ದೇವರ ದೃಷ್ಟಿಕೋನದಿಂದ ವಿಷಯಗಳನ್ನು ನೋಡುವುದು
ದೇವರ ದೃಷ್ಟಿಕೋನದಿಂದ ವಿಷಯಗಳನ್ನು ನೋಡುವುದು
ಇಸವಿ 2002, ಸೆಪ್ಟೆಂಬರ್ 14, ಅಮೆರಿಕದ ನ್ಯೂ ಯಾರ್ಕ್ನಲ್ಲಿ ಒಂದು ಬೆಚ್ಚಗಿನ, ಪ್ರಕಾಶಮಾನ ದಿನವಾಗಿತ್ತು. ಆ ದಿನದಂದು ಪ್ಯಾಟರ್ಸನ್ ಎಡ್ಯೂಕೇಷನಲ್ ಸೆಂಟರ್ನಲ್ಲಿ ಮತ್ತು ಇನ್ನೆರಡು ಸಂಕೀರ್ಣಗಳಲ್ಲಿ ಆ ಪ್ರದೇಶದಿಂದ 6,521 ಮಂದಿ ಯೆಹೋವನ ಸಾಕ್ಷಿಗಳ ಒಂದು ಅಂತಾರಾಷ್ಟ್ರೀಯ ಸಮೂಹವು ಕೂಡಿಬಂತು. ಆ ಜನರ ಗುಂಪು, ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ 113ನೆಯ ತರಗತಿಯು ಪದವಿಪಡೆಯುವುದನ್ನು ನೋಡಲಿಕ್ಕಾಗಿ ಒಟ್ಟುಗೂಡಿಬಂತು. ವಿದ್ಯಾರ್ಥಿಗಳು 14 ದೇಶಗಳಿಂದ ಬಂದವರಾಗಿದ್ದರು ಮತ್ತು ಗತ ಐದು ತಿಂಗಳುಗಳನ್ನು ಮಿಷನೆರಿ ಸೇವೆಗಾಗಿ ತಯಾರಿಗೊಳ್ಳುವುದರಲ್ಲಿ ಕಳೆದಿದ್ದರು. ಇವರನ್ನು 19 ದೇಶಗಳಿಗೆ ನೇಮಿಸಲಾಯಿತು.
ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರೂ, 97ಕ್ಕಿಂತಲೂ ಹೆಚ್ಚು ವಯಸ್ಸಿನವರೂ ಆಗಿರುವ ಕ್ಯಾರೀ ಬಾರ್ಬರ್ ಅವರು ಈ ಕಾರ್ಯಕ್ರಮದ ಅಧ್ಯಕ್ಷರಾಗಿದ್ದರು. ಗಿಲ್ಯಡ್ ಶಾಲೆಯ ಸುಮಾರು 60 ವರ್ಷಗಳ ಪರಂಪರೆಯ ಕಡೆಗೆ ಅವರು ಗಮನವನ್ನು ಸೆಳೆದರು. ಈ ಶಾಲೆಯು, ಮಿಷನೆರಿ ಕ್ಷೇತ್ರದಲ್ಲಿ ಹೋಗುವಂತೆ ಸಾವಿರಾರು ಜನರನ್ನು ಸಜ್ಜುಗೊಳಿಸಿದೆ. ಸಹೋದರ ಬಾರ್ಬರ್ ಹೇಳಿದ್ದು: “ಅವರಿಗೆ ಕೊಡಲ್ಪಟ್ಟಿರುವ ಹೆಚ್ಚಿನ ತರಬೇತಿಯಿಂದಾಗಿ ವೈಭವಯುಕ್ತ ಫಲಿತಾಂಶಗಳು ಸಿಕ್ಕಿವೆಯೆಂದು ಹೇಳುವುದು ಒಂದು ಅತಿಶಯೋಕ್ತಿಯಲ್ಲ. ತರಬೇತಿ ಹೊಂದಿರುವ ಮಿಷನೆರಿಗಳು ಕೊಟ್ಟಿರುವ ಸಹಾಯದಿಂದಾಗಿ ಅಕ್ಷರಶಃ ಸಾವಿರಾರು ಮಂದಿ ದೀನರು ಭೂಮ್ಯಾದ್ಯಂತ ಯೆಹೋವನಿಗೆ ತಮ್ಮ ಜೀವನವನ್ನು ಸಮರ್ಪಿಸಿ, ಸತ್ಯಾರಾಧನೆಯನ್ನೂ ಪವಿತ್ರ ಸೇವೆಯನ್ನೂ ಅಂಗೀಕರಿಸಿದ್ದಾರೆ.”
