ಮದುವೆ ಮುಂಚಿನ ಸೆಕ್ಸ್
ಬೈಬಲಿನ ದೃಷ್ಟಿಕೋನ
ಮದುವೆ ಮುಂಚಿನ ಸೆಕ್ಸ್ ಮದುವೆ ಮುಂಚಿನ ಸೆಕ್ಸ್
ಮದುವೆ ಮುಂಚಿನ ಸೆಕ್ಸ್ ತಪ್ಪೇ?
“ನೀವು ಹಾದರದಿಂದ ದೂರವಿರಬೇಕೆಂಬುದೇ ದೇವರ ಚಿತ್ತವಾಗಿದೆ.”—1 ಥೆಸಲೊನೀಕ 4:3.
ಜನರು ಏನು ಹೇಳುತ್ತಾರೆ? ಕಾನೂನಿನ ಪ್ರಕಾರ ಒಬ್ಬ ವಯಸ್ಕ ವ್ಯಕ್ತಿ ಲೈಂಗಿಕ ಕ್ರಿಯೆಯಲ್ಲಿ ಒಳಗೂಡಿದರೆ ಅದನ್ನು ಕೆಲವು ಸಂಸ್ಕೃತಿಗಳು ಒಪ್ಪುತ್ತವೆ. ಇನ್ನು ಕೆಲವು ಕಡೆ ಮದುವೆಯಾಗಿರದ ಹದಿವಯಸ್ಕರು ಪತಿಪತ್ನಿಗೆ ಸೀಮಿತವಾಗಿರುವ ದೈಹಿಕ ಆಪ್ತತೆಯನ್ನು ಬೆಳೆಸಿಕೊಂಡರೆ ಅದನ್ನು ಸಹ ಸಮ್ಮತಿಸುತ್ತವೆ.
ಬೈಬಲ್ ಏನು ಹೇಳುತ್ತೆ? ವಿವಾಹಬಾಹಿರವಾದ ಎಲ್ಲಾ ತರದ ಲೈಂಗಿಕ ಕ್ರಿಯೆಯನ್ನು ಬೈಬಲ್ “ಹಾದರ” ಎಂದು ಕರೆಯುತ್ತದೆ. ನಾವು ‘ಹಾದರದಿಂದ ದೂರವಿರಬೇಕು’ ಎಂದು ದೇವರು ಬಯಸುತ್ತಾನೆ. (1 ಥೆಸಲೊನೀಕ 4:3) ವ್ಯಭಿಚಾರ, ಪ್ರೇತವ್ಯವಹಾರ, ಕುಡಿಕತನ, ಕೊಲೆ ಮತ್ತು ಕಳ್ಳತನದಂಥ ಗಂಭೀರ ಪಾಪಗಳ ಜೊತೆ ಹಾದರವನ್ನು ಪಟ್ಟಿ ಮಾಡಲಾಗಿದೆ.—1 ಕೊರಿಂಥ 6:9, 10; ಪ್ರಕಟನೆ 21:8.
ಇದು ನಿಮಗೆ ಮಹತ್ವದ್ದೇಕೆ? ಒಂದು ಕಾರಣ ‘ಜಾರರಿಗೆ ದೇವರು ನ್ಯಾಯತೀರಿಸುವನು’ ಎಂದು ಬೈಬಲ್ ಎಚ್ಚರಿಸುತ್ತದೆ. (ಇಬ್ರಿಯ 13:4) ಎಲ್ಲದಕ್ಕಿಂತ ಮುಖ್ಯವಾಗಿ ಲೈಂಗಿಕತೆಯ ಬಗ್ಗೆ ಯೆಹೋವ ದೇವರು ಇಟ್ಟಿರುವ ನಿಯಮಕ್ಕೆ ನಾವು ವಿಧೇಯತೆ ತೋರಿಸುವ ಮೂಲಕ ಆತನ ಮೇಲೆ ನಮಗಿರುವ ಪ್ರೀತಿಯನ್ನು ನಿರೂಪಿಸುತ್ತೇವೆ. (1 ಯೋಹಾನ 5:3) ತನ್ನ ನಿಯಮಗಳಿಗೆ ಬದ್ಧರಾಗಿರುವವರನ್ನು ದೇವರು ಆಶೀರ್ವದಿಸುತ್ತಾನೆ.—ಯೆಶಾಯ 48:18.
