ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಯೆಹೋವನ ನೈತಿಕ ಮಟ್ಟಗಳಿಗೆ ಅನುಸಾರ ಜೀವಿಸಿ

ಯೆಹೋವನ ನೈತಿಕ ಮಟ್ಟಗಳಿಗೆ ಅನುಸಾರ ಜೀವಿಸಿ

ಯೆಹೋವನು ಮಾನವರಿಗಾಗಿ ನೈತಿಕ ಮಟ್ಟಗಳನ್ನು ಇಟ್ಟಿದ್ದಾನೆ. ಉದಾಹರಣೆಗೆ, ಮದುವೆಯು ಗಂಡು ಮತ್ತು ಹೆಣ್ಣಿನ ಶಾಶ್ವತ ಬಂಧ ಎಂದು ಹೇಳಿದ್ದಾನೆ. (ಮತ್ತಾ 19:4-6, 9) ಆತನು ಎಲ್ಲಾ ರೀತಿಯ ಲೈಂಗಿಕ ಅನೈತಿಕತೆಯನ್ನು ಖಂಡಿಸುತ್ತಾನೆ. (1ಕೊರಿಂ 6:9, 10) ನಾವು ಹಾಕುವ ಬಟ್ಟೆ ಮತ್ತು ನಮ್ಮ ಕೇಶಾಲಂಕಾರದ ಬಗ್ಗೆ ಸಹ ಆತನು ತತ್ವಗಳನ್ನು ಕೊಟ್ಟಿದ್ದಾನೆ. ಇದನ್ನು ಪಾಲಿಸುವಾಗ ನಾವು ಈ ಲೋಕದವರಿಗಿಂತ ಭಿನ್ನವಾಗಿ ಕಾಣಿಸುತ್ತೇವೆ.—ಧರ್ಮೋ 22:5; 1ತಿಮೊ 2:9, 10.

ಆದರೆ ಈ ಲೋಕದ ಹೆಚ್ಚಿನ ಜನ ಯೆಹೋವನ ಮಟ್ಟಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. (ರೋಮ 1:18-32) ಬಟ್ಟೆ, ಕೇಶಾಲಂಕಾರ ಮತ್ತು ನಡತೆಯ ವಿಷಯದಲ್ಲಿ ಇಂದು ಜನಪ್ರಿಯವಾಗಿರುವ ಯೋಚನೆಯನ್ನೇ ಅನುಕರಿಸುತ್ತಾರೆ. ತಮ್ಮ ನಡತೆ ತಪ್ಪಾಗಿದ್ದರೂ ಅನೇಕರು ಅದರ ಬಗ್ಗೆ ಕೊಚ್ಚಿಕೊಳ್ಳುತ್ತಾ ದೇವರ ಮಟ್ಟಗಳನ್ನು ಪಾಲಿಸುವವರನ್ನು ಟೀಕಿಸುತ್ತಾರೆ.—1ಪೇತ್ರ 4:3, 4.

ಆದರೆ, ಯೆಹೋವನ ಸಾಕ್ಷಿಗಳಾಗಿರುವ ನಾವು ಧೈರ್ಯದಿಂದ ದೇವರ ನೈತಿಕ ಮಟ್ಟಗಳಿಗೆ ಅನುಸಾರವಾಗಿ ಜೀವಿಸಬೇಕು. (ರೋಮ 12:9) ಅದನ್ನು ಹೇಗೆ ಮಾಡುವುದು? ಯೆಹೋವನಿಗೆ ಏನು ಇಷ್ಟ ಎಂದು ನಾವು ಇತರರಿಗೆ ಜಾಣ್ಮೆಯಿಂದ ತಿಳಿಸಬೇಕು. ಆದರೆ ಮೊದಲು ನಾವು ಆತನ ಉನ್ನತ ಮಟ್ಟಗಳಿಗೆ ಅನುಸಾರವಾಗಿ ಜೀವಿಸಬೇಕು. ಉದಾಹರಣೆಗೆ, ಬಟ್ಟೆಯನ್ನು ಖರೀದಿಸುವಾಗ ಅಥವಾ ಕೇಶಾಲಂಕಾರವನ್ನು ಆಯ್ಕೆ ಮಾಡುವಾಗ, ‘ನನ್ನ ಆಯ್ಕೆ ಯೆಹೋವನ ಮಟ್ಟದ ಪ್ರಕಾರ ಇದೆಯಾ ಅಥವಾ ಈ ಲೋಕದ ಪ್ರಕಾರ ಇದೆಯಾ? ನನ್ನ ತೋರಿಕೆ ನೋಡಿದರೆ ನಾನು ದೇವರಿಗೆ ವಿಧೇಯನಾಗುವ ವ್ಯಕ್ತಿ ಅಂತ ಜನ ನೆನಸುತ್ತಾರಾ?’ ಎಂದು ಕೇಳಿಕೊಳ್ಳಬೇಕು. ಕಾರ್ಯಕ್ರಮ ಅಥವಾ ಚಲನಚಿತ್ರವನ್ನು ಆಯ್ಕೆ ಮಾಡುವಾಗ, ‘ಯೆಹೋವನು ಈ ಕಾರ್ಯಕ್ರಮವನ್ನು ಒಪ್ಪುತ್ತಾನಾ? ಇದು ಯಾರ ಮಟ್ಟಗಳಿಗೆ ಅನುಸಾರವಾಗಿದೆ? ನಾನು ಮಾಡುವ ಆಯ್ಕೆ ನನ್ನ ನೈತಿಕತೆಯನ್ನು ಹಾಳುಮಾಡುತ್ತಾ? (ಕೀರ್ತ 101:3) ನನ್ನ ಆಯ್ಕೆ ನನ್ನ ಕುಟುಂಬದವರನ್ನು ಅಥವಾ ಇತರರನ್ನು ಎಡವಿಸುತ್ತದಾ?’ ಎಂದು ಕೇಳಿಕೊಳ್ಳಬೇಕು.—1ಕೊರಿಂ 10:31-33.

