ಯೆಹೋವನ ಸಾಕ್ಷಿಗಳ ನಂಬಿಕೆ ಏನು?
ಯೆಹೋವನ ಸಾಕ್ಷಿಗಳ ನಂಬಿಕೆ ಏನು?
“ನಿನ್ನ ಅಭಿಪ್ರಾಯವನ್ನು ನಿನ್ನಿಂದಲೇ ಕೇಳುವುದು ನಮಗೆ ಯುಕ್ತವೆಂದು ತೋರುತ್ತದೆ. ಈ ಮತದ ವಿಷಯದಲ್ಲಿ ಜನರು ಎಲ್ಲೆಲ್ಲಿಯೂ ವಿರುದ್ಧವಾಗಿ ಮಾತಾಡುತ್ತಾರೆಂಬದೊಂದೇ ನಮಗೆ ಗೊತ್ತದೆ.” (ಅ. ಕೃತ್ಯಗಳು 28:22) ಒಂದನೇ ಶತಕದ ರೋಮಿನ ಈ ಸಮಾಜ ಮುಖಂಡರು ಒಂದು ಒಳ್ಳೇ ಮಾದರಿಯಿಟ್ಟರು. ಹೊರಗಿನ ಟೀಕಾಕಾರರಿಂದ ಮಾತ್ರವಲ್ಲ, ಮೂಲದಿಂದಲೂ ಶೋಧಿಸಿ ತಿಳಿಯಲು ಅವರು ಬಯಸಿದ್ದರು.
ತದ್ರೀತಿಯಲ್ಲಿ ಇಂದು ಯೆಹೋವನ ಸಾಕ್ಷಿಗಳ ವಿರುದ್ಧವಾಗಿ ಆಗಿಂದಾಗ್ಯೆ ಮಾತಾಡಲ್ಪಡುತ್ತದೆ ಮತ್ತು ಅವರ ಕುರಿತಾದ ಸತ್ಯವನ್ನು ತಿಳಿಯುವರೆ ದುರಭಿಪ್ರಾಯದ ಮೂಲಗಳನ್ನು ವಿಚಾರಿಸುವುದು ತಪ್ಪು. ಆದ್ದರಿಂದ ನಮ್ಮ ಕೆಲವು ಮುಖ್ಯ ನಂಬಿಕೆಗಳನ್ನು ನಾವಾಗಿಯೇ ನಿಮಗೆ ತಿಳಿಸಲು ಸಂತೋಷಿಸುತ್ತೇವೆ.
ಬೈಬಲ್, ಯೇಸುಕ್ರಿಸ್ತನು, ಮತ್ತು ದೇವರು
“ಪ್ರತಿಯೊಂದು ಶಾಸ್ತ್ರವು ದೈವ ಪ್ರೇರಿತವೂ ಉಪಯುಕ್ತವೂ ಆಗಿದೆ” ಎಂದು ನಾವು ನಂಬುತ್ತೇವೆ. (2 ತಿಮೊಥೆಯ 3:16) ನಿಜವಾಗಿ ನಾವು ಕ್ರೈಸ್ತರಲ್ಲವೆಂದು ಕೆಲವರು ವಾದಿಸುತ್ತಾರಾದರೂ, ಅದು ಸರಿಯಲ್ಲ. ಯೇಸು ಕ್ರಿಸ್ತನ ಕುರಿತಾದ ಅಪೊಸ್ತಲ ಪೇತ್ರನ ಸಾಕ್ಷಿಯನ್ನು ನಾವು ಪೂರಾ ರೀತಿಯಲ್ಲಿ ಒಪ್ಪುತ್ತೇವೆ: “ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವುದಿಲ್ಲ.”—ಅ. ಕೃತ್ಯಗಳು 4:12.
