ನಿಮಗೆ ನೆನಪಿದೆಯೇ?
ನಿಮಗೆ ನೆನಪಿದೆಯೇ?
ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ನೀವು ಓದಿ ಗಣ್ಯಮಾಡಿದ್ದೀರೋ? ಹಾಗಾದರೆ, ಈ ಮುಂದಿನ ಪ್ರಶ್ನೆಗಳಿಗೆ ನೀವು ಉತ್ತರವನ್ನು ನೀಡಲು ಶಕ್ತರಾಗಿದ್ದೀರೋ ಎಂದು ನೋಡಿ:
• “ಆಲೋಚನಾ ಸಾಮರ್ಥ್ಯವು” ನಮ್ಮನ್ನು ಹೇಗೆ ಕಾಪಾಡಬಲ್ಲದು? (ಜ್ಞಾನೋಕ್ತಿ 1:4, NW)
ಅದು ನಮಗೆ ಆತ್ಮಿಕ ಅಪಾಯಗಳ ಕುರಿತಾಗಿ ಎಚ್ಚರಿಸಬಲ್ಲದು, ಮತ್ತು ಕೆಲಸದ ಸ್ಥಳದಲ್ಲಿ ಲೈಂಗಿಕ ಪ್ರಲೋಭನಗಳನ್ನು ದೂರವಿಡುವುದರಂಥ ಯಥೋಚಿತವಾದ ಕ್ರಮವನ್ನು ಯೋಜಿಸುವಂತೆ ಅದು ನಮ್ಮನ್ನು ಪ್ರಚೋದಿಸಬಲ್ಲದು. ಜೊತೆ ಕ್ರೈಸ್ತರು ಅಪರಿಪೂರ್ಣರಾಗಿದ್ದಾರೆಂಬುದನ್ನು ಗ್ರಹಿಸುವಂತೆ ಅದು ನಮಗೆ ಸಹಾಯಮಾಡುತ್ತದೆ ಮತ್ತು ಇದು ನಾವು ಕೆರಳಿಸಲ್ಪಟ್ಟಾಗ ಆತುರದಿಂದ ಪ್ರತಿಕ್ರಿಯಿಸದಂತೆ ನಮ್ಮನ್ನು ಪ್ರಚೋದಿಸಬಲ್ಲದು. ನಮ್ಮನ್ನು ಆತ್ಮಿಕವಾಗಿ ದಾರಿತಪ್ಪಿಸಬಲ್ಲ, ಪ್ರಾಪಂಚಿಕತೆಯ ಒತ್ತಡಗಳಿಂದ ದೂರವಿರುವಂತೆಯೂ ಅದು ಸಾಧ್ಯಗೊಳಿಸುವುದು.—8/15, ಪುಟಗಳು 21-4.
• ಒಬ್ಬ ನೆರೆಯವನೋಪಾದಿ ಒಬ್ಬನು ಹೇಗೆ ಉಪಯುಕ್ತನಾಗಿರಬಲ್ಲನು?
ಒಬ್ಬ ಒಳ್ಳೇ ನೆರೆಯವನಾಗಿರುವ ಎರಡು ವಿಧಗಳು, ಉದಾರವಾಗಿ ಕೊಡುವವನೂ ಕೃತಜ್ಞತಾಭಾವದಿಂದ ಸ್ವೀಕರಿಸುವವನೂ ಆಗಿರುವುದೇ ಆಗಿದೆ. ಆಪತ್ತು ಬಂದೆರಗುವಾಗ ಒಬ್ಬ ಒಳ್ಳೆಯ ನೆರೆಯವನಾಗಿರುವುದು ಅತ್ಯಮೂಲ್ಯವಾಗಿದೆ. ಬೇಗನೆ ನಡೆಯಲಿರುವ ಒಂದು ಘಟನೆ, ಅಂದರೆ ದುಷ್ಟತನವನ್ನು ಅಂತ್ಯಗೊಳಿಸುವ ದೇವರ ಕೃತ್ಯದ ಕುರಿತಾಗಿ ಇತರರಿಗೆ ಎಚ್ಚರಿಸುವ ಮೂಲಕ ಯೆಹೋವನ ಸಾಕ್ಷಿಗಳು ಒಳ್ಳೇ ನೆರೆಯವರಾಗಿರಲು ಪ್ರಯತ್ನಿಸುತ್ತಾರೆ.—9/1, ಪುಟಗಳು 4-7.
