ಈ ಅಂತ್ಯಕಾಲದಲ್ಲಿ ಮದುವೆ ಮತ್ತು ಮಕ್ಕಳು
ಈ ಅಂತ್ಯಕಾಲದಲ್ಲಿ ಮದುವೆ ಮತ್ತು ಮಕ್ಕಳು
‘ಸಮಯವು ಸಂಕೋಚವಾಗಿದೆ.’—1 ಕೊರಿಂ. 7:29.
ಯುದ್ಧ, ಭೂಕಂಪ, ಬರ ಮತ್ತು ರೋಗಗಳು “ಅಂತ್ಯಕಾಲದ” ಗುರುತಾಗಿರುವವೆಂದು ದೇವರ ವಾಕ್ಯವು ಮುಂತಿಳಿಸಿತ್ತು. (ದಾನಿ. 8:17, 19; ಲೂಕ 21:10, 11) ಮಾನವ ಇತಿಹಾಸದ ಈ ನಿರ್ಣಾಯಕ ಅವಧಿಯಲ್ಲಿ ಮಹಾ ಸಾಮಾಜಿಕ ಬದಲಾವಣೆಗಳೂ ಆಗುವವೆಂದು ಬೈಬಲ್ ಎಚ್ಚರಿಸಿತ್ತು. ಈ ‘ಕಡೇ ದಿವಸಗಳ ಕಠಿನ’ ಸಂಗತಿಗಳಲ್ಲಿ, ಕೌಟುಂಬಿಕ ತಾಪತ್ರಯಗಳು ಒಂದಾಗಿರಲಿದ್ದವು. (2 ತಿಮೊ. 3:1-4) ಆದರೆ ಇಂಥ ಬದಲಾವಣೆಗಳ ಕುರಿತು ನಾವೇಕೆ ಚಿಂತಿತರಾಗಿರಬೇಕು? ಏಕೆಂದರೆ ಅವು ಎಷ್ಟು ವ್ಯಾಪಕವೂ ಪ್ರಭಾವಶಾಲಿಯೂ ಆಗಿವೆಯೆಂದರೆ, ಮದುವೆ ಮತ್ತು ಮಕ್ಕಳನ್ನು ಪಡೆಯುವುದರ ಬಗ್ಗೆ ಕ್ರೈಸ್ತರಿಗಿರುವ ನೋಟವನ್ನೂ ಅವು ಬಾಧಿಸಬಲ್ಲವು. ಹೇಗೆ?
2 ಈಗಿನ ದಿನಗಳಲ್ಲಿ ವಿವಾಹವಿಚ್ಛೇದ ಪಡೆಯುವುದು ತುಂಬ ಸುಲಭವೂ ವ್ಯಾಪಕವೂ ಆಗಿದೆ. ಅನೇಕ ದೇಶಗಳಲ್ಲಿ ವಿಚ್ಛೇದದ ಪ್ರಮಾಣ ಗಗನಕ್ಕೇರುತ್ತಿದೆ. ಹೀಗಿದ್ದರೂ, ವಿವಾಹ ಮತ್ತು ವಿಚ್ಛೇದದ ಕುರಿತ ಯೆಹೋವ ದೇವರ ನೋಟವು ನಮ್ಮ ಸುತ್ತಲಿನ ಲೋಕದಲ್ಲಿ ಸಾಮಾನ್ಯವಾಗಿ ಸ್ವೀಕೃತವಾದ ನೋಟಕ್ಕಿಂತ ಪೂರ್ತಿ
ಭಿನ್ನವಾಗಿದೆಯೆಂದು ನಮಗೆ ಸ್ಪಷ್ಟವಾಗಿ ತಿಳಿದಿರಬೇಕು. ಹಾಗಾದರೆ ಯೆಹೋವನ ನೋಟವೇನು?3 ವಿವಾಹಿತರು ತಮ್ಮ ವಿವಾಹ ಪ್ರತಿಜ್ಞೆಯನ್ನು ಪಾಲಿಸಬೇಕೆಂದು ಯೆಹೋವ ದೇವರು ಅಪೇಕ್ಷಿಸುತ್ತಾನೆ. ಪ್ರಥಮ ಸ್ತ್ರೀಪುರುಷರನ್ನು ವಿವಾಹಬಂಧದಲ್ಲಿ ಬೆಸೆದಾಗ ಆತನಂದದ್ದು: “ಪುರುಷನು . . . ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು.” ಇದೇ ಹೇಳಿಕೆಯನ್ನು ಕಾಲಾನಂತರ ಯೇಸು ಕ್ರಿಸ್ತನು ಪುನರುಚ್ಚರಿಸುತ್ತಾ ಸೇರಿಸಿ ಹೇಳಿದ್ದು: “ಆದದರಿಂದ ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು.” ಅವನು ಇನ್ನೂ ಹೇಳಿದ್ದು: “ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗುತ್ತಾನೆ.” (ಆದಿ. 2:24; ಮತ್ತಾ. 19:3-6, 9) ಹೀಗೆ ಯೆಹೋವ ಹಾಗೂ ಯೇಸುವಿನ ದೃಷ್ಟಿಯಲ್ಲಿ ವಿವಾಹವು ಜೀವನಪರ್ಯಂತದ ಅನುಬಂಧವಾಗಿದ್ದು, ಸಂಗಾತಿಗಳಲ್ಲಿ ಒಬ್ಬರು ಸತ್ತಾಗ ಮಾತ್ರ ಆ ಬಂಧ ಕೊನೆಗೊಳ್ಳುತ್ತದೆ. (1 ಕೊರಿಂ. 7:39) ವಿವಾಹ ಒಂದು ಪವಿತ್ರ ಏರ್ಪಾಡಾಗಿರುವುದರಿಂದ ವಿವಾಹವಿಚ್ಛೇದವು ಒಂದು ಗಂಭೀರ ವಿಷಯವಾಗಿದೆ. ಶಾಸ್ತ್ರಾಧಾರವಿಲ್ಲದ ವಿಚ್ಛೇದವನ್ನು ಯೆಹೋವನು ‘ಹಗೆಮಾಡುತ್ತಾನೆ’ ಎಂದು ದೇವರ ವಾಕ್ಯ ತಿಳಿಸುತ್ತದೆ. *—ಮಲಾಕಿಯ 2:13-16; 3:6 ಓದಿ.