ಮದುವೆಯಾಗಿರದವರು ಯಾವುದೇ ತರದ ದೈಹಿಕ ಆಪ್ತತೆಯಲ್ಲಿ ಒಳಗೂಡಿದರೆ ತಪ್ಪಾ?
“ಜಾರತ್ವ ಮತ್ತು ಪ್ರತಿಯೊಂದು ರೀತಿಯ ಅಶುದ್ಧತೆ ಅಥವಾ ಲೋಭ ಇವುಗಳ ಪ್ರಸ್ತಾಪವೂ ನಿಮ್ಮಲ್ಲಿರಬಾರದು.” —ಎಫೆಸ 5:3.
ಜನರು ಏನು ಹೇಳುತ್ತಾರೆ? ಅನೇಕರ ಅಭಿಪ್ರಾಯ ಏನೆಂದರೆ ಮದುವೆಯಾಗದವರು ಲೈಂಗಿಕ ಸಂಭೋಗ ಮಾಡಬಾರದು ಆದರೆ ಬೇರೆ ಯಾವುದೇ ತರದ ದೈಹಿಕ ಆಪ್ತತೆ ಇಟ್ಟುಕೊಂಡರೆ ತಪ್ಪೇನಿಲ್ಲ.
ಬೈಬಲ್ ಏನು ಹೇಳುತ್ತೆ? ಬೈಬಲ್ ಹಾದರವನ್ನು ಮಾತ್ರ ತಪ್ಪು ಅಂತ ಹೇಳುವುದಲ್ಲ ಲೈಂಗಿಕ “ಅಶುದ್ಧತೆ” ಮತ್ತು “ಸಡಿಲು ನಡತೆ” ಸಹ ತಪ್ಪು ಅಂತ ಹೇಳುತ್ತೆ. (2 ಕೊರಿಂಥ 12:21) ಮದುವೆಯಾದ ಪುರುಷ ಅಥವಾ ಸ್ತ್ರೀ ಪರ ಪುರುಷ ಅಥವಾ ಪರ ಸ್ತ್ರೀ ಜತೆ ಲೈಂಗಿಕ ಸಂಭೋಗ ಮಾಡದೇ ಇದ್ದರೂ ಯಾವುದೇ ರೀತಿಯ ದೈಹಿಕ ಆಪ್ತತೆಯನ್ನು ಇಟ್ಟುಕೊಂಡರೆ ದೇವರು ಅದನ್ನು ಸಹಿಸುವುದಿಲ್ಲ.
ಒಂದೇ ಮಾತಿನಲ್ಲಿ ಹೇಳುವುದಾದರೆ ಮದುವೆಯಾಗಿರುವ ಗಂಡ ಹೆಂಡತಿ ನಡುವೆ ಮಾತ್ರ ದೈಹಿಕ ಆಪ್ತತೆ ಇರಬೇಕು ಎಂದು ಬೈಬಲ್ ತಿಳಿಸುತ್ತೆ. “ದುರಾಶೆಭರಿತ ಕಾಮಾಭಿಲಾಷೆಯನ್ನು ಹೊಂದಿರಬಾರದು” ಎಂದೂ ಹೇಳುತ್ತೆ ಬೈಬಲ್. (1 ಥೆಸಲೊನೀಕ 4:5) ಹಾಗೆಂದರೇನು? ಗಂಡು ಅಥವಾ ಹೆಣ್ಣು ಇಬ್ಬರಿಗೂ ಅನ್ವಯಿಸುವ ಈ ಉದಾಹರಣೆಯನ್ನು ಪರಿಗಣಿಸಿ: ಒಬ್ಬ ಯುವತಿ ತನ್ನ ಬಾಯ್ಫ್ರೆಂಡ್ ಜತೆ ಸಂಭೋಗ ಬೇಡ ಅಂತ ದೃಢವಾಗಿದ್ದಾಳೆ. ಆದರೂ ಅವನ ಜತೆ ಕೆಲವೊಂದು ರೀತಿಯ ದೈಹಿಕ ಆಪ್ತತೆಯನ್ನು ಹೊಂದಿದ್ದಾಳೆ. ಹೀಗೆ ಮಾಡುವಾಗ ಅವರಿಬ್ಬರೂ ತಮಗೆ ಸೇರಿರದ ವಿಷಯಕ್ಕಾಗಿ ದುರಾಶೆ ತುಂಬಿದ ಆತುರವನ್ನು ತೋರಿಸುತ್ತಾರೆ. ಅಂದರೆ ಅವರು “ದುರಾಶೆಭರಿತ ಕಾಮಾಭಿಲಾಷೆಯನ್ನು” ಹೊಂದಿದವರಾಗಿರುತ್ತಾರೆ. ಇದು ತಪ್ಪು. ಇಂಥ ಲೈಂಗಿಕ ಬಯಕೆಯನ್ನು ಬೈಬಲ್ ಖಂಡಿಸುತ್ತದೆ.—ಎಫೆಸ 5:3-5.
