ಯೆಹೋವನನ್ನು ಪ್ರೀತಿಸಲು ನಿಮ್ಮ ಮಕ್ಕಳಿಗೆ ಕಲಿಸಿರಿ
ಯೆಹೋವನನ್ನು ಪ್ರೀತಿಸಲು ನಿಮ್ಮ ಮಕ್ಕಳಿಗೆ ಕಲಿಸಿರಿ
“ಯೌವನದಲ್ಲಿ ಹುಟ್ಟಿದ ಮಕ್ಕಳು ಯುದ್ಧವೀರನ ಕೈಯಲ್ಲಿಯ ಬಾಣಗಳಂತಿದ್ದಾರೆ.”—ಕೀರ್ತನೆ 127:4, NIBV.
ಒಬ್ಬ ಬಿಲ್ಲುಗಾರನು ಒಂದು ನಿರ್ದಿಷ್ಟ ಗುರಿಹಲಗೆಗೆ ಬಾಣಬಿಡಲು ತಯಾರಾಗುತ್ತಿದ್ದಾನೆ. ಬಾಣವನ್ನು ಜಾಗ್ರತೆಯಿಂದ ಬಿಲ್ಲಿನ ಹೆದೆಗೇರಿಸಿ, ಪೂರ್ಣ ಶಕ್ತಿ ಬಳಸಿ ಬಿಲ್ಲನ್ನು ಬಾಗಿಸುತ್ತಾನೆ. ಇದನ್ನು ಮಾಡಲು ಅವನಿಗೆ ತುಂಬ ಪ್ರಯಾಸಪಡಬೇಕಾದರೂ, ಬಾಣವನ್ನು ಗುರಿಯಿಟ್ಟು ಬಿಡಲು ಅವನು ಸಮಯ ತೆಗೆದುಕೊಳ್ಳುತ್ತಾನೆ. ತದನಂತರವೇ ಬಾಣವನ್ನು ಬಿಡುತ್ತಾನೆ. ಅದು ಗುರಿ ತಲಪುವುದೋ? ಉತ್ತರವು ಅನೇಕ ಅಂಶಗಳ ಮೇಲೆ ಹೊಂದಿಕೊಂಡಿದೆ. ಬಿಲ್ಲುಗಾರನ ಕೌಶಲ, ಗಾಳಿಯ ಪ್ರಭಾವ ಮತ್ತು ಬಾಣದ ಪರಿಸ್ಥಿತಿ ಇದರಲ್ಲಿ ಒಳಗೂಡಿದೆ.
2 ರಾಜ ಸೊಲೊಮೋನನು ಮಕ್ಕಳನ್ನು ‘ಯುದ್ಧವೀರನ ಕೈಯಲ್ಲಿರುವ ಬಾಣಗಳಿಗೆ’ ಹೋಲಿಸಿದನು. (ಕೀರ್ತನೆ 127:4, NIBV) ಈ ದೃಷ್ಟಾಂತವನ್ನು ಹೇಗೆ ಅನ್ವಯಿಸಬಹುದೆಂಬುದನ್ನು ಪರಿಗಣಿಸಿರಿ. ಬಿಲ್ಲುಗಾರನ ಬಿಲ್ಲಿನಲ್ಲಿ ಬಾಣವು ಕೇವಲ ಕೊಂಚ ಸಮಯಕ್ಕಿರುತ್ತದೆ. ಗುರಿಮುಟ್ಟಲು ಅವನದನ್ನು ತಟ್ಟನೆ ಬಿಡಬೇಕು. ಅದೇ ರೀತಿಯಲ್ಲಿ ಹೆತ್ತವರಿಗೆ ತಮ್ಮ ಮಕ್ಕಳಲ್ಲಿ ಯೆಹೋವನ ಮೇಲೆ ಹೃತ್ಪೂರ್ವಕ ಪ್ರೀತಿಯನ್ನು ಬೆಳೆಸಲು ಇರುವ ಸಮಯವು ಕೊಂಚವೇ. ಕೆಲವೇ ವರ್ಷಗಳಲ್ಲೊ ಎಂಬಂತೆ ಮಕ್ಕಳು ಬೆಳೆದು ದೊಡ್ಡವರಾಗುತ್ತಾರೆ. (ಮತ್ತಾಯ 19:5) ಅವರು ಗುರಿಯನ್ನು ತಲಪುವರೋ? ಅಂದರೆ ದೊಡ್ಡವರಾದ ಬಳಿಕವೂ ದೇವರನ್ನು ಪ್ರೀತಿಸಿ ಆತನ ಸೇವೆಮಾಡುವುದನ್ನು ಮುಂದುವರಿಸುವರೋ? ಇದಕ್ಕಿರುವ ಉತ್ತರವು ಅನೇಕ ಅಂಶಗಳ ಮೇಲೆ ಹೊಂದಿಕೊಂಡಿರುತ್ತದೆ. ಇವುಗಳಲ್ಲಿ ಮೂರು ಅಂಶಗಳು: ಹೆತ್ತವರ ಕೌಶಲ, ಮಕ್ಕಳು ಬೆಳೆದ ಪರಿಸರ, ಮತ್ತು ಆ ‘ಬಾಣ’ ಅಂದರೆ ಮಗ/ಮಗಳು ತಾನು ಪಡೆದಿರುವ ತರಬೇತಿಗೆ ಪ್ರತಿಕ್ರಿಯೆ ತೋರಿಸುವ ರೀತಿಯೇ. ಈಗ ನಾವು ಈ ಅಂಶಗಳಲ್ಲಿ ಪ್ರತಿಯೊಂದನ್ನು ಹೆಚ್ಚು ವಿವರವಾಗಿ ಪರಿಶೀಲಿಸೋಣ. ಮೊದಲಾಗಿ, ಒಬ್ಬ ಕುಶಲ ತಂದೆ/ತಾಯಿಯ ಗುಣಲಕ್ಷಣಗಳನ್ನು ಪರಿಗಣಿಸೋಣ.
ಕುಶಲ ಹೆತ್ತವರು ಒಳ್ಳೇ ಮಾದರಿ ಇಡುತ್ತಾರೆ
3 ಯೇಸು ತಾನು ನುಡಿದಂತೆಯೇ ನಡೆಯುವ ಮೂಲಕ ಹೆತ್ತವರಿಗೆ ಒಳ್ಳೇ ಮಾದರಿಯನ್ನಿಟ್ಟನು. (ಯೋಹಾನ 13:15) ಆದರೆ ಅವನು ಫರಿಸಾಯರನ್ನು ಖಂಡಿಸಿದನು, ಏಕೆಂದರೆ ಅವರು ‘ಹೇಳುತ್ತಿದ್ದರೇ’ ಹೊರತು ಅದರ ಪ್ರಕಾರ ‘ನಡೆಯುತ್ತಿರಲಿಲ್ಲ.’ (ಮತ್ತಾಯ 23:3) ಯೆಹೋವನನ್ನು ಪ್ರೀತಿಸುವಂತೆ ತಮ್ಮ ಮಕ್ಕಳನ್ನು ಪ್ರಚೋದಿಸಲಿಕ್ಕಾಗಿ ಹೆತ್ತವರ ನಡೆ ಹಾಗೂ ನುಡಿ ಒಂದಕ್ಕೊಂದು ಹೊಂದಿಕೆಯಲ್ಲಿರಬೇಕು. ಕೇವಲ ಮಾತುಗಳೇ ಇದ್ದು ಅದಕ್ಕೆ ತಕ್ಕಂತೆ ಕ್ರಿಯೆಗಳು ಇಲ್ಲದಿರುವಲ್ಲಿ ಅದು, ಹೆದೆಯಿಲ್ಲದ ಬಿಲ್ಲಿನಷ್ಟೇ ನಿಷ್ಪರಿಣಾಮಕಾರಿ ಆಗಿರುವುದು.—1 ಯೋಹಾನ 3:18.
