ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 16

ಗೀತೆ 87 “ಬನ್ನಿ! ಚೈತನ್ಯ ಪಡೆಯಿರಿ”

ಈ ಸ್ನೇಹಕ್ಕೆ ಬೆಲೆ ಕಟ್ಟೋಕಾಗಲ್ಲ!

ಈ ಸ್ನೇಹಕ್ಕೆ ಬೆಲೆ ಕಟ್ಟೋಕಾಗಲ್ಲ!

“ನೋಡಿ! ಸಹೋದರರು ಒಂದಾಗಿ ಒಗ್ಗಟ್ಟಿಂದ ಇರೋದು ಎಷ್ಟೋ ಒಳ್ಳೇದು, ಎಷ್ಟೋ ಮನೋಹರ!”ಕೀರ್ತ. 133:1.

ಈ ಲೇಖನದಲ್ಲಿ ಏನಿದೆ?

ಸಹೋದರರ ಜೊತೇಲಿ ಸ್ನೇಹ ಬೆಳೆಸ್ಕೊಳ್ಳೋಕೆ ಏನು ಮಾಡಬೇಕು? ನಾವು ಸ್ನೇಹ ಬೆಳೆಸ್ಕೊಂಡ್ರೆ ಯೆಹೋವ ನಮಗೆ ಏನೆಲ್ಲಾ ಆಶೀರ್ವಾದ ಕೊಡ್ತಾನೆ ಅಂತ ನೋಡೋಣ.

1-2. (ಎ) ಯೆಹೋವ ಯಾವುದನ್ನೂ ಮುಖ್ಯವಾಗಿ ನೋಡ್ತಾನೆ? (ಬಿ) ನಾವು ಏನು ಮಾಡಬೇಕು ಅಂತ ಇಷ್ಟ ಪಡ್ತಾನೆ?

 ನಾವು ಬೇರೆಯವ್ರ ಜೊತೆ ಹೇಗೆ ನಡ್ಕೊಳ್ತೀವಿ ಅನ್ನೋದು ಯೆಹೋವನಿಗೆ ತುಂಬಾ ಮುಖ್ಯ. ಅದಕ್ಕೆ ಯೇಸು ‘ನಾವು ನಮ್ಮನ್ನ ಪ್ರೀತಿಸೋ ತರಾನೇ ಬೇರೆಯವ್ರನ್ನೂ ಪ್ರೀತಿಸಬೇಕು’ ಅಂತ ಕಲಿಸಿದ್ದಾನೆ. (ಮತ್ತಾ. 22:37-39) ಅದ್ರ ಅರ್ಥ ಯೆಹೋವನನ್ನ ಆರಾಧಿಸದೆ ಇರೋ ಜನ್ರ ಜೊತೆನೂ ನಾವು ದಯೆಯಿಂದ ನಡ್ಕೊಬೇಕು. ನಾವು ಆ ತರ ನಡ್ಕೊಂಡ್ರೆ ಯೆಹೋವ ಇಟ್ಟಿರೋ ಮಾದರಿನ ಪಾಲಿಸಿದ ಹಾಗಾಗುತ್ತೆ. ಯಾಕಂದ್ರೆ ಯೆಹೋವ “ಕೆಟ್ಟವರ ಮೇಲೂ ಒಳ್ಳೆಯವರ ಮೇಲೂ ಸೂರ್ಯ ಹುಟ್ಟೋ ತರ ಮಾಡ್ತಾನೆ. ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆ ಸುರಿಸ್ತಾನೆ.”—ಮತ್ತಾ. 5:45.

2 ಯೆಹೋವ ಎಲ್ಲಾ ಮನುಷ್ಯರನ್ನ ಪ್ರೀತಿಸ್ತಾನೆ ನಿಜ. ಆದ್ರೆ ಯಾರು ಆತನ ಆಜ್ಞೆಗಳನ್ನ ಪಾಲಿಸ್ತಾರೋ ಅವರಂದ್ರೆ ಆತನಿಗೆ ಪಂಚಪ್ರಾಣ. (ಯೋಹಾ. 14:21) ನಾವೂ ಅದೇ ತರ ಯೆಹೋವನ ಆಜ್ಞೆಗಳನ್ನ ಪಾಲಿಸೋ ಆತನ ಜನ್ರನ್ನ ‘ತುಂಬಾ ಪ್ರೀತಿಸಬೇಕು,’ ಅವ್ರಿಗೆ “ಕೋಮಲ ಮಮತೆ” ತೋರಿಸಬೇಕು ಅಂತ ಆತನು ಇಷ್ಟ ಪಡ್ತಾನೆ. (1 ಪೇತ್ರ 4:8; ರೋಮ. 12:10) ‘ತುಂಬಾ ಪ್ರೀತಿಸಬೇಕು, ಕೋಮಲ ಮಮತೆ’ ತೋರಿಸಬೇಕು ಅಂದ್ರೆ ಏನರ್ಥ? ಒಡಹುಟ್ಟಿದವ್ರನ್ನ ನೋಡಿದಾಗ ಅಥವಾ ನಾವು ತುಂಬಾ ಇಷ್ಟ ಪಡೋ ಫ್ರೆಂಡ್‌ನ ನೋಡಿದಾಗ ನಮಗೆ ಹೇಗನಿಸುತ್ತೋ ಅದೇ ತರಾನೇ ನಮ್ಮ ಸಹೋದರ ಸಹೋದರಿಯರನ್ನ ನೋಡಿದಾಗ್ಲೂ ಅನಿಸಬೇಕು ಅಂತ ಅದ್ರರ್ಥ.

3. ಪ್ರೀತಿ ಒಂದು ಗಿಡದ ತರ ಅಂತ ನಾವು ಯಾಕೆ ಹೇಳಬಹುದು?