ಜವಾಬ್ದಾರಿಯನ್ನರಿತು ಮದುವೆಯಾಗಿ
4 ನಾವು ಜೀವಿಸುತ್ತಿರುವ ಈ ಭಕ್ತಿಹೀನ ಲೋಕಕ್ಕೆ ಲೈಂಗಿಕತೆಯ ಗೀಳು ಹತ್ತಿದೆ. ಪ್ರತಿದಿನ ಎಲ್ಲಿ ನೋಡಿದರೂ ಕಾಮಪ್ರಚೋದಕ ಚಿತ್ರಣಗಳು ನಮ್ಮ ಕಣ್ಣಿಗೆ ಬೀಳುತ್ತವೆ. ಈ ಅಹಿತಕರ ಪ್ರಭಾವವು ನಮ್ಮ ಮೇಲೆ ಮತ್ತು ವಿಶೇಷವಾಗಿ ಸಭೆಯಲ್ಲಿರುವ ನಮ್ಮ ಪ್ರಿಯ ಯುವ ಜನರ ಮೇಲೆ ಬೀರಬಲ್ಲ ಪರಿಣಾಮಗಳನ್ನು ನಾವು ಅಲಕ್ಷಿಸಲಾರೆವು. ಅದು, ಯುವ ಕ್ರೈಸ್ತರು ನಿಗ್ರಹಿಸಲು ಪ್ರಯತ್ನಿಸುತ್ತಿರುವ ಅಯೋಗ್ಯ ಲೈಂಗಿಕ ಕಾಮನೆಗಳನ್ನು ಬಡಿದೆಬ್ಬಿಸುವಾಗ ಅವರು ಹೇಗೆ ಪ್ರತಿಕ್ರಿಯಿಸಬೇಕು? ಕೆಲವರಾದರೋ ತೀರ ಚಿಕ್ಕ ಪ್ರಾಯದಲ್ಲೇ ಮದುವೆಯಾಗಿಬಿಡುತ್ತಾರೆ. ಈ ರೀತಿಯಲ್ಲಿ ಲೈಂಗಿಕ ಅನೈತಿಕತೆಯ ಪಾಶವನ್ನು ತಪ್ಪಿಸಬಲ್ಲರೆಂದು ಅವರೆಣಿಸುತ್ತಾರೆ. ಆದರೆ ಹೀಗೆ ಮಾಡಿದವರಲ್ಲಿ ಕೆಲವರು, ಸ್ವಲ್ಪ ಸಮಯದೊಳಗೇ ತಮ್ಮ ಆ ನಿರ್ಣಯದ ಬಗ್ಗೆ ವಿಷಾದಿಸಿದ್ದಾರೆ. ಯಾಕೆ? ಮದುವೆಯಾದ ಹೊಸದರಲ್ಲಿ ಇರುವ ಮೆರುಗು ಮಾಸಿಹೋದ ಬಳಿಕ, ದಿನನಿತ್ಯದ ವಿಷಯಗಳಲ್ಲಿ ತಮಗೂ ತಮ್ಮ ಸಂಗಾತಿಗೂ ಯಾವ ಹೊಂದಾಣಿಕೆಯೇ ಇಲ್ಲವೆಂಬ ಸಂಗತಿ ಅವರ ಅರಿವಿಗೆ ಬಂದಿದೆ. ಸಹಜವಾಗಿಯೇ ಇಂಥ ದಂಪತಿಗಳ ಮಧ್ಯೆ ಒಂದು ಗಂಭೀರ ಸಮಸ್ಯೆ ಹುಟ್ಟುತ್ತದೆ.
5 ನೀವು ಮದುವೆಯಾದ ವ್ಯಕ್ತಿ ಒಬ್ಬ ಜೊತೆ ಕ್ರೈಸ್ತರಾಗಿದ್ದರೂ ನೀವು ನೆನಸಿದಂತೆ ಇಲ್ಲದಿರುವಾಗ ಖಂಡಿತವಾಗಿಯೂ ನಿಮಗೆ ತುಂಬ ಕಷ್ಟವೆನಿಸಬಹುದು. (1 ಕೊರಿಂ. 7:28) ಆದರೆ ಸನ್ನಿವೇಶವು ಎಷ್ಟೇ ಕಷ್ಟಕರವಾಗಿರಲಿ, ವಿವಾಹ ಜೀವನದಲ್ಲಿ ಹೊಂದಾಣಿಕೆಯಿಲ್ಲದಿರುವಾಗ ಏಳುವ ಸಮಸ್ಯೆಗಳಿಗೆ ಶಾಸ್ತ್ರಾಧಾರವಿಲ್ಲದ ವಿಚ್ಛೇದವು ಸೂಕ್ತ ಪರಿಹಾರವಲ್ಲ ಎಂದು ಸತ್ಕ್ರೈಸ್ತರಿಗೆ ತಿಳಿದಿದೆ. ಆದುದರಿಂದ, ತಮ್ಮ ವಿವಾಹ ಪ್ರತಿಜ್ಞೆಗೆ ಅಂಟಿಕೊಳ್ಳುವ ನಿಟ್ಟಿನಲ್ಲಿ ತಮ್ಮ ವಿವಾಹವನ್ನು ಕಾಪಾಡಲು ಶ್ರಮಪಡುವವರು, ಕ್ರೈಸ್ತ ಸಭೆಯ ಗೌರವ ಹಾಗೂ ಪ್ರೀತಿಭರಿತ ಸಹಾಯ ಪಡೆಯಲು ಅರ್ಹರು. *
6 ನೀವು ಯುವಪ್ರಾಯದವರೂ ಅವಿವಾಹಿತರೂ ಆಗಿದ್ದೀರೋ? ಹಾಗಿರುವಲ್ಲಿ ಮದುವೆಯಾಗುವುದರ ಬಗ್ಗೆ ನಿಮ್ಮ ನೋಟ ಏನಾಗಿರಬೇಕು? ನೀವು ಮದುವೆಗಾಗಿ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ರೀತಿಯಲ್ಲಿ ಸಿದ್ಧಗೊಳ್ಳುವ ತನಕ ಒಬ್ಬ ಕ್ರೈಸ್ತನೊಂದಿಗೆ ಯಾ ಕ್ರೈಸ್ತಳೊಂದಿಗೆ ಪ್ರಣಯಾತ್ಮಕ ಸಂಬಂಧವನ್ನು ಆರಂಭಿಸದೆ ಕಾಯುವಲ್ಲಿ, ಬಹಳಷ್ಟು ವ್ಯಥೆಯನ್ನು ದೂರವಿಡಬಲ್ಲಿರಿ. ಮದುವೆಯಾಗಲು ಇಂತಿಷ್ಟೇ ವಯಸ್ಸಾಗಬೇಕೆಂದು ಬೈಬಲ್ ಎಲ್ಲಿಯೂ ಹೇಳುವುದಿಲ್ಲ ನಿಜ. * ಆದರೆ ಜೀವನದಲ್ಲಿ ಲೈಂಗಿಕ ಭಾವನೆಗಳು ತುಂಬ ಪ್ರಬಲವಾಗಿರುವಂಥ ಘಟ್ಟವನ್ನು ದಾಟುವ ವರೆಗೆ ಕಾಯುವುದು ಒಳ್ಳೇದೆಂದು ಅದು ತೋರಿಸುತ್ತದೆ. (1 ಕೊರಿಂ. 