4 ಹೆತ್ತವರ ಮಾದರಿ ಏಕೆ ಅಷ್ಟು ಮಹತ್ವದ್ದಾಗಿದೆ? ವಯಸ್ಕರು ಹೇಗೆ ಯೇಸುವಿನ ಮಾದರಿಯನ್ನು 1 ಕೊರಿಂಥ 15:33) ಮಕ್ಕಳ ಜೀವನದ ಹೆಚ್ಚಿನ ಭಾಗ ಮತ್ತು ನಿಶ್ಚಿತವಾಗಿ ಜೀವನದ ಆರಂಭದ ವರ್ಷಗಳಲ್ಲಿ ಅವರ ಅತ್ಯಂತ ಪ್ರಭಾವಶಾಲಿ ಒಡನಾಡಿಗಳು ಅವರ ಹೆತ್ತವರೇ. ಆದುದರಿಂದ ಹೆತ್ತವರು ತಮ್ಮನ್ನೇ ಹೀಗೆ ಕೇಳಿಕೊಳ್ಳುವುದು ಉತ್ತಮ: ‘ನಾನು ಯಾವ ರೀತಿಯ ಒಡನಾಡಿ ಆಗಿದ್ದೇನೆ? ನನ್ನ ಮಾದರಿ ನನ್ನ ಮಕ್ಕಳಿಗೆ ಸದಾಚಾರವನ್ನು ಇಲ್ಲವೇ ಒಳ್ಳೇ ರೂಢಿಗಳನ್ನು ಬೆಳೆಸಿಕೊಳ್ಳುವಂತೆ ಉತ್ತೇಜಿಸುತ್ತದೋ? ಪ್ರಾರ್ಥನೆ ಹಾಗೂ ಬೈಬಲ್ ಅಧ್ಯಯನದಂಥ ಪ್ರಮುಖ ಕ್ಷೇತ್ರಗಳಲ್ಲಿ ನಾನು ಎಂಥ ಮಾದರಿ ಇಡುತ್ತಿದ್ದೇನೆ?’
ನೋಡುವ ಮೂಲಕ ದೇವರನ್ನು ಪ್ರೀತಿಸಲು ಕಲಿಯಬಲ್ಲರೊ ಹಾಗೆಯೇ ಮಕ್ಕಳು ತಮ್ಮ ಹೆತ್ತವರ ಒಳ್ಳೇ ಮಾದರಿಯನ್ನು ನೋಡಿ ಯೆಹೋವನನ್ನು ಪ್ರೀತಿಸಲು ಕಲಿಯಬಲ್ಲರು. ಮಕ್ಕಳ ಒಡನಾಡಿಗಳು ಅವರನ್ನು ಬಲಪಡಿಸಸಾಧ್ಯವಿದೆ ಇಲ್ಲವೇ ಅವರ ‘ಸದಾಚಾರವನ್ನು ಕೆಡಿಸಸಾಧ್ಯವಿದೆ.’ (ಕುಶಲ ಹೆತ್ತವರು ಮಕ್ಕಳೊಂದಿಗೆ ಪ್ರಾರ್ಥಿಸುತ್ತಾರೆ
5 ನಿಮ್ಮ ಮಕ್ಕಳು ನೀವು ಮಾಡುವ ಪ್ರಾರ್ಥನೆಗಳನ್ನು ಆಲಿಸುವುದರ ಮೂಲಕ ಯೆಹೋವನ ಬಗ್ಗೆ ಬಹಳಷ್ಟನ್ನು ಕಲಿಯಬಹುದು. ಊಟದ ಸಮಯಗಳಲ್ಲಿ ನೀವು ದೇವರಿಗೆ ಉಪಕಾರ ಹೇಳುವುದನ್ನು ಮತ್ತು ಬೈಬಲ್ ಅಧ್ಯಯನಗಳ ಸಮಯದಲ್ಲಿ ಪ್ರಾರ್ಥನೆಮಾಡುವುದನ್ನು ಕೇಳಿಸಿಕೊಳ್ಳುವಾಗ ಅವರು ಯಾವ ತೀರ್ಮಾನಕ್ಕೆ ಬರುತ್ತಿರಬಹುದು? ನಮ್ಮ ಶಾರೀರಿಕ ಅಗತ್ಯಗಳನ್ನು ಪೂರೈಸುವಾತನು ಯೆಹೋವನು—ಅದಕ್ಕೋಸ್ಕರ ಆತನಿಗೆ ಉಪಕಾರ ಹೇಳಬೇಕು—ಮತ್ತು ನಮಗೆ ಆಧ್ಯಾತ್ಮಿಕ ಸತ್ಯಗಳನ್ನು ಬೋಧಿಸುವವನೂ ಆತನೇ ಎಂಬುದನ್ನು ಕಲಿಯುವರು. ಇವು ಅಮೂಲ್ಯ ಪಾಠಗಳು.—ಯಾಕೋಬ 1:17.
