‘ನಮ್ಮ ಜಗತ್ತು ಭಿನ್ನವಾಗಿರುತ್ತಿತ್ತು’
‘ನಮ್ಮ ಜಗತ್ತು ಭಿನ್ನವಾಗಿರುತ್ತಿತ್ತು’
ಕಳೆದ ಆಗಸ್ಟ್ ತಿಂಗಳು ಮಾಸ್ಕೋದಲ್ಲಿ ನಡೆಯಬೇಕಾಗಿದ್ದ ಯೆಹೋವನ ಸಾಕ್ಷಿಗಳ ಜಿಲ್ಲಾ ಸಮ್ಮೇಳನವನ್ನು ರದ್ದುಮಾಡುವುದಕ್ಕಾಗಿ ಮಾಡಲ್ಪಟ್ಟ ಪ್ರಯತ್ನಗಳು ಸಾರ್ವಜನಿಕರ ಗಮನವನ್ನು ಸಾಕಷ್ಟು ಸೆಳೆದವು. (ಹೆಚ್ಚು ಮಾಹಿತಿಗಾಗಿ ಪುಟ 27 ಮತ್ತು 28ನ್ನು ನೋಡಿ) ಆಂಡ್ರೆಯ ಸಲ್ಟೋವ್ ಜೂನಿ., ಆಗಸ್ಟ್ 21, 1999ರ ದ ಮಾಸ್ಕೋ ಟೈಮ್ಸ್ ಎಂಬ ಪತ್ರಿಕೆಯಲ್ಲಿ ವರದಿಸಿದ್ದೇನೆಂದರೆ, “ಯೆಹೋವನ ಸಾಕ್ಷಿಗಳು ಸಮ್ಮೇಳನವನ್ನು ನಡೆಸುವುದು ಕಾರ್ಯನಿರ್ವಾಹಕ ಮಂಡಳಿಗೆ ಯಾವುದೇ ಅಭ್ಯಂತರವಿರಲಿಲ್ಲ ಎಂದು ಕ್ರೀಡಾಂಗಣದ ಡೆಪ್ಯೂಟಿ ನಿರ್ದೇಶಕರಾದ ವ್ಲಾಡೆಮಿರ್ ಕೊಸ್ರೇವ್ ಹೇಳಿದರು. ಸಮ್ಮೇಳನವನ್ನು [ರದ್ದುಮಾಡುವ] ಆಜ್ಞೆ ಎಲ್ಲಿಂದ ಬಂತೆಂಬುದು ತನಗೆ ಗೊತ್ತಿಲ್ಲವೆಂದು ಅವರು ಹೇಳಿದರು.”
ಒಂದು ವಾರದ ನಂತರ ದ ಮಾಸ್ಕೋ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟಿಸಿದ್ದ ಒಂದು ಪತ್ರದಲ್ಲಿ, ಒಬ್ಬ ಓದುಗರು “ಯಾವುದೇ ಮುಚ್ಚುಮರೆಯಿಲ್ಲದೆ” ಪ್ರಕಟಿಸಿದ್ದ ಆ ಲೇಖನಕ್ಕಾಗಿ ಅಭಿನಂದನೆಗಳನ್ನು ತಿಳಿಸಿದರು. ಮತ್ತು ಅದು “ನಿಜವಾಗಿಯೂ ಓದುಗರ ಗಮನಕ್ಕೆ ಅರ್ಹವಾಗಿತ್ತು” ಎಂದು ಅವರು ಹೇಳಿದರು. ಅವರು ಗಮನಿಸಿದ್ದು: “ತಮ್ಮ ವಾರ್ಷಿಕ ಸಮ್ಮೇಳನದ ತಯಾರಿಗಾಗಿ ಯೆಹೋವನ ಸಾಕ್ಷಿಗಳು ಅನುಭವಿಸಿದ ಕಷ್ಟತೊಂದರೆಗಳ ಕುರಿತ ನಿಮ್ಮ ಕಥೆಯು [ಅವರ] ಅನ್ಯಾಯವಾದ ಉಪಚಾರವನ್ನು [ಬಹಿರಂಗಪಡಿಸಿದೆ].”
