ಯುವಜನರ ಪ್ರಶ್ನೆಗಳು
ನಾನು ಜವಾಬ್ದಾರಿಯಿಂದ ನಡ್ಕೊತಿದ್ದೀನಾ?
ನಿಮ್ಮ ಬಗ್ಗೆ ನೀವೇನು ಹೇಳ್ತೀರಾ?
ನನ್ನಲ್ಲಿ ಕೆಳಗೆ ಕೊಟ್ಟಿರೋ ಈ ಗುಣಗಳು ಯಾವಾಗ್ಲೂ ಇರುತ್ತೆ, ತುಂಬ ಸಲ ಇರುತ್ತೆ, ಕೆಲವೊಮ್ಮೆ ಇರುತ್ತೆ ಅಥವಾ ಇರೋದೇ ಇಲ್ಲ
ಪ್ರಾಮಾಣಿಕವಾಗಿ ಇರೋದು
ಮಾತು ಕೊಟ್ಟಂತೆ ನಡ್ಕೊಳ್ಳೋದು
ಸಮಯ ಪಾಲಿಸೋದು
ಕಷ್ಟಪಟ್ಟು ಕೆಲ್ಸ ಮಾಡೋದು
ಅಚ್ಚುಕಟ್ಟಾಗಿ ಇರೋದು
ಸಹಾಯ ಮಾಡೋದು
ನ್ಯಾಯವಾಗಿ ನಡ್ಕೊಳ್ಳೋದು
ಗೌರವ ಕೊಡೋದು
ಕಾಳಜಿ ತೋರಿಸೋದು
ಈ ಗುಣಗಳಲ್ಲಿ ಯಾವುದನ್ನ ನೀವು ಜಾಸ್ತಿ ತೋರಿಸ್ತೀರ?
ವೆರಿಗುಡ್, ಈ ಗುಣಗಳನ್ನ ಹಾಗೇ ತೋರಿಸ್ತಿರಿ.—ಫಿಲಿಪ್ಪಿ 3:16.
ನೀವು ಯಾವ ಗುಣನ ಇನ್ನೂ ಬೆಳೆಸ್ಕೊಬೇಕು ಅಂತಿದ್ದೀರಾ?
ಕೆಳಗೆ ಕೊಟ್ಟಿರೋ ಸಲಹೆ ಪಾಲಿಸಿದ್ರೆ, ಆ ಗುಣಗಳನ್ನ ಬೆಳೆಸ್ಕೊಳ್ಳೋಕೆ ನಿಮಗೆ ಸಹಾಯ ಆಗುತ್ತೆ.
ಜವಾಬ್ದಾರಿಯಿಂದ ನಡ್ಕೊಳ್ಳೋದು ಅಂದ್ರೇನು?
ಜವಾಬ್ದಾರಿಯಿಂದ ನಡ್ಕೊಳ್ಳೋರು ಮನೇಲಿ, ಸ್ಕೂಲಲ್ಲಿ ಮತ್ತು ಸಮಾಜದಲ್ಲಿ ಅವ್ರಿಗಿರೋ ಕೆಲ್ಸನ ಅಚ್ಚುಕಟ್ಟಾಗಿ ಮಾಡ್ತಾರೆ. ಅವರು ಏನು ಮಾಡ್ತಾರೋ ಅದಕ್ಕೆ ಅವರು ಲೆಕ್ಕ ಕೊಡಬೇಕಾಗುತ್ತೆ ಅಂತ ಅರ್ಥ ಮಾಡ್ಕೊತಾರೆ. ಆದ್ರಿಂದ ಅವರು ಏನಾದ್ರೂ ತಪ್ಪು ಮಾಡಿದ್ರೆ ಅದನ್ನ ಒಪ್ಕೊತಾರೆ, ಕ್ಷಮೆ ಕೇಳ್ತಾರೆ ಮತ್ತು ಅದನ್ನ ಸರಿ ಮಾಡೋಕೆ ಪ್ರಯತ್ನ ಹಾಕ್ತಾರೆ.
ಬೈಬಲ್ ಹೀಗೆ ಹೇಳುತ್ತೆ: “ಪ್ರತಿಯೊಬ್ಬನು ತನ್ನ ಹೊರೆಯನ್ನ [ಜವಾಬ್ದಾರಿಯನ್ನ] ತಾನೇ ಹೊತ್ಕೊಬೇಕು.”—ಗಲಾತ್ಯ 6:5, ಪಾದಟಿಪ್ಪಣಿ.