6 ಆದರೆ, ಊಟದ ಸಮಯಗಳು ಮತ್ತು ಕುಟುಂಬ ಬೈಬಲ್ ಅಧ್ಯಯನದ ಸಮಯವಲ್ಲದೆ ಬೇರೆ ಸಮಯಗಳಲ್ಲೂ ನಿಮ್ಮ ಕುಟುಂಬದೊಂದಿಗೆ ಪ್ರಾರ್ಥಿಸಬೇಕು. ಆಗ, ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಬಾಧಿಸುತ್ತಿರುವ ವಿಷಯಗಳ ಬಗ್ಗೆ ಪ್ರಾರ್ಥಿಸುವುದರಿಂದ ನೀವು ಇನ್ನೂ ಹೆಚ್ಚಿನದ್ದನ್ನು ಸಾಧಿಸುವಿರಿ. ಆಗ, ಯೆಹೋವನು ನಿಮ್ಮ ಕುಟುಂಬದ ಭಾಗವಾಗಿದ್ದಾನೆ ಮತ್ತು ಆತನು ನಿಮ್ಮಲ್ಲಿ ವೈಯಕ್ತಿಕವಾಗಿ ಗಾಢ ಆಸಕ್ತಿ ತೋರಿಸುತ್ತಾನೆಂದು ಮಕ್ಕಳಿಗೆ ಅನಿಸುವಂತೆ ಸಹಾಯಮಾಡುತ್ತೀರಿ. (ಎಫೆಸ 6:18; 1 ಪೇತ್ರ 5:6, 7) ಒಬ್ಬ ತಂದೆ ಹೇಳಿದ್ದು: “ನಮ್ಮ ಮಗಳು ಹುಟ್ಟಿದಂದಿನಿಂದ ಹಿಡಿದು ನಾವು ಅವಳೊಟ್ಟಿಗೆ ಪ್ರಾರ್ಥನೆಮಾಡಿದ್ದೇವೆ. ಅವಳು ದೊಡ್ಡವಳಾದಂತೆ, ಇತರರೊಂದಿಗಿನ ಅವಳ ಸಂಬಂಧಗಳ ಹಾಗೂ ಅವಳನ್ನು ಬಾಧಿಸುತ್ತಿದ್ದ ಇತರ ವಿಷಯಗಳ ಕುರಿತಾಗಿ ಪ್ರಾರ್ಥಿಸಿದೆವು. ಅವಳು ಮದುವೆಯಾಗಿ ಹೋಗುವ ವರೆಗೂ ನಾವು ಅವಳೊಂದಿಗೆ ಪ್ರಾರ್ಥನೆಮಾಡದಿದ್ದ ಒಂದು ದಿನವೂ ಇಲ್ಲ.” ನೀವು ಸಹ ನಿಮ್ಮ ಮಕ್ಕಳೊಂದಿಗೆ ಪ್ರತಿ ದಿನ ಪ್ರಾರ್ಥಿಸುತ್ತೀರೋ? ಯೆಹೋವನು ಅವರ ಶಾರೀರಿಕ ಹಾಗೂ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುವವನು ಮಾತ್ರವಲ್ಲ ಭಾವನಾತ್ಮಕ ಅಗತ್ಯಗಳ ಕುರಿತೂ ಕಾಳಜಿವಹಿಸುವ ಒಬ್ಬ ಮಿತ್ರನಾಗಿ ದೃಷ್ಟಿಸುವಂತೆ ನೀವು ಸಹಾಯಮಾಡಬಹುದೋ?—ಫಿಲಿಪ್ಪಿ 4:6, 7.
7 ನಿಮ್ಮ ಪ್ರಾರ್ಥನೆಗಳಲ್ಲಿ, ಸಂಬಂಧಿತ ವಿಷಯಗಳನ್ನು ಸ್ಪಷ್ಟವಾಗಿ ತಿಳಿಸಬೇಕಾದರೆ, ನಿಮ್ಮ ಮಕ್ಕಳ ಜೀವನದಲ್ಲಿ ಏನು ನಡೆಯುತ್ತಿದೆಯೆಂದು ನಿಮಗೆ ಮೊದಲು ಗೊತ್ತಿರಬೇಕು. ಇಬ್ಬರು ಮಕ್ಕಳನ್ನು ಬೆಳೆಸಿದ ತಂದೆಯೊಬ್ಬನ ಈ ಮಾತುಗಳನ್ನು ಗಮನಿಸಿ: “ಪ್ರತಿ ವಾರದ ಅಂತ್ಯದಲ್ಲಿ ನಾನು ಈ ಪ್ರಶ್ನೆಗಳನ್ನು ನನಗೇ ಕೇಳುತ್ತಿದ್ದೆ: ‘ಈ ವಾರ ನನ್ನ ಮಕ್ಕಳ ಮನಸ್ಸಿನಲ್ಲಿ ಯಾವ ವಿಷಯಗಳು ತುಂಬಿದ್ದವು? ವಾರವಿಡೀ ಅವರ ಜೀವನದಲ್ಲಿ ಯಾವ ಒಳ್ಳೇ ಸಂಗತಿಗಳು ನಡೆದವು?’” ಹೆತ್ತವರೇ, ನೀವು ಸಹ ಅಂಥ ಪ್ರಶ್ನೆಗಳನ್ನು ನಿಮಗೇ ಕೇಳಿ, ಆ ವಿಷಯಗಳನ್ನು ಮಕ್ಕಳೊಂದಿಗಿನ ನಿಮ್ಮ ಪ್ರಾರ್ಥನೆಗಳಲ್ಲಿ ಸೇರಿಸಬಲ್ಲಿರೋ? ಹಾಗೆ ಮಾಡುವಲ್ಲಿ ಪ್ರಾರ್ಥನೆಗಳನ್ನು ಕೇಳುವಾತನಾದ ಯೆಹೋವನಿಗೆ ಪ್ರಾರ್ಥನೆಮಾಡಬೇಕು ಮಾತ್ರವಲ್ಲ ಆತನನ್ನು ಪ್ರೀತಿಸಬೇಕೆಂಬುದನ್ನೂ ಅವರಿಗೆ ಕಲಿಸುತ್ತಿರುವಿರಿ.—ಕೀರ್ತನೆ 65:2.
ಕುಶಲ ಹೆತ್ತವರು ಒಳ್ಳೇ ಅಧ್ಯಯನ ರೂಢಿಗಳನ್ನು ಉತ್ತೇಜಿಸುತ್ತಾರೆ
8 ಬೈಬಲ್ ಅಧ್ಯಯನದ ಕುರಿತು ಹೆತ್ತವರಿಗಿರುವ ಮನೋಭಾವವು, ಮತ್ತಾಯ 24:45-47; ಜ್ಞಾನೋಕ್ತಿ 4:1, 2) ಆದುದರಿಂದ ತಮ್ಮ ಮಕ್ಕಳು ಯೆಹೋವನೊಂದಿಗೆ ಪ್ರೀತಿಯ ಮತ್ತು ಬಾಳುವ ಬಂಧವನ್ನು ಬೆಳೆಸಲಿಕ್ಕಾಗಿ ಬೈಬಲ್ ಅಧ್ಯಯನದ ರೂಢಿಯನ್ನು ಬೆಳೆಸಿಕೊಳ್ಳುವಂತೆ ಹೆತ್ತವರು ಅವರನ್ನು ಉತ್ತೇಜಿಸುವುದು ಒಳ್ಳೇದು.
