ಯುವಜನರ ಪ್ರಶ್ನೆಗಳು
ನನ್ನನ್ನ ಯಾರೂ ಸೇರಿಸಿಕೊಳ್ಳದಿದ್ದರೆ ನಾನೇನು ಮಾಡಲಿ?
“ನೀನು ಬೇರೆಯವ್ರ ತರಾನೇ ಇರಬೇಕು. ಇಲ್ಲಾಂದ್ರೆ ನಿನಗೆ ಯಾರೂ ಫ್ರೆಂಡ್ಸ್ ಇರಲ್ಲ. ಅಂಥ ಜೀವನಾನೇ ವೇಸ್ಟ್. ಒಳ್ಳೇ ಭವಿಷ್ಯ ಇರಲ್ಲ. ನಿನ್ನ ಬಗ್ಗೆ ಯಾರೂ ಯೋಚನೆ ಮಾಡಲ್ಲ. ನೀನು ಯಾವಾಗಲೂ ಒಂಟಿಯಾಗಿ ಇರಬೇಕಾಗುತ್ತೆ.”—ಕಾರ್ಲ್.
ಹೌದಾ? ಇದು ನಿಜಾನಾ? ಕಾರ್ಲ್ ಹೇಳಿರೋ ತರ ಆಗಬಾರದು ಅಂತ ಕೆಲವ್ರು ಏನು ಬೇಕಾದ್ರೂ ಮಾಡ್ತಾರೆ. ನೀವೂ ಹಾಗೆ ಮಾಡ್ತೀರಾ? ಒಳ್ಳೇ ಫ್ರೆಂಡ್ಸ್ ಮಾಡ್ಕೊಳ್ಳೋಕೆ ಈ ಲೇಖನ ನಿಮಗೆ ಸಹಾಯ ಮಾಡುತ್ತೆ.
ನಾನೂ ಬೇರೆಯವ್ರ ತರಾನೇ ಇರಬೇಕು ಅಂತ ಜನ ಯಾಕೆ ಅಂದುಕೊಳ್ತಾರೆ?
ಯಾರೂ ತಮ್ಮನ್ನ ಸೇರಿಸಿಕೊಳ್ಳಲ್ಲ ಅಂತ ಅವ್ರು ಭಯಪಡ್ತಾರೆ. “ಸೋಷ್ಯಲ್ ಮೀಡಿಯಾದಲ್ಲಿ ನಾನು ಕೆಲವ್ರ ಫೋಟೋಸ್ ನೋಡ್ದೆ. ಅವ್ರು ನನ್ನನ್ನು ಬಿಟ್ಟು ಎಲ್ಲೋ ಸುತ್ತಾಡೋಕೆ ಹೋಗಿದ್ರು. ಅದನ್ನು ನೋಡ್ದಾಗ ಅವ್ರು ನನ್ನನ್ನು ಯಾಕೆ ಸೇರಿಸಿಕೊಂಡಿಲ್ಲ ಅಂತ ನೆನಸಿ ಬೇಜಾರಾಯ್ತು. ಅವ್ರಿಗೆ ನಾನಂದ್ರೆ ಇಷ್ಟ ಇಲ್ಲ ಅಂತ ಅನ್ಸುತ್ತೆ. ನನ್ನ ತಲೇಲಿ ಇದೇ ವಿಷ್ಯ ಓಡ್ತಿತ್ತು.”—ನಟಾಲಿ.
ಯೋಚಿಸಿ: ನಿಮ್ಮನ್ನು ಯಾರಾದ್ರೂ ತಮ್ಮ ಜೊತೆ ಸೇರಿಸಿಕೊಳ್ಳದೆ ದೂರ ಮಾಡಿದ್ದಾರಾ? ಅವ್ರು ನಿಮ್ಮನ್ನು ಸೇರಿಸಿಕೊಳ್ಳಬೇಕು ಅಂತ ನೀವು ಅವ್ರ ತಾಳಕ್ಕೆ ತಕ್ಕಂತೆ ಕುಣಿದಿದ್ದೀರಾ?