ನಾನು ಯಾಕೆ ಜವಾಬ್ದಾರಿಯಿಂದ ನಡ್ಕೊಬೇಕು?
ಜವಾಬ್ದಾರಿ ಇರೋ ವ್ಯಕ್ತಿ ತನ್ನ ಸಾಮರ್ಥ್ಯ, ಕೌಶಲ್ಯಗಳನ್ನ ಚೆನ್ನಾಗಿ ಬಳಸ್ತಾನೆ. ಅದಕ್ಕೆ ಜನ ಅವನನ್ನ ಮೆಚ್ಕೊತಾರೆ, ಅವನನ್ನ ಚಿಕ್ಕವನ ತರ ನೋಡಲ್ಲ. ಅವನಿಗೆ ಗೌರವ ಮತ್ತು ಫ್ರೀಡಮ್ ಕೊಡ್ತಾರೆ. ಅವನ ಮೇಲೆ ನಂಬಿಕೆ ಇಟ್ಟು ಇನ್ನೂ ಜಾಸ್ತಿ ಕೆಲ್ಸಗಳನ್ನ ವಹಿಸಿ ಕೊಡ್ತಾರೆ.
ಬೈಬಲ್ ಹೀಗೆ ಹೇಳುತ್ತೆ: “ತನ್ನ ಕೆಲಸದಲ್ಲಿ ನಿಪುಣನಾಗಿರೋ ವ್ಯಕ್ತಿಯನ್ನ ನೋಡಿದ್ದೀಯಾ? ಅವನು ಸಾಮಾನ್ಯ ಜನ್ರ ಮುಂದೆ ಅಲ್ಲ, ರಾಜರ ಮುಂದೆ ನಿಲ್ತಾನೆ.”—ಜ್ಞಾನೋಕ್ತಿ 22:29.
ಜವಾಬ್ದಾರಿಯಿಂದ ನಡ್ಕೊಳ್ಳೋರು ತಮ್ಮ ಸಮಯ, ಶಕ್ತಿನ ಉದಾರವಾಗಿ ಕೊಡ್ತಾರೆ. ಆದ್ರಿಂದ ಅವರಿಗೆ ಒಳ್ಳೇ ಫ್ರೆಂಡ್ಸ್ ಸಿಗ್ತಾರೆ.
ಬೈಬಲ್ ಹೀಗೆ ಹೇಳುತ್ತೆ: “ಕೊಡೋದನ್ನ ರೂಢಿ ಮಾಡ್ಕೊಳ್ಳಿ, ಆಗ ಜನ ನಿಮಗೆ ಕೊಡ್ತಾರೆ.”—ಲೂಕ 6:38.
ಜವಾಬ್ದಾರಿಯಿಂದ ನಡ್ಕೊಳ್ಳೋ ವ್ಯಕ್ತಿಗೆ, ‘ನನಗೆ ಕೊಟ್ಟಿರೋ ಕೆಲ್ಸನ ಚೆನ್ನಾಗಿ ಮಾಡ್ತಿದ್ದೀನಿ’ ಅನ್ನೋ ತೃಪ್ತಿ ಇರುತ್ತೆ. ಇದು ಅವನಿಗೆ ಕಾನ್ಫಿಡೆನ್ಸ್ ಜಾಸ್ತಿ ಮಾಡುತ್ತೆ.
ಬೈಬಲ್ ಹೀಗೆ ಹೇಳುತ್ತೆ: ‘ಪ್ರತಿಯೊಬ್ಬನು ಅವನು ಮಾಡಿದ ಕೆಲಸವನ್ನ ಚೆನ್ನಾಗಿ ಪರೀಕ್ಷಿಸ್ಕೊಳ್ಳಲಿ. ಆಗ ತನ್ನ ಕೆಲಸದ ಬಗ್ಗೆ ಖುಷಿಪಡ್ತಾನೆ.’—ಗಲಾತ್ಯ 6:4.
ಜವಾಬ್ದಾರಿಯಿಂದ ನಡ್ಕೊಳ್ಳೋಕೆ ಇನ್ನೂ ಏನು ಮಾಡಬೇಕು?