ದೇವರೊಂದಿಗೆ ಮಕ್ಕಳಿಗಿರುವ ಸಂಬಂಧದ ಮೇಲೆ ಹೇಗೆ ಪ್ರಭಾವಬೀರುವುದು? ಯಾವುದೇ ಸಂಬಂಧ ಬೆಳೆದು ಉಳಿಯಬೇಕಾದರೆ, ಅದರಲ್ಲಿ ಒಳಗೂಡಿರುವ ವ್ಯಕ್ತಿಗಳು ಪರಸ್ಪರ ಮಾತಾಡಬೇಕು ಮಾತ್ರವಲ್ಲ ಪರಸ್ಪರ ಕಿವಿಗೊಡಬೇಕು ಸಹ. ಆದರೆ ನಾವು ಯೆಹೋವನಿಗೆ ಹೇಗೆ ಕಿವಿಗೊಡಬಹುದು? ಒಂದು ವಿಧ, ‘ನಂಬಿಗಸ್ತ ಆಳು’ ಒದಗಿಸುವ ಪ್ರಕಾಶನಗಳ ಸಹಾಯದಿಂದ ಬೈಬಲನ್ನು ಅಧ್ಯಯನ ಮಾಡುವುದರ ಮೂಲಕವೇ. (9 ಮಕ್ಕಳು ಒಳ್ಳೇ ಅಧ್ಯಯನ ರೂಢಿಗಳನ್ನು ಬೆಳೆಸುವಂತೆ ಹೇಗೆ ಸಹಾಯಮಾಡಬಹುದು? ಇಲ್ಲಿಯೂ ಹೆತ್ತವರ ಮಾದರಿಯೇ ಅತ್ಯುತ್ತಮ ವಿಧಾನ. ನೀವು ಕ್ರಮವಾಗಿ ವೈಯಕ್ತಿಕ ಬೈಬಲ್ ವಾಚನ ಇಲ್ಲವೆ ಅಧ್ಯಯನವನ್ನು ಆನಂದಿಸುತ್ತಿರುವುದನ್ನು ನಿಮ್ಮ ಮಕ್ಕಳು ನೋಡಶಕ್ತರೋ? ನಿಮ್ಮ ಮಕ್ಕಳ ಪರಾಮರಿಕೆಯಲ್ಲೇ ನೀವು ತುಂಬ ಬ್ಯುಸಿ ಆಗಿರಬಹುದು ನಿಜ. ಆದುದರಿಂದ ‘ಓದಲು ಮತ್ತು ಅಧ್ಯಯನಮಾಡಲು ನಮಗೆ ಸಮಯವೆಲ್ಲಿದೆ?’ ಎಂದು ನೀವು ಯೋಚಿಸಬಹುದು. ಆದರೆ ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ನಾನು ದಿನಾಲೂ ತಪ್ಪದೇ ಟಿವಿ ವೀಕ್ಷಿಸುವುದನ್ನು ಮಕ್ಕಳು ನೋಡುತ್ತಾರೋ?’ ಹಾಗಿರುವಲ್ಲಿ, ಸ್ವಲ್ಪ ಸಮಯವನ್ನಾದರೂ ವೈಯಕ್ತಿಕ ಅಧ್ಯಯನಕ್ಕೆ ಕೊಟ್ಟು ಮಕ್ಕಳಿಗೆ ಒಳ್ಳೇ ಮಾದರಿಯನ್ನಿಡಸಾಧ್ಯವೋ?
10 ಮಕ್ಕಳು ಯೆಹೋವನಿಗೆ ಕಿವಿಗೊಡುವಂತೆ ಕಲಿಸಲು ಹೆತ್ತವರು ಬಳಸಬಹುದಾದ ಇನ್ನೊಂದು ವ್ಯಾವಹಾರಿಕ ವಿಧಾನವು, ಕ್ರಮವಾಗಿ ಕುಟುಂಬ ಬೈಬಲ್ ಚರ್ಚೆಗಳನ್ನು ನಡೆಸುವುದೇ ಆಗಿದೆ. (ಯೆಶಾಯ 30:21) ಆದರೆ ಕೆಲವರು ಹೀಗೆ ಯೋಚಿಸಬಹುದು: ‘ಹೆತ್ತವರು ಮಕ್ಕಳನ್ನು ಕ್ರಮವಾಗಿ ಸಭಾ ಕೂಟಗಳಿಗೆ ಕರಕೊಂಡು ಹೋಗುವುದಾದರೆ ಕುಟುಂಬ ಅಧ್ಯಯನದ ಅಗತ್ಯವೇನಿದೆ?’ ಅದಕ್ಕೆ ಹಲವಾರು ಒಳ್ಳೇ ಕಾರಣಗಳಿವೆ. ಮಕ್ಕಳಿಗೆ ಬೋಧಿಸುವ ಪ್ರಮುಖ ಜವಾಬ್ದಾರಿಯನ್ನು ಯೆಹೋವನು ಕೊಟ್ಟಿರುವುದು ಹೆತ್ತವರಿಗೇ. (ಜ್ಞಾನೋಕ್ತಿ 1:8; ಎಫೆಸ 6:4) ಆರಾಧನೆ ಎಂಬುದು ಕೇವಲ ಬಹಿರಂಗವಾಗಿ ಮಾಡಬೇಕಾದ ಒಂದು ಔಪಚಾರಿಕ ಸಂಸ್ಕಾರವಲ್ಲ ಬದಲಾಗಿ ಅದು ಕುಟುಂಬದ ಖಾಸಗಿ ಜೀವನದ ಭಾಗವೂ ಆಗಿದೆ ಎಂಬುದನ್ನು ಕುಟುಂಬ ಬೈಬಲ್ ಅಧ್ಯಯನವು ಮಕ್ಕಳಿಗೆ ಕಲಿಸಿಕೊಡುತ್ತದೆ.—ಧರ್ಮೋಪದೇಶಕಾಂಡ 6:6-9.
11 ಇದಕ್ಕೆ ಕೂಡಿಸಿ, ಚೆನ್ನಾಗಿ ನಡೆಸಲಾಗುವ ಕುಟುಂಬ ಅಧ್ಯಯನವು, ಆಧ್ಯಾತ್ಮಿಕ ಹಾಗೂ ನೈತಿಕ ವಿಷಯಗಳ ಕುರಿತ ಮಕ್ಕಳ ಯೋಚನೆಗಳನ್ನು ತಿಳಿಯಲು ಹೆತ್ತವರಿಗೆ ಅವಕಾಶಕೊಡುತ್ತದೆ. ದೃಷ್ಟಾಂತಕ್ಕಾಗಿ ಮಕ್ಕಳು ಚಿಕ್ಕವರಿರುವಾಗ ಮಹಾ ಬೋಧಕನಿಂದ ಕಲಿಯಿರಿ * ಎಂಬಂಥ ಪ್ರಕಾಶನಗಳನ್ನು ಹೆತ್ತವರು ಉಪಯೋಗಿಸಬಲ್ಲರು. ಈ ಬೈಬಲ್ ಅಧ್ಯಯನ ಸಹಾಯಕದ ಹೆಚ್ಚುಕಡಿಮೆ ಪ್ರತಿಯೊಂದು ಪ್ಯಾರಾಗಳಲ್ಲಿ, ಚರ್ಚಿಸಲಾಗುತ್ತಿರುವ ವಿಷಯದ ಕುರಿತು ಮಕ್ಕಳು ತಮ್ಮ ಅಭಿಪ್ರಾಯವನ್ನು ತಿಳಿಸುವಂತೆ ಕೇಳಿಕೊಳ್ಳಲಾಗಿದೆ. ಪುಸ್ತಕದಲ್ಲಿ ಕೊಡಲಾಗಿರುವ ವಚನಗಳ ಕುರಿತು ವಿವೇಚಿಸುವ ಮೂಲಕ “ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿ”ಯಲಿಕ್ಕಾಗಿ ಮಕ್ಕಳು ತಮ್ಮ ಜ್ಞಾನೇಂದ್ರಿಯಗಳನ್ನು ಬೆಳೆಸುವಂತೆ ಹೆತ್ತವರು ಸಹಾಯಮಾಡಬಲ್ಲರು.—ಇಬ್ರಿಯ 5:14.