ಬೇರೆಯವ್ರು ವಿಚಿತ್ರವಾಗಿ ನೋಡೋದು ಅವ್ರಿಗೆ ಇಷ್ಟ ಇಲ್ಲ. “ನನ್ನ ಅಪ್ಪ-ಅಮ್ಮ ನನ್ಗೆ ಮೊಬೈಲ್ ಕೊಡ್ಸಿಲ್ಲ. ಫ್ರೆಂಡ್ಸ್ ನನ್ನ ನಂಬರ್ ಕೇಳೋವಾಗ ನನ್ನತ್ರ ಮೊಬೈಲ್ ಇಲ್ಲ ಅಂತ ಹೇಳ್ತೀನಿ. ಆಗ ಅವ್ರು, ‘ಏನು? ಇಷ್ಟು ದೊಡ್ಡವಳಾದ್ರೂ ನಿನ್ನ ಹತ್ರ ಮೊಬೈಲ್ ಇಲ್ವಾ?’ ಅಂತ ಕೇಳ್ತಾರೆ. ನನಗಿನ್ನೂ 13 ವರ್ಷ ಅಷ್ಟೇ ಅಂತ ಹೇಳಿದ್ರೆ, ನಿಂದೂ ಒಂದು ಜೀವ್ನನಾ ಅನ್ನೋ ಥರ ನೋಡ್ತಾರೆ.”—ಮೇರಿ.
ಯೋಚಿಸಿ: ನಿಮ್ಮ ಅಪ್ಪ-ಅಮ್ಮ ಇಟ್ಟಿರೋ ರೂಲ್ಸ್ನ ಪಾಲಿಸಿದ್ರಿಂದ ಯಾವತ್ತಾದ್ರೂ ಬೇರೆಯವ್ರು ನಿಮ್ಮನ್ನ ವಿಚಿತ್ರವಾಗಿ ನೋಡಿದ್ದಾರಾ? ಆಗ ನೀವೇನು ಮಾಡಿದ್ರಿ?
ಬೇರೆಯವ್ರು ಗೇಲಿ ಮಾಡ್ತಾರೇನೋ ಅಂತ ಯೋಚಿಸ್ತಾರೆ. “ತುಂಬ ಡಿಫ್ರೆಂಟಾಗಿ ನಡಕೊಳ್ಳೋವ್ರನ್ನ, ಮಾತಾಡೋವ್ರನ್ನ, ಡಿಫ್ರೆಂಟಾಗಿ ಆರಾಧನೆ ಮಾಡೋವ್ರನ್ನ ಕಂಡ್ರೆ ಶಾಲೆಯಲ್ಲಿ ಎಲ್ರೂ, ‘ಇವ್ರೇನ್ ವಿಚಿತ್ರ ಜನ್ರಪ್ಪಾ’ ಅಂತ ಅನ್ಕೊತಾರೆ. ನೀವು ಡಿಫ್ರೆಂಟಾಗಿದ್ರೆ ಎಲ್ರ ಕಣ್ಣು ನಿಮ್ಮೇಲೆನೇ ಇರುತ್ತೆ, ನಿಮ್ ಕಾಲೆಳೆಯೋಕೆ ಕಾಯ್ತಿರ್ತಾರೆ.”—ಒಲಿವಿಯ.
ಯೋಚಿಸಿ: ನೀವು ಡಿಫ್ರೆಂಟಾಗಿದ್ದೀರಂತ ನಿಮ್ಗೆ ಯಾರಾದ್ರೂ ಗೇಲಿ ಮಾಡಿದ್ದಾರಾ? ಆಗ ನೀವೇನು ಮಾಡಿದ್ರಿ?
ಅವ್ರು ಫ್ರೆಂಡ್ಸ್ನ್ನ ಕಳ್ಕೊಳ್ಳೋಕೆ ಇಷ್ಟಪಡಲ್ಲ. “ನಾನು ಯಾರ ಜೊತೆ ಇರ್ತೀನೋ ಅವ್ರ ತರಾನೇ ಇರೋಕೆ ಟ್ರೈ ಮಾಡ್ತೀನಿ. ಅವ್ರು ಮಾತಾಡೋ ತರಾನೇ ನಾನೂ ಮಾತಾಡ್ತೀನಿ. ನಗು ಬರದೇ ಇರೋ ಜೋಕಿಗೂ ನಗಾಡ್ತೀನಿ. ನನ್ನ ಫ್ರೆಂಡ್ಸ್ ಯಾರಿಗಾದ್ರೂ ಗೇಲಿ ಮಾಡಿದ್ರೆ ನಾನೂ ಅವ್ರ ಜೊತೆ ಸೇರ್ಕೊಂಡು ಗೇಲಿ ಮಾಡ್ತೀನಿ. ಅದ್ರಿಂದ ಆ ವ್ಯಕ್ತಿಗೆ ಬೇಜಾರು ಆಗುತ್ತೆ ಅಂತ ಗೊತ್ತಿದ್ರೂ ನಾನು ಅವ್ರಿಗೆ ನೋವು ಮಾಡ್ತೀನಿ.”—ರೇಚೆಲ್.
