ಗೀತೆ 101
ಬಾಳೋಣ ಐಕ್ಯದಿ
(ಎಫೆಸ 4:3)
-
1. ದ್ವೇಷದ ಈ ಲೋಕದಿಂದ
ನಮ್ಮನ್ನು ಯೆಹೋವ ತಂದ;
ಶಾಂತಿ, ಪ್ರೀತಿ, ಸಾಮರಸ್ಯ
ನಮಗೆ ನೀಡಿದ.
ಜೇನು ಗೂಡಿನಂತೆ
ನಮ್ಮ ಐಕ್ಯತೆ.
ಜೇನಿನಂತ ಪ್ರೀತಿ ತೋರಿ;
ಜೀವ ನೀಡೋ ವಾರ್ತೆ ಸಾರಿ;
ನಾವು ದೇವ ಸೇವೆ ಮಾಡಿ
ಬಾಳೋಣ ಐಕ್ಯದಿ.
-
2. ಐಕ್ಯಕ್ಕಾಗಿ ಪ್ರಾರ್ಥಿಸೋಣ;
ಸೌಮ್ಯ ಭಾವ ತೋರಿಸೋಣ;
ದೇವ ನಾಮ ಕೀರ್ತಿಸುತ್ತಾ,
ಐಕ್ಯದಿ ಸಾಗೋಣ.
ಇಲ್ಲ ಭೇದ ಭಾವ
ನಮ್ಮ ಪ್ರೀತಿಗೆ.
ಹೀಗೆ ನಾವು ಐಕ್ಯರಾಗಿ;
ಶಾಂತಿ ನೀತಿ ಮಾರ್ಗದಲ್ಲಿ,
ದೇವ ತೋರೊ ಪ್ರೀತಿಯಲ್ಲಿ
ಬಾಳೋಣ ಐಕ್ಯದಿ.
(ಮೀಕ 2:12; ಚೆಫ. 3:9; 1 ಕೊರಿಂ. 1:10 ಸಹ ನೋಡಿ)