ಯುವಜನರ ಪ್ರಶ್ನೆಗಳು
ನಮ್ಮ ಅಪ್ಪ-ಅಮ್ಮ ನಂಗೆ ಯಾಕೆ ಎಂಜಾಯ್ ಮಾಡೋಕೆ ಬಿಡಲ್ಲ?
ನೆನಸಿ, ನಿಮ್ಮ ಫ್ರೆಂಡ್ಸ್ ವೀಕೆಂಡಲ್ಲಿ ನಿಮ್ಮನ್ನ ಪಾರ್ಟಿಗೆ ಕರೆದಿದ್ದಾರೆ. ‘ಹೋಗಬಹುದಾ’ ಅಂತ ಅಪ್ಪ-ಅಮ್ಮ ಹತ್ರ ನೀವು ಕೇಳ್ತೀರ. ಆಗ ಅವ್ರು ‘ಇಲ್ಲ ಹೋಗಬೇಡ’ ಅಂತಾರೆ. ಇದನ್ನ ಕೇಳಿ ನಿಮಗೆ ಆಶ್ಚರ್ಯ ಆಗಲ್ಲ. ಯಾಕಂದ್ರೆ ಹೋದ ಸಲನೂ ಅವ್ರು ಹೀಗೇ ಹೇಳಿದ್ರು.
ಈ ಲೇಖನದಲ್ಲಿ ನೀವು ಈ ಪ್ರಶ್ನೆಗಳಿಗೆ ಉತ್ರ ತಿಳ್ಕೊಬಹುದು
ನಮ್ಮ ಅಪ್ಪ-ಅಮ್ಮ ಯಾವಾಗ್ಲೂ ಬೇಡ ಅಂತ ಯಾಕೆ ಹೇಳ್ತಾರೆ?
ನಿಮ್ಮ ಅಪ್ಪ-ಅಮ್ಮ ಬೇಡ ಅಂದಾಗ ಅವ್ರು ನಿಮಗೆ ಎಂಜಾಯ್ ಮಾಡೋಕೆ ಬಿಡ್ತಿಲ್ಲ ಅಂತ ನಿಮಗೆ ಅನಿಸಬಹುದು.
ಮೇರಿ ಅನ್ನೋ ಯುವತಿಗೆ ಹೊಸದಾಗಿ ಫೋನ್ ತಗೊಂಡಾಗ ಹೀಗೇ ಅನಿಸ್ತು. ಅವಳು ಹೇಳಿದ್ದು: “ನಾನು ಯಾವ ಆ್ಯಪ್ಗಳನ್ನ ಬಳಸಬೇಕು, ಯಾವುದನ್ನ ಡೌನ್ಲೋಡ್ ಮಾಡಬೇಕು, ಯಾರ ಜೊತೆ ಮಾತಾಡಬೇಕು, ಎಷ್ಟು ಹೊತ್ತು ಮಾತಾಡಬೇಕು ಅಂತ ನನ್ನ ಅಪ್ಪ ನೂರೆಂಟು ರೂಲ್ಸ್ ಮಾಡಿದ್ರು. ಆದ್ರೆ ನನ್ ಫ್ರೆಂಡ್ಸ್, ಅವ್ರಿಗೆ ಇಷ್ಟ ಬಂದ ಹಾಗೇ ನಡ್ಕೊತಿದ್ರು.”
ಯೋಚಿಸಿ: ಮೇರಿಯ ಅಪ್ಪ ಅವಳು ಎಂಜಾಯ್ ಮಾಡಬಾರದು ಅನ್ನೋದಕ್ಕೆ ಇಷ್ಟೊಂದು ರೂಲ್ಸ್ ಮಾಡಿದ್ರಾ? ಅಥವಾ ಹೀಗೆ ಮಾಡೋದಕ್ಕೆ ಬೇರೆ ಏನಾದ್ರೂ ಕಾರಣ ಇತ್ತಾ?
ಇದನ್ನ ಟ್ರೈ ಮಾಡಿ: ನೀವೇ ಈಗ ಅಪ್ಪ ಅಮ್ಮ ಅಂತ ನೆನಸಿ. ವಯಸ್ಸಿಗೆ ಬಂದ ನಿಮ್ಮ ಮಗ ಅಥವಾ ಮಗಳಿಗೆ ಈಗಷ್ಟೇ ಫೋನ್ ಕೊಡಿಸಿದ್ದೀರ. ಈಗ ನಿಮ್ಮ ಮನಸ್ಸಲ್ಲಿ ಯಾವೆಲ್ಲಾ ಯೋಚ್ನೆಗಳು ಬರಬಹುದು? ನಿಮ್ಮ ಮಕ್ಕಳಿಗೆ ತೊಂದ್ರೆ ಆಗಬಾರದು ಅಂತ ಯಾವ ರೂಲ್ಸ್ ಇಡ್ತೀರಾ? ನಿಮ್ಮ ಮಕ್ಕಳು ನಿಮ್ಮ ಹತ್ರ ‘ನಂಗೆ ನೀವು ಎಂಜಾಯ್ ಮಾಡೋಕೆ ಬಿಡಲ್ಲ’ ಅಂತ ಹೇಳಿದ್ರೆ ನೀವು ಏನ್ ಹೇಳ್ತೀರಾ?