3 ನಾವು ಸಹೋದರ ಸಹೋದರಿಯರ ಮೇಲೆ ಪ್ರೀತಿನ ಬೆಳೆಸ್ಕೊಳ್ತಾ ಇರಬೇಕು ಅಂತ ಯೆಹೋವ ಇಷ್ಟ ಪಡ್ತಾನೆ. ಪ್ರೀತಿ ಅನ್ನೋದು ನಾವು ನೆಟ್ಟಿರೋ ಒಂದು ಗಿಡದ ತರ. ಗಿಡ ಚೆನ್ನಾಗಿ ಬೆಳಿಬೇಕಂದ್ರೆ ನಾವು ಅದನ್ನ ಚೆನ್ನಾಗಿ ನೋಡ್ಕೊಬೇಕು, ಸರಿಯಾಗಿ ನೀರು ಹಾಕಬೇಕು. ಅದೇ ತರಾನೇ ಸಹೋದರ ಸಹೋದರಿಯರ ಮೇಲೆ ಪ್ರೀತಿ ಬೆಳಿತಾ ಇರಬೇಕಂದ್ರೆ ನಾವು ಸಮಯ ಕೊಡಬೇಕು, ಪ್ರಯತ್ನ ಹಾಕಬೇಕು. ಪೌಲ “ಒಡಹುಟ್ಟಿದವ್ರ ತರ ಒಬ್ರು ಇನ್ನೊಬ್ರನ್ನ ಪ್ರೀತಿಸ್ತಾ ಇರಿ” ಅಂತ ಎಲ್ಲ ಕ್ರೈಸ್ತರಿಗೆ ಬುದ್ಧಿವಾದ ಹೇಳಿದ್ದಾನೆ. (ಇಬ್ರಿ. 13:1) ಹಾಗಾಗಿ ಈ ಲೇಖನದಲ್ಲಿ, ನಾವು ಯಾಕೆ ನಮ್ಮ ಸಹೋದರ ಸಹೋದರಿಯರ ಜೊತೇಲಿ ಸ್ನೇಹ ಬೆಳೆಸ್ಕೊಬೇಕು? ಅವ್ರ ಮೇಲೆ ನಮಗಿರೋ ಪ್ರೀತಿನ ಜಾಸ್ತಿ ಮಾಡ್ತಾ ಇರೋಕೆ ಏನು ಮಾಡಬೇಕು? ಅಂತ ನೋಡೋಣ.

ನಾವು ಯಾಕೆ ಸ್ನೇಹ ಬೆಳೆಸ್ಕೊಬೇಕು?

4. ಸಹೋದರ ಸಹೋದರಿಯರ ಮೇಲಿರೋ ಪ್ರೀತಿ ಕಮ್ಮಿ ಆಗದಿರೋಕೆ ನಾವೇನು ಮಾಡಬೇಕು? (ಕೀರ್ತನೆ 133:1) (ಚಿತ್ರಗಳನ್ನ ನೋಡಿ.)

4 ಕೀರ್ತನೆ 133:1 ಓದಿ. ಕೀರ್ತನೆಗಾರ ಇಲ್ಲಿ ಹೇಳಿರೋ ಮಾತನ್ನ ನೀವು ಒಪ್ತೀರಾ? ಯೆಹೋವನನ್ನ ಪ್ರೀತಿಸೋ ಜನ್ರ ಮಧ್ಯೆ ಇರೋ ಸ್ನೇಹನ ನೋಡೋಕೆ ಎರಡು ಕಣ್ಣು ಸಾಕಾಗಲ್ಲ ಅಲ್ವಾ? ಆದ್ರೆ ಯಾವುದೇ ಒಂದು ವಿಷ್ಯನ ನಾವು ಯಾವಾಗ್ಲೂ ನೋಡ್ತಾ ಇದ್ರೆ ಅದು ನಮಗೆ ಮಾಮೂಲಿ ಆಗಿಬಿಡುತ್ತೆ. ಉದಾಹರಣೆಗೆ ನಮ್ಮ ಮನೆ ಮುಂದೆ ಒಂದು ಸುಂದರ ಮರ ಇದ್ರೂ ನಾವದನ್ನ ದಿನಾ ನೋಡೋದ್ರಿಂದ ಅದು ನಮಗೆ ಮಾಮೂಲಿ ಅನಿಸಿಬಿಡುತ್ತೆ. ಅದೇ ತರ ಪ್ರತಿ ವಾರ ನಾವು ಮೀಟಿಂಗ್‌ನಲ್ಲಿ ಅದೇ ಸಹೋದರ ಸಹೋದರಿಯರನ್ನ ನೋಡೋದ್ರಿಂದ ಅವರೂ ನಮಗೆ ಮಾಮೂಲಿ ಆಗಿಬಿಡಬಹುದು. ಆಗ ಅವ್ರ ಮೇಲಿರೋ ಪ್ರೀತಿ ಕಮ್ಮಿ ಆಗಿಬಿಡುತ್ತೆ. ಅದಕ್ಕೆ ನಾವು ಸಭೇಲಿರೋ ಒಬ್ಬೊಬ್ರ ಬಗ್ಗೆನೂ ಯೋಚ್ನೆ ಮಾಡೋಕೆ ಟೈಮ್‌ ತಗೋಬೇಕು. ಅವ್ರಿಂದ ಸಭೆಗೆ ಮತ್ತು ನಮಗೆ ಎಷ್ಟು ಪ್ರಯೋಜ್ನ ಇದೆ ಅಂತ ನಾವು ಯೋಚ್ನೆ ಮಾಡಬೇಕು.

ಸಹೋದರ ಸಹೋದರಿಯರನ್ನ ಯಾವತ್ತೂ ಮಾಮೂಲಿಯಾಗಿ ನೋಡಬೇಡಿ (ಪ್ಯಾರ 4 ನೋಡಿ)


5. ನಮ್ಮ ಮಧ್ಯೆ ಪ್ರೀತಿ ಇರೋದನ್ನ ನೋಡಿ ಎಷ್ಟೋ ಜನ್ರಿಗೆ ಹೇಗನಿಸಿದೆ?