ಗಿಲ್ಯಡ್ ಶಾಲೆಗೆ ಹಾಜರಾಗುವ ಮುಂಚೆ, ಈ ವಿದ್ಯಾರ್ಥಿಗಳಲ್ಲಿ ಅನೇಕರು, ತಮ್ಮ ಶುಶ್ರೂಷೆಯನ್ನು ವಿಸ್ತರಿಸುವುದರಲ್ಲಿ ತಮಗಿದ್ದ ಅಭಿರುಚಿಯನ್ನು ಪ್ರದರ್ಶಿಸಿದರು. ಒಂದು ದಂಪತಿ, ಕೆನಡದಲ್ಲಿ ತಾವು ವಾಸಿಸುತ್ತಿರುವ ಕ್ಷೇತ್ರದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದ ಚೈನೀಸ್ ಜನರನ್ನು ತಲಪಲಿಕ್ಕಾಗಿ, ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಮ್ಯಾಂಡರಿನ್ ಭಾಷೆಯ ತರಗತಿಗಳಿಗೆ ಹೋಗುತ್ತಿದ್ದರು. ಇನ್ನೊಂದು ದಂಪತಿ, ತಮ್ಮಷ್ಟಕ್ಕೆ ಆಲ್ಬೇನಿಯನ್ ಭಾಷೆಯನ್ನು ಕಲಿಯಲಾರಂಭಿಸಿದರು, ಮತ್ತು ಕಟ್ಟಕಡೆಗೆ ಅಲ್ಲಿನ ಜನರಿಗೆ ಬೈಬಲ್ನಲ್ಲಿರುವ ಆಸಕ್ತಿಯನ್ನು ಪೋಷಿಸಲಿಕ್ಕಾಗಿ ಆಲ್ಬೇನಿಯಕ್ಕೇ ಸ್ಥಳಾಂತರಿಸಿದ್ದರು. ತರಗತಿಯಲ್ಲಿದ್ದ ಇತರರು, ದೇವರ ವಾಕ್ಯದ ಬೋಧಕರಿಗಾಗಿ ಬಹಳ ದೊಡ್ಡ ಆವಶ್ಯಕತೆಯಿರುವ ಹಂಗೆರಿ, ಗ್ವಾಟಮಾಲಾ, ಮತ್ತು ಡೊಮಿನಿಕನ್ ರಿಪಬ್ಲಿಕ್ನಂಥ ದೇಶಗಳಿಂದ ಗಿಲ್ಯಡ್ ಶಾಲೆಗೆ ಬಂದರು.
ಈಗ, ಪದವಿಪಡೆಯುತ್ತಿದ್ದ ವಿದ್ಯಾರ್ಥಿಗಳು ಆಫ್ರಿಕ, ಪೂರ್ವ ಯೂರೋಪ್, ಮಧ್ಯ ಮತ್ತು ದಕ್ಷಿಣ ಅಮೆರಿಕದ ಹಾಗೂ ದೂರದ ಪೂರ್ವ ದೇಶಗಳಲ್ಲಿನ ತಮ್ಮ ನೇಮಕಗಳಿಗೆ ಹೋಗುವ ಮುಂಚೆ, ತಾವು ಮಾಡುವಂಥ ಪ್ರತಿಯೊಂದು ಕಾರ್ಯದಲ್ಲೂ ದೇವರನ್ನು ಪರಿಗಣಿಸುವಂತೆ ಉತ್ತೇಜಿಸಲ್ಪಟ್ಟರು.
ದೇವರ ದೃಷ್ಟಿಯಿಂದ ವಿಷಯಗಳನ್ನು ನೋಡುವುದು
ತಮ್ಮ ಆರಂಭದ ಹೇಳಿಕೆಗಳ ನಂತರ ಸಹೋದರ ಬಾರ್ಬರ್, ಅಮೆರಿಕದ ಬ್ರಾಂಚ್ ಕಮಿಟಿಯ ಸದಸ್ಯರಾದ ಮ್ಯಾಕ್ಸ್ವೆಲ್ ಲಾಯ್ಡ್ರವರನ್ನು ಪರಿಚಯಿಸಿದರು. “ಎಲ್ಲಾ ವಿಷಯಗಳನ್ನು ದೇವರ ದೃಷ್ಟಿಕೋನದಿಂದ ನೋಡಿರಿ” ಎಂಬ ಮುಖ್ಯ ವಿಷಯವನ್ನು ಅವರು ಎತ್ತಿಹಿಡಿದರು. ಸಹೋದರ ಲಾಯ್ಡ್ ಅವರು, ದಾವೀದನು ಮತ್ತು ದೇವಕುಮಾರನಾದ ಯೇಸುವಿನ ಮಾದರಿಯತ್ತ ಗಮನವನ್ನು ಸೆಳೆದರು. (1 ಸಮುವೇಲ 24:6; 26:11; ಲೂಕ 22:42) ಬೈಬಲಿನ ಐದು ತಿಂಗಳುಗಳ ಅಧ್ಯಯನವು ಅವರು ವಿಷಯಗಳನ್ನು ದೇವರ ದೃಷ್ಟಿಕೋನದಿಂದ ನೋಡುವುದರಲ್ಲಿ ತರಬೇತಿಯನ್ನು ಕೊಟ್ಟಿದೆ ಎಂಬುದನ್ನು ವಿದ್ಯಾರ್ಥಿಗಳಿಗೆ ಜ್ಞಾಪಕಹುಟ್ಟಿಸಿದ ಬಳಿಕ, ಭಾಷಣಕರ್ತರು ಹೀಗೆ ಕೇಳಿದರು: “ನಿಮ್ಮ ಹೊಸ ನೇಮಕದಲ್ಲಿ ಜನರೊಂದಿಗೆ ಬೈಬಲ್ ಅಧ್ಯಯನಗಳನ್ನು ನಡೆಸುವಾಗ, ಅವರು ದೇವರ ದೃಷ್ಟಿಕೋನದಿಂದ ವಿಷಯಗಳ ಕುರಿತು ವಿವೇಚಿಸುವಂತೆ ಸಹಾಯಮಾಡುವಿರೊ?” ಮತ್ತು ಬೇರೆಯವರಿಗೆ ಸಲಹೆಯನ್ನು ಕೊಡುವ ವಿಷಯದಲ್ಲಿ, ಅವರು ವಿದ್ಯಾರ್ಥಿಗಳಿಗೆ ಈ ಬುದ್ಧಿವಾದವನ್ನು ಕೊಟ್ಟರು: “‘ನನ್ನ ದೃಷ್ಟಿಕೋನದಿಂದ, . . . ನನಗನಿಸುತ್ತದೆ’ ಎಂದು ಹೇಳಬೇಡಿ. ದೇವರ ದೃಷ್ಟಿಕೋನ ಏನಾಗಿದೆ ಎಂಬುದನ್ನು ನೋಡುವಂತೆ ಸಹಾಯಮಾಡಿರಿ. ವಿಷಯಗಳ ಬಗ್ಗೆ ಈ ದೃಷ್ಟಿಕೋನವನ್ನಿಡುವುದರಿಂದ, ನಿಮ್ಮ ನೇಮಕದಲ್ಲಿ ನೀವು ಯಾರೊಂದಿಗೆ ಸಹವಾಸಮಾಡುತ್ತೀರೊ ಅವರಿಗೆ ನೀವೊಂದು ನಿಜ ಆಶೀರ್ವಾದವಾಗಿ ಪರಿಣಮಿಸುವಿರಿ.”
ಕಾರ್ಯಕ್ರಮದ ಮುಂದಿನ ಭಾಷಣಕರ್ತರು, ಆಡಳಿತ ಮಂಡಲಿಯ ಸದಸ್ಯರಾದ ಗೆರಿಟ್ ಲಾಶ್ ಆಗಿದ್ದರು. “ನಾನು ನಿನ್ನ ಸಂಗಡ ಇದ್ದೇನೆ” ಎಂಬ ಮುಖ್ಯ ವಿಷಯದ ಕುರಿತಾಗಿ ಮಾತಾಡುತ್ತಾ ಅವರು, ಯೆಹೋವನು ತನ್ನ ನಂಬಿಗಸ್ತ ಸೇವಕರಿಗೆ ‘ನಾನು ನಿನ್ನ ಸಂಗಡ ಇದ್ದೇನೆ’ ಎಂದು ಹೇಳಿದ ಅನೇಕ ಸಂದರ್ಭಗಳ ಕಡೆಗೆ ಗಮನವನ್ನು ಸೆಳೆದರು. (ಆದಿಕಾಂಡ 26:23, 24; 28:15; ಯೆಹೋಶುವ 1:5; ಯೆರೆಮೀಯ 1:7, 8) ನಮ್ಮ ದಿನಗಳಲ್ಲಿ, ನಾವು ನಂಬಿಗಸ್ತರಾಗಿ ಉಳಿಯಬೇಕಾದರೆ ನಮಗೆ ಅದೇ ರೀತಿಯ ಭರವಸೆಯಿರಬೇಕು. ಸಹೋದರ ಲಾಶ್ ಹೇಳಿದ್ದು: “ಬೈಬಲ್ ಅಧ್ಯಯನ ನಡೆಸಲಿಕ್ಕಾಗಿ ನಿಮಗೆ ಜನರು ಸಿಗುವರೊ ಎಂಬುದರ ಬಗ್ಗೆ ನಿಮಗೆ ಚಿಂತೆಯಿದೆಯೊ? ‘ನಾನು ನಿನ್ನೊಂದಿಗೆ ಇರುವೆನು’ ಎಂದು ಯೆಹೋವನು ಹೇಳಿದ್ದಾನೆ ಎಂಬುದನ್ನು ನೆನಪಿಡಿರಿ. ಪ್ರಾಪಂಚಿಕ ರೀತಿಯಲ್ಲಿ ಬೇಕಾದದ್ದೆಲ್ಲವೂ ನಿಮಗಿರಬೇಕು ಎಂಬುದರ ಚಿಂತೆ ನಿಮಗಿದೆಯೊ? ಯೆಹೋವನು ಹೇಳಿದ್ದು: ‘ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲ.’ (ಇಬ್ರಿಯ 13:5) ಯೇಸು, ತನ್ನ ನಂಬಿಗಸ್ತ ಹಿಂಬಾಲಕರು ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ಮಾಡುವಾಗ ತಾನು ಅವರೊಂದಿಗಿರುವೆನೆಂದು ವಾಗ್ದಾನಿಸಿದ್ದಾನೆಂಬುದನ್ನು ವಿದ್ಯಾರ್ಥಿಗಳಿಗೆ ಜ್ಞಾಪಕಹುಟ್ಟಿಸುವ ಮೂಲಕ ಸಹೋದರ ಲಾಶ್ ಅವರು ಸಮಾಪ್ತಿಗೊಳಿಸಿದರು.—ಮತ್ತಾಯ 28:20.
