ಬೆತೆಲ್ ಭೇಟಿ ಮಾಡುವುದರ ಕುರಿತ ಮಾಹಿತಿ
ನಮ್ಮ ಬ್ರಾಂಚ್ ಆಫೀಸ್‌ಗಳನ್ನು ಅಂದರೆ ಬೆತೆಲನ್ನು ಭೇಟಿ ಮಾಡುವಂತೆ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ನಮ್ಮ ಆಫೀಸ್‌ಗಳಲ್ಲಿ ನಡೆಯೋ ಪ್ರದರ್ಶನಗಳನ್ನು ನೋಡಲು ಗೈಡ್‌ಗಳು ಬೇಕಾಗಿಲ್ಲ ನೀವೇ ನೋಡಬಹುದು.
ಯುಕ್ರೇನ್
ಪ್ರದರ್ಶನ
ನಮ್ಮ ಬ್ರಾಂಚಲ್ಲಿ ಟೂರ್ ಜೊತೆಗೆ ಎರಡು ವಸ್ತುಸಂಗ್ರಹಾಲಯ ಕೂಡ ಇದೆ. ಒಂದರಲ್ಲಿ, ಯುಕ್ರೇನಲ್ಲಿ 100ಕ್ಕಿಂತ ಹೆಚ್ಚು ವರ್ಷಗಳಿಂದ ನಡಿತಿರೋ ಸಿಹಿಸುದ್ದಿ ಸಾರೋ ಕೆಲಸದ ಬಗ್ಗೆ ಇರೋ ಇತಿಹಾಸ ಬಗ್ಗೆ ಇದೆ. ಯುಕ್ರೇನ್ ಸೋವಿಯತ್ ಒಕ್ಕೂಟದ ಭಾಗ ಆಗಿದ್ದಾಗ ಸಾವಿರಾರು ಯೆಹೋವನ ಸಾಕ್ಷಿಗಳು ಹಿಂಸೆ ಅನುಭವಿಸಿದ್ದರ ಬಗ್ಗೆ ಮತ್ತು ಅವರನ್ನ ಸೈಬೀರಿಯಾಗೆ ಗಡಿಪಾರು ಮಾಡಿದ್ದರ ಬಗ್ಗೆ ಇದರಲ್ಲಿ ನೋಡಬಹುದು. ಇನ್ನೊಂದು ಸಂಗ್ರಹಾಲಯದಲ್ಲಿ ಅಪರೂಪದ ಬೈಬಲಗಳನ್ನ ಮತ್ತು ರಷ್ಯನ್ ಮತ್ತು ಯುಕ್ರೇನಿಯನ್ ಭಾಷೆಯ ಭಾಷಾಂತರಗಳಲ್ಲಿ ದೇವರ ಹೆಸರನ್ನು ಉಳಿಸಿಕೊಂಡು ಬಂದಿರೋದ್ರ ಬಗ್ಗೆ ನೋಡಬಹುದು. ಬ್ರಾಂಚ್ ಸುತ್ತಮುತ್ತ ಸೆಲ್ಪ್ ಗೈಡ್ ಟೂರ್ ಮಾಡಬಹುದು ಮತ್ತು ಗೆಸ್ಟ್ ಸೆಂಟರಿನಲ್ಲಿ ಆತಿಥ್ಯ ಆನಂದಿಸಬಹುದು.
ವಿಳಾಸ ಮತ್ತು ಫೋನ್ ನಂಬರ್