ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ದೇಹಬಲ ಕುಗ್ಗಿಹೋಗಿ ಅಶಕ್ತನಾಗಿರುವ ಒಬ್ಬ ಅಭಿಷಿಕ್ತ ಕ್ರೈಸ್ತನಿಗೆ, ಕರ್ತನ ಸಂಧ್ಯಾ ಭೋಜನದ ಆಚರಣೆಗಾಗಿ ಸಭೆಯಲ್ಲಿ ಹಾಜರಿರಲು ಸಾಧ್ಯವಿಲ್ಲದಿರುವಲ್ಲಿ ಏನಾದರೂ ಮಾಡಸಾಧ್ಯವಿದೆಯೊ?

ಹೌದು. ದೇಹಶಕ್ತಿಯು ಕುಗ್ಗಿಹೋಗಿ ಅಶಕ್ತನಾಗಿರುವ ಮತ್ತು ಪ್ರಾಯಶಃ ಹಾಸಿಗೆಹಿಡಿದಿರುವ ಕಾರಣದಿಂದಾಗಿ, ಕ್ರಿಸ್ತನ ಮರಣದ ಜ್ಞಾಪಕಾಚರಣೆಗಾಗಿ ಸಭೆಯಲ್ಲಿ ಹಾಜರಿರಲು ಸಾಧ್ಯವಿಲ್ಲದ ಅಭಿಷಿಕ್ತ ಕ್ರೈಸ್ತನೊಬ್ಬನಿಗೆ ಪರಿಗಣನೆಯನ್ನು ತೋರಿಸುತ್ತಾ, ಒಂದು ಏರ್ಪಾಡನ್ನು ಮಾಡಸಾಧ್ಯವಿದೆ ಮತ್ತು ಮಾಡಲೇಬೇಕು. ಇಂಥ ವಿದ್ಯಮಾನದಲ್ಲಿ ಹಿರಿಯರ ಮಂಡಲಿಯು, ಒಬ್ಬ ಹಿರಿಯನು ಇಲ್ಲವೆ ಒಬ್ಬ ಪ್ರೌಢ ಕ್ರೈಸ್ತನು ಸೂರ್ಯೋದಯದ ಮುಂಚೆ ಅದೇ ರಾತ್ರಿ ಆ ಜೊತೆ ವಿಶ್ವಾಸಿಯ ಬಳಿ ಕುರುಹುಗಳಾಗಿರುವ ರೊಟ್ಟಿ ಮತ್ತು ದ್ರಾಕ್ಷಾಮದ್ಯದ ಪಾಲನ್ನು ಕೊಂಡೊಯ್ಯುವಂತೆ ಏರ್ಪಾಡು ಮಾಡಸಾಧ್ಯವಿದೆ.

ಪರಿಸ್ಥಿತಿಗಳ ಮೇಲೆ ಹೊಂದಿಕೊಂಡು, ಸಂದರ್ಶಿಸುತ್ತಿರುವ ಹಿರಿಯನು ಇಲ್ಲವೆ ಬೇರೆ ಸಹೋದರನು ಸಂಕ್ಷಿಪ್ತವಾದ ಹೇಳಿಕೆಗಳನ್ನು ಮಾಡಿ, ಸೂಕ್ತವಾದ ವಚನಗಳನ್ನು ಓದಸಾಧ್ಯವಿದೆ. ಕರ್ತನ ಸಂಧ್ಯಾ ಭೋಜನವನ್ನು ಸ್ಥಾಪಿಸಿದಾಗ ಯೇಸು ಇಟ್ಟಂಥ ಮಾದರಿಯನ್ನು ಅವನು ಅನುಸರಿಸಬಹುದು. ಉದಾಹರಣೆಗಾಗಿ, ಮತ್ತಾಯ 26:26ನ್ನು ಓದಿ, ಒಂದು ಪ್ರಾರ್ಥನೆಯನ್ನು ಮಾಡಿದ ಬಳಿಕ, ಹುಳಿಯಿಲ್ಲದ ರೊಟ್ಟಿಯನ್ನು ಕೊಡಸಾಧ್ಯವಿದೆ. ನಂತರ, ಸಂದರ್ಶಿಸುತ್ತಿರುವ ಆ ಸಹೋದರನು ಮತ್ತಾಯ ಅಧ್ಯಾಯ 26, ವಚನಗಳು 27 ಮತ್ತು 28ನ್ನು ಓದಿ, ಇನ್ನೊಂದು ಪ್ರಾರ್ಥನೆಯನ್ನು ಮಾಡಿದ ಬಳಿಕ, ದ್ರಾಕ್ಷಾಮದ್ಯವನ್ನು ನೀಡಸಾಧ್ಯವಿದೆ. ಪ್ರತಿಯೊಂದು ಕುರುಹುವಿನ ಮಹತ್ವಾರ್ಥದ ಕುರಿತಾಗಿ ಸಂಕ್ಷಿಪ್ತ ಹೇಳಿಕೆಗಳನ್ನು ಮಾಡಸಾಧ್ಯವಿದೆ, ಮತ್ತು ಕೊನೆಯಲ್ಲಿ ಒಂದು ಪ್ರಾರ್ಥನೆಯನ್ನು ಮಾಡುವುದು ಸೂಕ್ತವಾಗಿರುವುದು.

ಕರ್ತನ ಸಂಧ್ಯಾ ಭೋಜನದ ಸ್ಮಾರಕೋತ್ಸವಕ್ಕಾಗಿ ಸಭೆಯಲ್ಲಿ ಹಾಜರಿರಲು, ಸಮಂಜಸವಾದ ಪ್ರತಿಯೊಂದು ಪ್ರಯತ್ನವನ್ನು ಮಾಡತಕ್ಕದ್ದು ಎಂಬುದು ನಿಜ. ಆದರೆ, ಒಬ್ಬ ಅಭಿಷಿಕ್ತ ಕ್ರೈಸ್ತನು ಗಂಭೀರವಾಗಿ ಅಸ್ವಸ್ಥನಾಗಿರುವಲ್ಲಿ, ಆಸ್ಪತ್ರೆಗೆ ಸೇರಿಸಲ್ಪಟ್ಟಿರುವಲ್ಲಿ ಇಲ್ಲವೆ ಬೇರಾವುದೊ ಕಾರಣಕ್ಕಾಗಿ, ನೈಸಾನ್‌ 14ರಂದು ಸೂರ್ಯಾಸ್ತಮಾನದ ನಂತರ ಜ್ಞಾಪಕವನ್ನು ಆಚರಿಸುವುದರಿಂದ ತಡೆಯಲ್ಪಟ್ಟಿರುವಂಥ ವಿಪರೀತ ಪರಿಸ್ಥಿತಿಯಲ್ಲಿ ಏನನ್ನು ಮಾಡಸಾಧ್ಯವಿದೆ? ಮೋಶೆಯ ಧರ್ಮಶಾಸ್ತ್ರದಲ್ಲಿದ್ದ ಒಂದು ಪೂರ್ವನಿದರ್ಶನಕ್ಕನುಸಾರ ಆ ಅಭಿಷಿಕ್ತನು, 30 ದಿನಗಳ ಬಳಿಕ ಅದನ್ನು ಖಾಸಗಿಯಾಗಿ ಆಚರಿಸಬಹುದು.​—ಅರಣ್ಯಕಾಂಡ 9:​9-14.