ಈ ಪತ್ರವನ್ನು ಬರೆದವರು ಮುಂದುವರಿಸುತ್ತಾ ಹೇಳುವುದು, ಯೆಹೋವನ ಸಾಕ್ಷಿಗಳು “ಜಗತ್ತಿನಾದ್ಯಂತ [ಈಗ ರಷ್ಯಾದಲ್ಲೂ ಕೂಡ] ಪ್ರಸಿದ್ಧರಾಗಿದ್ದಾರೆ. . . . ಅವರು . . . ಬಹಳ ಒಳ್ಳೆಯ, ದಯಾಪರ ಹಾಗೂ ನಮ್ರ ಜನರೆಂದು ಹೆಸರುವಾಸಿಯಾಗಿದ್ದಾರೆ. ವ್ಯವಹರಿಸಲು ಬಹಳ ಸುಲಭವಾದ ಜನರಾಗಿದ್ದು ಅವರು ಎಂದೂ ಮತ್ತೊಬ್ಬರ ಮೇಲೆ ಯಾವುದೇ ರೀತಿಯ ಒತ್ತಡವನ್ನು ಹಾಕುವುದಿಲ್ಲ. ತಮ್ಮದೇ ಆದ ಧಾರ್ಮಿಕ ನಂಬಿಕೆಗಳಿದ್ದರೂ, ಅವರು ಇತರರೊಂದಿಗೆ ಅಂದರೆ ಸಾಂಪ್ರದಾಯಿಕ ಕ್ರೈಸ್ತರೇ ಆಗಿರಲಿ, ಮುಸಲ್ಮಾನರೇ ಆಗಿರಲಿ ಅಥವಾ ಬೌದ್ಧ ಧರ್ಮದವರೇ ಆಗಿರಲಿ, ಎಲ್ಲರೊಂದಿಗೂ ಶಾಂತಿಯಿಂದಿರಲು ಬಯಸುವವರಾಗಿದ್ದಾರೆ. ಅವರಲ್ಲಿ ಲಂಚಕೋರರೋ, ಕುಡುಕರೋ ಅಥವಾ ಮಾದಕದ್ರವ್ಯ ವ್ಯಸನಿಗಳೋ ಇಲ್ಲ. ಅದಕ್ಕೆ ಕಾರಣ ತುಂಬ ಸರಳವಾದುದು: ಅವರು ಹೇಳುವ ಇಲ್ಲವೇ ಮಾಡುವ ಪ್ರತಿಯೊಂದು ವಿಷಯದಲ್ಲೂ ತಮ್ಮ ಬೈಬಲ್ ಆಧಾರಿತ ದೃಢ ನಂಬಿಕೆಗಳಿಂದ ಮಾರ್ಗದರ್ಶಿಸಲ್ಪಡುವಂತೆ ಅವರು ಪ್ರಯತ್ನಿಸುತ್ತಾರೆ. ಪ್ರಪಂಚದಲ್ಲಿರುವ ಪ್ರತಿಯೊಬ್ಬರು ಯೆಹೋವನ ಸಾಕ್ಷಿಗಳಂತೆ ಕೇವಲ ಬೈಬಲಿಗನುಸಾರವಾಗಿ ಜೀವಿಸಲು ಪ್ರಯತ್ನಿಸಿದ್ದಿರುವುದಾದರೆ, ನಮ್ಮ ಈ ಕ್ರೂರ ಜಗತ್ತು ಸಂಪೂರ್ಣವಾಗಿ ಭಿನ್ನವಾಗಿರುತ್ತಿತ್ತು.”
ಯೆಹೋವನ ಸಾಕ್ಷಿಗಳನ್ನು ತನಿಖೆಮಾಡಿರುವ ಮತ್ತು ಅವರೊಂದಿಗೆ ವ್ಯಕ್ತಿಗತವಾಗಿ ವ್ಯವಹರಿಸಿರುವ ಅಧಿಕಾರಿಗಳು ಈ ಮೇಲಿನ ವರ್ಣನೆಯನ್ನು ಪುಷ್ಟೀಕರಿಸುತ್ತಾರೆ. ಉದಾಹರಣೆಗೆ, ಅಂಥ ಅಧಿಕಾರಿಗಳು ಸಾಕ್ಷಿಗಳಿಗೆ ರಷ್ಯಾದ ಸೆಂಟ್ ಪೀಟರ್ಸ್‌ಬರ್ಗ್‌ನಲ್ಲಿ ಈ ಸುಂದರವಾದ ಹೊಸ ಅಸೆಂಬ್ಲಿಹಾಲ್ ಅನ್ನು ಕಟ್ಟಲು ಅನುಮತಿ ಕೊಟ್ಟಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ 18ರಂದು ನಡೆದ ಅದರ ಸಮರ್ಪಣೆಯ ಕಾರ್ಯಕ್ರಮದಂದು, 2,257 ಹರ್ಷಭರಿತ ಪ್ರೇಕ್ಷಕರಿಂದ ಹಾಲ್ ತುಂಬಿತ್ತು. ಅವರೊಂದಿಗೆ ಸೆಂಟ್ ಪೀಟರ್ಸ್‌ಬರ್ಗ್‌ನಲ್ಲಿರುವ ಸಭಾಗೃಹಗಳಲ್ಲಿರುವ ಮತ್ತು ಅಲ್ಲೇ ಹತ್ತಿರದಲ್ಲಿರುವ ಸೆಲ್‌ನೆಕ್‌ನಯ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಶಾಖೆಯಲ್ಲಿ 2,228 ಮಂದಿ ಈ ಕಾರ್ಯಕ್ರಮವನ್ನು ಕೇಳಿಸಿಕೊಂಡರು.