ಯುವಜನರ ಪ್ರಶ್ನೆಗಳು
ಈಗಿರೋ ಫ್ರೆಂಡ್ಸೂ ಇರ್ಲಿ, ಹೊಸ ಫ್ರೆಂಡ್ಸೂ ಬರ್ಲಿ
“ನನ್ ಫ್ರೆಂಡ್ಸ್ ಸರ್ಕಲಲ್ಲಿ ಇರೋವ್ರ ಜೊತೆ ನಾನು ಆರಾಮಾಗಿ ಇರ್ತೀನಿ, ಅವ್ರನ್ನ ಬಿಟ್ಟು ಬೇರೆಯವ್ರನ್ನ ಫ್ರೆಂಡ್ಸ್ ಮಾಡ್ಕೊಳ್ಳಕ್ಕೇ ಆಗ್ತಿಲ್ಲ”—ಆಲೆನ್.
“ನನ್ ಫ್ರೆಂಡ್ಸ್ ಸರ್ಕಲ್ ತುಂಬ ಚಿಕ್ಕದು, ಹಾಗಿದ್ರೇನೇ ನಂಗಿಷ್ಟ. ಅವ್ರನ್ನ ಬಿಟ್ಟು ಬೇರೆಯವ್ರನ್ನ ಹುಡುಕ್ಕೊಂಡು ಹೋಗಿ ಮಾತಾಡ್ಸೋ ಹುಡ್ಗಿ ನಾನಲ್ಲ.”—ಸಾರಾ.
ನಿಮ್ಗೂನೂ ಆಲೆನ್, ಸಾರಾಗೆ ಅನಿಸ್ದಂಗೆ ಅನ್ಸುತ್ತಾ? ನಿಮ್ಗೂನೂ ಜಿಗರಿ ದೋಸ್ತ್ಗಳಿದ್ದಾರಾ, ಅವ್ರನ್ನ ಬಿಟ್ಟು ಬೇರೆಯವ್ರನ್ನ ಫ್ರೆಂಡ್ಸ್ ಮಾಡ್ಕೊಳ್ಳೋಕೆ ಕಷ್ಟ ಆಗುತ್ತಾ?
ಹೌದಾದ್ರೆ, ಈ ಲೇಖನ ನಿಮ್ಗೆನೇ!
ಫ್ರೆಂಡ್ಸ್ ಸರ್ಕಲಿಂದ ಆಗೋ ಸಮಸ್ಯೆ
ಫ್ರೆಂಡ್ಸ್ ಸರ್ಕಲ್ ಇರೋದು ತಪ್ಪಲ್ಲ. ತುಂಬ ಕ್ಲೋಸ್ ಆಗಿರೋ ಫ್ರೆಂಡ್ಸ್ ಸರ್ಕಲ್ ಇದ್ರೆ, ‘ನನ್ ಬಗ್ಗೆ ಯೋಚ್ನೆ ಮಾಡೊವ್ರು ಇದ್ದಾರಲ್ಲ’ ಅಂತ ನೆಮ್ಮದಿಯಾಗಿರ್ತೀರ. ಯಾವುದೇ ಕಾರಣಕ್ಕೂ ಅವ್ರು ನಿಮ್ಮನ್ನ ಬಿಟ್ಕೊಡಲ್ಲ, ನೀವೇನಾದ್ರೂ ತಪ್ಪುಮಾಡಿದ್ರೂ ಕೈಬಿಡಲ್ಲ.
“ಬೇರೆಯವ್ರು ನಮ್ಮನ್ನ ಇಷ್ಟಪಟ್ರೆ, ಅವ್ರ ಗ್ರೂಪಲ್ಲಿ ನಮ್ಮನ್ನೂ ಸೇರಿಸ್ಕೊಂಡ್ರೆ ತುಂಬ ಚೆನ್ನಾಗಿರುತ್ತೆ. ನಾವು ಚಿಕ್ಕವರಗಿರುವಾಗ ಬೇರೆಯವ್ರ ಜೊತೆ ಸೇರಿದ್ರೆ ಸಾಕಪ್ಪ ಅಂತಿರ್ತೀವಿ.”—ಕ್ಯಾರೆನ್, 19.