5 “ನಿಮ್ಮ ಮಧ್ಯ ಪ್ರೀತಿ ಇದ್ರೆ ಮಾತ್ರ ನೀವು ನನ್ನ ಶಿಷ್ಯರು ಅಂತ ಎಲ್ರಿಗೂ ಗೊತ್ತಾಗುತ್ತೆ” ಅಂತ ಯೇಸು ಹೇಳಿದನು. (ಯೋಹಾ. 13:35) ಇವತ್ತು ಎಷ್ಟೋ ಜನ ಮೊದಲನೇ ಸಲ ಮೀಟಿಂಗ್‌ ಬಂದಾಗ ನಮ್ಮ ಮಧ್ಯೆ ಇರೋ ಪ್ರೀತಿ ನೋಡಿ ಎಷ್ಟು ಆಶ್ಚರ್ಯ ಪಟ್ಟಿದ್ದಾರೆ ಗೊತ್ತಾ? ಕೆಲವ್ರಂತೂ ಬರೀ ಈ ಪ್ರೀತಿ ನೋಡಿನೇ ‘ಇದೇ ಸತ್ಯ ಧರ್ಮ’ ಅಂತ ನಿರ್ಧಾರ ಮಾಡಿದ್ದಾರೆ. ಇದಕ್ಕೊಂದು ಉದಾಹರಣೆ ನೋಡಿ. ಕಾಲೇಜ್‌ಗೆ ಹೋಗೋ ಚೈತ್ರಾ ಅನ್ನೋ ಹುಡುಗಿ ಬೈಬಲ್‌ ಸ್ಟಡಿ ತಗೊಳ್ತಿದ್ದಳು. ಒಂದು ಸಲ ಅವಳಿಗೆ ಅಧಿವೇಶನಕ್ಕೆ ಬರೋಕೆ ಆಮಂತ್ರಣ ಸಿಗುತ್ತೆ. ಅವಳು ಅಧಿವೇಶನಕ್ಕೆ ಬಂದ ಮೊದಲನೇ ದಿನ ಅವಳ ಬೈಬಲ್‌ ಟೀಚರ್‌ ಹತ್ರ ಏನ್‌ ಹೇಳಿದ್ಳು ಗೊತ್ತಾ? “ಇಲ್ಲಿವರೆಗೂ ನಮ್ಮ ಅಪ್ಪ ಅಮ್ಮನೇ ಒಂದು ಸಲಾನೂ ನನ್ನ ಅಪ್ಕೊಂಡಿಲ್ಲ. ಆದ್ರೆ ಈ ಅಧಿವೇಶನದ ಮೊದಲನೇ ದಿನಾನೇ ನನ್ನನ್ನ ಒಟ್ಟು 52 ಜನ ಅಪ್ಕೊಂಡ್ರು. ನನಗೆ ಅವ್ರ ಅಪ್ಪುಗೆಯಲ್ಲಿ ಯೆಹೋವನ ಪ್ರೀತಿ ಕಾಣಿಸ್ತು. ನಾನೂ ಈ ಕುಟುಂಬದಲ್ಲಿ ಒಬ್ಬಳಾಗಬೇಕು ಅಂತ ಅನಿಸ್ತಿದೆ” ಅಂತ ಹೇಳಿದ್ಳು. ಚೈತ್ರಾ ಆಮೇಲೆ ಚೆನ್ನಾಗಿ ಪ್ರಗತಿ ಮಾಡಿ 2024ರಲ್ಲಿ ದೀಕ್ಷಾಸ್ನಾನ ತಗೊಂಡಳು. ನಾವು ಮಾಡೋ ಒಳ್ಳೆ ಕೆಲಸಗಳನ್ನ ನೋಡಿ, ನಾವು ಒಬ್ರನ್ನೊಬ್ರು ಪ್ರೀತಿಸೋದನ್ನ ನೋಡಿ ಎಷ್ಟೋ ಹೊಸಬರು ಇದೇ ಸತ್ಯ ಅಂತ ಅರ್ಥ ಮಾಡ್ಕೊಂಡು ಯೆಹೋವನನ್ನ ಆರಾಧನೆ ಮಾಡಬೇಕು ಅಂತ ನಿರ್ಧಾರ ಮಾಡಿದ್ದಾರೆ.—ಮತ್ತಾ. 5:16.

6. ನಮ್ಮ ಸಹೋದರ ಸಹೋದರಿಯರ ಜೊತೇಲಿ ಸ್ನೇಹ ಬೆಳೆಸ್ಕೊಂಡ್ರೆ ಅವರು ನಮ್ಮನ್ನ ಹೇಗೆ ಕಾಪಾಡ್ತಾರೆ?

6 ನಮ್ಮ ಸಹೋದರ ಸಹೋದರಿಯರ ಜೊತೇಲಿ ಒಳ್ಳೆ ಸ್ನೇಹ ಬೆಳೆಸ್ಕೊಂಡ್ರೆ ಅವರು ನಮ್ಮನ್ನ ಎಷ್ಟೋ ವಿಷ್ಯಗಳಿಂದ ಕಾಪಾಡ್ತಾರೆ. ಅದಕ್ಕೆ ಪೌಲ “ನಾವು ಪ್ರತಿದಿನ ಒಬ್ರನ್ನೊಬ್ರು ಪ್ರೋತ್ಸಾಹಿಸ್ತಾ ಇರೋಣ. ಆಗ ನಿಮ್ಮಲ್ಲಿ ಯಾರ ಹೃದಯನೂ ಪಾಪಕ್ಕಿರೋ ಮೋಸದ ಶಕ್ತಿಯಿಂದ ಕಲ್ಲಾಗಲ್ಲ” ಅಂತ ಬುದ್ಧಿವಾದ ಹೇಳಿದ್ದಾನೆ. (ಇಬ್ರಿ. 3:13) ಕೆಲವೊಮ್ಮೆ ನಾವು ಕುಗ್ಗಿಹೋದಾಗ ಮೀಟಿಂಗ್‌ಗೆ, ಸೇವೆಗೆ ಹೋಗೋದನ್ನ ನಿಲ್ಲಿಸಿಬಿಡಬಹುದು ಅಥವಾ ಸತ್ಯದಿಂದ ಸ್ವಲ್ಪ ದೂರ ಹೋಗಿಬಿಡಬಹುದು. ಆಗ ಇದನ್ನ ಗಮನಿಸ್ತಿರೋ ಒಬ್ಬ ಒಳ್ಳೆ ಸ್ನೇಹಿತ ನಮಗೆ ಬಂದು ಸಹಾಯ ಮಾಡೋ ತರ ಯೆಹೋವ ಅವನನ್ನ ಪ್ರಚೋದಿಸಬಹುದು. (ಕೀರ್ತ. 73:2, 17, 23) ಹೀಗೆ ಸರಿಯಾದ ಸಮಯದಲ್ಲಿ ನಮಗೆ ಸಿಗೋ ಪ್ರೋತ್ಸಾಹ ನಮ್ಮ ಜೀವನೇ ಕಾಪಾಡುತ್ತಲ್ವಾ?