• ಬೈಬಲಿಗನುಸಾರ, ನಿಜ ಸಂತರು ಯಾರು ಮತ್ತು ಅವರು ಮಾನವಕುಲವಕ್ಕೆ ಹೇಗೆ ಸಹಾಯಮಾಡುವರು?
ಎಲ್ಲ ಆರಂಭದ ಕ್ರೈಸ್ತರು ನಿಜ ಸಂತರು ಇಲ್ಲವೆ ಪವಿತ್ರ ಜನರಾಗಿದ್ದರು ಮತ್ತು ಇವರು ಮನುಷ್ಯರಿಂದಾಗಲಿ ಸಂಸ್ಥೆಗಳಿಂದಾಗಲಿ ಅಲ್ಲ ಬದಲಾಗಿ ದೇವರಿಂದ ಸಂತರಾಗಿಸಲ್ಪಟ್ಟಿದ್ದರು. (ರೋಮಾಪುರ 1:6) ಸ್ವರ್ಗೀಯ ಜೀವಕ್ಕೆ ಪುನರುತ್ಥಾನಗೊಳಿಸಲ್ಪಟ್ಟ ನಂತರ, ಈ ಪವಿತ್ರ ಜನರು ಭೂಮಿಯ ಮೇಲಿರುವ ನಂಬಿಗಸ್ತರನ್ನು ಆಶೀರ್ವದಿಸುವುದರಲ್ಲಿ ಕ್ರಿಸ್ತನೊಂದಿಗೆ ಪಾಲ್ಗೊಳ್ಳುವರು. (ಎಫೆಸ 1:18-21)—9/15, ಪುಟಗಳು 5-7.
• ಪ್ರಾಚೀನ ಗ್ರೀಸ್‌ನಲ್ಲಿ ನಡೆಯುತ್ತಿದ್ದ ಕ್ರೀಡೆಗಳ ಬಗ್ಗೆ ಸ್ವಲ್ಪ ತಿಳಿಯುವುದು, ಕ್ರೈಸ್ತರಿಗೆ ಹೇಗೆ ಮೌಲ್ಯಭರಿತವಾಗಿರಬಹುದು?
ಅಪೊಸ್ತಲ ಪೇತ್ರ ಮತ್ತು ಪೌಲರ ಬರಹಗಳಲ್ಲಿ, ಪ್ರಾಚೀನ ಆಟಗಳ ಮೇಲಾಧಾರಿತವಾದ ಇಲ್ಲವೆ ಅವುಗಳಿಗೆ ಸೂಚಿಸುವ ದೃಷ್ಟಾಂತಗಳಿವೆ. (1 ಕೊರಿಂಥ 9:26; 1 ತಿಮೊಥೆಯ 4:7; 2 ತಿಮೊಥೆಯ 2:5; 1 ಪೇತ್ರ 5:10) ಒಬ್ಬ ಪ್ರಾಚೀನ ಸ್ಪರ್ಧಾಳುವಿಗೆ, ಒಳ್ಳೇ ತರಬೇತುಗಾರನನ್ನು ಹೊಂದಿರುವುದು, ಸ್ವನಿಯಂತ್ರಣವನ್ನು ತೋರಿಸುವುದು, ಮತ್ತು ತನ್ನ ಪ್ರಯತ್ನಗಳನ್ನು ಸರಿಯಾದ ಗುರಿಯತ್ತ ನಿರ್ದೇಶಿಸುವುದು ಪ್ರಾಮುಖ್ಯವಾಗಿತ್ತು. ಇಂದಿನ ಕ್ರೈಸ್ತರ ಆತ್ಮಿಕ ಪ್ರಯತ್ನಗಳ ವಿಷಯದಲ್ಲೂ ಇದು ಸತ್ಯವಾಗಿದೆ.—10/1, ಪುಟಗಳು 28-31.