“ಬೆಂಕಿಸದೃಶ ಪರೀಕ್ಷೆಗಳಲ್ಲಿ ನಿಮ್ಮ ಭದ್ರತೆಯನ್ನು ಕಂಡುಕೊಳ್ಳುವಿರೊ?” ಇದು, ಗಿಲ್ಯಡ್ ಶಾಲೆಯ ಶಿಕ್ಷಕರಾದ ಲಾರನ್ಸ್ ಬೊವೆನ್ರವರ ಶೀರ್ಷಿಕೆಯಾಗಿತ್ತು. ಏದೆನಿನಲ್ಲಿ ಎಬ್ಬಿಸಲ್ಪಟ್ಟ ವಿವಾದಾಂಶಗಳಿಂದಾಗಿ ಯೆಹೋವನಿಗೆ ಸಂಪೂರ್ಣ ಭಕ್ತಿಯನ್ನು ಕೊಡಲಪೇಕ್ಷಿಸುವವರೆಲ್ಲರೂ ಕಷ್ಟಗಳನ್ನು ಮತ್ತು ಕೆಲವೊಮ್ಮೆ ಬೆಂಕಿಸದೃಶ ಪರೀಕ್ಷೆಗಳನ್ನೂ ಎದುರಿಸಿದ್ದಾರೆಂದು ಅವರು ಹೇಳಿದರು. ಪದವಿಪಡೆಯುತ್ತಿದ್ದ ಆ ವಿದ್ಯಾರ್ಥಿಗಳು, ಯೇಸುವಿನ ಮಾದರಿಯನ್ನು ಇಬ್ರಿಯ 5:8-10) ಕಲ್ಮಷಗಳನ್ನು ತೆಗೆದುಹಾಕಲಿಕ್ಕಾಗಿ ಸರಿಯಾದ ಪ್ರಮಾಣದ ಶಾಖವನ್ನು ಕೊಡುವ ಅಕ್ಕಸಾಲಿಗನಿಗೆ ಯೆಹೋವನನ್ನು ಹೋಲಿಸಬಹುದು. ಆದರೆ ಬೆಂಕಿಯಿಂದ ಶೋಧಿಸಲ್ಪಟ್ಟಿರುವ ನಂಬಿಕೆಯು, ಪರಿಷ್ಕೃತ ಚಿನ್ನಕ್ಕಿಂತಲೂ ಎಷ್ಟೋ ಹೆಚ್ಚಿನ ಭದ್ರತೆಯನ್ನು ಕೊಡುತ್ತದೆಂಬುದು ನಿಜ. ಏಕೆ? “ಏಕೆಂದರೆ ಪರಿಷ್ಕರಿಸಲ್ಪಟ್ಟಿರುವ ನಂಬಿಕೆಯು ಯಾವುದೇ ಒತ್ತಡವನ್ನು ಎದುರಿಸಿ ನಿಲ್ಲಲು ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ ಮತ್ತು ‘ಅಂತ್ಯದ’ ವರೆಗೂ ಎಲ್ಲವನ್ನೂ ತಾಳಿಕೊಳ್ಳುವಂತೆ ಅದು ನಮ್ಮನ್ನು ಸಜ್ಜುಗೊಳಿಸುತ್ತದೆ” ಎಂದು ಸಹೋದರ ಬೊವೆನ್ ಹೇಳಿದರು.—ಮತ್ತಾಯ 24:13.