ಆದರೆ, ಯೇಸುವು ತಾನು “ದೇವರ ಮಗ”ನೆಂದೂ “ತಂದೆಯಿಂದ ಕಳುಹಿಸಲ್ಪಟ್ಟವ”ನೆಂದೂ ಹೇಳಿರಲಾಗಿ, ಯೇಸುವಿಗಿಂತ ದೇವರು ದೊಡ್ಡವನೆಂದು ಯೆಹೋವನ ಸಾಕ್ಷಿಗಳು ನಂಬುತ್ತಾರೆ. (ಯೋಹಾನ 10:36; 6:57) “ತಂದೆಯು ನನಗಿಂತ ದೊಡ್ಡವನು” ಎಂದು ಯೇಸು ತಾನೇ ಒಪ್ಪಿದ್ದಾನಲ್ಲಾ. (ಯೋಹಾನ 14:28; 8:28) ಹೀಗೆ, ಯೇಸುವು ತಂದೆಗೆ ಸರಿಸಮಾನನು ಎಂದು ತ್ರಯೈಕ್ಯ ಬೋಧನೆಯು ಹೇಳುವುದನ್ನು ನಾವು ನಂಬುವುದಿಲ್ಲ. ಬದಲಾಗಿ, ಅವನು ದೇವರಿಂದ ಸೃಷ್ಟಿಸಲ್ಪಟ್ಟವನೂ ದೇವರ ಕೈಕೆಳಗಿನವನೂ ಆಗಿದ್ದಾನೆಂದು ನಾವು ನಂಬುತ್ತೇವೆ.—ಕೊಲೊಸ್ಸೆ 1:15; 1 ಕೊರಿಂಥ 11:3.
ಇಂಗ್ಲಿಷ್ ಭಾಷೆಯಲ್ಲಿ, ದೇವರ ಹೆಸರು ಜೆಹೋವ. ಬೈಬಲನ್ನುವುದು: “ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲೆಲ್ಲಾ ಸರ್ವೋನ್ನತ”ನು. (ಕೀರ್ತನೆ 83:18) ಈ ಹೇಳಿಕೆಗನುಸಾರ ಯೇಸುವು ದೇವರ ಹೆಸರಿಗೆ ಬಹು ಪ್ರಾಮುಖ್ಯವನ್ನು ಕೊಟ್ಟನು ಮತ್ತು ತನ್ನ ಹಿಂಬಾಲಕರಿಗೆ ಪ್ರಾರ್ಥಿಸಲು ಕಲಿಸಿದ್ದು: “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ,” ಮತ್ತು ಆತನು ತಾನೇ ಪ್ರಾರ್ಥನೆಯಲ್ಲಿ ಅಂದದ್ದು: “ನೀನು ನನಗೆ ಕೊಟ್ಟ ಮನುಷ್ಯರಿಗೆ ನಿನ್ನ ಹೆಸರನ್ನು ತಿಳಿಯಪಡಿಸಿದೆನು.”—ಮತ್ತಾಯ 6:10; ಯೋಹಾನ 17:6.
ದೇವರ ಹೆಸರನ್ನು ಮತ್ತು ಆತನ ಉದ್ದೇಶಗಳನ್ನು ಇತರರಿಗೆ ತಿಳಿಯಪಡಿಸುವುದರಲ್ಲಿ ತಾವು ಯೇಸುವಂತಿರಬೇಕೆಂದು ಯೆಹೋವನ ಸಾಕ್ಷಿಗಳು ನಂಬುತ್ತಾರೆ. “ನಂಬಿಗಸ್ತ ಸಾಕ್ಷಿಯಾದ” ಯೇಸುವನ್ನು ನಾವು ಅನುಕರಿಸುವುದರಿಂದಲೇ ನಾವು ಯೆಹೋವನ ಸಾಕ್ಷಿಗಳೆಂಬ ಹೆಸರನ್ನು ತೆಗೆದುಕೊಂಡಿರುತ್ತೇವೆ. (ಪ್ರಕಟನೆ 1:5; 3:14) ಯುಕ್ತವಾಗಿಯೇ, ಯೆಶಾಯ 43:10 ದೇವರನ್ನು ಪ್ರತಿನಿಧಿಸಿದ ಜನರಿಗೆ ಅಂದದ್ದು: “ಯೆಹೋವನ ಮಾತೇನಂದರೆ—ನೀವು ನನ್ನ ಸಾಕ್ಷಿ, ನಾನು ಆರಿಸಿಕೊಂಡಿರುವ ಸೇವಕನು.”