12 ನಿಮ್ಮ ಮಕ್ಕಳು ಬೆಳೆಯುತ್ತಾ ಹೋದಂತೆ, ಅವರ ಅಗತ್ಯಕ್ಕೆ ತಕ್ಕಂತೆ ನಿಮ್ಮ ಅಧ್ಯಯನವನ್ನು ಹೊಂದಿಸಿರಿ. ಹದಿವಯಸ್ಕ ಪುತ್ರಿಯರಿಬ್ಬರು ಸ್ಕೂಲ್ ಡಾನ್ಸ್ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಅನುಮತಿ ಕೇಳಿದಾಗ ಅವರ ತಂದೆತಾಯಿ ಅವರಿಗೆ ವಿವೇಚಿಸುವಂತೆ ಹೇಗೆ ಸಹಾಯ ಮಾಡಿದರೆಂಬುದನ್ನು ಗಮನಿಸಿ. ತಂದೆ ಹೇಳುವುದು: “ನಮ್ಮ ಮುಂದಿನ ಕುಟುಂಬ ಅಧ್ಯಯನದ ಒಂದು ಭಾಗದಲ್ಲಿ, ನಾನೂ ನನ್ನ ಹೆಂಡತಿಯೂ ಮಕ್ಕಳ ಪಾತ್ರವನ್ನು ವಹಿಸುವೆವು ಮತ್ತು ನಮ್ಮ ಪುತ್ರಿಯರು ಹೆತ್ತವರಾದ ನಮ್ಮ ಪಾತ್ರವನ್ನು ನಟಿಸುವಂತೆ ಹೇಳಿದೆ. ಅವರಲ್ಲಿ ಯಾರಾದರೂ ತಂದೆ ಅಥವಾ ತಾಯಿಯ ಪಾತ್ರವನ್ನು ನಟಿಸಬಹುದಿತ್ತು. ಆದರೆ ಅವರು ಜೊತೆಗೂಡಿ ಆ ವಿಷಯದ ಮೇಲೆ ಸಂಶೋಧನೆ ಮಾಡಿ, ಸ್ಕೂಲ್ ಡಾನ್ಸ್‌ಗಳ ಬಗ್ಗೆ ನಮಗೆ ನಿರ್ದೇಶನಕೊಡಬೇಕಿತ್ತು.” ಫಲಿತಾಂಶ? “ನಮ್ಮ ಪುತ್ರಿಯರು (ಹೆತ್ತವರ ಪಾತ್ರದಲ್ಲಿ) ನಮಗೆ (ಮಕ್ಕಳ ಪಾತ್ರದಲ್ಲಿ) ಸ್ಕೂಲ್ ಡಾನ್ಸ್‌ಗೆ ಹೋಗುವುದು ಏಕೆ ಅವಿವೇಕತನ ಎಂಬದಕ್ಕೆ ಬೈಬಲಾಧಾರಿತ ಕಾರಣಗಳನ್ನು ಜವಾಬ್ದಾರಿಯುತವಾಗಿ ವಿವರಿಸಿದ ರೀತಿಯನ್ನು ನೋಡಿ ನಾವು ಚಕಿತರಾದೆವು. ಡಾನ್ಸ್‌ನ ಬದಲು ನಾವು ಪಾಲ್ಗೊಳ್ಳಬಹುದಾದ ಇತರ ಅಂಗೀಕಾರಾರ್ಹ ಚಟುವಟಿಕೆಗಳ ಕುರಿತಾದ ಅವರ ಸಲಹೆಗಳು ನಮ್ಮನ್ನು ಇನ್ನಷ್ಟು ಬೆರಗುಗೊಳಿಸಿದವು. ಇವು, ನಮಗೆ ಅವರ ಯೋಚನಾರೀತಿ ಹಾಗೂ ಅಪೇಕ್ಷೆಗಳ ಕುರಿತ ಅತ್ಯಗತ್ಯ ಒಳನೋಟವನ್ನು ಕೊಟ್ಟವು.” ಕುಟುಂಬ ಅಧ್ಯಯನವನ್ನು ಕ್ರಮವಾಗಿ ಮತ್ತು ಕುಟುಂಬದ ಅಗತ್ಯಕ್ಕೆ ತಕ್ಕಂತೆ ಮಾಡಲು ಪಟ್ಟುಹಿಡಿಯುವಿಕೆ ಮತ್ತು ಕಲ್ಪನಾಶಕ್ತಿ ಅಗತ್ಯ ನಿಜ. ಆದರೆ ನಂತರ ಸಿಗುವ ಪ್ರತಿಫಲಗಳಿಂದಾಗಿ ಇದೆಲ್ಲವೂ ಸಾರ್ಥಕವಾಗುವುದು.—ಸಮಾಧಾನದ ಪರಿಸರವನ್ನು ಸೃಷ್ಟಿಸಿರಿ
13 ಬಿಲ್ಲುಗಾರನು ಬಾಣ ಬಿಡುವಾಗ ಶಾಂತ ಪರಿಸ್ಥಿತಿಗಳಿರುವಲ್ಲಿ ಅದು ಗುರಿ ತಲಪುವ ಸಾಧ್ಯತೆ ಹೆಚ್ಚು. ಅದೇ ರೀತಿಯಲ್ಲಿ, ಹೆತ್ತವರು ಮನೆಯಲ್ಲಿ ಸಮಾಧಾನದ ಪರಿಸರವನ್ನು ಸೃಷ್ಟಿಸುವಲ್ಲಿ ಮಕ್ಕಳು ಯೆಹೋವನನ್ನು ಪ್ರೀತಿಸಲು ಕಲಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. “ಸಮಾಧಾನಪಡಿಸುವವರು ಸಮಾಧಾನವೆಂಬ ಬೀಜವನ್ನು ಬಿತ್ತಿ ನೀತಿಯೆಂಬ ಫಲವನ್ನು ಕೊಯ್ಯುವರು” ಎಂದು ಯಾಕೋಬನು ಬರೆದನು. (ಯಾಕೋಬ 3:18) ಮನೆಯಲ್ಲಿ ಹೆತ್ತವರು ಸಮಾಧಾನದ ಪರಿಸರವನ್ನು ಹೇಗೆ ಸೃಷ್ಟಿಸಬಲ್ಲರು? ಇದಕ್ಕಾಗಿ ದಂಪತಿಗಳು ತಮ್ಮ ವೈವಾಹಿಕ ಬಂಧವನ್ನು ಬಲವಾಗಿರಿಸಬೇಕು. ಪರಸ್ಪರರನ್ನು ಪ್ರೀತಿಸಿ ಗೌರವಿಸುವ ಪತಿಪತ್ನಿಯರು ತಮ್ಮ ಮಕ್ಕಳಿಗೆ, ಯೆಹೋವನನ್ನು ಹಾಗೂ ಬೇರೆಯವರನ್ನು ಪ್ರೀತಿಸಿ ಗೌರವಿಸುವಂತೆ ಕಲಿಸುವ ಸಾಧ್ಯತೆ ಹೆಚ್ಚು. (ಗಲಾತ್ಯ 6:7; ಎಫೆಸ 5:33) ಪ್ರೀತಿ ಮತ್ತು ಗೌರವವು ಸಮಾಧಾನವನ್ನು ಪ್ರವರ್ಧಿಸುತ್ತದೆ. ಪರಸ್ಪರ ಸಮಾಧಾನದಿಂದಿರುವ ದಂಪತಿಯು ಕುಟುಂಬದಲ್ಲಿ ಏಳಬಹುದಾದ ತೊಂದರೆಗಳನ್ನು ಹೆಚ್ಚು ಉತ್ತಮವಾಗಿ ನಿಭಾಯಿಸಶಕ್ತರು.