ಅನುಸರಿಸುವಂತೆ ಅವರು ಉತ್ತೇಜಿಸಿದರು. ಯೇಸು, ಯೆಹೋವನ ಮೇಲೆ ಪೂರ್ಣವಾಗಿ ಆತುಕೊಳ್ಳುವ ಮೂಲಕ ಮತ್ತು ತನ್ನ ಮಗನ ವಿಧೇಯತೆಯನ್ನು ಪರಿಪೂರ್ಣಗೊಳಿಸಲು ಯೆಹೋವನು ಅನುಮತಿಸಿದಂಥ ಬೆಂಕಿಸದೃಶ ಪರೀಕ್ಷೆಗಳನ್ನು ಅಂಗೀಕರಿಸುವ ಮೂಲಕ ನಿಜ ಭದ್ರತೆಯನ್ನು ಕಂಡುಕೊಂಡನು. (ಇನ್ನೊಬ್ಬ ಗಿಲ್ಯಡ್ ಶಿಕ್ಷಕರಾದ ಮಾರ್ಕ್ ನೂಮಾರ್ ಕೇಳಿದ್ದು: “ನೀವು ಪ್ರಿಯರೆನಿಸಿಕೊಳ್ಳುವಿರೊ?” ಅವರ ಶೀರ್ಷಿಕೆಯು 1 ಸಮುವೇಲ 2:26ರ (ಪರಿಶುದ್ಧ ಬೈಬಲ್) ಮೇಲೆ ಆಧಾರಿತವಾಗಿತ್ತು. ಆ ವಚನವು ಸಮುವೇಲನು “ದೇವರಿಗೆ ಮತ್ತು ಮನುಷ್ಯರಿಗೆ ಪ್ರಿಯ”ನಾಗಿದ್ದನು ಎಂದು ಹೇಳುತ್ತದೆ. ಸಮುವೇಲನ ಮಾದರಿಯನ್ನು ಪರಿಗಣಿಸಿದ ನಂತರ, ಆಫ್ರಿಕದಲ್ಲಿ ಮಿಷನೆರಿ ಸೇವೆಯಲ್ಲಿ ಒಂದು ದಶಕಕ್ಕಿಂತ ಹೆಚ್ಚು ಸಮಯವನ್ನು ಕಳೆದ ಸಹೋದರ ನೂಮಾರ್ ತಿಳಿಸಿದ್ದು: “ದೇವರು ನಿಮಗೆ ನೇಮಿಸಿರುವ ಕೆಲಸಕ್ಕೆ ನಿಷ್ಠೆಯಿಂದ ಅಂಟಿಕೊಳ್ಳುವ ಮೂಲಕ ನೀವು ಕೂಡ ದೇವರ ದೃಷ್ಟಿಯಲ್ಲಿ ಬಹಳಷ್ಟು ಪ್ರಿಯರಾಗಬಲ್ಲಿರಿ. ಮತ್ತು ಆತನು ನಿಮಗೆ ಅತ್ಯಮೂಲ್ಯವಾದ ಮಿಷನೆರಿ ನೇಮಕವನ್ನು ಕೊಟ್ಟಿದ್ದಾನೆ.” ಆಮೇಲೆ ಸಹೋದರ ನೂಮಾರ್ ಪದವಿಪಡೆಯುತ್ತಿದ್ದ ತರಗತಿಗೆ, ಅವರು ತಮ್ಮ ನೇಮಕಗಳನ್ನು ದೇವರು ತಮಗೆ ವಹಿಸಿಕೊಟ್ಟಿರುವ ಪವಿತ್ರ ಜವಾಬ್ದಾರಿಯೋಪಾದಿ ವೀಕ್ಷಿಸುವಂತೆ ಮತ್ತು ತಮ್ಮ ನೇಮಕಗಳನ್ನು ಪೂರೈಸಲಿಕ್ಕಾಗಿ ದೇವರ ಯೋಚನಾಧಾಟಿಯನ್ನು ತಮ್ಮದಾಗಿಸಿಕೊಳ್ಳುವಂತೆ ಉತ್ತೇಜಿಸಿದರು.