ಲೈಂಗಿಕ ಅನೈತಿಕತೆಯ ಪಾಶಕ್ಕೆ ಬೀಳದಂತೆ ಹೇಗೆ ಎಚ್ಚರವಹಿಸಬೇಕು?
“ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ.”—1 ಕೊರಿಂಥ 6:18.
ಇದು ನಿಮಗೆ ಮಹತ್ವದ್ದೇಕೆ? ಬೈಬಲ್ ಪ್ರಕಾರ ಯಾರು ಮದುವೆಗೆ ಮುಂಚೆ ಲೈಂಗಿಕ ಸಂಬಂಧವನ್ನು ಇಟ್ಟುಕೊಳ್ಳುತ್ತಾರೊ ಅಂಥವರು ಯೆಹೋವ ದೇವರ ಸ್ನೇಹವನ್ನು ಕಳೆದುಕೊಳ್ಳುತ್ತಾರೆ.—ಕೊಲೊಸ್ಸೆ 3:5, 6.
ಬೈಬಲ್ ಏನು ಹೇಳುತ್ತೆ? “ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ” ಎಂದು ಬೈಬಲ್ ಬುದ್ಧಿ ಹೇಳುತ್ತೆ. (1 ಕೊರಿಂಥ 6:18) ಅಂದರೆ ಲೈಂಗಿಕ ಅನೈತಿಕತೆಯ ಪಾಶಕ್ಕೆ ಬೀಳಿಸುವಂಥ ಯಾವುದೇ ವಿಷಯದಿಂದ ಒಬ್ಬ ವ್ಯಕ್ತಿ ದೂರವಿರಬೇಕು ಅಂಥ ಅರ್ಥ. (ಜ್ಞಾನೋಕ್ತಿ 22:3) ಹೀಗೆ ನೈತಿಕವಾಗಿ ಶುದ್ಧರಾಗಿರಬೇಕಾದರೆ ಈ ವಿಷಯದ ಬಗ್ಗೆ ದೇವರು ಕೊಟ್ಟಿರುವ ಮಟ್ಟಗಳನ್ನು ಯಾರು ತಿರಸ್ಕರಿಸುತ್ತಾರೊ ಅಂಥವರಿಂದ ದೂರವಿರಬೇಕು. “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು” ಅಂತ ಬೈಬಲ್ ಎಚ್ಚರಿಸುತ್ತೆ.—ಜ್ಞಾನೋಕ್ತಿ 13:20.
ನಮ್ಮ ಮನಸ್ಸಲ್ಲಿ ಕೆಟ್ಟ ಆಲೋಚನೆಗಳನ್ನು ತುಂಬಿಸುವುದು ಸಹ ಲೈಂಗಿಕ ದುರ್ನಡತೆಗೆ ನಡೆಸುತ್ತೆ. (ರೋಮನ್ನರಿಗೆ 8:5, 6) ಆದ್ದರಿಂದ ಲೈಂಗಿಕತೆಯ ಬಗ್ಗೆ ದೇವರು ಕೊಟ್ಟಿರುವ ಮಟ್ಟಗಳನ್ನು ಮೀರಲು ಕುಮ್ಮಕ್ಕು ನೀಡುವಂಥ ಸಂಗೀತ, ವಿಡಿಯೊ, ಪುಸ್ತಕ ಮುಂತಾದವುಗಳನ್ನು ತ್ಯಜಿಸಬೇಕು. ದೇವರು ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.—ಕೀರ್ತನೆ 101:3. ◼ (g13-E 09)
[ಪುಟ 4ರಲ್ಲಿರುವ ಚಿತ್ರ]