7. ಪ್ರೀತಿಗೂ ಒಗ್ಗಟ್ಟಿಗೂ ಏನು ಸಂಬಂಧ? (ಕೊಲೊಸ್ಸೆ 3:13, 14)

7 ಯೆಹೋವನ ಸಾಕ್ಷಿಗಳಾಗಿರೋ ನಾವೆಲ್ರೂ ಒಬ್ರನ್ನೊಬ್ರು ಪ್ರೀತಿಸೋಕೆ ತುಂಬಾ ಪ್ರಯತ್ನ ಹಾಕ್ತೀವಿ. ಈ ತರ ಪ್ರಯತ್ನ ಹಾಕ್ತಿರೋದ್ರಿಂದ ನಮಗೆ ತುಂಬ ಪ್ರಯೋಜ್ನ ಸಿಕ್ಕಿದೆ. (1 ಯೋಹಾ. 4:11) ಉದಾಹರಣೆಗೆ, ನಮ್ಮಲ್ಲಿ ಪ್ರೀತಿ ಇರೋದ್ರಿಂದಾನೇ ಬೇರೆಯವರು ನಮಗೆ ನೋವು ಮಾಡಿದ್ರೂ ನಾವು ಅವ್ರನ್ನ ಸಹಿಸ್ಕೊಳ್ತೀವಿ. ಅದ್ರಿಂದಾನೇ ನಮ್ಮ ಮಧ್ಯೆ ಒಗ್ಗಟ್ಟು ತುಂಬಿ ತುಳುಕ್ತಿದೆ. (ಕೊಲೊಸ್ಸೆ 3:13, 14 ಓದಿ; ಎಫೆ. 4:2-6) ನಮ್ಮ ಕೂಟಗಳಲ್ಲಿ ಶಾಂತಿ, ಸಂತೋಷ ಉಕ್ಕಿ ಹರೀತಿದೆ. ಇಂಥ ಶಾಂತಿ ಪ್ರೀತಿನ ಪ್ರಪಂಚದಲ್ಲಿ ಬೇರೆಲ್ಲೂ ನೋಡೋಕಾಗಲ್ಲ!

ಗೌರವ ತೋರಿಸಿ

8. ನಾವೆಲ್ಲಾ ಒಗ್ಗಟ್ಟಿಂದ ಇರೋಕೆ ಯೆಹೋವನೇ ಕಾರಣ ಅಂತ ಹೇಗೆ ಹೇಳಬಹುದು?

8 ಯೆಹೋವನ ಸಾಕ್ಷಿಗಳು ಎಲ್ಲೇ ಇರಲಿ, ಅವ್ರ ಮಧ್ಯೆ ಯಾವಾಗ್ಲೂ ಒಗ್ಗಟ್ಟು ತುಂಬಿ ತುಳುಕುತ್ತೆ. ಇದು ನಿಜಕ್ಕೂ ಅದ್ಭುತ. (1 ಕೊರಿಂ. 12:25) ನಾವೂ ಎಲ್ರ ತರ ಅಪರಿಪೂರ್ಣರು. ಆದ್ರೂ ನಮ್ಮಲ್ಲಿ ಒಗ್ಗಟ್ಟಿದೆ ಅಂದ್ರೆ ಅದಕ್ಕೆ ಯೆಹೋವನೇ ಕಾರಣ. ‘ಆತನೇ ನಮಗೆ ಒಬ್ರನ್ನೊಬ್ರು ಪ್ರೀತಿಸಬೇಕಂತ ಕಲಿಸ್ತಿದ್ದಾನೆ.’ (1 ಥೆಸ. 4:9) ಇನ್ನೊಂದು ಮಾತಲ್ಲಿ ಹೇಳೋದಾದ್ರೆ, ನಾವೆಲ್ಲ ಸ್ನೇಹ ಬೆಳೆಸ್ಕೊಳ್ಳೋಕೆ ಏನು ಮಾಡಬೇಕು ಅಂತ ಬೈಬಲಲ್ಲಿ ಯೆಹೋವ ದೇವರು ಹೇಳಿದ್ದಾನೆ. ಹಾಗಾಗಿ ನಾವು ಬೈಬಲ್‌ನ ಚೆನ್ನಾಗಿ ಓದಬೇಕು. ಅದ್ರಲ್ಲಿ ಏನಿದೆ ಅಂತ ಅರ್ಥ ಮಾಡ್ಕೊಬೇಕು. ಅದ್ರ ಪ್ರಕಾರ ಜೀವನ ಮಾಡಬೇಕು. (ಇಬ್ರಿ. 4:12; ಯಾಕೋ. 1:25) ಯೆಹೋವನ ಸಾಕ್ಷಿಗಳೆಲ್ರೂ ಇದನ್ನ ಮಾಡೋಕೆ ಅವ್ರ ಕೈಲಾದ ಎಲ್ಲ ಪ್ರಯತ್ನ ಹಾಕ್ತಾರೆ.

9. ರೋಮನ್ನರಿಗೆ 12:9-13 ನಾವು ಹೇಗೆ ಗೌರವ ತೋರಿಸಬೇಕು ಅಂತ ಹೇಳುತ್ತೆ?