ದೇವರ ರಾಜ್ಯವು
“ನಿನ್ನ ರಾಜ್ಯವು ಬರಲಿ” ಎಂದು ಪ್ರಾರ್ಥಿಸುವಂತೆ ಯೇಸು ತನ್ನ ಹಿಂಬಾಲಕರಿಗೆ ಕಲಿಸಿದನು ಮತ್ತು ಆ ರಾಜ್ಯವನ್ನು ತನ್ನ ಕಲಿಸುವಿಕೆಯ ಪ್ರಧಾನ ತಿರುಳಾಗಿ ಮಾಡಿದನು. (ಮತ್ತಾಯ 6:10; ಲೂಕ 4:43) ಆ ರಾಜ್ಯವು ಪರಲೋಕದ ಒಂದು ನಿಜ ಸರಕಾರವೆಂದೂ, ಅದು ಭೂಮಿಯನ್ನು ಆಳುವದೆಂದೂ, ಮತ್ತು ಯೇಸುಕ್ರಿಸ್ತನು ಅದರ ನಿಯುಕ್ತ ಅದೃಶ್ಯ ಅರಸನೆಂದೂ ಯೆಹೋವನ ಸಾಕ್ಷಿಗಳು ನಂಬುತ್ತಾರೆ. “ಆಡಳಿತವು ಅವನ ಬಾಹುವಿನ ಮೇಲಿರುವುದು” ಎಂದು ಬೈಬಲನ್ನುತ್ತದೆ. “ಆತನ ಆಡಳಿತದ ಅಭಿವೃದ್ಧಿ ಮತ್ತು ಶಾಂತಿಗೆ ಅಂತ್ಯವಿರದು.”—ಯೆಶಾಯ 9:6, 7, KJ.
ಆದರೂ, ದೇವರ ಸರಕಾರದ ಅರಸನು ಯೇಸುಕ್ರಿಸ್ತನು ಮಾತ್ರವೇ ಅಲ್ಲ. ಆತನೊಂದಿಗೆ ಪರಲೋಕದಲ್ಲಿ ಅನೇಕ ಜತೆ-ಅರಸರು ಆಳಲಿರುವರು. “ಸಹಿಸಿಕೊಳ್ಳುವವರಾಗಿದ್ದರೆ, ಆತನೊಂದಿಗೆ ಜತೆ ಅರಸರಾಗಿ ಆಳುವವರೂ ಆಗುವೆವು” 2 ತಿಮೊಥೆಯ 2:12) ಕ್ರಿಸ್ತನೊಂದಿಗೆ ಪರಲೋಕದಲ್ಲಿ ಆಳಲು ಪುನರುತ್ಥಾನಗೊಳ್ಳುವ ಆ ಮಾನವರು “ಭೂಲೋಕದೊಳಗಿಂದ ಕೊಂಡುಕೊಳ್ಳಲ್ಪಟ್ಟ ಒಂದು ಲಕ್ಷದ ನಾಲ್ವತ್ತನಾಲ್ಕು ಸಾವಿರ” ಮಂದಿಗೆ ಸೀಮಿತರೆಂಬದಾಗಿ ಬೈಬಲು ಸೂಚಿಸುತ್ತದೆ.—ಪ್ರಕಟನೆ 14:1, 3.
ಎಂದು ಅಪೊಸ್ತಲ ಪೌಲನು ಬರೆದಿದ್ದಾನೆ. (ಯಾವುದೇ ಒಂದು ಸರಕಾರಕ್ಕೆ ಪ್ರಜೆಗಳಾದರೋ ಇರಲೇಬೇಕು, ಮತ್ತು ಆ ಸ್ವರ್ಗೀಯ ಅಧಿಪತಿಗಳು ಮಾತ್ರವಲ್ಲದೆ ಬೇರೆ ಮಿಲ್ಯಾಂತರ ಜನರೂ ನಿತ್ಯಜೀವವನ್ನು ಪಡೆಯಲಿರುವರೆಂದೂ ಯೆಹೋವನ ಸಾಕ್ಷಿಗಳು ನಂಬುತ್ತಾರೆ. ಕಟ್ಟಕಡೆಗೆ ಭೂಮಿಯು ಒಂದು ಅಂದವಾದ ಪರದೈಸವಾಗಿ ಮಾರ್ಪಟ್ಟು, ಈ ದೇವರಾಜ್ಯಾರ್ಹ ಪ್ರಜೆಗಳಿಂದ ತುಂಬುವದು ಮತ್ತು ಎಲ್ಲರೂ ಕ್ರಿಸ್ತನ ಮತ್ತು ಆತನ ಸಹ ರಾಜರ ಆಳಿಕೆಗೆ ಅಧೀನರಾಗುವರು. ಹೀಗೆ, ಭೂಮಿಯೆಂದೂ ನಾಶವಾಗದೆಂದೂ, ಬೈಬಲಿನ ವಚನವು ನೆರವೇರಿಯೇ ತೀರುವದೆಂದೂ ಯೆಹೋವನ ಸಾಕ್ಷಿಗಳ ದೃಢ ನಂಬಿಕೆಯು: “ನೀತಿವಂತರೋ ಭೂಮಿಯನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತನೆ 37:29; 104:5.