ಈ ಪ್ರಶ್ನೆಗೆ ಉತ್ರ ತಿಳ್ಕೊಳ್ಳೋಕೆ ನಿಮ್ಮ ವಯಸ್ಸಿನವರು ಏನು ಹೇಳಿದ್ದಾರೆ ಅಂತ ನೋಡಿ. ನಿಮಗೆ ಅನಿಸೋ ತರನೇ ಅವರಲ್ಲಿ ಯಾರಿಗಾದ್ರೂ ಅನಿಸ್ತಿದ್ಯಾ ಅಂತ ಯೋಚಿಸಿ.
‘ನಾನು ಹೊರಗೆ ಬಂದ್ರೆ ಸಾಕು, ಅಪ್ಪಅಮ್ಮ ಪದೇಪದೇ ಫೋನ್ ಮಾಡಿ ಎಲ್ಲಿದ್ಯಾ, ಏನು ಮಾಡ್ತಿದ್ಯಾ ಅಂತ ಕೇಳ್ತಾನೇ ಇರ್ತಾರೆ. ನನ್ನ ಚಿಕ್ಕ ಹುಡುಗಿ ಅಂದ್ಕೊಂಡಿದ್ದಾರೆ.’ —ಕೆರಿ.
‘ನಾನು ಫ್ರೆಂಡ್ಸ್ ಜೊತೆ ಹೊರಗೆ ಹೋಗಬೇಕು ಅಂದಾಗ ನಮ್ಮ ಅಪ್ಪಅಮ್ಮ ನನ್ನನ್ನ ಆರಾಮವಾಗಿ ಕಳಿಸ್ತಾರೆ.’—ರಿಚರ್ಡ್.
‘ನನ್ನ ವಯಸ್ಸಿನವರು ಅವ್ರಿಗೆ ಇಷ್ಟ ಬಂದ ತರ ಇರೋದನ್ನ ನೋಡ್ದಾಗ, ಛೇ, ನಾನು ಈ ತರ ಇರೋಕೆ ಯಾಕೆ ನಮ್ಮ ಅಪ್ಪಅಮ್ಮ ಬಿಡ್ತಿಲ್ಲ!’—ಆ್ಯನೀ.
‘ನಮ್ಮ ಅಪ್ಪಅಮ್ಮ ನನಗೆ ಏನಿಷ್ಟಾನೋ ಅದನ್ನ ಮಾಡೋಕೆ ಫುಲ್ ಫ್ರೀಡಮ್ ಕೊಟ್ಟಿದ್ದಾರೆ. ಅದಕ್ಕೆ ನಾನು ಅವ್ರಿಗೆ ಥ್ಯಾಂಕ್ಸ್ ಹೇಳ್ತೀನಿ.’—ಮರಿನಾ.
ಇದ್ರಿಂದ ಏನು ಗೊತ್ತಾಗುತ್ತೆ: ಕೆಲವು ಯುವಕರಿಗೆ ಜಾಸ್ತಿ ಫ್ರೀಡಮ್ ಸಿಕ್ಕಿದೆ. ಇನ್ನು ಕೆಲವ್ರಿಗೆ ಅಷ್ಟೇನೂ ಫ್ರೀಡಮ್ ಸಿಕ್ಕಿಲ್ಲ. ಯಾಕೆ?
ಜೀವನ ಸತ್ಯ: ನಿಮ್ಮ ಅಪ್ಪಅಮ್ಮ ನಿಮಗೆಷ್ಟು ಫ್ರೀಡಮ್ ಕೊಟ್ಟಿದ್ದಾರೆ ಅನ್ನೋದು, ಅವರ ನಂಬಿಕೆನ ನೀವೆಷ್ಟು ಗಳಿಸಿದ್ದೀರಾ ಅಂತ ತೋರಿಸುತ್ತೆ.
ರಿಚರ್ಡ್ ಮತ್ತು ಮರಿನಾಗೆ ಅವರ ಅಪ್ಪಅಮ್ಮ ಯಾಕೆ ಫ್ರೀಡಮ್ ಕೊಟ್ರು ಅಂತ ಹೇಳ್ತಾರೆ ನೋಡಿ.