14 ಇಂದು ಭೂಮಿಯಲ್ಲಿ ಹೇಗೆ ಪರಿಪೂರ್ಣ ವಿವಾಹಗಳು ಇಲ್ಲವೋ ಹಾಗೆಯೇ ಪರಿಪೂರ್ಣ ಕುಟುಂಬಗಳೂ ಇಲ್ಲ. ಆದುದರಿಂದಲೇ ಹೆತ್ತವರು ತಮ್ಮ ಮಕ್ಕಳೊಂದಿಗೆ ವ್ಯವಹರಿಸುವಾಗ ಕೆಲವೊಮ್ಮೆ ಆತ್ಮದ ಫಲಗಳನ್ನು ತೋರಿಸದೇ ಹೋಗಬಹುದು. (ಗಲಾತ್ಯ 5:22, 23) ಹಾಗಿರುವಾಗ ಹೆತ್ತವರು ಹೇಗೆ ಪ್ರತಿಕ್ರಿಯಿಸಬೇಕು? ಅವರು ತಮ್ಮ ತಪ್ಪನ್ನು ಒಪ್ಪಿಕೊಂಡರೆ ಮಕ್ಕಳಿಗೆ ಅವರ ಮೇಲಿರುವ ಗೌರವ ಕಡಿಮೆಯಾಗುವುದೋ? ಅಪೊಸ್ತಲ ಪೌಲನ ಮಾದರಿಯನ್ನು ಪರಿಗಣಿಸಿರಿ. ಅವನು ಅನೇಕರಿಗೆ ಒಬ್ಬ ಆಧ್ಯಾತ್ಮಿಕ ತಂದೆಯಂತಿದ್ದನು. (1 ಕೊರಿಂಥ 4:15) ಆದರೂ, ಅವನು ತನ್ನ ತಪ್ಪುಗಳನ್ನು ಎಲ್ಲರ ಮುಂದೆ ಒಪ್ಪಿಕೊಂಡನು. (ರೋಮಾಪುರ 7:21-25) ಅವನ ದೀನತೆ ಮತ್ತು ಪ್ರಾಮಾಣಿಕತೆಯು ಅವನ ಬಗ್ಗೆ ನಮಗಿರುವ ಗೌರವವನ್ನು ಕಡಿಮೆಮಾಡುವುದರ ಬದಲು ಹೆಚ್ಚಿಸುತ್ತದೆ. ಪೌಲನಲ್ಲಿ ಕುಂದುಕೊರತೆಗಳಿದ್ದರೂ, ಅವನು ಭರವಸೆಯಿಂದ ಕೊರಿಂಥದ ಸಭೆಗೆ ಹೀಗೆ ಬರೆಯಶಕ್ತನಾದನು: “ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ.” (1 ಕೊರಿಂಥ 11:1) ಒಂದುವೇಳೆ ನೀವು ಸಹ ನಿಮ್ಮ ತಪ್ಪುಗಳನ್ನು ಒಪ್ಪಿಕೊಂಡರೆ ನಿಮ್ಮ ಮಕ್ಕಳು ಅವುಗಳನ್ನು ಮನಸ್ಸಿಗೆತರದಿರುವ ಸಾಧ್ಯತೆ ಇದೆ.
15 ತಮ್ಮ ಮಕ್ಕಳು ಯೆಹೋವನನ್ನು ಪ್ರೀತಿಸಲು ಕಲಿಯಬಹುದಾದ ಪರಿಸರವನ್ನು ಸೃಷ್ಟಿಸಲಿಕ್ಕಾಗಿ ಹೆತ್ತವರು ಇನ್ನೇನು ಮಾಡಬಲ್ಲರು? ಅಪೊಸ್ತಲ ಯೋಹಾನನು ಬರೆದುದು: “ಒಬ್ಬನು ತಾನು ದೇವರನ್ನು ಪ್ರೀತಿಸುತ್ತೇನೆಂದು ಹೇಳಿ ತನ್ನ ಸಹೋದರನನ್ನು ದ್ವೇಷಿಸಿದರೆ ಅವನು ಸುಳ್ಳುಗಾರನಾಗಿದ್ದಾನೆ. ತಾನು ಕಂಡಿರುವ ತನ್ನ ಸಹೋದರನನ್ನು ಪ್ರೀತಿಸದವನು ತಾನು ಕಾಣದಿರುವ ದೇವರನ್ನು ಪ್ರೀತಿಸಲಾರನು.” (1 ಯೋಹಾನ 4:20, 21) ಆದುದರಿಂದ ನಿಮ್ಮ ಮಕ್ಕಳು ಕ್ರೈಸ್ತ ಸಹೋದರ ಸಹೋದರಿಯರನ್ನು ಪ್ರೀತಿಸುವಂತೆ ತರಬೇತಿಕೊಡುವಾಗ ಅವರು ದೇವರನ್ನು ಪ್ರೀತಿಸುವಂತೆ ನೀವು ಕಲಿಸಿ ಕೊಡುತ್ತಿದ್ದೀರಿ. ಹೆತ್ತವರು ತಮ್ಮನ್ನೇ ಹೀಗೆ ಕೇಳಿಕೊಳ್ಳುವುದು ಉತ್ತಮ: ‘ಸಭೆಯ ಕುರಿತಾದ ನನ್ನ ಸಂಭಾಷಣೆಯು ಹೆಚ್ಚಾಗಿ ಪ್ರೋತ್ಸಾಹಕರವಾಗಿದೆಯೋ ಅಥವಾ ಟೀಕಾತ್ಮಕವಾಗಿದೆಯೋ?’ ನೀವಿದನ್ನು ಹೇಗೆ ತಿಳಿದುಕೊಳ್ಳುವಿರಿ? ನಿಮ್ಮ ಮಕ್ಕಳು, ಕೂಟಗಳ ಕುರಿತಾಗಿ ಮತ್ತು ಸಭಾ ಸದಸ್ಯರ ಕುರಿತಾಗಿ ಏನು ಮಾತಾಡುತ್ತಾರೆಂಬುದಕ್ಕೆ ನಿಕಟ ಗಮನಕೊಡಿ. ಅವರ ಮಾತುಗಳಲ್ಲಿ ಬಹುಶಃ ನಿಮ್ಮ ಆಲೋಚನೆಗಳ ಪ್ರತಿಧ್ವನಿಯನ್ನೇ ಕೇಳಿಸಿಕೊಳ್ಳುವಿರಿ!