• ವಿದೇಶದಲ್ಲಿ ಮಕ್ಕಳನ್ನು ಬೆಳೆಸುವುದರ ಪಂಥಾಹ್ವಾನಗಳೂ ಬಹುಮಾನಗಳೂ ಯಾವುವು?
ಹೆಚ್ಚಿನ ಮಕ್ಕಳು ತಮ್ಮ ಹೆತ್ತವರಿಗಿಂತಲೂ ತೀರ ಬೇಗನೆ ಹೊಸ ಭಾಷೆಯನ್ನು ಕಲಿಯುತ್ತಾರೆ. ಆದರೆ ಹೆತ್ತವರಿಗೆ ತಮ್ಮ ಮಕ್ಕಳ ಯೋಚನಾರೀತಿ ಮತ್ತು ಪ್ರತಿಕ್ರಿಯೆಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಬಹುದು. ಮತ್ತು ಮಕ್ಕಳು ತಮ್ಮ ಹೆತ್ತವರ ಭಾಷೆಯಲ್ಲಿ ಬೈಬಲ್ ಬೋಧನೆಗಳನ್ನು ಸುಲಭವಾಗಿ ಗ್ರಹಿಸದೇ ಹೋಗಬಹುದು. ಹಾಗಿದ್ದರೂ, ಹೆತ್ತವರು ತಮ್ಮ ಮಕ್ಕಳಿಗೆ ತಮ್ಮ ಮಾತೃಭಾಷೆಯನ್ನು ಕಲಿಸುವಾಗ, ಕುಟುಂಬದ ಬಂಧಗಳನ್ನು ಬಲಪಡಿಸಸಾಧ್ಯವಿದೆ. ಮತ್ತು ಹೀಗೆ ಮಕ್ಕಳು ಎರಡು ಭಾಷೆಗಳನ್ನು ಕಲಿಯಬಹುದು ಹಾಗೂ ಎರಡು ಸಂಸ್ಕೃತಿಗಳೊಂದಿಗೆ ಪರಿಚಿತರಾಗಬಹುದು.—10/15, ಪುಟಗಳು 22-6.
• ಕ್ಷಮೆಯಾಚಿಸಲು ಕಲಿಯುವುದು ಪ್ರಾಮುಖ್ಯವೇಕೆ?
ಪ್ರಾಮಾಣಿಕ ಮನಸ್ಸಿನಿಂದ ಕ್ಷಮೆಯಾಚಿಸುವುದು, ಹಾನಿಗೊಳಗಾಗಿರುವ ಒಂದು ಸಂಬಂಧವನ್ನು ಸರಿಪಡಿಸಬಹುದು. ಕ್ಷಮೆಯಾಚಿಸುವುದರ ಶಕ್ತಿಯನ್ನು ದೃಷ್ಟಾಂತಿಸುವ ಉದಾಹರಣೆಗಳನ್ನು ಬೈಬಲ್ ಕೊಡುತ್ತದೆ. (1 ಸಮುವೇಲ 25:2-35; ಅ. ಕೃತ್ಯಗಳು 23:1-5) ಇಬ್ಬರು ವ್ಯಕ್ತಿಗಳ ನಡುವೆ ಮತಭೇದವಿರುವಾಗ, ಹೆಚ್ಚಾಗಿ ಎರಡೂ ಪಕ್ಷಗಳಿಂದ ಸ್ವಲ್ಪವಾದರೂ ತಪ್ಪು ಇರುತ್ತದೆ. ಆದುದರಿಂದಲೇ, ಪರಸ್ಪರ ರಾಜಿಮಾಡಿಕೊಳ್ಳುವಿಕೆ ಮತ್ತು ಕ್ಷಮಾಯಾಚನೆಗಳು ಆವಶ್ಯಕವಾಗಿವೆ.—11/1, ಪುಟಗಳು 4-7.