9 ಸಭೇಲಿ ನಾವೆಲ್ರ ಜೊತೆ ಸ್ನೇಹ ಮಾಡೋಕೆ ದೇವರು ನಮಗೆ ಹೇಗೆ ಕಲಿಸ್ತಿದ್ದಾನೆ? ಇದ್ರ ಬಗ್ಗೆ ಪೌಲ ರೋಮನ್ನರಿಗೆ 12:9-13ರಲ್ಲಿ (ಓದಿ.) ಏನು ಹೇಳಿದ್ದಾನೆ ಅಂತ ನೋಡಿ. “ಗೌರವ ತೋರಿಸೋದ್ರಲ್ಲಿ ಒಬ್ರಿಗಿಂತ ಒಬ್ರು ಮುಂದೆ ಬನ್ನಿ” ಅಂದ್ರೆ ಮೊದಲ ಹೆಜ್ಜೆ ತಗೊಳ್ಳಿ ಅಂತ ಅವನು ಹೇಳಿದ್ದಾನೆ. ಈ ಮಾತಿನ ಅರ್ಥ ಏನು? ನಾವು ಕೋಮಲ ಮಮತೆ ತೋರಿಸೋದ್ರಲ್ಲಿ ಮೊದಲ ಹೆಜ್ಜೆ ತಗೊಬೇಕು ಅಂತ. ಅಂದ್ರೆ ಬೇರೆಯವ್ರನ್ನ ಕ್ಷಮಿಸೋದ್ರಲ್ಲಿ, ಅತಿಥಿಸತ್ಕಾರ ತೋರಿಸೋದ್ರಲ್ಲಿ, ನಮ್ಮ ಹತ್ರ ಇರೋದನ್ನ ಹಂಚ್ಕೊಳ್ಳೋದ್ರಲ್ಲಿ ಅಥವಾ ಬೇರೆ ಯಾವುದೇ ಒಳ್ಳೆ ಕೆಲಸ ಮಾಡೋದ್ರಲ್ಲಿ ನಾವು ಮೊದಲ ಹೆಜ್ಜೆ ತಗೊಬೇಕು ಅಂತ ಇದ್ರರ್ಥ. (ಎಫೆ. 4:32) ‘ಬೇರೆ ಯಾರಾದ್ರೂ ಮಾಡ್ಲಿ ಆಮೇಲೆ ನಾವು ನೋಡೋಣ’ ಅಂತ ಅಂದ್ಕೊಳ್ಳದೆ, ಸಹಾಯ ಮಾಡೋಕೆ ನಾವೇ ಮೊದಲ ಹೆಜ್ಜೆ ತಗೊಬೇಕು. ಇದನ್ನ ಮಾಡಿದ್ರೆ “ತಗೊಳ್ಳೋದಕ್ಕಿಂತ ಕೊಡೋದ್ರಲ್ಲಿ ಜಾಸ್ತಿ ಖುಷಿ ಸಿಗುತ್ತೆ” ಅಂತ ಯೇಸು ಹೇಳಿದ ಮಾತು ನಿಜ ಅಂತ ಗೊತ್ತಾಗುತ್ತೆ.—ಅ. ಕಾ. 20:35.

10. ಬೇರೆಯವ್ರಿಗೆ ಗೌರವ ತೋರಿಸೋ ವ್ಯಕ್ತಿ ಹೇಗೆ ಶ್ರಮಪಟ್ಟು ಕೆಲಸ ಮಾಡ್ತಾನೆ? (ಚಿತ್ರ ನೋಡಿ.)

10 ಗೌರವ ತೋರಿಸೋದ್ರಲ್ಲಿ ಮೊದಲ ಹೆಜ್ಜೆ ತಗೊಳ್ಳಿ ಅಂತ ಹೇಳಿದ್ಮೇಲೆ ಪೌಲ “ಶ್ರಮಪಟ್ಟು ಕೆಲಸ ಮಾಡಿ, ಸೋಮಾರಿಯಾಗಿ ಇರಬೇಡಿ” ಅಂತಾನೂ ಹೇಳಿದ್ದಾನೆ. ಶ್ರಮಪಟ್ಟು ಕೆಲಸ ಮಾಡೋದು ಅಂದ್ರೆ ಏನು? ಹುರುಪಿಂದ ಕೆಲಸ ಮಾಡೋದು, ಕಷ್ಟಪಟ್ಟು ಕೆಲಸ ಮಾಡೋದು, ಯಾವುದಾದ್ರೂ ಒಂದು ಕೆಲಸ ಕೊಟ್ರೆ ಆ ಕೆಲಸನ ನಿಯತ್ತಾಗಿ ಮಾಡಿ ಮುಗಿಸೋದು ಅಂತರ್ಥ. ಶ್ರಮಪಟ್ಟು ಕೆಲಸ ಮಾಡೋ ವ್ಯಕ್ತಿ “ನಿನ್ನ ಕೈಯಿಂದ ಒಳ್ಳೇದು ಮಾಡೋಕೆ ಆದ್ರೆ ಖಂಡಿತ ಮಾಡು, ಅಗತ್ಯ ಇರುವವ್ರಿಗೆ ಒಳ್ಳೇದು ಮಾಡದೇ ಇರಬೇಡ” ಅನ್ನೋ ಜ್ಞಾನೋಕ್ತಿ 3:27, 28ರ ಮಾತನ್ನ ಪಾಲಿಸ್ತಾನೆ. ಯಾರಾದ್ರೂ ಕಷ್ಟದಲ್ಲಿದ್ದಾರೆ ಅಂತ ಅವನಿಗೆ ಗೊತ್ತಾದ್ರೆ ಸಾಕು, ಅವನೇ ಮುಂದೆ ಹೋಗಿ ಅವ್ರಿಗೆ ಸಹಾಯ ಮಾಡ್ತಾನೆ. ‘ಆಮೇಲೆ ಮಾಡಿದ್ರಾಯ್ತು ಬಿಡು’ ಅಂತಾನೋ, ‘ಬೇರೆಯವರು ಮಾಡ್ತಾರೆ ನನಗ್ಯಾಕೆ ಬೇಕು’ ಅಂತಾನೋ ಸುಮ್ನೆ ಇರಲ್ಲ.—1 ಯೋಹಾ. 3:17, 18.

ಕಷ್ಟದಲ್ಲಿರೋ ಸಹೋದರ ಸಹೋದರಿಯರಿಗೆ ಸಹಾಯ ಮಾಡೋಕೆ ನಾವೇ ಮೊದಲ ಹೆಜ್ಜೆ ತಗೋಬೇಕು (ಪ್ಯಾರ 10 ನೋಡಿ)


11. ತಕ್ಷಣ ಕ್ಷಮಿಸೋದು ಯಾಕೆ ಮುಖ್ಯ?