ಆದರೆ, ದೇವರ ರಾಜ್ಯವು ಬರುವದಾದರೂ ಹೇಗೆ? ಎಲ್ಲಾ ಜನರು ದೇವರ ಸರಕಾರಕ್ಕೆ ತಾವಾಗಿಯೇ ಅಧೀನರಾಗುವ ಮೂಲಕವೂ? ಪ್ರತಿಕೂಲವಾಗಿ, ರಾಜ್ಯದ ಬರುವಿಕೆಗಾಗಿ ಭೂಕಾರ್ಯಾದಿಗಳಲ್ಲಿ ದೇವರು ನೇರವಾದ ಅಡ್ಡೈಸುವಿಕೆಯು ಅವಶ್ಯವೆಂದು ಬೈಬಲು ನೈಜವಾಗಿ ತೋರಿಸಿದೆ: “ಪರಲೋಕ ದೇವರು ಒಂದು ರಾಜ್ಯವನ್ನು ಸ್ಥಾಪಿಸುವನು. ಅದು ಎಂದಿಗೂ ಅಳಿಯದು . . . ಈ ಎಲ್ಲಾ ರಾಜ್ಯಗಳನ್ನು ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವುದು.”—ದಾನಿಯೇಲ 2:44.
ದೇವರ ಆ ರಾಜ್ಯವು ಯಾವಾಗ ಬರಲಿದೆ? ಈಗ ನೆರವೇರುತ್ತಲಿರುವ ಬೈಬಲ್ ಪ್ರವಾದನೆಗಳ ಆಧಾರದಲ್ಲಿ, ಯೆಹೋವನ ಸಾಕ್ಷಿಗಳು ಅದು ಬಹು ಬೇಗನೇ ಬರಲಿದೆಯೆಂದು ನಂಬುತ್ತಾರೆ. ಈ ದುಷ್ಟ ವಿಷಯ ವ್ಯವಸ್ಥೆಯ “ಕಡೇ ದಿನಗಳ” ವೈಶಿಷ್ಟ್ಯವನ್ನು ಮುಂತಿಳಿಸಿದ ಕೆಲವು ಭವಿಷ್ಯವಾಣಿಗಳನ್ನು ಗಮನಿಸುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ. ಅವು ಮತ್ತಾಯ 24:3-14; ಲೂಕ 21:7-13, 25-31 ಮತ್ತು 2 ತಿಮೊಥೆಯ 3:1-5ರಲ್ಲಿ ದಾಖಲೆಯಾಗಿರುತ್ತವೆ.
ನಾವು ‘ನಮ್ಮ ದೇವರಾದ ಕರ್ತ [“ಯೆಹೋವ,” NW]ನನ್ನು ಪೂರ್ಣಹೃದಯ, ಪೂರ್ಣಪ್ರಾಣ, ಪೂರ್ಣಬುದ್ಧಿ, ಮತ್ತು ಪೂರ್ಣಶಕ್ತಿಯಿಂದ ಮತ್ತು ನಮ್ಮ ನೆರೆಯವರನ್ನು ನಮ್ಮ ಹಾಗೆ’ ಪ್ರೀತಿಸುತ್ತೇವಾದ್ದರಿಂದ ಜನಾಂಗಿಕವಾಗಿ, ಜಾತೀಯ ಮತ್ತು ಸಾಮಾಜಿಕವಾಗಿ ನಾವು ವಿಭಜಿತರಾಗದೆ ಇದ್ದೇವೆ. (ಮಾರ್ಕ 12:30, 31) ಎಲ್ಲಾ ಜನಾಂಗಗಳಲ್ಲಿ ಕಂಡುಬರುವ ನಮ್ಮ ಕ್ರೈಸ್ತ ಸಹೋದರರ ನಡುವೆ ತೋರಿ ಬರುವ ಪ್ರೀತಿಗೆ ನಾವು ಪ್ರಖ್ಯಾತರು. (ಯೋಹಾನ 13:35; 1 ಯೋಹಾನ 