7:36) ಅಷ್ಟರ ವರೆಗೆ ಏಕೆ ಕಾಯಬೇಕು? ಏಕೆಂದರೆ ಬಲವಾದ ಲೈಂಗಿಕ ಪ್ರೇರಣೆಗಳು ನಿಮ್ಮ ತೀರ್ಮಾನಶಕ್ತಿಯನ್ನು ವಕ್ರಗೊಳಿಸಿ, ಅವಿವೇಕತನದ ನಿರ್ಣಯಗಳನ್ನು ಮಾಡುವಂತೆ ನಡೆಸಬಲ್ಲವು. ಈ ನಿರ್ಣಯಗಳು ಸಮಯಾನಂತರ ಮನೋವೇದನೆಗೆ ಕಾರಣವಾಗಬಲ್ಲವು. ನೆನಪಿಡಿ, ಬೈಬಲ್‌ನಲ್ಲಿ ವಿವಾಹದ ಬಗ್ಗೆ ಯೆಹೋವನು ಕೊಟ್ಟಿರುವ ವಿವೇಕಯುತ ಸಲಹೆ ನಿಮ್ಮ ಪ್ರಯೋಜನ ಹಾಗೂ ಸಂತೋಷಕ್ಕಾಗಿಯೇ ಇದೆ.—ಯೆಶಾಯ 48:17, 18 ಓದಿ.
ಜವಾಬ್ದಾರಿಯುತ ಹೆತ್ತವರಾಗಿರುವುದು
7 ಚಿಕ್ಕ ಪ್ರಾಯದಲ್ಲಿ ಮದುವೆಯಾಗುವ ದಂಪತಿಗಳಲ್ಲಿ ಕೆಲವರು ತರುಣಾವಸ್ಥೆಯ ಹೊರಕ್ಕೆ ಕಾಲಿರಿಸುತ್ತಿರುವಾಗಲೇ ಅವರ ಕೈಯಲ್ಲಿ ಒಂದು ಮಗುವಿರುತ್ತದೆ. ಅವರಿಗೆ ಮಕ್ಕಳಾಗುವ ಮುಂಚೆ ಸರಿಯಾಗಿ ಪರಸ್ಪರ ಪರಿಚಯಮಾಡಲಿಕ್ಕೆ ಸಮಯ ಸಿಕ್ಕಿರುವುದಿಲ್ಲ. ಮಗು ಹುಟ್ಟಿದ ನಂತರವಂತೂ ಅದಕ್ಕೆ 24 ತಾಸೂ ಗಮನ ಕೊಡಬೇಕಾಗುವುದರಿಂದ ಅವರಿಗೆ ಸಮಯವಿರುವುದಿಲ್ಲ. ಸ್ವಾಭಾವಿಕವಾಗಿ ನವಜಾತ ಶಿಶು ತಾಯಿಯ ಕಣ್ಮಣಿಯಾಗುತ್ತದೆ ಮತ್ತು ಆಗ ಯುವ ಗಂಡನಿಗೆ ಸ್ವಲ್ಪ ಹೊಟ್ಟೆಕಿಚ್ಚಾಗಬಹುದು. ಅಷ್ಟುಮಾತ್ರವಲ್ಲದೆ, ಮಗುವಿನ ಆರೈಕೆಯಲ್ಲಿ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯಬೇಕಾಗುವಾಗ ಉಂಟಾಗುವ ಉದ್ವಿಗ್ನತೆ ಹಾಗೂ ಒತ್ತಡದಿಂದಾಗಿ ಆ ದಂಪತಿಯ ಸಂಬಂಧಕ್ಕೆ ಹಾನಿಯಾಗಬಲ್ಲದು. ಆ ಯುವ ದಂಪತಿಗೆ ಹಿಂದಿನಂತೆ ಎಲ್ಲಿ ಬೇಕೆಂದಲ್ಲಿಗೆ ಹೋಗಲು ಇಲ್ಲವೇ ಇಚ್ಛಿಸಿದ್ದೆಲ್ಲವನ್ನೂ ಮಾಡಲು ಆಗದಿರುವುದರಿಂದ ಕಟ್ಟಿಹಾಕಿದಂತಾಗಬಹುದು. ತಮ್ಮ ಬದಲಾದ ಸನ್ನಿವೇಶದ ಬಗ್ಗೆ ಅವರ ನೋಟ ಏನಾಗಿರಬೇಕು?
8 ಜವಾಬ್ದಾರಿಯನ್ನರಿತು ಹೇಗೆ ಮದುವೆಯಾಗಬೇಕೋ ಹಾಗೆಯೇ ಮಕ್ಕಳನ್ನು ಪಡೆಯುವುದು ದೇವದತ್ತ ಜವಾಬ್ದಾರಿಯೆಂದೂ ಸದವಕಾಶವೆಂದೂ ಪರಿಗಣಿಸಬೇಕು. ಮಗುವಿನ ಆಗಮನವು ಕ್ರೈಸ್ತ ದಂಪತಿಯ ಜೀವನದಲ್ಲಿ ಯಾವುದೇ ಹೊಂದಾಣಿಕೆಗಳನ್ನು ಅವಶ್ಯಪಡಿಸಲಿ, ಅವರದನ್ನು ಜವಾಬ್ದಾರಿಯುತ ರೀತಿಯಲ್ಲಿ ನಿರ್ವಹಿಸಬೇಕು. ಮಕ್ಕಳನ್ನು ಪಡೆಯುವ ಸಾಮರ್ಥ್ಯವನ್ನು ಯೆಹೋವನು ಕೊಟ್ಟಿರುವುದರಿಂದ, ಹೆತ್ತವರು ತಮ್ಮ ನವಜಾತ ಶಿಶುವನ್ನು “ಯೆಹೋವನಿಂದ ಬಂದ ಸ್ವಾಸ್ತ್ಯ”ವಾಗಿ ಪರಿಗಣಿಸಬೇಕು. (ಕೀರ್ತ. 127:3) ಕ್ರೈಸ್ತ ತಂದೆತಾಯಂದಿರು, “ಕರ್ತನಲ್ಲಿರುವವರಿಗೆ ತಕ್ಕ ಹಾಗೆ” ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು.—ಎಫೆ. 6:1.