ಯೋಚಿಸಿ: ನಿಮ್ ಫ್ರೆಂಡ್ಸ್ ನಿಮ್ಮನ್ನು ಇಷ್ಟಪಡಬೇಕು, ಸೇರಿಸ್ಕೊಬೇಕು ಅನ್ನೋದು ಅಷ್ಟು ಮುಖ್ಯನಾ? ಅದಕ್ಕೋಸ್ಕರ ನಿಮ್ ಮಾತು, ನಡತೆನಾ ಬದಲಾಯಿಸಿದ್ದೀರಾ?
ನಿಮಗಿದು ತಿಳಿದಿರಲಿ
ಬೇರೆಯವ್ರು ನಿಮ್ಮನ್ನು ಸೇರಿಸ್ಕೋಬೇಕಂತ ಯಾವಾಗ್ಲೂ ಅವ್ರನ್ನ ಮೆಚ್ಚಿಸೋಕೆ ಹೋದ್ರೆ ನಿಮಗೇ ಕಷ್ಟ ಆಗುತ್ತೆ. ಯಾಕೆಂದ್ರೆ . . .
ಅವ್ರಿಗೆ ನೀವು ಇಷ್ಟ ಆಗಲ್ಲ. ನೀವು ನಾಟಕ ಮಾಡ್ತಿದ್ದೀರ ಅಂತ ಅವ್ರಿಗೆ ಚೆನ್ನಾಗಿ ಗೊತ್ತಾಗುತ್ತೆ. “ನಾನು ಹೀಗೆ ನಾಟಕ ಮಾಡ್ದಾಗ ಫ್ರೆಂಡ್ಸ್ ಜೊತೆ ಇರೋಕೆ ತುಂಬ ಕಷ್ಟ ಆಯ್ತು. ನಾವು ಇರೋ ತರನೇ ಇದ್ರೆ ಒಳ್ಳೇದು ಅಂತ ಗೊತ್ತಾಯ್ತು. ಯಾಕೆಂದ್ರೆ ನಾವು ನಾಟಕ ಮಾಡ್ದಾಗ ಅದು ಅವ್ರಿಗೆ ಗೊತ್ತಾಗುತ್ತೆ” ಅಂತ 20 ವರ್ಷದ ಬ್ರಾಯನ್ ಹೇಳ್ತಾನೆ.
ಏನು ಮಾಡಬಹುದು: ನಿಮ್ಗೆ ಯಾವುದು ಮುಖ್ಯ ಅಂತ ಯೋಚ್ಸಿ. ‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಿ’ ಅಂತ ಬೈಬಲ್ ಹೇಳುತ್ತೆ. (ಫಿಲಿಪ್ಪಿ 1:10) ಹಾಗಾಗಿ ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ನಾನು ತಪ್ಪು ಅಂತ ನಂಬುತ್ತೀರೋ ವಿಷ್ಯಗಳನ್ನ ಸರಿ ಅಂತ ಹೇಳೋವ್ರ ಜೊತೆ ಸೇರೋದು ಮುಖ್ಯನಾ? ಅಥವಾ ನಾನು ಹೇಗಿದ್ದೇನೊ ಹಾಗೇ ಇರೋದು ಮುಖ್ಯನಾ?’
“ಬೇರೆಯವ್ರ ತರ ಇರೋಕೆ ಪ್ರಯತ್ನಿಸೋದ್ರಿಂದ ನಿಮ್ಗೇನೂ ಪ್ರಯೋಜನ ಆಗಲ್ಲ. ನೀವು ಹಾಗೆ ಮಾಡಿದ್ರೆ ಯಾರೂ ನಿಮ್ಮನ್ನು ಇಷ್ಟಪಡಲ್ಲ. ಅದ್ರಿಂದ ಒಳ್ಳೇದನ್ನಲ್ಲ, ಕೆಟ್ಟದ್ದನ್ನೇ ಕಲಿತೀರಿ.”—ಜೇಮ್ಸ್.
