ಕಾವಲಿನಬುರುಜು - ಅಧ್ಯಯನ ಆವೃತ್ತಿ ಆಗಸ್ಟ್ 2017
ಈ ಸಂಚಿಕೆಯಲ್ಲಿ 2017ರ ಸೆಪ್ಟೆಂಬರ್ 25ರಿಂದ ಅಕ್ಟೋಬರ್ 22ರ ವರೆಗಿನ ಅಧ್ಯಯನ ಲೇಖನಗಳಿವೆ.
ನೀವು ತಾಳ್ಮೆಯಿಂದ ಕಾಯಲು ಸಿದ್ಧರಿದ್ದೀರಾ?
ಹಿಂದಿನ ಕಾಲದಲ್ಲಿ ಜೀವಿಸಿದ್ದ ಯೆಹೋವನ ನಂಬಿಗಸ್ತ ಸೇವಕರು ತಾವು ಇನ್ನೆಷ್ಟರ ವರೆಗೆ ಕಷ್ಟಗಳನ್ನು ಸಹಿಸಿಕೊಳ್ಳಬೇಕು ಎಂದು ಆತನನ್ನು ಕೇಳಿದರು. ಇದಕ್ಕೆ ದೇವರು ಅವರನ್ನು ಖಂಡಿಸಲಿಲ್ಲ.
“ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿ”
ನಿಮ್ಮ ಜೀವನದಲ್ಲಿ ಕೆಲವು ಕಷ್ಟಗಳು ಬರುವಂತೆ ದೇವರು ಯಾಕೆ ಅನುಮತಿಸಿರಬಹುದು ಎನ್ನುವ ಯೋಚನೆ ಯಾವತ್ತಾದರೂ ನಿಮ್ಮನ್ನು ಕಾಡಿದೆಯಾ? ಹಾಗೆ ಕಾಡಿರುವುದಾದರೆ, ದೇವರ ಮೇಲೆ ಸಂಪೂರ್ಣ ಭರವಸೆ ಇಟ್ಟು ಕಷ್ಟಗಳನ್ನು ಸಹಿಸಿಕೊಳ್ಳಲು ನಿಮಗೆ ಸಹಾಯ ಮಾಡುವ ಕೆಲವು ವಿಷಯಗಳು ಈ ಲೇಖನದಲ್ಲಿವೆ.
ಜೀವನ ಕಥೆ
ಪರೀಕ್ಷೆಗಳನ್ನು ತಾಳಿಕೊಂಡರೆ ಆಶೀರ್ವಾದ ಸಿಗುತ್ತದೆ
ಸೈಬೀರಿಯಕ್ಕೆ ಗಡೀಪಾರಾದವರಿಗೆ ಕುರಿಗಳು ಬೇಕಿದ್ದರೂ ಹಸುಗಳ ಬಗ್ಗೆ ಯಾಕೆ ವಿಚಾರಿಸುತ್ತಿದ್ದರು? ಇದಕ್ಕೆ ಉತ್ತರ, ಪಾವೆಲ್ ಮತ್ತು ಮರೀಯ ಸಿವೂಲ್‌ಸ್ಕೀ ಅವರ ಮನಮುಟ್ಟುವ ಜೀವನ ಕಥೆಯಲ್ಲಿದೆ.
ಹಳೆಯ ವ್ಯಕ್ತಿತ್ವವನ್ನು ತೆಗೆದುಹಾಕಿ ದೂರ ಇಡುವುದು ಹೇಗೆ?
ನಾವು ಹಳೇ ವ್ಯಕ್ತಿತ್ವವನ್ನು ತೆಗೆದುಹಾಕುವುದು ಮಾತ್ರ ಸಾಕಾಗಲ್ಲ, ಅದನ್ನು ದೂರ ಇಡಬೇಕು ಕೂಡ. ನಮ್ಮಲ್ಲಿ ಕೆಲವು ದುಶ್ಚಟಗಳು ಆಳವಾಗಿ ಬೇರೂರಿತ್ತಾದರೂ ಹಳೇ ವ್ಯಕ್ತಿತ್ವವನ್ನು ತೆಗೆದುಹಾಕಿ ಅದನ್ನು ದೂರ ಇಡಲು ಏನು ಮಾಡಬೇಕು?
ಹೊಸ ವ್ಯಕ್ತಿತ್ವವನ್ನು ಧರಿಸಿಕೊಂಡು ಉಳಿಸಿಕೊಳ್ಳುವುದು ಹೇಗೆ?
ಯೆಹೋವನ ಸಹಾಯದಿಂದ ನೀವು ಆತನಿಗೆ ಇಷ್ಟವಾಗುವಂಥ ರೀತಿಯ ವ್ಯಕ್ತಿಗಳಾಗಬಲ್ಲಿರಿ. ಕನಿಕರ, ದಯೆ, ದೀನತೆ, ಸೌಮ್ಯಭಾವದಂಥ ಗುಣಗಳನ್ನು ನೀವು ಹೇಗೆ ಪ್ರಾಯೋಗಿಕ ವಿಧಗಳಲ್ಲಿ ತೋರಿಸಬಹುದೆಂದು ತಿಳಿದುಕೊಳ್ಳಿ.
ಪ್ರೀತಿ—ಅಮೂಲ್ಯವಾದ ಗುಣ
ಯೆಹೋವನ ಪವಿತ್ರಾತ್ಮ ನಮ್ಮಲ್ಲಿ ಕೆಲಸ ಮಾಡಿದಾಗ ಹುಟ್ಟುವ ಒಂದು ಗುಣ ಪ್ರೀತಿ ಎಂದು ಬೈಬಲ್ ಸ್ಪಷ್ಟವಾಗಿ ಹೇಳುತ್ತದೆ. ಪ್ರೀತಿ ಎಂದರೇನು? ಅದನ್ನು ಬೆಳೆಸಿಕೊಳ್ಳುವುದು ಹೇಗೆ? ಅದನ್ನು ಪ್ರತಿದಿನ ತೋರಿಸುವುದು ಹೇಗೆ?
ನಮ್ಮ ಸಂಗ್ರಹಾಲಯ
“ಮುಂದಿನ ಸಮ್ಮೇಳನ ಯಾವಾಗ ನಡೆಯುತ್ತದೆ?”
1932ರಲ್ಲಿ ಮೆಕ್ಸಿಕೋ ಸಿಟಿಯಲ್ಲಿ ನಡೆದ ಚಿಕ್ಕ ಅಧಿವೇಶನಕ್ಕೆ ಅಷ್ಟೊಂದು ಪ್ರಾಮುಖ್ಯತೆ ಕೊಡಲು ಕಾರಣವೇನು?
ವಾಚಕರಿಂದ ಪ್ರಶ್ನೆಗಳು
ಯೇಸುವಿನ ಆರಂಭದ ಜೀವನದ ಬಗ್ಗೆ ಮತ್ತು ವಂಶಾವಳಿಯ ಪಟ್ಟಿಯ ಬಗ್ಗೆ ಮತ್ತಾಯ ಬರೆದಿರುವುದಕ್ಕೂ ಲೂಕ ಬರೆದಿರುವುದಕ್ಕೂ ಯಾಕೆ ವ್ಯತ್ಯಾಸವಿದೆ?