ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಬ್ಬ ಕನ್ನಡಕ ವ್ಯಾಪಾರಿ ಬೀಜವೊಂದನ್ನು ಬಿತ್ತುತ್ತಾನೆ

ಒಬ್ಬ ಕನ್ನಡಕ ವ್ಯಾಪಾರಿ ಬೀಜವೊಂದನ್ನು ಬಿತ್ತುತ್ತಾನೆ

ಒಬ್ಬ ಕನ್ನಡಕ ವ್ಯಾಪಾರಿ ಬೀಜವೊಂದನ್ನು ಬಿತ್ತುತ್ತಾನೆ

ಯೂಕ್ರೇನಿನ ಲವೇಫ್‌ನಲ್ಲಿರುವ ಒಬ್ಬ ಕನ್ನಡಕ ವ್ಯಾಪಾರಿಯ ಪ್ರಯತ್ನಗಳಿಗೂ, ಸುಮಾರು 2,000 ಕಿಲೊಮೀಟರುಗಳಷ್ಟು ದೂರ ಮತ್ತು ಹಲವಾರು ರಾಷ್ಟ್ರಗಳಷ್ಟು ದೂರದಲ್ಲಿರುವ ಇಸ್ರೈಲ್‌ನ ಹೈಫಾದಲ್ಲಿರುವ ಯೆಹೋವನ ಸಾಕ್ಷಿಗಳ ರಷ್ಯನ್‌ ಭಾಷೆಯ ಸಭೆಯ ರಚನೆಗೂ ಏನು ಸಂಬಂಧ? ಇದರ ಕಥೆಯು, ಪ್ರಸಂಗಿ 11:6ರಲ್ಲಿರುವ ಬೈಬಲಿನ ಮಾತುಗಳ ಸತ್ಯತೆಯನ್ನು ರುಜುಪಡಿಸುತ್ತದೆ. ಆ ವಚನವು ಹೀಗನ್ನುತ್ತದೆ: “ಮುಂಜಾನೆ ಬೀಜಬಿತ್ತು, ಸಂಜೆಯ ತನಕ ಕೈದೆಗೆಯಬೇಡ; ಇದು ಸಫಲವೋ, ಅದು ಸಫಲವೋ, ಒಂದು ವೇಳೆ ಎರಡೂ ಚೆನ್ನಾಗುವವೋ ನಿನಗೆ ತಿಳಿಯದು.”

ಈಕಥೆಯು ಶುರುವಾದದ್ದು 1990ರಲ್ಲಿ. ಆ ಸಮಯದಲ್ಲಿ, ಯೆಹೂದಿ ಹಿನ್ನಲೆಯವಳಾಗಿದ್ದ ಇಲಾ ಎಂಬ ಒಬ್ಬ ಯುವ ಮಹಿಳೆಯು, ಲವೇಫ್‌ನಲ್ಲಿ ವಾಸಿಸುತ್ತಿದ್ದಳು. ಇಲಾ ಮತ್ತು ಅವಳ ಕುಟುಂಬವು, ಇಸ್ರೈಲ್‌ಗೆ ವಲಸೆಹೋಗಲು ತಯಾರಿ ನಡೆಸುತ್ತಾ ಇತ್ತು. ಆದರೆ ಅಲ್ಲಿಂದ ಹೋಗುವ ಸ್ವಲ್ಪ ಸಮಯದ ಮುಂಚೆ, ಇಲಾಳಿಗೆ ಒಬ್ಬ ಕನ್ನಡಕ ವ್ಯಾಪಾರಿಯೊಂದಿಗೆ ಒಂದು ಅಪಾಯಿಂಟ್‌ಮೆಂಟ್‌ ಇತ್ತು. ಇವನು ಒಬ್ಬ ಯೆಹೋವನ ಸಾಕ್ಷಿಯಾಗಿದ್ದನು. ಆ ಸಮಯದಲ್ಲಿ ಯೂಕ್ರೇನ್‌ನಲ್ಲಿ ಯೆಹೋವನ ಸಾಕ್ಷಿಗಳ ಕೆಲಸದ ಮೇಲೆ ನಿಷೇಧವಿದ್ದರೂ, ಈ ಕನ್ನಡಕ ವ್ಯಾಪಾರಿಯು ಇಲಾಳಿಗೆ ತನ್ನ ಬೈಬಲ್‌ ಆಧಾರಿತ ನಂಬಿಕೆಗಳನ್ನು ತಿಳಿಸಲು ಮೊದಲ ಹೆಜ್ಜೆಯನ್ನು ತೆಗೆದುಕೊಂಡನು. ದೇವರಿಗೆ ಒಂದು ವೈಯಕ್ತಿಕ ಹೆಸರಿದೆಯೆಂದು ಅವನು ಹೇಳಿದಾಗ ಅವಳಿಗೆ ಆಶ್ಚರ್ಯವಾಯಿತು. ಇದು ಇಲಾಳ ಕುತೂಹಲವನ್ನು ಕೆರಳಿಸಿ, ಅಲ್ಲಿ ಒಂದು ಒಳ್ಳೆಯ ಬೈಬಲ್‌ ಚರ್ಚೆಯು ನಡೆಯಿತು.