ರಿಚರ್ಡ್: ‘ನಮ್ಮ ಅಪ್ಪಅಮ್ಮಂಗೆ ನನ್ನ ಮೇಲೆ ಮೊದ್ಲು ಅಷ್ಟೇನೂ ನಂಬಿಕೆ ಇರ್ಲಿಲ್ಲ. ಆದ್ರೆ ನನಗಿದ್ದ ಸ್ವಲ್ಪ ಫ್ರೀಡಮ್‌ನ ನಾನು ಸರಿಯಾಗಿ ಬಳಸ್ಕೊಂಡೆ, ಆಗ ಅವ್ರಿಗೆ ನಂಬಿಕೆ ಬಂತು. ನಾನು ಎಲ್ಲಿಗೆ ಹೋಗ್ತಿದ್ದೀನಿ, ಯಾರ ಜೊತೆ ಹೋಗ್ತಿದ್ದೀನಿ ಅಂತ ಅವ್ರಿಗೆ ಸುಳ್ಳು ಹೇಳಲ್ಲ. ಇನ್ನೊಂದು ವಿಷ್ಯ ಏನಂದ್ರೆ, ಅವರು ಕೇಳೋಕೆ ಮುಂಚೆನೇ ನಾನು ಎಲ್ಲನೂ ಅವರ ಹತ್ರ ಹೇಳ್ತೀನಿ.’
ಮರಿನಾ: ‘ನಾನು ಅಪ್ಪಅಮ್ಮಂಗೆ ಎರಡು ಸಾರಿ ಸುಳ್ಳು ಹೇಳಿದೆ, ಆ ಎರಡು ಸಾರಿನೂ ನಾನು ಸಿಕ್ಕಿ ಹಾಕ್ಕೊಂಡೆ. ಅವತ್ತಿಂದ ನಾನು ಅವ್ರ ಹತ್ರ ಸುಳ್ಳು ಹೇಳ್ತಿಲ್ಲ. ನಾನು ಏನೇ ಮಾಡಿದ್ರೂ ಅದನ್ನ ಅವ್ರಿಗೆ ಮೊದ್ಲೇ ಹೇಳ್ತೀನಿ. ಹೊರಗೆ ಹೋಗೋಕೆ ಮುಂಚೆ ಅವ್ರ ಪರ್ಮಿಷನ್ ತಗೊತೀನಿ. ಈಗ ಅವರು ನನ್ನನ್ನ ತುಂಬ ನಂಬ್ತಾರೆ.’
ಮೊದ್ಲು ಯಾವುದು ಮಾಡ್ತೀರಾ?—ಗೇಮ್ಸ್ ಆಡ್ತೀರಾ ಅಥವಾ ಮನೆ ಕ್ಲೀನ್ ಇಡ್ತೀರಾ?
ರಿಚರ್ಡ್ ಮತ್ತು ಮರಿನಾ ತರನೇ ನಿಮಗೂ ಫ್ರೀಡಮ್ ಬೇಕಾ? ಹಾಗಾದ್ರೆ ಏನು ಮಾಡಬೇಕು ಅಂತ ಮುಂದೆ ನೋಡಿ:
ಮನೇಲಿ
ಮನೇಲಿರೋ ಕೆಲ್ಸಗಳನ್ನೆಲ್ಲ ನೀವು ಸರಿಯಾಗಿ ಮಾಡ್ತಿದ್ದೀರಾ?
ಅಪ್ಪಅಮ್ಮ ಹೇಳಿದ ಟೈಮ್‌ಗೆ ಮನೆಗೆ ಬರೋ ಅಭ್ಯಾಸ ನಿಮಗಿದ್ಯಾ?
ಮನೇಲಿ ಇರೋರಿಗೆ ಗೌರವ ಕೊಟ್ಟು ಮಾತಾಡ್ತಿರಾ?
ಮೇಲಿರೋ ಯಾವ ವಿಷ್ಯದಲ್ಲಿ ನೀವು ಇನ್ನೂ ಇಂಪ್ರೂ ಆಗಬೇಕು ಅನಿಸುತ್ತೆ?
ಬೈಬಲ್ ಹೀಗೆ ಹೇಳುತ್ತೆ: “ಅಪ್ಪಅಮ್ಮನ ಮಾತು ಕೇಳಿ.”—ಎಫೆಸ 6:1.