3:10-12) ಹೀಗೆ, ನಾವು ಆ ಜನಾಂಗಗಳ ರಾಜಕೀಯ ಕಾರ್ಯಾದಿಗಳ ಬಗ್ಗೆ ತಟಸ್ಥ ಸ್ಥಾನವನ್ನು ಕಾಪಾಡಿಕೊಳ್ಳುತ್ತೇವೆ. ಯಾರ ಕುರಿತು ಯೇಸುವು “ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ” ಎಂದು ಹೇಳಿದ್ದಾನೋ ಆತನ ಆ ಆದಿ ಶಿಷ್ಯರಂತೆ ನಾವಿರಲು ಪ್ರಯತ್ನಿಸುತ್ತೇವೆ. (ಯೋಹಾನ 17:16) ಲೋಕದಿಂದ ಪ್ರತ್ಯೇಕವಾಗಿರುವುದು ಅಂದರೆ ಇಂದು ಬಹು ಸಾಮಾನ್ಯವಾಗಿರುವ ಅನೈತಿಕ ನಡವಳಿಕೆಯಿಂದ ದೂರವಿರುವುದೆಂದರ್ಥ; ಅದರಲ್ಲಿ ಸುಳ್ಳಾಡುವಿಕೆ, ಕಳ್ಳತನ, ವ್ಯಭಿಚಾರ, ಜಾರತ್ವ, ಸಲಿಂಗಿ ಕಾಮ, ರಕ್ತದ ದುರುಪಯೋಗ, ಮೂರ್ತಿಪೂಜೆ ಮತ್ತು ಬೈಬಲಿಂದ ಖಂಡಿಸಲ್ಪಟ್ಟಿರುವ ಇತರ ವಿಷಯಗಳೂ ಸೇರಿವೆ.—1 ಕೊರಿಂಥ 6:9-11; ಎಫೆಸ 5:3-5; ಅ. ಕೃತ್ಯಗಳು 15:28, 29.
ಭವಿಷ್ಯತ್ತಿಗಾಗಿ ನಿರೀಕ್ಷೆ
ಈ ಲೋಕದಲ್ಲಿರುವ ನಮ್ಮ ಸದ್ಯ ಜೀವಿತವು ಕೇವಲ ಇಷ್ಟು ಮಾತ್ರವೇ ಅಲ್ಲವೆಂದು ಯೆಹೋವನ ಸಾಕ್ಷಿಗಳು ನಂಬುತ್ತಾರೆ. ಮಾನವರು ದೇವರೊಂದಿಗೆ ಒಂದು ನೀತಿಯ ನಿಲುವನ್ನು ಪಡೆಯುವಂತೆ ಮತ್ತು ಹೊಸ ವ್ಯವಸ್ಥೆಯಲ್ಲಿ ನಿತ್ಯ ಜೀವವನ್ನು ಹೊಂದುವಂತೆ ತನ್ನ ರಕ್ತವನ್ನು ವಿಮೋಚನೆಗಾಗಿ ಸುರಿಯಲು ಯೆಹೋವನು ಕ್ರಿಸ್ತನನ್ನು ಭೂಮಿಗೆ ಕಳುಹಿಸಿಕೊಟ್ಟನೆಂದು ನಾವು ನಂಬುತ್ತೇವೆ. ಯೇಸುವಿನ ಅಪೊಸ್ತಲನೊಬ್ಬನು ಹೇಳಿದ್ದು: “ಈಗ ನಾವು ಆತನ ರಕ್ತದಿಂದ ನೀತಿವಂತರಾಗಿ ನಿರ್ಣಯಿಸಲ್ಪಟ್ಟಿದ್ದೇವೆ.” (ರೋಮಾಪುರ 5:9, NW; ಮತ್ತಾಯ 20:28) ನಮ್ಮ ಭವಿಷ್ಯ ಜೀವನವನ್ನು ಸಾಧ್ಯಗೊಳಿಸಿರುವ ಈ ವಿಮೋಚನಾ ಒದಗಿಸುವಿಕೆಗಾಗಿ ಯೆಹೋವನ ಸಾಕ್ಷಿಗಳು ದೇವರಿಗೂ ಆತನ ಪುತ್ರನಿಗೂ ತುಂಬಾ ಕೃತಜ್ಞರು.