16 ಮಕ್ಕಳು ತಮ್ಮ ಆಧ್ಯಾತ್ಮಿಕ ಸಹೋದರರನ್ನು ಪ್ರೀತಿಸುವಂತೆ ಹೆತ್ತವರು ಏನು ಮಾಡಬಲ್ಲರು? ಇಬ್ಬರು ಹದಿವಯಸ್ಕ ಹುಡುಗರ ತಂದೆಯಾದ ಪೀಟರ್ ಹೇಳುವುದು: “ನಮ್ಮ ಹುಡುಗರು ಚಿಕ್ಕವರಾಗಿದ್ದ ಸಮಯದಿಂದಲೇ ಆಧ್ಯಾತ್ಮಿಕವಾಗಿ ಪ್ರೌಢರಾದ ಸಹೋದರ ಸಹೋದರಿಯರು ಊಟಕ್ಕೆ ಬರುವಂತೆ ಮತ್ತು ನಮ್ಮೊಂದಿಗೆ ಮನೆಯಲ್ಲಿ ಸಮಯಕಳೆಯುವಂತೆ ಏರ್ಪಡಿಸಿದ್ದೆವು. ಹೀಗೆ ನಾವು ತುಂಬ ಮೋಜು ಮಾಡಿದ್ದೇವೆ. ನಮ್ಮ ಹುಡುಗರು ಯೆಹೋವನನ್ನು ಪ್ರೀತಿಸುವ ಜನರ ಒಡನಾಟದಲ್ಲೇ ಬೆಳೆದಿದ್ದಾರೆ. ಆದುದರಿಂದ ದೇವರ ಸೇವೆಮಾಡುವುದು ಒಂದು ಆನಂದದಾಯಕ ಜೀವನರೀತಿ ಆಗಿರುವುದನ್ನು ಅವರೀಗ ನೋಡುತ್ತಾರೆ.” ಐದು ಹುಡುಗಿಯರ ತಂದೆಯಾದ ಡೆನಿಸ್ ಹೇಳುವುದು: “ನಮ್ಮ ಹುಡುಗಿಯರು ಸಭೆಯಲ್ಲಿರುವ ಹಿರಿಯ ಪಯನೀಯರರ ಸ್ನೇಹಬೆಳೆಸುವಂತೆ ಯಾವಾಗಲೂ ಉತ್ತೇಜಿಸಿದ್ದೇವೆ. ಅಲ್ಲದೆ, ಸಾಧ್ಯವಿದ್ದಾಗಲೆಲ್ಲ ನಾವು ಸಂಚರಣಾ ಮೇಲ್ವಿಚಾರಕರನ್ನು ಹಾಗೂ ಅವರ ಪತ್ನಿಯರನ್ನೂ ಆಮಂತ್ರಿಸಿ ಅತಿಥಿಸತ್ಕಾರಮಾಡಿದ್ದೇವೆ.” ಸಭೆಯು ನಿಮ್ಮ ಕುಟುಂಬದ ಭಾಗವಾಗಿದೆಯೆಂದು ನೋಡುವಂತೆ ನಿಮ್ಮ ಮಕ್ಕಳಿಗೂ ಸಹಾಯಮಾಡಲು ನೀವು ಆರಂಭದ ಹೆಜ್ಜೆ ತೆಗೆದುಕೊಳ್ಳಬಹುದೋ?—ಮಾರ್ಕ 10:29, 30.
ಮಕ್ಕಳ ಜವಾಬ್ದಾರಿ
17 ಬಿಲ್ಲುಗಾರನ ದೃಷ್ಟಾಂತವನ್ನು ಇನ್ನೊಮ್ಮೆ ಪರಿಗಣಿಸಿರಿ. ಅವನು ಕುಶಲನಾಗಿರಬಹುದಾದರೂ ಅವನು ಎಸೆಯುವ ಬಾಣವು ಒಂದುವೇಳೆ ಬಾಗಿರುವಲ್ಲಿ ಇಲ್ಲವೆ ಡೊಂಕಾಗಿರುವಲ್ಲಿ, ಅದು ಗುರಿ ಮುಟ್ಟಲಿಕ್ಕಿಲ್ಲ. ಸಾಂಕೇತಿಕಾರ್ಥದಲ್ಲಿ ಬಾಗಿರುವ ಬಾಣವನ್ನು ಹೆತ್ತವರು ಸರಿಮಾಡಲು ಪ್ರಯತ್ನಿಸುವರು ಖಂಡಿತ. ಮಗುವಿನ ತಪ್ಪಾದ ಯೋಚನಾರೀತಿಯನ್ನು ತಿದ್ದಲು ಪ್ರಯತ್ನಿಸುವ ಮೂಲಕ ಅವರು ಇದನ್ನು ಮಾಡುವರು. ಆದರೆ ಕಟ್ಟಕಡೆಗೆ ಮಕ್ಕಳೇ ಈ ನಿರ್ಣಯಮಾಡಬೇಕು: ಈ ಲೋಕವು ಅದರ ಇಚ್ಛೆಗನುಸಾರ ತಮ್ಮನ್ನು ರೂಪಿಸುವಂತೆ ಅವರು ಬಿಡುವರೊ ಇಲ್ಲವೇ ಯೆಹೋವನು ತಮ್ಮ ಮಾರ್ಗಗಳನ್ನು ‘ಸರಾಗಗೊಳಿಸುವಂತೆ’ ಬಿಡುವರೋ?—ಜ್ಞಾನೋಕ್ತಿ 3:5, 6; ರೋಮಾಪುರ 12:2.
18 ಮಕ್ಕಳನ್ನು ‘ಯೆಹೋವನ ಶಿಸ್ತು ಹಾಗೂ ಮಾನಸಿಕ ಕ್ರಮದಲ್ಲಿ’ ಬೆಳೆಸುವ ಭಾರೀ ಜವಾಬ್ದಾರಿಯು ಹೆತ್ತವರದ್ದಾಗಿದೆ. ಆದರೂ, ಮಕ್ಕಳು ಬೆಳೆದು ಏನಾಗುವರೆಂಬ ಕೊನೆ ನಿರ್ಣಯವು ಮಕ್ಕಳ ಕೈಯಲ್ಲಿದೆ. (ಎಫೆಸ 6:4, NW) ಆದುದರಿಂದ ಮಕ್ಕಳೇ, ನಿಮ್ಮನ್ನೇ ಹೀಗೆ ಕೇಳಿ: ‘ನನ್ನ ಹೆತ್ತವರು ಕೊಡುವ ಪ್ರೀತಿಭರಿತ ತರಬೇತಿಯನ್ನು ನಾನು ಸ್ವೀಕರಿಸುವೆನೋ?’ ನೀವು ಸ್ವೀಕರಿಸುವಲ್ಲಿ, ಜೀವನದ ಅತ್ಯುತ್ತಮವಾದ ಮಾರ್ಗವನ್ನು ಆಯ್ಕೆಮಾಡುತ್ತಿರುವಿರಿ. ನಿಮ್ಮ ಹೆತ್ತವರಿಗೆ ತುಂಬ ಸಂತೋಷವಾಗುವುದು, ಮತ್ತು ಅತಿ ಮುಖ್ಯವಾಗಿ ನೀವು ಯೆಹೋವನ ಹೃದಯವನ್ನು ಸಂತೋಷಪಡಿಸುವಿರಿ.—ಜ್ಞಾನೋಕ್ತಿ 27:11. (w07 9/1)
[ಪಾದಟಿಪ್ಪಣಿ]
^ ಪ್ಯಾರ. 16 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. ಕನ್ನಡದಲ್ಲಿ ಲಭ್ಯವಿಲ್ಲ.