ಇಲಾಳಿಗೆ ಆ ಚರ್ಚೆಯು ಎಷ್ಟು ಇಷ್ಟವಾಯಿತೆಂದರೆ, ಅವಳು ಮುಂದಿನ ವಾರ ಮತ್ತು ಅದರ ನಂತರದ ವಾರವೂ ಇಂತಹ ಚರ್ಚೆಗಾಗಿ ಕೇಳಿಕೊಂಡಳು. ಅವಳ ಆಸಕ್ತಿಯು ಬೆಳೆಯುತ್ತಾ ಇತ್ತು. ಆದರೆ ಒಂದು ಸಮಸ್ಯೆಯಿತ್ತು. ಅವಳ ಕುಟುಂಬವು ಇಸ್ರೈಲ್‌ಗೆ ಹೊರಟುಹೋಗುವ ಸಮಯವು ಹತ್ತಿರ ಬರುತ್ತಾ ಇತ್ತು. ಮತ್ತು ಇಲಾಳಿಗೆ ಇನ್ನೂ ಎಷ್ಟೊ ವಿಷಯಗಳನ್ನು ಕಲಿಯಲಿಕ್ಕಿತ್ತು! ಉಳಿದಿದ್ದ ಸಮಯದ ಪೂರ್ಣ ಲಾಭವನ್ನು ಪಡೆಯಲಿಕ್ಕಾಗಿ, ಅವಳು ದೇಶವನ್ನು ಬಿಟ್ಟುಹೋಗುವ ವರೆಗೂ ಪ್ರತಿಯೊಂದು ದಿನವು ಒಂದು ಬೈಬಲ್‌ ಅಭ್ಯಾಸವನ್ನು ನಡೆಸಲಿಕ್ಕಾಗಿ ವಿನಂತಿಸಿದಳು. ಅನಂತರ, ಇಲಾ ಇಸ್ರೈಲ್‌ಗೆ ತಲಪಿದ ಕೂಡಲೇ ತನ್ನ ಬೈಬಲ್‌ ಅಭ್ಯಾಸವನ್ನು ಆರಂಭಿಸದಿದ್ದರೂ, ಸತ್ಯದ ಬೀಜವು ಅವಳ ಹೃದಯದಲ್ಲಿ ಬೇರುಬಿಡಲಾರಂಭಿಸಿತು. ಆ ವರ್ಷದ ಅಂತ್ಯದಷ್ಟಕ್ಕೆ, ಅವಳು ಪುನಃ ಒಮ್ಮೆ ತೀವ್ರ ಆಸಕ್ತಿಯೊಂದಿಗೆ ಬೈಬಲನ್ನು ಅಭ್ಯಾಸಿಸುವುದನ್ನು ಆರಂಭಿಸಿದಳು.