11 ನಾವು ಗೌರವ ತೋರಿಸೋ ಇನ್ನೊಂದು ಅತ್ಯುತ್ತಮ ವಿಧ ಯಾವುದು ಗೊತ್ತಾ? ಯಾರಾದ್ರೂ ನಮಗೆ ನೋವು ಮಾಡಿದ್ರೆ ಅವ್ರನ್ನ ತಕ್ಷಣ ಕ್ಷಮಿಸೋದೇ. “ಸೂರ್ಯ ಮುಳುಗೋ ತನಕ ಕೋಪ ಇಟ್ಕೊಳ್ಳಬೇಡಿ” ಅಂತ ಎಫೆಸ 4:26 ಹೇಳುತ್ತೆ. ಕೋಪ ಇಟ್ಕೊಂಡ್ರೆ “ಸೈತಾನನಿಗೆ ಅವಕಾಶ” ಕೊಟ್ಟಂಗೆ ಆಗುತ್ತೆ ಅಂತ ವಚನ 27 ಹೇಳುತ್ತೆ. ಅದಕ್ಕೆ ಯೆಹೋವ ದೇವರು ಬೈಬಲಲ್ಲಿ ಒಬ್ರನ್ನೊಬ್ರು ಕ್ಷಮಿಸಿ ಅಂತ ಪದೇ ಪದೇ ಹೇಳಿದ್ದಾನೆ. ಕೊಲೊಸ್ಸೆ 3:13ರಲ್ಲಿ “ಒಬ್ರನ್ನೊಬ್ರು ಉದಾರವಾಗಿ ಕ್ಷಮಿಸ್ತಾ ಇರಿ” ಅಂತ ಇದೆ. ಒಂದು ಸಲ ಕ್ಷಮಿಸಿ ನೋಡಿ, ನಿಮ್ಮ ಮಧ್ಯದಲ್ಲಿ ಸ್ನೇಹ ಎಷ್ಟು ಚೆನ್ನಾಗಿ ಬೆಳೆಯುತ್ತೆ ಅಂತ! ನಾವು ಈ ತರ ಮಾಡಿದ್ರೆ ಸಭೇಲಿ “ಒಬ್ರು ಇನ್ನೊಬ್ರ ಜೊತೆ ಶಾಂತಿಯಿಂದ ಇದ್ದು ಒಗ್ಗಟ್ಟನ್ನ ಕಾಪಾಡ್ಕೊಳ್ಳೋಕೆ” ಆಗುತ್ತೆ. (ಎಫೆ. 4:3) ಒಂದೇ ಮಾತಲ್ಲಿ ಹೇಳೋದಾದ್ರೆ ಯಾವ ಸಭೇಲಿ ಎಲ್ರೂ ಕ್ಷಮಿಸ್ತಾರೋ ಆ ಸಭೇಲಿ ಒಗ್ಗಟ್ಟು ಮತ್ತು ಶಾಂತಿ ಎದ್ದು ಕಾಣುತ್ತೆ!

12. ಕ್ಷಮಿಸೋಕೆ ಪವಿತ್ರಶಕ್ತಿ ಹೇಗೆ ಸಹಾಯ ಮಾಡುತ್ತೆ?

12 ನಮಗೆ ಯಾರಾದ್ರೂ ನೋವು ಮಾಡಿದಾಗ ಅವ್ರನ್ನ ಕ್ಷಮಿಸೋದು ಕಷ್ಟನೇ. ಆದ್ರೂ ಕ್ಷಮಿಸಬೇಕು ಅಂತ ಯೆಹೋವ ಬಯಸ್ತಾನೆ. ಕ್ಷಮಿಸೋಕೆ ಯಾವುದು ಸಹಾಯ ಮಾಡುತ್ತೆ ಅಂತಾನೂ ಪೌಲನೇ ಹೇಳಿದ್ದಾನೆ. “ಒಬ್ರಿಗೊಬ್ರು ಪ್ರೀತಿ, ಕೋಮಲ ಮಮತೆ ತೋರಿಸಿ . . . ಶ್ರಮಪಟ್ಟು ಕೆಲಸ ಮಾಡಿ” ಅಂತ ಹೇಳಿದ್ಮೇಲೆ ಪೌಲ “ಪವಿತ್ರಶಕ್ತಿ ನಿಮ್ಮಲ್ಲಿ ಹುರುಪು ತುಂಬ್ಲಿ” ಅಂತ ಹೇಳಿದ್ದಾನೆ. (ರೋಮ. 12:11) ನಿಮಗೆ ಗೊತ್ತಾ? ಪವಿತ್ರ ಶಕ್ತಿ ನಮ್ಮಲ್ಲಿ ಹುರುಪು ತುಂಬಿದ್ರೆ ಒಳ್ಳೇದನ್ನ ಮಾಡೋಕೆ ನಮಗೆ ಬೇಕಾಗಿರೋ ಬಲ, ಶಕ್ತಿ, ಸಾಮರ್ಥ್ಯ ಎಲ್ಲ ಸಿಗುತ್ತೆ. ಆಗ ನಾವು ನಮಗೆ ನೋವು ಮಾಡಿದವ್ರನ್ನ ಉದಾರವಾಗಿ ಕ್ಷಮಿಸ್ತೀವಿ. ಅವ್ರಿಗೆ ಕೋಮಲ ಮಮತೆ ತೋರಿಸ್ತೀವಿ. ಹಾಗಾಗಿ ಯೆಹೋವನ ಹತ್ರ ‘ಪವಿತ್ರ ಶಕ್ತಿ ಕೊಡಪ್ಪಾ’ ಅಂತ ನಾವು ಅಂಗಲಾಚಿ ಬೇಡ್ಕೋಬೇಕು.—ಲೂಕ 11:13.

“ನಿಮ್ಮಲ್ಲಿ ಒಡಕು ಇರಬಾರದು”

13. ಸಭೇಲಿ ಹೇಗೆಲ್ಲ ಒಡಕು ಬಂದುಬಿಡಬಹುದು?

