್ಲಿಸುವ ಸಲುವಾಗಿ ವಿಜಯೋತ್ಸವದಿಂದ ಮೆರವಣಿಗೆ ಮಾಡುವುದು ರೋಮನ್ನರ ಪದ್ಧತಿಯಾಗಿತ್ತು. ಇದನ್ನೇ ಪೌಲನು ಸೂಚಿಸುತ್ತಿದ್ದನು. ಅಂಥ ಸಂದರ್ಭಗಳಲ್ಲಿ ಕೊಳ್ಳೆಯನ್ನು ಹಾಗೂ ಯುದ್ಧ ಕೈದಿಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಿದ್ದರು. ಹೋರಿಗಳನ್ನು ಬಲಿಕೊಡಲು ಕರೆದುಕೊಂಡು ಹೋಗುತ್ತಿದ್ದರು. ಮತ್ತೊಂದು ಬದಿಯಲ್ಲಿ ಜಯಶಾಲಿ ಸೇನಾಧಿಪತಿ ಹಾಗೂ ಅವನ ಸೈನ್ಯಕ್ಕೆ ಸಾರ್ವಜನಿಕರು ಜಯಘೋಷ ಹಾಡುತ್ತಿದ್ದರು. ಮೆರವಣಿಗೆಯ ಅಂತ್ಯದಲ್ಲಿ ಹೋರಿಗಳನ್ನು ಬಲಿಕೊಡಲಾಗುತ್ತಿತ್ತು ಹಾಗೂ ಆ ಯುದ್ಧ ಕೈದಿಗಳಲ್ಲಿ ಹೆಚ್ಚಿನವರನ್ನು ಕೊಲ್ಲಲಾಗುತ್ತಿತ್ತು.

ಕೆಲವರಿಗೆ ಜೀವವನ್ನು ಇನ್ನೂ ಕೆಲವರಿಗೆ ಮರಣವನ್ನು ಸೂಚಿಸುತ್ತಿದ್ದ “ಕ್ರಿಸ್ತನ ಪರಿಮಳ” ಎಂದು ಉಪಯೋಗಿಸಲಾಗಿರುವ ರೂಪಕಾಲಂಕಾರವನ್ನು “ಪ್ರಾಯಶಃ ರೋಮನ್ನರು ಮೆರವಣಿಗೆಯುದ್ದಕ್ಕೂ ಧೂಪಸುಡುತ್ತಿದ್ದ ಪದ್ಧತಿಯಿಂದ ತೆಗೆದುಕೊಂಡಿರಬೇಕು” ಎಂದು ದಿ ಇಂಟರ್‌ನ್ಯಾಷನಲ್‌ ಸ್ಟ್ಯಾಂಡರ್ಡ್‌ ಬೈಬಲ್‌ ಎನ್‌ಸೈಕ್ಲಪೀಡಿಯ ಹೇಳುತ್ತದೆ. “ಧೂಪದಿಂದ ಬರುತ್ತಿದ್ದ ಸುವಾಸನೆಯು ಗೆದ್ದವರಿಗೆ ವಿಜಯವನ್ನೂ ಸೋತು ಕೈದಿಗಳಾಗಿದ್ದವರಿಗೆ ತಮ್ಮ ಮುಂದಿದ್ದ ಸಾವನ್ನೂ ಜ್ಞಾಪಿಸುತ್ತಿತ್ತು.” (w10-E 08/01)

[ಪುಟ 28ರಲ್ಲಿರುವ ಚಿತ್ರ]

ರೋಮನ್ನರ ವಿಜಯೋತ್ಸವ ಮೆರವಣಿಗೆಯ ದೃಶ್ಯವನ್ನು ತೋರಿಸುವ ಕ್ರಿ.ಶ. ಎರಡನೇ ಶತಮಾನದ ಶಿಲ್ಪಾಕೃತಿ

[ಕೃಪೆ]

Photograph taken by courtesy of the British Museum