ಪರ್ಷಿಯ ಕೊಲ್ಲಿಯಲ್ಲಿ ಯುದ್ಧವು ಆರಂಭವಾಗಿ, ಇಸ್ರೈಲ್‌ ಮೇಲೆ ಇರಾಕ್‌ ಕ್ಷಿಪಣಿಗಳ ದಾಳಿಯನ್ನು ಆರಂಭಿಸಿತು. ಇದರ ಕುರಿತಾಗಿ ಎಲ್ಲ ಕಡೆಗಳಲ್ಲೂ ಚರ್ಚೆ ನಡೆಯುತ್ತಿತ್ತು. ಒಂದು ದಿನ ಒಂದು ಸೂಪರ್‌ಮಾರ್ಕೆಟ್‌ನಲ್ಲಿ, ಹೊಸತಾಗಿ ಇಸ್ರಾಯೇಲ್‌ಗೆ ವಲಸೆಬಂದಿದ್ದ, ರಷ್ಯನ್‌ ಭಾಷೆಯನ್ನಾಡುವ ಒಂದು ಕುಟುಂಬವು ಸಂಭಾಷಿಸುತ್ತಿರುವುದನ್ನು ಕೇಳಿಸಿಕೊಂಡಳು. ಅವಳು ಸ್ವತಃ ಬೈಬಲನ್ನು ಕೇವಲ ಅಭ್ಯಾಸಮಾಡುತ್ತಿದ್ದಳಾದರೂ, ಅವಳು ಆ ಕುಟುಂಬವನ್ನು ಸಮೀಪಿಸಿ, ಒಂದು ಶಾಂತಿಪೂರ್ಣ ಲೋಕದ ಕುರಿತಾದ ಬೈಬಲಿನ ವಾಗ್ದಾನದ ಕುರಿತಾಗಿ ಅವರೊಂದಿಗೆ ಮಾತಾಡಿದಳು. ಫಲಿತಾಂಶವಾಗಿ, ಅಜ್ಜಿಯಾಗಿದ್ದ ಗ್ಯಾಲೀನ, ತಾಯಿ ನಾಟಾಶ, ಮಗ ಸಾಶ (ಏರಿಯಲ್‌) ಮತ್ತು ಮಗಳು ಈಲಾನ, ಇವರೆಲ್ಲರೂ ಇಲಾಳ ಬೈಬಲ್‌ ಅಭ್ಯಾಸದಲ್ಲಿ ಒಳಗೂಡಿದರು.

ಆ ಕುಟುಂಬದಲ್ಲಿ ದೀಕ್ಷಾಸ್ನಾನದ ಹಂತವನ್ನು ಮೊದಲು ತಲಪಿದವನು ಸಾಶ. ಅದು ಸಹ ಅನೇಕ ಪರೀಕ್ಷೆಗಳ ಎದುರಿನಲ್ಲಿ. ಅವನೊಬ್ಬ ಮನ್ನಣೆಪಡೆದ ವಿದ್ಯಾರ್ಥಿಯಾಗಿದ್ದರೂ, ಅವನನ್ನು ಶಾಲೆಯಿಂದ ಹೊರಹಾಕಲಾಯಿತು. ಯಾಕೆಂದರೆ, ಶಾಲೆಯ ಪಠ್ಯಕ್ರಮದ ಆವಶ್ಯಕ ಭಾಗವಾಗಿದ್ದ ಮಿಲಿಟರಿಪೂರ್ವ ತರಬೇತಿಯಲ್ಲಿ ಸೇರಲು ಅವನ ಕ್ರೈಸ್ತ ಮನಸ್ಸಾಕ್ಷಿಯು ಅವನನ್ನು ಅನುಮತಿಸಲಿಲ್ಲ. (ಯೆಶಾಯ 2:​2-4) ಸಾಶವಿನ ಮೊಕದ್ದಮೆಯು ಜೆರೂಸಲೇಮಿನಲ್ಲಿರುವ ಇಸ್ರೇಲಿನ ಉಚ್ಛ ನ್ಯಾಯಾಲಯದ ವರೆಗೆ ಹೋಯಿತು. ಸಂತೋಷದ ಸಂಗತಿಯೇನೆಂದರೆ, ಸಾಶ ತನ್ನ ಆ ಶಾಲಾ ವರ್ಷವನ್ನು ಮುಗಿಸಲು ಸಾಧ್ಯವಾಗುವಂತೆ ಪುನಃ ಶಾಲೆಗೆ ಸೇರಿಸಲ್ಪಡುವ ಆಜ್ಞೆಯನ್ನು ಹೊರಡಿಸಲಾಯಿತು. ಈ ಮೊಕದ್ದಮೆಯು ಇಡೀ ದೇಶದಲ್ಲಿ ಪ್ರಚಾರವನ್ನು ಪಡೆಯಿತು. ಇದರಿಂದಾಗಿ, ಅನೇಕ ಇಸ್ರೈಲಿ ಜನರಿಗೆ ಯೆಹೋವನ ಸಾಕ್ಷಿಗಳ ನಂಬಿಕೆಗಳ ಕುರಿತಾಗಿ ತಿಳಿದುಬಂತು. *