ಗಿಲ್ಯಡ್ ಶಾಲಾವಧಿಯ ಸಮಯದಲ್ಲಿ, ವಿದ್ಯಾರ್ಥಿಗಳಿಗೆ ವಾರಾಂತ್ಯಗಳಲ್ಲಿ ಆ ಕ್ಷೇತ್ರದಲ್ಲಿದ್ದ ಜನರೊಂದಿಗೆ ಬೈಬಲ್ನಲ್ಲಿ ತಿಳಿಸಲ್ಪಟ್ಟಿರುವ “ದೇವರ ಮಹತ್ತುಗಳ ವಿಷಯವಾಗಿ” ಹೇಳಲು ಅನೇಕ ಸಂದರ್ಭಗಳಿದ್ದವು. (ಅ. ಕೃತ್ಯಗಳು 2:11) ವಾಸ್ತವದಲ್ಲಿ ಅವರು ಹತ್ತು ಭಿನ್ನ ಭಿನ್ನ ಭಾಷೆಗಳಲ್ಲಿ ಇವುಗಳ ಬಗ್ಗೆ ತಿಳಿಸಲು ಶಕ್ತರಾಗಿದ್ದರು. “‘ದೇವರ ಮಹತ್ತುಗಳು’ ಜನರನ್ನು ಕ್ರಿಯೆಗೆ ನಡೆಸುತ್ತವೆ” ಎಂಬ ಶೀರ್ಷಿಕೆಯ ಕೆಳಗೆ, ವಾಲೆಸ್ ಲಿವರೆನ್ಸ್ ಎಂಬ ಇನ್ನೊಬ್ಬ ಗಿಲ್ಯಡ್ ಶಿಕ್ಷಕರು, ತಮ್ಮ ಅನುಭವಗಳನ್ನು ತಿಳಿಸಿದಂಥ ವಿದ್ಯಾರ್ಥಿಗಳ ಗುಂಪನ್ನು ಇಂಟರ್ವ್ಯೂ ಮಾಡಿದರು. ಅವರು ಹೇಳಿದ್ದು: “ಪಂಚಾಶತ್ತಮದಂದು ಮೇಲಿನ ಕೋಣೆಯಲ್ಲಿದ್ದವರು ‘ದೇವರ ಮಹತ್ತುಗಳ ವಿಷಯವಾಗಿ’ ಮಾತಾಡುವಂತೆ ದೇವರಾತ್ಮವು ಪ್ರೇರಿಸಿತು. ಅದೇ ಆತ್ಮವು ಇಂದು ದೇವರ ಎಲ್ಲಾ ನಂಬಿಗಸ್ತ ಸೇವಕರಲ್ಲೂ ಕೆಲಸಮಾಡುತ್ತಿದೆ.” ಇನ್ನೂ ಹೆಚ್ಚು ಜನರಿಗೆ ಸಾಕ್ಷಿಯನ್ನು ಕೊಡುವ ಉದ್ದೇಶದಿಂದ, ಕೆಲವರು ಹೊಸ ಭಾಷೆಗಳನ್ನು ಕಲಿಯಲು ಸಹ ಪ್ರಚೋದಿಸಲ್ಪಟ್ಟಿದ್ದಾರೆ.
ದೇವರ ದೃಷ್ಟಿಕೋನದಿಂದ ವಿಷಯಗಳನ್ನು ನೋಡುವುದರ ಬಗ್ಗೆ ವ್ಯಾವಹಾರಿಕ ಬುದ್ಧಿವಾದ
ಆರಂಭದ ಭಾಷಣಗಳ ನಂತರ, ಅಮೆರಿಕದ ಬ್ರಾಂಚ್ ಸಿಬ್ಬಂದಿಯ ಸದಸ್ಯರಾದ ಗ್ಯಾರಿ ಬ್ರೊ ಮತ್ತು ವಿಲ್ಯಮ್ ಯಂಗ್ರವರು, ಸದ್ಯದಲ್ಲಿ ಮಿಷನೆರಿಗಳು ಸೇವೆಸಲ್ಲಿಸುತ್ತಿರುವಂಥ ದೇಶಗಳ ಬ್ರಾಂಚ್ ಕಮಿಟಿಗಳ ಸದಸ್ಯರುಗಳ ಮತ್ತು 41 ವರ್ಷಕಾಲ ಮಿಷನೆರಿ ಸೇವೆಯಲ್ಲಿದ್ದ ಒಂದು ದಂಪತಿಯ ಇಂಟರ್ವ್ಯೂ ಅನ್ನು ಮಾಡಿದರು. ಇವರಲ್ಲೊಬ್ಬರು ಹೇಳಿದ್ದು: “ತೀರ ಕನಿಷ್ಠ ಮಟ್ಟದ ವೈಯಕ್ತಿಕ ಸೌಕರ್ಯಗಳನ್ನು ಬಯಸುವವರೇ ತೀರ ಹೆಚ್ಚು ಸಮಯ ಉಳಿಯುತ್ತಾರೆ. ಏಕೆಂದರೆ ಅವರು ತಮ್ಮ ನೇಮಕಕ್ಕೆ ಬಂದಿರುವ ಕಾರಣದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಾರೆ. ಅವರು ಸುವಾರ್ತೆಯನ್ನು ಸಾರಲಿಕ್ಕಾಗಿ ಮತ್ತು ಯೆಹೋವನ ಬಗ್ಗೆ ತಿಳಿಯುವಂತೆ ಜನರಿಗೆ ಸಹಾಯಮಾಡಲಿಕ್ಕಾಗಿ ಬಂದಿದ್ದರೆಂಬುದು ಅವರಿಗೆ ತಿಳಿದಿದೆ.”