13 ನಮ್ಮ ಸಭೆಗಳಲ್ಲಿ “ಎಲ್ಲ ತರದ ಜನ್ರು” ಇದ್ದಾರೆ. (1 ತಿಮೊ. 2:3, 4) ಇವರು ಬೇರೆ ಬೇರೆ ಭಾಷೆ, ಊರು, ಪರಿಸ್ಥಿತಿಗಳಲ್ಲಿ ಬೆಳೆದುಬಂದಿದ್ದಾರೆ. ಹಾಗಾಗಿ ಇವರು ಹಾಕೋ ಬಟ್ಟೆ, ಹೇರ್‌ಸ್ಟೈಲ್‌, ಅವರು ಪಡ್ಕೊಳ್ಳೋ ಚಿಕಿತ್ಸೆ, ಅವರು ನೋಡೋ ಮನೋರಂಜನೆ ಎಲ್ಲಾ ಬೇರೆ ಬೇರೆ ಆಗಿರಬಹುದು. ನಾವು ಹುಷಾರಾಗಿಲ್ಲ ಅಂದ್ರೆ ಈ ವಿಷ್ಯಗಳು ನಮ್ಮಲ್ಲಿ ಒಡಕು ತಂದುಬಿಡುತ್ತೆ. (ರೋಮ. 14:4; 1 ಕೊರಿಂ. 1:10) ಹಾಗಾಗಿ ನಾವು ಒಬ್ರನ್ನೊಬ್ರು ಪ್ರೀತಿಸಿ ಅಂತ ದೇವರು ಕಲಿಸಿದ್ದನ್ನ ನೆನಪಲ್ಲಿಡಬೇಕು. ‘ನಾನ್‌ ಮಾಡೋದೇ ಸರಿ’ ಅಂತ ಹೇಳ್ಕೊಂಡು ಓಡಾಡಬಾರದು.—ಫಿಲಿ. 2:3.

14. ನಾವು ಯಾವಾಗ್ಲೂ ಪ್ರೋತ್ಸಾಹಿಸೋದು ಯಾಕೆ ಮುಖ್ಯ?

14 ಸಭೇಲಿ ಒಡಕು ಬರದೇ ಇರೋ ತರ ನೋಡ್ಕೊಳ್ಳೋಕೆ ನಾವೆಲ್ಲ ಇನ್ನೂ ಏನು ಮಾಡಬಹುದು? ನಮ್ಮನ್ನ ನೋಡಿದ್ರೆನೇ ಸಭೆಯವ್ರೆಲ್ಲ ಖುಷಿ ಪಡೋ ತರ, ಎಲ್ರನ್ನ ಪ್ರೋತ್ಸಾಹಿಸೋ ತರ ನಾವು ಯಾವಾಗ್ಲೂ ನಡ್ಕೋಬೇಕು. (1 ಥೆಸ. 5:11) ನಿಷ್ಕ್ರಿಯರಾಗಿ ಇದ್ದ ಮತ್ತು ತಪ್ಪು ಮಾಡಿ ಸಭೆಯಿಂದ ಹೊರಗೆ ಹೋದ ಎಷ್ಟೋ ಜನ ಇತ್ತೀಚಿಗೆ ವಾಪಸ್‌ ಸಭೆಗೆ ಬಂದಿದ್ದಾರೆ. ಅವ್ರನ್ನೆಲ್ಲ ನಾವು ಖುಷಿ ಖುಷಿಯಾಗಿ ಸ್ವಾಗತಿಸಬೇಕು. (2 ಕೊರಿಂ. 2:8) ಈ ತರ ಖುಷಿಯಾಗಿ ಸ್ವಾಗತಿಸಿದ್ರೆ ತುಂಬ ಪ್ರಯೋಜ್ನ ಆಗುತ್ತೆ. ಸುಮಾರು ಹತ್ತು ವರ್ಷಗಳಿಂದ ನಿಷ್ಕ್ರಿಯರಾಗಿ ಇದ್ದ ಒಬ್ಬ ಸಿಸ್ಟರ್‌ ಸಭೆಗೆ ವಾಪಸ್‌ ಬಂದಾಗ ಅವ್ರಿಗೆ ತುಂಬ ಖುಷಿ ಆಯ್ತು. ಅವರು ಹೀಗೆ ಹೇಳ್ತಾರೆ: “ಸಭೆಯವ್ರೆಲ್ಲಾ ನಗುನಗ್ತಾ ಶೇಕ್‌ಹ್ಯಾಂಡ್‌ ಕೊಟ್ಟು ನನ್ನನ್ನ ಸ್ವಾಗತಿಸಿದ್ರು. ಯೆಹೋವನೇ ನನ್ನ ಕೈ ಹಿಡ್ಕೊಂಡು ಖುಷಿಯಾಗಿರೋಕೆ ಸಭೆಗೆ ವಾಪಸ್‌ ಕರೆದಂಗೆ ಅನಿಸ್ತು.” (ಅ. ಕಾ. 3:19) ಯಾವಾಗ್ಲೂ ಎಲ್ರಿಗೂ ಪ್ರೋತ್ಸಾಹ ಕೊಡೋ ರೂಢಿಯನ್ನ ನಾವು ಬೆಳೆಸ್ಕೊಳ್ಳೋಣ. ಆಗ ಕಷ್ಟ ಪಡ್ತಿರೋರಿಗೆ ಸಹಾಯ ಮಾಡೋಕೆ ಯೇಸು ನಮ್ಮನ್ನ ಬಳಸ್ಕೊಳ್ತಾನೆ.—ಮತ್ತಾ. 11:28, 29.

15. ಸಭೇಲಿ ಒಡಕು ತರದೇ ಇರೋಕೆ ನಾವಿನ್ನೂ ಏನ್‌ ಮಾಡಬೇಕು? (ಚಿತ್ರ ನೋಡಿ.)