ಸ್ಕೂಲ್-ಕಾಲೇಜಲ್ಲಿ
ಹೋಮ್‌ವರ್ಕ್‌ನೆಲ್ಲ ಕರೆಕ್ಟ್ ಟೈಮ್‌ಗೆ ಮಾಡಿ ಮುಗಿಸ್ತೀರಾ?
ಒಳ್ಳೇ ಮಾರ್ಕ್ಸ್ ತಗೊಳೋಕೆ ಚೆನ್ನಾಗಿ ಓದ್ತಿದ್ದೀರಾ?
ಪ್ರತಿದಿನ ಓದೋ ಅಭ್ಯಾಸ ನಿಮಗಿದ್ಯಾ?
ಮೇಲಿರೋ ಯಾವ ವಿಷ್ಯದಲ್ಲಿ ನೀವು ಇನ್ನೂ ಇಂಪ್ರೂ ಆಗಬೇಕು ಅನಿಸುತ್ತೆ?
ಬೈಬಲ್ ಹೀಗೆ ಹೇಳುತ್ತೆ: “ವಿವೇಕನೂ ಸಂರಕ್ಷಣೆ ಕೊಡುತ್ತೆ.” (ಪ್ರಸಂಗಿ 7:12) ನೀವು ಚೆನ್ನಾಗಿ ಓದೋಕೆ ಕಲಿತ್ರೆ ವಿವೇಕ ಪಡ್ಕೊತೀರ.
ನಿಮ್ಮ ನಡತೆಯಲ್ಲಿ
ಅಪ್ಪಅಮ್ಮ ಮತ್ತು ಬೇರೆಯವರತ್ರ ನೀವು ಸತ್ಯಾನೇ ಹೇಳ್ತೀರಾ?
ದುಡ್ಡನ್ನ ಯೋಚಿಸಿ ಖರ್ಚು ಮಾಡ್ತೀರಾ?
ಕೊಟ್ಟ ಮಾತನ್ನ ಉಳಿಸ್ಕೊಳ್ತೀರಾ?
ಮೇಲಿರೋ ಯಾವ ವಿಷ್ಯದಲ್ಲಿ ನೀವು ಇನ್ನೂ ಇಂಪ್ರೂ ಆಗಬೇಕು ಅನಿಸುತ್ತೆ?
ಬೈಬಲ್ ಹೀಗೆ ಹೇಳುತ್ತೆ: ‘ಹೊಸ ವ್ಯಕ್ತಿತ್ವವನ್ನ ಹಾಕ್ಕೊಳ್ಳಬೇಕು.’ (ಎಫೆಸ 4:24.) ನೀವು ಒಳ್ಳೇ ಗುಣಗಳನ್ನ ಬೆಳೆಸ್ಕೊಬಹುದು ಮತ್ತು ಗೌರವನ ಸಂಪಾದಿಸಬಹುದು.
ಹೀಗೆ ಮಾಡಿ: ನೀವು ಯಾವುದ್ರಲ್ಲಿ ಇಂಪ್ರೂ ಆಗಬೇಕು ಅಂತಿದ್ದೀರ ಅಂತ ಮೊದ್ಲು ಡಿಸೈಡ್ ಮಾಡಿ. ಆಮೇಲೆ ಅದ್ರ ಬಗ್ಗೆ ಚೆನ್ನಾಗಿ ಗೊತ್ತಿರೋವ್ರ ಹತ್ರ ಸಲಹೆ ಕೇಳಿ. ಇಂಪ್ರೂ ಆಗೋಕೆ ನೀವು ಏನು ಮಾಡಬೇಕು ಅಂತ ಇದ್ದೀರಾ ಅನ್ನೋದನ್ನ ಬರೆದಿಡಿ. ನೀವು ಯಾವುದ್ರಲ್ಲಿ ಇಂಪ್ರೂ ಆಗ್ತಿದ್ದೀರ ಮತ್ತು ಯಾವುದ್ರಲ್ಲಿ ಆಗ್ತಿಲ್ಲ ಅಂತಾನೂ ಬರೆದಿಡಿ. ಒಂದು ತಿಂಗಳವರೆಗೂ ಹೀಗೆ ಮಾಡಿ. ಆಮೇಲೆ ತಿಂಗಳ ಕೊನೆಯಲ್ಲಿ ಎಷ್ಟು ಪ್ರಗತಿ ಆಗಿದ್ದೀರ ಅಂತ ಗಮನಿಸಿ.