ಪ್ರೌಢ ಶಾಲೆಯಿಂದ ಉತ್ತೀರ್ಣನಾದ ನಂತರ, ಸಾಶ ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಸೇವೆಯನ್ನು ಆರಂಭಿಸಿದನು. ಇಂದು, ಅವನೊಬ್ಬ ವಿಶೇಷ ಪಯನೀಯರ್‌ ಮತ್ತು ಸಭಾ ಹಿರಿಯನಾಗಿದ್ದಾನೆ. ಅವನ ತಂಗಿ, ಈಲಾನಾ ಸಹ ಅವನೊಂದಿಗೆ ಪೂರ್ಣ ಸಮಯದ ಸೇವೆಯಲ್ಲಿ ಸೇರಿದ್ದಾಳೆ. ಅವರ ತಾಯಿ ಮತ್ತು ಅವರ ಅಜ್ಜಿ ಇಬ್ಬರೂ ದೀಕ್ಷಾಸ್ನಾನ ಪಡೆದಿರುವ ಸಾಕ್ಷಿಗಳಾಗಿದ್ದಾರೆ. ಆ ಕನ್ನಡಕ ವ್ಯಾಪಾರಿಯು ಬಿತ್ತಿದಂತಹ ಬೀಜವು ಈಗಲೂ ಫಲವನ್ನು ಕೊಡುತ್ತಾ ಇದೆ!