15 ನಾವು ಸಭೇಲಿ ಒಡಕು ತರಬಾರದಂದ್ರೆ, ನಾವು ಹೇಗೆ ಮಾತಾಡ್ತೀವಿ ಅನ್ನೋ ವಿಷ್ಯದಲ್ಲಿ ಹುಷಾರಾಗಿರಬೇಕು. “ನಾಲಿಗೆ ರುಚಿ ನೋಡೋ ತರ ಕಿವಿ ಮಾತುಗಳನ್ನ ಕೇಳಿಸ್ಕೊಂಡಾಗ ಯಾವುದು ಸರಿ ಯಾವುದು ತಪ್ಪು ಅಂತ ತಿಳ್ಕೊಳ್ಳಲ್ವಾ?” ಅಂತ ಯೋಬ 12:11 ಹೇಳುತ್ತೆ. ಅಂದ್ರೆ ಅಡಿಗೆ ಮಾಡಿದ್ಮೇಲೆ ಅದನ್ನ ಬೇರೆಯವ್ರಿಗೆ ಬಡಿಸೋ ಮುಂಚೆ ಎಲ್ಲಾ ಸರಿ ಇದ್ಯಾ ಇಲ್ವಾ ಅಂತ ಒಂದು ಸಲ ಚೆಕ್‌ ಮಾಡ್ತೀವಿ ತಾನೇ? ಅದೇ ತರ ನಾವು ಏನಾದ್ರೂ ಹೇಳೋ ಮುಂಚೆ ‘ನಾನು ಹೇಳೋಕೆ ಹೋಗ್ತಿರೋದು ಸರಿನಾ’ ಅಂತ ಒಂದ್ಸಲ ಯೋಚ್ನೆ ಮಾಡಬೇಕು. (ಕೀರ್ತ. 141:3) ನೆನಪಿಡಿ, ಆಡಿದ ಮಾತನ್ನ ವಾಪಸ್‌ ತಗೊಳ್ಳೋಕಾಗಲ್ಲ. ಅದಕ್ಕೆ ನಾವು ಯಾರ ಹತ್ರ ಏನೇ ಮಾತಾಡೋದಾದ್ರೂ ಅದು ಅವ್ರಿಗೆ ಖುಷಿಯಾಗೋ ತರ, ಪ್ರೋತ್ಸಾಹ ಕೊಡೋ ತರ, “ಪ್ರಯೋಜನ ತರೋ” ತರ ಇರಬೇಕು.—ಎಫೆ. 4:29.

ಮಾತಾಡೋ ಮುಂಚೆ ಯೋಚ್ನೆ ಮಾಡಿ (ಪ್ಯಾರ 15 ನೋಡಿ)


16. ಯಾರೆಲ್ಲ ಪ್ರೋತ್ಸಾಹ ಕೊಡೋ ತರ ಮಾತಾಡೋದು ಒಳ್ಳೇದು?

16 “ಸರಿಯಾದ ಸಮಯದಲ್ಲಿ ಹೇಳಿದ ಮಾತು ಎಷ್ಟೋ ಉತ್ತಮ” ಅಂತ ಜ್ಞಾನೋಕ್ತಿ ಹೇಳುತ್ತೆ. (ಜ್ಞಾನೋ. 15:23) ಹಾಗಾಗಿ ಗಂಡಂದಿರೇ ಮತ್ತು ಅಪ್ಪಅಮ್ಮಂದಿರೇ, ನೀವು ಮನೇಲಿ ಯಾವಾಗ್ಲೂ ಪ್ರೋತ್ಸಾಹ ಕೊಡೋ ತರಾನೇ ಮಾತಾಡಬೇಕು ಅನ್ನೋದನ್ನ ನೆನಪಲ್ಲಿಡಿ. (ಕೊಲೊ. 3:19, 21; ತೀತ 2:4) ಹಿರಿಯರೇ, ನೀವು ಯೆಹೋವನ ಕುರಿಗಳನ್ನ ನೋಡ್ಕೊಳ್ತಾ ಇರೋದ್ರಿಂದ ಅವ್ರಿಗೆ ಖುಷಿಯಾಗೋ ತರ, ಸಾಂತ್ವನ ಕೊಡೋ ತರ ಮಾತಾಡಿ.—ಯೆಶಾ. 32:1, 2; ಗಲಾ. 6:1.

ಮನಸಾರೆ ಪ್ರೀತಿಸಿ!

17. ನಮ್ಮ ಸಹೋದರ ಸಹೋದರಿಯರನ್ನ ಮನಸಾರೆ ಪ್ರೀತಿಸೋಕೆ ನಾವೇನು ಮಾಡಬೇಕು?

17 “ನಾವು ಮಾತಲ್ಲಿ ಮಾತ್ರ ಪ್ರೀತಿ ತೋರಿಸಿದ್ರೆ ಸಾಕಾಗಲ್ಲ. ನಾವು ನಿಜವಾಗ್ಲೂ ಪ್ರೀತಿಸ್ತೀವಿ ಅಂತ ನಮ್ಮ ಕೆಲಸಗಳಿಂದನೂ ಗೊತ್ತಾಗಬೇಕು” ಅಂತ ಅಪೊಸ್ತಲ ಯೋಹಾನ ನಮ್ಮೆಲ್ರನ್ನ ಪ್ರೋತ್ಸಾಹಿಸಿದ್ದಾನೆ. (1 ಯೋಹಾ. 3:18) ಯೋಹಾನ ಹೇಳಿದ ತರ ಒಬ್ರನ್ನೊಬ್ರು ಮನಸಾರೆ ಪ್ರೀತಿಸೋದು ಹೇಗೆ? ಅವ್ರ ಜೊತೆ ಜಾಸ್ತಿ ಸಮಯ ಕಳಿಬೇಕು. ಮೀಟಿಂಗಲ್ಲಿ, ಸೇವೇಲಿ ಅವ್ರ ಜೊತೆ ಮಾತಾಡೋಕೆ ಸಮಯ ಮಾಡ್ಕೊಬೇಕು. ಅಷ್ಟೇ ಅಲ್ಲ ಅವ್ರನ್ನ ಆಗಾಗ ಹೋಗಿ ಭೇಟಿ ಮಾಡ್ತಿರಬೇಕು. ಹೀಗೆ ಮಾಡಿದ್ರೆ ಅವ್ರ ಜೊತೆ ನಮಗಿರೋ ಬಾಂಧವ್ಯ ಇನ್ನೂ ಗಟ್ಟಿಯಾಗುತ್ತೆ. ಆಗ ನಾವು ‘ಒಬ್ರನ್ನೊಬ್ರು ಮನಸಾರೆ ಪ್ರೀತಿಸಿ’ ಅಂತ ದೇವರು ಹೇಳಿದಾಗೇ ನಡ್ಕೊತೀವಿ. (1 ಥೆಸ. 4:9) ಜೊತೆಗೆ “ಸಹೋದರರು ಒಂದಾಗಿ ಒಗ್ಗಟ್ಟಿಂದ ಇರೋದು ಎಷ್ಟೋ ಒಳ್ಳೇದು, ಎಷ್ಟೋ ಮನೋಹರ!” ಅಂತ ಸವಿದು ನೋಡ್ತೀವಿ.—ಕೀರ್ತ. 133:1.

ಗೀತೆ 154 ಪ್ರೀತಿ ಶಾಶ್ವತ