ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚೌಕ 9ಇ

“ಎಲ್ಲವನ್ನ ಸರಿಮಾಡೋ ಸಮಯ”

“ಎಲ್ಲವನ್ನ ಸರಿಮಾಡೋ ಸಮಯ”

ಅಪೊಸ್ತಲರ ಕಾರ್ಯ 3:21

ಅಪೊಸ್ತಲ ಪೇತ್ರನು “ಎಲ್ಲವನ್ನ ಸರಿಮಾಡೋ ಸಮಯ” ಅಂತ ಹೇಳಿದಾಗ ಅವನು ಒಂದು ಅಮೋಘ ಸಮಯಾವಧಿ ಬಗ್ಗೆ ತಿಳಿಸ್ತಿದ್ದನು. ಅದು ಯೇಸು ಕ್ರಿಸ್ತನು ರಾಜನಾದಾಗಿಂದ ಸಾವಿರ ವರ್ಷಗಳ ಆಳ್ವಿಕೆಯ ಕೊನೇ ತನಕದ ಸಮಯವನ್ನು ಸೂಚಿಸ್ತಿತ್ತು.

  1. 1914—ಯೇಸು ಕ್ರಿಸ್ತನು ಸ್ವರ್ಗದಲ್ಲಿ ರಾಜನಾದನು. 1919 ರಿಂದ ಶುದ್ಧ ಆರಾಧನೆ ಪುನಃಸ್ಥಾಪನೆ ಆಗೋಕೆ ಶುರುವಾಯ್ತು

    ಕೊನೇ ದಿನಗಳು

  2. ಹರ್ಮಗೆದ್ದೋನ್‌—ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆ ಶುರುವಾಗುತ್ತೆ. “ಎಲ್ಲವನ್ನ ಸರಿಮಾಡೋ ಸಮಯ” ಸಾವಿರ ವರ್ಷದ ಆಳ್ವಿಕೆಯ ಕೊನೇ ವರೆಗೆ ಮುಂದುವರಿಯುತ್ತೆ. ಆಗ ಇಡೀ ಭೂಮಿ ಪರದೈಸಾಗುತ್ತೆ ಮತ್ತು ನಂಬಿಗಸ್ತ ಜನರು ತುಂಬ ಆಶೀರ್ವಾದಗಳನ್ನ ಪಡ್ಕೊಳ್ತಾರೆ

    ಸಾವಿರ ವರ್ಷದ ಕೊನೆ

  3. ಸಾವಿರ ವರ್ಷದ ಆಳ್ವಿಕೆ—ಯೇಸು ಪುನಃಸ್ಥಾಪನೆಯ ಕೆಲಸವನ್ನ ಸಂಪೂರ್ಣವಾಗಿ ಮಾಡಿ ಮುಗಿಸಿರುತ್ತಾನೆ ಮತ್ತು ಆಳ್ವಿಕೆಯನ್ನು ತನ್ನ ತಂದೆಗೆ ಒಪ್ಪಿಸ್ತಾನೆ

    ಭೂಮಿ ಸದಾಕಾಲಕ್ಕೂ ಪರದೈಸಾಗುತ್ತೆ

ಯೇಸುವಿನ ಆಳ್ವಿಕೆ ಏನನ್ನೆಲ್ಲಾ ಪುನಃಸ್ಥಾಪಿಸುತ್ತೆ?

  • ದೇವರ ಹೆಸರಿಗೆ ಮಹಿಮೆ

  • ರೋಗಿಗಳಿಗೆ ಆರೋಗ್ಯ

  • ವೃದ್ಧರಿಗೆ ಯೌವನ

  • ಸತ್ತವರಿಗೆ ಜೀವ

  • ನಂಬಿಗಸ್ತ ಮನುಷ್ಯರಿಗೆ ಪರಿಪೂರ್ಣತೆ

  • ಭೂಮಿಯ ಮೇಲೆ ಪರದೈಸ್‌