9 ಒಂದು ಮಗುವನ್ನು ಬೆಳೆಸಲು ಹೆತ್ತವರು ಹಲವಾರು ವರ್ಷ ತ್ಯಾಗಗಳನ್ನು ಮಾಡಬೇಕಾಗುತ್ತದೆ. ಅದಕ್ಕಾಗಿ ಬಹಳಷ್ಟು ಸಮಯ ಹಾಗೂ ಶಕ್ತಿಯನ್ನು ವ್ಯಯಿಸಬೇಕು. ಕ್ರೈಸ್ತ ಗಂಡನಾದವನು ಅರ್ಥಮಾಡಿಕೊಳ್ಳಬೇಕಾದ ಒಂದು ಸಂಗತಿಯೇನೆಂದರೆ, ಮಗು ಹುಟ್ಟಿದ ನಂತರ ಹಲವಾರು ವರ್ಷಗಳ ತನಕ ತನ್ನ ಹೆಂಡತಿ ಕೂಟಗಳ ಸಮಯದಲ್ಲಿ ಅಪಕರ್ಷಿತಳಾಗುವ ಸಾಧ್ಯತೆಗಳಿವೆ ಮತ್ತು ವೈಯಕ್ತಿಕ ಬೈಬಲ್ ಅಧ್ಯಯನ ಹಾಗೂ ಧ್ಯಾನಕ್ಕಾಗಿ ಅವಳಿಗೆ ಕಡಿಮೆ ಅವಕಾಶಗಳಿರಬಹುದು. ಇದರಿಂದಾಗಿ ಅವಳ ಆಧ್ಯಾತ್ಮಿಕ ಆರೋಗ್ಯ ಕೆಡಬಹುದು. ಆದುದರಿಂದ ಜವಾಬ್ದಾರಿಯುತ ತಂದೆಯಾಗಿರಲು, ಗಂಡನು ಮಗುವನ್ನು ನೋಡಿಕೊಳ್ಳುವುದರಲ್ಲಿ ತನ್ನಿಂದ ಸಾಧ್ಯವಿರುವ ಎಲ್ಲ ಸಹಾಯ ಕೊಡುವುದು ಅವಶ್ಯ. ಕೂಟದ ಸಮಯದಲ್ಲಿ ಹೆಂಡತಿಗೆ ತಪ್ಪಿಹೋದ ವಿಷಯಗಳನ್ನು ಅವನು ಅನಂತರ ಮನೆಯಲ್ಲಿ ಅವಳೊಂದಿಗೆ ಫಿಲಿಪ್ಪಿ 2:3, 4 ಓದಿ.
ಚರ್ಚಿಸಬಹುದು. ಹೆಂಡತಿಯು ರಾಜ್ಯ ಸಾರುವಿಕೆಯ ಕೆಲಸದಲ್ಲಿ ಅರ್ಥಪೂರ್ಣ ರೀತಿಯಲ್ಲಿ ಭಾಗವಹಿಸುವಂತೆ ಅವಕಾಶಕೊಡಲು ಅವನು ಮಗುವನ್ನು ನೋಡಿಕೊಳ್ಳಬಹುದು.—10 ಜವಾಬ್ದಾರಿಯುತ ಹೆತ್ತವರಾಗಿರಲು, ಮಕ್ಕಳಿಗೆ ಆಹಾರ, ಬಟ್ಟೆ, ವಸತಿ, ಆರೋಗ್ಯಾರೈಕೆಗಳಲ್ಲದೆ ಇನ್ನೂ ಹೆಚ್ಚಿನದ್ದನ್ನು ಒದಗಿಸಬೇಕು. ವಿಶೇಷವಾಗಿ ಈ ಅಪಾಯಕಾರಿ ಅಂತ್ಯಕಾಲದಲ್ಲಿ ಪಾಲಿಸಬೇಕಾದ ನೈತಿಕ ಮೂಲತತ್ತ್ವಗಳನ್ನು ಮಕ್ಕಳು ಎಳವೆಯಲ್ಲೇ ಕಲಿಯಬೇಕು. ಯೆಹೋವನಿಗೆ ‘ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ’ ಮಕ್ಕಳನ್ನು ‘ಸಾಕಿ ಸಲಹಬೇಕು.’ (ಎಫೆ. 6:4) ಈ “ಬಾಲೋಪದೇಶ” ಅಥವಾ ಮಾನಸಿಕ ಕ್ರಮಪಡಿಸುವಿಕೆ ಮಾಡುವುದರ ಅರ್ಥ, ಶೈಶವಾವಸ್ಥೆಯಿಂದ ಆರಂಭಿಸಿ ತರುಣಾವಸ್ಥೆಯ ಕಠಿನ ವರ್ಷಗಳ ವರೆಗೂ ಮಗುವಿನ ಮನಸ್ಸಿನಲ್ಲಿ ಯೆಹೋವನ ವಿಚಾರಗಳನ್ನು ಬೇರೂರಿಸುವುದೇ ಆಗಿದೆ.—2 ತಿಮೊ. 3:14, 15.
11 ಯೇಸು ತನ್ನ ಹಿಂಬಾಲಕರಿಗೆ “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಎಂದು ಹೇಳಿದಾಗ, ಶಿಷ್ಯರಾಗಲು ಹೆತ್ತವರು ಮಕ್ಕಳಿಗೆ ಸಹಾಯಮಾಡಬೇಕೆಂದು ಉದ್ದೇಶಿಸಿದನೆಂಬುದು ಖಂಡಿತ. (ಮತ್ತಾ. 28:19, 20) ಇದೊಂದು ಸವಾಲೇ ಸರಿ. ಏಕೆಂದರೆ ಇಂದು ಲೋಕವು ಯುವ ಜನರ ಮೇಲೆ ಬಹಳಷ್ಟು ಒತ್ತಡವನ್ನು ಹೇರುತ್ತದೆ. ಆದುದರಿಂದ, ತಮ್ಮ ಮಕ್ಕಳನ್ನು ಸಮರ್ಪಿತ ಕ್ರೈಸ್ತರಾಗಿ ಬೆಳೆಸುವುದರಲ್ಲಿ ಸಫಲರಾಗುವ ಹೆತ್ತವರು ಸಭೆಯಲ್ಲಿರುವವರೆಲ್ಲರ ಹೃತ್ಪೂರ್ವಕ ಶ್ಲಾಘನೆಗೆ ಅರ್ಹರು. ತಮ್ಮ ನಂಬಿಕೆ ಹಾಗೂ ಜವಾಬ್ದಾರಿಯುತ ಹೆತ್ತವರಾಗಿರುವ ಮೂಲಕ ಅವರು ಲೋಕದ ಪ್ರಭಾವವನ್ನು ‘ಜಯಿಸಿದ್ದಾರೆ.’—1 ಯೋಹಾ. 5:4.