ಈ ಕಾರ್ಯಕ್ರಮವನ್ನು ಆಡಳಿತ ಮಂಡಲಿಯ ಇನ್ನೊಬ್ಬ ಸದಸ್ಯರಾದ ಡೇವಿಡ್ ಸ್ಪ್ಲೇನ್ರವರು “ನೀವು ಹೆಚ್ಚು ದೂರ ಹೋಗುತ್ತಿಲ್ಲ!” ಎಂಬ ಭಾಷಣದೊಂದಿಗೆ ಮುಕ್ತಾಯಗೊಳಿಸಿದರು. ಆದರೆ, ಅವರ ಮಾತಿನ ಅರ್ಥವೇನು? ಏಕೆಂದರೆ ಆ 46 ಮಂದಿ ಪದವೀಧರರು ಭೂಗೋಳದಾದ್ಯಂತವಿರುವ ದೇಶಗಳಿಗೆ ಈಗ ಕಳುಹಿಸಲ್ಪಡುವರಲ್ಲವೊ? ಅವರು ವಿವರಿಸಿದ್ದು: “ನೀವು ಭೂಮಿಯ ಮೇಲೆ ಎಲ್ಲಿಯೇ ಇರಲಿ, ನೀವು ಎಷ್ಟರ ವರೆಗೆ ನಂಬಿಗಸ್ತರಾಗಿರುತ್ತೀರೊ ಅಷ್ಟರ ವರೆಗೆ ದೇವರ ಆಲಯದಲ್ಲೇ ಇರುವಿರಿ.” ಹೌದು, ಎಲ್ಲಾ ನಂಬಿಗಸ್ತ ಕ್ರೈಸ್ತರು ಶಾರೀರಿಕವಾಗಿ ಎಲ್ಲಿಯೇ ಇರಲಿ, ಅವರು ಪ್ರಥಮ ಶತಮಾನದಲ್ಲಿ ಯೇಸುವಿನ ದೀಕ್ಷಾಸ್ನಾನದ ಸಮಯದಲ್ಲಿ ಅಸ್ತಿತ್ವಕ್ಕೆ ಬಂದಂಥ ದೇವರ ಮಹಾ ಆತ್ಮಿಕ ಆಲಯ ಇಲ್ಲವೆ ಮನೆಯ ಭಾಗವಾಗಿ ಸೇವೆಸಲ್ಲಿಸುತ್ತಿದ್ದಾರೆ. (ಇಬ್ರಿಯ 9:9) ಭೂಮಿಯ ಮೇಲಿರುವ ತಮ್ಮ ಎಲ್ಲಾ ನಂಬಿಗಸ್ತ ಸೇವಕರಿಗೆ ಯೆಹೋವನು ಹತ್ತಿರದಲ್ಲಿದ್ದಾನೆ ಎಂಬುದನ್ನು ತಿಳಿದಿರುವುದು ಎಂಥ ಸಾಂತ್ವನದಾಯಕ ಮಾತಾಗಿದೆ! ಯೇಸು ಭೂಮಿಯಲ್ಲಿದ್ದಾಗ ಯೆಹೋವನು ಅವನಲ್ಲಿ ಆಸಕ್ತಿವಹಿಸಿದಂತೆಯೇ, ನಾವು ಎಲ್ಲೇ ಇದ್ದರೂ ಆತನಿಗೆ ನಮ್ಮೆಲ್ಲರಲ್ಲಿ ಮತ್ತು ನಾವು ಆತನಿಗೆ ಸಲ್ಲಿಸುವ ಸೇವೆಯಲ್ಲಿ ಅಭಿರುಚಿಯಿದೆ. ಆದುದರಿಂದ ಆರಾಧನೆಯ ವಿಷಯಗಳಲ್ಲಿ ನಾವು ಪರಸ್ಪರರಿಂದಲೂ ಯೆಹೋವ ಹಾಗೂ ಯೇಸುವಿನಿಂದಲೂ ಎಂದಿಗೂ ದೂರವಿರುವುದಿಲ್ಲ.
ಲೋಕದ ಸುತ್ತಲಿಂದಲೂ ಪಡೆಯಲಾದಂಥ ಅಭಿನಂದನೆಗಳನ್ನು ಅಂಗೀಕರಿಸಿದ ನಂತರ, ನೇಮಕಗಳ ಪ್ರಕಟನೆ, ಮತ್ತು ಗಿಲ್ಯಡ್ ಶಾಲೆಯಲ್ಲಿ ಪಡೆಯಲಾದ ತರಬೇತಿಗಾಗಿ ಗಣ್ಯತೆಯನ್ನು ವ್ಯಕ್ತಪಡಿಸಿದ ಒಂದು ಪತ್ರವನ್ನು ಓದಲಾಯಿತು. ಆಮೇಲೆ ಅಧ್ಯಕ್ಷರು ಆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಮಾಪ್ತಿಗೊಳಿಸಿದರು. ಹೊಸ ಮಿಷನೆರಿಗಳು ತಮ್ಮ ಒಳ್ಳೇ ಕಾರ್ಯವನ್ನು ಮುಂದುವರಿಸುವಂತೆ ಮತ್ತು ಯೆಹೋವನ ಸೇವೆಯಲ್ಲಿ ಹರ್ಷಿಸುವಂತೆ ಅವರು ಉತ್ತೇಜಿಸಿದರು.—ಫಿಲಿಪ್ಪಿ 3:1.