ನಿಮ್ಮ ಭಾವನೆಗಳನ್ನು ಹಂಚಿಕೊಳ್ಳೋಕೆ ಆಗಲ್ಲ. ಯಾಕಂದ್ರೆ, ನೀವು ಯಾವಾಗ್ಲೂ ಬೇರೆಯವ್ರು ಇಷ್ಟ ಪಡೋ ರೀತಿಯಲ್ಲೇ ಇರೋಕೆ ಪ್ರಯತ್ನಿಸ್ತೀರಿ. ಜೆರೆಮಿ ಅನ್ನೋ ಯುವಕ ಹೀಗೆ ಹೇಳ್ತಾನೆ, “ಬೇರೆಯವ್ರು ನನ್ನನ್ನು ಸೇರಿಸ್ಕೋಬೇಕಂತ ಅವ್ರು ಏನು ಹೇಳಿದ್ರೂ ಮಾಡೋಕೆ ರೆಡಿ ಇದ್ದೆ. ಇದ್ರಿಂದ ನನ್ನ ಹೆಸ್ರು ಹಾಳಾಗುತ್ತೆ ಅಂತ ಗೊತ್ತಿದ್ರೂ ಅದನ್ನೇ ಮಾಡ್ತಿದ್ದೆ. ಯಾವಾಗ್ಲೂ ಅವ್ರು ಹಾಕೋ ತಾಳಕ್ಕೆ ತಕ್ಕಂತೆ ಕುಣಿದು ನಾನು ಅವ್ರ ಕೈಗೊಂಬೆ ಆಗಿಬಿಟ್ಟೆ.
ಏನು ಮಾಡಬಹುದು: ನಿಮಗೆ ಯಾವುದು ಸರಿ, ಯಾವುದು ತಪ್ಪು ಅನ್ನೋದನ್ನ ತಿಳ್ಕೊಂಡು ಅದ್ರ ಪ್ರಕಾರ ಜೀವಿಸಿ. ಅದನ್ನ ಬಿಟ್ಟು, ನಿಮ್ಮ ಫ್ರೆಂಡ್ಸ್ಗಾಗಿ ಊಸರವಳ್ಳಿ ತರ ಆಗಾಗ ಬಣ್ಣ ಬದಲಾಯಿಸ್ತಿರ್ಬೇಡಿ. ಬೈಬಲ್ ಹೀಗೆ ಹೇಳುತ್ತೆ, ’ಒಂದು ವಿಷ್ಯನ ಎಲ್ರೂ ಮಾಡ್ತಾರೆ ಅಂತ ನೀವು ಮಾಡೋಕೆ ಹೋಗಬೇಡಿ.’—ವಿಮೋಚನಕಾಂಡ 23:2, ಹೋಲಿ ಬೈಬಲ್—ಈಜ಼ಿ-ಟು-ರೀಡ್ ವರ್ಷನ್.
“ಅವ್ರಿಗೆ ಇಷ್ಟ ಆಗೋ ಮ್ಯೂಸಿಕ್, ಗೇಮ್ಸ್, ಬಟ್ಟೆ, ಟಿವಿ ಪ್ರೋಗ್ರಾಮ್ಸ್, ಮೇಕಪ್ ಅದನ್ನೆಲ್ಲ ನಾನು ಇಷ್ಟಪಡೋಕೆ ಪ್ರಯತ್ನಪಟ್ಟೆ. ನಾನು ಸುಮ್ಮನೆ ನಾಟಕ ಆಡ್ತಿದ್ದೆ ಅಂತ ನಂಗೆ ಮಾತ್ರ ಅಲ್ಲ, ಅವ್ರಿಗೂ ಗೊತ್ತಾಗ್ತಿತ್ತು ಅನ್ಸುತ್ತೆ. ಕೊನೆಗೆ ನಂಗೆ ತುಂಬ ಬೇಜಾರಾಯ್ತು. ನಂಗೆ ಯಾರೂ ಇಲ್ಲ ಅಂತ ಅನಿಸ್ತಿತ್ತು. ನಾನು ಎಂಥವ್ಳು ಅಂತ ನಂಗೇ ಗೊತ್ತಾಗ್ತಿರಲಿಲ್ಲ. ನಂಗೆ ಇಷ್ಟ ಇರೋ ವಿಷಯ ಯಾವುದು ಅಂತಾನೇ ಗೊತ್ತಾಗ್ತಿರ್ಲಿಲ್ಲ. ನಾವು ಎಲ್ರ ಜೊತೆ ಸೇರೋಕಾಗಲ್ಲ, ಎಲ್ರೂ ನಮ್ಮನ್ನು ಸೇರಿಸಿಕೊಳ್ಳೋದೂ ಇಲ್ಲ ಅಂತ ಆಮೇಲೆ ನನಗೆ ಅರ್ಥ ಆಯ್ತು. ಹಾಗಂತ ಫ್ರೆಂಡ್ಸೇ ಸಿಗಲ್ಲ ಅಂತ ನೆನಸಬಾರ್ದು. ಫ್ರೆಂಡ್ಸ್ ಮಾಡ್ಕೊಳ್ಳೋಕೆ, ನಮ್ಮನ್ನೇ ನಾವು ಅರ್ಥಮಾಡ್ಕೊಳ್ಳೋಕೆ ಸ್ವಲ್ಪ ಟೈಮ್ ಬೇಕು ಅನ್ನೋದನ್ನ ಮರಿಬೇಡಿ.”—ಮೆಲಿಂಡ.