ಉದಾತ್ತ ಉದ್ದೇಶಕ್ಕಾಗಿ ಮದುವೆಯಾಗದೇ ಇಲ್ಲವೆ ಮಕ್ಕಳನ್ನು ಪಡೆಯದೇ ಇರುವುದು
12 ಉಳಿದಿರುವ “ಸಮಯವು ಸಂಕೋಚ” ಇಲ್ಲವೆ ಕಡಿಮೆ ಆಗಿರುವುದರಿಂದ ಮತ್ತು “ಈ ಪ್ರಪಂಚದ ತೋರಿಕೆಯು ಗತಿಸಿಹೋಗುತ್ತಾ” ಇರುವುದರಿಂದ ಮದುವೆ ಆಗದೇ ಇರುವುದರ ಪ್ರಯೋಜನಗಳ ಬಗ್ಗೆ ಯೋಚಿಸುವಂತೆ ದೇವರ ವಾಕ್ಯವು ನಮ್ಮನ್ನು ಉತ್ತೇಜಿಸುತ್ತದೆ. (1 ಕೊರಿಂ. 7:29-31) ಹೀಗಿರುವುದರಿಂದ, ಕೆಲವು ಕ್ರೈಸ್ತರು ಮದುವೆಯಾಗದೇ ಇರಲು ಆಯ್ಕೆಮಾಡುತ್ತಾರೆ. ಇಲ್ಲವೇ, ಕೆಲವು ವರ್ಷಗಳ ಮಟ್ಟಿಗೆ ಮದುವೆಯಾಗುವುದನ್ನು ಮುಂದೂಡುತ್ತಾರೆ. ಮದುವೆಯಾಗದೇ ಇರುವುದರಿಂದ ಸಿಗುವ ಸ್ವಾತಂತ್ರ್ಯವನ್ನು ಅವರು ಸ್ವಾರ್ಥ ಕೆಲಸಗಳಿಗಾಗಿ ಉಪಯೋಗಿಸದೇ ಇರುವುದು ಶ್ಲಾಘನೀಯ. ಅನೇಕರು ಮದುವೆ ಆಗದೇ ಉಳಿಯುವುದು “ಭಿನ್ನಭಾವವಿಲ್ಲದೆ” ಅಂದರೆ ಅಪಕರ್ಷಣೆಯಿಲ್ಲದೆ ಯೆಹೋವನ ಸೇವೆಮಾಡಲಿಕ್ಕಾಗಿಯೇ. (1 ಕೊರಿಂಥ 7:32-35 ಓದಿ.) ಕೆಲವು ಅವಿವಾಹಿತ ಕ್ರೈಸ್ತರು ಪಯನೀಯರರಾಗಿ ಇಲ್ಲವೆ ಬೆತೆಲಿಗರಾಗಿ ಸೇವೆಸಲ್ಲಿಸುತ್ತಾರೆ. ಇನ್ನೂ ಹಲವರು ಶುಶ್ರೂಷಾ ತರಬೇತಿ ಶಾಲೆಗೆ ಹಾಜರಾಗಲು ಅರ್ಹರಾಗುವ ಮೂಲಕ ಯೆಹೋವನ ಸಂಘಟನೆಗೆ ಉಪಯುಕ್ತರಾಗಲು ಪ್ರಯತ್ನಿಸುತ್ತಾರೆ. ಅವಿವಾಹಿತರಾಗಿ ಉಳಿದು ಸ್ವಲ್ಪ ಕಾಲ ಪೂರ್ಣ ಸಮಯದ ಶುಶ್ರೂಷಕರಾಗಿ ಸೇವೆಸಲ್ಲಿಸಿ ಆಮೇಲೆ ಮದುವೆಯಾಗಲು ನಿರ್ಣಯಿಸಿದವರು, ಆ ಆರಂಭದ ವರ್ಷಗಳಲ್ಲಿ ತಾವು ಕಲಿತಂಥ ಅಮೂಲ್ಯ ಪಾಠಗಳು ಈಗಲೂ ತಮ್ಮ ವಿವಾಹ ಜೀವನಕ್ಕೆ ನೆರವು ನೀಡುತ್ತಿವೆ ಎಂದು ಹೇಳುತ್ತಾರೆ.
13 ಲೋಕದ ಕೆಲವೊಂದು ಭಾಗಗಳಲ್ಲಿ, ಕುಟುಂಬ ಜೀವನದಲ್ಲಿ ಮತ್ತೊಂದು ಬದಲಾವಣೆ ಆಗಿದೆ. 1 ಕೊರಿಂ. 7:3-5) ಇಂಥ ದಂಪತಿಗಳಲ್ಲಿ ಕೆಲವರು ಸರ್ಕಿಟ್ ಹಾಗೂ ಡಿಸ್ಟ್ರಿಕ್ ಕೆಲಸದಲ್ಲಿ ಮತ್ತು ಬೆತೆಲಿನಲ್ಲಿ ಯೆಹೋವನ ಹಾಗೂ ತಮ್ಮ ಸಹೋದರರ ಸೇವೆಮಾಡುತ್ತಾರೆ. ಇನ್ನಿತರರು ಪಯನೀಯರರಾಗಿ ಇಲ್ಲವೆ ಮಿಷನೆರಿಗಳಾಗಿ ಸೇವೆಸಲ್ಲಿಸುತ್ತಾರೆ. ಯೆಹೋವನು ಅವರ ಕೆಲಸವನ್ನು ಮತ್ತು ತನ್ನ ನಾಮಕ್ಕಾಗಿ ಅವರು ತೋರಿಸುವ ಪ್ರೀತಿಯನ್ನು ಎಂದಿಗೂ ಮರೆಯನು.—ಇಬ್ರಿ. 6:10.