[ಪುಟ 23ರಲ್ಲಿರುವ ಚೌಕ]
ತರಗತಿಯ ಅಂಕಿಅಂಶಗಳು
ಪ್ರತಿನಿಧಿಸಲ್ಪಟ್ಟ ದೇಶಗಳ ಸಂಖ್ಯೆ: 14
ನೇಮಿಸಲ್ಪಟ್ಟ ದೇಶಗಳ ಸಂಖ್ಯೆ: 19
ವಿದ್ಯಾರ್ಥಿಗಳ ಸಂಖ್ಯೆ: 46
ಸರಾಸರಿ ಪ್ರಾಯ: 35.0
ಸತ್ಯದಲ್ಲಿ ಸರಾಸರಿ ವರ್ಷಗಳು: 17.2
ಪೂರ್ಣ ಸಮಯದ ಶುಶ್ರೂಷೆಯಲ್ಲಿ ಸರಾಸರಿ ವರ್ಷಗಳು: 13.7
[ಪುಟ 24ರಲ್ಲಿರುವ ಚಿತ್ರ]
ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನಿಂದ ಪದವಿಯನ್ನು ಪಡೆದ 113ನೆಯ ತರಗತಿ
ಈ ಕೆಳಗಿರುವ ಪಟ್ಟಿಯಲ್ಲಿ, ಸಾಲುಗಳು ಮುಂದಿನಿಂದ ಹಿಂದಕ್ಕೆ ಎಣಿಸಲ್ಪಟ್ಟು, ಪ್ರತಿ ಸಾಲಿನಲ್ಲಿರುವ ಹೆಸರುಗಳು ಎಡದಿಂದ ಬಲಕ್ಕೆ ಪಟ್ಟಿಮಾಡಲ್ಪಟ್ಟಿವೆ.
(1) ಲಿಕ್ಟ್ಹಾರ್ಟ್, ಎಮ್.; ಹೋಸೋಈ, ಎಸ್.; ಬರ್ಕ್ಟೋಲ್ಡ್, ಎ.; ಲೀಮ್, ಸಿ.; ಆವೋಕೀ, ಜೆ. (2) ಬಾಗೀಆಶ್, ಜೆ.; ಬೂಕೇ, ಎಸ್.; ಬೋಸೀ, ಎ.; ಆಲ್ಟನ್, ಜೆ.; ಏಸ್ಕೋಬಾರ್, ಈ.; ಏಸ್ಕೋಬಾರ್, ಎಫ್. (3) ಸ್ಟಾಲ್ಕಾ, ಎ.; ಸ್ಟಾಲ್ಕಾ, ಡಿ.; ಫ್ರೀಮುತ್, ಎಸ್.; ಕಾರ್ಲ್ಸನ್, ಎಮ್.; ಲಬ್ಲಾಂಕ್, ಆರ್. (4) ಬ್ಯಾಂಕೀ, ಆರ್.; ಬ್ಯಾಂಕೀ, ಎಸ್.; ಕಾಮಿನ್ಸ್ಕೀ, ಎಲ್.; ಜೋಸೆಫ್, ಎಲ್.; ಪ್ಯಾರಿಸ್, ಎಸ್.; ಲಬ್ಲಾಂಕ್, ಎಲ್. (5) ಪ್ಯಾರಿಸ್, ಎಮ್.; ಸ್ಕಿಡ್ಮಾರ್, ಬಿ.; ಹಾರ್ಟನ್, ಜೆ.; ಹಾರ್ಟನ್, ಎಲ್.; ಸ್ಕಿಡ್ಮಾರ್, ಜಿ. (6) ಲೀಮ್, ಬಿ.; ಆಲ್ಟನ್, ಜಿ.; ಕ್ವಿರೀಸೀ, ಇ.; ಲಾಂಗ್ಲ್ವಾ, ಎಮ್.; ಸ್ಟೈನಿಂಗ, ಎಸ್.; ಆವೋಕೀ, ಎಚ್. (7) ಲಾಂಗ್ಲ್ವಾ, ಜೆ.; ಸ್ಟೈನಿಂಗ, ಎಮ್.; ಬೋಸೀ, ಎಫ್.; ಕಾಮಿನ್ಸ್ಕೀ, ಜೆ.; ಬೂಕೇ, ಜೆ.; ಲಿಕ್ಟ್ಹಾರ್ಟ್, ಇ.; ಹೋಸೋಈ, ಕೆ. (8) ಬಾಗೀಆಶ್, ಜೆ.; ಕ್ವಿರೀಸೀ, ಎಮ್.; ಕಾರ್ಲ್ಸನ್, ಎಲ್.; ಫ್ರೀಮುತ್, ಸಿ.; ಬರ್ಕ್ಟೋಲ್ಡ್, ಡಬ್ಲ್ಯೂ.; ಜೋಸೆಫ್, ಆರ್.