ನಾವು ಯೆಹೋವನ ನೈತಿಕ ಮಟ್ಟಗಳಿಗೆ ಅನುಸಾರ ಜೀವಿಸುವುದು ಯಾಕೆ ಪ್ರಾಮುಖ್ಯ? ಯೇಸು ಕ್ರಿಸ್ತನು ಬಲುಬೇಗನೆ ದುಷ್ಟ ಜನರನ್ನು ಮತ್ತು ದುಷ್ಟತನವನ್ನು ನಾಶಮಾಡುತ್ತಾನೆ. (ಯೆಹೆ 9:4-7) ಆಗ ದೇವರ ಚಿತ್ತದಂತೆ ನಡೆಯುವವರು ಮಾತ್ರ ಬದುಕಿ ಉಳಿಯುತ್ತಾರೆ. (1ಯೋಹಾ 2:15-17) ಆದ್ದರಿಂದ ನಾವು ಯೆಹೋವನ ನೈತಿಕ ಮಟ್ಟಗಳನ್ನು ಎತ್ತಿಹಿಡಿಯೋಣ. ಆಗ ನಮ್ಮ ಒಳ್ಳೆಯ ನಡತೆಯನ್ನು ನೋಡುವವರು ನಮ್ಮ ದೇವರಿಗೆ ಮಹಿಮೆ ಕೊಡುವರು.—1ಪೇತ್ರ 2:11, 12.

ಬಟ್ಟೆ ಮತ್ತು ಕೇಶಾಲಂಕಾರದ ಬಗ್ಗೆ ನಾನು ಮಾಡುವ ಆಯ್ಕೆ ನನ್ನ ನೈತಿಕ ಮಟ್ಟಗಳು ಎಂಥವೆಂದು ತೋರಿಸಿಕೊಡುತ್ತದೆ?

ಯೆಹೋವ ದೇವರ ಗೆಳೆಯರಾಗೋಣ—ಒಂದು ಗಂಡಿಗೆ ಒಂದು ಹೆಣ್ಣು ಎಂಬ ವಿಡಿಯೋ ನೋಡಿ. ನಂತರ ಈ ಕೆಳಗಿನ ಪ್ರಶ್ನೆಗಳನ್ನು ಚರ್ಚಿಸಿ:

  • ಯೆಹೋವನ ಮಟ್ಟಗಳಿಗೆ ಅನುಸಾರ ಜೀವಿಸುವುದೇ ಜಾಣತನವಾಗಿದೆ ಯಾಕೆ?

  • ಹೆತ್ತವರು ತಮ್ಮ ಮಕ್ಕಳಿಗೆ ಯೆಹೋವನ ನೈತಿಕ ಮಟ್ಟಗಳ ಬಗ್ಗೆ ಚಿಕ್ಕ ವಯಸ್ಸಿನಿಂದಲೇ ಯಾಕೆ ಕಲಿಸಬೇಕು?

  • ಚಿಕ್ಕವರೂ ದೊಡ್ಡವರೂ ಹೀಗೆ ಎಲ್ಲರೂ ಯೆಹೋವನ ಒಳ್ಳೇತನದಿಂದ ಪ್ರಯೋಜನ ಪಡೆಯಲು ಜನರಿಗೆ ಹೇಗೆ ಸಹಾಯ ಮಾಡಬಹುದು?