ಈ ನಡುವೆ, ಇಲಾ ಆತ್ಮಿಕ ಪ್ರಗತಿ ಮಾಡುತ್ತಾ ಇದ್ದಳು ಮತ್ತು ಮನೆಯಿಂದ ಮನೆಗೆ ಸಾರುವುದನ್ನು ಆರಂಭಿಸಿದಳು. ಅವಳು ಹೋದಂಥ ಮೊಟ್ಟಮೊದಲ ಮನೆಯಲ್ಲೇ ಇಲಾ, ಫೆಯೀನ ಎಂಬವಳನ್ನು ಭೇಟಿಯಾದಳು. ಇವಳು ಇತ್ತೀಚೆಗೆ ಯೂಕ್ರೇನಿನಿಂದ ಆಗಮಿಸಿದ್ದಳು. ಮತ್ತು ಅವಳು ಖಿನ್ನತೆಯಿಂದ ನರಳುತ್ತಿದ್ದಳು. ತಾನು ಫೆಯೀನಾಳ ಬಾಗಿಲನ್ನು ತಟ್ಟುವ ಸ್ವಲ್ಪ ಮುಂಚೆ, ಈ ಸಂಕಟಗ್ರಸ್ತ ಸ್ತ್ರೀಯು ದೇವರಿಗೆ, “ನೀನು ಯಾರೆಂದು ನನಗೆ ಗೊತ್ತಿಲ್ಲ, ಆದರೆ ನೀನು ಕಿವಿಗೊಡುತ್ತಿರುವಲ್ಲಿ, ನನಗೆ ಸಹಾಯಮಾಡು” ಎಂದು ಪ್ರಾರ್ಥಿಸಿದ್ದಳೆಂದು, ಅನಂತರ ಇಲಾಳಿಗೆ ತಿಳಿದುಬಂತು. ಆ ಹೆಂಗಸು ಮತ್ತು ಇಲಾ ಒಂದು ಒಳ್ಳೆಯ ಚರ್ಚೆಯನ್ನು ನಡೆಸಿದರು. ಫೆಯೀನಾ ಅನೇಕ ಪ್ರಶ್ನೆಗಳನ್ನು ಕೇಳಿದಳು ಮತ್ತು ಅವಳಿಗೆ ಇಲಾ ಕೊಟ್ಟಂತಹ ಉತ್ತರಗಳನ್ನು ಜಾಗರೂಕತೆಯಿಂದ ಪರೀಕ್ಷಿಸಿನೋಡಿದಳು. ಹೀಗೆ, ಯೆಹೋವನ ಸಾಕ್ಷಿಗಳು ಬೈಬಲಿನಿಂದ ಸತ್ಯವನ್ನು ಕಲಿಸುತ್ತಾರೆಂಬ ಸಂಗತಿಯು ಸಕಾಲದಲ್ಲಿ ಅವಳಿಗೆ ಮನದಟ್ಟಾಯಿತು. ಸಭೆಯೊಂದಿಗೆ ಮತ್ತು ಸಾರುವ ಕೆಲಸದಲ್ಲಿ ಹೆಚ್ಚಿನ ಸಮಯವನ್ನು ಕಳೆಯಲು ಸಾಧ್ಯವಾಗುವಂತೆ ಅವಳು ತನ್ನ ವಿಶ್ವವಿದ್ಯಾಲಯದ ವ್ಯಾಸಂಗದ ಕಾರ್ಯಕ್ರಮದಲ್ಲಿ ಹೊಂದಾಣಿಕೆಗಳನ್ನು ಮಾಡಿದಳು. ಮೇ 1994ರಲ್ಲಿ, ಫಾಯೀನಾಳ ದೀಕ್ಷಾಸ್ನಾನವಾಯಿತು. ಅವಳು ಪಯನೀಯರ್‌ ಸೇವೆಯನ್ನು ಆರಂಭಿಸಿದಳು, ಮತ್ತು ತನ್ನನ್ನೇ ಪೋಷಿಸಲಿಕ್ಕಾಗಿ ಕಂಪ್ಯೂಟರ್‌ ಕ್ಷೇತ್ರದಲ್ಲಿ ಅಂಶಕಾಲಿಕ ಕೆಲಸವನ್ನು ಪಡೆದಳು.

1994ರ ನವೆಂಬರ್‌ನಲ್ಲಿ ಇಲಾ ಸಾರುವ ಕೆಲಸದಲ್ಲಿ ತೊಡಗಿದ್ದಾಗ, ಅವಳಿಗೆ ತುಂಬ ನಿಶ್ಶಕ್ತಿಯ ಅನಿಸಿಕೆಯಾಯಿತು. ಅವಳು ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿದಾಗ, ಅವಳ ಕರುಳಿನಲ್ಲಿ ರಕ್ತಸ್ರವಿಸುತ್ತಿರುವ ಹುಣ್ಣು ಇದೆಯೆಂಬುದು ಗೊತ್ತಾಯಿತು. ಆ ಸಾಯಂಕಾಲದೊಳಗೆ ಇಲಾಳ ಹೀಮೊಗ್ಲಾಬಿನ್‌ ಎಣಿಕೆಯು 7.2ಕ್ಕೆ ಇಳಿದಿತ್ತು. ಇಲಾಳ ಸಭೆಯಲ್ಲಿನ ಒಬ್ಬ ಹಿರಿಯನು, ಮತ್ತು ಸ್ಥಳಿಕ ಹಾಸ್ಪಿಟಲ್‌ ಲಿಯೆಸಾನ್‌ ಕಮಿಟಿಯ ಅಧ್ಯಕ್ಷನು, ರಕ್ತವನ್ನು ಉಪಯೋಗಿಸುವ ಅಗತ್ಯವಿಲ್ಲದ ಅಸಂಖ್ಯಾತ ವೈದ್ಯಕೀಯ ಕಾರ್ಯವಿಧಾನಗಳ ಕುರಿತಾದ ಮಾಹಿತಿಯನ್ನು ವೈದ್ಯರಿಗೆ ಕೊಟ್ಟರು. * ರಕ್ತವನ್ನು ಕೊಡದೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಕರವಾಗಿ ಮಾಡಲಾಯಿತು ಮತ್ತು ಇಲಾ ಸಂಪೂರ್ಣವಾಗಿ ಗುಣಮುಖವಾದಳು.​—ಅ. ಕೃತ್ಯಗಳು 15:​28, 29.