ನಿಮ್ಮಲ್ಲಿ ಕೆಟ್ಟ ಗುಣ ಬೆಳೆಯುತ್ತೆ. ಕ್ರಿಸ್ ಅನ್ನೋ ಯುವಕನ ಸಂಬಂಧಿಕರಲ್ಲಿ ಒಬ್ಬ ಹುಡುಗ ತನ್ನ ಫ್ರೆಂಡ್ಸನ ಮೆಚ್ಚಿಸೋಕೆ ಹೋಗಿ ಹಾಳಾದ. ಅವನ ಬಗ್ಗೆ ಕ್ರಿಸ್ ಹೀಗೆ ಹೇಳ್ತಾನೆ: “ಫ್ರೆಂಡ್ಸ್ ತನ್ನನ್ನ ಸೇರಿಸ್ಕೋಬೇಕಂತ ಅವ್ನು ಹಿಂದೆ ಯಾವತ್ತೂ ಮಾಡ್ದೇ ಇರೋ ವಿಷ್ಯಗಳನ್ನ ಮಾಡ್ದ. ಡ್ರಗ್ಸ್ ತಗೊಳ್ಳೋಕೆ ಶುರುಮಾಡ್ದ. ಅವ್ನು ಅದಕ್ಕೆ ಗುಲಾಮ ಆಗಿಬಿಟ್ಟ. ಅವ್ನು ಇನ್ನೇನು ಹಳ್ಳ ಹಿಡೀತಿದ್ದ.”
ಏನು ಮಾಡಬಹುದು: ಕೆಟ್ಟ ವಿಷಯಗಳನ್ನು ಮಾತಾಡೋ, ಸರಿಯಾಗಿ ನಡಕೊಳ್ಳದೇ ಇರೋ ಜನ್ರನ್ನ ದೂರ ಇಡಿ. ಬೈಬಲ್ ಹೀಗೆ ಹೇಳುತ್ತೆ: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.”—ಜ್ಞಾನೋಕ್ತಿ 13:20.
“ಕೆಲವೊಮ್ಮೆ ಬೇರೆಯವ್ರಿಗೆ ಇಷ್ಟ ಆಗೋ ರೀತಿ ನಡ್ಕೊಳ್ಳೋದು ಒಳ್ಳೇದೇ. ಆದ್ರೆ ಅವ್ರು ನಮ್ಮನ್ನ ಸೇರಿಸ್ಕೋಬೇಕಂತ ಹೇಳಿ ತಪ್ಪಾಗಿರೋ ವಿಷ್ಯಗಳನ್ನ ಮಾಡೋಕೆ ಹೋಗ್ಬಾರ್ದು. ನಿಮ್ಮನ್ನು ಫ್ರೆಂಡ್ ಮಾಡ್ಕೊಬೇಕು ಅಂತ ನಿಜವಾಗಿಯೂ ಆಸೆಪಡೋರು ನೀವು ಇರೋ ತರಾನೇ ನಿಮ್ಮನ್ನು ಒಪ್ಪಿಕೊಳ್ತಾರೆ.”—ಮೆಲನಿ.
ಕಿವಿಮಾತು: ಫ್ರೆಂಡ್ಸ್ ಮಾಡ್ಕೊಳ್ಳೋವಾಗ ನಿಮ್ಗೆ ಇಷ್ಟ ಇರೋ ವಿಷಯಗಳನ್ನೇ ಅವ್ರೂ ಇಷ್ಟಪಡ್ಬೇಕಂತ ಯೋಚಿಸ್ಬೇಡಿ. ಆದ್ರೆ ಸರಿ-ತಪ್ಪಿನ ಬಗ್ಗೆ ನಿಮಗಿರೋ ಅಭಿಪ್ರಾಯ, ನಿಮ್ಮ ನಂಬಿಕೆ ಮತ್ತು ರೀತಿ-ನೀತಿಗಳನ್ನ ಒಪ್ಪಿಕೊಳ್ಳೋವ್ರನ್ನೇ ಫ್ರೆಂಡ್ ಮಾಡ್ಕೊಳ್ಳಿ.