ಅದೇನೆಂದರೆ, ಹಲವಾರು ದಂಪತಿಗಳು ಮಕ್ಕಳನ್ನು ಪಡೆಯದಿರಲು ನಿರ್ಧರಿಸುತ್ತಾರೆ. ಕೆಲವರು ಆರ್ಥಿಕ ಕಾರಣಗಳಿಗಾಗಿ ಹಾಗೆ ಮಾಡುತ್ತಾರೆ; ಇನ್ನು ಕೆಲವರು ತಮ್ಮ ಲಾಭದಾಯಕ ವೃತ್ತಿಯನ್ನು ಮುಂದುವರಿಸಲು ಸ್ವತಂತ್ರರಾಗಿರಲಿಕ್ಕಾಗಿ ಹಾಗಿರುತ್ತಾರೆ. ಯೆಹೋವನ ಸಾಕ್ಷಿಗಳಲ್ಲಿಯೂ, ಮಕ್ಕಳನ್ನು ಪಡೆಯದಿರಲು ನಿರ್ಧರಿಸುವ ದಂಪತಿಗಳಿದ್ದಾರೆ. ಆದರೆ ಅವರು ಹೀಗೆ ನಿರ್ಧರಿಸುವುದು, ಯೆಹೋವನ ಸೇವೆ ಮಾಡಲು ಹೆಚ್ಚು ಸ್ವತಂತ್ರರಾಗಿರಲಿಕ್ಕಾಗಿಯೇ. ಇಂಥವರು ಸಹಜ ವೈವಾಹಿಕ ಜೀವನ ನಡೆಸುವುದಿಲ್ಲವೆಂದು ಇದರರ್ಥವಲ್ಲ. ಆದರೂ, ವಿವಾಹ ಜೀವನದ ಕೆಲವೊಂದು ಆಶೀರ್ವಾದಗಳನ್ನು ರಾಜ್ಯಾಭಿರುಚಿಗಳಿಗಾಗಿ ಬಿಟ್ಟುಕೊಡಲು ಅವರು ಸಿದ್ಧರಿದ್ದಾರೆ. (“ಶರೀರಸಂಬಂಧವಾಗಿ ಕಷ್ಟ”
14 ವಿವಾಹಿತ ಕ್ರೈಸ್ತರಿಗೆ “ಶರೀರಸಂಬಂಧವಾಗಿ ಕಷ್ಟ” ಇರುವುದೆಂದು ಅಪೊಸ್ತಲ ಪೌಲನು ಹೇಳಿದನು. (1 ಕೊರಿಂ. 7:28) ಇದರಲ್ಲಿ ದಂಪತಿಯ, ಅವರ ಮಕ್ಕಳ ಇಲ್ಲವೆ ಅವರ ವಯಸ್ಸಾಗುತ್ತಿರುವ ಹೆತ್ತವರ ಆರೋಗ್ಯ ಸಮಸ್ಯೆಗಳು ಸೇರಿರಬಹುದು. ಅಲ್ಲದೆ, ಮಕ್ಕಳನ್ನು ಬೆಳೆಸುವುದರೊಂದಿಗೆ ಬರುವ ಕಷ್ಟಗಳೂ ಮನೋವ್ಯಥೆಗಳೂ ಇದರಲ್ಲಿ ಒಳಗೂಡಿರಬಹುದು. ಈ ಲೇಖನದ ಆರಂಭದಲ್ಲಿ ತಿಳಿಸಲಾದಂತೆ “ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವೆಂಬದನ್ನು” ಬೈಬಲ್ ಮುಂತಿಳಿಸಿತ್ತು. ನಿಭಾಯಿಸಲು ಕಠಿನವಾಗಿರುವಂಥ ವಿಷಯಗಳಲ್ಲಿ “ತಂದೆತಾಯಿಗಳಿಗೆ ಅವಿಧೇಯ”ರಾಗಿರುವ ಮಕ್ಕಳು ಸೇರಿದ್ದಾರೆ.—2 ತಿಮೊ. 3:1-3.
15 ಮಕ್ಕಳನ್ನು ಬೆಳೆಸುವುದು ಕ್ರೈಸ್ತ ಹೆತ್ತವರಿಗೆ ಒಂದು ದೊಡ್ಡ ಸವಾಲಾಗಿದೆ. ಸದ್ಯದ ‘ಕಠಿನಕಾಲಗಳ’ ಪ್ರತಿಕೂಲ ಪರಿಣಾಮಗಳು ನಮಗೆ ತಟ್ಟುವುದಿಲ್ಲವೆಂದೇನಿಲ್ಲ. ಆದುದರಿಂದ ‘ಇಹಲೋಕವು’ ಮಕ್ಕಳ ಮೇಲೆ ಬೀರಬಹುದಾದ ಮಾರಕ ಪ್ರಭಾವದ ವಿರುದ್ಧ ಕ್ರೈಸ್ತ ಹೆತ್ತವರು ಸತತವಾಗಿ ಹೋರಾಡುತ್ತಾ ಇರಬೇಕು. (ಎಫೆ. 2:2, 3) ಈ ಹೋರಾಟದಲ್ಲಿ ಎಲ್ಲ ವಿದ್ಯಮಾನಗಳಲ್ಲಿ ಜಯಸಿಗುವುದಿಲ್ಲ! ಒಂದು ಕ್ರೈಸ್ತ ಕುಟುಂಬದಲ್ಲಿ ಮಗನೋ ಮಗಳೋ ಯೆಹೋವನ ಸೇವೆಮಾಡುವುದನ್ನು ನಿಲ್ಲಿಸುವಾಗ, ಅವರನ್ನು ದೇವರ ಸತ್ಯದಲ್ಲಿ ಬೆಳೆಸಲು ಪ್ರಯತ್ನಿಸುವ ಹೆತ್ತವರಿಗೆ ಅದು ನಿಜವಾಗಿ “ಕಷ್ಟ” ಆಗಿರುತ್ತದೆ.—ಜ್ಞಾನೋ. 17:25.