ಇಲಾಳ ಸ್ತ್ರೀರೋಗತಜ್ಞನಾದ ಕಾರ್ಲ್‌ ಇದರಿಂದಾಗಿ ತುಂಬ ಪ್ರಭಾವಿತನಾದನು. ಅವನು ಜರ್ಮನಿಯಲ್ಲಿ ಹುಟ್ಟಿರುವ ಒಬ್ಬ ಯೆಹೂದಿಯಾಗಿದ್ದನು. ಯೆಹೂದ್ಯರ ಸಾಮೂಹಿಕ ಹತ್ಯಾಕಾಂಡದಿಂದ ಪಾರಾಗಿದ್ದ ತನ್ನ ಹೆತ್ತವರಿಗೆ, ಆ ಕೂಟ ಶಿಬಿರಗಳಲ್ಲಿದ್ದ ಯೆಹೋವನ ಸಾಕ್ಷಿಗಳ ಬಗ್ಗೆ ತಿಳಿದಿತ್ತೆಂಬುದನ್ನು ಅವನು ಜ್ಞಾಪಿಸಿಕೊಂಡನು. ಕಾರ್ಲ್‌ ಅನೇಕ ಪ್ರಶ್ನೆಗಳನ್ನು ಕೇಳಿದನು. ತನ್ನ ವೈದ್ಯ ವೃತ್ತಿಯಿಂದಾಗಿ ಅವನು ತುಂಬ ಕಾರ್ಯಮಗ್ನನಾಗಿರುತ್ತಿದ್ದರೂ, ಕ್ರಮವಾದ ಬೈಬಲ್‌ ಅಭ್ಯಾಸಕ್ಕಾಗಿ ಕಾರ್ಲ್‌ ಸಮಯ ಮಾಡಿದನು. ಮುಂದಿನ ವರ್ಷದೊಳಗೆ, ಅವನು ಸಾಪ್ತಾಹಿಕ ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಿದ್ದನು.

ಆ ಕನ್ನಡಕ ವ್ಯಾಪಾರಿಯಿಂದ ಬಿತ್ತಲ್ಪಟ್ಟ ಬೀಜದಿಂದಾಗಿ ಏನು ಫಲಿಸಿದೆ? ಸಾಶ ಮತ್ತು ಅವನ ಕುಟುಂಬದೊಂದಿಗೆ ಏನಾಯಿತು ಎಂಬುದನ್ನು ನಾವು ಈಗಾಗಲೇ ನೋಡಿದ್ದೇವೆ. ಇಲಾ ಒಬ್ಬ ವಿಶೇಷ ಪಯನೀಯರಳಾಗಿದ್ದಾಳೆ. ಅವಳ ಮಗಳಾದ ಈನ, ತನ್ನ ಪ್ರೌಢ ಶಾಲೆಯನ್ನು ಈಗಷ್ಟೇ ಮುಗಿಸಿ, ಒಬ್ಬ ಪಯನೀಯರಳೋಪಾದಿ ತನ್ನ ಸ್ವಂತ ಜೀವನ ವೃತ್ತಿಯನ್ನು ಆರಂಭಿಸಲಿದ್ದಾಳೆ. ಫಾಯೀನಾ ಸಹ ಒಬ್ಬ ವಿಶೇಷ ಪಯನೀಯರಳಾಗಿದ್ದಾಳೆ. ಇಲಾಳ ಸ್ತ್ರೀರೋಗತಜ್ಞ ಕಾರ್ಲ್‌ ಈಗ ಒಬ್ಬ ದೀಕ್ಷಾಸ್ನಾನಿತ ಸಾಕ್ಷಿ ಮತ್ತು ಶುಶ್ರೂಷಾ ಸೇವಕನಾಗಿದ್ದಾನೆ. ಮತ್ತು ಇವನು ತನ್ನ ರೋಗಿಗಳೊಂದಿಗೆ ಮತ್ತು ಇತರರೊಂದಿಗೆ ಬೈಬಲ್‌ ಸತ್ಯದ ಗುಣಪಡಿಸುವಂಥ ಶಕ್ತಿಯನ್ನು ಹಂಚುತ್ತಿದ್ದಾನೆ.