“ನಮ್ಮಪ್ಪ ಯಾವಾಗ್ಲೂ ನಂಗೆ ‘ನೀನು ನನ್ ಜಾಗದಲ್ಲಿ ಇದ್ದು ನೋಡು’ ಅಂತ ಹೇಳ್ತಿದ್ರು. ಇದ್ರಿಂದ ಅವ್ರು ಯಾಕೆ ರೂಲ್ಸ್ ಮಾಡ್ತಾರೆ, ಮತ್ತೆ ಅದ್ರಿಂದ ನಂಗೇನು ಪ್ರಯೋಜ್ನ ಅಂತ ಅರ್ಥ ಮಾಡ್ಕೊಳ್ಳೋಕೆ ಆಯ್ತು. ನಂಗೆ ಏನಾದ್ರೂ ಮಕ್ಕಳು ಇದ್ದಿದ್ರೆ ನಾನೂ ಹಂಗೇ ಮಾಡ್ತಿದ್ದೆ.”—ಟಾನ್ಯಾ.
ನಮ್ಮ ಅಪ್ಪ-ಅಮ್ಮ ಪರ್ಮಿಷನ್ ಕೊಡಬೇಕು ಅಂದ್ರೆ ನಾನು ಏನು ಮಾಡಬೇಕು?
“ಕಿರಿಚಾಡೋದ್ರಿಂದ ಯಾವ ಪ್ರಯೋಜ್ನನೂ ಇಲ್ಲ, ಇದ್ರಿಂದ ನಮಗೂ ಬೇಜಾರಾಗುತ್ತೆ ಅಷ್ಟೇ ಅಲ್ಲ ನಮ್ಮ ಅಪ್ಪ-ಅಮ್ಮನಿಗೂ ಬೇಜಾರಾಗುತ್ತೆ. ಒಂದುವೇಳೆ ನಾವು ಜಾಸ್ತಿ ವಾದ ಮಾಡಿದ್ರೆ ನಮ್ಮ ಅಪ್ಪ-ಅಮ್ಮ ನಮಗೆ ಸರಿಯಾಗಿ ಯೋಚ್ನೆ ಮಾಡೋದಕ್ಕೆ ಇನ್ನೂ ಬರಲ್ಲ ಅಂತ ನೆನಸಿ ನಮಗೆ ಫ್ರೀಡಮ್ ಕೊಡೋಕೆ ಹಿಂದೆ ಮುಂದೆ ನೋಡ್ತಾರೆ.”—ರಿಚರ್ಡ್.
“ಅಪ್ಪ-ಅಮ್ಮ ಏನೇ ರೂಲ್ಸ್ ಮಾಡಿದ್ರೂ ಅದ್ರ ಹಿಂದೆ ಒಳ್ಳೇ ಕಾರಣ ಇದ್ದೇ ಇರುತ್ತೆ. ನಾವು ಖುಷಿಯಾಗಿ ಇರಬಾರದು ಅಂತ ಅವ್ರು ಹೀಗೆ ಮಾಡ್ತಿಲ್ಲ. ನಾನು ಎಂಜಾಯ್ ಮಾಡಬೇಕು, ಆದ್ರೆ ಅದ್ರಿಂದ ಯಾವ ತೊಂದ್ರೆನೂ ಆಗಬಾರದು ಅನ್ನೋದೇ ಅವ್ರ ಆಸೆ.”—ಐವಿ.
ಬೈಬಲ್ ತತ್ವ: “ಮೂರ್ಖ ತನ್ನ ಕೋಪವನ್ನೆಲ್ಲ ತೋರಿಸ್ತಾನೆ, ಆದ್ರೆ ವಿವೇಕಿ ಸಮಸ್ಯೆ ಕೊನೆ ಆಗೋ ತನಕ ಶಾಂತವಾಗಿ ಇರ್ತಾನೆ.”—ಜ್ಞಾನೋಕ್ತಿ 29:11.