‘ಮಹಾ ಸಂಕಟವು ಆಗುವುದು’
16 ವಿವಾಹ ಜೀವನದಲ್ಲಿ ಮತ್ತು ಮಕ್ಕಳನ್ನು ಬೆಳೆಸುವುದರಲ್ಲಿ ಉಂಟಾಗುವ ಯಾವುದೇ “ಕಷ್ಟ”ವನ್ನು ಬಹಳಷ್ಟು ಹೆಚ್ಚು ಪ್ರಮಾಣದಲ್ಲಿ ಮೀರಿಸುವಂಥ ಇನ್ನೊಂದು ಸಂಕಟವು ಬರಲಿದೆ. ತನ್ನ ಸಾನ್ನಿಧ್ಯ ಹಾಗೂ ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಕುರಿತಾದ ಪ್ರವಾದನೆಯಲ್ಲಿ ಯೇಸು ಹೇಳಿದ್ದು: “ಅಂಥ [ಮಹಾ] ಸಂಕಟವು ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನವರೆಗೂ ಆಗಲಿಲ್ಲ, ಇನ್ನೂ ಮೇಲೆಯೂ ಆಗುವದಿಲ್ಲ.” (ಮತ್ತಾ. 24:3, 21) ಈ ‘ಮಹಾ ಸಂಕಟದಿಂದ’ ಒಂದು ಮಹಾ ಸಮೂಹವು ಪಾರಾಗುವುದೆಂದು ಯೇಸು ಕಾಲಾನಂತರ ಪ್ರಕಟಪಡಿಸಿದನು. ಆದರೆ, ಸೈತಾನನ ವ್ಯವಸ್ಥೆಯು ಯೆಹೋವನ ಶಾಂತಿಯುತ ಸಾಕ್ಷಿಗಳ ವಿರುದ್ಧ ಹೋರಾಡುವುದನ್ನು ಮುಂದುವರಿಸುತ್ತಾ ಒಂದು ಕೊನೆಯ ಸಂಪೂರ್ಣ ಆಕ್ರಮಣವನ್ನು ನಡೆಸುವುದು. ನಿಸ್ಸಂದೇಹವಾಗಿ ಅದು ನಮ್ಮೆಲ್ಲರಿಗೂ ಅಂದರೆ ವಯಸ್ಕರಿಗೂ ಮಕ್ಕಳಿಗೂ ಕಷ್ಟಕರ ಸಮಯವಾಗಿರುವುದು.
17 ಹಾಗಿದ್ದರೂ, ನಾವು ಭವಿಷ್ಯತ್ತಿನ ಕುರಿತಾಗಿ ಅನಾವಶ್ಯಕವಾಗಿ ಭಯಪಡಬಾರದು. ಯೆಹೋವನಿಗೆ ನಂಬಿಗಸ್ತರಾಗಿರುವ ಹೆತ್ತವರು ತಮ್ಮ ಎಳೆಯ ಮಕ್ಕಳೊಂದಿಗೆ ರಕ್ಷಿಸಲ್ಪಡುವ ನಿರೀಕ್ಷೆಯಿಂದಿರಬಲ್ಲರು. (ಯೆಶಾಯ 26:20, 21 ಓದಿ; ಚೆಫ. 2:2, 3; 1 ಕೊರಿಂ. 7:14) ಸದ್ಯಕ್ಕಾದರೋ, ನಾವೀಗ ಜೀವಿಸುತ್ತಿರುವ ಕಠಿನ ಕಾಲಗಳ ಕುರಿತ ಅರಿವು, ಈ ಅಂತ್ಯಕಾಲದಲ್ಲಿ ಮದುವೆ ಮತ್ತು ಮಕ್ಕಳನ್ನು ಪಡೆಯುವುದರ ಕುರಿತಾದ ನಮ್ಮ ಯೋಚನಾರೀತಿಯನ್ನು ಪ್ರಭಾವಿಸಲಿ. (2 ಪೇತ್ರ 3:10-13) ಹಾಗೆ ಮಾಡುವಲ್ಲಿ ನಾವು ವಿವಾಹಿತರಿರಲಿ ಅವಿವಾಹಿತರಿರಲಿ, ನಮಗೆ ಮಕ್ಕಳಿರಲಿ ಇಲ್ಲದಿರಲಿ ನಮ್ಮ ಜೀವನವು ಯೆಹೋವನಿಗೂ ಕ್ರೈಸ್ತ ಸಭೆಗೂ ಸ್ತುತಿಮಾನಗಳನ್ನು ತರುವುದು.
[ಪಾದಟಿಪ್ಪಣಿಗಳು]
^ ಪ್ಯಾರ. 5 ಯೆಹೋವನ ದಿನವನ್ನು ಮನಸ್ಸಿನಲ್ಲಿಟ್ಟು ಜೀವಿಸಿರಿ (ಇಂಗ್ಲಿಷ್) ಪುಸ್ತಕದ ಪುಟ 125ರಲ್ಲಿ “ಆತನು ವಿವಾಹವಿಚ್ಛೇದವನ್ನು ಹಗೆಮಾಡುತ್ತಾನೆ” ಎಂಬ ಉಪಶೀರ್ಷಿಕೆ ನೋಡಿ.
^ ಪ್ಯಾರ. 8 2003, ಸೆಪ್ಟೆಂಬರ್ 15ರ ಕಾವಲಿನಬುರುಜು ಮತ್ತು 2001, ಏಪ್ರಿಲ್ 8ರ ಎಚ್ಚರ!ದಲ್ಲಿರುವ ಲೇಖನಗಳನ್ನು ವಿಮರ್ಶಿಸುವುದರಿಂದ ವೈವಾಹಿಕ ಸಮಸ್ಯೆಗಳುಳ್ಳವರು ಬಲಹೊಂದಬಹುದು.
^ ಪ್ಯಾರ. 9 ಯುವ ಜನರು ಕೇಳುವ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಎಂಬ ಪುಸ್ತಕದಲ್ಲಿ, “ನಾನು ವಿವಾಹಕ್ಕೆ ಸಿದ್ಧನೋ?” ಎಂಬ 30ನೇ ಅಧ್ಯಾಯ ನೋಡಿ.
ಪುನರ್ವಿಮರ್ಶೆ
• ಯುವ ಕ್ರೈಸ್ತರು ಮದುವೆಯಾಗಲು ಏಕೆ ಅವಸರಪಡಬಾರದು?
• ಒಂದು ಮಗುವನ್ನು ಬೆಳೆಸಲಿಕ್ಕಾಗಿ ಏನೆಲ್ಲ ಮಾಡಬೇಕಾಗುತ್ತದೆ?
• ಅನೇಕ ಕ್ರೈಸ್ತರು ಮದುವೆಯಾಗದೆ ಉಳಿಯುವುದು ಇಲ್ಲವೆ ವಿವಾಹಿತರಾದಲ್ಲಿ ಮಕ್ಕಳನ್ನು ಪಡೆಯದೆ ಇರುವುದು ಏತಕ್ಕೆ?
• ಕ್ರೈಸ್ತ ಹೆತ್ತವರು ಯಾವ “ಕಷ್ಟ”ವನ್ನು ಅನುಭವಿಸುವರು?