ನಿಮ್ಗೆ ಗೊತ್ತಾ? ಯೇಸುಗೆ ತುಂಬ ಫ್ರೆಂಡ್ಸ್ ಇದ್ರೂ ಅವರಲ್ಲಿ 12 ಜನ ಮಾತ್ರ ಅಪೊಸ್ತಲರಾಗಿದ್ರು ಅಂದ್ರೆ ಸ್ಪೆಷಲ್ ಫ್ರೆಂಡ್ಸ್ ಆಗಿದ್ರು. ಆ 12 ಮಂದಿಯಲ್ಲೂ ಪೇತ್ರ, ಯಾಕೋಬ, ಯೋಹಾನ ಅನ್ನೋವ್ರು ಯೇಸುವಿಗೆ ಜಾಸ್ತಿ ಕ್ಲೋಸ್ ಆಗಿದ್ರು.—ಮಾರ್ಕ 9:2; ಲೂಕ 8:51.
ಹಾಗಿದ್ರೂ ನಾವು ಕೆಲವ್ರ ಜೊತೆ ಮಾತ್ರ ಸಹವಾಸ ಮಾಡ್ತಿದ್ರೆ, ಬೇರೆ ಯಾರ ಜೊತೆನೂ ಸೇರೆದೆ ಹೋದ್ರೆ, ಕೆಲವು ಪ್ರಾಬ್ಲಮ್ಸ್ ಬರ್ಬಹುದು. ಉದಾಹರಣೆಗೆ:
ಈಗಿರೋರಿಗಿಂತ ಇನ್ನೂ ಒಳ್ಳೇ ಫ್ರೆಂಡ್ಸ್ ನಿಮಗೆ ಮಿಸ್ ಆಗ್ಬಹುದು.
“ನಿಮ್ಹಾಗೇ ಇರೋವ್ರನ್ನ ಮಾತ್ರ ಫ್ರೆಂಡ್ಸ್ ಮಾಡ್ಕೊಂಡ್ರೆ ಜೀವನದಲ್ಲಿ ಬೇರೆ ಬೇರೆ ಅನುಭವನ, ಜನ್ರನ್ನ ಮಿಸ್ ಮಾಡ್ಕೊಳ್ತೀರ.”—ಇವಾನ್, 21.
ನಿಮ್ಮನ್ನ ಜಂಭದ ಕೋಳಿ ಥರ ಮಾಡ್ಬಿಡಬಹುದು.
“ನೀವು ಬರೀ ಒಂದೇ ಗ್ರೂಪ್ ಜೊತೆ ಮಾತ್ರ ಸೇರ್ತಿದ್ರೆ, ನಿಮ್ಗೆ ಬೇರೆ ಯಾರ ಜೊತೆನೂ ಮಾತಾಡೋಕೆ ಇಷ್ಟ ಇಲ್ಲ ಅನ್ನೋ ಅರ್ಥಕೊಡ್ಬಹುದು.”—ಸಾರಾ, 17.
ಬೇರೆಯವರನ್ನ ಇನ್ಸಲ್ಟ್ ಮಾಡಿಬಿಡ್ಬಹುದು.
“ನೀವಾಗಿ ನೀವೇ ಯಾರನ್ನೂ ಇನ್ಸಲ್ಟ್ ಮಾಡದೇ ಇರ್ಬಹುದು. ಆದರೆ ನಿಮ್ ಫ್ರೆಂಡ್ಸ್ ಸರ್ಕಲ್ನಲ್ಲಿ ಇರೋವ್ರು ಯಾರನ್ನಾದ್ರೂ ಇನ್ಸಲ್ಟ್ ಮಾಡಿದ್ರೆ ಅದೇನ್ ತಪ್ಪಲ್ಲ ಅಂತ ಅನಿಸ್ಬಹುದು, ಅದನ್ನ ನೋಡಿ ನೀವು ಖುಷಿನೂ ಪಡ್ಬಹುದು.”—ಜೇಮ್ಸ್, 17.