• ಚಿಕ್ಕ ಮೊತ್ತದ ಹಣವು ಒಳಗೂಡಿದ್ದರೂ ಜೂಜಾಡುವುದು ಕೆಟ್ಟದ್ದಾಗಿದೆ ಏಕೆ?
ಜೂಜಾಟವು ಅಹಂ ಅನ್ನು, ಸ್ಪರ್ಧಾತ್ಮಕ ಮನೋಭಾವವನ್ನು ಮತ್ತು ಲೋಭವನ್ನು ಕೆರಳಿಸಬಲ್ಲದು. ಇದೆಲ್ಲವನ್ನೂ ಬೈಬಲ್ ಖಂಡಿಸುತ್ತದೆ. (1 ಕೊರಿಂಥ 6:9, 10) ಜೂಜಾಟದ ಚಟಹಿಡಿದಿರುವ ಅನೇಕ ಜನರು, ಚಿಕ್ಕ ಪ್ರಾಯದಲ್ಲೇ ಚಿಕ್ಕ ಮೊತ್ತದ ಪಂದ್ಯಕಟ್ಟುವಿಕೆಯಿಂದ ಆರಂಭಿಸಿದ್ದರು.—11/1, ಪುಟ 31.
• ಬೈಬಲಿನ ಅನೇಕ ಪುಸ್ತಕಗಳು ಗ್ರೀಕ್ ಭಾಷೆಯಲ್ಲಿ ಬರೆಯಲ್ಪಟ್ಟಿದ್ದರಿಂದ, ಬೈಬಲನ್ನು ಗ್ರೀಕ್ ಭಾಷೆಗೆ ಭಾಷಾಂತರಿಸುವ ಅಗತ್ಯವೇನಿತ್ತು, ಮತ್ತು ಫಲಿತಾಂಶಗಳು ಏನಾಗಿದ್ದವು?
ಆಧುನಿಕ ಗ್ರೀಕ್ ಭಾಷೆಯು, ಹೀಬ್ರು ಶಾಸ್ತ್ರಗಳ ಸೆಪ್ಟೂಅಜಿಂಟ್ ಭಾಷಾಂತರ ಮತ್ತು ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ಉಪಯೋಗಿಸಲ್ಪಟ್ಟಿರುವ ಗ್ರೀಕ್ ಭಾಷೆಗಿಂತ ತುಂಬ ಭಿನ್ನವಾಗಿದೆ. ಬೈಬಲಿನ ಕೆಲವೊಂದು ಭಾಗಗಳನ್ನು ಇಲ್ಲವೆ ಇಡೀ ಬೈಬಲನ್ನು ಗ್ರೀಕ್ ಆಡುಭಾಷೆಗೆ ಭಾಷಾಂತರಿಸಲು ಇತ್ತೀಚಿನ ಶತಮಾನಗಳಲ್ಲಿ ಅಸಂಖ್ಯಾತ ಪ್ರಯತ್ನಗಳನ್ನು ಮಾಡಲಾಗಿದೆ. ಇಂದು, ಇಡೀ ಬೈಬಲ್ ಇಲ್ಲವೆ ಅದರ ಕೆಲವೊಂದು ಪುಸ್ತಕಗಳು, ಸಾಮಾನ್ಯ ಗ್ರೀಕ್ ಭಾಷೆಯಲ್ಲಿ ಸುಮಾರು 30 ಭಾಷಾಂತರಗಳು ಇವೆ. ಇವುಗಳಲ್ಲಿ ಎದ್ದುಕಾಣುವಂಥದ್ದು, 1997ರಲ್ಲಿ ಪ್ರಕಾಶಿಸಲ್ಪಟ್ಟಿರುವ ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ ಬೈಬಲೇ ಆಗಿದೆ.—11/15, ಪುಟಗಳು 26-9.