ನಿಮಗೆ ಜ್ಞಾಪಕವಿದೆಯೋ?
• ಪ್ರಾರ್ಥನೆ ಮತ್ತು ಬೈಬಲ್ ಅಧ್ಯಯನದ ವಿಷಯದಲ್ಲಿ ಹೆತ್ತವರು ಹೇಗೆ ಒಳ್ಳೇ ಮಾದರಿಯನ್ನಿಡಬಲ್ಲರು?
• ಹೆತ್ತವರು ಮನೆಯಲ್ಲಿ ಸಮಾಧಾನದ ಪರಿಸರವನ್ನು ಹೇಗೆ ಸೃಷ್ಟಿಸಬಲ್ಲರು?
• ಮಕ್ಕಳ ಮುಂದೆ ಯಾವ ಆಯ್ಕೆ ಇದೆ, ಮತ್ತು ಅವರ ಆಯ್ಕೆ ಬೇರೆಯವರ ಮೇಲೆ ಹೇಗೆ ಪ್ರಭಾವಬೀರುತ್ತದೆ?
[ಅಧ್ಯಯನ ಪ್ರಶ್ನೆಗಳು]
1, 2. ಮಕ್ಕಳು ‘ಯುದ್ಧವೀರನ ಕೈಯಲ್ಲಿರುವ ಬಾಣಗಳಂತೆ’ ಇರುವುದು ಹೇಗೆ?
3. ಹೆತ್ತವರ ನಡೆ ಅವರ ನುಡಿಗಳಿಗೆ ತಕ್ಕಂತೆ ಇರಬೇಕು ಏಕೆ?
4. ಹೆತ್ತವರು ಸ್ವತಃ ತಮಗೆ ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಉತ್ತಮ, ಮತ್ತು ಏಕೆ?
5. ಮಕ್ಕಳು ತಮ್ಮ ಹೆತ್ತವರ ಪ್ರಾರ್ಥನೆಗಳಿಂದ ಏನು ಕಲಿಯಬಲ್ಲರು?
6. ಯೆಹೋವನು ಮಕ್ಕಳಲ್ಲಿ ವೈಯಕ್ತಿಕ ಆಸಕ್ತಿ ತೋರಿಸುತ್ತಾನೆಂದು ಭಾವಿಸುವಂತೆ ಹೆತ್ತವರು ಹೇಗೆ ಸಹಾಯಮಾಡಬಲ್ಲರು?
7. ಹೆತ್ತವರ ಪ್ರಾರ್ಥನೆಗಳಲ್ಲಿ ಸಂಬಂಧಿತ ವಿಷಯಗಳು ಸ್ಪಷ್ಟವಾಗಿರಬೇಕಾದರೆ ಅವರಿಗೇನು ತಿಳಿದಿರಬೇಕು?
8. ಮಕ್ಕಳು ಬೈಬಲ್ ಅಧ್ಯಯನದ ರೂಢಿಮಾಡಿಕೊಳ್ಳುವಂತೆ ಹೆತ್ತವರು ಏಕೆ ಸಹಾಯಮಾಡಬೇಕು?
9. ಮಕ್ಕಳು ಒಳ್ಳೇ ಅಧ್ಯಯನ ರೂಢಿಗಳನ್ನು ಬೆಳೆಸಿಕೊಳ್ಳುವಂತೆ ಹೇಗೆ ಸಹಾಯಮಾಡಸಾಧ್ಯವಿದೆ?
10, 11. ಹೆತ್ತವರು ಕ್ರಮವಾಗಿ ಕುಟುಂಬ ಬೈಬಲ್ ಚರ್ಚೆಗಳನ್ನು ನಡೆಸಬೇಕು ಏಕೆ?
12. ಹೆತ್ತವರು ಕುಟುಂಬ ಅಧ್ಯಯನವನ್ನು ಮಕ್ಕಳ ಅಗತ್ಯಕ್ಕೆ ತಕ್ಕಂತೆ ಹೇಗೆ ಹೊಂದಿಸಿಕೊಳ್ಳಬಹುದು, ಮತ್ತು ಈ ವಿಷಯದಲ್ಲಿ ನೀವೇನನ್ನು ಪರಿಣಾಮಕಾರಿಯೆಂದು ಕಂಡುಹಿಡಿದಿದ್ದೀರಿ?
13, 14. (ಎ) ಹೆತ್ತವರು ಮನೆಯಲ್ಲಿ ಒಂದು ಸಮಾಧಾನದ ಪರಿಸರವನ್ನು ಹೇಗೆ ಸೃಷ್ಟಿಸಬಲ್ಲರು? (ಬಿ) ತಂದೆತಾಯಿ ತಾವು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವಾಗ ಫಲಿತಾಂಶ ಏನಾಗಿರಬಲ್ಲದು?
15, 16. ಮಕ್ಕಳು ತಮ್ಮ ಕ್ರೈಸ್ತ ಸಹೋದರ ಸಹೋದರಿಯರನ್ನು ಪ್ರೀತಿಸುವಂತೆ ಹೆತ್ತವರು ಏಕೆ ತರಬೇತಿಕೊಡಬೇಕು, ಮತ್ತು ಅವರಿದನ್ನು ಹೇಗೆ ಮಾಡಬಹುದು?
17. ಮಕ್ಕಳು ಕಟ್ಟಕಡೆಗೆ ಯಾವ ನಿರ್ಣಯ ಮಾಡಬೇಕು?
18. ಮಕ್ಕಳು ಮಾಡುವ ನಿರ್ಣಯವು ಇತರರ ಮೇಲೆ ಯಾವ ಪ್ರಭಾವ ಬೀರುವುದು?
[ಪುಟ 29ರಲ್ಲಿರುವ ಚಿತ್ರ]
ವೈಯಕ್ತಿಕ ಅಧ್ಯಯನದ ವಿಷಯದಲ್ಲಿ ನಿಮ್ಮ ಮಕ್ಕಳಿಗೆ ಒಳ್ಳೇ ಮಾದರಿಯನ್ನಿಡುತ್ತೀರೋ?
[ಪುಟ 30ರಲ್ಲಿರುವ ಚಿತ್ರ]
ಕುಟುಂಬದಲ್ಲಿ ಸಮಾಧಾನದ ಪರಿಸರವು ಸಂತೋಷಕ್ಕೆ ಇಂಬುಕೊಡುತ್ತದೆ