ನಿಮ್ಗೆ ತೊಂದ್ರೆನೂ ಆಗ್ಬಹುದುಅದ್ರಲ್ಲೂ, ಏನೇ ಆಗ್ಲಿ ಆ ಗ್ರೂಪ್ನ ಬಿಡಲ್ಲ ಅಂತ ತುದಿಗಾಲಲ್ಲಿ ನಿಂತಿದ್ರೆ ತೊಂದ್ರೆ ಗ್ಯಾರಂಟಿ
“ಒಂದ್ ಕೋತಿ ಇಡೀ ವನಾನ ಕೆಡಿಸ್ತು ಅನ್ನೋ ಥರ, ಗ್ರೂಪಲ್ಲಿರೋ ಒಬ್ನು ತಪ್ಪು ಕೆಲಸ ಮಾಡಿದ್ರೆ ಎಲ್ರೂ ಅದನ್ನೇ ಕಲೀತಾರೆ.”—ಮಾರ್ಟೀನಾ, 17.
ನೀವೇನ್ ಮಾಡ್ಬಹುದು
ನೀವ್ ಯಾವ್ದನ್ನ ಸರಿತಪ್ಪು ಅಂತ ನಂಬಿದ್ದೀರೋ ಅದ್ರ ಬಗ್ಗೆ ಯೋಚಿಸಿ.
ನಿಮ್ಮನ್ನ ನೀವೇ ಕೇಳ್ಕೊಳ್ಳಿ: ‘ಇದು ಸರಿ, ಇದು ತಪ್ಪು ಅಂತ ಸರಿಯಾಗಿ ತಿಳಿದ್ಕೊಂಡು ಅದೇ ದಾರೀಲಿ ನೀವು ನಡೀತಿದ್ದೀರಾ? ಆ ದಾರೀಲಿ ನಡೆಯೋಕೆ ನಿಮ್ಮ ಫ್ರೆಂಡ್ಸ್ ಸಪೋರ್ಟ್ ಮಾಡ್ತಾರಾ ಅಥ್ವಾ ಅವ್ರೇ ನಿಮ್ ಕಾಲು ಎಳೀತಾರಾ? ಏನೇ ಆದ್ರೂನೂ ಅಂಥವ್ರನ್ನ ಕಳಕೊಳ್ಳೋಕೆ ನಿಮಗೆ ಇಷ್ಟ ಇಲ್ವ?’
ಬೈಬಲ್ ಕೊಡೋ ಸಲಹೆ: ಕೆಟ್ಟವ್ರ ಸಹವಾಸ ಒಳ್ಳೇಯವ್ರನ್ನ ಹಾಳುಮಾಡುತ್ತೆ.—1 ಕೊರಿಂಥ 15:33.
“ನಿಮ್ಮ ಫ್ರೆಂಡ್ಸ್ ಸರ್ಕಲ್ನಲ್ಲಿ ಇರೋರು ನೀವು ನಡೀತಿರೋ ಒಳ್ಳೇ ದಾರಿಲಿ ನಡೀತಿಲ್ಲಾಂದ್ರೆ ಮುಂದೊಂದು ದಿನ ಕನಸು-ಮನಸಲ್ಲೂ ಯೋಚ್ನೆ ಮಾಡ್ದೇ ಇರೋ ತಪ್ಪು ಕೆಲಸಗಳನ್ನ ನೀವು ಮಾಡ್ಬಿರ್ತೀರ.”—ಎಲೆನ್, 14.
ನಿಮ್ಗೆ ಯಾವುದು ಮುಖ್ಯ ಅಂತ ಯೋಚ್ನೆ ಮಾಡಿ.
ನಿಮ್ಮನ್ನ ನೀವೇ ಕೇಳ್ಕೊಳ್ಳಿ: ‘ನೀವು ನಡೀತಿರೋ ಒಳ್ಳೇ ದಾರಿಗಿಂತ ನಿಮ್ಗೆ ನಿಮ್ಮ ಫ್ರೆಂಡ್ಸ್ ಸರ್ಕಲ್ಲೇ ಮುಖ್ಯಾನಾ? ನಿಮ್ಮ ಫ್ರೆಂಡ್ಸಲ್ಲಿ ಒಬ್ಬ ತಪ್ಮಾಡಿದ್ರೆ ಏನಾಡ್ತೀರಾ?’
ಬೈಬಲ್ ಕೊಡೋ ಸಲಹೆ: “ಯಾರ ಬಗ್ಗೆ ನನಗೆ ಮಮತೆಯಿದೆಯೋ ಅವರೆಲ್ಲರನ್ನು ನಾನು ಗದರಿಸುತ್ತೇನೆ.”—ಪ್ರಕಟನೆ 3:19.