“ನಾನು ನನ್ನ ಅಪ್ಪ ಮೊಬೈಲ್ ಉಪಯೋಗಿಸೋ ವಿಚಾರದಲ್ಲಿ ಇಟ್ಟಿದ್ದ ನಿಯಮಗಳನ್ನ ಅವ್ರಿಗೆ ಗೊತ್ತಾಗದ ಹಾಗೆ ಮೀರುತ್ತಿದ್ದೆ. ತಡ ರಾತ್ರಿ ಫ್ರೆಂಡ್ಸ್ಗೆ ಮೆಸೆಜ್ ಮಾಡ್ತಿದ್ದೆ, ಅಪ್ಪ ಪರ್ಮಿಷನ್ ಕೊಡದೇ ಇರೋ ಆ್ಯಪ್ಗಳನ್ನ ಡೌನ್ಲೋಡ್ ಮಾಡ್ಕೊತಿದ್ದೆ. ಇದು ಗೊತ್ತಾದ ಮೇಲೆ ಅಪ್ಪ ನಂಗೆ ಇನ್ನೂ ಸ್ಟ್ರಿಕ್ಟ್ ಮಾಡಿಬಿಟ್ರು, ಅವ್ರಿಗೆ ನನ್ನ ಮೇಲಿದ್ದ ನಂಬಿಕೆ ಕಮ್ಮಿ ಆಯ್ತು. ಹಾಗಾಗಿ ರೂಲ್ಸ್ನ ಮೀರೋದು ಸರಿಯಲ್ಲ, ಅದ್ರಿಂದ ಸಮಸ್ಯೆಗಳೇ ಜಾಸ್ತಿ.”—ಮಾರಿಯ.
“ತಾಳ್ಮೆಯಿಂದಿರಿ. ಅಪ್ಪ ಅಮ್ಮ ಇಟ್ಟಿರೋ ರೂಲ್ನ ಬದಲಾಯಿಸೋಕೆ ಸ್ವಲ್ಪ ಟೈಮ್ ಹಿಡಿಬಹುದು. ಆದ್ರೆ ನೀವು ಅವ್ರ ರೂಲ್ಸ್ನ್ನ ಫಾಲೋ ಮಾಡೋದನ್ನ ನೋಡಿದಾಗ ಅವ್ರು ನಿಮಗೆ ಜಾಸ್ತಿ ಫ್ರೀಡಮ್ ಕೊಡೋಕೆ ಮನಸ್ಸು ಮಾಡಬಹುದು.—ಮೆಲಿಂಡಾ.
ಬೈಬಲ್ ತತ್ವ: “ಮಕ್ಕಳೇ, ಎಲ್ಲ ವಿಷ್ಯದಲ್ಲಿ ನಿಮ್ಮ ಅಪ್ಪಅಮ್ಮನ ಮಾತು ಕೇಳಿ.”—ಕೊಲೊಸ್ಸೆ 3:20.
“ಇದು ಆಗಲೇಬೇಕು ಅಂತ ಅಪ್ಪ ಅಮ್ಮನಿಗೆ ಕಾಟ ಕೊಡ್ತಾನೇ ಇದ್ರೆ ಅದ್ರಿಂದ ಏನೂ ಪ್ರಯೋಜ್ನ ಆಗಲ್ಲ, ನಿಮಗೆ ಏನು ಬೇಕೋ ಅದು ಸಿಗಲ್ಲ.”—ನಟಾಲಿ.
“ನಾವು ಸರಿಯಾದ ತೀರ್ಮಾನ ಮಾಡಬೇಕು ಅನ್ನೋದೇ ಹೆತ್ತವರ ಆಸೆ. ಅದಕ್ಕೆ ನಾನು ಅವ್ರ ಜೊತೆ ಮಾತಾಡೋವಾಗ ಭಾವನಾತ್ಮಕವಾಗಿ ಅಲ್ಲ, ತರ್ಕಬದ್ಧವಾಗಿ ಮಾತಾಡೋಕೆ ಪ್ರಯತ್ನಿಸ್ತೀನಿ. ಹೀಗೆ ಮಾಡಿದ್ರಿಂದ ನಾನು ಕೇಳಿದ್ದಕ್ಕೆ ಅಪ್ಪ ಅಮ್ಮ ಹೂಂ ಅಂತ ಹೇಳಿದ್ದಾರೆ.”—ಜೊಸೆಪ್.
ಬೈಬಲ್ ತತ್ವ: “ನಿಮ್ಮ ಅಪ್ಪಅಮ್ಮಗೆ ಗೌರವ ಕೊಡಿ.”—ಎಫೆಸ 6:2.