ಹೈಫಾ ಹೀಬ್ರೂ ಸಭೆಯ ಭಾಗದೋಪಾದಿ ಆರಂಭವಾದ ರಷ್ಯನ್‌ ಭಾಷೆಯನ್ನಾಡುತ್ತಿದ್ದ ವಲಸೆಗಾರರ ಚಿಕ್ಕ ಗುಂಪು, ಈಗ 120 ರಾಜ್ಯ ಪ್ರಚಾರಕರಿರುವ ಹುರುಪಿನ ರಷ್ಯನ್‌ ಸಭೆಯಾಗಿಬಿಟ್ಟಿದೆ. ಈ ವೃದ್ಧಿಯು ಸಾಧ್ಯವಾದದ್ದು ಹೇಗೆ? ಲವೇಫ್‌ನಲ್ಲಿರುವ ಒಬ್ಬ ಕನ್ನಡಕ ವ್ಯಾಪಾರಿಯು, ಬೀಜವನ್ನು ಬಿತ್ತಲು ಸಿಕ್ಕಿದಂಥ ಅವಕಾಶವನ್ನು ಸದುಪಯೋಗಿಸಿದ್ದರಿಂದಲೇ!

[ಪಾದಟಿಪ್ಪಣಿಗಳು]

^ ಪ್ಯಾರ. 6 ಹೆಚ್ಚಿನ ವಿವರಗಳಿಗಾಗಿ, ಅವೇಕ್‌! ಪತ್ರಿಕೆಯ, 1994ರ ನವೆಂಬರ್‌ 8ನೇ ಸಂಚಿಕೆಯ 12-15ನೆಯ ಪುಟಗಳನ್ನು ನೋಡಿರಿ.

^ ಪ್ಯಾರ. 9 ಎಚ್‌ಎಲ್‌ಸಿಗಳು ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳನ್ನು ಪ್ರತಿನಿಧಿಸುತ್ತಾ, ರೋಗಿ ಮತ್ತು ಆಸ್ಪತ್ರೆ ಸಿಬ್ಬಂದಿಯ ನಡುವಿನ ಸಂವಾದವನ್ನು ಸರಾಗಗೊಳಿಸುತ್ತವೆ. ಅತ್ಯಾಧುನಿಕವಾದ ವೈದ್ಯಕೀಯ ಸಂಶೋಧನೆಯ ಮೇಲೆ ಆಧಾರಿತವಾದ ಬದಲಿ ವೈದ್ಯಕೀಯ ಉಪಚಾರದ ಕುರಿತಾಗಿ ಅವರು ಮಾಹಿತಿಯನ್ನೂ ಒದಗಿಸುತ್ತಾರೆ.

[ಪುಟ 29ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಯೂಕ್ರೇನ್‌

ಇಸ್ರೈಲ್‌

[ಕೃಪೆ]

Mountain High Maps® Copyright © 1997 Digital Wisdom, Inc.

[ಪುಟ 30ರಲ್ಲಿರುವ ಚಿತ್ರಗಳು]

ಇಲಾ ಮತ್ತು ಅವಳ ಮಗಳಾದ ಈನಾ

[ಪುಟ 31ರಲ್ಲಿರುವ ಚಿತ್ರ]

ಹೈಫಾದಲ್ಲಿ ರಷ್ಯನ್‌ ಭಾಷೆಯನ್ನಾಡುವ ಸಾಕ್ಷಿಗಳ ಒಂದು ಆನಂದಿತ ಗುಂಪು. ಎಡಗಡೆಯಿಂದ ಬಲಗಡೆ: ಸಾಶ, ಈಲಾನಾ, ನಾಟಾಶ, ಗ್ಯಾಲೀನ, ಫಾಯೀನಾ, ಇಲಾ, ಈನಾ, ಮತ್ತು ಕಾರ್ಲ್‌