• ಕ್ರೈಸ್ತರಿಂದ ದಶಮಾಂಶ ಕೊಡುವಿಕೆಯನ್ನು ಏಕೆ ಅಪೇಕ್ಷಿಸಲಾಗುವುದಿಲ್ಲ?
ಪ್ರಾಚೀನ ಇಸ್ರಾಯೇಲಿಗೆ ಕೊಡಲ್ಪಟ್ಟಿದ್ದ ಧರ್ಮಶಾಸ್ತ್ರದಲ್ಲಿ, ದಶಮಾಂಶ ಕೊಡುವಿಕೆಯು ಲೇವಿ ಕುಲವನ್ನು ಬೆಂಬಲಿಸುವ ಮತ್ತು ಅಗತ್ಯದಲ್ಲಿರುವವರನ್ನು ಪರಾಮರಿಸಲಿಕ್ಕಾಗಿರುವ ಒಂದು ಸಾಧನವಾಗಿತ್ತು. (ಯಾಜಕಕಾಂಡ 27:30; ಧರ್ಮೋಪದೇಶಕಾಂಡ 14:28, 29) ಯೇಸುವಿನ ಯಜ್ಞಾರ್ಪಿತ ಮರಣವು, ಧರ್ಮಶಾಸ್ತ್ರವನ್ನೂ ಅದರ ದಶಮಾಂಶ ಕೊಡುವಿಕೆಯ ಏರ್ಪಾಡನ್ನೂ ರದ್ದುಗೊಳಿಸಿತು. (ಎಫೆಸ 2:13-15) ಆರಂಭದ ಸಭೆಯಲ್ಲಿ, ಪ್ರತಿಯೊಬ್ಬ ಕ್ರೈಸ್ತನು ತನ್ನ ಸಂಪಾದನೆಗನುಸಾರ ಮತ್ತು ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡುವ ನಮೂನೆಯನ್ನಿಡಲಾಯಿತು. (2 ಕೊರಿಂಥ 9:5, 7.—12/1, ಪುಟಗಳು 4-6.
• ಕೊನೆಯ ಪರೀಕ್ಷೆಯಲ್ಲಿ ಸೈತಾನನು ತುಂಬ ದೊಡ್ಡ ಸಂಖ್ಯೆಯ ಜನರನ್ನು ಮರುಳುಗೊಳಿಸುವನೆಂಬುದು ಪ್ರಕಟನೆ 20:8ರ ಅರ್ಥವಾಗಿದೆಯೊ?
ಮರುಳುಗೊಂಡವರು ‘ಸಮುದ್ರದ ಮರಳಿನಷ್ಟಿರುವರು’ ಎಂದು ಆ ವಚನವು ಹೇಳುತ್ತದೆ. ಬೈಬಲಿನಲ್ಲಿ, ಆ ವಾಕ್ಸರಣಿಯ ಅರ್ಥವು ಅನೇಕವೇಳೆ, ಒಂದು ಭಾರೀ ಸಂಖ್ಯೆಯನ್ನು ಸೂಚಿಸದೆ, ಅಜ್ಞಾತ ಸಂಖ್ಯೆಯನ್ನು ಸೂಚಿಸುತ್ತದೆ. ಉದಾಹರಣೆಗೆ, ‘ಸಮುದ್ರತೀರದಲ್ಲಿರುವ ಉಸುಬಿನಂತೆ’ ಇರಲಿದ್ದ ಅಬ್ರಹಾಮನ ಸಂತಾನವು, ಯೇಸು ಕ್ರಿಸ್ತನು ಮಾತ್ರವಲ್ಲದೆ 1,44,000ದ ಸಂಖ್ಯೆಯ ಜನರಾಗಿ ಪರಿಣಮಿಸಿತು. (ಆದಿಕಾಂಡ 22:17; ಪ್ರಕಟನೆ 14:1-4)—12/1, ಪುಟ 29.