[ಅಧ್ಯಯನ ಪ್ರಶ್ನೆಗಳು]
1. (ಎ) “ಕಠಿನ” ಸಂಗತಿಗಳಲ್ಲಿ ಯಾವ ಪ್ರಸಕ್ತ ಬದಲಾವಣೆಗಳು ಸೇರಿವೆ? (ಬಿ) ಬದಲಾಗುತ್ತಿರುವ ಕುಟುಂಬ ಮೌಲ್ಯಗಳು ನಮ್ಮಲ್ಲಿ ಏಕೆ ಚಿಂತೆ ಹುಟ್ಟಿಸುತ್ತವೆ?
2. ವಿವಾಹ ಮತ್ತು ವಿಚ್ಛೇದದ ಕುರಿತು ಲೋಕದ ಸರ್ವಸಾಮಾನ್ಯ ನೋಟವೇನು?
3. ವಿವಾಹದ ಕುರಿತು ಯೆಹೋವ ಹಾಗೂ ಯೇಸು ಕ್ರಿಸ್ತನ ನೋಟವೇನು?
4. ಚಿಕ್ಕ ಪ್ರಾಯದಲ್ಲೇ ಮದುವೆಯಾಗುವ ತಮ್ಮ ನಿರ್ಣಯದ ಬಗ್ಗೆ ಕೆಲವು ಯುವ ಕ್ರೈಸ್ತರು ಏಕೆ ವಿಷಾದಿಸುತ್ತಾರೆ?
5. ದಂಪತಿಗಳು ತಮ್ಮ ವಿವಾಹ ಪ್ರತಿಜ್ಞೆಗೆ ನಿಷ್ಠರಾಗಿರುವಂತೆ ಯಾವುದು ಸಹಾಯಮಾಡುವುದು? (ಪಾದಟಿಪ್ಪಣಿಯನ್ನೂ ನೋಡಿ.)
6. ಮದುವೆಯಾಗುವುದರ ಬಗ್ಗೆ ಯುವ ಕ್ರೈಸ್ತರ ನೋಟವೇನಾಗಿರಬೇಕು?
7. ಕೆಲವು ಯುವ ದಂಪತಿಗಳು ಏನನ್ನು ಅನುಭವಿಸುತ್ತಾರೆ, ಮತ್ತು ಇದು ವಿವಾಹ ಸಂಬಂಧಕ್ಕೆ ಹೇಗೆ ಹಾನಿಮಾಡಬಹುದು?
8. ಮಕ್ಕಳನ್ನು ಪಡೆಯುವುದರ ಬಗ್ಗೆ ಸರಿಯಾದ ನೋಟ ಯಾವುದು, ಮತ್ತು ಏಕೆ?
9. (ಎ) ಒಂದು ಮಗುವನ್ನು ಬೆಳೆಸುವುದರಲ್ಲಿ ಏನೆಲ್ಲ ಒಳಗೂಡಿದೆ? (ಬಿ) ಹೆಂಡತಿಯ ಆಧ್ಯಾತ್ಮಿಕತೆಯನ್ನು ಬಲವಾಗಿರಿಸಲು ಗಂಡನು ಏನು ಮಾಡಬಹುದು?
10, 11. (ಎ) ಮಕ್ಕಳನ್ನು ಯೆಹೋವನ ಮಾನಸಿಕ ಕ್ರಮಪಡಿಸುವಿಕೆಯಲ್ಲಿ ಹೇಗೆ ಸಾಕಿ ಸಲಹಲಾಗುತ್ತದೆ? (ಬಿ) ಅನೇಕ ಕ್ರೈಸ್ತ ಹೆತ್ತವರು ಶ್ಲಾಘನೆಗೆ ಅರ್ಹರು ಏಕೆ?
12. ಕೆಲವು ಮಂದಿ ಕ್ರೈಸ್ತರು ಮದುವೆಯಾಗುವುದನ್ನು ಮುಂದೂಡಲು ನಿರ್ಣಯಿಸುತ್ತಾರೆ ಏಕೆ?
13. ಕೆಲವು ಕ್ರೈಸ್ತ ದಂಪತಿಗಳು ಮಕ್ಕಳನ್ನು ಪಡೆಯದಿರಲು ನಿರ್ಧರಿಸುವುದು ಏಕೆ?
14, 15. (ಎ) ಕ್ರೈಸ್ತ ಹೆತ್ತವರು ಯಾವ ‘ಶರೀರಸಂಬಂಧವಾದ ಕಷ್ಟವನ್ನು’ ಎದುರಿಸಬೇಕಾದೀತು? (ಬಿ) ಈ ಲೋಕಕ್ಕೆ ಬಲಿಬಿದ್ದಿರುವ ಮಗ ಇಲ್ಲವೇ ಮಗಳಿರುವ ಹೆತ್ತವರಿಗೆ ನಾವು ಹೇಗೆ ಸಹಾಯ ಮಾಡಬಹುದು?
16. ಯೇಸು ಯಾವ ‘ಸಂಕಟದ’ ಬಗ್ಗೆ ಪ್ರವಾದಿಸಿದನು?
17. (ಎ) ನಾವು ಭವಿಷ್ಯತ್ತನ್ನು ಭರವಸೆಯಿಂದ ಏಕೆ ಎದುರಿಸಬಲ್ಲೆವು? (ಬಿ) ಮದುವೆಯಾಗುವುದು ಮತ್ತು ಮಕ್ಕಳನ್ನು ಪಡೆಯುವುದರ ಕುರಿತ ನಮ್ಮ ನೋಟವನ್ನು ಯಾವುದು ಪ್ರಭಾವಿಸಬೇಕು?
[ಪುಟ 17ರಲ್ಲಿರುವ ಚಿತ್ರ]
ಯುವ ಕ್ರೈಸ್ತರು ಮದುವೆಯಾಗಲು ಕೆಲವು ವರ್ಷ ಕಾಯುವುದು ವಿವೇಕಯುತವೇಕೆ?
[ಪುಟ 18ರಲ್ಲಿರುವ ಚಿತ್ರ]
ಒಬ್ಬ ಗಂಡನು, ತನ್ನ ಹಂಡತಿಯು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಅರ್ಥಪೂರ್ಣ ರೀತಿಯಲ್ಲಿ ಪಾಲ್ಗೊಳ್ಳುವಂತೆ ಬಹಳಷ್ಟು ಸಹಾಯ ನೀಡಬಲ್ಲನು
[ಪುಟ 19ರಲ್ಲಿರುವ ಚಿತ್ರ]
ಕೆಲವು ಕ್ರೈಸ್ತ ದಂಪತಿಗಳು ಮಕ್ಕಳನ್ನು ಪಡೆಯದಿರಲು ನಿರ್ಧರಿಸುವುದೇಕೆ?