‘ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಯೆಹೋವನ ಸಾಕ್ಷಿಗಳಿಗೆ ಉಪಕಾರ ಹೇಳಿ’
‘ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಯೆಹೋವನ ಸಾಕ್ಷಿಗಳಿಗೆ ಉಪಕಾರ ಹೇಳಿ’
“ಯೆಹೋವನ ಸಾಕ್ಷಿಗಳನ್ನು ನೋಡಿದ ಕೂಡಲೇ, ಬಾಗಿಲನ್ನು ಮುಚ್ಚಿಕೊಳ್ಳುವ ಮುಂಚೆ, ಅವರು ಸ್ವಲ್ಪ ಸಮಯದ ಹಿಂದೆ ಅನುಭವಿಸಿರುವ ಅವಮಾನಕರವಾದ ಹಿಂಸೆಯ ಕುರಿತಾಗಿಯೂ, ನಾವೆಲ್ಲರೂ ಆನಂದಿಸುತ್ತಿರುವ ಫಸ್ಟ್ ಅಮೆಂಡ್ಮೆಂಟ್ನ ಸ್ವಾತಂತ್ರ್ಯಗಳಿಗೆ ಅವರ ದೊಡ್ಡ ಸಹಾಯದ ಕುರಿತೂ ಒಂದು ಕ್ಷಣ ಯೋಚಿಸಿ” ಎಂದು ಯು.ಎಸ್.ಎ ಟುಡೇ ಎಂಬ ವಾರ್ತಾಪತ್ರಿಕೆಯಲ್ಲಿನ ಒಂದು ಲೇಖನವು ಹೇಳಿತು. ಧ್ವಜವಂದನೆ ಮಾಡಲು ನಿರಾಕರಿಸಿದ್ದಕ್ಕಾಗಿ ಮಾತ್ರವಲ್ಲದೆ ಬೇರೆ ಕೆಲವೊಂದು ಕಾರಣಗಳಿಗಾಗಿ, ಯೆಹೋವನ ಸಾಕ್ಷಿಗಳು 1940ರ ದಶಕದಾದ್ಯಂತ ಅಮೆರಿಕದಲ್ಲಿ ಹಿಂಸಿಸಲ್ಪಟ್ಟರು.—ವಿಮೋಚನಕಾಂಡ 20:4, 5.
ಇಸವಿ 1938 ಮತ್ತು 1943ರ ನಡುವಿನ ಐದು ವರ್ಷಗಳ ಅವಧಿಯಲ್ಲಿ, ಯೆಹೋವನ ಸಾಕ್ಷಿಗಳನ್ನೊಳಗೊಂಡ ಸುಮಾರು 30 ಮೊಕದ್ದಮೆಗಳು ಅಮೆರಿಕದ ಸರ್ವೋಚ್ಚ ನ್ಯಾಯಾಲಯದಲ್ಲಿ ಮಂಡಿಸಲ್ಪಟ್ಟವು. ಅದೇ ಲೇಖನವು ಹೇಳಿದ್ದು: “ಫಸ್ಟ್ ಅಮೆಂಡ್ಮೆಂಟನ್ನು ಒಳಗೊಂಡಿರುವ ಮೂಲಭೂತ ವಿವಾದಾಂಶಗಳನ್ನು ಸಾಕ್ಷಿಗಳು ಎಷ್ಟು ಬಾರಿ ಎಬ್ಬಿಸಿದರೆಂದರೆ, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಹಾರ್ಲನ್ ಫಿಸ್ಕಿ ಸ್ಟೋನ್ ಬರೆದುದು, ‘ಪೌರ ಸ್ವಾತಂತ್ರ್ಯಗಳ ಕುರಿತಾದ ಕಾನೂನು ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಯೆಹೋವನ ಸಾಕ್ಷಿಗಳು ಕೊಡುವ ನೆರವನ್ನು ಮನಸ್ಸಿನಲ್ಲಿಟ್ಟು ಅವರಿಗೆ ವರಮಾನವನ್ನು ಕೊಡತಕ್ಕದ್ದು.’”
ಆದುದರಿಂದ, ಲೇಖನದ ಸಮಾಪ್ತಿಯಲ್ಲಿ ಹೀಗೆ ಹೇಳಲಾಗಿದೆ: “[ಧಾರ್ಮಿಕ] ಸ್ವಾತಂತ್ರ್ಯದ ವಿಸ್ತರಣೆಗಾಗಿ ಎಲ್ಲ ಧರ್ಮಗಳು ಯೆಹೋವನ ಸಾಕ್ಷಿಗಳಿಗೆ ಉಪಕಾರ ಹೇಳಬೇಕು.”
[ಪುಟ 32ರಲ್ಲಿರುವ ಚಿತ್ರ ಕೃಪೆ]
ಹಿನ್ನೆಲೆ, ಕಟ್ಟಡ: Photo by Josh Mathes, Collection of the Supreme Court of the United States; ಕೆಳಗೆ ಎಡಭಾಗದಲ್ಲಿ, ನ್ಯಾಯಾಧೀಶರು: Collection of the Supreme Court of the United States