“ನಿಮ್ಮ ಗ್ರೂಪಲ್ಲಿ ಯಾರಾದ್ರು ತಪ್ಮಾಡಿ ಪ್ರಾಬ್ಲಮಲ್ಲಿ ಸಿಕ್ಕಾಕ್ಕೊಂಡಾಗ ಅವ್ನು ಮಾಡಿದ್ದು ತಪ್ಪು ಅಂತ ನೀವು ಧೈರ್ಯವಾಗಿ ಹೇಳಿದ್ರೆ, ಜನ ಅದನ್ನ ನಂಬಿಕೆ ದ್ರೋಹ ಅಂತ ಅಂದ್ಕೊಳ್ತಾರೆ.”—ಮೆಲಾನಿ, 22.
ಹೊಸ ಫ್ರೆಂಡ್ಸನ್ನೂ ಮಾಡ್ಕೊಳ್ಳಿ.
ನಿಮ್ಮನ್ನ ನೀವೇ ಕೇಳ್ಕೊಳ್ಳಿ: ‘ನನ್ಗೆ ಇಲ್ಲಿವರೆಗೆ ಗೊತ್ತಿಲ್ದೆ ಇರೋ ಹೊಸಬರನ್ನ ಫ್ರೆಂಡ್ಸ್ ಮಾಡ್ಕೊಂಡ್ರೆ ನನಗೆ ಏನೆಲ್ಲ ಪ್ರಯೋಜನ ಸಿಗ್ಬಹುದು?’
ಬೈಬಲ್ ಕೊಡೋ ಸಲಹೆ: “ನಿಮ್ಮ ಸ್ವಂತ ವಿಷಯಗಳಲ್ಲಿ ವೈಯಕ್ತಿಕ ಆಸಕ್ತಿಯನ್ನು ವಹಿಸುತ್ತಾ ಅದರ ಮೇಲೆಯೇ ದೃಷ್ಟಿಯನ್ನಿಟ್ಟಿರುವ ಬದಲಿಗೆ ಇತರರ ವಿಷಯಗಳಲ್ಲಿಯೂ ವೈಯಕ್ತಿಕ ಆಸಕ್ತಿಯನ್ನು ತೋರಿಸುವವರಾಗಿರಿ.”—ಫಿಲಿಪ್ಪಿ 2:4.
“ಕೆಲವು ಮಕ್ಕಳ ಮನೆಲಿ ತುಂಬ ಪ್ರಾಬ್ಲಮ್ ಇರೋದ್ರಿಂದ ಅವ್ರನ್ನ ನೋಡ್ಲಿಕ್ಕೆ ಅಷ್ಟೇನೂ ಸ್ಪೆಷಲ್ ಅಂತ ಅನ್ಸಲ್ಲ. ಆದ್ರೆ ಒಂದ್ಸಾರಿ ನೀವು ಅವ್ರನ್ನ ಪರಿಚಯ ಮಾಡ್ಕೊಂಡ್ರೆ ಅವರೂ ಒಂದ್ರೀತೀಲಿ ತುಂಬ ಸ್ಪೆಷಲ್ ಅಂತ ನಿಮ್ಗೇ ಗೊತ್ತಾಗುತ್ತೆ.”—ಬ್ರಾಯನ್, 19.
ಕೊನೇದಾಗಿ ಒಂದ್ ಮಾತು: ನಿಮ್ಗೆ ಕ್ಲೋಸ್ ಫ್ರೆಂಡ್ಸ್ ಸರ್ಕಲ್ ಇದ್ರೆ ತಪ್ಪೇನಿಲ್ಲ. ಆದ್ರೆ ಅದ್ರ ಜೊತೆಗೆ, ಹೊಸ ಫ್ರೆಂಡ್ಸನ್ನೂ ಮಾಡ್ಕೊಂಡ್ರೆ ನಿಮ್ಗೆ ಇನ್ನೂ ಒಳ್ಳೇದಾಗುತ್ತೆ. ಬೈಬಲ್ ಹೇಳೋ ಪ್ರಕಾರ: ಯಾರು ಬೇರೆಯವ್ರಿಗೆ ನೀರು ಕೊಡ್ತಾರೋ ಅವ್ರಿಗೆ ವಾಪಾಸ್ ನೀರು ಸಿಕ್ಕುತ್ತೆ.—ಜ್ಞಾನೋಕ್ತಿ 11:25.