ಭವಿಷ್ಯತ್ತಿನ ಒಂದು ಜೀವಿತದಲ್ಲಿ ಯೆಹೋವನ ಸಾಕ್ಷಿಗಳಿಗೆ ಪೂರ್ಣ ಭರವಸವಿದೆ; ಇದು ದೇವರ ರಾಜ್ಯದ ಕೆಳಗೆ ಮೃತರಿಗಾಗುವ ಪುನರುತ್ಥಾನದಲ್ಲಿ ಆಧರಿತವಾಗಿದೆ. ಕೀರ್ತನೆ 146:3, 4, NW; ಯೆಹೆಜ್ಕೇಲ 18:4; ಪ್ರಸಂಗಿ 9:5) ಹೌದು, ಮೃತರಿಗಾಗಿ ಭವಿಷ್ಯದ ಜೀವನವು ದೇವರು ಅವರನ್ನು ಪುನರುತ್ಥಾನದಲ್ಲಿ ನೆನಪಿಸುವದರಲ್ಲಿ ಆಧರಿತವಾಗಿದೆ.—ಯೋಹಾನ 5:28, 29.
ಬೈಬಲ್ ಕಲಿಸುವ ಪ್ರಕಾರ, ವ್ಯಕ್ತಿಯೊಬ್ಬನು ಸಾಯುವಾಗ ಅವನ ಅಸ್ತಿತ್ವವು ನಿಜವಾಗಿ ಮುಗಿಯುತ್ತದೆ, “ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ನಶಿಸಿ ಹೋಗುತ್ತವೆ” ಎಂದು ನಾವು ನಂಬುತ್ತೇವೆ. (ಆದರೂ, ಯೆಹೋವನ ಸಾಕ್ಷಿಗಳಿಗೆ ಭರವಸವಿದೆಯೇನಂದರೆ, ಈಗ ಜೀವಿಸುತ್ತಿರುವ ಅನೇಕರು ದೇವರ ರಾಜ್ಯವು ಸದ್ಯಸದ ಸರಕಾರಗಳೆಲ್ಲವನ್ನು ಅಂತ್ಯಗೊಳಿಸುವಾಗ ಪಾರಾಗಿ ಉಳಿಯುವರೆಂಬದಾಗಿ; ನೋಹ ಮತ್ತು ಅವನ ಕುಟುಂಬವು ಹೇಗೆ ಜಲಪ್ರಳಯವನ್ನು ಪಾರಾದರೋ ಹಾಗೆಯೇ ಅವರು ಪಾರಾಗಿ ಶುದ್ಧೀಕೃತವಾದ ಭೂಮಿಯಲ್ಲಿ ನಿರಂತರವಾಗಿ ಜೀವಿಸುವರು. (ಮತ್ತಾಯ 24:36-39; 2 ಪೇತ್ರ 3:5-7, 13) ಪಾರಾಗುವಿಕೆಯಾದರೋ ಯೆಹೋವನ ಆವಶ್ಯಕತೆಗಳನ್ನು ಮುಟ್ಟುವುದರಲ್ಲಿ ಆಧರಿತವಾಗಿದೆಯೆಂದು ನಮ್ಮ ನಂಬಿಕೆ. ಯಾಕಂದರೆ ಬೈಬಲನ್ನುವುದು: “ಲೋಕವೂ . . . ಗತಿಸಿ ಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೇರವೇರಿಸುವವನು ಎಂದೆಂದಿಗೂ ಇರುವನು.”—1 ಯೋಹಾನ 2:17; ಕೀರ್ತನೆ 37:11; ಪ್ರಕಟನೆ 7:9, 13-15; 21:1-5.
ಯೆಹೋವನ ಸಾಕ್ಷಿಗಳ ನಂಬಿಕೆಗಳೆಲ್ಲವನ್ನು ಇಲ್ಲಿ ಆವರಿಸಲು ಸಾಧ್ಯವಿಲ್ಲದಿದ್ದರೂ, ಅಧಿಕ ಸಮಾಚಾರವನ್ನು ಪಡೆದುಕೊಳ್ಳುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ.
ಬೇರೆ ರೀತಿಯಲ್ಲಿ ಸೂಚಿಸಲ್ಪಡದೇ ಇರುವಲ್ಲಿ, ಬೈಬಲಿನ ಉದ್ಧರಣೆಗಳೆಲ್ಲವೂ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ನಿಂದ ತೆಗೆದವುಗಳು.
[ಪುಟ 5 ರಲ್ಲಿರುವ ಸಂಕ್ಷಿಪ್ತ ವಿವರಣೆ]
ನಾವು ಯೇಸುವನ್ನು ಅನುಕರಿಸುವ ಕಾರಣದಿಂದಲೇ ಯೆಹೋವನ ಸಾಕ್ಷಿಗಳು ಎಂಬ ಹೆಸರನ್ನು ತೆಕ್ಕೂಂಡಿದ್ದೇವೆ