“ಹಳೇ ಪುಸ್ತಕ”ದಿಂದ ರೋಗವಾಸಿ
“ಹಳೇ ಪುಸ್ತಕ”ದಿಂದ ರೋಗವಾಸಿ
◼ ದಕ್ಷಿಣ ಅಮೆರಿಕದ ಬ್ರಸಿಲ್‌ನಲ್ಲಿ ಯೆಹೋವನ ಸಾಕ್ಷಿಯೊಬ್ಬಳು ಮನೆಯಿಂದ ಮನೆಗೆ ಸಂದರ್ಶಿಸುವಾಗ ಒಬ್ಬಾಕೆ ಮಹಿಳೆಯನ್ನು ಭೇಟಿಯಾದಳು. ಒಂದು ಪುಸ್ತಕದಿಂದಾಗಿ ತನ್ನ ಅತ್ತೆಯು ಗುಣಮುಖವಾದ ವಿಷಯವನ್ನು ಅವಳು ಆ ಸಾಕ್ಷಿಗೆ ತಿಳಿಸಿದಳು. ಕುತೂಹಲದಿಂದ ‘ಅದ್ಯಾವ ಪುಸ್ತಕ’ ಎಂದು ಕೇಳಿದಳು ಸಾಕ್ಷಿ. “ಅದೊಂದು ಹಳೇ ಪುಸ್ತಕ” ಎನ್ನುತ್ತಾ ಆ ಮಹಿಳೆಯು, ಸವೆದು ಜೀರ್ಣವಾದ ಬೈಬಲ್ ಕಥೆಗಳ ನನ್ನ ಪುಸ್ತಕದ ಒಂದು ಪ್ರತಿಯನ್ನು ಹೊರ ತಂದಳು. ಅದು ಅವಳ ಮಗನ ಪುಸ್ತಕವಾಗಿತ್ತು.
ಆ ಮಹಿಳೆಯ ಅತ್ತೆಯು ಖಿನ್ನತೆಯಿಂದ ಪೀಡಿತಳಾಗಿದ್ದಳು. ಕಗ್ಗತ್ತಲೆ ಮತ್ತು ಸಾವಿನ ಭಯವು ಅವಳನ್ನು ಕಾಡುತ್ತಿತ್ತು. ಎಷ್ಟೆಂದರೆ ಅವಳು ತನ್ನ ಮಂಚವನ್ನು ಬಿಟ್ಟು ಅಲುಗಾಡುತ್ತಿರಲಿಲ್ಲ. ಅವಳ ಮೊಮ್ಮಗನು ಬೈಬಲ್ ಕಥೆಗಳ ಪುಸ್ತಕವನ್ನು ಪಡಕೊಂಡಿದ್ದನು ಮತ್ತು ತನ್ನ ಅಜ್ಜಮ್ಮಗೆ ಅದನ್ನು ಓದಿ ಹೇಳುತ್ತಿದ್ದನು. ಅದರಿಂದ ಅವನ ಅಜ್ಜಮ್ಮ ಎಷ್ಟು ಉತ್ತೇಜನವನ್ನೂ ಭಕ್ತಿವೃದ್ಧಿಯನ್ನೂ ಪಡೆದಳೆಂದರೆ ಅವಳಿಗಿದ್ದ ಸಮಸ್ಯೆ ನಿವಾರಣೆಯಾಯಿತು.
ಆ ಸಾಕ್ಷಿಯು ತಿಳಿಸಿದ್ದು: “ಆ ಪುಸ್ತಕವು ಯೆಹೋವನ ಸಾಕ್ಷಿಗಳಿಂದ ಮುದ್ರಿಸಲ್ಪಟ್ಟಿತ್ತು ಎಂದೂ ಅವಳಿಗಾಗಿ ಒಂದು ಹೊಸ ಪುಸ್ತಕವನ್ನು ತರಬಲ್ಲೆನೆಂದೂ ನಾನು ಹೇಳಿದಾಗ ಅವಳು ಪುಸ್ತಕದ ಎರಡು ಪ್ರತಿಗಳಿಗಾಗಿ ಕೇಳಿಕೊಂಡಳು. ಒಂದು ತನ್ನ ಅತ್ತೆಗಾಗಿ ಮತ್ತೊಂದು ತನಗಾಗಿ. ನಾನು ಪುಸ್ತಕಗಳನ್ನು ತಂದುಕೊಟ್ಟಾಗ ಅವಳು ಇನ್ನೂ ಹೆಚ್ಚು ಪ್ರತಿಗಳಿಗಾಗಿ ಕೇಳಿದಳು. ಹೀಗೆ ಒಟ್ಟಿಗೆ ತನ್ನ ಮಿತ್ರರಿಗಾಗಿ ಅವಳು ಆ ಪುಸ್ತಕದ 16 ಪ್ರತಿಗಳನ್ನು ಪಡೆದುಕೊಂಡಳು!”
ಈ ಬೈಬಲ್ ಕಥೆಗಳ ನನ್ನ ಪುಸ್ತಕ ಎಂಬ 116 ಕಥೆಗಳುಳ್ಳ ಪುಸ್ತಕಕ್ಕಾಗಿ ನೀವು ವಿನಂತಿಸಬಹುದು. ಇದು ಬೈಬಲ್‌ನಲ್ಲಿರುವ ಜನರ ಮತ್ತು ಘಟನೆಗಳ ಕುರಿತು ತಿಳಿಸುತ್ತದೆ. ಈ ಪುಸ್ತಕವು ಪ್ರಕಾಶಿಸಲ್ಪಟ್ಟಂದಿನಿಂದ ಕಳೆದ 30 ವರ್ಷಗಳಲ್ಲಿ 720 ಲಕ್ಷಕ್ಕಿಂತಲೂ ಹೆಚ್ಚು ಪ್ರತಿಗಳು ಮುದ್ರಿಸಲ್ಪಟ್ಟಿವೆ. ನಿಮಗೆ ಪುಸ್ತಕ ಬೇಕಾದರೆ ಕೆಳಗಿನ ಕೂಪನ್ ಅನ್ನು ತುಂಬಿಸಿ, ಈ ಪತ್ರಿಕೆಯ ಪುಟ 5ರಲ್ಲಿರುವ ಸೂಕ್ತ ವಿಳಾಸಕ್ಕೆ ಕಳುಹಿಸಿ. (g 12/08)
❑ ಯಾವುದೇ ನಿರ್ಬಂಧಕ್ಕೆ ಒಳಪಡದೆ ಇಲ್ಲಿ ತೋರಿಸಲಾದ ಪುಸ್ತಕಕ್ಕಾಗಿ ವಿನಂತಿಸಿಕೊಳ್ಳುತ್ತೇನೆ.
❑ ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಧ್ಯಯನ ಮಾಡುವುದಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.